Tag: black pepper

  • ಕರಿಮೆಣಸಿಗೆ ಜಿಎಸ್‌ಟಿ ಇಲ್ಲ – ಸಂಸದ ಯದುವೀರ್ ಕಾರ್ಯಕ್ಕೆ ಕೊಡಗಿನ ಜನರ ಮೆಚ್ಚುಗೆ

    ಕರಿಮೆಣಸಿಗೆ ಜಿಎಸ್‌ಟಿ ಇಲ್ಲ – ಸಂಸದ ಯದುವೀರ್ ಕಾರ್ಯಕ್ಕೆ ಕೊಡಗಿನ ಜನರ ಮೆಚ್ಚುಗೆ

    ಮಡಿಕೇರಿ: ಕೇಂದ್ರ ಸರ್ಕಾರ ಕರಿ ಮೆಣಸಿಗೆ (Black Pepper) ವಿಧಿಸಿದ್ದ GST ಯನ್ನು (ಸರಕು ಮತ್ತು ಸೇವಾ ತೆರಿಗೆ) ಸಂಪೂರ್ಣ ತೆಗೆದು ಹಾಕಿದೆ.

    ಕೊಡಗಿನ ಗೋಣಿಕೊಪ್ಪ ಬೆಳೆಗಾರರೋಬ್ಬರಿಗೆ 1 ಕೋಟಿ GST ಕಟ್ಟುವಂತೆ ನೋಟಿಸ್ ಬಂದಿತ್ತು. ಬಳಿಕ ಅವರು ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗದೊಂದಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಮೈಕ್ರೋ ಫೈನಾನ್ಸ್, ಅಕ್ರಮ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಾಳಿ

    ಈ ಸಂಬಂಧ ಯದುವೀರ್ (Yaduveer Wadiyar) ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನ ಸೆಳೆದಿದ್ದರು. ಅದರಂತೆ ಈಗ ಕರಿಮೆಣಸು ಬೆಳೆಗಾರರಿಗೆ ಕೇಂದ್ರ ಗುಡ್‌ನ್ಯೂಸ್‌ ಕೊಟ್ಟಿದೆ. ಕರಿಮೆಣಸು ಬೆಳೆಗೆ GST ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ವಿವಿಧ ಬೆಳೆಗಾರ ಸಂಘಟನೆಗಳು ಸಂಸದ ಯದುವೀರ್ ಒಡೆಯರ್ ಅವರಿಗೆ ಧನ್ಯವಾದ ಸಲ್ಲಿಸಿವೆ. ಇದನ್ನೂ ಓದಿ: ರಾಜಧಾನಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ – ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್

  • ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಮಡಿಕೇರಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಇದು ಕೊಡಗಿನ ಕಾಫಿ ಹಾಗೂ ಕರಿಮೆಣಸು ಬೆಳೆಗಾರರ ಸ್ಥಿತಿಯಾಗಿದೆ. ಬೇಕಾದಾಗ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಕಾಫಿ ಕರಿಮೆಣಸು ಗಿಡಗಳು ದಿನದಿಂದ ದಿನಕ್ಕೆ ಒಣಗುತ್ತಿವೆ.

    ಡಿಸೆಂಬರ್ ನಲ್ಲಿ ಆರಂಭವಾಗುವ ಕಾಫಿ ಕೂಯ್ಲು ಮಾರ್ಚ್‍ವರೆಗೂ ನಡೆಯುತ್ತದೆ. ನಂತರ ಮಳೆ ಅಥವಾ ನೀರಾವರಿ ಮೂಲಕ ಬೆಳೆಗಾರರು ಕಾಫಿಗಿಡದಲ್ಲಿ ಹೂಗಳನ್ನರಳಿಸಿ ಮುಂದಿನ ಬೆಳೆಗೆ ತೋಟಗಳನ್ನ ಅಣಿಗೊಳಿಸುತ್ತಾರೆ. ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯೇ ಬಿದ್ದ ಕಾರಣ ಕಾಫಿ ಗಿಡಗಳು ಒಣಗಲು ಆರಂಭವಾಗಿದೆ.

    ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಕೊಡಗಿನಲ್ಲಿ ಮಳೆಯಾಗಿ ಕಾಫಿ ಗಿಡಗಳಲ್ಲಿ ಹೂ ಬರುವುದು ವಾಡಿಕೆ. ಅದರೆ ಈ ಬಾರಿ ಮಳೆಯೇ ಬಾರದೇ ಗಿಡಗಳು ನಾಶವಾಗುತ್ತಿವೆ. ಆದರೆ ಕಳೆದ ಒಂದು ವಾರದ ಹಿಂದೆ ಮಳೆ ಬಂದು ಕಾಫಿ ಗಿಡಗಳಲ್ಲಿ ಸ್ವಲ್ಪ ಪ್ರಮಾಣದ ಹೂ ಬಿಟ್ಟಿದೆ. ಈಗ ಹೂ ಬಿಟ್ಟಿರುವುದು ಈಗ ಸಮಸ್ಯೆಯಾಗಿದೆ.

    ಕಾಫಿ ಬೆಳೆಯ ಜೊತೆಗೆ ಕರಿಮೆಣಸು ಬೆಳೆಯುತ್ತಾರೆ. ಈ ಬಾರಿ ಪ್ರತಿ ಕೆಜಿ ಮೆಣಸಿಗೆ 700 ರೂ ಇದೆ. ಆದರೆ ಮಳೆ ಇಲ್ಲದೇ ಮೆಣಸಿನ ಬೀಜವೆಲ್ಲವೂ ಹಾಳಾಗುತ್ತಿದ್ದು, ಗುಣಮಟ್ಟ ಕಡಿಮೆಯಾಗ್ತಿದೆ.

    ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಕರಿಮೆಣಸು ಗಿಡಗಳನ್ನು ತೆಗೆದು ಹೊಸದಾಗಿಯೇ ನಾಟಿ ಮಾಡಬೇಕಾಗುತ್ತದೆ. ಹೀಗೆ ಹೊಸದಾಗಿ ನಾಟಿ ಮಾಡಿದ ಬೆಳೆಯಿಂದ ಫಸಲು ಬರಲು ಸುಮಾರು 5 ರಿಂದ 7 ವರ್ಷ ಬೇಕಾಗುತ್ತದೆ. ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಬಾಳೆಲೆ, ನಿಟ್ಟೂರು, ಮಾಯಾಮುಡಿ ಗ್ರಾಮಗಳ ರೈತರು ಈ ತೊಂದರೆಗೆ ಒಳಗಾಗಿದ್ದಾರೆ.