Tag: Blood Donation Camp

  • ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ಸ್ನೇಹಿತರಿಂದ ರಕ್ತದಾನ ಶಿಬಿರ

    ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ಸ್ನೇಹಿತರಿಂದ ರಕ್ತದಾನ ಶಿಬಿರ

    ಸಂಚಾರಿ ವಿಜಯ್‍ (Sanchari Vijay) ಅವರ ಹುಟ್ಟು ಹಬ್ಬಕ್ಕಾಗಿ (Birthday) ಅವರ ಗೆಳೆಯರ ಬಳಗ ಇಂದು ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಪ್ರತಿ ವರ್ಷವೂ ವಿಜಯ್ ಅವರ ಹುಟ್ಟು ಹಬ್ಬದ ದಿನದಂದು ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಆಪ್ತ ಸ್ನೇಹಿತ ಅನಿಲ್ ಗೌಡ.

    ಇಂದು ಬೆಂಗಳೂರಿನ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಐವತ್ತು ಹೆಚ್ಚು ವಿಜಯ್ ಗೆಳೆಯರು ರಕ್ತದಾನ ಮಾಡುವ ಮೂಲಕ ಗೆಳೆಯನನ್ನು ನೆನಪಿಸಿಕೊಂಡರು. ಹುಟ್ಟು ಹಬ್ಬದ ನೆಪದಲ್ಲಿ ಇದೇ ರೀತಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂಥ ಪ್ರತಿಜ್ಞೆ ಮಾಡಿದರು.  ಪೂರ್ಣ, ವಿವೇಕ್, ನಾರಾಯಣ್, ನಂದ, ರಾಜೇಶ್, ಸಾಗರ್, ಅನಿಲ್ ಸೇರಿದಂತೆ ಹಲವಾರು ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಈ ಕುರಿತು ಮಾತನಾಡಿದ  ಅನಿಲ್ ಗೌಡ, ‘ಗೆಳೆಯ ವಿಜಯ್ ಬದುಕಿದ್ದಾಗ ಒಟ್ಟಿಗೆ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೆವು. ಅವರೊಂದಿಗೆ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೆವು. ಈಗ ಅವರ ಕೆಲಸಗಳನ್ನು ಸಾಧ್ಯವಾದ ಮಟ್ಟಿಗೆ ನಾವೆಲ್ಲ ನೆಡಸಿಕೊಂಡು ಹೋಗುತ್ತಿದ್ದೇವೆ. ಅವರು ಕೂಡ ಅನೇಕ ಸಲ ರಕ್ತದಾನ ಮಾಡುವ ಮೂಲಕ ನಮಗೆಲ್ಲ ಮಾದರಿ ಆಗಿದ್ದರು’ ಅಂದರು.

     

    ರಂಗಭೂಮಿ ಹಿನ್ನೆಲೆಯ ವಿಜಯ್ ಕಿರುತೆರೆ, ಸಂಗೀತ ಮತ್ತು ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾನು ಅವನಲ್ಲ ಅವಳು ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ನಟನೆಯ ಹರಿವು ಸೇರಿದಂತೆ ಹಲವಾರು ಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ. ಅತೀ ಚಿಕ್ಕ ವಯಸ್ಸಿನಲ್ಲೇ ರಸ್ತೆ ಅಪಘಾತದಲ್ಲಿ ವಿಜಯ್ ನಿಧನ ಹೊಂದಿದ್ದಾರೆ.

  • ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ: ಗೆಳೆಯರಿಂದ ರಕ್ತದಾನ ಶಿಬಿರ

    ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ: ಗೆಳೆಯರಿಂದ ರಕ್ತದಾನ ಶಿಬಿರ

    ಇಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (Sanchari Vijay) ಅವರ ಹುಟ್ಟುಹಬ್ಬ. ವಿಜಯ್ ಹುಟ್ಟು ಹಬ್ಬದ (Birthday) ನೆಪದಲ್ಲಿ ನಾಟಕ ಪ್ರದರ್ಶನ, ನೆನಪಿನ ಕಾರ್ಯಕ್ರಮಗಳು ಮತ್ತು ರಕ್ತದಾನ ಶಿಬಿರದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಅವರ ಆಪ್ತರು ಮಾಡುತ್ತಿದ್ದಾರೆ.

    ಬೆಂಗಳೂರಿನಲ್ಲಿ ಸಂಚಾರಿ ವಿಜಯ್ ಅವರಿಗೆ ಅನೇಕ ಗೆಳೆಯರಿದ್ದರೂ, ಅವರ ಆಪ್ತ ಬಳಗದಲ್ಲಿ ಇದ್ದವರು ಕೆಲವೇ ಕೆಲವರು. ಅವರಲ್ಲಿ ಅನಿಲ್ ಗೌಡ ಕೂಡ ಒಬ್ಬರು. ವಿಜಯ್ ಅವರ ಹುಟ್ಟು ಹಬ್ಬದಂದು ಅನಿಲ್ ಗೌಡ ಕಳೆದ ಎರಡು ವರ್ಷಗಳಿಂದ ರಕ್ತದಾನ ಶಿಬಿರ (Blood Donation Camp) ಹಮ್ಮಿಕೊಳ್ಳುತ್ತಲೇ ಇದ್ದಾರೆ. ಈ ಬಾರಿಯೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.

    ಸಂಚಾರಿ ವಿಜಯ್ ಅವರ ಗೆಳೆಯರ ಬಳಗ ಇಂದು ಬೆಂಗಳೂರಿನ (Bangalore) ನಾಗರಭಾವಿ ಬಿ.ಡಿಎ ಕಾಂಪ್ಲೆಕ್ಸ್ ಬಳಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ವಿಜಯ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಜಯ್‌ ಸ್ನೇಹಿತರು ವಿಶೇಷ ಕಾರ್ಯಕ್ಕೆ ಕೈ ಜೋಡಿಸಿದ್ದರು, ಅನೇಕರು ಅಲ್ಲಿಗೆ ಬಂದು ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ:ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ

    ವಿಜಯ್ ಹುಟ್ಟುಹಬ್ಬಕ್ಕಾಗಿ ಆಯೋಜನೆಗೊಂಡಿದ್ದ ರಕ್ತದಾನ ಶಿಬಿರದಲ್ಲಿ ಆಪ್ತರಾದ ಅನಿಲ್ ಗೌಡ, ಅರುಣ್, ವಿವೇಕ್, ಮನು, ಕಾರ್ತಿಕ್, ಸಾಗರ್, ಪೂರ್ಣಾ, ಗೌತಮ್ ಸೇರಿದಂತೆ ಅನೇಕರು ಹಾಜರಿದ್ದರು. ಗೆಳೆಯನ ನೆನಪಿನಲ್ಲಿ ಎಲ್ಲರೂ ರಕ್ತದಾನ ಮಾಡಿದರು. ಸಂಚಾರಿ ವಿಜಯ್ ಅವರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

    ವಿಜಯ್ ಬದುಕಿದ್ದಾಗ ಇಂತಹ ಹತ್ತಾರು ಕೆಲಸಗಳನ್ನು ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆಹಾರ ಕಿಟ್ ವಿತರಣೆ, ಅಸಕ್ತ ಕಲಾವಿದರಿಗೆ ಸಹಾಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಹಾಯ ಸಹಕಾರವನ್ನು ವಿಜಯ್ ಮಾಡುತ್ತಿದ್ದರು. ಹಾಗಾಗಿ ಅವರ ಹುಟ್ಟು ಹಬ್ಬದ ದಿನಕ್ಕೆ ಇಂತಹ ಕೆಲಸಕ್ಕೆ ಮುಂದಾಗಿದ್ದೇವೆ ಅಂತಾರೆ ವಿಜಯ್ ಸ್ನೇಹಿತ ಅನಿಲ್ ಗೌಡ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ 2ನೇ ವರ್ಷದ ಪುಣ್ಯಸ್ಮರಣೆ

    ನಾಳೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ 2ನೇ ವರ್ಷದ ಪುಣ್ಯಸ್ಮರಣೆ

    ಬಿ.ಎಸ್. ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದ  ‘ನಾನು ಅವನಲ್ಲ ಅವಳು’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ (Sanchari Vijay) ಅವರು ಅಗಲಿ ಎರಡು ವರ್ಷಗಳು. ಅವರ 2ನೇ ವರ್ಷದ ಪುಣ್ಯ ಸ್ಮರಣೆಯನ್ನು (Punyasmarane) ನಾಳೆ ವಿಜಯ್ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ (Panchanahalli) ಆಯೋಜನೆ ಮಾಡಲಾಗಿದೆ.

    ಸಂಚಾರಿ ವಿಜಯ್ ನಿಧನರಾದಾಗ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿಯ ನಡೆಯನ್ನು ಹಾಕಿಕೊಟ್ಟು ಹೋದರು. ವಿಜಯ್ ಅವರ ಸಮಾಜಮುಖಿ ಕೆಲಸಗಳನ್ನು ಅವರ ಗೆಳೆಯರ ಬಳಗ ಮುಂದುವರೆಸಿಕೊಂಡು ಹೋಗುತ್ತಿದೆ. ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ:ಸೀತೆ ಭಾರತದ ಮಗಳಲ್ಲ: ‘ಆದಿಪುರುಷ’ ಸಿನಿಮಾ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ಗರಂ

    ಸಂಚಾರಿ ವಿಜಯ್ ಅವರ ಕುಟುಂಬ, ಸಂಚಾರಿ ವಿಜಯ್ ಗೆಳೆಯರ ಬಳಗ, ಸಂಚಾರಿ ವಿಜಯ್ ಕಲಾ ಸಂಘ, ಸಂಚಾರಿ ವಿಜಯ್ ಸ್ಪೋರ್ಟ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್, ತಾಲೂಕ ಘಟಕ ಕಡೂರು ಇವರ ಸಂಯುಕ್ತ ಆಶ್ರಯದಡಿ ರಕ್ತದಾನ ಶಿಬಿರವನ್ನು (blood donation camp) ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಕಡೂರು ತಾಲೂಕು, ಪಂಚನಹಳ್ಳಿಯಲ್ಲಿರುವ ವಿಜಯ್ ಅವರ ಸಮಾಧಿ ವಿಜಯನಿಧಿ ಬಳಿ ಕಾರ್ಯಕ್ರಮ ಆಯೋಜನೆಯಾಗಿದೆ.

    ರಕ್ತದಾನ ಶಿಬಿರವನ್ನು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರೆ, ಪಂಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಗಂಗನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ನಿರ್ದೇಶಕ ಬಿ.ಎಸ್.ಲಿಂಗದೇವರು, ಮಾಜಿ ಶಾಸಕರಾದ ಜಿ.ಹೆಚ್. ಶ್ರೀನಿವಾಸ್, ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡ, ಮಾಜಿ ಶಾಸಕರಾದ ವೈ ಎಸ್ ವಿ ದತ್ತ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

    ಸಂಚಾರಿ ತಂಡದ ಎನ್. ಮಂಗಳಾ, ನಟ ರಂಗಾಯಣ ರಘು, ನಿರ್ದೇಶಕರಾದ ಮಂಸೋರೆ, ಪ್ರವೀಣ್ ಕೃಪಾಕರ್, ಅರವಿಂದ್ ಕುಪ್ಳಿಕರ್, ನಟ ಕೃಷ್ಣ ಹೆಬ್ಬಾಳೆ, ನಟಿಯರಾದ ಸೋನು ಗೌಡ, ಸುರಭಿ ಲಕ್ಷ್ಮೀ ಸೇರಿದಂತೆ ವಿಜಯ್ ಅವರ ಕುಟುಂಬ ಅಂದು ಉಪಸ್ಥಿತಿ ಇರಲಿದೆ.

  • ಪುಲ್ವಾಮಾ ವೀರ ಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ

    ಪುಲ್ವಾಮಾ ವೀರ ಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ

    ಮಂಡ್ಯ: ಪುಲ್ವಾಮಾ ದಾಳಿ ಘಟನೆ ನಡೆದು ಇಂದಿಗೆ 3 ವರ್ಷಗಳು ಕಳೆದಿವೆ. ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥದ ಹಿನ್ನೆಲೆ ಮಂಡ್ಯದಲ್ಲಿ ರಕ್ತದಾನ ಶಿಬಿರ ನಡೆಸಲಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಖಾಸಗಿ ಸಮುದಾಯ ಭವನದಲ್ಲಿ ಸೋಮವಾರ ಬೃಹತ್ ರಕ್ತದಾನ ಶಿಬಿರ ನೆರವೇರಿದೆ. ಪ್ರಗತಿಪರ ಸಂಘಟನೆ ಈ ಶಿಬಿರವನ್ನು ಆಯೋಜಿಸಿತ್ತು. ಇದನ್ನೂ ಓದಿ: ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ

    ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಯೋಧ ಗುರು ಸಮಾಧಿಗೆ ಪೂಜೆ ಸಲ್ಲಿಸಿ, ಅವರ ಪತ್ನಿ ಕಲಾವತಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

  • ಪತ್ರಕರ್ತರ ಗ್ರಾಮ ವಾಸ್ತವ್ಯ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಉದ್ಘಾಟನೆ

    ಪತ್ರಕರ್ತರ ಗ್ರಾಮ ವಾಸ್ತವ್ಯ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಉದ್ಘಾಟನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಗ್ರಾಮ ವಾಸ್ತವ್ಯ ಮತ್ತು ರಕ್ತದಾನ ಶಿಬಿರ ಉದ್ಘಾಟನೆ ನಡೆಯಿತು.

    ಇಂದು ನಡೆಯುತ್ತಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆಗೊಂಡಿತು. ದಕಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಉದ್ಘಾಟಿಸಿದರು. ಇದೇ ಸಂದರ್ಭ ವಿವಿಧ ಇಲಾಖೆಗಳ ಸ್ಟಾಲ್ ಗಳನ್ನು ಉದ್ಘಾಟಿಸಲಾಯಿತು.

    ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಹಾಗೂ ಇತರ ಅತಿಥಿಗಳನ್ನು ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

  • ನವಜಾತ ಶಿಶುಗೆ ರಕ್ತ ಸಿಗದಿದ್ದಕ್ಕೆ ಮಸೀದಿಯಲ್ಲೇ ಶುರುವಾಯ್ತು ರಕ್ತದಾನ ಶಿಬಿರ

    ನವಜಾತ ಶಿಶುಗೆ ರಕ್ತ ಸಿಗದಿದ್ದಕ್ಕೆ ಮಸೀದಿಯಲ್ಲೇ ಶುರುವಾಯ್ತು ರಕ್ತದಾನ ಶಿಬಿರ

    ಧಾರವಾಡ: ನವಜಾತ ಶಿಶುವಿಗೆ ರಕ್ತ ಸಿಗದಿದ್ದಕ್ಕೆ ನಗರದ ಯುವಕರ ಸಂಘವೊಂದು ಮಸೀದಿಯಲ್ಲೇ ರಕ್ತದಾನ ಶಿಬಿರ ಆರಂಭಿಸಿ ಮಾನವೀಯತೆ ಮೆರೆದಿದೆ.

    ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಭಯದಿಂದ ರಕ್ತದಾನ ಮಾಡುವುದಕ್ಕೆ ಜನರೇ ಬರುತ್ತಿಲ್ಲ. ಇತ್ತ ರಕ್ತದಾನ ಶಿಬಿರಗಳೇ ನಡೆಯದ ಕಾರಣ ರಕ್ತ ಭಂಡಾರಕ್ಕೆ ತುರ್ತು ರಕ್ತದ ಅವಶ್ಯಕತೆ ಎದುರಾಗಿತ್ತು. ಇದನ್ನು ಮನಗಂಡ ನಗರದ ಜಕಣೀಬಾವಿ ಬಳಿಯ ಮಹಮ್ಮದ್ ಮಸೀದಿಯ ಜಮಾತ್ ಅಹಲೆ ಹದೀಸ್ ಟ್ರಸ್ಟ್ ಕೈ ಜೋಡಿಸಿ ರಕ್ತದಾನ ಶಿಬಿರ ನಡೆಸಿದೆ.

    ಮಸೀದಿಯ ಆವರಣದಲ್ಲಿಯೇ ರಕ್ತದಾನ ಶಿಬಿರ ನಡೆಸಲಾಗಿದ್ದು, 90 ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿರುವ ಮಗುವೊಂದು ಕೇವಲ 900 ಗ್ರಾಂ ಮಾತ್ರ ತೂಕ ಹೊಂದಿತ್ತು. ಆ ಮಗುವಿಗೆ ತುರ್ತು ರಕ್ತದ ಅಗತ್ಯವೂ ಎದುರಾಗಿತ್ತು. ಮಸೀದಿಯಲ್ಲಿ ನಡೆದ ರಕ್ತದಾನ ಶಿಬಿರದಿಂದ ಮಗುವಿನ ಜೀವ ಉಳಿಸುವುದಕ್ಕೂ ಸಹಾಯವಾಗಿದೆ ಎಂದು ಜಿಲ್ಲಾ ರಕ್ತ ಭಂಡಾರದ ಮುಖ್ಯಸ್ಥರು ಹೇಳಿದ್ದಾರೆ. ಅಲ್ಲದೇ ಹಲವು ರೋಗಿಗಳಿಗೆ ಈ ರಕ್ತದಾನದಿಂದ ಸಹಾಯವಾಗಲಿದೆ ಎಂದು ವೈದ್ಯ ಡಾ.ಅಚ್ಯುತ್ ಹೇಳಿದರು.

  • ಸಂವಿಧಾನದ ಮೇಲೆ ಪ್ರಮಾಣ, ರಕ್ತದಾನ ಶಿಬಿರ ಏರ್ಪಡಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

    ಸಂವಿಧಾನದ ಮೇಲೆ ಪ್ರಮಾಣ, ರಕ್ತದಾನ ಶಿಬಿರ ಏರ್ಪಡಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

    ಭುವನೇಶ್ವರ: ಧಾರ್ಮಿಕ ಸಾಂಪ್ರದಾಯದ ಪ್ರಕಾರ ಮದುವೆಯಾಗದೇ ಜೋಡಿಯೊಂದು ವಿಭಿನ್ನ ರೀತಿಯಲ್ಲಿ ವಿವಾಹವಾಗಿ ಸುದ್ದಿಯಾಗಿದೆ.

    ಓಡಿಶಾದ ಗಂಜಾಂ ಜಿಲ್ಲೆಯ ನವ ಜೋಡಿ ಧಾರ್ಮಿಕ ಸಾಂಪ್ರದಾಯವನ್ನು ಬದಿಗೊತ್ತಿ ಭಾರತೀಯ ಸಂವಿಧಾನದ ಮೇಲೆ ಪ್ರಮಾಣ ಮಾಡಿ ನವ ದಾಂಪತ್ಯಕ್ಕೆ ಕಾಲಿರಿಸಿದೆ. ಮಾತ್ರವಲ್ಲದೆ ವಿಜ್ರಂಭಣೆಗೆ ಮಾರು ಹೋಗದೆ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ವಿವಾಹವಾಗಿದ್ದಾರೆ.

    ಔಷಧೀಯ ಸಂಸ್ಥೆಯ ಉದ್ಯೋಗಿಯಾಗಿರುವ 31 ವರ್ಷದ ಬಿಪ್ಲಾಬ್ ಕುಮಾರ್ ಹಾಗೂ ಸಹಾಯಕ ನರ್ಸ್ ಆಗಿರುವ 23 ವರ್ಷದ ಅನಿತಾ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತರರಂತೆ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

    ನಿವೃತ್ತ ಸರ್ಕಾರಿ ನೌಕರ ಬಿಡಿಯುತ್ ಪ್ರಭಾ ರಾತ್ ಅವರು ನವ ದಂಪತಿಗೆ ಪ್ರಮಾಣವಚನವನ್ನು ಬೋಧಿಸಿದ್ದಾರೆ. ನಮ್ಮ ವಿವಾಹವು ಜಾತಿಗಳನ್ನು ಹೊಂದಿಸದೆ, ಮಂತ್ರಗಳನ್ನು ಪಠಿಸದೆ ವಿಭಿನ್ನವಾಗಿ ನಡೆದಿದೆ ಎಂದು ದಂಪತಿ ತಿಳಿಸಿದ್ದಾರೆ.

    ಸಮಾಜಕ್ಕೆ ಮಾದರಿಯಾಗುವಂತೆ ಮಗನ ವಿವಾಹ ಮಾಡಬೇಕೆಂದು ನಿರ್ಧರಿಸಿದ್ದೆ. ನಾನು ಪುರೋಹಿತರು ಮಂತ್ರಗಳನ್ನು ಹೇಳುವ ಸಾಂಪ್ರದಾಯಿಕ ವಿವಾಹಗಳನ್ನು ನಂಬುವುದಿಲ್ಲ ಎಂದು ಮದುಮಗನ ತಂದೆ, ನಿವೃತ್ತ ಸರ್ಕಾರಿ ನೌಕರರಾದ ಮೋಹನ್ ರಾವ್ ವಿವರಿಸಿದ್ದಾರೆ.

    ಮದುಮಗಳು ಅನಿತಾ ಸಹ ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ವಿಭಿನ್ನ ರೀತಿಯಲ್ಲಿ ಹಾಗೂ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಮದುವೆಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ರಕ್ತದಾನ ಶಿಬಿರದ ಕುರಿತು ಮಾತನಾಡಿದ ಮದುಮಗ ಬಿಪ್ಲಾಬ್, ನಮ್ಮ ವಿವಾಹವನ್ನು ಸ್ಮರಣೀಯವಾಗಿಸಲು ರಕ್ತದಾನ ಶಿಬಿರವನ್ನು ಆಯೋಜಿಸಿದ್ದೆವು ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ 36 ಯುನಿಟ್(1 ಯುನಿಟ್ 525 ಎಂ.ಎಲ್.) ರಕ್ತವನ್ನು ಸಂಗ್ರಹಿಸಲಾಗಿದೆ. ಹ್ಯೂಮನಿಸ್ಟ್ ಮತ್ತು ವೈಚಾರಿಕವಾದಿ ಸಂಸ್ಥೆ(ಎಚ್‍ಆರ್‍ಒ) ಹಾಗೂ ಸ್ವಯಂ ಸೇವಕ ರಕ್ತದಾನಿಗಳ ಸಂಘ(ಎವಿಬಿಡಿ) ದಂಪತಿಯ ಪ್ರಯತ್ನವನ್ನು ಶ್ಲಾಘಿಸಿವೆ.