Tag: blood donation

  • ರಕ್ತದಾನ ಮಾಡಿ ಇನ್ನೊಬ್ಬರಿಗೆ ಬೆಳಕಾಗಿ: ಜಯರಾಮ್ ರಾಯಪುರ್

    ರಕ್ತದಾನ ಮಾಡಿ ಇನ್ನೊಬ್ಬರಿಗೆ ಬೆಳಕಾಗಿ: ಜಯರಾಮ್ ರಾಯಪುರ್

    ಬೆಂಗಳೂರು: ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್‌ ಬೆಂಗಳೂರು ಮತ್ತು ಭಾರತ್‌ ವಿದ್ಯಾ ಸಂಸ್ಥೆ, ಜಯನಗರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿ ದಿನಾಚರಣೆಯನ್ನು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯಪುರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ರಕ್ತದಾನಿಗಳ ಸಂಖ್ಯೆ ಬಹಳ ವಿರಳವಾಗುತ್ತಿದೆ, ಇಂತಹ ನಿಟ್ಟಿನಲ್ಲಿ ಇಂದಿನ ಯುವ ಜನಾಂಗಕ್ಕೆ ಇದರ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದರು.

    ದೇಶದ ಯುವಕ/ ಯುವತಿಯರು ರಕ್ತದಾನಿಗಳಾಗಿ ಮುಂದೆ ಬಂದರೆ ಇನ್ನೊಂದು ಜೀವಕ್ಕೆ ಜೀವದಾನ ಮಾಡಿ, ಅವರ ಬದುಕಿಗೆ ಬೆಳಕಾಗಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖ ವಾಗಬೇಕಾಗಿದೆ. ಜೊತೆಗೆ ಎಲ್ಲ ದಾನಗಳಿಗಿಂತಲು ರಕ್ತದಾನ ಬಹಳ ಪ್ರಮುಖವಾದದ್ದು ಎಂದು ಹೇಳಿದರು.

    ಮನುಷ್ಯ ಹುಟ್ಟಿದಾಗಿನಿಂದಲು ಸಾಯುವವರೆಗು ತಮ್ಮ ಜೀವನದ ಸಾರ್ಥಕತೆ ಪಡೆಯಬೇಕಾದರೆ ಅವನ ಜೀವಿತಾವಧಿಯಲ್ಲಿ ಇನ್ನೊಬ್ಬರ ಬಾಳಿಗೆ ದಾರಿದೀಪವಾಗುವುದಕ್ಕೆ ನಾವುಗಳು ಅಂಗದಾನ, ದೇಹದಾನ ಮತ್ತು ರಕ್ತದಾನ ಮಾಡುವ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದರು. ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಕೂಡ ವಿಶ್ವ ರಕ್ತದಾನಿ ದಿನಾಚರಣೆ ಪ್ರಯುಕ್ತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

    ಈ ಕಾರ್ಯಕ್ರಮಕ್ಕೆ ಕಳಶಪ್ರಾಯರಾಗಿ ತಮ್ಮ ಜೀವನವನ್ನು ಸಮಾಜಮುಖಿಯಾಗಿ ಸಾಧನೆ ಮಾಡಿದ ಸಾಧಕರಿಗೆ ಕಾರ್ಲ್‌ ಲ್ಯಾಂಡ್‌ ಸ್ಟೇನರ್‌ ಹೆಸರಿನಲ್ಲಿ ನಮ್ಮ ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್‌ ವತಿಯಿಂದ ಪ್ರಶಸ್ತಿ (ಕಾರ್ಲ್ ಲ್ಯಾಂಡ್ಸ್ಟೇನರ್ ಹೆಸರಿನಲ್ಲಿ) ಡಾ ಶಿವರಾಂ.ಸಿ – ಕನ್ಸಲ್ಟೆಂಟ್ ಬ್ಲಡ್ ಟ್ರಾನ್ಸ್ ಫ್ಯೂಜನ್ ಮೆಡಿಸನ್, WBC ಪ್ರಶಸ್ತಿ (ಮಹತ್ಮಾ ಗಾಂಧೀಜಿ ಹೆಸರಿನಲ್ಲಿ) ಡಾ ಬಸವರಾಜು ಹೆಚ್ ತಳವಾರ್ – ಬ್ಲಡ್ ಬ್ಯಾಂಕ್ ಮೆಡಿಕಲ್ ಆಫಿಸರ್ – ಹಾವೇರಿ , ರಕ್ತದಾನ ಸೇವಾ ಪ್ರಶಸ್ತಿ( ಡಾ. ರಾಜ್ ಕುಮಾರ್ ನೆನಪಿನಲ್ಲಿ) ಡಾ ಉಮಾ ದೇವಿ ಕೆ – ಬ್ಲಡ್ ಬ್ಯಾಂಕ್ ಮೆಡಿಕಲ್ ಆಫಿಸರ್ ಜಯದೇವ ಆಸ್ಪತ್ರೆ, ರಕ್ತದಾನ ಸೇವಾ ಪ್ರಶಸ್ತಿ( ಡಾ ಚಂದ್ರಮ್ಮ ಸಾಗರ್ ನೆನಪಿನಲ್ಲಿ) ಡಾ ಪೂರ್ಣಿಮಾ ಜೋಗಿ, ಅಸೋಸಿಯೇಟ್ ಪ್ರೋಫೆಸರ್ – ಸೆಂಟ್ ಫ್ರಾಂನ್ಸಿಸ್ ಕಾಲೇಜು, ವರ್ಷದ ರಕ್ತದಾನಿ ಪ್ರಶಸ್ತಿ ಶ್ರೀನಿವಾಸ್ ಮೂರ್ತಿ ವಿ , ವಿವೇಕ್. ಜಿ , ವಿದ್ಯಾರ್ಥಿ ರಕ್ತದಾನಿ ಪ್ರಶಸ್ತಿ ನವೀನ್ ಕುಮಾರ್ ವಿ. ಇಂತಹ ಮಹಾ ಸಾದಕರನ್ನು ನಮ್ಮ ಕರ್ನಾಟಕ ವಿಧ್ಯಾರ್ಥಿ ಕೂಟ ಟ್ರಸ್ಟ್‌ ವತಿಯಿಂದ ಗೌರವಿಸಲಾಯಿತು.

    ಇದೇ ಸಂದರ್ಭದಲ್ಲಿ ಕೆ.ಆರ್. ನಿರ್ಮಲ್ ಕುಮಾರ್, ಬಿ.ಸಿ ಶಿವಲಿಂಗೇಗೌಡ, ಡಾ. ಬೈರಮಂಗಲ ರಾಮೇಗೌಡ, ದಿವ್ಯ ಕೆ ಮೂರ್ತಿ, ಹರ್ಷ ಎಲ್‌, ಪ್ರೊಫ್ ಎನ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

  • ಒಡಿಶಾ ರೈಲು ದುರಂತ- ಗಾಯಾಳುಗಳಿಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಯುವಜನತೆ

    ಒಡಿಶಾ ರೈಲು ದುರಂತ- ಗಾಯಾಳುಗಳಿಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಯುವಜನತೆ

    ಭುವನೇಶ್ವರ: ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ಭೀಕರ ರೈಲು ಅಪಘಾತ (Train Accident) ನಡೆದಿದ್ದು, ಅಪಘಾತದ ನಂತರ ಗಾಯಾಳುಗಳಿಗೆ ರಕ್ತದಾನ (Blood Donation) ಮಾಡುವ ಸಲುವಾಗಿ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡು ಬಾಲಸೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಜನರು ಸ್ವಯಂಪ್ರೇರಿತರಾಗಿ ಗಾಯಾಳುಗಳಿಗೆ ರಕ್ತದಾನ ಮಾಡಲು ಕ್ಯೂನಲ್ಲಿ ನಿಂತಿದ್ದಾರೆ. ಅಪಘಾತದ ಸುದ್ದಿ ಹೊರಬೀಳುತ್ತಿದ್ದಂತೆ ರಾತ್ರಿಯಿಂದಲೇ ಸ್ಥಳೀಯ ನಿವಾಸಿಗಳು, ಅದರಲ್ಲೂ ಯುವಕರು ರಕ್ತದಾನ ಮಾಡಲು ಆಸ್ಪತ್ರೆಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಸುಮಾರು 25 ಸ್ವಯಂಸೇವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಬಂದಿದ್ದೇವೆ. ನಮ್ಮ ರಕ್ತ ಒಬ್ಬರ ಜೀವ ಉಳಿಸಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಸರತಿ ಸಾಲಿನಲ್ಲಿ ನಿಂತಿದ್ದ ಸ್ವಯಂ ಸೇವಕರೊಬ್ಬರು ಹೇಳಿದ್ದಾರೆ. ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ (Pradeep Kumar Jena) ಕೂಡ ಇಂತಹ ದುರಂತದ ಸಮಯದಲ್ಲಿ ರಕ್ತದಾನ ಮಾಡಿದ ಸ್ವಯಂಸೇವಕರಿಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಬಾಲಾಸೋರ್‌ನಲ್ಲಿ ರಾತ್ರಿಯಿಡೀ 500 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ 900 ಯೂನಿಟ್  ದಾಸ್ತಾನು ಇದೆ. ಇದು ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ರಕ್ತದಾನ ಮಾಡಿದ ಎಲ್ಲಾ ಸ್ವಯಂಸೇವಕರಿಗೆ ನಾನು ವೈಯಕ್ತಿಕವಾಗಿ ಋಣಿಯಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ ಎಂದು ಜೆನಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ

  • ಆಪರೇಷನ್‍ಗೂ ಮುನ್ನ ರೋಗಿಗೆ ವೈದ್ಯನಿಂದಲೇ ರಕ್ತದಾನ – ಡಾಕ್ಟರ್ ಕಾರ್ಯಕ್ಕೆ ನೆಟ್ಟಿಗರಿಂದ ಸಲಾಂ

    ಆಪರೇಷನ್‍ಗೂ ಮುನ್ನ ರೋಗಿಗೆ ವೈದ್ಯನಿಂದಲೇ ರಕ್ತದಾನ – ಡಾಕ್ಟರ್ ಕಾರ್ಯಕ್ಕೆ ನೆಟ್ಟಿಗರಿಂದ ಸಲಾಂ

    ಡೆಹ್ರಾಡೂನ್: ಶಸ್ತ್ರ ಚಿಕಿತ್ಸೆಗೂ ಮುನ್ನ ರಕ್ತದ ಅನಿವಾರ್ಯವಿದ್ದ ರೋಗಿಗೆ ಡೆಹ್ರಾಡೂನ್‍ನ (Dehradun) ಡೂನ್ ಪಿಜಿ ವೈದ್ಯಕೀಯ ಕಾಲೇಜಿನ (Doon PG Medical College) ಮೂಳೆ ಶಸ್ತ್ರಚಿಕಿತ್ಸಕ (Orthopedic surgeon) ವೈದ್ಯರೊಬ್ಬರು ತಮ್ಮ ರಕ್ತವನ್ನೇ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಗುಂಡಿಯೊಂದಕ್ಕೆ ಬಿದ್ದು, ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಡೆಹ್ರಾಡೂನ್‍ನ ಡೂನ್ ಪಿಜಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಎದೆ, ಎಡಗೈ ಮತ್ತು ತೊಡೆಯ ಮೂಳೆ ಮುರಿದುಕೊಂಡು ರೋಗಿ ನೋವಿನಿಮದ ನರಳುತ್ತಿದ್ದರು. ಹೀಗಾಗಿ ವ್ಯಕ್ತಿಯನ್ನು ಮೂರು ದಿನಗಳ ಕಾಲ ಐಸಿಯುನಲ್ಲಿ ಇರಿಸಿದ ವೈದ್ಯರು ನಂತರ ಅವರಿಗೆ ತೊಡೆಯ ಮೂಳೆ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆದರೆ ರೋಗಿಗೆ ರಕ್ತದ ಕೊರತೆ ಇದ್ದಿದ್ದರಿಂದ ಆಪರೇಷನ್ ಮಾಡಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಬೇರೆಯವಳು ಕಾಲ್ ಪಿಕ್ ಮಾಡಿದ್ದಕ್ಕೆ ಬಾಯ್‍ಫ್ರೆಂಡ್ ಮನೆಗೆ ಬೆಂಕಿ ಇಟ್ಲು

    ನಂತರ ರಕ್ತ ನೀಡಲು ರೋಗಿಯ ಮಗಳು ಮುಂದಾದರು. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿದ್ದಿದ್ದರಿಂದ ಆಕೆಯಿಂದ ರಕ್ತವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಗ ಅದೇ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಶಶಾಂಕ್ ಸಿಂಗ್ ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಲು ನಿರ್ಧರಿಸಿದರು. ಇದರ ಬೆನ್ನಲ್ಲೇ ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ. ಇದನ್ನೂ ಓದಿ: ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ

    Live Tv
    [brid partner=56869869 player=32851 video=960834 autoplay=true]

  • ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಟ್ಯಾಟೂ (Tattoo) ಎನ್ನುವುದು ಸಖತ್ ಟ್ರೆಂಡ್ ಆಗಿಬಿಟ್ಟಿದೆ. ಯಾರೇ ನೋಡಿದರೂ ವೆರೈಟಿ ಹಚ್ಚೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಆದರೆ ಈ ಹಚ್ಚೆ ಹಾಕಿಸಿಕೊಳ್ಳುವಾಗ ಬಹಳಾನೇ ಜಾಗರೂಕರಾಗಿರಬೇಕು, ಹಾಗೇ ಹಚ್ಚೆ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ (Blood Donation) ಮಾಡಬಾರದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಹೌದು, ಹಚ್ಚೆ ಹಾಕಿಕೊಳ್ಳುವವರು 6 ತಿಂಗಳು ರಕ್ತದಾನ ಮಾಡಬಾರದಂತೆ, ಯಾಕೆಂದರೆ, ಟ್ಯಾಟೂ ಎನ್ನುವುದು ಬಹುತೇಕ ಎಲ್ಲಾ ವಯಸ್ಸಿನ ಜನರನ್ನೂ ಸೆಳೆದು ಬಿಡುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ದೇಹದ ವಿವಿಧ ಭಾಗಗಳಲ್ಲಿ ವಿವಿಧ ವಿನ್ಯಾಸಗಳೊಂದಿಗೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಇತರರ ಜೀವಕ್ಕೂ ಕುತ್ತು ಬರಬಹುದು. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಯಶಸ್ವಿ: ರಾಜ್ಯದಲ್ಲಿ 10.5 ಲಕ್ಷ ಕೋಟಿ ಹೂಡಿಕೆ

    ಹಚ್ಚೆ ಹಾಕಿಸಿಕೊಳ್ಳುವ ಸೂಜಿ ಬಳಸುವಾಗ ತುಂಬಾನೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಹೆಚ್.ಐ.ವಿ, ಹೆಪಟೈಟಿಸ್ ಹಾಗೂ ಅನುವಂಶೀಯ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರತ್ತದೆ. ಹಾಗಾಗೀ ಹಚ್ಚೆ ಹಾಕಿಸಿಕೊಂಡ 6 ತಿಂಗಳಿನಿಂದ ಒಂದು ವರ್ಷದವರೆಗೆ ರಕ್ತದಾನ ಮಾಡದಿರುವುದು ಉತ್ತಮ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    Live Tv
    [brid partner=56869869 player=32851 video=960834 autoplay=true]

  • ಮೋದಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ – 2,500 ಯೂನಿಟ್ ರಕ್ತ ಸಂಗ್ರಹ

    ಮೋದಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ – 2,500 ಯೂನಿಟ್ ರಕ್ತ ಸಂಗ್ರಹ

    ಕೋಲಾರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹುಟ್ಟುಹಬ್ಬದ (Birthday) ಹಿನ್ನೆಲೆಯಲ್ಲಿಂದು ಮಾಲೂರು ಬಿಜೆಪಿ (BJP) ಮುಖಂಡ ಹೂಡಿ ವಿಜಯ್ ಕುಮಾರ್ ಹಾಗೂ ರಾಷ್ಟ್ರೋತ್ಥಾನ ಸಮಿತಿಯ ವತಿಯಿಂದ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 2,500 ಯೂನಿಟ್‌ಗಳಷ್ಟು ರಕ್ತ ಸಂಗ್ರಹ ಮಾಡಲಾಗಿದೆ.

    ಸಚಿವರಾದ ಅಶ್ವಥ್ ನಾರಾಯಣ(Ashwath Narayan), ಮುನಿರತ್ನ (Munirathna) ಹಾಗೂ ಸಂಸದ ಮುನಿಸ್ವಾಮಿ, ಮಾಜಿ ಸಚಿವ ಹೆಚ್.ನಾಗೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ರಕ್ತದಾನ ಮಾಡಿದರು. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ಇದೇ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ ಅವರು, ಸುಮಾರು 2,500 ಸಾವಿರ ಯುನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಇಡೀ ಭಾರತದಲ್ಲೇ ಅತಿಹೆಚ್ಚು ರಕ್ತದಾನ ಮಾಡಿದ ಶಿಬಿರ ಎನ್ನುವ ಖ್ಯಾತಿ ಮಾಲೂರು ರಕ್ತದಾನ ಶಿಬಿರ ಪಡೆದಿದೆ. ರಕ್ತದಾನ ಮಾಡಲು ಹೆದರಿ ಹಿಂದೆ ಸರಿಯುವವರನ್ನು ನೋಡಿದ್ದೇವೆ. ಆದರೆ ಇಲ್ಲಿ ರಕ್ತದಾನ ಮಾಡಲು ಜನ ಮುಗಿ ಬೀಳುತ್ತಿದ್ದಾರೆ. ಎಲ್ಲೂ ಇಂತಹ ಕಾರ್ಯಕ್ರಮ ನೋಡಿಯೇ ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಸರಿಗಮಪ’ ಹನುಮಂತುಗೆ ಪ್ರಪೋಸ್ ಮಾಡಿದ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು

    ಕಳೆದ ವರ್ಷ ಮೋದಿ ಹುಟ್ಟುಹಬ್ಬದಲ್ಲಿ ಸುಮಾರು 1,500 ಯುನಿಟ್‌ಗಳ ರಕ್ತ (Blood) ಸಂಗ್ರಹ ಮಾಡಲಾಗಿತ್ತು. ಈಬಾರಿ 2,500 ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ದಾಖಲೆ ಬರೆದಿದೆ.

    Live Tv
    [brid partner=56869869 player=32851 video=960834 autoplay=true]

  • ಫಾಝಿಲ್ ಸ್ಮರಣಾರ್ಥ ರಕ್ತದಾನ ಶಿಬಿರ – ಜಿಲ್ಲೆಯ 4 ಕಡೆ ಬ್ಲಡ್ ಡೊನೇಟ್

    ಫಾಝಿಲ್ ಸ್ಮರಣಾರ್ಥ ರಕ್ತದಾನ ಶಿಬಿರ – ಜಿಲ್ಲೆಯ 4 ಕಡೆ ಬ್ಲಡ್ ಡೊನೇಟ್

    ಮಂಗಳೂರು: ಸುರತ್ಕಲ್‍ನಲ್ಲಿ ಹತ್ಯೆಯಾದ ರಕ್ತದಾನಿ ಫಾಝಿಲ್ ಸ್ಮರಣಾರ್ಥ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.

    ಹಲವಾರು ಜೀವಕ್ಕೆ ರಕ್ತವನ್ನು ಪೂರೈಸುವಂತಹ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ಸದಸ್ಯರಾದ ಮರ್ಹೂಂ ಫಾಝಿಲ್ ಮಂಗಳಪೇಟೆರವರ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲೆಯ ಉಳಾಯಿಬೆಟ್ಟು, ಅಮ್ಮುಂಜೆ, ಉಳ್ಳಾಲ ಮತ್ತು ಪುತ್ತೂರಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು. ಇದನ್ನೂ ಓದಿ: ಯುಪಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ – ಬಿಜೆಪಿ ನಾಯಕನ ಅಕ್ರಮ ಕಟ್ಟಡ ನೆಲಸಮ

    ಕರಾವಳಿಯ ಕೋಮು ವೈಷಮ್ಯಕ್ಕೆ ಬಲಿಯಾಗಿದ್ದ ಅಮಾಯಕ ಫಾಝಿಲ್ ಅವರು ಬದುಕಿದ್ದಾಗ 14 ಬಾರಿ ರಕ್ತದಾನ ಮಾಡಿದ್ದರು. ಮಂಗಳಪೇಟೆಯ 23 ವರ್ಷ ವಯಸ್ಸಿನ ಫಾಝಿಲ್, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ಸದಸ್ಯರಾಗಿದ್ದರು. ಇದೀಗ ಬ್ಲಡ್ ಹೆಲ್ಪ್‌ಲೈನ್ ಸಂಸ್ಥೆಯ 6ನೇ ವಾರ್ಷಿಕೋತ್ಸವದಲ್ಲಿ ಶಹೀದ್ ಫಾಝಿಲ್ ಸ್ಮರಣಾರ್ಥ ಫಾಝಿಲ್‍ಗಾಗಿ ನೂರಾರು ಮಂದಿಯಿಂದ ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ: 500ಮೀ. ದೂರದವರೆಗೆ ಕಾರನ್ನು ಎಳೆದೊಯ್ದ ಟ್ರಕ್- ಸಮಾಜವಾದಿ ಮುಖಂಡನಿದ್ದ ಕಾರು ಜಖಂ

    Live Tv
    [brid partner=56869869 player=32851 video=960834 autoplay=true]

  • ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ಛತ್ತೀಸಗಢ: ಸರ್ಕಾರಗಳು ಹಾಗೂ ಪೊಲೀಸ್‌ ಇಲಾಖೆ ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ಇದ್ದೇ ಇರುತ್ತಾರೆ. ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ಮಾಡುವವರೇ ಹೆಚ್ಚು. ಇದಕ್ಕೆ ಬ್ರೇಕ್‌ ಹಾಕಲು ಪಂಜಾಬ್‌ ಪೊಲೀಸ್‌ ಇಲಾಖೆ ಮುಂದಾಗಿದೆ.

    ಅತಿ ವೇಗವಾಗಿ ವಾಹನ ಚಲಾಯಿಸುವುದು, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಕಡ್ಡಾಯ ರಕ್ತದಾನ ಮಾಡುವ ಶಿಕ್ಷೆಯನ್ನು ವಿಧಿಸುವ ನಿಯಮ ರೂಪಿಸಲು ಮುಂದಾಗಿದೆ. ದಂಡ ಹಾಕುವುದು, ತಾತ್ಕಾಲಿಕವಾಗಿ ಲೈಸೆನ್ಸ್‌ ರದ್ದು ಮಾಡುವ ಶಿಕ್ಷೆಯ ಜೊತೆಗೆ ರಕ್ತದಾನ ಮಾಡುವ ಶಿಕ್ಷೆ ವಿಧಿಸುವ ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ಅತಿ ವೇಗವಾಗಿ ವಾಹನ ಚಲಾಯಿಸಿದರೆ 1,000 ರೂ. ದಂಡ ಮತ್ತು ಮೂರು ತಿಂಗಳವರೆಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು. ಕುಡಿದು ವಾಹನ ಚಲಾಯಿಸಿದರೆ ಅದೇ ಅವಧಿಗೆ ಪರವಾನಗಿ ಅಮಾನತುಗೊಳಿಸುವುದರ ಜೊತೆಗೆ 5,000 ರೂ. ದಂಡ ವಿಧಿಸಲಾಗುತ್ತದೆ.

    ಮತ್ತೆ ಅದೇ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡರೆ ಅತಿ ವೇಗದ ಚಾಲನೆಗೆ 2,000 ರೂ. ಮತ್ತು ಮೂರು ತಿಂಗಳ ಅವಧಿಗೆ ಪರವಾನಗಿ ಅಮಾನತು. ಕುಡಿದು ವಾಹನ ಚಲಾಯಿಸಿದರೆ 10,000 ರೂ. ದಂಡ ಹಾಗೂ 3 ತಿಂಗಳ ಅವಧಿಗೆ ಲೈಸೆನ್ಸ್‌ ರದ್ದು ಮಾಡಲಾಗುವುದು.

    ನಿಯಮ ಉಲ್ಲಂಘಿಸುವವರು ಸಾರಿಗೆ ಪ್ರಾಧಿಕಾರದಿಂದ ಸಂಚಾರಿ ನಿಯಮ ಕುರಿತು ತಿಳಿದುಕೊಳ್ಳಬೇಕು. ನಂತರ ಹತ್ತಿರದ ಶಾಲೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ 9 ರಿಂದ 12 ನೇ ತರಗತಿಯ ಕನಿಷ್ಠ 20 ವಿದ್ಯಾರ್ಥಿಗಳಿಗೆ ಅದನ್ನು ಕಲಿಸಬೇಕು. ನಂತರ ಅವರಿಗೆ ನೋಡಲ್ ಅಧಿಕಾರಿಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವಾ ಆಯ್ಕೆ

    ಇದರ ಜೊತೆಗೆ ತಪ್ಪಿತಸ್ಥರು ಹತ್ತಿರದ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ ಸಮಾಜ ಸೇವೆ ಮಾಡಬೇಕು ಅಥವಾ ಹತ್ತಿರದ ರಕ್ತನಿಧಿಯಲ್ಲಿ ಕನಿಷ್ಠ ಒಂದು ಯೂನಿಟ್ ರಕ್ತವನ್ನು ದಾನ ಮಾಡಬೇಕು.

    ರೆಡ್‌ ಸಿಗ್ನಲ್‌ ಜಂಪ್‌ ಮಾಡಿದರೆ ಮೊದಲ ಅಪರಾಧಕ್ಕೆ 1,000 ರೂ. ಮತ್ತು ನಂತರದ ಅಪರಾಧಗಳಿಗೆ 2,000 ರೂ., ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸಿದರೆ 5,000 ರೂ. ನಂತರ 10,000 ರೂ., ಓವರ್‌ಲೋಡ್ ಅಥವಾ ಗೂಡ್ಸ್ ಕ್ಯಾರೇಜ್‌ನಲ್ಲಿರುವ ವ್ಯಕ್ತಿಗಳಿಗೆ 20,000 ರೂ. ನಂತರ 2,000 ಹೆಚ್ಚುವರಿ ದಂಡ, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಇದ್ದರೆ 1,000 ರೂ. ನಂತರ 2,000 ರೂ. ದಂಡ ವಿಧಿಸಲಾಗುವುದು.

    Live Tv
    [brid partner=56869869 player=32851 video=960834 autoplay=true]

  • ಸಂಚಾರಿ ವಿಜಯ್ ಹೆಸರಿನಲ್ಲಿ ರಕ್ತದಾನ ಮಾಡಿದ ಸ್ನೇಹಿತರು

    ಸಂಚಾರಿ ವಿಜಯ್ ಹೆಸರಿನಲ್ಲಿ ರಕ್ತದಾನ ಮಾಡಿದ ಸ್ನೇಹಿತರು

    ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ನೆನಪಿಗೆ ವಿಜಯ್ ಅವರ ಗೆಳೆಯರ ಬಳಗ ಇಂದು ಬೆಂಗಳೂರಿನ ನಾಗರಭಾವಿ ಬಿ.ಡಿಎ ಕಾಂಪ್ಲೆಕ್ಸ್ ಬಳಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ವಿಜಯ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಜಯ್‌ ಸ್ನೇಹಿತರು ವಿಶೇಷ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

    ಸ್ವಾಮಿ ವಿವೇಕಾನಂದ ಸ್ವಯಂಪ್ರೇರಿತ ರಕ್ತ ನಿಧಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಗೆಳೆಯರು ಮತ್ತು ವಿಜಯ್ ಆತ್ಮಿಯರು ರಕ್ತದಾನ ಮಾಡಿದ್ದಾರೆ.ಸಮಾಜಮುಖಿ ಕೆಲಸಗಳಲ್ಲಿ ಸಂಚಾರಿ ವಿಜಯ್ ಯಾವತ್ತಿಗೂ ತೊಡಗಿಕೊಳ್ಳುತ್ತಿದ್ದರು. ಇದನ್ನೂ ಓದಿ:Exclusive-ಪುನೀತ್ ನಟನೆಯ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅಲ್ಲ, ಸಿನಿಮಾ : ನಿರ್ದೇಶಕ ಅಮೋಘ ವರ್ಷ

    ಕೋವಿಡ್ ಸಮಯದಲ್ಲಿ ಆಹಾರ ಕಿಟ್ ವಿತರಣೆ, ಅಸಕ್ತ ಕಲಾವಿದರಿಗೆ ಸಹಾಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಹಾಯ ಸಹಕಾರವನ್ನು ವಿಜಯ್ ಮಾಡುತ್ತಿದ್ದರು. ಹಾಗಾಗಿ ಅವರ ಹುಟ್ಟು ಹಬ್ಬದ ದಿನಕ್ಕೆ ಇಂತಹ ಕೆಲಸಕ್ಕೆ ಮುಂದಾಗಿದ್ದೇವೆ ಅಂತಾರೆ ವಿಜಯ್ ಸ್ನೇಹಿತ ಅನಿಲ್ ಗೌಡ.ಇದನ್ನೂ ಓದಿ:ಮೊದಲ ಬಾರಿಗೆ ರೀಲ್ಸ್ ಮಾಡಿ, ಮಿಂಚಿದ ಗೋಲ್ಡನ್ ಕ್ವೀನ್ ಅಮೂಲ್ಯ

    ವಿಜಯ್ ಅವರ ಹುಟ್ಟು ಹಬ್ಬದ ದಿನದಂದು ಇವತ್ತು ಅನೇಕ ಕಾರ‍್ಯಕ್ರಮಗಳನ್ನು ಆಯೋಜನೆ ಮಾಡಿದ್ದು ಅವರ ಹುಟ್ಟೂರಿನಲ್ಲಿ ಅವರ ಶಾಲೆಗೆ ಸುಣ್ಣಬಣ್ಣ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಚಾರಿ ಥಿಯೇಟರ್ ಕಡೆಯಿಂದ ನಾಟಕೋತ್ಸವ ಆಯೋಜನೆ ಮಾಡಲಾಗಿದೆ. ಅಲ್ಲದೇ ವಿಜಯ್ ಸಮಾಧಿ ಇರುವ ಪಂಚನಹಳ್ಳಿಯಲ್ಲೂ ಹಲವು ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹುಟ್ಟುಹಬ್ಬ : ವಿವಿಧ ಕಾರ್ಯಕ್ರಮಗಳ ಆಯೋಜನೆ

    ನಾಳೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹುಟ್ಟುಹಬ್ಬ : ವಿವಿಧ ಕಾರ್ಯಕ್ರಮಗಳ ಆಯೋಜನೆ

    ಲವು ವರ್ಷಗಳ ನಂತರ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ನಟ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ನಾಳೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಅವರ ಹುಟ್ಟು ಹಬ್ಬವಾಗಿರುವುದರಿಂದ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸುತ್ತಿದ್ದಾರೆ.

    ಸಂಚಾರಿ ವಿಜಯ್ ಅವರಿಗೆ ಸಂಚಾರಿ ಎಂಬ ಪದನಾಮವನ್ನು ತಂದುಕೊಂಡ ಮಂಗಳಾ ಅವರ ಸಂಚಾರಿ ಥಿಯೇಟರ್ ನಲ್ಲಿ ನಾಳೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜಯ್ ಅವರ ಹೆಸರಿನಲ್ಲಿ ನಾಟಕೋತ್ಸವ ಆಯೋಜನೆ ಮಾಡಿದ್ದು, ಈ ನಾಟಕೋತ್ಸವದ ಪೋಸ್ಟರ್ ಅನ್ನು ಬಿ.ಜಯಶ್ರೀ ಅವರು ಬಿಡುಗಡೆ ಮಾಡಲಿದ್ದಾರೆ. ಸಂಜೆ 7ಕ್ಕೆ ಸಂಚಾರಿ ಥಿಯೇಟರ್ ಎಂಪ್ಟಿಸ್ಪೆಸ್ ನಲ್ಲಿ ವಿಜಯ್ ಅಭಿನಯಿಸುತ್ತಿದ್ದ ಶ್ರೀದೇವಿ ಮಹಾತ್ಮೆ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ವಿಜಯ್ ಅವರ ಸ್ನೇಹಿತರಾದ ಅನಿಲ್ ಗೌಡ ಮತ್ತು ಸ್ನೇಹಿತರು ನಾಗರಭಾವಿ ಸಬ್ ರಿಜಿಸ್ಟಾರ್ ಕಛೇರಿ ಎದುರು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದಾರೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರಿಗೆ ಸಂಚಾರಿ ವಿಜಯ್ ಅವರ ಜನ್ಮದಿನಕ್ಕಾಗಿ ಈ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜನೆಗೊಂಡಿದೆ. ಅಲ್ಲದೇ, ವಿಜಯ್ ಅವರನ್ನು ಸ್ಮರಿಸುವಂತಹ ಕಾರ್ಯ ಕೂಡ ಈ ಮೂಲಕ ನಡೆಯಲಿದೆ.

    ವಿಜಯ್ ಅವರು ಕಲಿತಿರುವ ಪಂಚನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಹಚ್ಚುವಂತಹ ಕೆಲಸವನ್ನು ಕನ್ನಡ ಮನಸುಗಳ ಪ್ರತಿಷ್ಠಾನ ಮಾಡುತ್ತಿದೆ. ಜುಲೈ 16 ಮತ್ತು 17 ಎರಡು ದಿನಗಳ ಕಾಲ ಈ ಕೆಲಸವನ್ನು ಅದು ಹಮ್ಮಿಕೊಂಡಿದೆ. ಅಲ್ಲದೇ, ಜೀ ಕನ್ನಡ ವಾಹಿನಿಯಲ್ಲಿ ವಿಜಯ್ ನಟಿಸಿರುವ ತಲೆದಂಡ ಸಿನಿಮಾ ಕೂಡ ಪ್ರಸಾರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಆ್ಯಸಿಡ್ ಸಂತ್ರಸ್ತೆಯ ಸರ್ಜರಿಗೆ ನೆರವಾದ ಪೊಲೀಸರು

    ಆ್ಯಸಿಡ್ ಸಂತ್ರಸ್ತೆಯ ಸರ್ಜರಿಗೆ ನೆರವಾದ ಪೊಲೀಸರು

    ಬೆಂಗಳೂರು: ಇತ್ತೀಚೆಗೆ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ರಕ್ತದ ಅವಶ್ಯಕತೆ ಇದ್ದು, ಸಂತ್ರಸ್ತೆಗೆ ರಕ್ತ ದಾನ ಮಾಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಏಪ್ರಿಲ್ 28ರಂದು ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಸರ್ಜರಿಗೆ ಒಳಗಾಗಿದ್ದು, ರಕ್ತದ ಅವಶ್ಯಕತೆ ಇತ್ತು. ಹೀಗಾಗಿ ನಗರದ ಕಾಮಾಕ್ಷಿಪಾಳ್ಯದ ಇನ್ಸ್ಪೆಕ್ಟರ್ ಪ್ರಶಾಂತ್ ಸೇರಿದಂತೆ ಐವರು ಸಿಬ್ಬಂದಿ ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.3.47ಕ್ಕೆ ಏರಿಕೆ – ಬೆಂಗ್ಳೂರಲ್ಲಿ 791 ಕೇಸ್

    ಪೊಲೀಸರು 5 ಯುನಿಟ್ ರಕ್ತದಾನ ಮಾಡಿದ್ದು, ಸಂತ್ರಸ್ತ ಯುವತಿ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮೊದಲ ದಿನ ಸಿಇಟಿ ಪರೀಕ್ಷೆ ಸುಗಮ: ಅಶ್ವಥ್ ನಾರಾಯಣ

    Live Tv