Tag: BlackBerry

  • ಬ್ಲ್ಯಾಕ್‌ಬೆರಿ ಫೋನ್‌ಗಳು ಇಂದಿನಿಂದ ನಿಷ್ಕ್ರಿಯ

    ಒಟ್ಟಾವಾ: ನಿಮ್ಮ ಬಳಿ ಬ್ಲ್ಯಾಕ್‌ಬೆರಿ ಕಂಪನಿಯ ಫೋನ್ ಇದೆಯೇ? ಹಾಗಿದ್ದರೆ ಇಂದಿನಿಂದ ಅವುಗಳು ನಿಮ್ಮ ಡ್ರಾಯರ್ ಇಲ್ಲವೇ ಶೋಕೇಸ್ ಸೇರಲಿದೆ. ಏಕೆಂದರೆ ಈ ಫೋನ್‌ಗಳು ಇಂದಿನಿಂದ ಕಾರ್ಯ ನಿರ್ವಹಿಸುವುದಿಲ್ಲ.

    ಕ್ವಾರ್ಟಿ ಕೀಪ್ಯಾಡ್ ಜನಪ್ರಿಯಗೊಳಿಸಿದ ಬ್ಲ್ಯಾಕ್‌ಬೆರಿ ಫೋನ್‌ಗಳು ಇಂದಿನಿಂದ ಕಾರ್ಯ ನಿರ್ವಹಿಸುವುದಿಲ್ಲ. ನೀವು ಈ ಫೋನ್‌ಗಳಿಂದ ಕರೆ ಮಾಡಲು, ಸಂದೇಶ ಕಳುಹಿಸಲು, ಇಂಟರ್‌ನೆಟ್, ವೈಫೈಗಳಂತಹ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ತನ್ನ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

    ಬ್ಲ್ಯಾಕ್‌ಬೆರಿ 7.1 ಒಎಸ್, ಬ್ಲ್ಯಾಕ್‌ಬೆರಿ 10 ಸಾಫ್ಟ್ವೇರ್, ಬ್ಲ್ಯಾಕ್‌ಬೆರಿ ಪ್ಲೇಬುಕ್2.1 ಹಾಗೂ ಇದರ ಹಿಂದಿನ ಆವೃತ್ತಿಗಳು ಲೆಗೆಸಿ ಸೇವೆಗಳು 4 ಜನವರಿ 2022ರಿಂದ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ ಎಂದು ಕಂಪನಿ ತಿಳಿಸಿತ್ತು. ಇದನ್ನೂ ಓದಿ: Whatsapp – ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳು ಬ್ಯಾನ್‌

    ಫೋನ್‌ಗಳು ಕಾರ್ಯನಿರ್ವಹಿಸದೇ ಇರುವ ಫೋನ್‌ಗಳು ಕೇವಲ ಹಳೆಯ ಆವೃತ್ತಿಯಾಗಿದೆ. ಆಂಡ್ರಾಯ್ಡ್ ಓಎಸ್ ಹೊಂದಿರುವ ಬ್ಲ್ಯಾಕ್‌ಬೆರಿ ಮೊಬೈಲ್‌ಗಳನ್ನು ಬಳಸುವವರು ಚಿಂತೆ ಪಡುವ ಅಗತ್ಯ ಇಲ್ಲ. ಈ ಸಾಧನಗಳು ಮುಂದೆಯೂ ಕಾರ್ಯನಿರ್ವಹಿಸಲಿದೆ.

    ಬ್ಲ್ಯಾಕ್‌ಬೆರಿ ಕಂಪನಿ ಸಿಇಒ ಜಾನ್ ಚೆನ್ 2020ರಲ್ಲಿ ಕಂಪನಿ ಸಾಫ್ಟ್‌ವೇರ್ ಕಂಪನಿಯಾಗಿ ಪರಿವರ್ತನೆಯಾಗಿದೆ ಎಂದು ಘೋಷಿಸಿದ್ದರು. ಬ್ಲ್ಯಾಕ್‌ಬೆರಿ ಲಿಂಕ್, ಬ್ಲ್ಯಾಕ್‌ಬೆರಿ ಡೆಸ್ಕ್ ಟಾಪ್ ಮ್ಯಾನೇಜರ್, ಬ್ಲ್ಯಾಕ್‌ಬೆರಿ ಬ್ಲೆಂಡ್, ಬ್ಲ್ಯಾಕ್‌ಬೆರಿ ಪ್ರೊಟೆಕ್ಟ್‌ಗಳ ಮೇಲೂ ಈ ಮುಕ್ತಾಯದ ಪ್ರಭಾವ ಬೀರಲಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: 35 ರೂ. ಬೆಲೆ ಬಾಳುವ ಕೋವಿಡ್ ಆಂಟಿವೈರಲ್ ಡ್ರಗ್ ಮುಂದಿನ ವಾರ ಮಾರುಕಟ್ಟೆಗೆ

    ನಿಮ್ಮ ಬ್ಲ್ಯಾಕ್‌ಬೆರಿ ಫೋನ್‌ನಲ್ಲಿ ಸಂಗ್ರಹವಾಗಿರುವ ಡೇಟಾದ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಇದಕ್ಕೂ ಬ್ಲ್ಯಾಕ್‌ಬೆರಿ ಪರಿಹಾರ ಹುಡುಕಿದೆ. ಇದಕ್ಕಾಗಿ ಕಂಪನಿ ಬಳಕೆದಾರರ ಕೆಲವು ವೈಯಕ್ತಿಕ ಮಾಹಿತಿಗಳನ್ನು ಕೆಲವು ಸಮಯಗಳ ವರೆಗೆ ಉಳಿಸಿಕೊಳ್ಳುತ್ತದೆ ಹಾಗೂ ಬಳಕೆದಾರರಿಗೆ ಆ ಮಾಹಿತಿಗಳ ಅಗತ್ಯ ಇಲ್ಲವಾದಲ್ಲಿ ಅಳಿಸಿ ಹಾಕುತ್ತದೆ ಎಂದು ಕಂಪನಿ ತಿಳಿಸಿದೆ.

  • ಈ ಫೋನ್‍ಗಳಿಗೆ ಡಿಸೆಂಬರ್ 31ರ ನಂತರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಈ ಫೋನ್‍ಗಳಿಗೆ ಡಿಸೆಂಬರ್ 31ರ ನಂತರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ವಾಟ್ಸಪ್ ಡಿಸೆಂಬರ್ 31 ರ ನಂತರ ಆಯ್ದ ಮೊಬೈಲ್ ಓಎಸ್ ಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ. ಬ್ಲಾಕ್ ಬೆರಿ ಓಎಸ್, ಬ್ಲಾಕ್‍ಬೆರಿ 10 ಓಎಸ್, ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ ಹಳೆಯ ವಿಂಡೋಸ್ ಫೋನ್ ಗಳಿಗೆ ಸಪೋರ್ಟ್ ನೀಡುವುದಿಲ್ಲ ಎಂದು ತಿಳಿಸಿದೆ.

    ಈ ಫೋನ್ ಗಳಲ್ಲದೇ ಡಿಸೆಂಬರ್ 2018ರ ನಂತರ ನೋಕಿಯಾ ಎಸ್ 40 ಫೋನ್‍ ಗಳಲ್ಲಿ  ಆ್ಯಪ್ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ಆಂಡ್ರಾಯ್ಡ್ 2.3.7 ಆವೃತ್ತಿ ಫೋನ್ ಗಳಲ್ಲಿ 2020ರ ಫೆಬ್ರವರಿ 1ರ ನಂತರ ಸಪೋರ್ಟ್ ನೀಡುವುದಿಲ್ಲ ಎಂದು ವಾಟ್ಸಪ್ ಹೇಳಿದೆ.

    ತನ್ನ ಬ್ಲಾಗ್ ನಲ್ಲಿ ವಾಟ್ಸಪ್, ಕೆಲವು ಓಎಸ್ ಗಳಲ್ಲಿ ರನ್ ಆಗುತ್ತಿರುವ ಫೋನ್ ಗಳಿಗೆ ಬೆಂಬಲ ನೀಡದೇ ಇರಲು ನಿರ್ಧರಿಸಿದ್ದೇವೆ. ಹೀಗಾಗಿ ಈ ಫೋನ್ ಗಳನ್ನು ಬಳಸುವ ಗ್ರಾಹಕರು ಹೊಸ ಓಎಸ್ ಗೆ ಅಪ್ ಗ್ರೇಡ್ ಆಗಬೇಕು ಎಂದು ತಿಳಿಸಿದೆ. ಆಂಡ್ರಾಯ್ಡ್ 4.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯ ಓಎಸ್, ಐಓಎಸ್ 7 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿ ಐಓಎಸ್ ಹೊಂದಿರುವ ಫೋನ್, ವಿಂಡೋಸ್ ಫೋನ್ 8.1 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನ್ ಗಳಿಗೆ ನೀಡುತ್ತಿರುವ ಬೆಂಬಲ ಮುಂದುವರಿಯುತ್ತದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ಕೊಟ್ಟ ವಾಟ್ಸಪ್!

    ಹೊಸ ಫೋನ್ ಪಡೆದುಕೊಂಡರೆ ವಾಟ್ಸಪ್ ಆ್ಯಪ್ ಇನ್ ಸ್ಟಾಲ್ ಮಾಡಿ ಫೋನ್ ನಂಬರ್ ವೆರಿಫೈ ಮಾಡಿ. ಆದರೆ ವಾಟ್ಸಪ್ ಆ್ಯಪ್ ಒಂದು ಬಾರಿ ಒಂದೇ ಫೋನಿನಲ್ಲಿ ಮಾತ್ರ ಆ್ಯಕ್ಟಿವೇಟ್ ಆಗಿರುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹೇಳಿದೆ.

    ಈ ವೇಳೆ ಚಾಟ್ ಹಿಸ್ಟರಿಯನ್ನು ಎರಡು ಫೋನ್ ಗಳಿಗೆ ನೇರವಾಗಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಆದರೆ ಈ ಮೇಲ್ ಕೊಟ್ಟರೆ ಚಾಟ್ ಹಿಸ್ಟರಿಯನ್ನು ಕಳುಹಿಸಿಕೊಡುವುದಾಗಿ ವಾಟ್ಸಪ್ ಹಳೆಯ ಫೋನ್ ಗಳನ್ನು ಬಳಸುತ್ತಿರುವ ಗ್ರಾಹಕರಿಗೆ ತಿಳಿಸಿದೆ.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ. ಇದನ್ನೂ ಓದಿ: ವಾಟ್ಸಪ್ ಅಡ್ಮಿನ್‍ಗಳೇ ಹುಷಾರ್! ನೀವು ಅಡ್ಮಿನ್‍ಗಳಾಗಿರುವ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದ್ರೆ ಈ ಸ್ಟೋರಿ ಓದಿ

    ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು. ಇದನ್ನೂ ಓದಿ: ಜಾಹೀರಾತು ಸೆಂಡ್ ಮಾಡದೇ ಹಣ ಮಾಡಲು ಮುಂದಾದ ವಾಟ್ಸಪ್ 

  • ಬ್ಲಾಕ್‍ಬೆರಿ ಕೀಒನ್ ಆಂಡ್ರಾಯ್ಡ್ ಫೋನ್ ಬಿಡುಗಡೆ: ವಿಶೇಷತೆ ಏನು? ಬೆಲೆ ಎಷ್ಟು?

    ಬ್ಲಾಕ್‍ಬೆರಿ ಕೀಒನ್ ಆಂಡ್ರಾಯ್ಡ್ ಫೋನ್ ಬಿಡುಗಡೆ: ವಿಶೇಷತೆ ಏನು? ಬೆಲೆ ಎಷ್ಟು?

    ಬಾರ್ಸಿಲೋನಾ: ಸ್ಪೇನ್ ರಾಜಧಾನಿ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಕೆನಡಾದ ಬ್ಲಾಕ್‍ಬೆರಿ ಕಂಪೆನಿಯ ಆಂಡ್ರಾಯ್ಡ್ ಫೋನ್ ಬಿಡುಗಡೆ ಮಾಡಿದೆ.

    ಈ ಫೋನಿಗೆ ಕೀಒನ್ ಎಂದು ಹೆಸರಿಡಲಾಗಿದ್ದು, ಟಚ್‍ಸ್ಕ್ರೀನ್ ಜೊತೆಗೆ ಕ್ವಾರ್ಟಿ ಕೀಪ್ಯಾಡ್ ನೀಡಿದೆ. ಆಂಡ್ರಾಯ್ಡ್ ನೂಗಟ್ ಓಎಸ್ ಹೊಂದಿರುವ ಈ ಫೋನಿಗೆ 549 ಡಾಲರ್(ಅಂದಾಜು 38,600 ರೂ.) ಬೆಲೆಯನ್ನು ನಿಗದಿ ಮಾಡಿದ್ದು, ಏಪ್ರಿಲ್ 2017ರಿಂದ ಮಾರಾಟ ಮಾಡಲಾಗುವುದು ಎಂದು ಬ್ಲಾಕ್‍ಬೆರಿ ತಿಳಿಸಿದೆ.

    ಅಕ್ಟಾಕೋರ್ ಪ್ರೊಸೆಸರ್ ಹೊಂದಿರುವ ಈ ಫೋನಿಗೆ ಫಾಸ್ಟ್ ಚಾರ್ಜಿಂಗ್ ವಿಶೇಷತೆ ನೀಡಿದ್ದು 36 ನಿಮಿಷದಲ್ಲೇ ಶೇ.50 ಬ್ಯಾಟರಿ ಚಾರ್ಜ್ ಆಗುತ್ತದೆ ಬ್ಲಾಕ್‍ಬೆರಿ ಹೇಳಿದೆ.

    ಗುಣವೈಶಿಷ್ಟ್ಯಗಳು:
    ಬಾಡಿ:
    ಸಿಂಗಲ್ ಸಿಮ್
    149.1*72.4*9.4 ಮೀಟರ್
    ಜಿಎಸ್‍ಎಂ/ಎಚ್‍ಎಎಸ್‍ಪಿಎ/ಎಲ್‍ಟಿಇ
    ಕೆಪಾಸಿಟಿವ್ ಟಚ್ 4 ರೋ ಬ್ಲಾಕ್‍ಬೆರಿ ಕೀಬೋರ್ಡ್
    180 ಗ್ರಾಂ ತೂಕ

    ಡಿಸ್ಪ್ಲೇ:
    4.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಟಚ್‍ಸ್ಕ್ರೀನ್
    1080*1620 ಪಿಕ್ಸೆಲ್, 434 ಪಿಪಿಐ
    ಕಾರ್ನಿಂಗ್ ಗೊರಿಲ್ಲ ಗ್ಲಾಸ್ 4

    ಪ್ಲಾಟ್‍ಫಾರಂ:
    ಆಂಡ್ರಾಯ್ಡ್ 7.1 ನೂಗಟ್ ಓಎಸ್
    2.0 GHz ಕ್ವಾಲಕಂ ಸ್ನಾಪ್‍ಡ್ರಾಗನ್ 625 ಅಕ್ಟಾಕೋರ್ 2. ಕಾರ್ಟೆಕ್ಸ್ ಎ53 ಪ್ರೊಸೆಸರ್
    Adreno 506 ಗ್ರಾಫಿಕ್ಸ್ ಪ್ರೊಸೆಸರ್

    ಮೆಮೋರಿ
    ಮೈಕ್ರೋ ಎಸ್‍ಡಿ ಕಾರ್ಡ್ ಮೂಲಕ 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
    32 ಜಿಬಿ ಆಂತರಿ ಮೆಮೊರಿ
    3ಜಿಬಿ ರಾಮ್

    ಕ್ಯಾಮೆರಾ
    12 ಎಂಪಿ ಹಿಂದುಗಡೆ ಕ್ಯಾಮೆರಾ
    ಡ್ಯುಯಲ್ ಎಲ್‍ಇಡಿ ಫ್ಲಾಶ್
    f/2.0 ಅಪಾರ್ಚರ್, 1/2.3” ಸೆನ್ಸರ್ ಸೈಜ್
    ಹಿಂದುಗಡೆ 8 ಎಂಪಿ ಕ್ಯಾಮೆರಾ

    ಇತರೇ:
    ಮುಂದುಗಡೆ ಫಿಂಗರ್ ಪ್ರಿಂಟ್ ಸೆನ್ಸರ್
    ಫಾಸ್ಟ್ ಬ್ಯಾಟರಿ ಚಾರ್ಜಿಂಗ್,(36 ನಿಮಿಷದಲ್ಲಿ ಶೇ.50 ಚಾರ್ಜ್)
    ತೆಗೆಯಲು ಸಾಧ್ಯವಿಲ್ಲದ ಲಿಯಾನ್ 3505 ಎಎಎಚ್ ಬ್ಯಾಟರಿ