ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ (IPL 2025) ಕೊನೇ ಹಂತಕ್ಕೆ ಬಂದು ನಿಂತಿದೆ. ಇಂದು ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs PBKS) ತಂಡದ ಫೈನಲ್‌ಪಂದ್ಯಕ್ಕೆ ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ದಶಕಗಳಿಂದ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್ ತಂಡಕ್ಕೆ ವಿರಾಟ್ ಕೊಹ್ಲಿ (Virat Kohli) ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿವೆ ಎರಡೂ ತಂಡಗಳೂ ಇವೆ.
ಆರ್‌ಸಿಬಿ ಅಭಿಮಾನಿಯೂ ಆಗಿರುವ ʻಅಮೃತ ವರ್ಷಿಣಿʼ ಧಾರಾವಾಹಿ ಖ್ಯಾತಿಯ ನಟಿ ರಜನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲೆಂದು ರಕ್ತದಾನ ಮಾಡಿದ್ದಾರೆ. ಆ ಫೋಟೋವನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ʻಆರ್‌ಸಿಬಿ ವಿನ್ ಆಗ್ಲಿ ಅಂತ ಬ್ಲಡ್ ಕೊಟ್ಟಿದ್ದೀವಿ, ಈ ಸಲ ಕಪ್ ನಮ್ದೇ.. ʻಜೈ ಆರ್‌ಸಿಬಿʼ ಅಂತ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್
ಇಂದು ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದ್ದು, ಜಿಯೋ ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. 2ನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್ ಗೆಲುವು ನಿರ್ಣಾಯಕವಾಗಲಿದೆ. ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಇದನ್ನೂ ಓದಿ: RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ
ಆರ್‌ಸಿಬಿ ಗೆಲ್ಲುವ ಫೇವರೆಟ್
ಕ್ವಾಲಿಫೈಯರ್-1ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೇ, ಈ ಬಾರಿ ಒಟ್ಟು 614 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಸತತ 2ನೇ ವರ್ಷ ರಜತ್ Vs ಶ್ರೇಯಸ್ ತಂಡಗಳ ಮಧ್ಯೆ ಟಿ20 ಫೈನಲ್!
ಮಳೆ ಸಾಧ್ಯತೆ ಇದೆಯೇ?
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.
ಚಾಮರಾಜನಗರ: ದಾನಗಳಲ್ಲಿ ಶ್ರೇಷ್ಠದಾನ ಅಂದ್ರೆ ರಕ್ತದಾನ ಕೂಡ ಹೌದು. ರಕ್ತದಾನದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆಗಳಿವೆ. ಬ್ಲಡ್ ಡೊನೇಟ್ (Blood Donate) ಮಾಡಿದ್ರೆ ದೇಹದಲ್ಲಿ ರಕ್ತ ಕಡಿಮೆಯಾಗಿ ಬಿಡುತ್ತೆ ಅಂತ ಚಿಂತಿಸೋರೆ ಜಾಸ್ತಿ. ಆದರೆ ಚಾಮರಾಜನಗರದ ಯುವಕರಿಬ್ಬರು ಕಳೆದ ಇಪ್ಪತ್ತೈದು ವರ್ಷಗಳಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ ನಿರಂತರವಾಗಿ ರಕ್ತದಾನ ಮಾಡುತ್ತಾ ಬರುತ್ತಿದ್ದಾರೆ.
ಚಾಮರಾಜನಗರದ ಸತೀಶ್ 45ನೇ ವಯಸ್ಸಿನಲ್ಲಿಯೂ ಹೆಮ್ಮೆಯಿಂದ ರಕ್ತದಾನ ಮಾಡ್ತಿದ್ದಾರೆ. ಒಂದೆರೆಡು ಬಾರಿಯಲ್ಲ, ಇವರು ಬರೋಬ್ಬರಿ 51 ಬಾರಿ ರಕ್ತದಾನ ಮಾಡಿ ಅದೆಷ್ಟೋ ಬಡ ಜೀವಗಳ ಬದುಕಿಗೆ ಬೆಳಕಾಗಿದ್ದಾರೆ. ಇನ್ನು ಚಾಮರಾಜನಗರ (Chmarajanagar) ತಾಲೂಕಿನ ಹೆಗ್ಗವಾಡಿಪುರದ ನಿವಾಸಿಯಾದ ಅಜಯ್ ಕೂಡ ಯಾವುದೇ ಅಂಜು ಅಳುಕಿಲ್ಲದೇ 25ನೇ ವಯಸ್ಸಿನಿಂದಲೂ ರಕ್ತದಾನ ಮಾಡ್ತಿದ್ದಾರೆ. ಅಜಯ್ ಕೂಡ 43 ಬಾರಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಸಾಕಷ್ಟಿದೆ. ಇದನ್ನು ಮನಗಂಡ ಚಾಮರಾಜನಗರದ ರೋಟರಿ ಸಿಲ್ಕ್‍ಸಿಟಿ ಸಂಸ್ಥೆ ಕಳೆದ 12 ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸ್ತಿದೆ. ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಈ ಶಿಬಿರಗಳಲ್ಲಿ ರಕ್ತದಾನ ಮಾಡಿದ್ದು ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಭಾರತಕ್ಕೆ ಹೋಲಿಸಿದ್ರೆ ದಕ್ಷಿಣ ಭಾರತದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ
ಒಟ್ಟಿನಲ್ಲಿ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಮಾಡಿದರೆ ಕೇವಲ 24 ಗಂಟೆಯಲ್ಲಿ ರಕ್ತ ಪುನರ್ ಉತ್ಪತ್ತಿಯಾಗುತ್ತದೆ. ರಕ್ತದಾನದಿಂದ ಹೃದ್ರೋಗ, ಮಧುಮೇಹ, ರಕ್ತ ಕ್ಯಾನ್ಸರ್ ನಂತಹ ಕಾಯಿಲೆಗಳು ಹತ್ತಿರ ಸುಳಿಯಲ್ಲ. ಇನ್ನಾದ್ರೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ, ಮತ್ತೊಂದು ಜೀವ ಉಳಿಸಿ.
ಹಾವೇರಿ: ರಕ್ತದಾನ (Blood Donate) ಶಿಬಿರ ಆಯೋಜಿಸಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ಹೋರಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಘಟನೆ ಹಾವೇರಿಯ (Haveri) ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದಲಿಂಗೇಶ ವಾಲಿ ಎಂಬವರಿಗೆ ಸೇರಿದ ಹೋರಿ ಇದಾಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ಈ ಹೋರಿಯನ್ನು ಒಂದು ಲಕ್ಷ ರೂ. ಕೊಟ್ಟು ತಮಿಳುನಾಡಿನಿಂದ ತಂದಿದ್ದರು. ಬಳಿಕ ಹೋರಿಗೆ ರಾಕ್ಷಸ 220 ಎಂದು ಹೆಸರು ಇಟ್ಟಿದ್ದರು. ಹೋರಿ ಹಬ್ಬದಲ್ಲಿ (Hori Habba) ಕೊಬ್ಬರಿ ಕಟ್ಟಿ ಓಡಿಸುವ ಸಲುವಾಗಿಯೇ ಇದನ್ನು ತಂದಿದ್ದರು. ಅಂತೆಯೇ ಹೋರಿ ಹಬ್ಬದಲ್ಲಿಯೂ ಒಳ್ಳೆಯ ಹೆಸರು ಮಾಡಿತ್ತು. ಇದನ್ನೂ ಓದಿ: ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಲ್ಲ ಅಂತಿದ್ದಾರೆ ಸಿಎಂ-ಉದ್ಯೋಗ ಸೃಷ್ಟಿಯ ಚಿಂತನೆಯಿದೆ ಅಂತಿದ್ದಾರೆ ಡಿಸಿಎಂ
ಹೋರಿ ಹಬ್ಬದಲ್ಲಿ ಅಲಂಕಾರದಲ್ಲಿ ರಾಕ್ಷಸನ ಅವತಾರ ತಾಳಿದಂತೆ ಅಖಾಡದಲ್ಲಿ ಧೂಳೆಬ್ಬಿಸಿ ಓಡಿ ಜನರ ಮನೆ ಮಾತಾಗಿದೆ. ಅಖಾಡದಿಂದ ಹೊರಗೆ ಬಂದರೆ ಅತ್ಯಂತ ಮೃದು ಸ್ವಭಾವ ಹೊಂದಿದೆ. ಹೀಗಾಗಿ ಹೋರಿಗೆ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ರಾಕ್ಷಸ ಎಂದು ಹೆಸರು ನಾಮಕರಣ ಮಾಡಿದ್ದರು. ಅಖಾಡದಲ್ಲಿ ಶರವೇಗದ ಓಟ ಓಡಿ ಸಾಕಷ್ಟು ಬಹುಮಾನಗಳನ್ನು ಇದು ಪಡೆದುಕೊಂಡಿದೆ.
ಭೋಪಾಲ್: ರಸ್ತೆ ಅಪಘಾತಕ್ಕೀಡಾಗಿ ಕಳೆದ 5 ವರ್ಷಗಳಿಂದಲೂ ಹಾಸಿಗೆ ಹಿಡಿದಿರುವ ಮಗಳ ಚಿಕಿತ್ಸೆಗೆ (Medical Treatment) ಹಣ ಒದಗಿಸಲಾಗದೇ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಧ್ಯಪ್ರದೇಶದ (Madhya Pradesh) ಸತ್ನಾದಲ್ಲಿ ನಡೆದಿದೆ.
ಏನಿದು ಘಟನೆ?
ಮಧ್ಯಪ್ರದೇಶದ ಸತ್ನಾದ ನಿವಾಸಿ ಪ್ರಮೋದ್ ಅವರ ಪುತ್ರಿ ಅನುಷ್ಕಾಗೆ 5 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ (Road Accident) ಬೆನ್ನುಮೂಳೆ ಮುರಿದು ಹಾಸಿಗೆ ಹಿಡಿದಿದ್ದಾರೆ. ಇದರಿಂದ ತಂದೆ ಪ್ರಮೋದ್, ಹಾಸಿಗೆ ಹಿಡಿದ ತನ್ನ ಮಗಳ ಚಿಕಿತ್ಸೆಗೆಂದು ಹಣ ಒದಗಿಸಲು ಹಾಗೂ ಕುಟುಂಬ ನಿರ್ವಹಣೆಗಾಗಿ ಇದ್ದ ಅಂಗಡಿ, ಮನೆ ಎಲ್ಲವನ್ನೂ ಮಾರಿದ್ದಾರೆ.
ಎಲ್ಲವೂ ಖಾಲಿಯಾದ ನಂತರ ಕುಟುಂಬಕ್ಕೆ ಆಹಾರ ಪೂರೈಕೆ ಮಾಡಲು ರಕ್ತ ಮಾರಾಟವನ್ನೂ ಮಾಡಿದ್ದರು. ರಕ್ತ ಮಾರಾಟ ಮಾಡಿದ ನಂತರ ಪ್ರಮೋದ್ ಅನಾರೋಗ್ಯಕ್ಕೆ ತುತ್ತಾಗಿದ್ದರು, ಆ ನಂತರ ಹಣ ಸಂಪಾದನೆ ಮಾಡಲಾಗಲಿಲ್ಲ ಎಂದು ಹಾಸಿಗೆ ಹಿಡಿದಿರುವ ಪುತ್ರಿ ಅನುಷ್ಕಾ ಹೇಳಿದ್ದಾರೆ.
17 ವರ್ಷದ ಅನುಷ್ಕಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು, ಬೋರ್ಡ್ ಪರೀಕ್ಷೆಗಳಲ್ಲೂ ವಿಶೇಷ ಸಾಧನೆ ಮಾಡಿದ್ದರು. ಅದಕ್ಕಾಗಿ ಅವರನ್ನ ಗೌರವಿಸಲಾಗಿತ್ತು. ಅನುಷ್ಕಾ ಹಾಸಿಗೆ ಹಿಡಿದ ನಂತರ ಕೆಲವರು ಸಹಾಯ ನೀಡಿದ್ದರು. ಆದ್ರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗಲಿಲ್ಲ. ನನ್ನ ತಂದೆ ಎಷ್ಟು ಅಲೆದಾಡಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ದಿನನಿತ್ಯದ ಅಗತ್ಯತೆಗಳನ್ನ ಪೂರೈಸಲು ನನ್ನ ತಂದೆ ರಕ್ತವನ್ನೂ ಮಾರಾಟ ಮಾಡಿದ್ರು. ಆದರೂ ಕುಟುಂಬ ನಿರ್ವಹಣೆ ಸಾಧ್ಯವಾಗದೇ ಇದ್ದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನುಷ್ಕಾ ಕಣ್ಣೀರಿಟ್ಟಿದ್ದಾರೆ.
ಸೋಮವಾರ ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಪ್ರಮೋದ್ ನಾಪತ್ತೆಯಾಗಿದ್ದರು. ಒಂದೆರಡುಗಂಟೆಗಳ ಕಾಲ ಹುಡುಕಿದರೂ ಸಿಗದಿದ್ದ ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಸನ್ನಾದ ರೈಲ್ವೆ ಹಳಿಯಲ್ಲಿ ಪ್ರಮೋದ್ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸನ್ನಾ ಉಪ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಮಿಶ್ರಾ ಹೇಳಿದ್ದಾರೆ.
ಈ ಸಮಾಜದಲ್ಲಿ ರಕ್ತದಾನಕ್ಕೆ (Blood Donation) ಅದರದ್ದೇ ಆದ ಮಹತ್ವವಿದೆ. ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು. ಜೀವಕ್ಕೆ ಸಂಜೀವಿನಿಯಿದ್ದಂತೆ. ಮಾನವ ದೇಹದ ಜೀವಸೆಲೆಯಾಗಿರುವ ರಕ್ತವನ್ನು ದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಬಹುದು. ಕೇವಲ ರಕ್ತ ಪಡೆಯುವವರಿಗಷ್ಟೇ ಅಲ್ಲ, ರಕ್ತದಾನ ಮಾಡುವವರಿಗೂ ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ರಕ್ತದಾನ ಮಾಡಿದರೆ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳನ್ನೂ ನಿಯಂತ್ರಿಸಬಹುದು ಎಂಬುದು ನಿಮ್ಮ ಗಮನಕ್ಕಿರಲಿ.
ರಕ್ತದಾನ ಮಾಡುವುದಕ್ಕೂ ವೈದ್ಯಕೀಯ ಮಾರ್ಗಸೂಚಿಯಿರುತ್ತೆ. ಇಂತಹವರು ರಕ್ತದಾನ ಮಾಡಬೇಕು, ಮಾಡಬಾರದು ಎಂಬ ನಿಯಮವಿದೆ. ಯಾವುದೇ ದಾನ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕೇ ಹೊರತು ಕೆಡುಕುಂಟು ಮಾಡಬಾರದು. ಹೀಗಾಗಿ ರಕ್ತದಾನ ಮಾಡುವಾಗ ವೈದ್ಯಕೀಯ ನಿಯಮ ಪಾಲಿಸುವುದು ತುಂಬಾ ಮುಖ್ಯ. ಆ ಮಾರ್ಗಸೂಚಿಯೇನು? ಅದನ್ನು ಯಾಕೆ ಪಾಲಿಸಬೇಕು? ಯಾರ‍್ಯಾರು ರಕ್ತದಾನ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನೂ ಓದಿ: PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?
ಮಾರಕ ಕಾಯಿಲೆಗಳ ವಿಚಾರವಾಗಿ ವೈದ್ಯಕೀಯ ಕ್ಷೇತ್ರ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ರಕ್ತದಾನದ ವಿಚಾರದಲ್ಲೂ ಇಂತಹ ಕ್ರಮಕೈಗೊಂಡಿರುವ ವಿಚಾರವನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ (Supreme Court) ಮುಂದಿಟ್ಟಿದೆ. ಸೋಂಕು ಹರಡುವಿಕೆ ನಿಯಂತ್ರಣ, ಇತರರ ಆರೋಗ್ಯದ ದೃಷ್ಟಿಯಿಂದ ಮಹಿಳಾ ಲೈಂಗಿಕ ಕಾರ್ಯಕರ್ತೆಯರು (Women Sex Workers) ರಕ್ತದಾನ ಮಾಡಬಾರದು ಎಂಬ ಮಾರ್ಗಸೂಚಿಯಿದೆ. ಈ ಸಾಲಿಗೆ ತೃತೀಯಲಿಂಗಿಗಳು (Transgenders) ಹಾಗೂ ಸಲಿಂಗಕಾಮಿಗಳನ್ನೂ (Gay) ಸೇರಿಸಲಾಗಿದೆ. ಯಾಕೆ ಇವರು ರಕ್ತದಾನ ಮಾಡುವಂತಿಲ್ಲ ಎಂಬುದಕ್ಕೆ ವೈದ್ಯಕೀಯ ಪುರಾವೆಗಳನ್ನೂ ಕೇಂದ್ರ, ಸುಪ್ರೀಂ ಮುಂದಿಟ್ಟಿದೆ. ಇದೇನು ಹೊಸ ಮಾರ್ಗಸೂಚಿಯಲ್ಲ. 2017ರಲ್ಲೇ ಈ ಮಾರ್ಗಸೂಚಿ ಹೊರಡಿಸಲಾಗಿತ್ತು. ಹಾಗಾದರೆ, ಈಗ ಏಕೆ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂಬುದನ್ನು ತಿಳಿಯೋಣ.
ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಅದರಲ್ಲಿ “ಲಿಂಗಪರಿವರ್ತಕರು, ಸಲಿಂಗಕಾಮಿಗಳು ಮತ್ತು ಮಹಿಳಾ ಲೈಂಗಿಕ ಕಾರ್ಯಕರ್ತರನ್ನು ಎಚ್‌ಐವಿ ʼಅಪಾಯಕಾರಿʼ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿ ಅವರನ್ನು ರಕ್ತದಾನಿಗಳ ವರ್ಗದಿಂದ ದೂರ ಇಡಲಾಗಿದೆ” ಎಂದು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?
ರಾಷ್ಟ್ರೀಯ ರಕ್ತ ವರ್ಗಾವಣೆ ಕೌನ್ಸಿಲ್ (NBTC) ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು 2017ರ ಅಕ್ಟೋಬರ್ 11 ರಂದು “ರಕ್ತದಾನಿ ಆಯ್ಕೆ ಮತ್ತು ರಕ್ತದಾನಿಗಳ ಮಾರ್ಗಸೂಚಿ” 12 ಮತ್ತು 51ನೇ ವಿಧಿ ಅಡಿಯಲ್ಲಿ ಸಲಿಂಗಕಾಮಿ ಮತ್ತು ತೃತೀಯಲಿಂಗಿಗಳು ರಕ್ತದಾನ ಮಾಡುವಂತಿಲ್ಲ ಎಂದಿದೆ. ಇದನ್ನು ವಿರೋಧಿಸಿ ತೃತೀಯಲಿಂಗಿ ಸಮುದಾಯದ ಥಂಗ್‌ಜಮ್ ಸಂತಾ ಸಿಂಗ್ ಎಂಬವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಮಾರ್ಗಸೂಚಿಗೆ ತಡೆ ನೀಡಬೇಕು ಎಂದು ಕೋರಿದ್ದರು. ಅದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಯಾಕೆ ರಕ್ತದಾನ ಮಾಡುವಂತಿಲ್ಲ?
ಮಾರ್ಗಸೂಚಿಗಳ 12 ನೇ ವಿಧಿಯು “ರಕ್ತ ದಾನಿಗಳ ಆಯ್ಕೆ ಮಾನದಂಡ”ದ ಅಡಿಯಲ್ಲಿ ಬರುತ್ತದೆ. ರಕ್ತ ಕೊಡುವ ದಾನಿ ಕಾಯಿಲೆಗಳಿಂದ ಮುಕ್ತವಾಗಿರಬೇಕು. ಮುಖ್ಯವಾಗಿ HIV, ಹೆಪಟೈಟಿಸ್ ಬಿ ಸೋಂಕಿತರು ರಕ್ತದಾನ ಮಾಡುವಂತಿಲ್ಲ ಎಂದಿದೆ. ಇದರಿಂದ ರಕ್ತ ಪಡೆಯುವವರೂ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ 15 ನೇ ವಿಧಿಯು ಸಲಿಂಗಕಾಮಿ ಮತ್ತು ತೃತೀಯಲಿಂಗಿಗಳು ಹಾಗೂ HIV ಸೋಂಕಿನ ಅಪಾಯದಲ್ಲಿರುವವರನ್ನು ರಕ್ತದಾನದಿಂದ ಶಾಶ್ವತವಾಗಿ ದೂರವಿಟ್ಟಿದೆ. ಪರ್ಮನೆಂಟ್ ಡೆಫರಲ್ ಎಂದರೆ ರಕ್ತದಾನ ಮಾಡಲು ಎಂದಿಗೂ ಅವರನ್ನು ಅನುಮತಿಸುವುದಿಲ್ಲ.
ಸುಪ್ರೀಂನಲ್ಲಿರುವ ಮನವಿ ಏನು?
ರಕ್ತದಾನ ವಿಚಾರ ಕುರಿತಂತೆ, ಮಣಿಪುರದ ಥಂಗ್‌ಜಮ್ ಸಂತಾ ಸಿಂಗ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, 2021ರ ಮಾ.5ರಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. 2017ರ ಮಾರ್ಗಸೂಚಿಯ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಮಾರ್ಗಸೂಚಿಯಲ್ಲಿ ಗುರುತಿಸಲಾಗಿರುವ ಈ ವರ್ಗದ ಜನರನ್ನು ಎಚ್‌ಐವಿ ಮತ್ತು ಏಡ್ಸ್‌ನ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ವರ್ಗಕ್ಕೆ ಸೇರಿಸಿರುವುದು ಸಂವಿಧಾನದ 14, 15 ಹಾಗೂ 21ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಲಿಂಗ ಹಾಗೂ ಲೈಂಗಿಕತೆ ಆಧಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ‘ನವತೇಜ್ ಜೋಹರ್’ ಮತ್ತು ‘ನಲ್ಸಾ’ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಈ ಮಾರ್ಗಸೂಚಿಗಳು ಉಲ್ಲಂಘಿಸುತ್ತವೆ ಎಂದು ಹೇಳಲಾಗಿತ್ತು.
ನಮ್ಮ ದೃಷ್ಟಿಯಲ್ಲಿ ಲಿಂಗ ಗುರುತಿಸುವಿಕೆ ಲೈಂಗಿಕತೆಯ ಅವಿಭಾಜ್ಯ ಅಂಗವಾಗಿದೆ. ತೃತೀಯಲಿಂಗಿಗಳನ್ನೂ ಒಳಗೊಂಡಂತೆ ಲಿಂಗ ಗುರುತಿನ ಆಧಾರದ ಮೇಲೆ ಯಾವುದೇ ನಾಗರಿಕರನ್ನು ತಾರತಮ್ಯ ಮಾಡುವುದು ಸರಿಯಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ರಕ್ತದಾನದಿಂದ ಇವರನ್ನು ಹೊರಗಿಡುವುದಕ್ಕೆ ಸರ್ಕಾರದ ವಾದವೇನು?
ತೃತೀಯಲಿಂಗಿಗಳು, ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು (ಎಂಎಸ್ಎಂ) ಮತ್ತು ಲೈಂಗಿಕ ಕಾರ್ಯಕರ್ತೆಯರು ರಕ್ತದಾನ ಮಾಡುವುದನ್ನು ನಿರ್ಬಂಧಿಸಿರುವ 2017ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಈ ಮಾರ್ಗಸೂಚಿಗಳು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದ್ದು, ತಜ್ಞರಿಂದ ಜಾಗತಿಕವಾಗಿ ಮಾನ್ಯತೆ ಪಡೆದಿವೆ ಎಂದು ತಿಳಿಸಿದೆ.
ಯುರೋಪಿಯನ್ ರಾಷ್ಟ್ರಗಳು ಲೈಂಗಿಕವಾಗಿ ಸಕ್ರಿಯವಾಗಿರುವ ಸಲಿಂಗಕಾಮಿಗಳು ರಕ್ತದಾನ ಮಾಡುವುದನ್ನು ನಿಷೇಧಿಸಿವೆ. ಯುರೋಪಿಯನ್ ಪುರುಷರು-ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಬಗ್ಗೆ ಇಂಟರ್ನೆಟ್ ಸಮೀಕ್ಷೆ ಆಧರಿಸಿ ಈ ಕ್ರಮಕೈಗೊಂಡಿವೆ ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ. ಭಾರತದ ರಕ್ತ ವರ್ಗಾವಣೆ ವ್ಯವಸ್ಥೆಯನ್ನು ಬಲಪಡಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಕ್ತದಾನ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿ, ಅದನ್ನು ಬಳಕೆ ಮಾಡುವ ಜನರಲ್ಲಿ ವಿಶ್ವಾಸ ಮೂಡಿಸುವುದು ಬಹಳ ಮುಖ್ಯ. ಜೀವವೊಂದು ಸಂಕಷ್ಟದಲ್ಲಿರುವ ಸಮಯದಲ್ಲಿ ರಕ್ತದಾನ ವ್ಯವಸ್ಥೆಯ ಹೊರತು ಜನರಿಗೆ ಬೇರೆ ಆಯ್ಕೆಗಳಿರುವುದು ಕಡಿಮೆ. ಸಂಗ್ರಹಿಸಲಾದ ರಕ್ತದ ಮಾದರಿಯು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬ ಬಗ್ಗೆ ರಕ್ತದಾನ ಮಾಡುವವರು ಹಾಗೂ ರಕ್ತವನ್ನು ಪಡೆಯುವವರು ಸಂಪೂರ್ಣ ವಿಶ್ವಾಸ ಇರಿಸುವುದು ಅಗತ್ಯ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: Public TV Explainer: ಭಾರತದಲ್ಲಿ ಲ್ಯಾಬ್‌ನಲ್ಲೇ ತಯಾರಾಗುತ್ತಾ ವಜ್ರ? – ಕೃತಕ ವಜ್ರ ಹೇಗೆ ತಯಾರಿಸ್ತಾರೆ ಗೊತ್ತಾ?
ರಕ್ತ ವರ್ಗಾವಣೆ ವಿಚಾರದಲ್ಲಿ ಪಾಶ್ಚಾತ್ಯ ದೇಶಗಳು ನ್ಯೂಕ್ಲಿಯಿಕ್ ಆ್ಯಸಿಡ್ ಟೆಸ್ಟಿಂಗ್ (ಎನ್‌ಎಟಿ) ವಿಧಾನವನ್ನು ಅನುಸರಿಸುತ್ತವೆ. ಈ ವಿಧಾನದಿಂದ, ವರ್ಗಾವಣೆಯಿಂದ ಹರಡುವ ಸೋಂಕುಗಳನ್ನು (ಟಿಟಿಐ) ಗಣನೀಯವಾಗಿ ಕಡಿಮೆ ಮಾಡಬಹುದು. ಭಾರತದಲ್ಲಿ 3,866 ರಕ್ತನಿಧಿ ಕೇಂದ್ರಗಳಲ್ಲಿ ಮಾತ್ರ ಎನ್‌ಎಟಿ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನವೂ ದುಬಾರಿ. ಇದನ್ನು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿ ಹಾಗೂ ವಿಶೇಷ ಉಪಕರಣಗಳು, ಸರಿಯಾದ ನಿರ್ವಹಣೆ ಅತ್ಯಗತ್ಯ ಎಂದು ಕೇಂದ್ರ ತಿಳಿಸಿದೆ.
ಹಾವೇರಿ: ಇತ್ತೀಚಿನ ದಿನಗಳಲ್ಲಿ ಬರ್ತ್ ಡೇ (Birthday) ಅಂದ್ರೆ ಕೇಕ್ ಕತ್ತರಿಸಿ ಸಂಭ್ರಮಿಸೋದು ಅಂತಾಗಿದೆ. ಆದರೆ ಇಲ್ಲೊಂದು ಬರ್ತ್ ಡೇ ಆಯ್ತು. ಇದು ಮನುಷ್ಯರ ಬರ್ತ್ ಡೇ ಅಲ್ಲ. ಇಲ್ಲೂ ಕೇಕ್ ಕತ್ತರಿಸಿ ಸಂಭ್ರಮಿಸಲಾಯ್ತು. ಕೇಕ್ ಕತ್ತರಿಸಿ ಸಂಭ್ರಮ ಅಚರಿಸೋದರ ಜೊತೆಗೆ ರಕ್ತದಾನ (Blood Donate) ಮಾಡಿ ಸಂಕಷ್ಟದಲ್ಲಿರೋ ಜನರ ಜೀವ ಉಳಿಸೋ ಕೆಲಸ ಮಾಡಲಾಯ್ತು.
ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದ ಸಿದ್ದಲಿಂಗೇಶ ವಾಲಿ ಎಂಬರಿಗೆ ಸೇರಿದ ರಾಕ್ಷಸ 220 ಹೋರಿಯನ್ನು ಸುಮಾರು 8 ವರ್ಷಗಳ ಹಿಂದೆ ಸಿದ್ದಲಿಂಗೇಶ ಅವರು 1 ಲಕ್ಷ ರೂಪಾಯಿ ಕೊಟ್ಟು ತಮಿಳುನಾಡಿನಿಂದ ಖರೀದಿಸಿ ತಂದಿದ್ರು. ಹೋರಿ (Bull) ಖರೀದಿಸಿ ತಂದ ಆರಂಭದಲ್ಲೇ ಹೋರಿ ಹಬ್ಬದ ಅಖಾಡದಲ್ಲಿ ದೊಡ್ಡ ಹೆಸರು ಮಾಡಿತು. ಅದ್ರಲ್ಲೂ ಹೋರಿ ಅಲಂಕಾರ ಮಾಡಿ ಕೊಬ್ಬರಿ ಹಾರ ಹಾಕಿ ಅಖಾಡದಲ್ಲಿ ಬಿಟ್ರೆ ಯಾರ ಕೈಗೂ ಸಿಗದಂತೆ ಥೇಟ್ ರಾಕ್ಷಸನ ಅವತಾರ ತಾಳಿದಂತೆ ಧೂಳೆಬ್ಬಿಸಿಕೊಂಡು ಓಡುತ್ತಿತ್ತು.
ಅಖಾಡದಿಂದ ಹೊರಗೆ ಬಂದ್ರೆ ಅತ್ಯಂತ ಮೃದು ಸ್ವಭಾವದ ಹೋರಿ ಎಲ್ಲರ ಅಚ್ಚುಮೆಚ್ಚು. ಶರವೇಗದ ಓಟದಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದುಕೊಂಡಿದೆ. ಹೀಗಾಗಿ ಹೋರಿಗೆ ಪ್ರತಿವರ್ಷ ಬರ್ತ್ ಡೇ ಆಚರಣೆ ಮಾಡಿಕೊಂಡು ಬರಲಾಗ್ತಿದೆ. ಹೋರಿಯ ಬರ್ತ್ ಡೇಗೆ ಬರೋ ಅಭಿಮಾನಿಗಳು 2 ವರ್ಷದಿಂದ ರಕ್ತದಾನ ಮಾಡ್ತಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ನೇತೃತ್ವದಲ್ಲಿ ಹೋರಿ ಮನೆಯವರು ರಕ್ತದಾನ ಶಿಬಿರ ಮಾಡ್ತಾರೆ. ಹೋರಿ ಹಬ್ಬಕ್ಕೆ ಬರೋ ನೂರಾರು ಅಭಿಮಾನಿಗಳಲ್ಲಿ ಹಲವರು ರಕ್ತದಾನ ಮಾಡ್ತಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್-ಸಿದ್ದು ರನ್ನಿಂಗ್ ರೇಸ್
ಕಳೆದ ವರ್ಷ 60ಕ್ಕಿಂತ ಅಧಿಕ ಜನರು ರಕ್ತದಾನ ಮಾಡಿದ್ರೆ, ಈ ವರ್ಷ ಈಗಾಗಲೆ 5್ತ0ಕ್ಕೂ ಅಧಿಕ ಜನರು ರಕ್ತದಾನ ಮಾಡಿದ್ದಾರೆ. ಈ ವರ್ಷ 5 ಕೆ.ಜಿ ಕೇಕ್ ತರಿಸಿ ಕೇಕ್ ಕತ್ತರಿಸಿ ಹೋರಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಲಾಯ್ತು. ಜೊತೆಗೆ ಹೋರಿ ಬರ್ತ್ ಡೇ ಗೆ ಬಂದ ಅಭಿಮಾನಿಗಳು ರಕ್ತದಾನ ಮಾಡಿ ಜೀವ ಉಳಿಸೋ ಕೆಲಸ ಮಾಡಿದ್ರು. ರಕ್ತದಾನ ಮಾಡದವರಿಗೆ ಹೋರಿ ಮನೆಯವರು ಜಿಲೇಬಿ, ಪಲಾವ್ ನ ಊಟ ಹಾಕಿದ್ರು.
Live Tv
[brid partner=56869869 player=32851 video=960834 autoplay=true]
ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ನಗರದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ.
ಹೃತಿಕ್ ರೋಷನ್ ಅವರ ರಕ್ತದ ಗುಂಪು ಬಿ-ನೆಗೆಟಿವ್ ಬಹಳ ಅಪರೂಪವಾಗಿದ್ದು, ವೈದ್ಯಕೀಯ ಕೇಂದ್ರಗಳು ಆಗಾಗ್ಗೆ ಅದರ ಕೊರತೆಯನ್ನು ಎದುರಿಸುತ್ತಿರುತ್ತವೆ. ಅವರು ಮಾಡುತ್ತಿರುವ ರಕ್ತದಾನ ಆಸ್ಪತ್ರೆಯ ಕೆಲ ರೋಗಿಗಳಿಗೆ ಸಹಾಯವಾಗಲೆಂದು ಹೃತಿಕ್ ರಕ್ತದಾನ ಮಾಡಲು ನಿರ್ಧರಿಸಿದ್ದರು.
ಹೃತಿಕ್ ಅವರು ಆಸ್ಪತ್ರೆಯಲ್ಲಿ, ವೈದ್ಯರೊಂದಿಗೆ ರಕ್ತದಾನ ಮಾಡುತ್ತಿರುವ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ರಕ್ತದ ಗುಂಪು ಬಿ-ನೆಗೆಟಿವ್ ಅಪರೂಪದ ಗುಂಪಾಗಿದೆ. ಆಸ್ಪತ್ರೆಗಳು ಆಗಾಗ್ಗೆ ಅದರ ಕೊರತೆಯನ್ನು ಅನುಭವಿಸುತ್ತವೆ. ಬಿ-ನೆಗಟಿವ್ ರಕ್ತದ ಗುಂಪು ಇರುವ ಹೆಚ್ಚಿನ ಜನರಿಗೆ ರಕ್ತದಾನ ಮಾಡಲು ಬ್ಲಡ್ ಬ್ಯಾಂಕಗಳು ಅನುಮತಿ ನೀಡುವುದಿಲ್ಲ.
ಆದರೆ ನನಗೆ ಅನುಮತಿಸಿದ್ದಕ್ಕಾಗಿ ಕೋಕಿಲಾಬೆನ್ ಆಸ್ಪತ್ರೆಗೆ ಧನ್ಯವಾದಗಳು. ಡಾ. ರಾಜೇಶ್ ಸಾವಂತ್, ಡಾ. ರಯೀಸ್ ಅಹ್ಮದ್ ಮತ್ತು ಡಾ. ಪ್ರದ್ನ್ಯಾ ಅವರ ವೃತ್ತಿಪರತೆಗೆ ಧನ್ಯವಾದಗಳು. ರಕ್ತದಾನ ಮಾಡುವುದು ದಾನಿಗಳ ಆರೋಗ್ಯಕ್ಕೆ ಒಳ್ಳೆಯದು ಅಂತ ನಿಮಗೆ ತಿಳಿದಿದೆಯೇ? ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಖಡಕ್ ಸುತ್ತೋಲೆ
ಹೃತಿಕ್ ಸುಸಾನೆ ಖಾನ್ ಜೊತೆಗಿನ ವಿಚ್ಛೇದನದ ಬಳಿಕ ಹೃತಿಕ್ ರೋಷನ್ ಹೆಸರು ಯಾರೊಂದಿಗೂ ತಳುಕು ಹಾಕಿಕೊಂಡಿರಲಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ರೋಷನ್ ಹೊಸ ಗರ್ಲ್ ಫ್ರೆಂಡ್ ವಿಚಾರವಾಗಿ ಸಖತ್ ವೈರಲ್ ಆಗಿದ್ದಾರೆ. ಅವರು ಸಿನಿಮಾ ನಟಿ ಸಬಾ ಆಜಾದ್ ಅವರೊಂದಿಗೆ ಮುಂಬೈನ ಹೊಟೇಲ್‍ವೊಂದರಿಂದ ಕೈ ಕೈ ಹಿಡಿದುಕೊಂಡು ಬರುತ್ತಿರುವ ದೃಶ್ಯ ಲಭ್ಯವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವ ಗುಸುಗುಸು ಬಾಲಿವುಡ್‍ನಲ್ಲಿ ಹಬ್ಬಿದೆ. ಇದನ್ನೂ ಓದಿ: ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್
ಹೃತಿಕ್ ಕೈಯಲ್ಲಿ ಈಗಾಗಲೇ ಮೂರು ಚಿತ್ರಗಳಿವೆ. ಅವರು ದೀಪಿಕಾ ಪಡುಕೋಣೆ ಒಳಗೊಂಡಿರುವ ಪ್ರಸ್ತುತ ಚಿತ್ರವಾದ ‘ಫೈಟರ್’ ಚಿತ್ರೀಕರಣದಲ್ಲಿದ್ದಾರೆ. ‘ವಿಕ್ರಮ್ ವೇದ’ದ ಹಿಂದಿ ರಿಮೇಕ್‍ನಲ್ಲಿ ಸಹ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಸೈಫ್ ಅಲಿ ಖಾನ್ ಕೂಡ ನಟಿಸಲಿದ್ದಾರೆ. ಹೃತಿಕ್ ಅವರು ‘ಕ್ರಿಶ್ 4’ ಮೂಲಕ ಮತ್ತೆ ಬಾಲಿವುಡ್ ಅಂಗಳದಲ್ಲಿ ಮಿಂಚಲಿದ್ದಾರೆ.
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಇಂದು ಅಭಿಮಾನಿಗಳಿಗೆ ಹಾಗೂ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ನಡುವೆ ನಟ ಶಿವರಾಜ್ ಕುಮಾರ್ ಅವರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ಹೌದು. ಅರಮನೆ ಮೈದಾನದಲ್ಲಿ ಶಿವಣ್ಣ ರಕ್ತದಾನ ಮಾಡಿದ್ದಾರೆ. ಬೆಳಗ್ಗಿಂದ ಇದುವರೆಗೆ ಒಟ್ಟು 15 ಜನರಿಂದ ರಕ್ತದಾನ ಮಾಡಿದ್ದು, 16 ಮಂದಿ ನೇತ್ರದಾನಕ್ಕೆ ಸಹಿ ಮಾಡಿದ್ದಾರೆ. ರಕ್ತದಾನದ ವೀಕ್ಷಣೆ ಮಾಡುತ್ತಿದ್ದ ಶಿವಣ್ಣ ನಂತರ ತಾವೂ ರಕ್ತ ನೀಡಿದ್ದಾರೆ.
ಅಕ್ಟೋಬರ್ 29 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದಿದ್ದರು. ಈ ವೇಳೆ ನಟ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು, ಈ ಮೂಲಕ ನಾಲ್ವರಿಗೆ ಬೆಳಕು ನೀಡಿದ್ದರು. ಪುನೀತ್ ಅವರ ಈ ಮಹತ್ಕಾರ್ಯದಿಂದ ಪ್ರೇರಪಣೆಗೊಂಡ ಅನೇಕ ಮಂದಿ ಯುವಕರು, ದಂಪತಿ ನೇತ್ರದಾನದ ಜೊತೆಗೆ ದೇಹದಾನಕ್ಕೂ ಸಹಿ ಹಾಕಿದ್ದರು. ಇದನ್ನೂ ಓದಿ: ಅಪ್ಪು ಆತ್ಮದ ಜೊತೆ ಮಾತಾಡಿದ್ದಾಗಿ ವೀಡಿಯೋ ಅಪ್ಲೋಡ್- ಚಾರ್ಲಿಗೆ ಅಭಿಮಾನಿಗಳು ಕ್ಲಾಸ್
ಇಂದು ಬೆಳಗ್ಗೆ 11.30ಯಿಂದ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ನಡೆಯುತ್ತಿದೆ. ಅಪ್ಪು ಅಭಿಮಾನಿಗಳಿಗೆ ವೆಜ್-ನಾನ್‍ವೆಜ್ ವ್ಯವಸ್ಥೆ ಕೂಡ ಇದ್ದು, ಸುಮಾರು 5 ಸಾವಿರ ಜನರಿಗೆ ವೆಜ್, ಉಳಿದವರಿಗೆ ನಾನ್‍ವೆಜ್ ರೆಡಿ ಮಾಡಲಾಗಿದೆ. ಮುಂಜಾನೆ 4 ಗಂಟೆಗೆ ಚಿಕ್ಕಮಗಳೂರಿನಿಂದ ಬಂದ 2 ಟನ್ ಚಿಕನ್ ಬಂದಿತ್ತು. 700 ಬಾಣಸಿಗರು, ಸಹಾಯದವರು, ಕ್ಲೀನಿಂಗ್ ಕೆಲಸದವರು ಸೇರಿ 1,500 ಮಂದಿ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು: ಕೋವಿಡ್ ಸಂಕಷ್ಟದಿಂದಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಆಹಾರ ಪೆÇಟ್ಟಣ್ಣ ನೀಡುವ ಮೂಲಕ ರಾಗಿಣಿ ದ್ವಿವೇದಿ ನೆರವಾಗುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಇಂದು ರಕ್ತದಾನ ಮಾಡಿದ್ದಾರೆ. ಇಂದು ವಿಶೇಷ ದಿನವಾಗಿದೆ. ರಕ್ತ ಮತ್ತು ಪ್ಲಾಸ್ಮಾಕ್ಕೆ ತುಂಬಾ ಅಗತ್ಯವಿರುವುದರಿಂದ ನಾನು ರಕ್ತದಾನವನ್ನು ಮಾಡಿದ್ದೇನೆ. ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ರಕ್ತದಾನವನ್ನು ಮಾಡಿ ಎಂದು ಮನವಿ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಾಗಿಣಿ ರಕ್ತ ದಾನ ಮಾಡಿ ಅಭಿಮಾನಿಗಳಿಗೂ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಎಲ್ಲೆಡೆ ಕೊರೊನಾ ಭೀತಿಯಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಯಾವುದೇ ಲಸಿಕೆ ಹಾಕಿಸಿಕೊಂಡರೆ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಬೇರೆ ರೋಗಿಗಳಿಗೆ, ಅಪಘಾತಕ್ಕೊಳಗಾದವರು ಸೇರಿದಂತೆ ಹಲವರಿಗೆ ರಕ್ತದ ಅಭಾವ ಎದುರಾಗಲಿದೆ ಎಂದು ಸಾಕಷ್ಟು ಮಂದಿ ಸೆಲೆಬ್ರಿಟಿಗಳು ರಕ್ತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಅಂತೆಯೇ ರಾಗಿಣಿ ಸಹ ಇಂದು ರಕ್ತದಾನ ಮಾಡುವ ಮೂಲಕ ಮನವಿ ಮಾಡಿದ್ದಾರೆ.
ರಾಗಿಣಿ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗಿದ್ದಾರೆ. ನಿತ್ಯ ಆಹಾರ ಪೆÇಟ್ಟಣ್ಣಗಳನ್ನು ಅಗತ್ಯವಿರುವವರಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಸೆಲೆಬ್ರೆಟಿ ಸ್ಟಾರ್‍ಗಳು ಹಲವರು ಸಹಾಯವನ್ನು ಮಾಡುತ್ತಿದ್ದಾರೆ.
ಲಕ್ನೋ: ನವವಿವಾಹಿತ ಜೋಡಿ ತಮ್ಮ ಮದುವೆಯ ದಿನದಂದೇ ರಕ್ತದಾನ ಮಾಡಿ ಬಾಲಕಿಯ ಜೀವ ಉಳಿಸಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಶಿಶ್ ಕುಮಾರ್ ಮಿಶ್ರಾ ಮದುವೆಯಾಗಿ ತಕ್ಷಣ ಬಾಲಕಿಗೆ ರಕ್ತದಾನ ಮಾಡಿದ್ದಾರೆ. ನಂತರ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಂಡು ಅಡಿ ಬರಹ ಬರದುಕೊಂಡಿದ್ದಾರೆ.
मेरा भारत महान | एक बच्ची को ब्लड की जरूरत थी,कोई भी रक्तदान करने को सामने नही आ रहा था, क्योंकि वो किसी दूसरे की बच्ची थी,अपनी होती तो शायद कर भी देते, खैर, शादी के दिन ही इस जोड़े ने रक्तदान कर बच्ची की जान बचायी | Jai Hind,#PoliceMitra#UpPoliceMitra#BloodDonationpic.twitter.com/tXctaRe1nR
ಬಾಲಕಿಗೆ ರಕ್ತದ ಅವಶ್ಯಕತೆ ಇತ್ತು ಆದರೆ ಯಾರು ಕೂಡ ರಕ್ತಾದಾನ ಮಾಡಲು ಮುಂದಾಗಿರಲಿಲ್ಲ. ಹಾಗಾಗಿ ಮದುವೆಯ ದಿನ ಮದುವೆಯ ಉಡುಗೆಯಲ್ಲೇ ತೆರಳಿ ರಕ್ತದಾನ ಮಾಡಿ ಬಾಲಕಿಯ ಜೀವ ಉಳಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಆಶಿಶ್ ಕುಮಾರ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ಹಲವರು ಮದುವೆಯ ಶುಭಾಶಯ ತಿಳಿಸಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಉತ್ತರಪ್ರದೇಶದ ಪೊಲೀಸ್ ಇಲಾಖೆ ಈ ಪೋಸ್ಟ್ ನ್ನು ರೀ ಟ್ವೀಟ್ ಮಾಡಿ ಯುವಕರಿಗೆ ರಕ್ತದಾನ ಮಾಡುವಂತೆ ಮನವಿ ಮಾಡಿಕೊಂಡಿದೆ.