Tag: blood donation

  • ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.

    ರೋಟರಿ ಸಂಸ್ಥೆಯಿಂದ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ರಕ್ತದಾನ ಶಿಬಿರವನ್ನು ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದ ಉದ್ಘಾಟನೆಯನ್ನು ವಿಜಯ ರಾಘವೇಂದ್ರ ಮಾಡಿದ್ದು, ತಾವೂ ಸಹ ರಕ್ತದಾನ ಮಾಡಲು ಮುಂದಾದರು.

    ಈ ವೇಳೆ ಗಾಜನೂರಿನಲ್ಲಿ ಅಪ್ಪು ಅವರೊಡನೆ ಬಾಲ್ಯ ಕಳೆದ ನೆನಪನ್ನು ವಿಜಯ್ ಬಿಚ್ಚಿಟ್ಟರು. ಬೇರೆ ಯಾವುದರ ಬಗ್ಗೆಯು ತಲೆ ಕೆಡಿಸಿಕೊಳ್ಳೋದು ಬೇಡ, ಒಳ್ಳೆಯ ಕೆಲಸ ಮಾಡೋಣ ಎಂಬ ಪುನೀತ್ ಮಾತುಗಳನ್ನು ನೆನೆಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ: ಪ್ರಾಣ ಕಳೆದುಕೊಂಡ ರೈತರಿಗಾಗಿ ‘ಅಸ್ತಿ ಕಲಶ ರ‍್ಯಾಲಿ’ ಆಯೋಜನೆ: ನವಾಬ್ ಮಲಿಕ್

    ಸದಾ ಒಳ್ಳೆಯ ಕೆಲಸಗಳ ಬಗ್ಗೆಯೇ ಚಿಂತಿಸುತ್ತಿದ್ದರು. ಅವರ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ರಕ್ತದಾನ ಶಿಬಿರ ಉದ್ಘಾಟನೆ ಹಾಗು ರಕ್ತದಾನ ಮಾಡುವುದು ಸಾರ್ಥಕತೆ ಕೊಡುತ್ತೆ. ಪುನೀತ್ ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ ಎಂದು ತಿಳಿಸಿದರು.

  • ನಾಯಿಯಿಂದ ನಾಯಿಗೆ ರಕ್ತದಾನ

    ನಾಯಿಯಿಂದ ನಾಯಿಗೆ ರಕ್ತದಾನ

    ಧಾರವಾಡ: ಒಂದು ನಾಯಿಯಿಂದ ಮತ್ತೊಂದು ನಾಯಿಗೆ ರಕ್ತದಾನ ಮಾಡಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

    ವಿಜಯಪುರ ಮೂಲದ 7 ತಿಂಗಳ ರಾಟ್ ವಿಲ್ಲರ್ ತಳಿ ನಾಯಿಗೆ ಹೊಟ್ಟೆ ನೋವಿನ ಸಮಸ್ಯೆ ಇದ್ದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈ ವೇಳೆ ಆ ನಾಯಿದ ಹೊಟ್ಟೆಯಲ್ಲಿ ರಕ್ತ ಸಾವ್ರವಾಗಿದ್ದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಹೀಗಾಗಿ ರಾಟ್ ವಿಲ್ಲರ್ ಮಾಲಿಕ ಧಾರವಾಡ ಕೃಷಿ ವಿವಿಯಲ್ಲಿರುವ ಪಶು ಆಸ್ಪತ್ರೆಗೆ ತಂದಿದ್ದರು. ಕೃಷಿ ವಿವಿಯ ಪಶು ಆಸ್ಪತ್ರೆ ವೈದ್ಯ ಅನಿಲ್ ಪಾಟೀಲ್ ರಾಟ್ ವಿಲ್ಲರಗೆ ಒಂದು ಯುನಿಟ್ ರಕ್ತ ಹಾಕಿದರೆ ಉಳಿಯುತ್ತೆ ಎಂದಿದ್ದಕ್ಕೆ ಧಾರವಾಡದ ಸೋಮಶೇಖರ್ ಅವರ ಜರ್ಮನ್ ಶೆಫರ್ಡ್ ನಾಯಿಯಿಂದ ರಕ್ತದಾನ ಮಾಡಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ಶಾರೂಖ್ ಪುತ್ರ ಆರ್ಯನ್ ಜೈಲುಪಾಲು

    ಸೋಮಶೇಖರ್ ಕೂಡ ಮೊದಲು ರಾಟ್ ವಿಲ್ಲರಗಾಗಿ ಹಲವು ಕಡೆ ರಕ್ತ ಹುಡುಕಾಟ ನಡಸಿದ್ದರು. ಆದರೆ ಎರಡೂ ನಾಯಿಗಳ ರಕ್ತ ಮಾದರಿ ಹೊಲಿಕೆಯಾಗದ ಕಾರಣ, ಕೊನೆಗೆ ತನ್ನ ಬಳಿ ಇದ್ದ ನಾಯಿಯ ರಕ್ತದ ಮಾದರಿ ತಪಾಸಣೆ ಮಾಡಿಸಿದ್ದಾರೆ. ಈ ಎರಡೂ ನಾಯಿಗಳ ರಕ್ತದ ಮಾದರಿ ಒಂದೇ ಇದ್ದ ಕಾರಣ ರಕ್ತ ದಾನ ಮಾಡಿಸಿದರು. ಸದ್ಯ ನಾಯಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ್ದಾರೆ.

  • ಮಕ್ಕಳಿಗಾಗಿ ಮಿಡಿದ ಹೃದಯ – ರಕ್ತದಾನ ಮಾಡಿ ಮಾನವೀಯತೆ ಮೆರೆದ ಪೊಲೀಸರು

    ಮಕ್ಕಳಿಗಾಗಿ ಮಿಡಿದ ಹೃದಯ – ರಕ್ತದಾನ ಮಾಡಿ ಮಾನವೀಯತೆ ಮೆರೆದ ಪೊಲೀಸರು

    ಹಾವೇರಿ: ಪೊಲೀಸರ ಬಗ್ಗೆ ಸಮಾಜದಲ್ಲಿ ಕೆಲವೊಂದು ಕೆಟ್ಟ ಅಭಿಪ್ರಾಯಗಳಿವೆ. ಆದರೆ ಪೊಲೀಸರಲ್ಲೂ ಮಾನವೀಯತೆ ಇದೆ. ಅವರು ಜನರ ಸಂಕಷ್ಟಕ್ಕೆ ಮಿಡಿಯುತ್ತಾರೆ ಎಂಬುದನ್ನು ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಠಾಣೆಯ ಪೊಲೀಸರು ತೋರಿಸಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿನ ಥಲಸೇಮಿಯಾ ಮಕ್ಕಳಿಗಾಗಿ ರಕ್ತದಾನ ಮಾಡುವ ಮೂಲಕ ಪೊಲೀಸರು ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.

    ಹಾವೇರಿಯೊಂದರಲ್ಲಿ ಥಲಸೇಮಿಯಾ ಕಾಯಿಲೆಯಿಂದ 103 ಮಕ್ಕಳು ಬಳಲುತ್ತಿದ್ದಾರೆ. ಈ ಮಕ್ಕಳಿಗೆ ಪ್ರತಿ ತಿಂಗಳು ರಕ್ತ ಹಾಕಿಸಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ರಕ್ತ ಹಾಕಿಸದಿದ್ದರೆ ಅಂತಹ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮಕ್ಕಳ ಪರಿಸ್ಥಿತಿ ಕಂಡು ಹೆತ್ತವರಂತೂ ಅಕ್ಷರಶಃ ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಥಲಸೇಮಿಯಾ ಮಕ್ಕಳಿಗೆ ಎದುರಾಗುತ್ತಿರುವ ರಕ್ತದ ಕೊರತೆ ನೀಗಿಸಬೇಕು ಎಂಬ ಉದ್ದೇಶದಿಂದ ಆಡೂರು ಪೊಲೀಸ್ ಠಾಣೆಯ ಪೊಲೀಸರು ಜೀವದಾನ ಹಬ್ಬ ಎಂಬ ಹೆಸರಿನ ರಕ್ತದಾನ ಶಿಬರ ನಡೆಸಿದರು. ಇದನ್ನೂ ಓದಿ:ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ

    ಪೊಲೀಸರ ಅಭಿಮಾನಿ ಆಗಿರುವ ಬೆಂಗಳೂರು ಮೂಲದ ಆಸ್ಟ್ರೇಲಿಯಾದಲ್ಲಿ ಶಸ್ತ್ರಚಿಕಿತ್ಸಾ ತಂತ್ರಜ್ಞರಾಗಿರುವ ಶ್ರೀಮತಿ ಸುರೇಖಾ ರಾವ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಪೈಕಿ ಕೆಲವೇ ಕೆಲವರನ್ನು ಹೊರತುಪಡಿಸಿ ಹತ್ತೊಂಬತ್ತು ಜನರು ರಕ್ತದಾನ ಮಾಡಿದರು.

    ಪೊಲೀಸರ ಜೊತೆಗೆ ಸದಾ ಒಡನಾಟ ಹೊಂದಿರುವ ಗ್ರಾಮದ ಕೆಲವರು ಸಹ ಪೊಲೀಸರ ಕಾರ್ಯವನ್ನು ಮೆಚ್ಚಿ ಹದಿನೈದು ಜನರು ರಕ್ತದಾನ ಮಾಡಿದರು. ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮದ ಜನರು ಸೇರಿ ಒಟ್ಟು 34 ಜನರು ಶಿಬಿರದಲ್ಲಿ ರಕ್ತದಾನಿಗಳಾದರು. ಇದನ್ನೂ ಓದಿ:ಮಗನ ಪ್ರಾಣ ಉಳಿಸಿಕೊಳ್ಳಲು ವೈದ್ಯರ ಕಾಲು ಹಿಡಿದ ತಾಯಿ

    ಐವತ್ತು ಮೂರು ಬಾರಿ ರಕ್ತದಾನ ಮಾಡಿರುವ ಕಿರಣ ಗಡ ಎಂಬುವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ, ಡಿವೈಎಸ್ಪಿ ಕಲ್ಲೇಶಪ್ಪ, ಸಿಪಿಐ ಶಿವಶಂಕರ್ ಗಣಾಚಾರಿ ಮತ್ತು ಪಿಎಸ್‍ಐ ನೀಲಪ್ಪ ನರಲಾರ ಶಿಬಿರದಲ್ಲಿ ಭಾಗವಹಿಸಿ ಪೊಲೀಸ್ ಸಿಬ್ಬಂದಿಗಳ ಮನಮಿಡಿಯುವ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಇದನ್ನೂ ಓದಿ:ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    ಈ ವೇಳೆ ಮಾತನಾಡಿದ ವಿಜಯಕುಮಾರ್ ಸಂತೋಷ, ಆಡೂರು ಠಾಣೆ ಪೊಲೀಸರ ಕಾರ್ಯ ಮೆಚ್ಚುವಂತಹದು. ಪೊಲೀಸ್ ಸಿಬ್ಬಂದಿ ಒತ್ತಡ ನಿವಾರಣೆಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲೂ ರಕ್ತದಾನ ಶಿಬಿರ ನಡೆಯುವಂತೆ ಮಾಡುತ್ತೇವೆ ಎಂದರು.

  • ರಕ್ತದಾನದ ಮೂಲಕ ವೈದ್ಯರಿಂದ ವಿಶ್ವ ರಕ್ತದಾನಿಗಳ ದಿನಾಚರಣೆ

    ರಕ್ತದಾನದ ಮೂಲಕ ವೈದ್ಯರಿಂದ ವಿಶ್ವ ರಕ್ತದಾನಿಗಳ ದಿನಾಚರಣೆ

    ಹಾವೇರಿ: ರಕ್ತದಾನದ ಮೂಲಕವಾಗಿ ಹಾವೇರಿಯಲ್ಲಿ ವೈದ್ಯರಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತ್ತು.

    ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ.ಪಿ.ಆರ್.ಹಾವನೂರ ಅವರು, ಕೇವಲ 350 ಮಿಲಿ ರಕ್ತದಾನ ಮಾಡಿ ತುರ್ತು ಪ್ರಾಣಾಪಾಯದಲ್ಲಿರುವವರಿಗೆ ಜೀವ ಸಂಜೀವಿನಿಯಾಗಿ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆರೋಗ್ಯವಂತ ಮಾನವ ದೇಹದಲ್ಲಿ ಸುಮಾರು ಐದರಿಂದ ಆರು ಲೀಟರ್ ರಕ್ತದ ಉತ್ಪತ್ತಿ ನಿರಂತರವಾಗಿರುತ್ತದೆ. ಆರೋಗ್ಯವಂತ ಯುವ ಜನಾಂಗ ರಕ್ತದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ಅವರು ಹೇಳಿದರು.

    ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾಳ ಅವರು ಮಾತನಾಡಿ, ಜಿಲ್ಲೆಯಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.ಆರೋಗ್ಯವಂತರ ಯುವಜನಾಂಗ ರಕ್ತದಾನ ಮಾಡುವ ಮೂಲಕ ತುರ್ತು ಪ್ರಾಣಾಪಾಯದಲ್ಲಿರುವ ರೋಗಿಗಳ ಪ್ರಾಣ ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ರಕ್ತ ಕೇಂದ್ರದ ತಾಂತ್ರಿಕ ಅಧಿಕಾರಿ ಬಸವರಾಜ ಕಮತದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ಸತೀಶ ಗೌಳಿ ಹಾಗೂ ವಿನಾಯಕ ಓಂಕಾರಣ್ಣನವರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ಸುರೇಶ್ ಪೂಜಾರ, ಡಾ. ನೀಲೇಶ್ ಇತರರು ಉಪಸ್ಥಿತರಿದ್ದರು.

  • ರಾಗಿಣಿ ಹುಟ್ಟುಹಬ್ಬ-ಅಭಿಮಾನಿಗಳಿಂದ ರಕ್ತದಾನ ಶಿಬಿರ

    ರಾಗಿಣಿ ಹುಟ್ಟುಹಬ್ಬ-ಅಭಿಮಾನಿಗಳಿಂದ ರಕ್ತದಾನ ಶಿಬಿರ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಹುಟ್ಟುಹಬ್ಬ ಹಿನ್ನೆಲೆ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕವಾಗಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

    ರಾಗಿಣಿ ದ್ವಿವೇದಿ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೊನಾ ಪರಿಸ್ಥಿತಿಯಲ್ಲಿ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದಾರೆ. ಬೆಂಗಳೂರಿನ ಜಯನಗರದ ಜೈನ್ ಯೂನಿವರ್ಸಿಟಿಯಲ್ಲಿ ಬ್ಲಂಡ್ ಕ್ಯಾಂಪ್ ಆಯೋಜಿಸಲಾಗಿದ್ದು, ಜೆನೆಕ್ಸ್ಟ್ ಚಾರಿಟೇಬಲ್ ಟ್ರಸ್ಟ್ ಹಾಗೂ ರಾಷ್ಟ್ರೋತ್ಥಾನ ಬ್ಲಂಡ್ ಬ್ಯಾಂಕ್ ನೇತೃತ್ವದಲ್ಲಿ ಸುಮಾರು ಜನರಿಂದ ರಕ್ತದಾನ ಮಾಡಿದ್ದಾರೆ.

    ಮೊದಲ ಲಾಕ್ ಡೌನ್ ಸಮಯದಲ್ಲಿ ಊಟ, ಮಾಸ್ಕ್, ದಿನಸಿ ನೀಡಿದ್ದ ನಟಿ ರಾಗಿಣಿ ಈಗ ಎರಡನೇ ಅಲೆಯ ಸಂದರ್ಭದಲ್ಲೂ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ 500 ಮಾಸ್ಕ್, 1000 ಜನರಿಗೆ ಊಟ ನೀಡುತ್ತಿದ್ದಾರೆ.

    ರಾಗಿಣಿ ಕಳೆದ ವಾರ ವ್ಯಾಕ್ಸಿನೇಷನ್ ಮೊದಲ ಡೋಸ್ ಹಾಕಿಸಿಕೊಳ್ಳುವ ಮುಂಚೆಯೇ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ, ಈಗ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಿರುವ ಖುಷಿಯಲ್ಲಿದ್ದಾರೆ. ಹಲವಾರು ಅಭಿಮಾನಿಗಳು ಈ ವೇಳೆ ರಕ್ತದಾನವನ್ನು ಮಾಡಿದ್ದಾರೆ.

  • ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿದ ನಿರ್ದೇಶಕ ತರುಣ್ ಸುಧೀರ್

    ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿದ ನಿರ್ದೇಶಕ ತರುಣ್ ಸುಧೀರ್

    ಬೆಂಗಳೂರು: ಕೋವಿಡ್ ಲಸಿಕೆ ಹಾಕಿಸಿಕೊಂಡ ಕೆಲ ದಿನಗಳು ರಕ್ತದಾನ ಮಾಡುವಂತಿಲ್ಲ. ಇದರಿಂದಾಗಿ ಸಾಕಷ್ಟು ಮಂದಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುತ್ತಿದ್ದಾರೆ. ಇದಕ್ಕೆ ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಅವರೂ ಹೊರತಾಗಿಲ್ಲ.

     

    View this post on Instagram

     

    A post shared by Tharun Kishore Sudhir (@tharunsudhir)

    ಕೊರೊನಾ ಸೋಂಕಿನಿಂದ ಪಾರಾಗಲು ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲೂ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ರಾಬರ್ಟ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ತರುಣ್ ಸುಧೀರ್ ಸಹ ಈಗ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ರಕ್ತದಾನವನ್ನು ಮಾಡಿದ್ದಾರೆ.

    ವ್ಯಾಕ್ಸಿನ್ ಮಾಡಿಸಿಕೊಂಡ ನಂತರ ಕೆಲವು ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಅದಕ್ಕಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ತರುಣ್ ಮನವಿ ಮಾಡಿದ್ದಾರೆ. ವ್ಯಾಕ್ಸಿನ್ ಮಾಡಿಸಿಕೊಂಡ ನಂತರ ಕೆಲವು ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಅದಕ್ಕಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ತರುಣ್ ಮನವಿ ಮಾಡಿದ್ದಾರೆ. ತರುಣ್ ಅವರಿಗೂ ಮುಂಚೆ ಶ್ರೀಮುರಳಿ, ರಾಗಿಣಿ, ವಶಿಷ್ಠ ಸಿಂಹ ಸಹ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನವನ್ನು ಮಾಡಿದ್ದಾರೆ. ಕೊರೊನಾ ಕುರಿತಾದ ಜಾಗೃತಿ, ಸಹಾಯ ಮಾಡುವಲ್ಲಿ ಸೆಲೆಬ್ರಿಟಿಗಳು ತೊಡಗಿಸಿಕೊಂಡಿದ್ದಾರೆ.

  • ಗೆಳೆಯನ ಮರಣದ ದಿನವನ್ನು ರಕ್ತದಾನ ಮಾಡುವ ಮೂಲಕ ನೆನಪಿಸಿದ ಸ್ನೇಹಿತರು

    ಗೆಳೆಯನ ಮರಣದ ದಿನವನ್ನು ರಕ್ತದಾನ ಮಾಡುವ ಮೂಲಕ ನೆನಪಿಸಿದ ಸ್ನೇಹಿತರು

    ಹಾವೇರಿ: ಗೆಳೆಯನ ಮರಣದ ದಿನದಂದು ಆತನ ಸ್ಮರಣಾರ್ಥವಾಗಿ ಗ್ರಾಮದ ಯುವಕರು ಹಾಗೂ ಗೆಳೆಯರು ಸೇರಿ ರಕ್ತದಾನ ಶಿಬಿರ ಮಾಡುವ ಮೂಲಕ ವಿಶೇಷ ಕಾರ್ಯಕ್ರಮ ಮಾಡಿದ್ದಾರೆ.

    ಹಾವೇರಿಯ ಮರೋಳ ಗ್ರಾಮದ ಮಾರುತಿ ಹೆಗ್ಗಪ್ಪ ಹೆಸ್ಕಾಂ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ತಂತಿ ಸ್ವರ್ಶಿಸಿ ಕಳೆದ ವರ್ಷ ಮೃತಪಟ್ಟಿದ್ದರು. ಹಾಗಾಗಿ ಈ ವರ್ಷ ಅದೇ ದಿನ ಸ್ನೇಹಿತರೆಲ್ಲಾ ಸೇರಿ ಮರೋಳ ಗ್ರಾಮದಲ್ಲಿ ರಕ್ತದಾನ ಶಿಬಿರ ಮಾಡುವ ಮೂಲಕ ಅರ್ಥಪೂರ್ಣವಾಗಿ ಗೆಳೆಯನನ್ನು ನೆನಪಿಸಿಕೊಂಡಿದ್ದಾರೆ.

    ಗ್ರಾಮದ ಸ್ನೇಹಜೀವಿ ಗೆಳೆಯರ ಬಳಗ, ಸರ್ಕಾರಿ ಪ್ರೌಢಶಾಲೆಯ ಮರೋಳ ಹಾಗೂ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಅಕ್ಕಿಆಲೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.

    ರಕ್ತದಾನ ಶಿಬಿರವನ್ನು 35 ಬಾರಿ ರಕ್ತದಾನ ಮಾಡಿದ ರಕ್ತಸೈನಿಕ ವಿಜಯಕುಮಾರ್ ದೇವರಗುಂಡಿಮಠ ಉದ್ಘಾಟಿಸಿದರು. ಗ್ರಾಮದ ಗೆಳೆಯರು ಹಾಗೂ ಯುವಕರು ಸೇರಿ ಒಟ್ಟು 61 ಜನ ರಕ್ತದಾನ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ರಕ್ತದಾನಿ ವಿಜಯಕುಮಾರ್ ಸ್ವತಃ 35ನೇ ಬಾರಿ ರಕ್ತದಾನ ಮಾಡಿ ಯುವಕರಿಗೆ ಪ್ರೇರಣೆ ನೀಡಿದರು. ಜಿಲ್ಲಾ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿದ್ದರು.

  • ರಕ್ತದಾನ ಮಾಡಿ ಮಾದರಿಯಾದ ಪಿಎಸ್‍ಐ

    ರಕ್ತದಾನ ಮಾಡಿ ಮಾದರಿಯಾದ ಪಿಎಸ್‍ಐ

    ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿರುವಾಗಲೇ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಸುದ್ದಿ ತಿಳಿಯುತ್ತಿದ್ದಂತೆ ಧಾರವಾಡ ಜಿಲ್ಲೆಯ ಗುಡಗೇರಿ ಪೊಲೀಸ್ ಠಾಣೆಯ ಪಿಎಸ್‍ಐ ನವೀನ ಜಕ್ಕಲಿಯವರು ಆಸ್ಪತ್ರೆಗೆ ಭೇಟಿ ನೀಡಿ ರಕ್ತದಾನ ಮಾಡುವ ಮೂಲಕ ರೋಗಿಯೊಬ್ಬರಿಗೆ ಜೀವದಾನ ಮಾಡಿದ್ದಾರೆ. ವಿಲಿಯಂ ವರ್ಗೀಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ರಕ್ತನಿಧಿಗಳಲ್ಲಿ ರಕ್ತದ ಅಭಾವ ಇರುವುದರಿಂದ ಕರ್ತವ್ಯನಿರತ ಪೊಲೀಸ್ ಅಧಿಕಾರಿ ನವೀನ ಜಕ್ಕಲಿಯವರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಕೊರೊನಾ ಹಿನ್ನೆಲೆ ವಾರಿಯರ್ಸ್‍ಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪೊಲೀಸ್ ಅಧಿಕಾರಿ ಸಾರ್ವಜನಿಕ ಸೇವೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರಕ್ತದಾನ ಮಾಡಿ ಮಾನವೀಯತೆ ಮೆರೆದ ಪುರೋಹಿತರು

    ರಕ್ತದಾನ ಮಾಡಿ ಮಾನವೀಯತೆ ಮೆರೆದ ಪುರೋಹಿತರು

    – 35 ರಿಂದ 45 ಪುರೋಹಿತರು, ಕುಟುಂಬದವರಿಂದ ರಕ್ತದಾನ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್‍ನಿಂದ ಜನರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ರೋಗಿಗಳಿಗೆ ರಕ್ತದಾನ ಮಾಡುವವರ ಕೊರತೆ ಸಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಪ್ರಾರ್ಥನೆ, ಆರಾಧನೆ, ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿದ್ದ ಪುರೋಹಿತರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಶೇಖರಣೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಇರುವ ರೋಗಿಗಳಿಗೆ ರಕ್ತ ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಕೊರೊನಾ ಸಮಸ್ಯೆ ಹೊರತುಪಡಿಸಿ, ಇತರೆ ರೋಗಿಗಳಿಗೆ ರಕ್ತದ ತುರ್ತು ಅವಶ್ಯಕತೆ ಎದ್ದು ಕಾಣುತ್ತಿದ್ದು, ಈ ಕಷ್ಟವನ್ನು ಮನಗಂಡ ಪುರೋಹಿತ ಯುವ ಪರಿಷತ್ ಸದಸ್ಯರು ರಕ್ತದಾನ ಮಾಡಿದ್ದಾರೆ.

    ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸುಮಾರು 35 ರಿಂದ 45 ಪುರೋಹಿತರು ಹಾಗೂ ಅವರ ಕುಟುಂಬ ವರ್ಗದವರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ದಿನೇ ದಿನೇ ಕೊರೊನಾ ದೇಶದಲ್ಲಿ ವ್ಯಾಪಿಸುತ್ತಿದೆ. ಇದರಿಂದ ರಕ್ತದಾನ ಮಾಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ಆದರೆ ಅಗತ್ಯವಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರೂ ರಕ್ತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಚಿರಂಜೀವಿ – ಕೈ ಮುಗಿದು ಮನವಿ

    ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಚಿರಂಜೀವಿ – ಕೈ ಮುಗಿದು ಮನವಿ

    ಹೈದರಾಬಾದ್: ದೇಶದಲ್ಲಿ ಕೊರೊನಾದಿಂದ ಜನರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಈ ವೇಳೆ ಅನೇಕ ನಟ, ನಟಿಯರು ಸೇರಿದಂತೆ ಕಲಾವಿದರೂ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅದರಂತೆ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಕೊರೊನಾ ಸಂಕಷ್ಟದ ಸಮಯದಲ್ಲಿ ದೇಣಿಗೆ ನೀಡುವ ಮೂಲಕ ಸಹಾಯದ ಹಸ್ತ ಚಾಚಿದ್ದರು. ಇದೀಗ ಚಿರಂಜೀವಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಕೊರೊನಾ ಲಾಕ್‍ಡೌನ್ ಆದ ನಂತರ ರಕ್ತದಾನ ಮಾಡುವವರ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಇದರಿಂದ ಅನೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತ ದಾಸ್ತಾನು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ನಟ ಚಿರಂಜೀವಿ ರಕ್ತದಾನ ಮಾಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳು, ನಾಗರೀಕರು ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.

    ಇಂದು ಚಿರಂಜೀವಿ ಆಸ್ಪತ್ರೆಯೊಂದರಲ್ಲಿ ರಕ್ತದಾನ ಮಾಡಿದ್ದಾರೆ. ಇವರ ಜೊತೆಗೆ ತೆಲುಗಿನ ಮತ್ತೊಬ್ಬ ಹಿರಿಯ ನಟ ಶ್ರೀಕಾಂತ್, ಅವರ ಮಗ ರೋಷನ್ ಸಹ ರಕ್ತದಾನ ಮಾಡಿದ್ದಾರೆ. ಚಿರಂಜೀವಿ ಅವರು ರಕ್ತದಾನ ಮಾಡಿರುವ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾದಿಂದ ರಕ್ತದಾನ ಮಾಡುವವರು ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಬ್ಲಡ್ ಸಿಗದೇ ತೊಂದರೆಪಡುತ್ತಿದ್ದಾರೆ. ಇದರಿಂದ ಅನೇಕರು ಜೀವ ಕೂಡ ಕಳೆದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ. ಜೀವ ಉಳಿಸಲು ನೆರವಾಗಿ. ನಾವು ರಕ್ತದಾನ ಮಾಡಿದಾಗ ಸಿಗುವ ಖುಷಿ ಬೇರೆ ಏನೂ ಮಾಡಿದರೂ ಸಿಗುವುದಿಲ್ಲ. ಹೀಗಾಗಿ ದಯವಿಟ್ಟು ಎಲ್ಲರೂ ರಕ್ತದಾನ ಮಾಡಿ ಎಂದು ಕೈ ಮುಗಿದು ಮನವಿ ಮಾಡಿಕೊಂಡರು.

    https://twitter.com/i/status/1251828672538963968

    ರಕ್ತದಾನ ಮಾಡಲು ಹೊರಗೆ ಹೋಗಲು ಪೊಲೀಸರಿಂದ ಸಮಸ್ಯೆಯಾಗುವುದಿಲ್ಲ. ನೀವು ಸಮೀಪದ ಬ್ಲಡ್ ಬ್ಯಾಂಕ್, ಆಸ್ಪತ್ರೆಯನ್ನು ಫೋನ್ ಮೂಲಕ ಸಂಪರ್ಕಿಸಿ ರಕ್ತದಾನ ಮಾಡಲು ಬರುವುದಾಗಿ ಹೇಳಿದ್ರೆ, ಆಸ್ಪತ್ರೆಯವರು ನಿಮ್ಮ ಮೊಬೈಲ್‍ಗೆ ವಾಟ್ಸಪ್ ಮೂಲಕ ಅನುಮತಿ ಪತ್ರ ಕಳುಹಿಸುತ್ತಾರೆ. ಅದನ್ನು ಪೊಲೀಸರಿಗೆ ತೋರಿಸಿ ಆಸ್ಪತ್ರೆಗೆ ಹೋಗಬಹದು ಎಂದು ತಿಳಿಸಿದರು.

    ಅಷ್ಟೆ ಅಲ್ಲದೇ ಪೊಲೀಸರು ಸಹ ರಕ್ತದಾನ ಮಾಡಲು ಬೆಂಬಲವಾಗಿ ನಿಂತಿದ್ದಾರೆ. ಪೊಲೀಸರು ಕೂಡ ಮೊಬೈಲ್ ನಂಬರ್ ಕೊಟ್ಟಿದ್ದು, ಆ ನಂಬರ್‍ಗೆ ಫೋನ್ ಮಾಡಿದ್ರೆ ಅವರೇ ಬಂದು ರಕ್ತದಾನ ಮಾಡುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಜೊತೆಗೆ ಸುರಕ್ಷಿತವಾಗಿ ವಾಪಸ್ ತಂದು ಮನೆಗೆ ಸೇರಿಸುತ್ತಾರೆ ಎಂದು ಚಿರಂಜೀವಿ ಮಾಹಿತಿ ನೀಡಿದ್ದಾರೆ.