Tag: Black

  • ಕಪ್ಪಾಗಿರುವುದರಿಂದ ಡಿಯು ಪಟ್ಟ ಕಷ್ಟಗಳೆಷ್ಟು ಗೊತ್ತಾ?

    ಕಪ್ಪಾಗಿರುವುದರಿಂದ ಡಿಯು ಪಟ್ಟ ಕಷ್ಟಗಳೆಷ್ಟು ಗೊತ್ತಾ?

    -ಬಿಳಿಯಷ್ಟೇ ಸುಂದರವಾದ ಬಣ್ಣ ಕಪ್ಪು

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ ಕೊನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ವೇದಿಕೆ ಮೇಲೆ ಕಪ್ಪು-ಬಿಳುಪಿನ ಬಣ್ಣದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಸ್ಪರ್ಧಿಗಳು ತಾವು ಕಪ್ಪಾಗಿರುವುದರಿಂದ ಹಾಗೂ ಬಿಳಿಯಾಗಿರುವುದರಿಂದ ಏನೆಲ್ಲಾ ಕಷ್ಟಪಟ್ಟಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.

    ಬೆಳ್ಳಗಿರುವವರಿಗೆ ಲೈಫ್‍ನಲ್ಲಿ ತುಂಬಾ ಅಡ್ವಂಟೆಜ್ ಇದೆ ಎಂದು ನಿಮಗೆ ಎಂದಾದರೂ ಅನಿಸಿದ್ಯಾ ಎಂದು ಸುದೀಪ್ ವೈಷ್ಣವಿಯವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ವೈಷ್ಣವಿ ಹಾಗೇ ಎಂದೂ ಇಲ್ಲ. ಆರ್ಟಿಸ್ಟ್ ಅಂತ ಬಂದಾಗ ಲೈಟ್ ಕಡಿಮೆ ಹಾಕುತ್ತಾರೆ. ಕೆಲವೊಮ್ಮೆ ಕ್ಯಾಮೆರಾ ಮೆನ್‍ಗಳು ಹಾಗೂ ಕೆಲವು ಆರ್ಟಿಸ್ಟ್‍ಗಳು ನಿನ್ನಿಂದ ನನಗೂ ಲೈಟ್ ಹಾಕಲಿಲ್ಲ ಎಂದು ಬೈದುಕೊಂಡಿದ್ದಾರೆ. ಆದರೆ ಫೇರ್ ಆಗಿರುವುದು ಒಂದು ರೀತಿ ಅಡ್ವಂಟೆಜ್ ಕೂಡ ಹೌದು ಎಂದಿದ್ದಾರೆ.

    ನಂತರ ದಿವ್ಯಾ ಉರುಡುಗ ನಾನು ಚಿಕ್ಕವಳಿದ್ದಾಗಲಿಂದಲೇ ಈ ವಿಚಾರವಾಗಿ ಸ್ವಲ್ಪ ಕಷ್ಟ ಅನುಭವಿಸಿದ್ದೇನೆ. ನನ್ನ ತಂದೆ ಸ್ವಲ್ಪ ಕಪ್ಪು, ನನ್ನ ತಾಯಿ ಬಿಳಿ. ಈಗ ನನ್ನ ಸಂಬಂಧಿಕರೆ ನನ್ನನ್ನು ಕಪ್ಪು ಎನ್ನುವಂತೆ ಮಾತನಾಡುತ್ತಾರೆ. ಹೀಗಾಗಿ ನನಗೆ ಚಿಕ್ಕವಯಸ್ಸಿನಿಂದಲೇ ನಾನು ಕಪ್ಪು ಎಂಬುದು ನನ್ನ ತಲೆಯಲ್ಲಿ ಕುಳಿತುಬಿಟ್ಟಿದೆ. ಚಿಕ್ಕವಯಸ್ಸಿನಲ್ಲಿ ನಾನು ಕಪ್ಪು ಎಂದಾಗ ಬೇಸರವಾಗುತ್ತಿತ್ತು. ಆದರೆ ಈಗ ನಾನು ಕಪ್ಪಾಗಿದ್ದರು ಸರಿ ಎಂದು ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ.

    ಇನ್ನೂ ಮಂಜು ನಾನು ಕಪ್ಪಾಗಿರುವುದು ಯಾವತ್ತು ನನಗೆ ಸಮಸ್ಯೆ ಅಂತ ಅನಿಸಿಲ್ಲ ಎಂದು ಹೇಳುತ್ತಾರೆ. ಆಗ ಸುದೀಪ್ ಬೆಳ್ಳಗಿರುವವರೆಲ್ಲಾ ಪ್ರಾಮಾಣಿಕರು ಹಾಗೂ ಕಪ್ಪಾಗಿರುವವರೆಲ್ಲರೂ ಕಳ್ಳರು ಎಂದು ಅಂದುಕೊಂಡವರು ತುಂಬಾ ಜನ ಇದ್ದಾರೆ. ಕಂಬಳಿ ಹುಳು ಬೆಳೆದು ಬಣ್ಣಬಣ್ಣದ ಚಿಟ್ಟೆಯಾದರೂ, ಆ ಚಿಟ್ಟೆಯ ಬಣ್ಣಗಳಲ್ಲಿ ಕಪ್ಪು ಕೂಡ ಬಹಳ ಮುಖ್ಯ ಎಂಬುವುದನ್ನು ಮರೆಯಬೇಡಿ. ಬಿಳಿಯಷ್ಟೇ ಒಂದು ಸುಂದರವಾದಂತಹ ಬಣ್ಣ ಕಪ್ಪು ಎಂದು ಅಭಿಪ್ರಾಯ ತಿಳಿಸಿದ್ದಾರೆ.

    ಬಳಿಕ ಎಲ್ಲರೂ ಬಿಳಿಯಾಗಿರಬೇಕು ಎಂದು ಇಷ್ಟಪಡುತ್ತಾರೆ. ಆದರೆ ಕೂದಲು ಮಾತ್ರ ಬೆಳ್ಳಗೆಯಾಗುವುದು ಬೇಡ ಅಂತಾರೆ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಔಟ್

  • ಜೀವನಕ್ಕೆ ಬೇಕಾದ ಸೌಲಭ್ಯ ಕೊಡಿ – ಕಪ್ಪುಪಟ್ಟಿ ಧರಿಸಿ ಬಂದ ಕೊರೊನಾ ವಾರಿಯರ್ಸ್

    ಜೀವನಕ್ಕೆ ಬೇಕಾದ ಸೌಲಭ್ಯ ಕೊಡಿ – ಕಪ್ಪುಪಟ್ಟಿ ಧರಿಸಿ ಬಂದ ಕೊರೊನಾ ವಾರಿಯರ್ಸ್

    ಯಾದಗಿರಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 560 ನೌಕರರು ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಕೊರೊನಾ ಕ್ವಾರಂಟೈನ್ ಕೇಂದ್ರಗಳಲ್ಲಿ ಇವರ ಸೇವೆ ಅತ್ಯಗತ್ಯವಾಗಿದೆ.

    ಹೀಗಿದ್ದರೂ ಈ ನೌಕರರ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿಫಲವಾಗಿದೆ. ಈ ನೌಕರರು ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಕೇಂದ್ರ ಸರ್ಕಾರದ ಆರೋಗ್ಯ ಸಿಬ್ಬಂದಿಗೆ ನೀಡಿರುವ ಯೋಜನೆಗಳು ಮತ್ತು ಸೌಲಭ್ಯಗಳು ಈ ವರ್ಗದ ನೌಕರರಿಗೆ ಅನ್ವಯವಾಗುವುದಿಲ್ಲ ಎಂಬುವುದು ಈ ನೌಕರರ ಆರೋಪವಾಗಿದೆ. ಹೀಗಾಗಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

  • ಕಪ್ಪು ಸಮುದ್ರವಾಗಿದೆ ಉಡುಪಿಯ ಅರಬ್ಬೀ ಸಮುದ್ರ – ಈ ರೀತಿ ಬದಲಾಗಿದ್ದು ಯಾಕೆ?

    ಕಪ್ಪು ಸಮುದ್ರವಾಗಿದೆ ಉಡುಪಿಯ ಅರಬ್ಬೀ ಸಮುದ್ರ – ಈ ರೀತಿ ಬದಲಾಗಿದ್ದು ಯಾಕೆ?

    ಉಡುಪಿ: ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ.

    ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ ಬಳಿಯ ಕಡಲು ಸಂಪೂರ್ಣ ಕದಡಿಹೋಗಿದೆ.

    ನದಿ ನೀರು ಸಮುದ್ರ ಸೇರುವ ಉಡುಪಿಯ ಪಡುಕೆರೆ, ಕೋಡಿ ಬೆಂಗ್ರೆ, ಗಂಗೊಳ್ಳಿ, ಪಡುಬಿದ್ರೆಯಲ್ಲಿ ಈ ದೃಶ್ಯ ಈಗ ಸಾಮಾನ್ಯವಾಗಿದೆ. ನಿಜವಾಗಿ ಸಮುದ್ರದ ತೀವ್ರತೆ ಮತ್ತು ಭೋರ್ಗರೆತ ಕಣ್ತುಂಬಿಕೊಳ್ಳಬೇಕಾದರೆ ಈಗ ಅರಬ್ಬೀ ಸಮುದ್ರವನ್ನು ನೋಡಬೇಕು.

    ಮಾಮೂಲಿಯಾಗಿ ಸಮುದ್ರದ ನೀರು ತಿಳಿಯಾಗಿರುತ್ತದೆ. ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಪಶ್ಚಿಮ ಘಟ್ಟದ ತಪ್ಪಲು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುಗಿರುವುದಿಂದ ಭಾರೀ ಪ್ರಮಾಣದ ನೀರು ಸಮುದ್ರದತ್ತ ಧುಮ್ಮುಕ್ಕುತ್ತಿದೆ. ಹೀಗಾಗಿ ಸಮುದ್ರ ಪುಡಿಯಾಗಿದೆ. ಹರಿಯುವ ನದಿ ಖನಿಜ, ಲವಣಾಂಶ, ಕೊಳೆತ ತರಗೆಲೆ, ಮರ, ಮಣ್ಣು ಎಲ್ಲವನ್ನೂ ತಂದಿದೆ. ಸಮುದ್ರದ ಉಪ್ಪು ನೀರಿನ ಜೊತೆ ನದಿಯ ಕೆನ್ನೀರು ಸೇರಿ ಕಡಲು ಬಣ್ಣ ಬದಲಿಸಿದೆ.

    ನಿಜಾರ್ಥದ ಸಮುದ್ರ ನೋಡುವ ಮನಸ್ಸಿದ್ದವರು ಸಮುದ್ರದ ವೈಭವ ನೋಡುವ ಆಸೆಯಿರುವವರು ಈಗ ಉಡುಪಿಗೆ ಬರಬೇಕು. ಸಮುದ್ರಕ್ಕಿಳಿದು ಆಡುವ ಅವಕಾಶ ಇಲ್ಲದಿದ್ದರೂ ಕಡಲಿನ ಅಬ್ಬರವನ್ನು ಕಣ್ತುಂಬಿಕೊಳ್ಳಬಹುದು.

  • ಕಪ್ಪು ಬಣ್ಣಕ್ಕೆ ತಿರುಗಿದೆ ಕಾರವಾರ ಸಮುದ್ರದ ನೀರು!

    ಕಪ್ಪು ಬಣ್ಣಕ್ಕೆ ತಿರುಗಿದೆ ಕಾರವಾರ ಸಮುದ್ರದ ನೀರು!

    ಕಾರವಾರ: ಮಳೆಯಿಂದಾಗಿ ಟನ್ ಗಟ್ಟಲೆ ಕಸದರಾಶಿ ಕಾರವಾರದ ಸಮುದ್ರಕ್ಕೆ ಸೇರಿ ಸಮುದ್ರದ ನೀರು ಕಪ್ಪಾಗಿದ್ದು, ಆತಂಕ ಮನೆ ಮಾಡಿದೆ.

    ನಗರದ ಬಳಿಯಿರುವ ರವೀಂದ್ರನಾಥ ಟಾಗೋರ್ ಕಡಲತೀರ ನದಿ ಹಾಗೂ ನಗರದ ಕೊಚ್ಚೆ, ಮರದ ಕಸಕಡ್ಡಿಗಳಿಂದ ತುಂಬಿ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಸ್ಥಳೀಯ ಜನರು ಭಯಗೊಂಡು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

    ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ನಗರ ಹಾಗೂ ಕಾಳಿನದಿ ಸುತ್ತಮುತ್ತಲಿನ ಹಳ್ಳಿಗಳ ಗದ್ದೆಗಳಲ್ಲಿ ಸುಟ್ಟ ಮರಗಿಡಗಳು ತೇಲಿ ಸಮುದ್ರಕ್ಕೆ ಸೇರಿ ತೀರದ ನೂರು ಮೀಟರ್ ಪ್ರದೇಶದಲ್ಲಿ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಇದರಿಂದ ಯಾವುದೇ ಅಪಾಯವಿಲ್ಲ, ಇನ್ನೆರೆಡು ದಿನ ಇದೇ ರೀತಿ ಸಮುದ್ರದ ನೀರು ಕಪ್ಪಾಗಿರುತ್ತದೆ ಎಂದು ಜೀವಶಾಸ್ತ್ರ ವಿಭಾಗದ ವಿಜ್ಞಾನಿ ಎಲ್.ಎನ್ ರಾಥೋಡ್ ರವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    ಕಳೆದ ನಾಲ್ಕು ತಿಂಗಳಿಂದೆ ಓಖಿ ಚಂಡಮಾರುತದಿಂದಾಗಿ ಇಲ್ಲಿನ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿತ್ತು. ಆದರೆ ಯಾವುದೇ ಜಲಚರಗಳಿಗೆ ಹಾನಿಯಾಗಿರಲಿಲ್ಲ. ಈಗ ಕೊಚ್ಚೆ ನೀರು ಹಾಗೂ ಸುಟ್ಟ ಮರದ ಕಾಂಡಗಳು ಸಮುದ್ರಕ್ಕೆ ಸೇರಿ ದಡದ ಭಾಗಕ್ಕೆ ಬರುತಿದ್ದು, ಯಾವುದೇ ಹಾನಿಯಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕಿದೆ.

  • ವಾಟ್ಸಪ್ ಸೇವೆಯನ್ನು ತಡೆ ಹಿಡಿದ ಚೀನಾ ಸರ್ಕಾರ

    ವಾಟ್ಸಪ್ ಸೇವೆಯನ್ನು ತಡೆ ಹಿಡಿದ ಚೀನಾ ಸರ್ಕಾರ

    ಬೀಜಿಂಗ್: ಚೀನಾ ಸರ್ಕಾರ ಸೋಮವಾರ ರಾತ್ರಿ ವಾಟ್ಸಪ್ ಸೇವೆಯನ್ನು ತಡೆಹಿಡಿದಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

    ಇಂಟರ್ ನೆಟ್ ಜಗತ್ತಿನ ಆಗುಹೋಗುಗಳ ಬಗ್ಗೆ ಕಣ್ಗಾವಲು ಇಡಲು ಚೀನಾ ಸ್ಥಾಪಿಸುವ ಓಪನ್ ಒಬ್ಸರ್‍ವೆಟರಿ ಆಫ್ ನೆಟ್‍ವರ್ಕ್ ಇಂಟರ್ ಫೇಸ್(ಒಒಎನ್‍ಐ) ಸಲಹೆಯ ಹಿನ್ನೆಲೆಯಲ್ಲಿ ಸೋಮವಾರದಿಂದ ವಾಟ್ಸಪ್ ಸೇವೆಯನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ.

    ಚೀನಾ ಸರ್ಕಾರ ಈ ವರ್ಷ ಆನ್‍ಲೈನ್ ನೀತಿಗಳನ್ನು ಬಿಗಿಗೊಳಿಸಿದ್ದು, ಟೆಕ್ ಕಂಪೆನಿಗಳು ಕಡ್ಡಾಯವಾಗಿ ಬಳಕೆದಾರರ ಮಾಹಿತಿನ್ನು ದೇಶದ ಒಳಗಡೆ ಸಂಗ್ರಹಿಸಬೇಕು. ಅಷ್ಟೇ ಅಲ್ಲದೇ ಕೆಲವೊಂದು ವಿಚಾರಗಳಿಗೆ ನಿರ್ಬಂಧ ಹೇರಿದೆ.

    ವಿಶ್ವದ ನಂಬರ್ ಒನ್ ಮೆಸೆಂಜಿಗ್ ಅಪ್ಲಿಕೇಶನ್ ವಾಟ್ಸಪ್ ತಡೆ ಹಿಡಿಯಲು ನಿರ್ಧಿಷ್ಟ ಕಾರಣ ಏನು ಎಂದು ತಿಳಿದು ಬಂದಿಲ್ಲ. ಟ್ವಿಟ್ಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಗೂಗಲ್ ಸೇವೆಯನ್ನು ಚೀನಾ ಈಗಾಗಲೇ ಬ್ಲಾಕ್ ಮಾಡಿದೆ.

    ಈ ಹಿಂದೆ ಚೀನಾ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಿಚಾಟ್ ಚೀನಾ ಸರ್ಕಾರ ಮಾಹಿತಿ ಕೇಳಿದರೆ ಮಾಹಿತಿ ನೀಡಲಾಗುವುದು ಎಂದು ಬಳಕೆದಾರರಿಗೆ ತಿಳಿಸಿತ್ತು.