Tag: Blessy

  • ಹೊಂಬಾಳೆ ಫಿಲ್ಮ್ಸ್ ತೆಕ್ಕೆಗೆ ಆಡುಜೀವಿತಂ

    ಹೊಂಬಾಳೆ ಫಿಲ್ಮ್ಸ್ ತೆಕ್ಕೆಗೆ ಆಡುಜೀವಿತಂ

    ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಅವರ ನಿರ್ದೇಶನದಲ್ಲಿ ಪೃಥ್ವಿರಾಜ್ ಸುಕುಮಾರನ್ (Prithviraj) ನಾಯಕರಾಗಿ ನಟಿಸಿರುವ  ಬಹು ನಿರೀಕ್ಷಿತ ‘ಆಡುಜೀವಿತಂ’(ಗೋಟ್ ಲೈಫ್) (Aadujeevitham) ಚಿತ್ರ ಇದೇ ಮಾರ್ಚ್ 28 ರಂದು ತೆರೆಗೆ ಬರಲಿದೆ. ಹೆಸರಾಂತ ಹೊಂಬಾಳೆ ಫಿಲಂಸ್ (Hombale Films) ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆಯ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು  ಅರ್ಪಿಸಿ,ಬಿಡುಗಡೆ ಮಾಡುತ್ತಿದ್ದಾರೆ.

    ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರು ಹಾಗೂ ನಟ ಪೃಥ್ವಿರಾಜ್ ಸುಕುಮಾರನ್ ಅವರು ಆತ್ಮೀಯ ಸ್ನೇಹಿತರು. ಹೊಂಬಾಳೆ ಫಿಲಂಸ್ ನ ಕೆ.ಜಿ.ಎಫ್, ಕಾಂತಾರದಂತಹ ಜನಪ್ರಿಯ ಚಿತ್ರಗಳನ್ನು ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ಬಿಡುಗಡೆ ಮಾಡಿದ್ದರು. ಈಗ ಪೃಥ್ವಿರಾಜ್ ಅವರ ನಟನೆಯ, ವಿಭಿನ್ನ ಕಥಾಹಂದರ ಹೊಂದಿರುವ “ಆಡುಜೀವಿತಂ” ಚಿತ್ರವನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಕರ್ನಾಟಕದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದೆ. ಈ ಚಿತ್ರದ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

    ನನಗೆ ವಿಜಯ್ ಕಿರಗಂದೂರ್ ಅವರು ಆತ್ಮೀಯ ಸ್ನೇಹಿತರು ಎಂದು ಮಾತು ಆರಂಭಿಸಿದ ನಟ ಪೃಥ್ವಿರಾಜ್, ನಮ್ಮ ಆಡುಜೀವಿತಂ ಚಿತ್ರವನ್ನು  ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ, ಕೆಜಿಎಫ್, ಕಾಂತಾರ ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗುತ್ತಿರುವುದು ತುಂಬಾ ಸಂತೋಷವಾಗಿದೆ. ಇನ್ನು ಬ್ಲೆಸ್ಸಿ ಅವರು ಗೋಟ್ ಲೈಫ್ ಚಿತ್ರ ಮಾಡಬೇಕೆಂದುಕೊಂಡಿದ್ದು 2008 ರಲ್ಲಿ. ಚಿತ್ರೀಕರಣ ಆರಂಭವಾಗಿದ್ದು 2018 ರಲ್ಲಿ. ಈ ಚಿತ್ರಕ್ಕಾಗಿ ಹದಿನಾರು ವರ್ಷಗಳ ಪರಿಶ್ರಮವಿದೆ. ನಾನು ಈ ಚಿತ್ರಕ್ಕಾಗಿ 31 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ಇದು ಬೆನ್ಯಾಮಿನ್ ಅವರು ಬರೆದಿರುವ “ಆಡುಜೀವಿತಂ” ಕಾದಂಬರಿ ಆಧಾರಿತ ಚಿತ್ರ. ಈ ಜನಪ್ರಿಯ ಕಾದಂಬರಿ ಈವರೆಗೂ 251 ಬಾರಿ ಮುದ್ರಣವಾಗಿದೆ. ನಜೀಬ್ ಎಂಬುವವರ ಜೀವನದ ನೈಜ ಕಥೆ ಆಧರಿಸಿದೆ. ಅಮಲಾ ಪೌಲ್, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ ಎಂದರು.

    ಚಿತ್ರ ಮಾರ್ಚ್ 28 ರಂದು ಮಲಯಾಳಂ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಎಲ್ಲರೂ ನೋಡಿ ಎಂದರು ನಿರ್ದೇಶಕ ಬ್ಲೆಸ್ಸಿ. ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಸಹ ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

  • ‘ಆಡು ಜೀವತಂ’ ಸಿನಿಮಾ ನನ್ನ ಕನಸಾಗಿತ್ತು: ಪೃಥ್ವಿರಾಜ್ ಸುಕುಮಾರನ್

    ‘ಆಡು ಜೀವತಂ’ ಸಿನಿಮಾ ನನ್ನ ಕನಸಾಗಿತ್ತು: ಪೃಥ್ವಿರಾಜ್ ಸುಕುಮಾರನ್

    ‘ಆಡು ಜೀವಿತಂʼ (Aadujeevitham Movie) ಸದ್ಯ ದೇಶದ ಸಿನಿ ರಸಿಕರ ಗಮನ ಸೆಳೆದ ಮಲಯಾಳಂ ಚಿತ್ರ. ಮಾಲಿವುಡ್‌ ಸೂಪರ್‌ ಸ್ಟಾರ್‌, ʼಸಲಾರ್‌ʼ ಚಿತ್ರದ ಮೂಲಕ ಮಿಂಚಿದ ಪೃಥ್ವಿರಾಜ್‌ ಸುಕುಮಾರನ್ (Prithviraj Sukumaran) ಅಭಿನಯದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕಾಡೆಮಿ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ (A.R.Rahman) ಈ ಸಿನಿಮಾಕ್ಕೆ ಸಂಗೀತ ನೀಡಿರುವುದು ವಿಶೇಷ.

    ಈ ಚಲನಚಿತ್ರವು ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ‘ಆಡು ಜೀವಿತಂ’ ಕಾದಂಬರಿಯನ್ನು ಆಧರಿಸಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ಅದೃಷ್ಟವನ್ನು ಹುಡುಕುತ್ತಾ ವಿದೇಶಕ್ಕೆ ವಲಸೆ ಹೋದ ಯುವಕ ನಜೀಬ್‌ನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ  ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್‌, ಟೀಸರ್‌ ಕುತೂಹಲ ಮೂಡಿಸಿದೆ.

    ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ.  ಈ ಚಿತ್ರ ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಇದೇ ತಿಂಗಳ28ರಂದು ದೇಶಾದ್ಯಂತ  ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಂಗದೂರು ರಿಲೀಸ್ ಮಾಡುತ್ತಿದ್ದಾರೆ. ಆಡು ಜೀವಿತಂ ಚಿತ್ರದ ಪ್ರಚಾರಕ್ಕಾಗಿ‌ ಬೆಂಗಳೂರಿಗೆ ಆಗಮಿಸಿದ  ನಾಯಕನಟ ಪೃಥ್ವಿರಾಜ್‌ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೆಸ್ಸಿ ಹಾಗು ನಟ ಜಿಮ್ಮಿ ಜೀನ್ ಲೂಯಿಸ್‌ ಭಾನುವಾರ ಸಂಜೆ ಮಾಧ್ಯಮಗಳ ಮುಂದೆ ಹಾಜರಾಗಿ ಗೋಟ್ ಲೈಫ್ ಚಿತ್ರದ ಕುರಿತಂತೆ ಒಂದಷ್ಟು ‌ಮಾಹಿತಿಗಳನ್ನು ಹಂಚಿಕೊಂಡರು.

    2018ರಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದ್ದು ನಂತರ ಕೋವಿಡ್ ಸೇರಿ ಅನೇಕ ಕಾರಣದಿಂದ ಚಿತ್ರ ತಡವಾಗಿದೆ. ಗ್ರೇಟೆಸ್ಟ್ ಸರ್ವೈವಲ್  ಅಡ್ವೆಂಚರ್‌ ಸಿನಿಮಾ ಇದಾಗಿದ್ದೂ ಒಂದು ಇನ್ ಸ್ಪಿರೇಷನ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ಪೃಥ್ವಿ ರಾಜ್ ಸುಕುಮಾರನ್  ನಜೀಬ್ ಮೊಹಮ್ಮದ್ ಅವರ ನೈಜ ಕಥೆಯನ್ನು ಈ ಚಿತ್ರದಲ್ಲಿ ಈ ಚಿತ್ರದ ಮೂಲಕ ತೆರೆಯಮೇಲೆ ತಂದಿದ್ದೇವೆ. ಇದು 16 ವರ್ಷಗಳ ಸುದೀರ್ಘ/ಪಯಣ ಈ ಮೊದಲು ಬೆನ್ನಿಮನ್ ಅವರು ನಜೀಮ್ ಕಥೆಯನ್ನು ಪುಸ್ತಕ ರೂಪದಲ್ಲಿ ತಂದರು, ಆ ಪುಸ್ತಕ ಮಾರಾಟ ದಾಖಲೆಯನ್ನೆ ಬರೆಯಿತು. ನಂತರ ಅದನ್ನೇ ಇಟ್ಟುಕೊಂಡು ಗೋಟ್ ಲೈಫ್ ಚಿತ್ರ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿ ಸ್ವಲ್ಪ ಬ್ರೇಕ್ ಆಯ್ತು, ಈ ಚಿತ್ರ ಪಾತ್ರಕ್ಕಾಗಿ ನಾನು 31 ಕೆಜಿ ತೂಕ ಕಳೆದಿಕೊಂಡಿದ್ದೆ. ಒಂದುವರೆಯಿಂದ  ಎರಡು ವರ್ಷ ಶೂಟಿಂಗ್ ಸ್ಟಾಪ್ ಆಗಿದ್ದು ವೇಟ್ ಲಾಸ್ ಮಾಡಿಕೊಳ್ಳಲು ಸಮಯ ಸಿಕ್ಕಿತು ಎಂದು ಹೇಳಿದರು.

    ನಂತರ  ಚಿತ್ರದ ನಿರ್ದೇಶಕ ಬ್ಲೆಸ್ಸಿ ಮಾತಾನಾಡಿ ಈ ಸಿನಿಮಾ 16 ವರ್ಷಗಳ ಕನಸು. ಇದೊಂದು ನೈಜಕಥೆಯಾಗಿದ್ದು‌ ಫಿಷರ್‌ ಮ್ಯಾನ್ ನಜೀಬ್ ನ ಕಥೆಯಾಗಿದೆ. ಇದೇ 28ಕ್ಕೆ ಬಿಡುಗಡೆಯಾಗಿತ್ತಿದೆ ಅಂತ ಹೇಳಿದರು.

  • ಪೃಥ್ವಿರಾಜ್ ಸುಕುಮಾರನ್ ನಟನೆಯ ದಿ ಗೋಟ್ ಲೈಫ್ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್

    ಪೃಥ್ವಿರಾಜ್ ಸುಕುಮಾರನ್ ನಟನೆಯ ದಿ ಗೋಟ್ ಲೈಫ್ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್

    ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ಅಭಿನಯದ ದಿ ಗೋಟ್ ಲೈಫ್ (The Goat Life), ದಿ ಎಪಿಕ್ ಟೇಲ್ ಆಫ್ ದಿ ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್ ಸಿನಿಮಾಗೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. 2024ರ ಏಪ್ರಿಲ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ  (Blessy)ನಿರ್ದೇಶನದ ಸಿನಿಮಾ.

    ದಿ ಗೋಟ್ ಲೈಫ್ ಚಿತ್ರದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ  ಕಥೆ ಆಧರಿಸಿದ ಚಿತ್ರವಾಗಿದೆ.

    ಬ್ಲೆಸ್ಸಿ ನಿರ್ದೇಶನದ ಈ ಸಿನಿಮಾವನ್ಬು ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದೆ. ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಟ್ ಲೈಫ್ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎ.ಆರ್.ರೆಹಮಾನ್ ಮತ್ತು ರೆಸುಲ್ ಪೂಕುಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವಿದೆ.

    ಚಿತ್ರದ ಅದ್ಭುತ ದೃಶ್ಯಗಳನ್ನು ಸುನಿಲ್ ಕೆ.ಎಸ್ ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ.  ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮಲಯಾಳಂ ಚಿತ್ರೋದ್ಯಮದ ಅತಿದೊಡ್ಡ ಸಿನಿಮಾ ಎನಿಸಿದೆ. ಅಂದಹಾಗೆ ಈ ಚಿತ್ರ ಮಲಯಾಳಂ ಸಾಹಿತ್ಯ ಪ್ರಪಂಚದ ಅತ್ಯಂತ ಜನಪ್ರಿಯ ಕಾದಂಬರಿ ‘ಆಡು ಜೀವಿತಂ’ ಆಧರಿಸಿದೆ, ಇದು ವಿದೇಶಿ ಸೇರಿದಂತೆ 12 ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿದೆ.  ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಾದಂಬರಿ  90 ರ ದಶಕದಲ್ಲಿ ಅದೃಷ್ಟ ಹುಡುಕಿ ವಲಸೆ ಬಂದ ನಜೀಬ್ ಎಂಬ ಯುವಕನ ನೈಜ ಕಥೆಯನ್ನು ಹೊಂದಿದೆ.

    ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಬ್ಲೆಸ್ಸಿ, “ದಿ ಗೋಟ್ ಲೈಫ್ ಎಲ್ಲೆಡೆ ಸಲ್ಲುವ ಕಥೆ. ನಿರೂಪಣೆ ಸಲುವಾಗಿ ಸಾಜಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದೇನೆ. ಕಾದಂಬರಿಯನ್ನು ಸಿನಿಮಾ ಮಾಡುವಾಗ ಅನೇಕ ಸವಾಲು ಎದುರಾದವು.  ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಕೊಡುವ ಪ್ರಯತ್ನ ಮಾಡಿದ್ದೇನೆ ಎನ್ನುತ್ತಾರೆ. ಗೋಟ್ ಲೈಫ್  ಏಪ್ರಿಲ್ 10 ರಂದು ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ  ಬಿಡುಗಡೆಯಾಗಲಿದೆ.