Tag: bluetooth

  • ಟ್ರಂಪ್‌ ಜೊತೆ ಚರ್ಚೆ ವೇಳೆ ಕಮಲಾ ಹ್ಯಾರಿಸ್‌ ಬ್ಲೂಟೂತ್‌ ಸಾಧನ ಬಳಸಿದ್ರಾ?

    ಟ್ರಂಪ್‌ ಜೊತೆ ಚರ್ಚೆ ವೇಳೆ ಕಮಲಾ ಹ್ಯಾರಿಸ್‌ ಬ್ಲೂಟೂತ್‌ ಸಾಧನ ಬಳಸಿದ್ರಾ?

    ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ (Donald Trump) ಜೊತೆಗಿನ ಬಹಿರಂಗ ಚರ್ಚೆಯ ವೇಳೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಬ್ಲೂಟೂತ್‌ ಸಾಧನ ಬಳಸಿದ್ರಾ ಹೀಗೊಂದು ಪ್ರಶ್ನೆ ಎದ್ದಿದೆ.

    ಹೌದು. ಕಮಲಾ ಹ್ಯಾರಿಸ್‌ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿವಿಯಲ್ಲಿ ಓಲೆ ಧರಿಸಿದ್ದರು. ಆದರೆ ಅದು ಓಲೆಯಲ್ಲ. ಅದು ನೋವಾ ಕಂಪನಿಯ ಬ್ಲೂಟೂತ್‌ ಆಡಿಯೋ ಹೆಡ್‌ಫೋನ್‌ ಎಂದು ಟ್ರಂಪ್‌ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ.

    ಟ್ರಂಪ್‌ ಅಭಿಮಾನಿಗಳ ಆರೋಪಕ್ಕೆ ಕಮಲಾ ಹ್ಯಾರಿಸ್‌ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಕಮಲಾ ಹ್ಯಾರಿಸ್‌ ಕಿವಿಯೋಲೆ ಧರಿಸಿದ್ದಾರೆ. ಯಾವುದೇ ಬ್ಲೂ ಟೂತ್‌ ಸಾಧನ ಧರಿಸಿಲ್ಲ ಎಂದಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಚರ್ಚೆ ವೇಳೆ ಈ ರೀತಿಯ ಆರೋಪ ಬರುವುದು ಹೊಸದೆನಲ್ಲ 2016 ರಲ್ಲಿ ಹಿಲರಿ ಕ್ಲಿಂಟನ್‌, 2020 ರಲ್ಲಿ ಜೋ ಬೈಡನ್‌ ಬ್ಲೂಟೂತ್‌ ಸಾಧನ ಬಳಸಿದ್ದಾರೆ ಎಂಬ ವಿಷಯ ಚರ್ಚೆಯಾಗಿತ್ತು. ಇದನ್ನೂ ಓದಿ: US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    ಅಮೆರಿಕ ಅಧ್ಯಕ್ಷೀಯ ಚುನಾವಣೆ (USA Presidential Election) ರಂಗೇರಿದ್ದು ಮಾಜಿ ಅಧ್ಯಕ್ಷ, ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ಮತ್ತು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮೊದಲ ಬಾರಿಗೆ ಸೆ.10 ರಂದು ಮುಖಾಮುಖಿಯಾಗಿದ್ದರು. ಪೆನ್ಸಿಲ್ವೇನಿಯಾದಲ್ಲಿ ಎಬಿಸಿ ವಾಹಿನಿ ಆಯೋಜಿಸಿದ್ದ ಬಹಿರಂಗ ಚರ್ಚೆಯಲ್ಲಿ ಬಹಿರಂಗ ಚರ್ಚೆಯಲ್ಲಿ ಆರ್ಥಿಕತೆ, ವಲಸೆ ನೀತಿ, ಕ್ಯಾಪಿಟಲ್‌ ಹಿಲ್‌ ಗಲಭೆ ಇತ್ಯಾದಿ ವಿಚಾರಗಳ ಬಗ್ಗೆ ಇಬ್ಬರು ನಾಯಕರು ಮಾತನಾಡಿದ್ದರು.

     

  • PSI ನೇಮಕಾತಿ ಅಕ್ರಮ – ಫಸ್ಟ್ ರ‍್ಯಾಂಕ್ ಪಡೆದಿದ್ದ ಸುಪ್ರಿಯಾ ಅರೆಸ್ಟ್

    PSI ನೇಮಕಾತಿ ಅಕ್ರಮ – ಫಸ್ಟ್ ರ‍್ಯಾಂಕ್ ಪಡೆದಿದ್ದ ಸುಪ್ರಿಯಾ ಅರೆಸ್ಟ್

    ಕಲಬುರಗಿ: ಪಿಎಸ್‌ಐ (PSI) ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು (Accused) ಸಿಐಡಿ (CID) ತಂಡ ಬಂಧಿಸಿದೆ.

    ಸುಪ್ರಿಯಾ ಹುಂಡೆಕರ್ (26) (Supriya Hundekar) ಬಂಧಿತ ಆರೋಪಿಯಾಗಿದ್ದು, ಕಲ್ಯಾಣ ಕರ್ನಾಟಕ ಮಹಿಳಾ ಖೋಟಾದಲ್ಲಿ ಸುಪ್ರೀಯಾ ಮೊದಲ ಸ್ಥಾನ ಪಡೆದಿದ್ದಳು. ಇದನ್ನೂ ಓದಿ: ಅಶ್ಲೀಲ ದೃಶ್ಯ ನೋಡಿ ಪ್ರಚೋದನೆ – ಅಪ್ರಾಪ್ತನಿಂದ ಬಾಲಕಿಯ ಮೇಲೆ ರೇಪ್‌, ಕೊಲೆ

    ಸಾಂದರ್ಭಿಕ ಚಿತ್ರ

    ಕಿಂಗ್ ಪಿನ್ ಆರ್.ಡಿ.ಪಾಟೀಲ್ ಮೂಲಕ ಪರೀಕ್ಷೆಯಲ್ಲಿ ಸುಪ್ರಿಯಾ ಅಕ್ರಮ ನಡೆಸಿದ್ದಳು. ಕಲಬುರಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಬಳಸಿ, ಪರೀಕ್ಷೆಯಲ್ಲಿ (Exams) ಅಕ್ರಮ ನಡೆಸಿದ್ದಳು ಎಂದು ಸಿಐಡಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: 2025ರಲ್ಲಿ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ – ಸಮಾವೇಶದಲ್ಲಿ ಹೂಡಿಕೆದಾರರ ಗಮನ ಸೆಳೆದ ಜೋಶಿ

    ಈ ಕುರಿತು ಗುಲ್ಬರ್ಗ ಪೋಲಿಸ್ ಠಾಣೆಯಲ್ಲಿ (Gulbarga Police Station) ಸಿಐಡಿ ಪ್ರಕರಣ ದಾಖಲಿಸಿದೆ. ಈ ಮೂಲಕ ಕಲಬುರಗಿಯಲ್ಲಿ ಪಿಎಸ್‌ಐ (PSI) ಪ್ರಕರಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಯೂತ್‌ಫುಲ್ ಲೈಫ್‌ನಲ್ಲಿ ಕಲರ್‌ಫುಲ್ ವಾಚ್‌ಗಳ ಕಾರುಬಾರು

    ಯೂತ್‌ಫುಲ್ ಲೈಫ್‌ನಲ್ಲಿ ಕಲರ್‌ಫುಲ್ ವಾಚ್‌ಗಳ ಕಾರುಬಾರು

    ತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಲುಕ್ ನೀಡುವ ವಾಚ್‌ಗಳಿಗಿಂತ ಸ್ಮಾರ್ಟ್ ವಾಚ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇವು ನೂತನ ತಂತ್ರಜ್ಞಾನಗಳೊಂದಿಗೆ ವಿಶಿಷ್ಟ ರೂಪದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅದಕ್ಕಾಗಿಯೇ ಉತ್ತಮ ಗುಣಮಟ್ಟ ಹಾಗೂ ದೀರ್ಘಕಾಲ ಬಾಳಿಕೆ ಬರುವ ವಾಚ್‌ಗಳು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರೆಯುತ್ತಿವೆ.

    ಬ್ಲೂಟೂತ್ ಕನೆಕ್ಟ್ ಸ್ಮಾರ್ಟ್ ವಾಚ್, ಮೆಟಲ್ ಬಾಡಿ ವಾಚ್, ಡಿಜಿಟಲ್ ವಾಚ್, ಚೈನ್ ವಾಚ್ ಹೀಗೆ ವಿವಿಧ ಬಗೆಯ ವಾಚ್‌ಗಳು ಯುವ ಸಮೂಹದ ಅಚ್ಚುಮೆಚ್ಚಾಗಿವೆ. ಅವುಗಳ ವೈಶಿಷ್ಟ್ಯ ಹೇಗಿದೆ ಎಂಬುದನ್ನಿಲ್ಲಿ ನೋಡಿ…‌ ಇದನ್ನೂ ಓದಿ: ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    ಬ್ಲೂಟೂತ್ ಸ್ಮಾರ್ಟ್ ವಾಚ್:
    ಇದು ಮೊಬೈಲ್ ಬ್ಲೂಟೂತ್ ಸಂಪರ್ಕದೊಂದಿಗೆ ಕೆಲಸ ನಿರ್ವಹಿಸುವ ಸ್ಮಾರ್ಟ್ ವಾಚ್. ಈ ವಾಚ್ ಕಪ್ಪು, ಬಿಳಿ ಶೈನ್ ಹಾಗೂ ಬ್ರೌನ್ ಬಣ್ಣಗಳಲ್ಲಿ ಇರುತ್ತದೆ. ಯುವಕ, ಯುವತಿಯರ ಕೈಗೆ ಇದು ಆಕರ್ಷಕ ಪ್ರೀಮಿಯಂ ನೋಟವನ್ನು ನೀಡುತ್ತದೆ.

    ವಾಟರ್‌ಪ್ರೂಫ್ ವಾಚ್
    ನಿಮ್ಮ ಫಿಟ್ನೆಸ್ ಮತ್ತು ಆರೋಗ್ಯವನ್ನು ಟ್ರ‍್ಯಾಕ್ ಮಾಡುವುದಕ್ಕೂ ಈ ವಾಚ್ ಉಪಯೋಗ ಆಗಲಿದೆ. ಉತ್ತಮ ವೈಶಿಷ್ಟ್ಯ ಹೊಂದಿದ್ದು, ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಹಾಗೂ ನಾವು ನಡೆಯುವ ಹೆಜ್ಜೆಗಳನ್ನೂ ಮಾನಿಟರ್ ಮಾಡುತ್ತದೆ.

    ಮೆಟಲ್ ಬಾಡಿ ವಾಚ್:
    ಈ ವಾಚ್ ಮೆಟಲ್ ಬಾಡಿ ಮತ್ತು ಲೆದರ್ ಸ್ಟ್ರಾಪ್, ಫುಲ್ ಟಚ್ ಹೊಂದಿರುತ್ತವೆ. ಇದು ಇಂದಿನ ಟ್ರೆಂಡಿಯೊಂದಿಗೆ ಸಾಂಪ್ರದಾಯಿಕ ಉಡುಗೆಗಳಿಗೂ ಹೊಸ ಲುಕ್ ಕೊಡುತ್ತೆ. ಇದನ್ನೂ ಓದಿ: ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್

    ಡಿಜಿಟಲ್ ವಾಚ್:
    ವಿದ್ಯುತ್ ಮೀಟರ್ ನಂತೆಯೇ ನಿಮಿಷ, ಸೆಕೆಂಡುಗಳು ಹಾಗೂ ಗಂಟೆ ಸಮಯವನ್ನೂ ತೋರಿಸುವ ಈ ಡಿಜಿಟಲ್ ವಾಚ್ ಹೆಚ್ಚು ಯೂತ್‌ಫುಲ್ ಆಗಿದೆ. ಜೊತೆಗೆ ಕಲರ್ ಫ್ಲ್ಯಾಶ್‌ ಸಹ ಹೊಂದಿದ್ದು, ಅಲಾರಂ ಸೆಟ್ಟಿಂಗ್ಸ್ ಸಹ ಇರುತ್ತದೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ಯುವಜನರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

    ಡ್ರೆಸ್‌ವಾಚ್
    ಸೂಟ್ ಡ್ರೆಸ್‌ಗಳಿಗೆ ಪಕ್ಕಾ ಲುಕ್ ನೀಡುವ ವಾಚ್. ನೀವು ಯಾವುದೇ ಸೂಟ್ ಧರಿಸಿದ್ರೂ ಅದರ ಔಟ್‌ಲುಕ್ ಫಿಟ್ ಆಗಿ ಕಾಣಬೇಕು ಅಂದ್ರೆ ಈ ರೀತಿಯ ವಾಚ್ ಧರಿಸಲೇ ಬೇಕು. ಆದರೆ ಟ್ರೆಂಟ್ ಬಯಸುವವರು ಇದನ್ನ ಹೆಚ್ಚು ಇಷ್ಟಪಡಲ್ಲ.

    Live Tv
    [brid partner=56869869 player=32851 video=960834 autoplay=true]

  • PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ

    PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ

    ಬೆಂಗಳೂರು: PSI ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರೋ ಕಿಂಗ್‌ಪಿನ್ ಸೇರಿ ಪ್ರಮುಖ ಆರೋಪಿಗಳನ್ನು ಖೆಡ್ಡಕ್ಕೆ ಬೀಳಿಸಿದ್ದಾರೆ. ಬ್ಲೂಟೂತ್‌ನಲ್ಲಿ ಆರೋಪಿತ ಅಭ್ಯರ್ಥಿಗಳಿಗೆ ಉತ್ತರ ರವಾನಿಸಿ ಅಕ್ರಮ ಎಸಗಿರುವ ಮತ್ತೊಂದು ಸ್ಫೋಟಕ ಅಂಶ ಬಯಲಾಗಿದೆ.

    PIS KINGPIN 02

    ಸಿನಿಮಾ ಮಾದರಿಯಲ್ಲಿ ಬ್ಲೂಟೂತ್ ಮೂಲಕ ಉತ್ತರ ರವಾನಿಸಿದ್ದಾರೆ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಮಾಹಿತಿ ಬಹಿರಂಗಗೊಂಡಿದೆ. ಲೀಕ್ ಆದ ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಸಿದ್ಧಪಡಿಸಿಕೊಂಡಿದ್ದ ಆರೋಪಿಗಳು ಹಣ ಕೊಟ್ಟು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ ಮಾಡಿಸಿದ್ದಾರೆ. ದಾಳಿ ನಡೆಸಿರುವ ಅಧಿಕಾರಿಗಳಿಗೆ ಎಲೆಕ್ಟ್ರಾನಿಕ್‌ ಡಿವೈಸ್‌ ಲಭ್ಯವಾಗಿದ್ದು, ಆರೋಪಿಗಳ ಎಟಿಎಂ ಕಾರ್ಡ್‌ಗಳು ಸಹ ದೊರೆತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ವಿಧ್ವಂಸಕ ಕೃತ್ಯಗಳಿಗೆ ಕಾಂಗ್ರೆಸ್ ಹೊಣೆ: ಆರ್.ಅಶೋಕ್

    ಎಲೆಕ್ಟ್ರಾನಿಕ್‌ ಡಿವೈಸ್‌ ಬಳಸಿ ಉತ್ತರ ನೀಡಲಾಗಿದ್ದು, ಹಣಕೊಟ್ಟ ಅಭ್ಯರ್ಥಿಗಳಿಗೆ A-B-C-D ಮಾದರಿ ಪ್ರಶ್ನೆಪತ್ರಿಕೆಗಳಂತೆ ಒಂದೇ ಬಾರಿಗೆ ಉತ್ತರ ಹೇಳಿಕೊಟ್ಟಿದ್ದಾರೆ. ಇದೀಗ ಪ್ರಶ್ನೆ ಪತ್ರಿಕೆಗೆ ಉತ್ತರ ಕೊಡುವ ವೀಡಿಯೋ ವೈರಲ್ ಆಗಿದೆ.

    PIS KINGPIN 02

    PSI ಅಕ್ರಮ ನೇಮಕಾತಿ ಪ್ರಕರಣದ ರೂವಾರಿಗಳು ಸಿಐಡಿ ಖೆಡ್ಡಕ್ಕೆ ಬೀಳುತ್ತಿದ್ದಂತೆ ಉಳಿದವರಿಗೆ ನಡುಕ ಶುರುವಾಗಿದೆ. ಕಿಂಗ್‌ಪಿನ್‌ಗಳ ವಿಚಾರಣೆ ವೇಳೆ ಹೆಸರುಗಳು ಬಾಯಿಬಿಟ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬ ಆತಂಕ ಉಳಿದ ಆರೋಪಿಗಳಿಗೆ ಶುರುವಾಗಿದೆ. ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ಆಪ್ತರೆನ್ನಲಾದ ಕಾಂಗ್ರೆಸ್ ನಾಯಕರನ್ನ ಬಂಧಿಸಲಾಗಿದೆ: ಆರಗ

    ಪ್ರಕರಣದಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿರೋ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಿ ಪ್ರಕರಣಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಿಐಡಿ ತನಿಖೆ ಮುಂದುವರೆದಿದೆ.

  • ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ

    ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ

    ಬೆಳಗಾವಿ: ಕಾನ್‍ಸ್ಟೇಬಲ್ ಪರೀಕ್ಷೆಯಲ್ಲಿ 12 ಜನರು ಅತ್ಯಾಧುನಿಕ ತಂತ್ರಜ್ಞಾನವಾದ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಪ್ರಕರಣದ ತನಿಖೆಯನ್ನು ರಾಜ್ಯ ಗೃಹ ಇಲಾಖೆ ಸಿಐಡಿಗೆ ವಹಿಸಿದೆ.

    ಬೆಳಗಾವಿಯಲ್ಲಿ ಅಕ್ಟೋಬರ್ 24ರಂದು ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಈ ವೇಳೆ ರಾಮತೀರ್ಥ ನಗರದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರೀಕ್ಷಾ ಕೊಠಡಿಗಳ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ಪರೀಕ್ಷೆ ವೇಳೆಯಲ್ಲಿ 12 ಜನ ಪರೀಕ್ಷಾರ್ಥಿಗಳು ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದು, ಅವರನ್ನು ಪೊಲೀಸರು ಬಂಧಿಸಿದ್ದರು. ಇದರ ಹಿಂದೆ ಇನ್ನೂ ದೊಡ್ಡ ಜಾಲವೇ ಇದೆ ಎಂದು ರಾಜ್ಯ ಗೃಹ ಇಲಾಖೆ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ವಾಹನ ಸವಾರರ ಮಿಶ್ರ ಪ್ರತಿಕ್ರಿಯೆ

    ಈ ಪರೀಕ್ಷಾರ್ಥಿಗಳು ಬ್ಲೂಟೂತ್ ಬಳಸಿ ಪ್ರಶ್ನೆ ಪತ್ರಿಕೆ ಮಾಹಿತಿಯನ್ನು ತಮ್ಮ ತಂಡಕ್ಕೆ ರವಾನೆ ಮಾಡಿದ್ದು, ಅವರಿಂದ ಉತ್ತರ ಪಡೆದುಕೊಂಡು ಬರೆಯುತ್ತಿದ್ದರು. ಈ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದರು. ಈ ವೇಳೆ 12 ಜನರನ್ನು ಸಿಕ್ಕಿಬಿದ್ದಿದ್ದು, 33 ಮೊಬೈಲ್, 9 ಮಾಸ್ಟರ್ ಕಾರ್ಡ್ ಡಿವೈಸ್, 13 ಬ್ಲೂಟೂತ್, ಮೂರು ಟ್ಯಾಬ್, ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆದುಕೊಂಡಿದ್ದರು.

    ಈ ವೇಳೆ ಪೊಲೀಸರು ಇಬ್ಬರು ಪರೀಕ್ಷಾರ್ಥಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಓರ್ವ ಪೊಲೀಸ್ ಪೇದೆ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲು ರಾಜ್ಯ ಗೃಹ ಇಲಾಖೆ ಆದೇಶ ನೀಡಿದ್ದು, ಸರ್ಕಾರ ಪೊಲೀಸ್ ಪೇದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನೂ ಓದಿ: ಭೂಚಕ್ರ ಗಡ್ಡೆ ವ್ಯಾಪಾರ ಬಲು ಜೋರು- ಏನಿದರ ವಿಶೇಷ?

    ಗೋಕಾಕ್, ಮೂಡಲಗಿ ತಾಲೂಕಿನಲ್ಲಿ ಅನೇಕರ ಬಂಧನದ ಸಾಧ್ಯತೆ ಇದ್ದು, ಈ ಮೂಲಕ ದೊಡ್ಡ ವಂಚನಾ ಜಾಲ ಪತ್ತೆಯಾಗುವ ಸಾಧ್ಯತೆ ಇದೆ.

  • ಚಪ್ಪಲಿಯೊಳಗೆ ಬ್ಲ್ಯೂಟೂತ್, ಮೊಬೈಲ್ -ಪರೀಕ್ಷೆಗೆ ಬಂದ ಐವರ ಬಂಧನ

    ಚಪ್ಪಲಿಯೊಳಗೆ ಬ್ಲ್ಯೂಟೂತ್, ಮೊಬೈಲ್ -ಪರೀಕ್ಷೆಗೆ ಬಂದ ಐವರ ಬಂಧನ

    ಜೈಪುರ್: ಚಪ್ಪಲಿಯೊಳಗೆ ಬ್ಲ್ಯೂಟೂತ್ ಹಾಗೂ ಮೊಬೈಲ್ ಫೋನ್ ಇಟ್ಟುಕೊಂಡು ಪರೀಕ್ಷೆ ಬರೆಯಲು ಮುಂದಾದ ಐವರನ್ನು ಬಂಧಿಸಿರುವ ಘಟನೆ ನಡೆದಿದೆ.

    ರಾಜಸ್ಥಾನ ಶಿಕ್ಷಕರ ನೇಮಕಾತಿ ಪರೀಕ್ಷೆಯ (REET) ವೇಳೆ ಅಭ್ಯರ್ಥಿಗಳು ಚಪ್ಪಲಿಯೊಳಗೆ ಬ್ಲೂಟೂತ್ ಹಾಗೂ ಮೊಬೈಲ್ ಫೋನ್ ಅಡಗಿಸಿಟ್ಟುಕೊಂಡು ಚೀಟ್ ಮಾಡುತ್ತಿದ್ದ ವಿಷಯವೊಂದು ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗೋಕರ್ಣದಲ್ಲಿ ಸಮುದ್ರದ ಪಾಲಾಗುತಿದ್ದ ಪ್ರವಾಸಿಗನ ರಕ್ಷಣೆ

    ಮೋಸ ಮಾಡಲು ಮುಂದಾದ ಅಭ್ಯರ್ಥಿಗಳಿಂದ ಒಟ್ಟು 6 ಲಕ್ಷ ಮೌಲ್ಯದ ಚಪ್ಪಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಪ್ಪಲಿಯೊಳಗೆ ಬ್ಲ್ಯೂಟೂತ್ ಮತ್ತು ಮೊಬೈಲ್  ಫೋನ್?ಗಳನ್ನು ಇರಿಸಿಕೊಳ್ಳಲಾಗಿತ್ತು. ಜತೆಗೆ ಅಭ್ಯರ್ಥಿಗಳು ಬ್ಲ್ಯೂಟೂತ್ ಸಹಾಯದಿಂದ ಉತ್ತರವನ್ನು ಹೊರಗಡೆ ನಿಂತಿದ್ದ ವ್ಯಕ್ತಿಯಿಂದ ಕೇಳಿ ತಿಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರು. ಇದನ್ನೂ ಓದಿ:  ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ

    ರಾಜಸ್ಥಾನ ಶಿಕ್ಷಕರ ಅರ್ಹತಾ ನೇಮಕಾತಿ ಪರೀಕ್ಷೆಯು ಭಾನುವಾರ ನಡೆಯಿತು. ರಾಜಸ್ಥಾನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಖಇಇಖಿ ಉತ್ತೀರ್ಣರಾಗಬೇಕು. ಐವರು ಅಭ್ಯರ್ಥಿಗಳು ಬ್ಲ್ಯೂಟೂತ್ ಇದ್ದ ಚಪ್ಪಲಿಯನ್ನು ಧರಿಸಿ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮೊದಲೇ ಅವರನ್ನು ತಡೆಯಲಾಗಿದೆ. ಜತೆಗೆ ಈ ದಂಧೆಯಲ್ಲಿ ಪಾಲ್ಗೊಂಡಿದ್ದ ಇತರರನ್ನೂ ಸಹ ಬಂಧಿಸಲಾಗಿದೆ. ಚೀಟಿಂಗ್ ಮಾಡಲು ಬಳಕೆ ಮಾಡಲಾಗುತ್ತಿದ್ದ ಚಪ್ಪಲಿಗಳನ್ನು ಬರೋಬ್ಬರಿ 2 ರಿಂದ 6 ಲಕ್ಷದ ವರೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

  • ಒಳಉಡುಪಿನಲ್ಲಿ ಮೊಬೈಲ್, ಟೋಪಿಯಲ್ಲಿ ಬ್ಲೂಟೂತ್ – ನಕಲು ಮಾಡಲು ಹೋಗಿ ಸಿಕ್ಕಿಬಿದ್ದ

    ಒಳಉಡುಪಿನಲ್ಲಿ ಮೊಬೈಲ್, ಟೋಪಿಯಲ್ಲಿ ಬ್ಲೂಟೂತ್ – ನಕಲು ಮಾಡಲು ಹೋಗಿ ಸಿಕ್ಕಿಬಿದ್ದ

    ಪಾಟ್ನಾ: ಪೊಲೀಸ್ ಕಾನ್‍ಸ್ಟೇಬಲ್ ಚಾಲಕನ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುವ ಮೂಲಕ ವ್ಯಕ್ತಿಯೊಬ್ಬ ನಕಲು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.

    ಪರೀಕ್ಷೆಯಲ್ಲಿದ್ದ ಸುನೀಲ್ ಜಮುಯಿ ಎಂಬವನು ತನ್ನ ಒಳಉಡುಪಿನಲ್ಲಿ ಮೊಬೈಲ್ ಹಾಗೂ ಟೋಪಿಯಲ್ಲಿ ಬ್ಲೂಟೂತ್ ಬಚ್ಚಿಟ್ಟುಕೊಂಡಿದ್ದನು. ಪರೀಕ್ಷಾ ಕೊಠಡಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ತೆಗೆದುಕೊಂಡು ಹೋಗುವ ಹಾಗಿಲ್ಲ. ಹೀಗಿದ್ದರೂ ಸಹ ಸುನೀಲ್ ಮೊಬೈಲ್ ಹಾಗೂ ಬ್ಲೂಟೂತ್ ಬಳಸಿದ್ದಾನೆ. ಸುನೀಲ್ ಬ್ಲೂಟೂತ್ ಮೂಲಕ ತನ್ನ ಸ್ನೇಹಿತನಿಗೆ ಪ್ರಶ್ನೆ ಹೇಳುತ್ತಿದ್ದನು. ಪ್ರಶ್ನೆ ಕೇಳಿ ಆತನ ಸ್ನೇಹಿತ ಉತ್ತರ ಹೇಳುತ್ತಿದ್ದನು.

    ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಚ್‍ಒ ಮನೋಜ್ ಕುಮಾರ್, ಪರೀಕ್ಷಾರ್ಥಿ ಸುನೀಲ್ ಲಕ್ಷ್ಮಿಪುರದ ನಿವಾಸಿಯಾಗಿದ್ದು, ಮುಖ್ದಂಪುರದ ಇಂದ್ರಾಸ್ತಾಲಿ ಬಾಲಕಿಯ ಶಾಲೆಯಲ್ಲಿ ಆತನ ಎಕ್ಸಾಂ ಸೆಂಟರ್ ಆಗಿತ್ತು. ಪರೀಕ್ಷೆ ವೇಳೆ ಮೇಲ್ವಿಚಾರಕನಿಗೆ ಸುನೀಲ್ ನಡೆದುಕೊಳ್ಳುತ್ತಿದ್ದ ರೀತಿ ನೋಡಿ ಆತನ ಮೇಲೆ ಅನುಮಾನಗೊಂಡರು. ನಂತರ ಆತನನ್ನು ಪರಿಶೀಲನೆ ನಡೆಸಿದಾಗ ಆತನ ಒಳಉಡುಪಿನಲ್ಲಿ ಮೊಬೈಲ್ ಹಾಗೂ ಟೋಪಿಯಲ್ಲಿ ಬ್ಯೂಟೂತ್ ಬಚ್ಚಿಟ್ಟುಕೊಂಡಿದ್ದನು.

    ಮನೋಜ್ ಅವರ ಪ್ರಕಾರ, ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮೊಬೈಲಿನಲ್ಲಿ ಉತ್ತರ ಹೇಳುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಗೇಟ್‍ನಲ್ಲಿ ಪರಿಶೀಲಿಸುವಾಗ ಅಲ್ಲಿ ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೇಗೆ ಹಿಡಿಯಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.