Tag: Blue Snake

  • ಗುಲಾಬಿ ಮೇಲೆ ನೀಲಿ ಬಣ್ಣದ ಹಾವು – ವಿಡಿಯೋ ವೈರಲ್

    ಗುಲಾಬಿ ಮೇಲೆ ನೀಲಿ ಬಣ್ಣದ ಹಾವು – ವಿಡಿಯೋ ವೈರಲ್

    -ಹಾವಿನ ಡೆಡ್ಲಿ ಸೈಲೆಂಟ್ ಚಲನೆ
    -ಸುಂದರತೆ ಮೇಲೆ ವಿಷದ ಜಾಲ ಎಂದ ನೆಟ್ಟಿಗರು

    ಗುಲಾಬಿ ಹೂವಿನ ಮೇಲೆ ನೀಲಿ ಬಣ್ಣದ ಹಾವು ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

    ಸಾಮಾನ್ಯವಾಗಿ ಈ ರೀತಿಯ ಹಾವುಗಳನ್ನು ಪ್ರಾಣಿ ಸಂಗ್ರಾಹಲಗಳಲ್ಲಿ ನೋಡಿರುತ್ತೀರಿ. ಆದ್ರೆ ಗುಲಾಬಿ ಮೇಲೆ ಕುಳಿತ ಈ ವಿಡಿಯೋ ನೋಡಗರ ಎದೆಯನ್ನ ಒಮ್ಮೆ ಝಲ್ ಅನ್ನುವಂತೆ ಮಾಡುತ್ತದೆ. ಲೈಫ್ ಆನ್ ಅರ್ಥ್ ಟ್ವಿಟ್ಟರ್ ಖಾತೆಯಲ್ಲಿ ಸೆಪ್ಟೆಂಬರ್ 17ರಂದು ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಇದುವರೆಗೂ 94 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿಕೊಂಡಿದೆ.

    12 ಸೆಕೆಂಡ್ ವಿಡಿಯೋದಲ್ಲಿ ಗುಲಾಬಿ ಮೇಲೆ ಅಲುಗಾಡದೇ ನೀಲಿ ಹಾವು ಕುಳಿತಿರುವುದು ನೋಡಬಹುದು. ಗುಲಾಬಿ ಗಿಡದ ಕೆಳಭಾಗದಲ್ಲಿ ಅಲ್ಲಡಿಸಿದಾಗ ಹಾವು ತನ್ನ ನಾಲಗೆ ಹೊರ ತೆಗೆದು ಬುಸುಗುಟ್ಟಾಗ ಎದೆ ಝಲ್ ಅನ್ನಿಸುತ್ತೆ. ಆದ್ರೆ ಈ ವಿಡಿಯೋ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಈ ಹಾವು ಅತ್ಯಂತ ವಿಷಕಾರಿಯಾಗಿದ್ದು, ಅದರ ಬಳಿ ಹತ್ತಿರ ಹೋಗುವುದು ಸಾವಿಗೆ ಆಹ್ವಾನ ನೀಡಿದಂತೆ ಎಂದು ನೆಟ್ಟಿಗರು ಹೇಳಿದ್ದಾರೆ.

    https://twitter.com/planetpng/status/1306620212045844482

    12 ಸೆಕೆಂಡ್ ವಿಡಿಯೋ ರಿಟ್ವೀಟ್ ಮಾಡಿಕೊಂಡಿರುವ ನೆಟ್ಟಿಗರು, ಸುಂದರತೆಯ ಮೇಲೆ ವಿಷದ ಜಾಲವಿದೆ ಎಂದು ಬರೆದುಕೊಂಡಿದ್ದಾರೆ. ಕೆಲವರು ಅಪರೂಪದ ವಿಡಿಯೋ, ಹಾವು ತುಂಬಾನೇ ಅಪಾಯ ಎಂದು ಕಮೆಂಟ್ ಮಾಡಿದ್ದಾರೆ.