Tag: Black Leopard

  • ಜೋಗಕ್ಕೆ ಹೋಗುವ ಪ್ರವಾಸಿಗರೇ ಎಚ್ಚರವಾಗಿರಿ – ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ

    ಜೋಗಕ್ಕೆ ಹೋಗುವ ಪ್ರವಾಸಿಗರೇ ಎಚ್ಚರವಾಗಿರಿ – ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ

    ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರವಾಗಿರಿ. ಜೋಗ ಜಲಪಾತಕ್ಕೆ (Jog Falls) ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು (Black Leopard)  ಹಸುವನ್ನು ಬೇಟೆಯಾಡಿದೆ.

    ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ. ಇದನ್ನೂ ಓದಿ: US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    ಕರಿಚಿರತೆ ಹಸುವನ್ನು ಬೇಟೆಯಾಡುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಿತೃಪಕ್ಷದಂದು ಧರ್ಮ ಸಂಕಟ – ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ಮನವಿ

  • ಬಲು ಅಪರೂಪದ ಕರಿ ಚಿರತೆ ಪತ್ತೆ

    ಬಲು ಅಪರೂಪದ ಕರಿ ಚಿರತೆ ಪತ್ತೆ

    ಕಾರವಾರ: ಬಲು ಅಪರೂಪದ ಕರಿ ಚಿರತೆಯೊಂದು ಉತ್ತರ ಕನ್ನಡ ಜಿಲ್ಲೆ ಜೋಯಿಡಾದ ಡಿಗ್ಗಿಯ ರಸ್ತೆ ಬಳಿ ಪ್ರತ್ಯಕ್ಷವಾಗಿದೆ.

    ಜೋಯಿಡಾದ ಕಾಳಿ ರಕ್ಷಿತ ಪ್ರದೇಶದಲ್ಲಿ ಕರಿ ಚಿರತೆ ಹೆಚ್ಚಾಗಿದ್ದು, ಈವರೆಗೂ ಸಾರ್ವಜನಿಕರಿಗೆ ಪ್ರತ್ಯಕ್ಷವಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ರಸ್ತೆ ಬಳಿ ರಾತ್ರಿ ವೇಳೆ ಪ್ರತ್ಷಕ್ಷವಾಗಿದ್ದು, ಅಲ್ಲಿನ ಜನರನ್ನು ನಿಬ್ಬೆರಗುಗೊಳಿಸಿದೆ.

    ಪ್ರಯಾಣಿಕರು ರಕ್ಷಿತ ಪ್ರದೇಶದ ದಾರಿಯಲ್ಲಿ ಹೋಗುತ್ತಿದ್ದಾಗ ಚಿರತೆ ಕಾಡಿನಿಂದ ಬಂದು ರಸ್ತೆ ಬದಿ ಕುಳಿತಿದೆ. ಇದನ್ನು ನೋಡಿದ ತಕ್ಷಣ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪ್ರಯಾಣಿಕರು ದೂರದಿಂದಲೇ ಕರಿ ಚಿರತೆಯ ವಿಡಿಯೋ ಮಾಡಿದ್ದಾರೆ.

    ಅದು ಕೂಡ ಕ್ಯಾಮೆರಾಗೆ ಪೋಸ್ ಕೊಡುವ ರೀತಿ ಏನು ತೊಂದರೆ ಮಾಡದೆ ಸುಮ್ಮನೆ ಕುಳಿತ್ತಿತ್ತು. ಬಳಿಕ ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆ ಭಯಗೊಂಡು ಕರಿ ಚಿರತೆ ಕಾಡಿನೊಳಗೆ ಓಡಿ ಹೋಗಿ ಅವಿತು ಕುಳಿತುಕೊಂಡಿದೆ. ಇದೆಲ್ಲವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯಕ್ಕೆ ಚಿರತೆ ಪ್ರಯಾಣಿಕರಿಗೆ ಯಾವುದೇ ತೊಂದರೆಯನ್ನು ಮಾಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಡುಪಿ ಬಾವಿಯಲ್ಲಿ ಬಿದ್ದ ಕರಿ ಚಿರತೆ ಏಣಿ ಹತ್ತಿಕೊಂಡು ಮೇಲೆ ಬಂತು ವಿಡಿಯೋ ನೋಡಿ

    ಉಡುಪಿ ಬಾವಿಯಲ್ಲಿ ಬಿದ್ದ ಕರಿ ಚಿರತೆ ಏಣಿ ಹತ್ತಿಕೊಂಡು ಮೇಲೆ ಬಂತು ವಿಡಿಯೋ ನೋಡಿ

    ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಕರಿ ಚಿರತೆಯೊಂದು ನಾಯಿಯನ್ನು ಬೆನ್ನಟ್ಟಿ ಬಂದು ದಾರಿ ತಿಳಿಯದೇ ಬಾವಿಯಲ್ಲಿ ಬದ್ದಿದೆ.

    ಹಿರ್ಗಾನದ ರಾಜಾರಾಮ್ ಕಡಂಬ ಎಂಬವರ ಮನೆಯ ಬಾವಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯನ್ನು ಬೆನ್ನತ್ತಿ ಬಂದಿದ್ದ ಕರಿ ಚಿರತೆ ನಾಯಿಯ ಜೊತೆಗೆ ಭಾರೀ ಆಳದ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದ ರಭಸಕ್ಕೆ ನಾಯಿ ಸತ್ತಿದೆ.

    ಚಿರತೆ ನೀರಿಗೆ ಬಿದ್ದು ಒದ್ದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಬಾವಿಯ ಮೇಲೆ ಬೋನನ್ನು ಅಳವಡಿಸಿದ್ದಾರೆ. ಬಾವಿಗೆ ಏಣಿಯನ್ನು ಇಳಿಯಬಿಡಲಾಯ್ತು. ಏಣಿಯ ಮೂಲಕ ಅಪರೂಪದ ಕರಿ ಚಿರತೆಯನ್ನು ಮೇಲಕ್ಕೆತ್ತಲಾಯ್ತು.

    ಸ್ವತಃ ಚಿರತೆಯೇ ಏಣಿಯಲ್ಲಿ ಏರಿಕೊಂಡು ಬಂದಿದ್ದು ವಿಶೇಷವಾಗಿತ್ತು. ಏಣಿಯ ತುದಿಗೆ ಬೋನನ್ನು ಅರಣ್ಯಾಧಿಕಾರಿಗಳು ಅಳವಡಿಸಿದ್ದರು. ಏಣಿಯೇರಿ ಬಂದ ಚಿರತೆ ಸೀದಾ ಬೋನೊಳಗೆ ಬಿದ್ದಿದೆ. ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕರಿ ಚಿರತೆಯನ್ನು ರಕ್ಷಿಸಿದ್ದಾರೆ.

    ಬಾವಿಗೆ ಬಿದ್ದ ರಭಸಕ್ಕೆ ಚಿರತೆಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಚಿರತೆ ಸಂಪೂರ್ಣವಾಗಿ ಗುಣಮುಖವಾದ ನಂತರ ಪಶ್ಚಿಮ ಘಟ್ಟಕ್ಕೆ ಸುರಕ್ಷಿತವಾಗಿ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

    ಅಪರೂಪದ ಕರಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಮೂರು ವರ್ಷದ ಹಿಂದೆ ಮಣಿಪಾಲದಲ್ಲಿ ಕರಿಚಿರತೆ ಕಾಣಿಸಿಕೊಂಡಿತ್ತು. ಇದೀಗ ಕಾರ್ಕಳದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದೆ.

    https://youtu.be/8jb4PBan1-A