Tag: Bloood Donation

  • ದುಬೈ: ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಆಶ್ರಯದಲ್ಲಿ ರಕ್ತದಾನ ಶಿಬಿರ

    ದುಬೈ: ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಆಶ್ರಯದಲ್ಲಿ ರಕ್ತದಾನ ಶಿಬಿರ

    ದುಬೈ/ದಕ್ಷಿಣ ಕನ್ನಡ: ಕಲ್ಲಡ್ಕ ಅನಿವಾಸಿ ಗೆಳಯರ ಬಳಗದ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿಯಾಗಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ರಕ್ತ ನಿಧಿ ಕೇಂದ್ರ ಹೆಡ್ ಕ್ವಾರ್ಟರ್ಸ್ ದುಬೈಯಲ್ಲಿ ನಡೆಯಿತು.

    ರಕ್ತದಾನ ಶಿಬಿರದಲ್ಲಿ ಹಲವಾರು ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಯಾದರು‌. ರಕ್ತದಾನ ಮಾಡಿದ ದಾನಿಗಳಿಗೆ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ವತಿಯಿಂದ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

    ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಅಧ್ಯಕ್ಷರಾದ ನವಾಝ್ ಹಜಾಜ್, ಉಪಾಧ್ಯಕ್ಷ ರಫೀಕ್ ಸಾಹೇಬ್ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ ಮಿಕ್ದಾದ್ ಗೋಳ್ತಮಜಲ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಯುಎಇ ಅಧ್ಯಕ್ಷರಾದ ನಝೀರ್ ಬಿಕರ್ನಕಟ್ಟೆ, BDM ಕಾರ್ಯನಿರ್ವಾಹಕರಾದ ಸಂಶುದ್ದೀನ್ ಪಿಲಿಗೂಡು ಭಾಗವಹಿಸಿದರು. ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಇದರ ಪ್ರಧಾನ ಕಾರ್ಯದರ್ಶಿ ಮಿಕ್ದಾದ್ ಗೋಳ್ತಮಜಲ್ ಸ್ವಾಗತಿಸಿ, ವಂದಿಸಿದರು.