Tag: blood bank

  • ಬ್ಲಡ್ ಬ್ಯಾಂಕ್ ತೆರೆಯಲಿದ್ದಾರೆ ರಿಯಲ್ ಹೀರೋ

    ಬ್ಲಡ್ ಬ್ಯಾಂಕ್ ತೆರೆಯಲಿದ್ದಾರೆ ರಿಯಲ್ ಹೀರೋ

    ಮುಂಬೈ: ಕೊರೊನಾ ಕಾಲ್‍ಡೌನ್ ಸಮಯದಲ್ಲಿ ಸಮಾಜಮುಖಿ ಕಾರ್ಯಗಳಿಂದ ಸುದ್ದಿಯಾಗಿದ್ದ ಸೋನು ಸೂದ್ ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

    ಸೋನು ಸೂದ್ ಬೃಹತ್ ಬ್ಲಡ್ ಬ್ಯಾಂಕ್ ತೆರೆಯುತ್ತಿದ್ದಾರೆ. ಜೀವಗಳನ್ನು ಉಳಿಸೋಣ, ನಮ್ಮ ಸ್ವಂತ ಬ್ಲಡ್ ಬ್ಯಾಂಕ್ ಶೀಘ್ರದಲ್ಲೇ ಬರಲಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಸಿದ್ದಾರೆ.

    ದೇಶದ ಅತಿದೊಡ್ಡ ಬ್ಲಡ್ ಬ್ಯಾಂಕ್ ಎಂದು ಗುರುತಿಸಲ್ಟಟ್ಟಿರುವ ‘ಸೋನು ಫಾರ್ ಯು’ ಅಪರೂಪದ ರಕ್ತ ಗುಂಪುಗಳನ್ನು ಹೊಂದಿರುವ ರೋಗಿಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿದ ಸೋನುಸೂದ್, ‘ಸೋನು ಫಾರ್ ಯು’ ನನ್ನ ಮತ್ತು ನನ್ನ ಸ್ನೇಹಿತ ಜಾನ್ಸನ್ ಅವರ ನೇತೃತ್ವದಲ್ಲಿ ಮೂಡಿ ಬರಲಿರುವ ಯೋಜನೆ. ಪ್ರತಿ ಬಾರಿಯೂ ಯಾರಿಗಾದರೂ ತುರ್ತಾಗಿ ರಕ್ತ ಬೇಕಾಗುತ್ತದೆ ಮತ್ತು ನಾವು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತೇವೆ. ಆಗ ಅನೇಕರು ಪ್ರತಿಕ್ರಿಯೆ ನೀಡುತ್ತಾರೆ. ಆದ್ದರಿಂದ ಈ ಉದ್ದೇಶವನ್ನು ಪೂರೈಸುವ ಆ್ಯಪ್ ಏಕೆ ರಚಿಸಬಾರದು ಎಂದು ಯೋಚಿಸಿದೆವು. ಭಾರತದಲ್ಲಿ 12,000 ರೋಗಿಗಳು ರಕ್ತದಾನದ ಕೊರತೆಯಿಂದ ಸಾಯುತ್ತಾರೆ. ಈ ಆ್ಯಪ್ ಮೂಲಕ 20 ನಿಮಿಷಗಳಲ್ಲಿ ಒಬ್ಬರ ಜೀವವನ್ನು ಉಳಿಸಬಹುದು. ಹೀಗಾಗಿ ನಾವು ಯೋಜನೆಗೆ ಮುಂದಾಗಿದ್ದೇವೆ ಎಂದಿದ್ದಾರೆ.

    ರಕ್ತದ ಅಗ್ಯವಿರುವವರಿಗೆ ಸರಿಯಾದ ಸಮಯಕ್ಕೆ ನೆರವಾಗುವುದು ಈ ಆ್ಯಪ್‍ನ ಉದ್ದೇಶವಾಗಿದೆ. ಅಲ್ಲದೇ ರಕ್ತ ಬೇಕಾಗಿರುವವರು ನೇರವಾಗಿ ರಕ್ತದಾನಿಗಳನ್ನು ಸಂಪರ್ಕಕಿಸಬಹುದಾಗಿದೆ. ರಕ್ತದಾನಿಯೊಬ್ಬರು ತುರ್ತು ಅವಶ್ಯಕತೆ ಇರುವ ಸಂದರ್ಭಗಳಲ್ಲಿ ಸಮೀಪದ ದಾನಿಗಳು ತಕ್ಷಣ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಬಹುದಾಗಿದೆ.

  • 502 ಕೆ.ಜಿ. ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳ ಬಂಧನ

    502 ಕೆ.ಜಿ. ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳ ಬಂಧನ

    – ಓರ್ವ ಮಹಿಳೆ ಸೇರಿ ಮೂವರ ಬಂಧನ

    ಬೆಂಗಳೂರು: ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದು, ಈ ವೇಳೆ ಮೂರು ವರ್ಷಗಳ ಹಿಂದೆ ಮಾಡಿದ ಕೊಲೆ ಪ್ರಕಣವನ್ನು ಸಹ ಬಾಯ್ಬಿಟ್ಟಿದ್ದಾನೆ.

    ಆರ್‍ಟಿ ನಗರ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು, ಓರ್ವ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸುಹೇಲ್ ಖಾನ್, ಅಬ್ದುಲ್ ಬಸೀರ್, ಅನೀಸಾ ಫಾತಿಮಾ ಬಂಧಿತ ಆರೋಪಿಗಳು. ಬಂಧಿತರಿಂದ 502 ಕೆ.ಜಿ. ರಕ್ತಚಂದನ ಮರದ ತುಂಡುಗಳು ಹಾಗೂ ಒಂದು ಟಾಟ್ ಏಸ್ ವಾಹನ ಜಪ್ತಿ ಮಾಡಲಾಗಿದೆ.

    ಆರ್‍ಟಿ ನಗರದಿಂದ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ವೇಳೆ ವಿಚಾರಣೆಗೊಳಪಡಿಸಿದಾಗ ಮೂರು ವರ್ಷಗಳ ಹಿಂದಿನ ಕೊಲೆ ಪ್ರಕರಣವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.

    ಬಂಧಿತ ಆರೋಪಿಗಳ ಫೈಕಿ ಸುಹೇಲ್ ಖಾನ್ ಈ ಹಿಂದೆ ಆರ್‍ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. 2017ರಲ್ಲಿ ನೂರ್ ಎಂಬಾತನನ್ನು ಕಿಡ್ನಾಪ್ ಮಾಡಿ ಗೌರಿಬಿದನೂರಿನ ಫಾರ್ಮ್ ಹೌಸ್ ನಲ್ಲಿ ಕೊಲೆ ಮಾಡಿದ್ದ. ಈ ಬಗ್ಗೆ ಆರ್‍ಟಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಉಳಿದ ಮೂವರು ಕೊಲೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಆರ್‍ಟಿ ನಗರ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.

  • ಕೊರೊನಾ ಸಮಯದಲ್ಲೂ ಕಲಬುರಗಿಯಲ್ಲಿ ಆ್ಯಕ್ಟಿವ್ ಆಗಿದೆ ರಕ್ತದಾನಿಗಳ ತಂಡ

    ಕೊರೊನಾ ಸಮಯದಲ್ಲೂ ಕಲಬುರಗಿಯಲ್ಲಿ ಆ್ಯಕ್ಟಿವ್ ಆಗಿದೆ ರಕ್ತದಾನಿಗಳ ತಂಡ

    – ಕೊರೊನಾ ಸಂದರ್ಭದಲ್ಲಿ ರಕ್ತ ಸಿಗದ್ದನ್ನು ಮನಗಂಡು ಕ್ಯಾಂಪ್ ಆಯೋಜನೆ
    – ರಕ್ತದ ಜೊತೆ ಪ್ಲಾಸ್ಮಾ ಸಹ ಸಂಗ್ರಹ

    ಕಲಬುರಗಿ: ಕೊರೊನಾ ವೈರಸ್ ಹಿನ್ನೆಲೆ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಪರಿಸ್ಥಿತಿ ಅರಿತ ಯುವಕರ ತಂಡ ತಮ್ಮದೇ ಗುಂಪು ಕಟ್ಟಿಕೊಂಡು ರಕ್ತ ಸಂಗ್ರಹಕ್ಕೆ ನಿಂತಿದ್ದು, ಕ್ಯಾಂಪ್ ತೆರೆಯುವ ಮೂಲಕ ರಕ್ತ ಸಂಗ್ರಹಿಸುತ್ತಿದ್ದಾರೆ. ಮಾತ್ರವಲ್ಲದೆ ಕೊರೊನಾ ಸೋಂಕಿತರಿಗೆ ಸಹಾಯವಾಗಲು ಪ್ಲಾಸ್ಮಾ ಸಹ ಸಂಗ್ರಹಿಸುತ್ತಿದ್ದಾರೆ.

    ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಹಲವರು ಸಾವನ್ನಪ್ಪಿದ ಬಳಿಕ ಜಿಲ್ಲೆಯಲ್ಲಿ ಹಲವು ರಕ್ತ ದಾನಿಗಳು ತುರ್ತು ಸಮಯದಲ್ಲಿ ರಕ್ತ ದಾನ ಮಾಡಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಜಿಲ್ಲೆಯ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ತುರ್ತು ಸಮಯಕ್ಕೆ ರಕ್ತ ಸಿಗದೆ ರೋಗಿಗಳ ಸಂಬಂಧಿಕರು ಪರದಾಡುವಂತಾಗಿದೆ. ಇದನ್ನು ಅರಿತ ಕಲಬುರಗಿಯ ಶರಣು ಪಪ್ಪಾ ನೇತೃತ್ವದ ಜೀ 99 ಹಾಗೂ ಜೀ 55 ಸದಸ್ಯರ ತಂಡ ಜಿಲ್ಲೆಯ ಹಲವೆಡೆ ಬ್ಲಡ್ ಕ್ಯಾಂಪ್ ಆಯೋಜಿಸಿದೆ. ಈ ಮೂಲಕ ಕೊರೊನಾದಂತಹ ಕಷ್ಟ ಕಾಲದಲ್ಲಿ ಹಣ ನೀಡಿದರೂ ರೋಗಿಗಳಿಗೆ ರಕ್ತ ಸಿಗದ ಸಮಯದಲ್ಲಿ ಅವರ ನೇರವಿಗೆ ನಿಂತಿದೆ. ಅಪಘಾತ, ಡೆಲಿವರಿಯಂತಹ ತುರ್ತು ಸಮಯದಲ್ಲಿ ರಕ್ತದ ಅವಶ್ಯವಿರುವವರ ನೇರವಿಗೆ ಧಾವಿಸಿದ್ದಾರೆ.

    ಸದ್ಯ ಈ ತಂಡದಲ್ಲಿ ರಕ್ತ ದಾನ ಮಾಡಲು 300ಕ್ಕೂ ಅಧಿಕ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗ ನಿರೋಧಕ ಶಕ್ತಿ ತೀರಾ ಕಡಿಮೆ ಇರುವವರಿಗೆ ಪ್ಲಾಸ್ಮಾ ಚಿಕಿತ್ಸೆಯ ಅವಶ್ಯವಿದ್ದರೆ ಅಂತಹವರಿಗೆ ಪ್ಲಾಸ್ಮಾ ವ್ಯವಸ್ಥೆಯನ್ನು ಸಹ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಿಂದ ಪ್ಲಾಸ್ಮಾ ದಾನವಾಗಿ ಪಡೆಯುತ್ತಿದ್ದು, ಈಗಾಗಲೇ ಕಲಬುರಗಿ ಪೊಲೀಸ್ ಪೇದೆ ಜಗದೀಶ್ ಅವರಿಂದ ಪ್ಲಾಸ್ಮಾ ಪಡೆದು, ಮತ್ತೊಬ್ಬರಿಗೆ ನೀಡುವ ಮೂಲಕ ತಂಡ ಒಂದು ಜೀವ ಉಳಿಸಿದೆ.

    ಕೊರೊನಾದಂತಹ ಸಮಯದಲ್ಲಿ ರಕ್ತ ನೀಡಿದರೆ ಸೋಂಕು ಬರುತ್ತೆ ಎಂಬ ಭಯದಲ್ಲಿರುವ ಜನರಿಗೆ ಅರಿವು ಮೂಡಿಸಲಾಗುತ್ತಿದ್ದು, ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಜೀ 99 ತಂಡದ ಸದಸ್ಯರು ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಕೊರೊನಾ ವಾರಿಯರ್ಸ್ ಗಳಂತೆ ಇವರು ಸಹ ಜನರ ಜೀವ ಉಳಿಸಲು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.

  • ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಅಕ್ರಮ ಮಾರಾಟ- 13 ಲಕ್ಷ ರೂ. ಮೋಸ..!

    ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಅಕ್ರಮ ಮಾರಾಟ- 13 ಲಕ್ಷ ರೂ. ಮೋಸ..!

    – ಬ್ಲಡ್ ಬ್ಯಾಂಕ್ ಮೇಲ್ವಿಚಾರಕನಿಂದಲೇ ಅಕ್ರಮ ದಂಧೆ

    ಚಿಕ್ಕಬಳ್ಳಾಪುರ: ರಾಜ್ಯದಲ್ಲೇ ಹೆಸರಾಂತ ಬ್ಲಡ್ ಬ್ಯಾಂಕ್‍ನಲ್ಲೇ ಸಂಸ್ಥೆಯ ಮೇಲ್ವಿಚಾರಕನೊರ್ವ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಜಿಲ್ಲೆಯ ರೆಡ್‍ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರ ರಾಜ್ಯದಲ್ಲೇ ಮಾದರಿ ಕೇಂದ್ರ ಎಂದು ಹೆಸರುವಾಸಿ. ಇಂತಹ ಮಾದರಿ ಬ್ಲಡ್ ಬ್ಯಾಂಕ್‍ನಲ್ಲೇ ಸಂಸ್ಥೆಯ ಮೇಲ್ವಿಚಾರಕ ರವಿ ಲಂಬಾಣಿ ಎಂಬಾತ ಬರೋಬ್ಬರಿ 13 ಲಕ್ಷ ರೂಪಾಯಿ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಅನ್ನೋ ಹಾಗೆ ಆಡಳಿತ ಮಂಡಳಿ ಈ ಕುರಿತು ತಡವಾಗಿ ಎಚ್ಚೆತ್ತಿದ್ದು, ಕೊನೆಗೆ ದುಡ್ಡು ಕೊಡಿಸುವಂತೆ ಪೋಲಿಸರ ಮೊರೆ ಹೋಗಿದೆ.

    ಮನುಷ್ಯರ ಜೀವ ಉಳಿಸೋ ಜೀವಾಮೃತವನ್ನೇ ಕದಿಯೋ ಅಕ್ರಮ ದಂಧೆ ಬೆಳಕಿಗೆ ಬಂದಿದೆ. ರವಿ ಲಂಬಾಣಿ ರಕ್ತದಿಂದ ಬೇರ್ಪಡಿಸುವ ದುಬಾರಿ ಮೌಲ್ಯದ ಪ್ಲಾಸ್ಮಾವನ್ನು ಅಕ್ರಮವಾಗಿ ಕೆಲವು ಕಂಪನಿಗಳಿಗೆ ಮಾರಾಟ ಮಾಡಿ, ಬರೋಬ್ಬರಿ 13 ಲಕ್ಷ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದಾನೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಆರೋಪಿಸಿದೆ.

    ರಕ್ತನಿಧಿ ಕೇಂದ್ರದಲ್ಲಿ ಪ್ಲಾಸ್ಮಾ ಬೇರ್ಪಡಿಸಿದ ನಂತರ ರಿಲಯನ್ಸ್ ಕಂಪನಿಗೆ ಕೆಜಿ ಲೆಕ್ಕದಲ್ಲಿ ಮಾರಾಟವಾಗ್ತಿತ್ತು. ಆದ್ರೆ ಆರೋಪಿ ರವಿ ಹೆಮರಸ್ ಅನ್ನೋ ಹೈದರಾಬಾದ್ ಮೂಲದ ಕಂಪನಿಗೆ ಪ್ಲಾಸ್ಮಾ ಮಾರಾಟಕ್ಕೆ ಒಪ್ಪಂದ ಮಾಡಿಸಿದ್ದಾನೆ. 2015 ರಿಂದ 2016ರವರೆಗೆ 1726 ಲೀಟರ್ ಬ್ಲಡ್ ಪ್ಲಾಸ್ಮಾ ಉತ್ಪಾದನೆಯಾಗಿದ್ರೂ, ರವಿ 880 ಲೀಟರ್ ಪ್ಲಾಸ್ಮಾ ಮಾತ್ರ ಉತ್ಪಾದನೆಯಾಗಿದೆ ಅಂತ ಲೆಕ್ಕ ತೋರಿಸಿ ದುಡ್ಡು ನುಂಗಿದ್ದಾನೆ. ಈ ಕುರಿತು ಪ್ರಶ್ನಿಸಿದ್ರೆ ನನ್ನದೇನು ತಪ್ಪಿಲ್ಲ, ಹಿಂದಿನ ಕಾರ್ಯದರ್ಶಿಗಳು ಹೇಳಿದಂತೆ ಮಾಡಿದ್ದೇನೆ ಅಂತ ಉತ್ತರಿಸುತ್ತಿದ್ದಾನೆ.

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೆಡ್‍ಕ್ರಾಸ್ ಆಡಳಿತ ಮಂಡಳಿ, ತಮಗೆ ನಷ್ಟವಾಗಿರುವ ಹಣ ಕೊಡಿಸಿ, ಆರೋಪಿ ರವಿ ಲಂಬಾಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಕ್ತದಾನದಲ್ಲಿ ಸೆಂಚುರಿ ಸಾಧನೆ – ಚಿಕ್ಕಬಳ್ಳಾಪುರದಲ್ಲಿದ್ದಾರೆ ಮಹಾದಾನಿ

    ರಕ್ತದಾನದಲ್ಲಿ ಸೆಂಚುರಿ ಸಾಧನೆ – ಚಿಕ್ಕಬಳ್ಳಾಪುರದಲ್ಲಿದ್ದಾರೆ ಮಹಾದಾನಿ

    ಚಿಕ್ಕಬಳ್ಳಾಪುರ: ಇಂದು ವಿಶ್ವ ರಕ್ತದಾನಿಗಳ ದಿನ, ವಿಶ್ವದ ಎಲ್ಲಾ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನ ಆಚರಿಸಿಲಾಗುತ್ತದೆ. ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ, ರಕ್ತದಾನ ಮಾಡುವುದರಲ್ಲಿ ಶತಕ ಮೀರಿಸಿದ ಅಪರೂಪದ ರಕ್ತದಾನಿ-ಮಹಾದಾನಿಯೊಬ್ಬರು ವ

    ಆಡು ಮುಟ್ಟುದ ಸೊಪ್ಪಿಲ್ಲ, ಅನ್ನೋ ಹಾಗೆ ಇವರು ರಕ್ತದಾನ ಮಾಡದ ಪ್ರಖ್ಯಾತ ಆಸ್ಪತ್ರೆಗಳಿಲ್ಲ, ಶಿಬಿರಗಳಿಲ್ಲ. ಅವರೇ ಚಿಕ್ಕಬಳ್ಳಾಪುರ ನಗರದ ಸೂರ್ಯನಾರಾಯಣಶೆಟ್ಟಿ. ರಕ್ತದಾನವನ್ನೇ ಮಾಡಲು ಹಿಂಜರಿಯುತ್ತಿದ್ದ 80 ರ ದಶಕದಿಂದಲೂ ನಿರಂತರ ರಕ್ತದಾನ ಮಾಡುವ ಮೂಲಕ ಅದೆಷ್ಟೋ ಮಂದಿಯ ಪ್ರಾಣ ಉಳಿಸಿದ ಮಹಾದಾನಿ ಇವರು.

    104 ಬಾರಿ ರಕ್ತದಾನ:
    1982 ರಲ್ಲಿ ಮೊಟ್ಟ ಮೊದಲಿಗೆ ಆರಂಭವಾದ ಇವರ ರಕ್ತದಾನ 2009 ರವರೆಗೆ, 27 ವರ್ಷಗಳ ಕಾಲ ಸಾಗಿ ಬರೋಬ್ಬರಿ 104 ಬಾರಿ ರಕ್ತದಾನ ಮಾಡಿದ ಕೀರ್ತಿ, ಹೆಗ್ಗಳಿಕೆ ಈ ಸೂರ್ಯನಾರಾಯಣ ಶೆಟ್ಟಿಯವರದ್ದು. ಹೌದು ಗುರು ಪ್ರಿಂಟಿಂಗ್ ಪ್ರೆಸ್ ಮೂಲಕ ಬದುಕು ಕಟ್ಟಿಕೊಂಡಿದ್ದ ಸೂರ್ಯನಾರಾಯಣ ಶೆಟ್ಟಿಯವರಿಗೆ ಅದೊಂದು ದಿನ ತಮ್ಮ ಶ್ರೀಮತಿ ಹಾಗೂ ಸಂಬಂಧಿಕರೊಬ್ಬರ ರಕ್ತಕ್ಕೆ ಎದುರಾದ ಅಭಾವದ ಕಹಿ ಅನುಭವ, ಅವರನ್ನೇ ರಕ್ತದಾನ ಮಾಡುವಲ್ಲಿ ಪ್ರೇರೆಪಿಸಿತ್ತು.

    ಸದ್ಯ ರಕ್ತದಾನ ಮಾಡಲು ವಯಸ್ಸು ಅಡ್ಡಿ.
    ಇನ್ನೂ 18 ವರ್ಷ ಮೇಲ್ಪಟ್ಟು ಹಾಗೂ 60 ವರ್ಷ ವಯೋಮಾನದವರು ಮಾತ್ರ ರಕ್ತದಾನ ಮಾಡಬಹದು. ಅಂತೆಯೇ ಸದ್ಯ 68 ವರ್ಷದ ಸೂರ್ಯನಾರಾಯಣಶೆಟ್ಟಿಯವರು ತಮ್ಮ 60 ನೇ ವಯಸ್ಸಿನ ನಂತರ ವಯೋಸಹಜ ಸ್ಥಿತಿಯಿಂದ ರಕ್ತದಾನ ಮಾಡುತ್ತಿಲ್ಲ. ಆದ್ರೆ ಅವರು ರಕ್ತದಾನ ಮಾಡದಿದ್ದರೂ ಇತರರ ಕೈಯಲ್ಲಿ ರಕ್ತದಾನ ಮಾಡಿಸುವ ಕಾರ್ಯ ಮುಂದುವರೆಸಿದ್ದಾರೆ. ಈಗಲೂ ಹಲವು ರಕ್ತದಾನಿಗಳ, ರಕ್ತ ನಿಧಿ ಕೇಂದ್ರಗಳ ವ್ಯವಸ್ಥಾಪಕರ ಜೊತೆ ನಿರಂತರ ಸಂಪರ್ಕದಲ್ಲಿರುವ ಸೂರ್ಯನಾರಾಯಣ ಶೆಟ್ಟಿಯವರು ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಿದ್ದವರಿಗೆ ರಕ್ತ ಒದಗಿಸಿಕೊಡುವ ಕೆಲಸ ಮಾಡ್ತಾರೆ. ಇದಲ್ಲದೆ ರಕ್ತದಾನ ಶಿಬಿರಗಳನ್ನ ಆಯೋಜನೆ ಮಾಡುವುದು ಹಾಗೂ ಬೇರೋಬ್ಬರು ಆಯೋಜನೆ ಮಾಡುವ ರಕ್ತದಾನದ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಇರ್ತಾರೆ.

    ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್:
    ಸೋಷಿಯಲ್ ಮೀಡಿಯಾದ ಹಲವು ವಾಟ್ಸಪ್ ನ ರಕ್ತದಾನಿಗಳ ಗ್ರೂಪ್ ಗಳಲ್ಲೂ ಆಕ್ಟೀವ್ ಆಗಿರುವ ಸೂರ್ಯನಾರಾಯಣ ಶೆಟ್ಟಿಯವರು, ಸದಾ ರಕ್ತದಾನದ ಮಹತ್ತರ ಕಾಯಕದಲ್ಲಿ ಒಂದಲ್ಲ ಒಂದು ರೀತಿ ನಿರತರಾಗಿರುತ್ತಾರೆ. ಹೈದರಾಬಾದ್ ಬ್ಲಡ್ ಡೊನೇಟರ್ ಗ್ರೂಪ್ಸ್, ಕೊಪ್ಪಳ ರಕ್ತದಾನಿಗಳ ಗ್ರೂಪ್ ಸೇರಿದಂತೆ ಹಲವು ರಕ್ತದಾನಿಗಳ ವಾಟ್ಸಾಪ್ ಗ್ರೂಪ್ ಗಳಲ್ಲಿ ಆಕ್ಟೀವ್ ಆಗಿ ಇರ್ತಾರೆ . ಇನ್ನೂ ರಕ್ತ ಬೇಕಂತ ಯಾರಾದ್ರೂ ಮೇಸೆಜ್ ಮಾಡಿದರೆ ಸಾಕು ಥಟ್ ಅಂಥ ಪ್ರತಿಕ್ರಿಯಿಸ್ತಾರೆ. ರಕ್ತ ವನ್ನ ಒದಗಿಸುವ, ರಕ್ತದಾನಿಯ ಮಾಹಿತಿಯನ್ನ ನೀಡುವ ಸಲುವಾಗಿ ತಮ್ಮ ಕೈಲಾದ ಸಹಾಯವನ್ನ ಮಾಡ್ತಾರೆ. ಪತಿಯ ಈ ಕಾರ್ಯಕ್ಕೆ ಪತ್ನಿ ತೇಜಾವತಿಯವರೂ ಸಹ ಪ್ರೋತ್ಸಾಹಿಸುತ್ತಿದ್ದಾರೆ.

    ಯಾವುದೇ ಪ್ರಚಾರದ ಬಯಕೆ ಇಲ್ಲದ ಸೂರ್ಯನಾರಾಯಣ ಶೆಟ್ಟಿ:
    ಸೂರ್ಯನಾರಾಯಣರ ಸಮಾಜಮುಖಿ ಕಾರ್ಯಕ್ಕೆ ಸ್ವಯಂಪ್ರೇರಿತವಾಗಿ ಹಲವು ಸಂಘಟನೆಗಳು ಮುಂದೆ ಬಂದು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನ ನೀಡಿವೆ. ಆದ್ರೆ ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ರೂ ಯಾವುದೇ ಪ್ರತಿಫಲಾಪೇಕ್ಷೆ ಹಾಗೂ ಕನಿಷ್ಠ ಪ್ರಚಾರದ ಹುಚ್ಚು ಇಲ್ಲದೆ ಸೂರ್ಯನಾರಾಯಣಶೆಟ್ಟಿಯವರು ತಮ್ಮ ಸೇವೆ ಮುಂದುವೆರೆಸಿಕೊಂಡು ಹೋಗುತ್ತಿದ್ದಾರೆ. 104 ಬಾರಿ ರಕ್ತ ಕೊಟ್ಟಿದ್ರೂ ಇದುವರೆಗೂ ತಮ್ಮ ನೆನೆಪಿಗಾಗಲೀ ಅಥವಾ ಪ್ರಚಾರಕ್ಕಾಗಲಿ ರಕ್ತದಾನ ಮಾಡುವ ಕನಿಷ್ಠ ಒಂದು ಫೋಟೋ ಕೂಡ ಇಟ್ಟುಕೊಂಡಿಲ್ಲ. ಸದ್ಯ ಇದ್ದ ಏಕೈಕ ಮಗಳಿಗೆ ಮದುವೆ ಮಾಡಿ ಹಾಯಾಗಿರೋ ಸೂರ್ಯನಾರಾಯಣ ಶೆಟ್ಟಿಯವರು ಸ್ನೇಹಿತರ ಪಾಲುದಾರಿಕೆಯ ಫೈನಾನ್ಸ್ ಕಂಪನಿಯಲ್ಲಿ ತಮ್ಮನ್ನ ತೊಡಗಿಸಿಕೊಂಡು ಪತ್ನಿ ಜೊತೆ ಸುಂದರ ಸಂಸಾರ ಸಾಗಿಸುತ್ತಾ ಬದುಕು ಸವೆಸುತ್ತಿದ್ದಾರೆ. ವಿಶ್ವರಕ್ತದಾನಿಗಳ ದಿನ ಇಂತಹ ರಕ್ತದಾನಿ-ಮಹಾದಾನಿಗೆ ನಮ್ಮ-ನಿಮ್ಮದೊಂದು ಸಲಾಂ.