Tag: block congress

  • ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

    ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

    ಮಂಗಳೂರು: ತನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದರೆಂದು ಕಣ್ಣೀರು ಹಾಕಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಸಚಿವ ರಮಾನಾಥ ರೈ ಕಣ್ಣೀರಲ್ಲೇ ಉತ್ತರ ಕೊಟ್ಟಿದ್ದಾರೆ.

    ಸ್ವಕ್ಷೇತ್ರ ಬಂಟ್ವಾಳದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಸಚಿವ ರೈ, ತನ್ನ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ನಾನೇನು ಮದುವೆ ಕಾರ್ಯಕ್ರಮದಲ್ಲಿ ಪೂಜಾರಿಯವರ ಬಗ್ಗೆ ಕೆಟ್ಟ ಮಾತು ಆಡಿಲ್ಲ. ಆ ಬಗ್ಗೆ ಯಾವುದೇ ಸಾಕ್ಷ್ಯವೂ ಇಲ್ಲ. ಹೀಗಿದ್ದರೂ ವಿರೋಧ ಪಕ್ಷದವರು, ಪಕ್ಷ ಬಿಟ್ಟು ಹೋದವರು ಅಪಪ್ರಚಾರ ಮಾಡುತ್ತಿದ್ದಾರೆ. ಸ್ವತಃ ಜನಾರ್ದನ ಪೂಜಾರಿಯವರು, ಅವರ ಕುಟುಂಬಸ್ಥರು ಕರೆದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ರೆಡಿಯಿದ್ದೇನೆ ಅಂತಾ ಹೇಳುತ್ತಾ ಗದ್ಗದಿತರಾದ್ರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

    ತನ್ನ ಹೇಳಿಕೆಯ ಮೂಲಕ ಪಕ್ಷ ತ್ಯಜಿಸಿ, ಬಿಜೆಪಿ ಸೇರ್ಪಡೆಯಾಗಿರುವ ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ್ ಗೆ ಈ ಮೂಲಕ ರೈ ಟಾಂಗ್ ಕೊಟ್ಟಿದ್ದಾರೆ.

    ಇತ್ತೀಚೆಗಷ್ಟೇ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ತನ್ನ ತಾಯಿಯ ಹೆಸರು ಹೇಳಿ ಗದ್ಗದಿತರಾಗಿದ್ದರು. ಅರಣ್ಯ ಸಚಿವ ರಮಾನಾಥ ರೈ ಅವರು ಆಡಿದ ಅಶ್ಲೀಲ ಮಾತುಗಳನ್ನು ನೆನೆದು ಭಾಷಣದ ಆರಂಭದಲ್ಲೇ ಗಳಗಳನೇ ಅತ್ತಿದ್ದು, ತನ್ನ ವಿರುದ್ಧ ಅವಾಚ್ಯ ಶಬ್ಧ ಬಳಸಿ ನಿಂದಿಸಿದರೆಂಬ ವಿಚಾರವನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೊಂಡು ಅತ್ತುಬಿಟ್ಟಿದ್ದರು. ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

    ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ನನ್ನ ಅಜ್ಜಿ ದೇಯಿ ಬೈದೆತಿ. ಅದೇ ರೀತಿ ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ರಮಾನಾಥ ರೈ ಹೇಳಿದಂತೆ ನನ್ನ ತಾಯಿ ಸೂಳೆ, ನಾನು ಸೂಳೆಯ ಮಗ ಎಂಬ ಪ್ರಶ್ನೆ ಮುಂದಿಟ್ಟು ಗದ್ಗದಿತರಾಗಿ ಕಣ್ಣೀರು ಹಾಕಿದ್ದರು.

  • ಬೆಳಗಾವಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷೆ ಕಾಣೆ

    ಬೆಳಗಾವಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷೆ ಕಾಣೆ

    ಬೆಳಗಾವಿ: ಇದು ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಿಸ್ಸಿಂಗ್ ಕಹಾನಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಇಬ್ಬರೂ ಕಾಣೆಯಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಗರ್ ಪಾಟೀಲ ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಬಾಳಾಬಾಯಿ ಕುರಾಡೆ ಇಬ್ಬರೂ ಕಳೆದ 15 ದಿನಗಳಿಂದ ಕಾಣೆಯಾಗಿದ್ದಾರೆ.

    ಸಾಗರ್ ಪಾಟೀಲ್ ಮತ್ತು ಪತ್ನಿ ಕಾಣೆಯಾಗಿರುವ ಬಗ್ಗೆ ಬಾಳಾಬಾಯಿ ಪತಿ ಬಾಳಾಸಾಹೇಬ್ ದೂರು ನೀಡಿದ್ದಾರೆ. ಎರಡೂ ಕುಟುಂಬಗಳು ಹಲವು ವರ್ಷಗಳಿಂದ ಪರಿಚಿತರಾಗಿದ್ದು ಇಬ್ಬರ ನಡುವೆ ಒಡನಾಟ ಹೆಚ್ಚಾಗಿಯೇ ಇತ್ತು. ಇವರಿಬ್ಬರೂ ನಮ್ಮ ಕುಟುಂಬಕ್ಕೆ ವಿಶ್ವಾಸ ದ್ರೋಹ ಎಸಗಿದ್ದಾರೆ ಅಂತ ಅಳಲು ತೋಡಿಕೊಳ್ತಾರೆ ಬಾಳಾಬಾಯಿ ಪತಿ.

    ನನ್ನ ಹೆಂಡತಿ ಬಾಳಾಬಾಯಿ ಮಹಿಳಾ ಬ್ಲಾಕ್ ಕಾಂಗ್ರೆಸ್‍ನ ಉಪಾಧ್ಯಕ್ಷೆ. ಸಾಗರ್ ಪಾಟೀಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ. ನನ್ನ ಹೆಂಡತಿ ಮೇ 12 ರಂದು ಮುಂಬೈಯಿಂದ ಬರುವಾಗ ಪುಣೆಯಲ್ಲಿ ಕಾಣೆಯಾಗಿದ್ದಾಳೆ. ಆದರೆ ಇದರ ಹಿಂದೆ ಸಾಗರ ಪಾಟೀಲ್ ಕೈವಾಡ ಇದೆ ಎಂದು ಮಾಹಿತಿ ಸಿಕ್ಕಿತು. ಅವನೇ ಮಾಡಿದ್ದು. ಯಾಕೆಂದರೆ ಹಲವಾರು ದಿನಗಳಿಂದ ಇವರಿಬ್ಬರು ಮೀಟಿಂಗ್ ಹೆಸರು ಹೇಳಿ ಸುತ್ತಾಡುತ್ತಿದ್ದರು. ಹೀಗಾಗಿ ಅವನೇ ಮಾಡಿದ್ದು. ಇದರಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ಮನಸ್ತಾಪ ಆಗಿದೆ ಅಂತ ಬಾಳಾಸಾಹೇಬ್ ತಿಳಿಸಿದ್ದಾರೆ.

    ಸಾಗರ ಪಾಟೀಲ್ ಮೇಲೆ ಸಾಕಷ್ಟು ವಿಶ್ವಾಸವಿತ್ತು. ಕಳೆದ 10 ವರ್ಷದಿಂದ ನಮ್ಮ ಮತ್ತು ಅವರ ಸಂಬಂಧ ಬಹಳಷ್ಟು ಚೆನ್ನಾಗಿತ್ತು. ಆದರೆ ಅವನು ನಮಗೆ ವಿಶ್ವಾಸಾಘಾತ ಮಾಡಿದ್ದಾನೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದೇನೆ. ನನ್ನ ಹೆಂಡತಿ ಕಾಣೆಯಾಗಿದ್ದಾಳೆ. ಇಬ್ಬರದ್ದೂ ಫೋನ್ ಸ್ವಿಚ್ ಆಫ್ ಆಗಿದೆ. ಪೊಲೀಸರು ಹುಡುಕಿ ಕೊಡ್ತೀವಿ ಎಂದಿದ್ದಾರೆ ಅಂತ ಪತ್ನಿ ಕಾಣೆಯಾಗಿರುವ ಬಗ್ಗೆ ಬಾಳಾಸಾಹೇಬ್ ಅಳಲು ತೋಡಿಕೊಂಡಿದ್ದಾರೆ.

    ಸಾಗರ್ ಪಾಟೀಲ್ ಚಿಕ್ಕೋಡಿ ಭಾಗದಲ್ಲಿ ದೊಡ್ಡ ಜಮಿನ್ದಾರ ವಂಶದವರು. ಎಸ್‍ಎಸ್‍ಎಲ್‍ಸಿ ಓದುತ್ತಿರುವ ಮಗಳಿದ್ದಾಳೆ. ಬಾಳಾಬಾಯಿಗೆ ಇಬ್ಬರು ಮಕ್ಕಳಿದ್ದು ಓರ್ವ ದ್ವಿತೀಯ ಪಿಯುಸಿಯಲ್ಲಿ, ಮತ್ತೋರ್ವ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.