Tag: BLM

  • ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?

    ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?

    ದುಬೈ: ಟಿ20 ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ Black Lives Matter (BLM) ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಂಡಿಯೂರಿ ನಿಲ್ಲಲು ಒಪ್ಪದ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಕ್ವಿಂಟನ್ ಡಿ ಕಾಕ್ ತಂಡದಿಂದ ಹೊರ ನಡೆಯುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

    ಮಂಗಳವಾರ ನಡೆದ ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಆರಂಭಕ್ಕೂ ಮೊದಲು ಡಿ ಕಾಕ್ ಆಡುವ ಹನ್ನೊಂದರ ಬಳಗದಲ್ಲಿ ಇದ್ದರು. ಆದರೆ ದಕ್ಷಿಣ ಆಪ್ರಿಕಾ ಕ್ರಿಕೆಟ್ ಮಂಡಳಿಯ ಆ ಒಂದು ಸಂದೇಶದ ವಿರುದ್ಧ ತಿರುಗಿಬಿದ್ದ ಡಿ ಕಾಕ್ ಕಡೆಯ ಕ್ಷಣದಲ್ಲಿ ಆಡುವ ಬಳಗದಿಂದ ಹೊರ ನಡೆದರು. ಇದಕ್ಕೆ ಕಾರಣ ಬಿಎಲ್‍ಎಂ ಆಂದೋಲನ. ಇದನ್ನೂ ಓದಿ: ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್

    ಏನಿದು BLM?
    Black Lives Matter (BLM) ಕಳೆದ ವರ್ಷ ಅಮೆರಿಕದಲ್ಲಿ ಕಪ್ಪು ವರ್ಣೀಯ ಆರೋಪಿಯೊಬ್ಬರನ್ನು ಅಲ್ಲಿಯ ಪೊಲೀಸರು ನಡು ರಸ್ತೆಯಲ್ಲೇ ಹಲ್ಲೆ ನಡೆಸಿ ಕೊಂದಿದ್ದರು. ಇದನ್ನು ಕಪ್ಪು ವರ್ಣೀಯರು ವಿರೋಧಿಸಿ ಬಿಎಲ್‍ಎಂ ಆಂದೋಲನ ಆರಂಭಿಸಿದರು. ಬಳಿಕ ವಿಶ್ವಾದ್ಯಂತ ವಿವಿಧ ಕ್ರೀಡೆಗಳಲ್ಲಿ ಆಟಗಾರರು ಈ ಆಂದೋಲನಕ್ಕೆ ಸಾಂಕೇತಿಕವಾಗಿ ಮಂಡಿಯೂರಿ ಒಂದು ಕೈ ಎತ್ತಿ ಬೆಂಬಲ ಕೊಡಲು ಆರಂಭಿಸಿದರು. ಇದು ಇದೀಗ ಟಿ20 ವಿಶ್ವಕಪ್ ಪಂದ್ಯದಲ್ಲೂ ಕೂಡ ಮುಂದುವರಿಯುತ್ತಿದೆ. ಪ್ರತಿ ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ಮೈದಾನದಲ್ಲಿ ವಿವಿಧ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

    ದಕ್ಷಿಣ ಆಫ್ರಿಕಾ ತಂಡದಲ್ಲಿ ಕಪ್ಪು ವರ್ಣೀಯ ಆಟಗಾರರು ಮತ್ತು ಬಿಳಿ ವರ್ಣೀಯ ಆಟಗಾರರು ಇದ್ದಾರೆ. ಹಾಗಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಕಡ್ಡಾಯವಾಗಿ ಆಟಗಾರೆಲ್ಲರೂ ಮಂಡಿಯೂರಿ ಬಿಎಲ್‍ಎಂಗೆ ಬೆಂಬಲಿಸಬೇಕಾಗಿ ಆದೇಶ ಹೊರಡಿಸಿತ್ತು. ಇದಕ್ಕೆ ಒಪ್ಪದ ಡಿ ಕಾಕ್ ತಂಡದಿಂದ ಹಿಂದೆ ಸರಿದಿದ್ದಾರೆ. ಇದೀಗ ಡಿ ಕಾಕ್ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಡಿ ಕಾಕ್ ಆಫ್ರಿಕಾ ತಂಡದಿಂದಲೇ ಕಿಕ್ ಔಟ್ ಆಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಪಾಕ್ ಗೆಲವು ಸಂಭ್ರಮಿಸಿದವ್ರ ವಿರುದ್ಧ ದೂರು ದಾಖಲಿಸಿದವರಿಗೆ ಉಗ್ರರ ವಾರ್ನಿಂಗ್

    ಬಿಎಲ್‍ಎಂ ಆಂದೋಲನಕ್ಕೆ ವಿಶ್ವಕಪ್‍ನಲ್ಲಿ ಎಲ್ಲಾ ತಂಡಗಳು ಕೂಡ ಬೆಂಬಲ ಸೂಚಿಸುತ್ತಿದೆ. ಇದರಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮುನ್ನ ಭಾರತದ ಆಟಗಾರರೆಲ್ಲರೂ ಮಂಡಿಯೂರಿ ಸಂಪೂರ್ಣವಾಗಿ ಬಿಎಲ್‍ಎಂಗೆ ಬೆಂಬಲ ಸೂಚಿಸಿದ್ದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ