ಸಲ್ಲದ ಕಾರಣಗಳಿಂದಾಗಿ ಇತ್ತೀಚೆಗೆ ನಟಿಯರು ಸುದ್ದಿ ಆಗುತ್ತಿದ್ದಾರೆ. ಜೊತೆಗೆ ಜೈಲು ಸೇರುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಒರಿಯಾ ನಟಿ ಮೌಶುಮಿ ನಾಯಕ್ (Moushumi Naik). ಲೇಖಕಿಯೊಬ್ಬರಿಗೆ ಬ್ಲ್ಯಾಕ್ ಮೇಲ್ (Black mail) ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತಂದಿದ್ದನ್ನು ಸ್ವತಃ ನಟಿ ಒಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಒರಿಯಾ ಸಿನಿಮಾ ರಂಗದಲ್ಲಿ ಅತ್ಯಂತ ಜನಪ್ರಿಯ ನಟಿ ಮೌಶುಮಿ ನಾಯಕ್, ದುಡ್ಡಿನ ವಿಚಾರದಲ್ಲಿ ಲೇಖಕಿ ಬನಸ್ಮಿತಾ (Banasmita) ಅವರ ಮಾನಹಾನಿ ಮಾಡಿದ್ದರಂತೆ. ಜೊತೆಗೆ ಲೇಖಕಿ ಪತಿಯ ವಿರುದ್ಧ ಚಂದಕಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಕೂಡ ನೀಡಿದ್ದರಂತೆ. ಆನಂತರ ಲೇಖಕಿ ಹಾಗೂ ನಟಿ ರಾಜಿ ಮಾಡಿಕೊಂಡಿದ್ದಾರೆ. ಇದಾದ ನಂತರವೂ ನಿರಂತರವಾಗಿ ನಟಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಲೇಖಕಿ ದೂರು ನೀಡಿದ್ದರು.
ಲೇಖಕಿ ನೀಡಿದ ದೂರಿನ ಆಧಾರದಲ್ಲಿ ಭುವನೇಶ್ವರದ ಇನ್ಫೋಸಿಟಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಸೆಕ್ಸನ್ 385, 294, 506 ಹಾಗೂ 507ರ ಅಡಿಯಲ್ಲಿ ನಟಿಯ ಬಂಧಿಸಲಾಗಿದೆ ಎಂದು ಡಿಸಿಪಿ ಕಚೇರಿಯು ತಿಳಿಸಿದೆ.
ಆಗ್ರಾ: ನಾಲ್ವರು ಕಾಮುಕರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾ ಜಿಲ್ಲೆಯ ಹೋಟೆಲಿನಲ್ಲಿ ನಡೆದಿದೆ.
25 ವರ್ಷ ವಯಸ್ಸಿನ ಸಂತ್ರಸ್ತೆಯ ಆಕ್ಷೇಪಾರ್ಹ ವೀಡಿಯೊವನ್ನು (Video) ಈ ಹಿಂದೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕ್ಷೇಪಾರ್ಹ ವಿಡಿಯೋವನ್ನು ಇಟ್ಟುಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ (Black Mail) ಮಾಡಲಾಗುತ್ತಿತ್ತು. ಬಲವಂತವಾಗಿ ಮದ್ಯ ಸೇವಿಸಿ ಆಕೆಯ ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಅತ್ಯಾಚಾರದ ಆರೋಪಗಳಲ್ಲದೆ, ಕೊಲೆ ಯತ್ನದ ಆರೋಪಗಳನ್ನು ಸಹ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್‌ಗೇ ಬೆಂಕಿ ಇಟ್ಟ ಭೂಪ
ಸಂತ್ರಸ್ತೆ ಹೋಟೆಲಿನ ಉದ್ಯೋಗಿಯಾಗಿದ್ದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಸಂತ್ರಸ್ತೆ ಸಹಾಯಕ್ಕಾಗಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಬಟ್ಟೆ ವ್ಯಾಪಾರಿಯೊಬ್ಬ ಅಶ್ಲೀಲ ವೀಡಿಯೋ ಬ್ಲ್ಯಾಕ್‍ಮೆಲ್ ಮಾಡುತ್ತಿದ್ದ ತನ್ನ ಉದ್ಯೋಗಿಯನ್ನು ಕೊಂದು ಶವವನ್ನು ಟ್ರಾಲಿ ಬ್ಯಾಗ್‍ನಲ್ಲಿಟ್ಟಿದ್ದ ಘಟನೆ ದಕ್ಷಿಣ ದೆಹಲಿಯ ಸರೋಜಿನಿ ನಗರದಲ್ಲಿ ನಡೆದಿದೆ.
ಸಲಿಂಗಕಾಮಿಗಳಿಬ್ಬರು ಲೈಂಗಿಕ ಸಂಬಂಧದಲ್ಲಿ ತೊಡಗಿಕೊಂಡಿದ್ದರು. ಈ ವೀಡಿಯೋವನ್ನು ಮಾಡಿಕೊಂಡಿದ್ದ 22 ವರ್ಷದ ಉದ್ಯೋಗಿಯು 36 ವರ್ಷದ ಬಟ್ಟೆ ವ್ಯಾಪಾರಿಯನ್ನು ಹೆದರಿಸುತ್ತಿದ್ದ. ಜೊತೆಗೆ ಹಣ ನೀಡುವಂತೆ ಒತ್ತಡ ಹೇರುತ್ತಿದ್ದ. ಹಣ ನೀಡದಿದ್ದರೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ವ್ಯಾಪಾರಿಗೆ ಬೆದರಿಕೆ ಹಾಕುತ್ತಿದ್ದ.
ಈ ಹಿನ್ನೆಲೆಯಲ್ಲಿ ಬಟ್ಟೆ ವ್ಯಾಪಾರಿಯು ಆತನನ್ನು ಕೊಲೆ ಮಾಡಲು ಯೋಜನೆಯನ್ನು ರೂಪಿಸಿದ. ಜೊತೆಗೆ ಉತ್ತರ ಪ್ರದೇಶದಲ್ಲಿರುವ ಹಳ್ಳಿಯೊಂದರಲ್ಲಿ ವಾಸಿಸುವ ತನ್ನ ಸೋದರಳಿಯನನ್ನು ಜ.28ರಿಂದು ದೆಹಲಿಗೆ ಕರೆಸಿಕೊಂಡು ಸರೋಜಿನಿ ನಗರದಿಂದ 3ಕಿ.ಮೀ ದೂರದಲ್ಲಿರುವ ದಕ್ಷಿಣ ದೆಹಲಿಯ ಯೂಸುಫ್ ಸರಾಯ್‍ನಲ್ಲಿರುವ ಹೋಟೆಲ್‍ನಲ್ಲಿ ತಂಗಿದ್ದರು.
ನಂತರ ಆ ಯುವಕನನ್ನು ಯಾವುದೋ ಕೆಲಸಕ್ಕಾಗಿ ಹೊಟೆಲ್‍ಗೆ ಕರೆಸಿಕೊಂಡರು. ನಂತರ ಆತನನ್ನು ಹಗ್ಗದಿಂದ ಕಟ್ಟಿ ಕೊಲೆ ಮಾಡಿದರು. ಆ ಶವವನ್ನು ಟ್ರಾಲಿ ಬ್ಯಾಗ್‍ನಲ್ಲಿ ಹಾಕಿಟ್ಟು ಸರೋಜಿನಿ ನಗರದ ಮೆಟ್ರೋ ನಿಲ್ದಾಣದ ಹೊರಗೆ ಇಟ್ಟುಹೋಗಿದ್ದರು. ಆರೋಪಿಗಳು ದೊಡ್ಡ ಟ್ರಾಲಿ ಬ್ಯಾಗ್ ಅನ್ನು ಹೊತ್ತೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ
ಬೆಂಗಳೂರು: ಬಾಲಕನೊಬ್ಬನ ಬೆತ್ತಲೆ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಬಾಲಕನಿಂದ 7 ಲಕ್ಷ ರೂ. ಪಡೆದ ಹಿನ್ನೆಲೆಯಲ್ಲಿ ಆರೋಪಿ ವಿಶ್ವನಾಥ್‍ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಅಪ್ರಾಪ್ತ ಬಾಲಕಿ ಮತ್ತು ಬಾಲಕನೊಬ್ಬನಿಗೆ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಇವರಿಬ್ಬರು ಚಾಟ್ ಮಾಡುತ್ತಿದ್ದರು. ಒಂದು ದಿನ ಬಾಲಕಿ ಚಾಟ್ ಮಾಡುವ ವೇಳೆ ನಿನ್ನ ನಗ್ನ ಫೋಟೋ ಕಳಿಸು ಎಂದು ಬಾಲಕನ ಬಳಿಕ ಕೇಳಿದ್ದಾಳೆ.
ಬಾಲಕಿ ಮಾತಿನಂತೆ ಬಾಲಕ ತನ್ನ ನಗ್ನ ಫೋಟೋ ಕಳುಹಿಸಿದ್ದಾನೆ. ಇತ್ತ ಆರೋಪಿ ವಿಶ್ವಾನಾಥ್ ಬಾಲಕಿಯ ಇನ್ ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಿದ್ದಾನೆ. ಈ ವೇಳೆ ಆರೋಪಿ ವಿಶ್ವನಾಥ್ ಬಾಲಕನ ಬೆತ್ತಲೆ ಫೋಟೋ ಇಟ್ಟುಕೊಂಡು ಬಾಲಕನಿಗೆ ಹಣಕ್ಕೆ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.
ಬಾಲಕ ಮಾನಕ್ಕೆ ಅಂಜಿ ಆರೋಪಿ ವಿಶ್ವನಾಥ್‍ಗೆ ಹಂತ ಹಂತವಾಗಿ ಸುಮಾರು ಏಳು ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣ ನೀಡಿದ್ದಾನೆ. ಆದರೂ ಆರೋಪಿ ಮತ್ತೆ ಮತ್ತೆ ಹಣಕ್ಕಾಗಿ ಬಾಲಕನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು. ಕೊನೆಗೆ ಕುಟುಂಬದವರಿಗೆ ಈ ಬಗ್ಗೆ ತಿಳಿಸಿ ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡ ರಾಜಾಜಿನಗರ ಪೊಲೀಸರು ಆರೋಪಿ ವಿಶ್ವನಾಥ್‍ನನ್ನು ಬಂಧಿಸಿದ್ದಾರೆ.
ಶಿವಮೊಗ್ಗ: ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳ ಪೈಕಿ ಗಂಭೀರ ಸ್ಥಿತಿಯಲ್ಲಿದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾಳೆ.
ಆಪ್ರಾಪ್ತೆ ಕೀರ್ತನಾ (17) ಮೃತಪಟ್ಟ ದುರ್ದೈವಿ. ಕಿಡಿಗೇಡಿಗಳ ಬೆದರಿಕೆಗೆ ಹೆದರಿ ತನ್ನ ಪ್ರಿಯಕರ ಸಂಜಯ್ ನೊಂದಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಕುಂಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಆಯನೂರು ಹಾಗೂ ಮಂಡಘಟ್ಟ ಗ್ರಾಮದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ.
ಏನಿದು ಪ್ರಕರಣ?
ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿ ಕೀರ್ತನಾ ಪ್ರೀತಿಸುತ್ತಿದ್ದರು. ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಆಯನೂರು ಗ್ರಾಮದ ಕೆಲ ಯುವಕರು ಅವರ ವಿಡಿಯೋ ಮಾಡಿದ್ದರು. ನಂತರ ಸಂಜಯ್‍ಗೆ ಪದೇ ಪದೇ ಕರೆ ಮಾಡಿ, ಐದು ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಹಣ ನೀಡಲು ನಿರಾಕರಿಸಿದರೇ, ವಿಡಿಯೋವನ್ನು ವಾಟ್ಸಪ್, ಫೆಸ್‍ಬುಕ್ ಗಳಲ್ಲಿ ಹಾಕುತ್ತೇವೆಂದು ಬೆದರಿಸಿದ್ದರು.
ಬೆದರಿಕೆಯಿಂದ ಬೇಸತ್ತಿದ್ದ ಪ್ರೇಮಿಗಳಿಬ್ಬರು ಸೋಮವಾರ ಕುಂಸಿ ಸಮೀಪದ ಮಂಡಘಟ್ಟದ ಹೊಲದಲ್ಲಿ ಒಟ್ಟಿಗೆ ವಿಷ ಸೇವಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಂಜಯ್ ಮೃತಪಟ್ಟಿದ್ದನು. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗ: ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳ ಪೈಕಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಭೀರವಾಗಿದೆ.
ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿ ಪ್ರೀತಿಸುತ್ತಿದ್ದರು. ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಆಯನೂರು ಗ್ರಾಮದ ಕೆಲ ಯುವಕರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಂಜಯ್‍ಗೆ ಪದೇ ಪದೇ ಕರೆ ಮಾಡಿ, ಐದು ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟು, ಹಣ ನೀಡಲು ನಿರಾಕರಿಸಿದರೆ ವಿಡಿಯೋವನ್ನು ವಾಟ್ಸಪ್, ಫೇಸ್ ಬುಕ್‍ಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ.
ಬೆದರಿಕೆಯಿಂದ ಬೇಸತ್ತಿದ್ದ ಪ್ರೇಮಿಗಳಿಬ್ಬರು ಸೋಮವಾರದಂದು ಕುಂಸಿ ಸಮೀಪದ ಮಂಡಘಟ್ಟದ ಹೊಲದಲ್ಲಿ ಒಟ್ಟಿಗೆ ವಿಷ ಸೇವಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದು, ಯುವತಿ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಯಾಯಿರೇ..ಯಾಯಿರೇ ಅಂತಾ ತನ್ನ ಬಳ್ಳಿಯಂತ ಕಾಯವನ್ನು ಬಳುಕಿಸಿ ಕಣ್ಣು ಮಿಟುಕಿಸಿದ್ದ ರಂಗೀಲಾ ಹುಡುಗಿ ಎಲ್ಲಿ ಮರೆಯಾಗಿದ್ಲು? 90ರ ದಶಕದಲ್ಲಿ ಸಿನಿ ಜಗತ್ತನ್ನ ಅನಭಿಷಿಕ್ತ ರಾಣಿಯಂತೆ ಆಳಿದ್ದ ಅದೊಬ್ಬ ತಾರೆ ಎಲ್ಲಿದ್ದಾಳೆ ಅನ್ನೋ ಪ್ರಶ್ನೆ ಪದೇ ಪದೇ ಬರ್ತಾನೇ ಇತ್ತು. ಅಂದ ಹಾಗೆ, ಆಕೆ ಮತ್ಯಾರೂ ಅಲ್ಲ, ಮುಂಬೈ ಬೆಡಗಿ ಊರ್ಮಿಳಾ ಮಾತೋಂಡ್ಕರ್.
2016ರಲ್ಲಿ ತನಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ರೂಪದರ್ಶಿ, ಉದ್ಯಮಿ ಮೊಹ್ಸಿನ್ ಅಖ್ತರ್ ನನ್ನ ಮದ್ವೆಯಾಗಿ ಸುದ್ದಿಯಾಗಿದ್ದ ಊರ್ಮಿಳಾ ಅನ್ನೋ ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಪತ್ತೇನೇ ಇರಲಿಲ್ಲ. ಆದ್ರೆ, ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಈಗ ಸಿಕ್ಕಿದೆ ಸೀರುಂಡೆ ಥರದ ಮ್ಯಾಟ್ರು.
ರಾಮ್ ಗೋಪಾಲ್ ವರ್ಮಾರ ಗರಡಿಗೆ ಸಿಕ್ಕಿದ್ದ ಊರ್ಮಿಳಾ ಮಾತೋಂಡ್ಕರ್ ರಂಗೀಲಾ, ಜುದಾಯಿ, ಜಂಗಲ್, ಮಸ್ತ್, ಸತ್ಯದಂತಹಾ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಫ್ಯಾನ್ಸ್ ಗೆ ರಸದೌತಣ ಉಣಿಸಿದ್ಲು. ಬಟ್ಟಲು ಕಂಗಳ ಚೆಲುವೆಯ ಬೋಲ್ಡ್ ನೆಸ್ ಗೆ ಜನ ಕನಸಲ್ಲೂ ಕನವರಿಸೋ ಹಾಗಾಗಿತ್ತು. 90ರ ದಶಕದಲ್ಲಿ ಊರ್ಮಿಳಾ ತೆರೆ ಮೇಲೆ ಅಕ್ಷರಶಃ ಕಮಾಲ್ ಮಾಡಿಬಿಟ್ಟಿದ್ಲು. ರಾಮ್ ಗೋಪಾಲ್ ವರ್ಮಾ ಜೊತೆಗಿನ ಸಂಬಂಧದ ಜೊತೆಗೆ ಅನೇಕ ಸಹ ನಟರೊಂದಿಗಿನ ಲಿಂಕ್ ಅಪ್ ಕಥೆಗಳು ಬಹಳ ಕಲರ್ ಫುಲ್ಲಾಗಿ ಕೇಳಿ ಬಂದಿದ್ವು.
2008ರಲ್ಲಿ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಊರ್ಮಿಳಾ ಆಮೇಲೆ ತೆರೆ ಮೇಲೆ ಬಂದಿದ್ದು 2014ರಲ್ಲಿ. ಆಗ ಮರಾಠಿ ಸಿನಿಮಾವೊಂದರಲ್ಲಿ ನಟಿಸಿದ್ದು ಬಿಟ್ರೆ ಅದಾದ್ ಮೇಲೆ ಊರ್ಮಿಳಾ ದುರ್ಬೀನು ಹಾಕಿ ಹುಡುಕಿದ್ರೂ ಕಾಣಿಸ್ತಾನೇ ಇರಲಿಲ್ಲ. ಆದ್ರೀಗ, ಸರಿ ಸುಮಾರು 10 ವರ್ಷಗಳ ನಂತ್ರ ಊರ್ಮಿಳಾ ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಬರ್ತಿದ್ದಾಳೆ. ಮೊದಲಿನಷ್ಟೇ ಬೋಲ್ಡ್ ಮತ್ತು ಬ್ಯೂಟಿಫುಲ್ಲಾಗಿ ಕಾಣಿಸ್ತಿರೋ ಊರ್ಮಿಳಾಳ ಲುಕ್ ಈಗ ರಿವೀಲ್ ಆಗಿದೆ.
ಅಭಿನಯ್ ಡಿಯೋ ಆಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾದಲ್ಲಿ ಊರ್ಮಿಳಾ ಐಟಂ ಸಾಂಗ್ ಒಂದರಲ್ಲಿ ಧೂಳೆಬ್ಬಿಸಲಿದ್ದಾಳೆ. ನಟ ಇರ್ಫಾನ್ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಚಮ್ಮ ಚಮ್ಮ ಬೆಡಗಿ ಮೈ ಚಳಿ ಬಿಟ್ಟು ಮೈ ಕುಣಿಸಿದ್ದಾಳೆ. ಮೊಣಕಾಲಿಗೂ ಮುಟ್ಟದ ಡ್ರೆಸ್ ತೊಟ್ಟು, ನೀಳ ತೊಡೆಗಳನ್ನ ತೋರಿಸಿ ಚಮಕ್ ಕೊಡ್ತಿದ್ದ ಊರ್ಮಿಳಾ ಈ ಐಟಂ ಸಾಂಗಲ್ಲಿ ಸೀರೆ ಉಟ್ಟಿರೋದ್ರಿಂದ ಫ್ಯಾನ್ಸ್ ಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದೆಯಂತೆ.
1998ರಲ್ಲಿ ರಿಲೀಸ್ ಆದ ಚೀನಾ ಗೇಟ್ ಸಿನಿಮಾದ ಚಮ್ಮಾ ಚಮ್ಮಾ, ಲಜ್ಜಾ ಸಿನಿಮಾದ ಆಯಿಯೇ..ಆಜಾಯಿಯೇಯಂತಹಾ ಐಟಂ ನಂಬರ್ ಗಳಲ್ಲಿ ಹುಚ್ಚೆಬ್ಬಿಸಿದ್ದ ಊರ್ಮಿಳಾಳ ಕಮ್ ಬ್ಯಾಕ್ ಹೇಗಿರುತ್ತೆ..? 44ರ ಹರೆಯದಲ್ಲೂ ಊರ್ಮಿಳಾ ತನ್ನ ದೇಹಸಿರಿಯನ್ನ ಯಾವ ರೀತಿ ಕಾಪಾಡಿಕೊಂಡಿದ್ದಾಳೆ..? ಈ ಬಿರು ಬೇಸಿಗೆಯಲ್ಲಿ ಬೊಗಸೆ ಕಣ್ಣಿನ ಊರ್ಮಿ ಪಡ್ಡೆಗಳೆದೆಯಲ್ಲಿ ಕಿಚ್ಚು ಹತ್ತಿಸೋದಕ್ಕೆ ಸಕ್ಸಸ್ ಆಗ್ತಾಳಾ..? ಗೊತ್ತಿಲ್ಲ. ಆದ್ರೆ, ಸಿನಿಮಾ ಬರೋ ಮೊದಲೇ ಊರ್ಮಿಳಾ ಡಾನ್ಸ್ ಸ್ಟೆಪ್ಸನ್ನ ನೋಡ್ತಾ ನೀವೂ ಕಣ್ ತಂಪು ಮಾಡ್ಕೊಳ್ಳಿ.
ಬೀದರ್: ನಾವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ(ಎಮ್‍ಸಿಐ) ಇಂಟೆಲಿಜೆನ್ಸ್ ಆಫೀಸರ್ಸ್ ಎಂದು ಹೇಳಿ ವೈದ್ಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸುನೀಲ್ (31), ಜೀನಿತ್ (25), ಪುನೀತ್ (25), ವೆಂಕಟೇಶ್ವರ ಪ್ರಿಯದರ್ಶಿನಿ (40), ಮಂಜುಳಾ (26) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಬಂದ ಐದು ಜನ ತಂಡ ಬೀದರ್‍ನ ಬಾವಗಿ ಆಸ್ಪತ್ರೆ ಹಾಗೂ ನವ ಜೀವನ ಆಸ್ಪತ್ರೆಯ ವೈದ್ಯರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಸಹಕಾರ ಮಾಡದೆ ಇದ್ರೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ನಿಮ್ಮ ವರದಿ ನೀಡುತ್ತೆವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದರು.
ಕೆಲವು ದಿನಗಳಿಂದ ಬೀದರ್ ನಲ್ಲೆ ಉಳಿದು, ವೈದ್ಯರ ಬಗ್ಗೆ ಗಮನಿಸಿ ಈ ತಂಡ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬೀದರ್ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ನಕಲಿ ತಂಡ ಖೆಡ್ಡಾಗೆ ಬಿದ್ದಿದೆ.