Tag: blood donation

  • ಮಂಡ್ಯ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಸಖತ್ ಪ್ರಶಂಸೆ

    ಮಂಡ್ಯ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಸಖತ್ ಪ್ರಶಂಸೆ

    ಮಂಡ್ಯ: ಸದಾ ಖಾಕಿ ಸಮವಸ್ತ್ರ ಧರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಜನರ ಜೀವ ಉಳಿಸಲು ಸಹಾಯ ಮಾಡುವ ಸಲುವಾಗಿ ರಕ್ತದಾನ ಶಿಬಿರ ಏರ್ಪಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಜೀವಧಾರೆ ಟ್ರಸ್ಟ್ ಸಹಕಾರದೊಂದಿಗೆ ಇಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಜನಸ್ನೇಹಿ ಪೊಲೀಸ್ ಹೆಸರಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಹಲಗೂರು ಠಾಣೆಯಲ್ಲಿ ಪೊಲೀಸ್ ಆಗಿರುವ ಪ್ರಭು ತಮ್ಮ ಪೊಲೀಸ್ ಗೆಳೆಯರೊಂದಿಗೆ ಸೇರಿ ರಕ್ತದಾನ ಶಿಬಿರ ಏರ್ಪಡಿಸಿದ್ರು.

    ರಕ್ತದಾನ ಶಿಬಿರದಲ್ಲಿ ಸ್ವತಃ ಪೊಲೀಸರು ರಕ್ತದಾನ ಮಾಡಿ ಮಾದರಿಯಾದ್ರು. ಪೊಲೀಸರೊಂದಿಗೆ ಸುಮಾರು 200 ಕ್ಕೂ ಹೆಚ್ಚು ಸಾರ್ವಜನಿಕರು ರಕ್ತದಾನ ಮಾಡಿದ್ರು. ಪೊಲೀಸರ ಜನಸ್ನೇಹಿ ಕಾರ್ಯವನ್ನು ನೋಡಿ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ರು.

     

  • ಯಾರು ಎಷ್ಟೇ ಹೊತ್ತಲ್ಲಿ ಕೇಳಿದ್ರೂ ರಕ್ತ ಕೊಡ್ತಾರೆ ದಾವಣಗೆರೆಯ ಗೋಪಿನಾಥ್

    ಯಾರು ಎಷ್ಟೇ ಹೊತ್ತಲ್ಲಿ ಕೇಳಿದ್ರೂ ರಕ್ತ ಕೊಡ್ತಾರೆ ದಾವಣಗೆರೆಯ ಗೋಪಿನಾಥ್

    ದಾವಣಗೆರೆ: ಲಾಭವಿಲ್ಲದೇ ಯಾರೂ ಯಾವ ಕೆಲಸನೂ ಮಾಡಲ್ಲ. ಆದ್ರೆ ನಮ್ಮ ಪಬ್ಲಿಕ್ ಹೀರೋ ನಿಸ್ವಾರ್ಥ ಭಾವನೆಯಿಂದ ರಕ್ತದಾನ ಮಾಡ್ತಿದ್ದಾರೆ. 15 ಸ್ನೇಹಿತರಿಂದ ಶುರುವಾದ ರಕ್ತದಾನ, ಇವತ್ತು 3 ಸಾವಿರ ಸದಸ್ಯರಿಗೆ ತಲುಪಿದೆ.

    ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆ ನಿವಾಸಿ ಗೋಪಿನಾಥ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಮೆಡಿಕಲ್ ಕಾಲೇಜ್‍ನಲ್ಲಿ ದೈಹಿಕ ಶಿಕ್ಷಕರಾಗಿದ್ದಾರೆ. ಜೊತೆಗೆ ಕ್ರಿಕೆಟ್ ಕೋಚ್ ಕೆಲ ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಅಪಘಾತವಾಗಿ, ರಕ್ತವಿಲ್ಲದೇ ಗಾಯಾಳುಗಳು ಒದ್ದಾಡ್ತಿದ್ರು. ಆ ದೃಶ್ಯ ನೋಡಿ ಇವರು ರಕ್ತದಾನ ಮಾಡಬೇಕೆಂದು ನಿರ್ಧರಿಸಿದ್ರು.

    15 ಮಂದಿ ಸ್ನೇಹಿತರ ಸದಸ್ಯತ್ವದಿಂದ ಶುರುವಾದ `ಲೈಫ್ ಲೈನ್’ ಎನ್ನುವ ಸಂಸ್ಥೆ ಇವತ್ತು ಮೂರು ಸಾವಿರ ಸದಸ್ಯರನ್ನ ಹೊಂದಿದೆ. ಯಾರೇ ಎಷ್ಟೇ ಹೊತ್ತಲ್ಲಿ ರಕ್ತ ಕೇಳಿದ್ರೂ ಗೋಪಿನಾಥ್ ಅವರ ಬಳಿ ರೆಡಿ ಇರುತ್ತೆ. ಎಷ್ಟೇ ದೂರ ಇದ್ರೂ ಹೋಗಿ ರಕ್ತದಾನ ಮಾಡುತ್ತಾರೆ. ಗೋಪಿನಾಥ್ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾರೆ. ಈವರೆಗೆ 57 ಬಾರಿ ರಕ್ತದಾನ ಮಾಡಿದ್ದಾರೆ.

    ಗೋಪಿನಾಥ್‍ಗೆ ಸ್ನೇಹಿತರಷ್ಟೇ ಅಲ್ಲ. ಇವರ ಕುಟುಂಬವೂ ಸಾಥ್ ನೀಡಿದೆ. ನೃತ್ಯಪಟು ಹಾಗೂ ಕ್ರೀಡಾಪಟುವಾದ ಗೋಪಿನಾಥ್ ರವರ ಪತ್ನಿ ಮಾಧವಿ ಅವರ ಸಹ 8 ಬಾರಿ ರಕ್ತದಾನ ಮಾಡಿದ್ದಾರೆ.

  • ಕೊಪ್ಪಳದಲ್ಲಿದೆ ಜೀವ ಉಳಿಸುವ ವಾಟ್ಸಪ್ `ಬ್ಲಡ್ ಗ್ರೂಪ್’..!

    ಕೊಪ್ಪಳದಲ್ಲಿದೆ ಜೀವ ಉಳಿಸುವ ವಾಟ್ಸಪ್ `ಬ್ಲಡ್ ಗ್ರೂಪ್’..!

    ಕೊಪ್ಪಳ: ಇಂದು ವಾಟ್ಸಪ್ ಮೊಬೈಲ್ ಉಳ್ಳವರ ಅವಿಭಾಜ್ಯ ಅಂಗವಾಗಿದೆ. ಕೊಪ್ಪಳ ಜಿಲ್ಲೆಯ ಯುವಕರ ಬಳಗವೊಂದು ವಾಟ್ಸಪ್ ನಿಂದ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಪವರ್‍ಫುಲ್ ಕಮ್ಯುನಿಕೇಷನ್ ಆ್ಯಪ್ ಆಗಿರೋ ವಾಟ್ಸಪನ್ನೇ ಕೊಪ್ಪಳದ ಈ ಯುವಕರ ಬಳಗ ಸಂಜೀವಿನಿಯಂತೆ ಬಳಸಿಕೊಳ್ತಿದೆ.

    ಕೊಪ್ಪಳ ನಗರದ ನಿವಾಸಿ ಮಂಜುನಾಥ್, `ಕೊಪ್ಪಳ ರಕ್ತ ದಾನಿಗಳ ಬಳಗ’ ಅಂತ ಗ್ರೂಪ್ ಮಾಡಿಕೊಂಡಿದ್ದಾರೆ. ರಕ್ತದ ಅಗತ್ಯತೆ ಇರೋವ್ರಿಗೆ ಈ ಗ್ರೂಪ್ ಮೂಲಕ ತುರ್ತಾಗಿ ಸುಲಭವಾಗಿ ಉಚಿತವಾಗಿ ರಕ್ತ ಪೂರೈಕೆ ಮಾಡ್ತಿದ್ದಾರೆ.

    10 ತಿಂಗಳ ಹಿಂದೆ ಕ್ರಿಯೆಟ್ ಆದ ಈ ಗ್ರೂಪ್ ಈಗ ಕೇವಲ ಕೊಪ್ಪಳ ಮಾತ್ರವಲ್ಲ ನೆರೆಯ 6 ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ. ಯಾವ ಸಮಯದಲ್ಲಿ ಬೇಕಾದರೂ ರಕ್ತ ಪೂರೈಸ್ತಾರೆ. ಈ ಯುವ ಸಮೂಹದ ಕಾರ್ಯಕ್ಕೆ ರಕ್ತ ಪಡೆದು ಜೀವ ಉಳಿಸಿಕೊಂಡವರು ಕೃತಜ್ಞತೆ ಹೇಳ್ತಾರೆ. ವಾಟ್ಸಾಪ್ ಮೂಲಕ ಯುವಕರು ಈ ವಿಭಿನ್ನ ಕಾರ್ಯಕ್ಕೆ ಮುಂದಾಗಿರೋದು ಶ್ಲಾಘನಾರ್ಹವಾಗಿದೆ.

    https://www.youtube.com/watch?v=YY80F-oTWnA

  • ಕೆಸಿಎಫ್ ವತಿಯಿಂದ ಮೆಕ್ಕಾದಲ್ಲಿ ರಕ್ತದಾನ ಶಿಬಿರ

    ಕೆಸಿಎಫ್ ವತಿಯಿಂದ ಮೆಕ್ಕಾದಲ್ಲಿ ರಕ್ತದಾನ ಶಿಬಿರ

    ಸೌದಿ ಅರೇಬಿಯಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಡೇ ಪ್ರಯುಕ್ತ ಕೆಸಿಎಫ್ ಮಕ್ಕತುಲ್ ಮುಕರ್ರಮ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ ಮೆಕ್ಕಾದ ಝಾಹಿರ್ ನಲ್ಲಿರುವ ಕಿಂಗ್ ಅಬ್ದುಲ್ ಅಜೀಝ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಈ ಪವಿತ್ರ ಭೂಮಿಯಲ್ಲಿ ಉದ್ಯೋಗ ಮಾಡಲು ದೊರಕಿದ ಸದಾವಕಾಶವನ್ನು ಬಳಸಿ ಕೆಸಿಎಫ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಅತ್ಯಂತ ಮಹತ್ವ ಪೂರ್ಣವಾದ ಕಾರ್ಯಗಳನ್ನು ನಡೆಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ. ತಾಯ್ನಾಡಿನಲ್ಲೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಹಕರಿಸುತ್ತಾ ಅನಾಥ, ನಿರ್ಗತಿಕರ ಕಣ್ಣೀರೊರೆಸುವ ಕಾರ್ಯಗಳಲ್ಲಿ ಕೆಸಿಎಫ್ ಮುಂದಾಗಿದೆ ಎಂದರು.

    ಅನ್ನದಾನ, ಶಿಕ್ಷಣ ಇವುಗಳಿಗಿಂತ ಅತ್ಯಂತ ಮಹತ್ವದ್ದಾಗಿದೆ ರಕ್ತದಾನ. ಅನ್ನವು ಸರ್ಕಾರದಿಂದಲೇ ದಾನವಾಗಿ ಲಭಿಸಿದರೆ ಶಿಕ್ಷಣ ಸೈಬರ್ ಕೇಂದ್ರಗಳಲ್ಲಿ ಹೇರಳವಾಗಿ ದೊರೆಯಬಹುದು. ಆದ್ರೆ ರಕ್ತವು ಈ ರೀತಿ ಲಭಿಸದು. ಆದ್ದರಿಂದ ರಕ್ತ ದಾನ ಅತ್ಯಂತ ಮಹತ್ವಪೂರ್ಣ ದಾನವಾಗಿದೆ. ಇದನ್ನು ಆಯೋಜಿಸಿದ ಕೆಸಿಎಫ್ ನಿಜಕ್ಕೂ ಅಭಿನಂದನಾರ್ಹ ಎಂದರು. ಇನ್ನು ಮುಂದಕ್ಕೂ ಕೆಸಿಎಫ್ ಮಾದರಿ ಯೋಗ್ಯ ಸಂಘಟನೆಯಾಗಿ ಬೆಳೆದು ಬರಲಿ ಎಂದು ಹಾರೈಸಿ ರಕ್ತ ತಪಾಸಣೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

    ಬಳಿಕ ದಾರುಲ್ ಉಲೂಮ್ ರಹ್ಮಾನಿಯ ದಾವಣಗೆರೆ ಇದರ ಪ್ರಿನ್ಸಿಪಾಲ್ ಬಿ.ಎ ಇಬ್ರಾಹಿಮ್ ಸಖಾಫಿ ದಾವಣಗೆರೆ ಮಾತಾಡಿ, ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಹಿಂದುಳಿದ ಉತ್ತರ ಕರ್ನಾಟಕವನ್ನು ಪ್ರತೇಕವಾಗಿ ಗಮನವಿಟ್ಟು ಹಾಗೂ ಹಜ್ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಕಾರ್ಯಚರಿಸುತ್ತಾ ಬಂದಿರುವ ಕೆ.ಸಿ.ಎಫ್ ಎಂಬ ಸಂಘಟನೆಯನ್ನು ಬಿಟ್ಟು ಬೇರೆ ಯಾವ ಸಂಘಟನೆಯು ಕೊಲ್ಲಿ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ, ಇಸ್ಲಾಮಿನಲ್ಲಿ ರಕ್ತವನ್ನು ಯಾವತ್ತೂ ವ್ಯಾಪಾರ ಮಾಡಬಾರದು. ಅದನ್ನು ದಾನವಾಗಿ ಕೊಡಬಹುದೆಂದು ನಮ್ಮ ಉಲಾಮಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿ ಕೆ.ಸಿ.ಎಫ್ ಸೇವೆಯನ್ನು ಅಭಿನಂದಿಸಿ ಶುಭ ಹಾರೈಸಿದರು.

    ನಂತರ ಕೆಸಿಎಫ್ ಮೆಕ್ಕಾ ಸೆಕ್ಟರಿನ 20 ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಕೋಶಾಧಿಕಾರಿ ಸುಲೈಮಾನ್ ಪಾದೆಕಲ್ಲು, ಶಿಕ್ಷಣ ವಿಭಾಗ ಕನ್ವೀನರ್ ಮುಸ್ತಾಕ್ ಸಾಗರ್, ಸಾಂತ್ವನ ವಿಭಾಗ ಕನ್ವೀನರ್ ಮೂಸಾ ಹಾಜಿ ಕಿನ್ಯ ಹಾಗೂ ಕೆ.ಸಿ.ಎಫ್ ಜಿದ್ದಾ ಝೋನ್ ಸಾರ್ವಜನಿಕ ಸಂಪರ್ಕ ಚೇರ್ಮನ್ ಇಬ್ರಾಹಿಮ್ ಕಿನ್ಯ ಹಾಗೂ ಕೆ.ಸಿ.ಎಫ್ ಸದಸ್ಯರು ಉಪಸ್ಥಿತರಿದ್ದರು.