Tag: blood

  • ಕಾವೇರಿ ವಿವಾದ : ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನಟ ನೆನಪಿರಲಿ ಪ್ರೇಮ್

    ಕಾವೇರಿ ವಿವಾದ : ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನಟ ನೆನಪಿರಲಿ ಪ್ರೇಮ್

    ಮೊನ್ನೆಯಷ್ಟೇ ಕಾವೇರಿ (Cauvery) ನದಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ನಲ್ಲಿ ಭಾಗಿಯಾಗಿದ್ದ ನಟ ನೆನಪಿರಲಿ ಪ್ರೇಮ್ (Nenapirali Prem) ,ಇಂದು ಪತ್ರ  (Letter) ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕರೆಕೊಟ್ಟಿದ್ದ ರಕ್ತದಲ್ಲಿ (Blood) ಪ್ರಧಾನಿಗೆ (Narendra Modi)  ಪತ್ರ ಬರೆಯಿರಿ ಚಳವಳಿಯಲ್ಲಿ ಭಾಗಿಯಾಗಿ, ತಮ್ಮ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ ಪ್ರೇಮ್.

    ಕನ್ನಡ ನೆಲ-ಜಲ ವಿಷಯದಲ್ಲಿ ಹೋರಾಡಲು ಪ್ರೇಮ್ ಯಾವತ್ತಿಗೂ ಮುಂದು. ಅನೇಕ ಹೋರಾಟಗಳಲ್ಲೂ ಅವರು ಭಾಗಿಯಾಗಿದ್ದಾರೆ. ಇದೀಗ ರಕ್ತದಲ್ಲಿ ಪತ್ರ ಬರೆದು, ಆ ಪತ್ರವನ್ನು ಪ್ರಧಾನಿ ಕಳುಹಿಸಿದ್ದಾರೆ. ಕಾವೇರಿ ವಿಷಯದಲ್ಲಿ ಮಧ್ಯಸ್ತಿಕೆ ವಹಿಸಿ, ನಮ್ಮ ನೆಲದ ರೈತರಿಗೆ ನ್ಯಾಯ ದೊರಕಿಸಿ ಎಂದು ಪತ್ರದಲ್ಲಿ ಅವರು ಬರೆದಿದ್ದಾರೆ. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ

    ಪತ್ರ ಬರೆಯುತ್ತಿರುವ ವಿಡಿಯೋವನ್ನು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಕಾಮೆಂಟ್ಸ್ ಅಲ್ಲಿ ನೋಡಬಹುದಾಗಿದೆ. ಕೆಲವರು ಭಾವನಾತ್ಮಕವಾಗಿ ಸ್ಪಂದಿಸಿದರೆ, ಇನ್ನೂ ಕೆಲವರು ಕಾನೂನಿನ ಪಾಠವನ್ನೂ ಮಾಡಿದ್ದಾರೆ.

     

    ಕರವೇ (ನಾರಾಯಣ ಗೌಡ ಬಣ) ಇಂದು ರಕ್ತದಲ್ಲಿ ಬರೆದ ಒಂದು ಲಕ್ಷ ಪತ್ರವನ್ನು ಪ್ರಧಾನಿಗೆ ಬರೆಯುವಂತೆ ಕರೆಕೊಟ್ಟಿತ್ತು. ನಟಿ ಅಶ್ವಿನಿ ಗೌಡ ಸೇರಿದಂತೆ ಹಲವರು ಈ ಪತ್ರ ಚಳಿವಳಿಯಲ್ಲಿ ಭಾಗಿಯಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೆಂಗ್ಯೂ ಭೀತಿ; ಬಿಳಿರಕ್ತ ಕಣಗಳಿಗೆ ಹೆಚ್ಚಿದ ಬೇಡಿಕೆ!

    ಡೆಂಗ್ಯೂ ಭೀತಿ; ಬಿಳಿರಕ್ತ ಕಣಗಳಿಗೆ ಹೆಚ್ಚಿದ ಬೇಡಿಕೆ!

    – ರಕ್ತದಾನ ಶಿಬಿರಕ್ಕೆ ಮುಂದಾದ ಬ್ಲಡ್ ಬ್ಯಾಂಕ್‍ಗಳು..!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಪ್ರಕರಣಗಳ (Dengue Fever) ಏರಿಕೆ ಬೆನ್ನಲ್ಲೆ, ಆಸ್ಪತ್ರೆಗಳಿಗೆ ಇದೀಗ ಮತ್ತೊಂದು ರೀತಿಯ ಟೆನ್ಷನ್ ಶುರುವಾಗಿದೆ. ಡೆಂಗ್ಯೂ ಹೊಡೆತದಿಂದ ನಲುಗಿದ ರೋಗಿಗಳಲ್ಲಿ ಬಿಳಿರಕ್ತ ಕಣಗಳ ಕೊರತೆ ಉಂಟಾಗ್ತಿದ್ದು, ಇತ್ತ ಬ್ಲಡ್ ಬ್ಯಾಂಕ್‍ಗಳಿಗೂ (Blood Bank) ಸಂಕಷ್ಟ ಎದುರಾಗಿದೆ.

    ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ರಾಜ್ಯದಲ್ಲಿ ಮಳೆ ಇಲ್ಲದಿದ್ರೂ ರಾಜಧಾನಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗ್ತಾಲೇ ಇದೆ. ಡೆಂಗ್ಯು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದ್ರೂ ಕೂಡ, ಕೆಲ ರೋಗಿಗಳಿಗೆ ಬಿಳಿರಕ್ತಕಣಗಳ ಕೊರತೆ ಇರೋದರಿಂದ ಸಮಸ್ಯೆ ಎದುರಾಗ್ತಿದೆ. ಚಿಕಿತ್ಸೆ ವೇಳೆ ವೈಟ್ ಬ್ಲಡ್ ಸೆಲ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೇ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹೈರಾಣಾಗ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿಂದು ಗಣೇಶ ಪ್ರತಿಷ್ಠಾಪನೆ- ಮೆರವಣಿಗೆ, ವಿಶೇಷ ಪೂಜೆಗೆ ಸಿದ್ಧತೆ

    ಈ ಹಿಂದೆ ದಿನಕ್ಕೆ 10-12ರಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕತೆ ಇತ್ತು, ಇದೀಗ ದಿನಕ್ಕೆ 150 ಯುನಿಟ್ ನಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳ ಅವಶ್ಯಕತೆ ಎದುರಾಗಿದ್ದು, ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡೋಕೆ ಸಮಸ್ಯೆ ಉದ್ಭವಿಸಿದೆ. ಅತ್ತ, ಬ್ಲಡ್ ಬ್ಯಾಂಕ್‍ಗಳಲ್ಲೂ ಬಿಳಿ ರಕ್ತದಾನಿಗಳ ಕೊರತೆ ಎದುರಾಗಿದ್ದು, ಬ್ಲಡ್ ಬಾಂಕ್‍ಗಳು ರಕ್ತದಾನ ಶಿಬಿರಗಳನ್ನ ಹೆಚ್ಚಳ ಮಾಡೋಕೆ ಸಜ್ಜಾಗಿವೆ.

    ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಈ ಬಾರಿ ಡೆಂಗ್ಯೂ ಸಿಲಿಕಾನ್ ಸಿಟಿ ಮಂದಿಯನ್ನೇ ಹೆಚ್ಚು ಕಾಡಲು ಶುರು ಮಾಡಿದೆ. ಡೆಂಗ್ಯೂ ಕಾಣಿಸಿಕೊಂಡ ಕೆಲ ರೋಗಿಗಳಲ್ಲಿ ಮೂಗಿನಿಂದ ರಕ್ತ ಸೋರುವುದು, ಹಲ್ಲಿನ ವಸಡುಗಳಲ್ಲಿ ರಕ್ತ ಕಾಣಿಸುವುದು, ವಾಂತಿಯಲ್ಲಿ ರಕ್ತ ಬರುವುದು ಈ ರೀತಿ ಹಲವು ಲಕ್ಷಣ ಕಂಡುಬರ್ತಿದ್ದು, ಇದರಿಂದ ವೈಟ್ ಪ್ಲೇಟ್‍ಲೇಟ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡೋ ಅವಶ್ಯಕತೆ ಎದುರಾಗ್ತಿದೆ.

    ಡೆಂಗಿ ಕೇಸ್‍ನ ಅಂಕಿ ಅಂಶ:
    ವರ್ಷ – ಕೇಸ್‍ಗಳು
    2020 – 1127
    2021 – 1629
    2022 – 2335
    2023 – 4979

    ಸದ್ಯ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರೀ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿರೋದು ಆತಂಕ ಸೃಷ್ಟಿಸಿದೆ. ಇತ್ತ ಡೆಂಗ್ಯೂ ರೋಗಿಗಳಿಗೆ ಪ್ಲೇಟ್ ಲೇಟ್ಸ್ ಕೊರತೆ ಕೂಡ ಎದುರಾಗ್ತಿರೋದು ಆಸ್ಪತ್ರೆಗಳ ಸಿಬ್ಬಂದಿಗೆ ತಲೆನೋವು ತಂದಿಟ್ಟಿದೆ. ಸದ್ಯ ಬ್ಲಡ್ ಬ್ಯಾಂಕ್‍ಗಳು ಕೂಡ ರಕ್ತದಾನ ಶಿಬಿರಗಳ ಮೂಲಕ ಜಾಗೃತಿಗೆ ಮುಂದಾಗ್ತಿದ್ದು, ಡೆಂಗ್ಯೂ ಅಬ್ಬರ ಯಾವಾಗ ತಗ್ಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆಗೆ ಕಚ್ಚಿದವ ಹೆಣವಾದ!

    ನಿನ್ನ ರಕ್ತ ಕುಡಿಯುತ್ತೇನೆಂದು ಗೆಳೆಯನ ಕುತ್ತಿಗೆಗೆ ಕಚ್ಚಿದವ ಹೆಣವಾದ!

    ಮುಂಬೈ: ಯುವಕನೊಬ್ಬ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ಗೆಳೆಯನ ಕುತ್ತಿಗೆಗೆ ಕಚ್ಚಿದ್ದು, ಬಳಿಕ ಆತನೇ ಹೆಣವಾಗಿ ಹೋದ ಪ್ರಸಂಗವೊಂದು ಮುಹಾರಾಷ್ಟ್ರದಲ್ಲಿ (Maharastra)  ನಡೆದಿದೆ.

    ಮೃತನನ್ನು ಇಶ್ತಿಯಾಕ್ ಖಾನ್ ಎಂದು ಗುರುತಿಸಲಾಗಿದೆ. ಈತನ ತಲೆಗೆ ಕಲ್ಲಿನಿಂದ ಜಜ್ಜಿ ರಾಹುಲ್ ಲೋಹರ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಯುವತಿಯ ಸ್ನಾನದ ವೀಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಯುವಕ!

    ನಡೆದಿದ್ದೇನು..?: ರಾಹುಲ್ ತನ್ನ ಗೆಳೆಯರ ಜೊತೆ ಮದ್ಯಪಾನ (Alcohol) ಮಾಡಲು ತೆರಳಿದ್ದಾನೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಶ್ತಿಯಾಕ್, ನನಗೆ ನಿನ್ನ ರಕ್ತ ಕುಡಿಯಬೇಕು (Blood) ಎಂದು ಹೇಳಿದ್ದಾನೆ. ಅಲ್ಲದೇ ನಿನ್ನ ರಕ್ತ ಕುಡಿಯುತ್ತೇನೆ ಎಂದು ಹೇಳಿ ರಾಹುಲ್ ಕುತ್ತಿಗೆಗೆ ಕಚ್ಚಿದ್ದಾನೆ.

    ಈ ಸಂಬಂಧ ಅಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ರಾಹುಲ್ ಅಲ್ಲಿಂದ ತೆರಳಿದ್ದಾನೆ. ಕೆಲ ಗಂಟೆಗಳ ಬಳಿಕ ರಾಹುಲ್ ಮತ್ತೆ ಗೆಳೆಯ ಇಶ್ತಿಯಾಕ್ ಭೇಟಿಯಾಗಲು ಬಂದಿದ್ದಾನೆ. ಈ ವೇಳೆ ನಿನಗೆ ನನ್ನ ರಕ್ತ ಬೇಕಾ..? ನಿನ್ನ ಜೀವಂತವಾಗಿರಲು ನಾನು ಬಿಡಲ್ಲ ಎಂದು ಹೇಳಿ ಇಶ್ತಿಯಾಕ್ ತಲೆಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಪ್ರಕರಣ ಸಂಬಂಧ ಆರೋಪಿ ರಾಹುಲ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಂದ್ರ ನಿಕಲ್ಜೆ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕೈ ಮುಗಿದ ಕಿಚ್ಚ

    ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ: ಕೈ ಮುಗಿದ ಕಿಚ್ಚ

    ಕಿಚ್ಚ ಸುದೀಪ್ ಅಭಿಮಾನಿಗಳು (Fans)ಒಂದಿಲ್ಲೊಂದು ರೀತಿಯಲ್ಲಿ ನೆಚ್ಚಿನ ನಟಿಗೆ ಪ್ರೀತಿ ತೋರಿಸುತ್ತಲೇ ಇರುತ್ತಾರೆ. ಇದೀಗ ಶಿವಮೊಗ್ಗದ (Shimoga) ಅಭಿಮಾನಿ ವೈಷ್ಣವಿ (Vaishnavi) ಎನ್ನುವವರು ತಮ್ಮದೇ ರಕ್ತದಿಂದ ಸುದೀಪ್ ಅವರ ಚಿತ್ರ ಬಿಡಿಸಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಈ ಚಿತ್ರವನ್ನು ಮರುಹಂಚಿಕೊಂಡಿರುವ ಸುದೀಪ್, ಕೈ ಮುಗಿಯುವ ಎಮೋಜಿ ಹಾಕಿದ್ದಾರೆ.

    ಮಹಿಳಾ ಅಭಿಮಾನಿಯ ರಕ್ತದಲ್ಲಿ (Blood) ತಯಾರಾದ ಚಿತ್ರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದರೆ ಇನ್ನೂ ಹಲವರು ರಕ್ತ ಅಮೂಲ್ಯವಾದದ್ದು ಅದನ್ನು ಈ ರೀತಿ ಹಾಳು ಮಾಡಬೇಡಿ. ಅಭಿಮಾನಿವನ್ನು ರಕ್ತದಾನ ಮಾಡುವ ಮೂಲಕ ತೋರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ಸ್ ಏನೇ ಬರುತ್ತಿದ್ದರೂ ಅಭಿಮಾನಿಯ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

    ಚಿತ್ರೀಕರಣಕ್ಕೆ ಹೊರಟು ನಿಂತ ಸುದೀಪ್

    ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್(Kiccha Sudeep)- ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚಯೇ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ. ಈ ವಾರದ ಅಂತ್ಯದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಈ ಬೆನ್ನಲ್ಲೇ ವಿವಾದ ಬದಿಗಿಟ್ಟು ಕಾಯಕವೇ ಕೈಲಾಸ ಅಂತಾ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.‌

    ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ತನ್ನ ಜೊತೆ ಸಿನಿಮಾ ಮಾಡ್ತಾರೆ ಅಂತಾ ಮಾತುಕತೆ ಆಗಿತ್ತು. ಹಣ ಪಡೆದು ಸಾಕಷ್ಟು ಸಮಯದಿಂದ ಕಾಲ್‌ಶೀಟ್ ನೀಡದೇ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ (Producer Kumar) ಆರೋಪಿಸಿದ್ದರು. ಇದಾದ ಬಳಿಕ ಸುದೀಪ್ ಕಾನೂನು ಸಮರ ಸಾರಿದ್ದರು. ಬಳಿಕ ರವಿಚಂದ್ರನ್ (Ravichandran) ಅವರ ಜೊತೆ ಕುಮಾರ್-ಸುದೀಪ್ ಇಬ್ಬರ ಸಂಧಾನ ಸಭೆ ನಡೆದಿತ್ತು. ಆದರೆ ಇದು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಕೊನೆಯ ಮೀಟಿಂಗ್‌ನಲ್ಲಿ ಶಿವಣ್ಣ (Shivarajkumar) ಕೂಡ ಭಾಗಿಯಾಗಲಿದ್ದಾರೆ. ಬಳಿಕ ಕಾಲ್‌ಶೀಟ್ ಕದನಕ್ಕೆ ಬ್ರೇಕ್ ಸಿಗಲಿದೆ.

     

    ʼವಿಕ್ರಾಂತ್ ರೋಣ’ (Vikrant Rona) ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸುದೀಪ್ ಒಂದು ಬ್ರೇಕ್ ಪಡೆದರು. ವೃತ್ತಿ ಜೀವನದಲ್ಲಿ ಅವರು ಪಡೆದ ಮೊದಲ ಬ್ರೇಕ್ ಇದು ಅನ್ನೋದು ವಿಶೇಷ. ಈ ಸಮಯದಲ್ಲಿ ಸುದೀಪ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಚುನಾವಣಾ ಪ್ರಚಾರದಲ್ಲಿ ಭಾಗಿ ಆದರು. ಬಿಜೆಪಿ ಕ್ಷೇತ್ರದ ಪರ ಪ್ರಚಾರಕ್ಕೆ ಕಣಕ್ಕೆ ಇಳಿದರು. ಈಗ ಅವರು ಶೂಟಿಂಗ್ ಹೊರಡೋಕೆ ರೆಡಿ ಆಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಗುಲದ ಗರ್ಭಗುಡಿಯವರೆಗೂ ಹರಿದ ರಕ್ತ- ಕಿಡಿಗೇಡಿಗಳ ಕೃತ್ಯದಿಂದ ಗ್ರಾಮಸ್ಥರಲ್ಲಿ ಆತಂಕ

    ದೇಗುಲದ ಗರ್ಭಗುಡಿಯವರೆಗೂ ಹರಿದ ರಕ್ತ- ಕಿಡಿಗೇಡಿಗಳ ಕೃತ್ಯದಿಂದ ಗ್ರಾಮಸ್ಥರಲ್ಲಿ ಆತಂಕ

    ಚಿಕ್ಕಬಳ್ಳಾಪುರ: ಕಿಡಿಗೇಡಿಗಳು ದೇವಾಲಯದೊಳಗೆ ರಕ್ತ ಸುರಿದಿರುವ ಪ್ರಕರಣವೊಂದು ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

    ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿರುವ ಬ್ಯಾಟರಾಯಸ್ವಾಮಿ (Byatarayaswamy Temple) ದೇವಾಲಯದೊಳಗೆ ರಕ್ತ ಸುರಿಯುವ ಮೂಲಕ ವಿಕೃತಿ ಮೆರೆಯಲಾಗಿದೆ. ದೇವರ ಗರ್ಭಗುಡಿಯವರೆಗೂ ರಕ್ತ ಹರದಿದ್ದು, ದೇವಾಲಯವೆಲ್ಲವೂ ರಕ್ತ ಸಿಕ್ತವಾಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

    ಕಿಡಿಗೇಡಿಗಳ ಕೃತ್ಯಕ್ಕೆ ಮಳಮಾಚನಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಿಂತಿದ್ದ ಬಸ್‌ಗೆ ಟಿಟಿ ಡಿಕ್ಕಿ – ಇಬ್ಬರು ಸಾವು, ನಾಲ್ವರಿಗೆ ಗಾಯ

     

  • 35 ಕಿ.ಮೀ ದೂರದ ಆಸ್ಪತ್ರೆಗೆ 15 ನಿಮಿಷದಲ್ಲಿ ರಕ್ತ ರವಾನೆ ಮಾಡಿದ ಡ್ರೋನ್

    35 ಕಿ.ಮೀ ದೂರದ ಆಸ್ಪತ್ರೆಗೆ 15 ನಿಮಿಷದಲ್ಲಿ ರಕ್ತ ರವಾನೆ ಮಾಡಿದ ಡ್ರೋನ್

    ನವದೆಹಲಿ: ಈಗ ಎಲ್ಲಿ ನೋಡಿದರೂ ಡ್ರೋನ್‌ಗಳದ್ದೇ (Drone) ಹವಾ. ಫೋಟೋ ಕ್ಲಿಕ್ಕಿಸುವುದರಿಂದ ಹಿಡಿದು ವಸ್ತುಗಳನ್ನು ಇನ್ನೊಬ್ಬರಿಗೆ ತಲುಪಿಸುವವರೆಗೂ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ವೈದ್ಯಕೀಯ ಕ್ಷೇತ್ರಕ್ಕೂ ಡ್ರೋನ್‌ಗಳು ಕಾಲಿಟ್ಟು ವರ್ಷವೇ ಕಳೆದಿದೆ. ಇದೀಗ ಡ್ರೋನ್ ಮೂಲಕ ರಕ್ತ (Blood) ರವಾನೆ ಮಾಡುವ ಪ್ರಾಯೋಗಿಕ ಪರೀಕ್ಷೆಯೂ ಯಶಸ್ಸು ಕಂಡಿದೆ.

    ಗುರುವಾರ ದೆಹಲಿಯಲ್ಲಿ ‘ಐ ಡ್ರೋನ್’ (i-Drone)ಮೂಲಕ ರಕ್ತ ರವಾನೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಈ ಹಿಂದೆ ಐ ಡ್ರೋನ್ ಮೂಲಕ ದೂರದ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ರವಾನಿಸಲಾಗಿತ್ತು. ಇದೀಗ ರಕ್ತವನ್ನು ಸಾಗಿಸಿರುವ ಡ್ರೋನ್ ಸುಮಾರು 35 ಕಿ.ಮೀ ದೂರದ ಆಸ್ಪತ್ರೆಯನ್ನು ಕೇವಲ 15 ನಿಮಿಷಗಳಲ್ಲಿ ತಲುಪಿ ಪರೀಕ್ಷೆ ಯಶಸ್ವಿಯಾಗಿಸಿದೆ.

    ಗ್ರೇಟರ್ ನೋಯ್ಡಾದ ಜಿಐಎಮ್‌ಎಸ್ ಆಸ್ಪತ್ರೆಯಿಂದ ನೋಯ್ಡಾ ಸೆಕ್ಟರ್ 62ರಲ್ಲಿ ಇರುವ ಜೆಪಿ ಇನ್‌ಸ್ಟಿಟ್ಯೂಟ್‌ಗೆ ಡ್ರೋನ್ ಮೂಲಕ ರಕ್ತವನ್ನು ಸಾಗಿಸಲಾಗಿದೆ. ಸುಮಾರು 35 ಕಿ.ಮೀ ದೂರದ ಆಸ್ಪತ್ರೆಯನ್ನು ಡ್ರೋನ್ 15 ನಿಮಿಷಗಳಲ್ಲಿ ತಲುಪಿದರೆ ಅದೇ ಕೆಲಸವನ್ನು ಮಾಡುವ ಅಂಬುಲೆನ್ಸ್ ಈ ದೂರವನ್ನು ಕ್ರಮಿಸಲು 1 ಗಂಟೆಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಇದನ್ನೂ ಓದಿ: ಈ ಬಾರಿ ದಾಖಲೆ ಮತದಾನ – ನಿಮ್ಮ ಜಿಲ್ಲೆಯಲ್ಲಿ ಎಷ್ಟು ವೋಟ್‌?

    ಡ್ರೋನ್‌ನ ಯಶಸ್ವಿ ಪ್ರಯೋಗದ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಆರೋಗ್ಯ ಕ್ಷೇತ್ರದಲ್ಲಿ ಮಾಡಲಾದ ಈ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ‘ಐ ಡ್ರೋನ್’ನೊಂದಿಗೆ ಭಾರತೀಯ ಆರೋಗ್ಯ ರಕ್ಷಣೆ ಭವಿಷ್ಯವನ್ನು ಸಿದ್ಧಗೊಳಿಸಲಾಗಿತ್ತಿದೆ. ಡ್ರೋನ್ ಮೂಲಕ ರಕ್ತದ ಚೀಲ ವಿತರಣೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕೆಲವು ಸಮಯದಿಂದ ಡ್ರೋನ್ ಬಳಸಿ ಅಂಗಗಳನ್ನು ಸಾಗಿಸಲು ಯೋಜಿಸುತ್ತಿದೆ. ಜಿಐಎಮ್‌ಎಸ್‌ನ ನಿರ್ದೇಶಕ ಡಾ. ರಾಕೇಶ್ ಗುಪ್ತಾ, ಶೀಘ್ರವೇ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ. ಆದರೆ ಅಂಗಾಂಗಗಳನ್ನು ಒಂದು ಕಡೆಯಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲು ಗ್ರೀನ್ ಕಾರಿಡಾರ್ ಸಿದ್ಧಪಡಿಸುವ ಅಗತ್ಯವಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರೀ ಸ್ಫೋಟ – ಬೆಂಕಿಗೆ ಕಾರುಗಳು ಆಹುತಿ

  • ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು – ತನಿಖೆಗೆ ಆದೇಶ

    ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು – ತನಿಖೆಗೆ ಆದೇಶ

    ಲಕ್ನೋ: ರಕ್ತದ ಬದಲಿಗೆ ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್ (Mosambi Juice) ಹಾಕಿದ್ದರಿಂದ ಡೆಂಗ್ಯೂ ಹೊಂದಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ ಹಿನ್ನೆಲೆ ಇದೀಗ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿ ರಕ್ತದ ಡ್ರಿಪ್ ಬದಲಿಗೆ ಮೊಸಂಬಿ ರಸ ಹಾಕಿರುವುದನ್ನು ಕಾಣಬಹುದಾಗಿದೆ. ಪ್ರಯಾಗ್‍ರಾಜ್‍ನ (Prayagraj) ಝಲ್ವಾ (Jhalwa) ಪ್ರದೇಶದಲ್ಲಿ ಡೆಂಗ್ಯೂ ರೋಗಿಗಳಿಗೆ ನಕಲಿ ಪ್ಲಾಸ್ಮಾ ಸರಬರಾಜು ಮಾಡಲಾಗುತ್ತಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ರಾಕೇಶ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    ಪ್ರಯಾಗ್‍ರಾಜ್‍ನ (ಹಿಂದೆ ಅಲಹಾಬಾದ್) ಝಲ್ವಾ ಪ್ರದೇಶದ ಗ್ಲೋಬಲ್ ಆಸ್ಪತ್ರೆಯಲ್ಲಿ ಆಗುತ್ತಿರುವ ವಂಚನೆ ಕುರಿತಂತೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, ವೈದ್ಯರು ರಕ್ತದ ಪ್ಲಾಸ್ಮಾ ಅಗತ್ಯವಿರುವ ರೋಗಿಗಳಿಗೆ ಮೊಸಂಬಿ ರಸವನ್ನು ಡ್ರಿಪ್‍ನಲ್ಲಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವೀಡಿಯೊದಲ್ಲಿ ವ್ಯಕ್ತಿ ರಕ್ತದ ಪ್ಯಾಕ್ ಅನ್ನು ಹಿಡಿದುಕೊಂಡಿದ್ದು, ಅದನ್ನು ಹಿಂತಿರುಗಿಸಿದಾಗ ಮೊಸಂಬಿ ರಸ ಇರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಕುಂಟಿಕೊಂಡು ಏನ್ ಮಾಡ್ತಾರೆ, ಬಿಎಸ್‍ವೈಗೆ ನೆನಪಿನ ಶಕ್ತಿಯೇ ಇಲ್ಲ: ಮೊಯ್ಲಿ ಲೇವಡಿ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ (Deputy Chief Minister Brajesh Pathak) ಈ ಬಗ್ಗೆ ತನಿಖೆ ನಡೆಸಲು ನಾವು ಸಿಎಂಒ ಜೊತೆ ತಂಡವನ್ನು ರಚಿಸಿದ್ದೇವೆ ಮತ್ತು ಅವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಕೆಲವೇ ಗಂಟೆಗಳಲ್ಲಿ ವರದಿ ಸಲ್ಲಿಸಲಾಗುವುದು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್ ಖರೀದಿಗಾಗಿ ರಕ್ತ ಮಾರಲು ಹೋದ 16ರ ಹುಡುಗಿ

    ಮೊಬೈಲ್ ಖರೀದಿಗಾಗಿ ರಕ್ತ ಮಾರಲು ಹೋದ 16ರ ಹುಡುಗಿ

    ಕೋಲ್ಕತ್ತಾ: ಮೊಬೈಲ್ (Smart Phone) ಖರೀದಿಸಲು ಹಣ ಬೇಕೆಂದು 16 ವರ್ಷದ ಹುಡುಗಿಯೊಬ್ಬಳು (Girl) ರಕ್ತವನ್ನು (Blood) ಮಾರಾಟ ಮಾಡಲು ಹೋದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.

    ದಕ್ಷಿಣ ದಿನಾಜ್‍ಪುರದ ತಪನ್ ಪೊಲೀಸ್ ಠಾಣೆಯ ಕರ್ದಾ ನಿವಾಸಿಯಾಗಿರುವ ಆಕೆ 12ನೇ ತರಗತಿ ಓದುತ್ತಿದ್ದಾಳೆ. ಆಕೆ ಆನ್‍ಲೈನ್‍ಲ್ಲಿ 9,000 ರೂ. ಮೌಲ್ಯದ ಸ್ಮಾರ್ಟ್‍ಫೋನ್ ಅನ್ನು ಆರ್ಡರ್ ಮಾಡಿದ್ದಳು. ಆದರೆ ಆಕೆಯ ಬಳಿ ಅಷ್ಟೊಂದು ಹಣವಿರಲಿಲ್ಲ.

    ಇದರಿಂದಾಗಿ ಆಕೆ ಬಲೂರ್‍ಘಾಟ್‍ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವನ್ನು ಕೊಡಲು ನಿರ್ಧರಿಸಿದ್ದಾಳೆ. ಈ ಹಿನ್ನೆಲೆಯಲ್ಲೇ ಆಕೆ ಆಸ್ಪತ್ರೆಗೆ ತೆರಳಿ ಅಲ್ಲಿ, ರಕ್ತ ನೀಡುತ್ತೇನೆ ಅದರ ಬದಲು ಎಷ್ಟು ಹಣ ನೀಡುತ್ತೀರಿ ಎಂದು ಕೇಳಿದ್ದಾಳೆ. ಇದರಿಂದ ಅಲ್ಲಿನ ಉದ್ಯೋಗಿಗಳು ಅನುಮಾನಗೊಂಡಿದ್ದಾರೆ. ಇದನ್ನೂ ಓದಿ: ಇಎಂಐಯಲ್ಲಿ ಸ್ಮಾರ್ಟ್ ಫೋನ್ ಕೊಡಿಸಿದ ಪತಿ- ವಿಷಯ ತಿಳಿದ ಪತ್ನಿ ಆತ್ಮಹತ್ಯೆ

    ಕೂಡಲೇ ಆಸ್ಪತ್ರೆ ಸಿಬ್ಬಂದಿ ಚೈಲ್ಡ್ ಕೇರ್ ಇಲಾಖೆಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೈಲ್ಡ್ ಕೇರ್ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ, ಅಪ್ರಾಪ್ತೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಜವಾದ ಸಂಗತಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆಲಸ ಬಿಡಲು ನಿರಾಕರಿಸಿದ ಪತ್ನಿಯನ್ನು ಕ್ರೂರವಾಗಿ ಥಳಿಸಿದ

    Live Tv
    [brid partner=56869869 player=32851 video=960834 autoplay=true]

  • ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    ಧಾರವಾಡ: ಕೃಷಿ ಮೇಳದಲ್ಲಿ(Krishi Mela) ಶ್ವಾನವೊಂದಕ್ಕೆ ಶ್ವಾನವೇ(Dog) ರಕ್ತದಾನ(Blood Donation) ಮಾಡಿ ಸುದ್ದಿಯಾಗಿದೆ.

    ಧಾರವಾಡ(Dharawada) ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತ ನೀಡಿದೆ. ಇದನ್ನೂ ಓದಿ: ಮಗಳ ನಿಶ್ಚಿತಾರ್ಥದ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವೇ ಬಲಿ

    ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಗಮನ ಸೆಳೆದಿದೆ.

    Live Tv
    [brid partner=56869869 player=32851 video=960834 autoplay=true]

  • 50ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ – ರಕ್ತದಲ್ಲಿ ಸಹಿ ಸಂಗ್ರಹಿಸಿ ಸಿಎಂಗೆ ಮನವಿ

    50ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ – ರಕ್ತದಲ್ಲಿ ಸಹಿ ಸಂಗ್ರಹಿಸಿ ಸಿಎಂಗೆ ಮನವಿ

    ರಾಯಚೂರು: ಏಮ್ಸ್‌ಗಾಗಿ ಜಿಲ್ಲೆಯಲ್ಲಿ ನಡೆದಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ 50ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಹೋರಾಟಕ್ಕೆ ಇದುವರೆಗೂ ಸ್ಪಂದಿಸದ ಹಿನ್ನೆಲೆ ಹೋರಾಟಗಾರರು ರಕ್ತದಲ್ಲಿ ಸಹಿ ಮಾಡುವ ಬೃಹತ್ ಆಂದೋಲನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಸುಮಾರು 5,000 ಜನರಿಂದ ರಕ್ತದ ಸಹಿ ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಗಳು, ವೃದ್ಧರು, ಹೋರಾಟಗಾರರು, ಸ್ಥಳೀಯರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ. 90ರ ಇಳಿ ವಯಸ್ಸಿನ ವೃದ್ಧರೊಬ್ಬರ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ರಕ್ತದ ಸಹಿಗಳನ್ನು ಸಿಎಂಗೆ ಕಳುಹಿಸುವ ಮೂಲಕ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: IIMB ಯಿಂದ ‘ಹಾಸ್ಪಿಟಲ್ ಮ್ಯಾನೇಜ್‍ಮೆಂಟ್’ ಕೋರ್ಸ್ ಆರಂಭ – ಡಾ.ಕೆ.ಸುಧಾಕರ್ ಕನಸು ಸಾಕಾರ

    ರಾಯಚೂರಿನಿಂದ ಐಐಟಿ ಕಸಿದುಕೊಳ್ಳಲಾಗಿದೆ. ಸದ್ಯ ಏಮ್ಸ್ ಆದರೂ ರಾಯಚೂರಿಗೆ ನೀಡಲಿ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸಿಎಂ ಅಲ್ಲ, ಸಮಗ್ರ ಕರ್ನಾಟಕಕ್ಕೆ ಸಿಎಂ. ಹೀಗಾಗಿ ಏಮ್ಸ್ ರಾಯಚೂರಿಗೆ ನೀಡುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

    Live Tv