Tag: BLA

  • ಪಾಕ್‌ನ 14 ಸೈನಿಕರ ಹತ್ಯೆ – ಪೂರ್ತಿ ವೀಡಿಯೋ ರಿಲೀಸ್‌ ಮಾಡಿದ ಬಲೂಚಿಸ್ತಾನ

    ಪಾಕ್‌ನ 14 ಸೈನಿಕರ ಹತ್ಯೆ – ಪೂರ್ತಿ ವೀಡಿಯೋ ರಿಲೀಸ್‌ ಮಾಡಿದ ಬಲೂಚಿಸ್ತಾನ

    ಇಸ್ಲಾಮಾಬಾದ್: ಪಂಜ್‌ಗುರ್‌ನಲ್ಲಿ 14 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದ್ದು, ಮೇ 9 ರ ದಾಳಿಯ ಪೂರ್ತಿ ವೀಡಿಯೊ ಬಿಡುಗಡೆ ಮಾಡಿದೆ.

    ‘ಆಪರೇಷನ್ ಹೆರೋಫ್’ ಕಾರ್ಯಾಚರಣೆ ನಡೆಸಿದ ಬಲೂಚಿಸ್ತಾನ, ಪಾಕಿಸ್ತಾನ ಸೇನೆಯ 14 ಸೈನಿಕರನ್ನು ಹತ್ಯೆ ಮಾಡಿತ್ತು. ಮೇ 9 ರಂದು ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಗುಂಡು ನಿರೋಧಕ ವಾಹನ ನಾಶವಾಯಿತು. ಒಳಗಿದ್ದ ಎಲ್ಲಾ 14 ಸೈನಿಕರು ಸಾವನ್ನಪ್ಪಿದರು. ಪಂಜ್‌ಗುರ್ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಈ ದಾಳಿ ನಡೆದಿದೆ. ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲಿನ ದಾಳಿಯ ವೀಡಿಯೊವನ್ನು ಬಿಎಲ್‌ಎ ಬುಧವಾರ ಬಿಡುಗಡೆ ಮಾಡಿದೆ. ಇದನ್ನು ನಾವೇ ಮಾಡಿರುವುದಾಗಿ ದೃಢಪಡಿಸಿದೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಏಟಿಗೆ ಪಾಕಿಸ್ತಾನ ಬಾಲ ಮುದುರಿದ ನಾಯಿಯಂತೆ ಓಡಿದೆ: ಪೆಂಟಗನ್‌ ಮಾಜಿ ಅಧಿಕಾರಿ ವ್ಯಂಗ್ಯ

    ಬಲೂಚ್ ಲಿಬರೇಶನ್ ಆರ್ಮಿಯ ವಕ್ತಾರ ಜೀಯಂಡ್ ಬಲೂಚ್ ಪತ್ರಿಕಾ ಪ್ರಕಟಣೆಯಲ್ಲಿ, ಬಿಎಲ್‌ಎ ಸ್ವಾತಂತ್ರ್ಯ ಹೋರಾಟಗಾರರು ಕ್ವೆಟ್ಟಾ ಮತ್ತು ಮಸ್ತುಂಗ್‌ನಲ್ಲಿ ಪಾಕಿಸ್ತಾನಿ ಸೈನ್ಯ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಪಾಕ್‌ ಸರ್ಕಾರ ಮತ್ತು ಆಕ್ರಮಿತ ರಾಜ್ಯದ ಆಶ್ರಯದಲ್ಲಿ ಅದರ ಆಚರಣೆಯನ್ನು ಬಿಎಲ್ಎ ಗುರಿಯಾಗಿಸಿಕೊಂಡಿದೆ. ಬಲೂಚ್ ವಿಮೋಚನಾ ಚಳುವಳಿಯು ಸಾರ್ವಜನಿಕ ಬೆಂಬಲದೊಂದಿಗೆ ಬಲವಾದ ರೂಪವನ್ನು ಪಡೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – ಮೂವರು ಜೈಶ್‌ ಉಗ್ರರು ಮಟಾಶ್‌

  • ಬಲೂಚ್ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – ಆಕ್ರಮಿತ ಪಾಕಿಸ್ತಾನಿ ಸೇನೆಯ 10 ಸಿಬ್ಬಂದಿ ಹತ್ಯೆ

    ಬಲೂಚ್ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – ಆಕ್ರಮಿತ ಪಾಕಿಸ್ತಾನಿ ಸೇನೆಯ 10 ಸಿಬ್ಬಂದಿ ಹತ್ಯೆ

    – ಪಾಕ್ ಸೇನಾ ವಾಹನವೂ ಫಿನೀಶ್

    ಇಸ್ಲಾಮಾಬಾದ್‌: ಬಲೂಚಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ಬಲೂಚ್ ಲಿಬರೇಶನ್ ಆರ್ಮಿ (BLA) ದಾಳಿ ನಡೆಸಿದ್ದು, ಪಾಕ್ ಸೇನೆಯ 10 ಸಿಬ್ಬಂದಿಯನ್ನು ಹತ್ಯೆ ಮಾಡಿದೆ.

    ಬಲೂಚ್ ದಂಗೆಕೋರರಿಂದ ಪಾಕ್ ಸೇನೆಯ ಸುಬೇದಾರ್ ಶೆಹಜಾದ್ ಅಮೀನ್, ನಯಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಂ ಮತ್ತು ಇತರರು ಹತ್ಯೆಗೀಡಾಗಿದ್ದಾರೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ – ಜಮ್ಮು ಸರ್ಕಾರ ಅಲರ್ಟ್; ವೈದ್ಯಕೀಯ ಸಿಬ್ಬಂದಿ ರಜೆ ರದ್ದು

    ಗುಂಪಿನ ವಕ್ತಾರ ಜೀಯಂಡ್ ಬಲೂಚ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ರಿಮೋಟ್-ನಿಯಂತ್ರಿತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಈ ದಾಳಿ ನಡೆಸಲಾಗಿದ್ದು, ಆಕ್ರಮಿತ ಪಾಕಿಸ್ತಾನಿ ಸೇನೆಯ 10 ಸಿಬ್ಬಂದಿ ಸಾವನ್ನಪ್ಪಿದ್ದಾರೆ.

    ‘ಕ್ವೆಟ್ಟಾದ ಉಪನಗರವಾದ ಮಾರ್ಗತ್‌ನಲ್ಲಿ ಬಲೂಚ್ ಲಿಬರೇಶನ್ ಆರ್ಮಿ ಸ್ವಾತಂತ್ರ‍್ಯ ಹೋರಾಟಗಾರರು ಆಕ್ರಮಿತ ಪಾಕಿಸ್ತಾನಿ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಶತ್ರು ವಾಹನವನ್ನು ಸಂಪೂರ್ಣವಾಗಿ ನಾಶಗೊಂಡಿದೆ. ಅದರಲ್ಲಿದ್ದ ಎಲ್ಲಾ 10 ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಜೀಯಂಡ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ʻಒಂದು ಹನಿ ನೀರುʼ ಕೂಡ ಹರಿಸಲ್ಲ; 3 ಅಂಶಗಳ ಕಾರ್ಯತಂತ್ರ ರೂಪಿಸಲು ಕೇಂದ್ರ ಸೂಚನೆ

    ‘ಆಕ್ರಮಣಶೀಲ ಶತ್ರು ಸೈನ್ಯ’ ಎಂದು ವಿವರಿಸುವ ವಿರುದ್ಧ ನಡೆಯುತ್ತಿರುವ ಸಶಸ್ತ್ರ ಪ್ರತಿರೋಧದ ಭಾಗವಾಗಿ ಈ ದಾಳಿ ನಡೆದಿದೆ ಎಂದು ಬಿಎಲ್‌ಎ ಹೇಳಿದೆ. ಅಂತಹ ಕಾರ್ಯಾಚರಣೆಗಳು ತೀವ್ರತೆಯೊಂದಿಗೆ ಮುಂದುವರಿಯುತ್ತವೆ ಎಂದು ಎಚ್ಚರಿಸಿದೆ. ಸೇನೆಯ ಬಾಂಬ್ ನಿಷ್ಕ್ರಿಯ ಘಟಕಕ್ಕೆ ಸೇರಿದೆ ಎಂದು ಹೇಳಲಾದ ಮಿಲಿಟರಿ ವಾಹನದಿಂದ ದಟ್ಟವಾದ ಕಪ್ಪು ಹೊಗೆ ಹೊರಸೂಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಬಿಎಲ್‌ಎ ಬಿಡುಗಡೆ ಮಾಡಿದೆ.

  • ಪುಲ್ವಾಮಾ ಸ್ಟೈಲ್‌ ದಾಳಿ – ಪಾಕ್‌ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ

    ಪುಲ್ವಾಮಾ ಸ್ಟೈಲ್‌ ದಾಳಿ – ಪಾಕ್‌ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) 90 ಮಂದಿ ಸೈನಿಕರನ್ನು ನಾವು ಹತ್ಯೆ ಮಾಡಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದೆ.

    ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ (Pulwama) ಭಾರತದ ಸೈನಿಕರನ್ನು ಉಗ್ರರು ಹೇಗೆ ಗುರಿ ಮಾಡಿ ಕೃತ್ಯ ಎಸಗಿದ್ದರೋ ಅದೇ ರೀತಿಯಾಗಿ ಇಂದು (ಮಾ.16) ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40 ರಲ್ಲಿ ಸೈನಿಕರಿದ್ದ ಬಸ್ಸಿಗೆ ಸ್ಪೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 6 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

    ಡಿಕ್ಕಿಯಾದ ಬೆನ್ನಲ್ಲೇ ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಬಸ್ಸಿನ ಕಿಟಕಿ ಗಾಜುಗಳು ಒಡೆದು ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಛಿದ್ರಗೊಂಡಿರುವ ಬಸ್ಸಿನ ವಿಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    ಬಲೂಚ್ ಲಿಬರೇಶನ್ ಆರ್ಮಿ ಈ ಘಟನೆಯಲ್ಲಿ 90 ಮಂದಿ ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದರೆ ಪಾಕ್‌ ಸೇನೆ 12 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಶನಿವಾರ ಬಿಎಲ್‌ಎ ಪಾಕಿಸ್ತಾನಿ ಸೇನೆಯ ಬೆಂಗಾವಲು ಪಡೆಯ ಮೇಲೆ ಬಾಂಬ್ ದಾಳಿ ನಡೆಸಿತ್ತು.

    ಪಾಕಿಸ್ತಾನದ ಅತಿದೊಡ್ಡ ಭೂಪ್ರದೇಶವನ್ನು ಹೊಂದಿರುವ ಬಲೂಚಿಸ್ತಾನ ಪ್ರಾಂತ್ಯ ಕಡಿಮೆ ಜನ ಸಂಖ್ಯೆ ಹೊಂದಿದೆ. ಬಲೂಚಿಸ್ತಾನ ಖನಿಜ ಸಂಪದ್ಭರಿತ ಪ್ರದೇಶವಾಗಿದ್ದು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಈ ಕಾರಣಕ್ಕೆ ಪ್ರತ್ಯೇಕತಾವಾದಿ ಹೋರಾಟ ನಡೆಯುತ್ತಿದೆ. ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಬೇಕು ಎಂದು ಬಲೂಚ್‌ ಹೋರಾಟಗಾರರು ಈಗ ಯುದ್ಧಕ್ಕೆ ಧುಮುಕಿದ್ದಾರೆ.