Tag: BL Santosh

  • ‘ಸಾಮಾನ್ಯ ಬುದ್ಧಿ ಇದ್ದವರಿಗೂ ತಿಳಿಯುತ್ತದೆ’ – ಸಂತೋಷ್‌ ಸಮರ್ಥಿಸಿ ಸಿದ್ದರಾಮಯ್ಯಗೆ ರವಿ ತಿರುಗೇಟು

    ‘ಸಾಮಾನ್ಯ ಬುದ್ಧಿ ಇದ್ದವರಿಗೂ ತಿಳಿಯುತ್ತದೆ’ – ಸಂತೋಷ್‌ ಸಮರ್ಥಿಸಿ ಸಿದ್ದರಾಮಯ್ಯಗೆ ರವಿ ತಿರುಗೇಟು

    ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರನ್ನು ಟೀಕೆ ಮಾಡಿದ್ದಕ್ಕೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯನವರಿಗೆ ಟ್ವೀಟೇಟ್‌ ನೀಡಿದ್ದಾರೆ.

    ಚೀನಾ ಎರಡು ಕಿಲೋಮೀಟರ್ ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಚೀನಾ ಗಡಿ ಒಳಗೆ ನುಸುಳಿದೆ ಎಂದು ನೋಡಿ ಬಂದಿದ್ದೀರಾ? ಒಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಫಸ್ಟ್‌ ಹ್ಯಾಂಡ್‌ ಇನ್ಫಾರ್ಮೆಶನ್‌ ಇರುತ್ತದೆಂಬುದು ಸಾಮಾನ್ಯ ಬುದ್ಧಿ ಇದ್ದವರಿಗೂ ತಿಳಿಯುತ್ತದೆ.

    ಮಹಾರಾಷ್ಟ್ರದ ವಿಪಕ್ಷ ನಾಯಕ ಶ್ರೀ ದೇವೇಂದ್ರ ಫಡ್ನವಿಸ್ ಆಸ್ಪತ್ರೆ ದತ್ತು ತೆಗೆದುಕೊಳ್ಳುವ ಹಾಗೂ ನೇರವಾಗಿ ಆಸ್ಪತ್ರೆಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡಿದರು. ನಿಮ್ಮ ಗ್ರೌಂಡ್-ನಲ್ಲಿ ಎಲ್ಲಿ ಕೆಲಸ ಮಾಡಿದ್ದೀರಿ? ನಿಮ್ಮದು ಕೇವಲ ಟೀಕೆ ಮಾತ್ರ.

    ತಾನು ಕಳ್ಳ, ಪರರ ನಂಬ. ನಿಮಗೆ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಇರುವಂತೆ ಬಿಎಲ್‌ ಸಂತೋಷ್‌ ಅವರಿಗೆ ಒಳಗೊಂದು ಹೊರಗೊಂದು ಇಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ಮಾಡುತ್ತಾರೆ. ತಪ್ಪು ಮಾಡಿದಾಗ ತಿಳಿಹೇಳುತ್ತಾರೆ. ಬಿಎಲ್‌ ಸಂತೋಷ್‌ ಅವರಂತ ಬದುಕನ್ನೇ ರಾಷ್ಟ್ರಕ್ಕೆ ಸಮರ್ಪಿಸಿಕೊಂಡವರಿಗೆ ನಿಮಗಿರುವ ಸಣ್ಣ ಬುದ್ಧಿ ಇರಲ್ಲ ಬಿಡಿ.

    ಸಿದ್ದರಾಮಮಯ್ಯ ಟೀಕೆ ಏನು?
    ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್.ಎಸ್ ಎಸ್ ನಾಯಕ ಬಿಎಲ್‌ಸಂತೋಷ್‌ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ.

    ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ಬಿಎಲ್‌ ಸಂತೋಷ್‌ ಕೇಳಿದ್ದಾರೆ, ಅದನ್ನು ಕೊಡೋಣ. ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ.

    ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಸಂತೋಷ್‌ ಅವರೇನು ರಕ್ಷಣಾ ಸಚಿವರೇ? ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿ ನರೇಂದ್ರ ಮೋದಿ. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ ಹಿಂದೆ ಸರಿದದ್ದು ಎನ್ನೂವುದನ್ನು ತಿಳಿಸಲಿ.

    ಬಿಎಲ್‌ ಸಂತೋಷ್‌ ಅವರೇ ಯಡಿಯೂರಪ್ಪನವರಿಗೆ ನೀವು ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಭಾಸ್‌ಗಿರಿ ಕೊಡಬಹುದೇನೋ ?

  • ಬಿ.ಎಲ್.ಸಂತೋಷ್ ರಕ್ಷಣಾ ಸಚಿವರೇ, ಸೇನಾ ಮುಖ್ಯಸ್ಥರೇ?- ಸಿದ್ದರಾಮಯ್ಯ

    ಬಿ.ಎಲ್.ಸಂತೋಷ್ ರಕ್ಷಣಾ ಸಚಿವರೇ, ಸೇನಾ ಮುಖ್ಯಸ್ಥರೇ?- ಸಿದ್ದರಾಮಯ್ಯ

    – ಚೀನಾ ಒಳ ನುಸುಳಿಲ್ಲ ಎಂದಾದ್ರೆ, ಹಿಂದೆ ಸರಿದದ್ದು ಎಲ್ಲಿಂದ?
    – ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಮಾಜಿ ಸಿಎಂ ಬಿ.ಎಲ್.ಸಂತೋಷ್ ಅವರ ಮುಂದೆ ಕೆಲ ಪ್ರಶ್ನೆಗಳನ್ನಿಟ್ಟಿದ್ದಾರೆ

    ಟ್ವೀಟ್ 1: ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿಗಳು ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂ ತಿಳಿಸಲಿ.

    ಟ್ವೀಟ್ 2: ಕಾಂಗ್ರೆಸ್ ನೀಡಿದ್ದ ಒಂದು ಕೋಟಿ ರೂಪಾಯಿ ಪರಿಹಾರದ ಲೆಕ್ಕವನ್ನು ಬಿ.ಎಲ್.ಸಂತೋಷ್ ಕೇಳಿದ್ದಾರೆ, ಅದನ್ನು ಕೊಡೋಣ. ಮೊದಲು ಪ್ರತಿಯೊಬ್ಬ ಭಾರತೀಯನ ಖಾತೆಗೆ ನರೇಂದ್ರ ಮೋದಿ ಜಮೆ ಮಾಡಿರುವ 15 ಲಕ್ಷ ರೂಪಾಯಿಯ ಲೆಕ್ಕ ಕೊಡಿ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ‘ಪಿಎಂ ಕೇರ್ಸ್’ ನಿಧಿಯ ಲೆಕ್ಕಕೊಡಿ.

    ಟ್ವೀಟ್ 3: ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್‍ಎಸ್‍ಎಸ್ ನಾಯಕ ಬಿ.ಎಲ್.ಸಂತೋಷ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ.

    ಟ್ವೀಟ್ 4: ಬಿ.ಎಲ್.ಸಂತೋಷ್ ಅವರೇ, ಬಿ.ಎಸ್.ಯಡಿಯೂರಪ್ಪ ಅವರಿಗೆ ನೀವು ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಭಾಸ್‍ಗಿರಿ ಕೊಡಬಹುದೇನೋ?

  • ಆತ್ಮ ನಿರ್ಭರ ಭಾರತ ಯಶಸ್ವಿಗೆ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ ಸೂತ್ರ: ಬಿಎಲ್ ಸಂತೋಷ್

    ಆತ್ಮ ನಿರ್ಭರ ಭಾರತ ಯಶಸ್ವಿಗೆ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ ಸೂತ್ರ: ಬಿಎಲ್ ಸಂತೋಷ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಆತ್ಮ ನಿರ್ಭರ ಭಾರತ ಯಶಸ್ವಿಗೆ ಎಲ್ಲರೂ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ (ನಮ್ಮ ಸಂಸ್ಕೃತಿ) ಎಂಬ ಮೂರು ಸೂತ್ರಗಳನ್ನು ಪಾಲನೆ ಮಾಡಬೇಕು ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

    ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19 ಕುರಿತು ಬಿಜೆಪಿ ಕೈಗೊಂಡಿದ್ದ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭ ಇಂದು ನಡೆಯಿತು. ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿದ್ದ ಬಿ.ಎಲ್.ಸಂತೋಷ್ ಅವರು ದೆಹಲಿಯಿಂದಲೇ ಮಾತನಾಡಿದರು.

    ಕೊರೊನಾ ಸಂಕಷ್ಟದ ಕಾಲದಲ್ಲಿ ನಾವೆಲ್ಲ ಇದ್ದು, ಒಂದು ಪಕ್ಷದ ಕಾರ್ಯಕರ್ತರಾಗಿ ನಾವು ಕೇವಲ ಪಕ್ಷದ ಕೆಲಸ, ರಾಜಕೀಯ ಕೆಲಸಕ್ಕೆ ಸೀಮಿತವಾಗಬಾರದು. ಸಾಮಾನ್ಯ ಜನರ ತಲ್ಲಣ, ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಜಗತ್ತಿನ ಅನೇಕ ವೈದ್ಯರು ಫೇಸ್ ಕವರ್, ಮಾಸ್ಕ್ ಅಗತ್ಯ ಇಲ್ಲ ಎಂದಿದ್ದರು. ಆದರೆ ನಮ್ಮ ಪ್ರಧಾನಿ ನಮಗೆಲ್ಲ ಫೇಸ್ ಕವರ್, ಮಾಸ್ಕ್ ಅಗತ್ಯ ಇದೆ ಅಂದ್ರು. ಈಗ ಆ ವಿಜ್ಞಾನಿಗಳೂ, ವೈದ್ಯರೂ ಫೇಸ್ ಕವರ್, ಮಾಸ್ಕ್ ಅಗತ್ಯ ಅಂತಿದ್ದಾರೆ.

    ಕೊರೊನಾ ಬಗ್ಗೆ ಸಮೂಹ ಸನ್ನಿ, ಸಾಮೂಹಿಕ ಉದ್ವೇಗ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ದೇಶದಲ್ಲಿ ಈಗಾಗಲೇ ಶೇ.40ರಷ್ಟು ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ನಾವು ವೈಯಕ್ತಿಕ ಎಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಕೊರೊನಾ ಎದುರಿಸಬೇಕಿದೆ. ಕೊರೊನಾ ಬಗ್ಗೆ ಆತಂಕ ಪಡುವ ಸನ್ನಿವೇಶ ಈಗ ದೇಶದಲ್ಲಿ ಇಲ್ಲ. ಇದುವರೆಗೂ ದೇಶದಲ್ಲಿ 1 ಕೋಟಿ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. 1,100 ಕ್ಕೂ ಹೆಚ್ಚು ಟೆಸ್ಟಿಂಗ್ ಲ್ಯಾಬ್‍ಗಳು ದೇಶದಲ್ಲಿವೆ. ಇಂತಹ ಸಂಕಷ್ಟದ ಸಮಯದಲ್ಲಿ 39 ಕೋಟಿ ಬ್ಯಾಂಕ್ ಖಾತೆಗಳಿಗೆ 65 ಸಾವಿರ ಕೋಟಿ ರೂ. ಪರಿಹಾರದ ಹಣ ಜಮೆ ಮಾಡಲಾಗಿದೆ. ಯಾವುದೇ ಮಧ್ಯವರ್ತಿಗಳಿಲ್ಲದೇ, ಯಾವುದೇ ಭ್ರಷ್ಟಾಚಾರ ಇಲ್ಲದೇ ಪರಿಹಾರ ಕೊಡಲಾಗಿದೆ ಎಂದು ಕೇಂದ್ರ ಸರ್ಕಾರದ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

    ಕಾಂಗ್ರೆಸ್ ವಿರುದ್ಧ ಟೀಕೆ: ವೀರ್ ಸಾವರ್ಕರ್ ಯಾರು ಎಂದು ಪ್ರಶ್ನೆ ಮಾಡಿದವರಿಗೆ ಭವಿಷ್ಯದಲ್ಲಿ ಕಸದ ಬುಟ್ಟಿಗೆ ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದ ಸಂತೋಷ್ ಅವರು, ರಾಹುಲ್ ಗಾಂಧಿ ಅವರು ವಿರುದ್ಧವೂ ಕಿಡಿಕಾರಿದರು. ಪ್ರಧಾನಿ ಮೋದಿ ಅವರು ಸೈನಿಕರನ್ನು ಭೇಟಿ ಮಾಡಿದಕ್ಕೂ ಟೀಕೆ ಮಾಡಿದ್ದಾರೆ. ಸೇನೆಯಯಲ್ಲಿ ಚೇತರಿಕೆ (ರಿಕವರಿ) ವಾರ್ಡ್ ಎಂದು ಸೈನಿಕರಿಗೆ ನೀಡಲಾಗಿರುತ್ತದೆ. ಸೈನಿಕರ ಗಾಯ ವಾಸಿಯಾದ ಮೇಲೆ ಈ ವಾರ್ಡಿನಲ್ಲಿರುತ್ತಾರೆ. ಸೈನಿಕರನ್ನು ಅಂತಹ ವಾರ್ಡಿನಲಿಟ್ಟ ವೇಳೆ ಪ್ರಧಾನಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆದರೆ ಇದುವರೆಗೂ ಒಂದೇ ಒಂದು ರಕ್ಷಣಾ ಸಭೆಗೆ ಬಾರದಿರುವವರು ಇಂತಹ ಆರೋಪ ಮಾಡಿರುವುದು ಸರಿಯಲ್ಲ ಎಂದರು.

    ಇದೇ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ರಾಜ್ಯ ಸರ್ಕಾರವನ್ನು ಬಿಎಲ್ ಸಂತೋಷ್ ಅವರು ಶ್ಲಾಘಿಸಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಇತರೇ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

    ಮೋದಿ ಸರ್ಕಾರದ ಒಂದು ವರ್ಷದ ಸಾಧನೆಗಾಗಿ ಮತ್ತು ಕೊರೊನಾ ಕುರಿತ ಮಾಹಿತಿಯನ್ನು ಮೂವತೈದು ಲಕ್ಷ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿತ್ತು. ಸ್ವದೇಶಿ ವಸ್ತು ಬಳಕೆಗೆ ಪ್ರತಿಜ್ಞೆ ಕುರಿತಂತೆ ಮನೆ ಮನೆ ಭೇಟಿ ನೀಡಿ ಮಾಹಿತಿ ನೀಡಲಾಗಿತ್ತು. ಸಾಮಾಜಿಕ ಜಾಲತಾಣ ಮೂಲಕ ಕೊರೊನಾ ಕುರಿತು ಜಾಗೃತಿ ಮೂಡಿಸಲು ಮಾಹಿತಿ ನೀಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ ಮತ್ತು ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಭೈರತಿ ಬಸವರಾಜು ಭಾಗಿಯಾಗಿದ್ದರು. ಕಾವೇರಿ ನಿವಾಸದಲ್ಲಿ, ಕುಟುಂಬ ಸದಸ್ಯರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾರ್ಯಕ್ರಮ ವೀಕ್ಷಿಸಿದರು.

  • ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ: ಬಿ.ಎಲ್ ಸಂತೋಷ್

    ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ: ಬಿ.ಎಲ್ ಸಂತೋಷ್

    – ಪಕ್ಷ, ಜನಪ್ರತಿನಿಧಿಗಳು ಜೋಡೆತ್ತುಗಳಂತೆ ಕಾರ್ಯ ನಿರ್ವಹಿಸಬೇಕಿದೆ

    ಶಿವಮೊಗ್ಗ: ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

    ನಗರದಲ್ಲಿ ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೋಡೆತ್ತು ಪದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಉಪಯೋಗವಾಗಿವೆ. ಆದರೆ ನಾನು ಈ ಪದವನ್ನು ಇಲ್ಲಿ ಬಳಸುತ್ತಿದ್ದೇನೆ. ಪಕ್ಷ ಮತ್ತು ಜನಪ್ರತಿನಿಧಿಗಳು ಜೋಡೆತ್ತು ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಜನರನ್ನು ಕೊಂಡೊಯ್ಯಬೇಕಿದೆ. ಜನರು ಕೂಡ ಇದನ್ನೇ ಅಪೇಕ್ಷೆ ಪಡುತ್ತಾರೆ ಎಂದರು.

    ಜನರು ಜನಪ್ರತಿನಿಧಿ ಯಾರು, ಪಕ್ಷ ಯಾರು ಎಂದು ನೋಡುವುದಿಲ್ಲ. ಬದಲಾಗಿ ಜನರಿಗೆ ಗಾಡಿ ಲಯಬದ್ಧವಾಗಿ ಮುಂದೆ ಸಾಗಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಬೇಕಿದೆ. ಮುಂಬರುವ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಈಗಿನ ಜಿಲ್ಲಾ ತಂಡ ಇರಲಿದೆಯೋ ಅಥವಾ ಬೇರೆ ತಂಡ ಬರಲಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಜಿ.ಪಂ. ಮತ್ತು ಗ್ರಾ.ಪಂ. ಚುನಾವಣೆಗಳು ಬರಲಿದೆ. ಆ ಸಂದರ್ಭದಲ್ಲಿ ಹೊಸ ತಂಡಗಳ ಜೊತೆಗೂ ಸೇರಿಕೊಂಡು ನಾವು ಚುನಾವಣೆ ಎದುರಿಸಬೇಕಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷ ಅನೇಕ ಸಮಸ್ಯೆಗಳನ್ನು ಒಂದು ರೀತಿಯ ವೈರಸ್ ರೀತಿಯಲ್ಲಿ ಇಂಜೆಕ್ಟ್ ಮಾಡಿಬಿಟ್ಟಿದೆ. ನೆಹರು ನಂತರ ಬಂದಂತಹ ಕಾಂಗ್ರೆಸ್ ರಾಜಕೀಯ ಪಕ್ಷಗಳಲ್ಲಿ ಅನೇಕ ವೈರಸ್ ಬಿಟ್ಟು, ನಮ್ಮ ದೇಶಕ್ಕೆ ಅತಿ ದೊಡ್ಡ ಅನ್ಯಾಯ ಮಾಡಿದೆ. ಅದು ಎಲ್ಲಾ ಪಾರ್ಟಿಗಳಲ್ಲಿಯೂ ಈಗ ಬಂದು ಸೇರಿಕೊಂಡಿವೆ. ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ. ವ್ಯಕ್ತಿಗಳಲ್ಲ, ವೈರಸ್‍ಗಳು ಬಂದು ಸೇರಿಕೊಂಡಿವೆ. ಅವೆಲ್ಲವನ್ನು ನಿವಾರಿಸಿಕೊಂಡು ಪರ್ಯಾಯ ರಾಜಕೀಯ ನೀಡಲು ಆಗುತ್ತಾ ಎಂಬ ಪ್ರಶ್ನೆ ಇದೀಗ ಎದುರಾಗಿದ್ದು, ಇವೆಲ್ಲವನ್ನು ಸರಿದೂಗಿಸಿಕೊಂಡು ಮುನ್ನಡೆಯಬೇಕಿದೆ ಎಂದು ಮಾರ್ಮಿಕವಾಗಿ ಸಂತೋಷ್ ಹೇಳಿದರು.

  • ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಬಿ.ಎಲ್.ಸಂತೋಷ್ ಭೇಟಿ-ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ

    ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಬಿ.ಎಲ್.ಸಂತೋಷ್ ಭೇಟಿ-ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ

    -10+2 ಸೂತ್ರ ಮುಂದಿಟ್ಟ ಬಿ.ಎಲ್.ಸಂತೋಷ್

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಳಂಬ, ಪಕ್ಷದೊಳಗೆ ಗೊಂದಲ, ಅಸಮಾಧಾನಗಳು ಹೆಚ್ಚಾಗಿರುವ ಮಧ್ಯದಲ್ಲೇ ಸಿಎಂ ಯಡಿಯೂರಪ್ಪರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇವತ್ತು ಬೆಳ್ಳಂಬೆಳಗ್ಗೆ ಬೆಂಗಳೂರಿನ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದ ಬಿ.ಎಲ್.ಸಂತೋಷ್ ಸುಮಾರು 15 – 20 ನಿಮಿಷಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಈ ಮಾತುಕತೆ ಭಾರೀ ಕುತೂಹಲ ಹುಟ್ಟಿಸಿದೆ.

    ಎರಡು ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಬಿ.ಎಲ್ ಸಂತೋಷ್ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಸಂಪುಟ ವಿಸ್ತರಣೆ ಬಗ್ಗೆ ಹಲವು ಸುಳಿವುಗಳನ್ನು ಕೊಟ್ಟಿದೆ.

    ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದವರಲ್ಲಿ ಎಷ್ಟು ಜನರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು. ಪಕ್ಷ ನಿಷ್ಠರಲ್ಲಿ ಎಷ್ಟು ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಸೋತವರಿಗೂ ಅವಕಾಶ ಕೊಡಬೇಕಾ? ಅರ್ಹ ಶಾಸಕರಲ್ಲಿ ಮನೆ ಮಾಡಿರುವ ಅಸಮಾಧಾನ, ಹಾಲಿ ಸಚಿವರಿಂದ ಕೆಲ ಖಾತೆಗಳನ್ನು ವಾಪಸ್ ಪಡೆಯುವ ವಿಚಾರಗಳನ್ನು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ದೆಹಲಿಗೆ ಬರುವಂತೆ ಹೈಕಮಾಂಡ್ ಆಹ್ವಾನಿಸಿದರೆ ಇಬ್ಬರೂ ಸೇರಿ ವರಿಷ್ಠರ ಜೊತೆ ಚರ್ಚೆ ನಡೆಸುವ ಬಗ್ಗೆಯೂ ಉಭಯ ನಾಯಕರು ಮಾತಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂತೋಷ್ ಭೇಟಿ ಕುತೂಹಲ ಕೆರಳಿಸಿದೆ. ದಾವೋಸ್ ನಿಂದ ವಾಪಸ್ ಬಂದ ಬಿಎಸ್‍ವೈ ಅವರ ಕುಶಲೋಪರಿಯನ್ನೂ ಇದೇ ವೇಳೆ ವಿಚಾರಿಸಿದ್ದಾರೆ. ಇದೇ ನೆಪದಲ್ಲಿ ಸಂಪುಟ ಕುರಿತು ಮಹತ್ವದ ಚರ್ಚೆ ಮಾಡಿದ್ದಾರೆ. ಮಾತುಕತೆ ಬಳಿಕ ತಮ್ಮ ನಿವಾಸದ ಹೊರಗೆ ಬಂದು ಬಿ.ಎಲ್ ಸಂತೋಷ್ ರನ್ನು ಸಿಎಂ ಖುದ್ದು ಬೀಳ್ಕೊಟ್ಟರು.

    ಯಡಿಯೂರಪ್ಪ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಬಿ.ಎಲ್. ಸಂತೋಷ್ ಅವರು ಸಂಪುಟ ವಿಸ್ತರಣೆಗೆ 10+2 ರ ಸೂತ್ರ ಪ್ರಸ್ತಾಪಿಸಿದರು ಎಂದು ಹೇಳಲಾಗಿದೆ. ಗೆದ್ದವರಲ್ಲಿ 10 ಮಂದಿಗೆ, ಮೂಲ ಶಾಸಕರ ಪೈಕಿ ಇಬ್ಬರಿಗೆ ಮಂತ್ರಿಗಿರಿ ಕೊಡುವ ಪ್ರಸ್ತಾಪವನ್ನು ಸಂತೋಷ್ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಯಡಿಯೂರಪ್ಪನವರು ಸದ್ಯಕ್ಕೆ ಅರ್ಹರ ಪೈಕಿ 10 ಜನರಿಗೆ ಮಾತ್ರ ಸಚಿವರಾಗಿ ಮಾಡೋಣ, ಉಳಿದವರಿಗೆ ಜೂನ್ ಬಳಿಕ ನೋಡೋಣ ಎಂದು ತಮ್ಮ ಪ್ರಸ್ತಾಪವನ್ನೂ ಬಹಿರಂಗಪಡಿಸಿದ್ರು ಎನ್ನಲಾಗಿದೆ. ಯಡಿಯೂರಪ್ಪನವರ ಪ್ರಸ್ರಾಪವನ್ನು ಹೈಕಮಾಂಡ್ ಮುಂದಿಡುತ್ತೇನೆ ಎಂದು ಬಿ ಎಲ್ ಸಂತೋಷ್ ತಿಳಿಸಿದ್ರು ಎನ್ನಲಾಗಿದೆ. ಹೈಕಮಾಂಡ್ ಒಪ್ಪಿದ್ರೆ ಯಡಿಯೂರಪ್ಪನವರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಇಲ್ಲದಿದ್ದರೆ ದೆಹಲಿಗೆ ಹೋಗದೇ ಹೈಕಮಾಂಡ್ ಒಪ್ಪಿಗೆ ಪಡೆದು ಈ ತಿಂಗಳಾತ್ಯದಲ್ಲೇ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

  • ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು: ಬಿ.ಎಲ್.ಸಂತೋಷ್

    ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು: ಬಿ.ಎಲ್.ಸಂತೋಷ್

    – ನಮ್ಮ ದೇಶ ಹಿಂದೂ ರಾಷ್ಟ್ರ ಅಲ್ಲ, ನಮ್ಮ ದೇಶ ಜಾತ್ಯತೀತ ರಾಷ್ಟ್ರ

    ಮೈಸೂರು: ನಮ್ಮ ಪ್ರಧಾನಮಂತ್ರಿಗೆ, ನಮ್ಮ ಗೃಹ ಮಂತ್ರಿಗೆ ಹಾಗೂ ನಮ್ಮ ಸಿಎಂಗೆ ಒಂದೊಂದು ಕಾಲದಲ್ಲಿ ಒಂದೊಂದು ಕಳಂಕ ಅಂಟಿಸುವ ಕೆಲಸ ಮಾಡಿದರು. ಆದರೆ ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು. ಈಗ ಪೌರತ್ವ ಕಾಯ್ದೆ ವಿಚಾರದಲ್ಲೂ ಕಳಂಕ ಅಂಟಿಸಲು ವಿಪಕ್ಷಗಳು ಸಂಕಲ್ಪ ಮಾಡಿವೆ. ಇದನ್ನು ನಾವೆಲ್ಲಾ ಸೇರಿ ತಪ್ಪಿಸಬೇಕು. ಜನರಿಗೆ ವಾಸ್ತವ ತಿಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

    ಇಂದು ಮೈಸೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ 2019 ಒಂದು ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದ ಎಲ್ಲಾ ಕಡೆ ಮಸೀದಿಗಳಿವೆ. ಎಲ್ಲೂ ಅವರಿಗೆ ಅವಕಾಶ ನಿರಾಕರಿಸಿಲ್ಲ. ಮುಸ್ಲಿಮರು ಈ ದೇಶದಲ್ಲಿ ಏರಬೇಕಾದ ಎಲ್ಲಾ ಉನ್ನತ ಸ್ಥಾನ ಏರಿದ್ದಾರೆ. ಇದಕ್ಕೆ ಯಾರು ಅಡ್ಡಿ ಬಂದಿಲ್ಲ. ಈ ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್‍ರಿಗೆ ಯಾವತ್ತೂ ತೊಂದರೆ ಆಗಿಲ್ಲ. ಮುಸ್ಲಿಮರು ಕ್ರಿಶ್ಚಿಯನ್ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಆದರೆ ಬೇರೆ ದೇಶದಲ್ಲಿ ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ ಎಂದರು.

    ಭಾರತದಲ್ಲಿ ಸದಾ ಕಾಲಕ್ಕೂ ಮುಸ್ಲಿಮರು ಸುಶಿಕ್ಷಿತರಾಗಿರುತ್ತಾರೆ. ದೇಶದಲ್ಲಿನ ಎಲ್ಲಾ ಅಲ್ಪಸಂಖ್ಯಾತ ಜನರು ಇಲ್ಲಿ ಸದಾ ಸುರಶಿಕ್ಷಿತರಾಗಿರುತ್ತಾರೆ ಅನುಮಾನಗಳೇ ಬೇಡ. ನಮ್ಮ ದೇಶ ಹಿಂದೂ ರಾಷ್ಟ್ರ ಅಲ್ಲ, ನಮ್ಮ ದೇಶ ಜಾತ್ಯತೀತ ರಾಷ್ಟ್ರ. ಆದರೆ ನಮ್ಮ ಪಕ್ಕದ ದೇಶಗಳು ಧರ್ಮದ ದೇಶಗಳಾಗಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬೇರೆ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಜನರಲ್ಲಿ ಶೇಕಡಾ 68 ಜನರು ದಲಿತರು, ಅವರಿಗೆ ಪೌರತ್ವ ಕೊಡೋದು ತಪ್ಪಾ? ಅವರಿಗೆ ನಾವು ಪೌರತ್ವ ಕೊಡೋದೆ ಇನ್ಯಾರಿಗೆ ಕೊಡಬೇಕು? ಇದು ದಲಿತರ ವಿರೋಧಿ ಕಾಯ್ದೆ ಎಂದು ಅಪ್ರಚಾರ ಮಾಡ್ತಿರಾ? ಎಂದು ಪ್ರಶ್ನಿಸಿದರು.

    ಪೌರತ್ವ ಕಾಯ್ದೆ ಹೋರಾಟದಿಂದ ಕಾಂಗ್ರೆಸ್‍ನ ಕೆಲ ನಾಯಕರೆ ಹಿಂದೆ ಸರಿಯುತ್ತಿದ್ದಾರೆ. ಅವರಿಗೆ ಇದು ರಾಜಕೀಯವಾಗಿ ತಮಗೆ ತೊಡಕಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ನಿಧಾನವಾಗಿ ಮುಸ್ಲಿಮರು ಕೂಡ ಈ ಹೋರಾಟದಿಂದ ಹಿಂದೆ ಸರಿಯುತ್ತಿದ್ದಾರೆ. ಕೆಲ ನಗರ ನಕ್ಸಲರು, ಕೆಲ ವಿಚಾರವಾದಿಗಳು, ಕೆಲ ಮುಸ್ಲಿಂ ಮುಖಂಡರು, ಕೆಲ ನಿರುದ್ಯೋಗಿ ರಾಜಕಾರಣಿಗಳಷ್ಟೇ ಇದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ನವದೆಹಲಿ: ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿಯನ್ನು ಅರಳಿಸಲು ಮುಂದಾಗಿರುವ ನಾಯಕರು ಜನಸೇನಾದೊಂದಿಗೆ ಮೈತ್ರಿಗೆ ಮುಂದಾಗಿದ್ದು, ಈ ಮೈತ್ರಿಯಲ್ಲಿ ಕನ್ನಡಿಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿ.ಎಲ್.ಸಂತೋಷ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

    ಪವನ್ ಕಲ್ಯಾಣ್, ಕಮಲ ಮೈತ್ರಿಯ ಪ್ರಮುಖ ಸೂತ್ರಧಾರ ಬಿ.ಎಲ್.ಸಂತೋಷ್ ಎನ್ನಲಾಗಿದ್ದು, ಇಂದು ಪವನ್ ಹಾಗೂ ಸಂತೋಷ್ ಅವರು ಮೈತ್ರಿಯ ಅಂತಿಮ ಮಾತುಕತೆ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದರು. ಬಿಜೆಪಿಗೆ ನೆಲೆ ಇಲ್ಲದ ಆಂಧ್ರದಲ್ಲಿ ಸಂತೋಷ್ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗುತ್ತಾ ಎಂಬ ಕುತೂಹಲ ಮೂಡಿಸಿದ್ದು, ಆಂಧ್ರದ ಮುಂದಿನ ಸಿಎಂ ಪವನ್ ಕಲ್ಯಾಣ್ ಆಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಮೈತ್ರಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಪವನ್ ಕಲ್ಯಾಣ್ ಅವರು, ಆಂಧ್ರ ಪ್ರದೇಶದ ಭವಿಷ್ಯಕ್ಕಾಗಿ ಎರಡು ಪಕ್ಷಗಳು ಯಾವುದೇ ಷರತ್ತುಗಳಿಲ್ಲದೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದೊಂದಿಗೆ ಜನಸೇನಾ ಪಕ್ಷ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಆಂಧ್ರಪ್ರದೇಶ ಸ್ಥಳೀಯ ಹಾಗೂ 2024ರ ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

    ನಟ ಪವನ್ ಕಲ್ಯಾಣ್ ಅವರು 2014ರಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಜನಸೇನಾ ಸ್ಪರ್ಧೆ ನಡೆಸಿರಲಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿಗೆ ಬೆಂಬಲ ನೀಡಿದ್ದರು. ಪಕ್ಷ ಸ್ಥಾಪನೆಗೂ ಮುನ್ನ ಸಹೋದರ, ನಟ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷದ ಪರ ರಾಜಕೀಯದಲ್ಲಿ ಭಾಗವಹಿಸಿದ್ದರು. ಆದರೆ ಆ ಪಕ್ಷ ಕಾಂಗ್ರೆಸ್‍ನೊಂದಿಗೆ ವಿಲೀನರಾದ ಬಳಿಕ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಮತ್ತು ಬಿಜೆಪಿಗೆ ಬೆಂಬಲ ನೀಡಿದ ಜನಸೇನಾ ಪಕ್ಷ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಈ ಚುನಾವಣೆಯಲ್ಲಿ ಜನಸೇನಾ ಮೈತ್ರಿಗೆ 1 ಸ್ಥಾನವೂ ಲಭಿಸಿರಲಿಲ್ಲ. ಆದರೆ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಗೆ ಬೆಂಬಲ ನೀಡದೆ ಸ್ಪರ್ಧೆ ನಡೆಸಿದ್ದ ಜನಸೇನಾ ಪಕ್ಷ ಕೇವಲ 1 ಸ್ಥಾನವನ್ನು ಮಾತ್ರ ಪಡೆದಿತ್ತು. ವಿಶೇಷ ಎಂದರೇ ಸ್ವತಃ ಪವನ್ ಕಲ್ಯಾಣ್ ತಾವು ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಸೋತು ಹೋಗಿದ್ದರು.

    ಸದ್ಯ ಆಂಧ್ರ ಪ್ರದೇಶ ರಾಜಕಾರಣದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಪವನ್ ಕಲ್ಯಾಣ್ ಅವರು, ಬಿಜೆಪಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದ್ದಾರೆ. ಇದುವರೆಗೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಆಸ್ಥಿತ್ವದಲ್ಲಿ ಇಲ್ಲದ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಬಲಗೊಳಿಸಲು ಮುಂದಾಗಿದೆ.

  • ಮತ್ತೆ ಚಟುವಟಿಕೆ ಕೇಂದ್ರವಾಯ್ತು ಸಿಎಂ ನಿವಾಸ

    ಮತ್ತೆ ಚಟುವಟಿಕೆ ಕೇಂದ್ರವಾಯ್ತು ಸಿಎಂ ನಿವಾಸ

    – ಬಿಎಸ್‍ವೈ ಭೇಟಿ ಮಾಡುತ್ತಿರುವ ಸಚಿವಾಕಾಂಕ್ಷಿಗಳು

    ಬೆಂಗಳೂರು: ಮೂರು ದಿನಗಳ ರೆಸ್ಟ್ ಬಳಿಕ ಮತ್ತೆ ಧವಳಗಿರಿ ಚಟುವಟಿಕೆಯ ಕೇಂದ್ರವಾಗಿದೆ. ಸಿಎಂ ಯಡಿಯೂರಪ್ಪ ನಿವಾಸ ಧವಳಗಿರಿ ನಿವಾಸಕ್ಕೆ ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಗಳು ಧಾಂಗುಡಿ ಇಡುತ್ತಿದ್ದಾರೆ. ನಿನ್ನೆ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಸಿದರು. ಸಂಭಾವ್ಯ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿ ದೆಹಲಿಗೆ ತರುವಂತೆ ಸಂತೋಷ್ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಚುರುಕಾದ ಸಚಿವಾಕಾಂಕ್ಷಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಂದ ಮರಳಿ ಬೆಂಗಳೂರಿಗೆ ಬಂದು ಸಿಎಂ ಭೇಟಿ ಮಾಡುತ್ತಿದ್ದಾರೆ.

    ಇವತ್ತು ಬೆಳಗ್ಗೆಯಿಂದಲೂ ಸಿಎಂ ಅವರ ಧವಳಗಿರಿ ನಿವಾಸ ಚಟುವಟಿಕೆಯ ಕೇಂದ್ರಬಿಂದುವಾಗಿದೆ. ಬೆಳಗ್ಗೆ ಹಲವು ಸಚಿವಾಕಾಂಕ್ಷಿ ಶಾಸಕರು ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಇವತ್ತು ಬೆಳಗ್ಗೆಯೇ ಸಿಎಂ ಭೇಟಿ ಮಾಡಿದ್ರು. ಡಿಸಿಎಂ ಸ್ಥಾನ, ಸೋತವರಿಗೆ ಸಚಿವ ಸ್ಥಾನ, ಸಂಪುಟ ವಿಸ್ತರಣೆ ವಿಳಂಬ ಕುರಿತು ಸಿಎಂ ಜೊತೆ ರಮೇಶ್ ಜಾರಕಿಹೊಳಿ ಮಹತ್ವದ ಚರ್ಚೆ ನಡೆಸಿದರು. ಡಿಸಿಎಂ ಹುದ್ದೆಗಾಗಿ ಶ್ರೀರಾಮುಲು ಪಟ್ಟು ಹಿಡಿದಿರುವ ವಿಚಾರ ಕೂಡಾ ಚರ್ಚಿಸಿದ್ದು, ಆ ಸ್ಥಾನ ತಮಗೇ ಕೊಡಬೇಕೆಂದೂ ರಮೇಶ್ ಜಾರಕಿಹೊಳಿ ಸಿಎಂ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತಮಗೆ ಜಲಸಂಪನ್ಮೂಲ ಖಾತೆ ಕೊಡಿ ಎಂದೂ ಸಿಎಂಗೆ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ತೆರಳಿದ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಸಿಎಂ ಭೇಟಿ ಮಾಡಿ ಜಲಸಂಪನ್ಮೂಲ ಖಾತೆಗೆ ಬೇಡಿಕೆ ಇಟ್ಟರು ಎನ್ನಲಾಗಿದೆ. ಜಲಸಂಪನ್ಮೂಲ ಖಾತೆಗೆ ರಮೇಶ್ ಜಾರಕಿಹೊಳಿ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರೂ ಪಟ್ಟು ಹಿಡಿದಿರುವುದು ಸಿಎಂಗೆ ಮತ್ತೊಂದು ತಲೆನೋವಾಗಿದೆ.

    ಇನ್ನು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಕೂಡಾ ಸಿಎಂ ಭೇಟಿ ಮಾಡಿದ್ದು, ಸಚಿವ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಒತ್ತಾಯಿಸಿದರು ಎನ್ನಲಾಗಿದೆ. ಚುನಾವಣಾ ಪೂರ್ವದಲ್ಲಿ ರಾಮುಲು ಅವರಿಗೆ ಭರವಸೆ ಕೊಟ್ಟಂತೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಸೋಮಶೇಖರ್ ರೆಡ್ಡಿ ಆಗ್ರಹಿಸಿದ್ರು ಎನ್ನಲಾಗಿದೆ.

    ಇನ್ನು ಹಿರಿಯ ಶಾಸಕ ಉಮೇಶ್ ಕತ್ತಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ರೆಡ್ಡಿ ಲಿಂಗಾಯತ ಸಮುದಾಯದ ಎ.ಎಸ್.ಪಾಟೀಲ್ ನಡಹಳ್ಳಿ, ವೆಂಕಟರೆಡ್ಡಿ ಮುದ್ನಾಳ್, ದೊಡ್ಡನಗೌಡ ಪಾಟೀಲ್ ಸೇರಿ ಹಲವರು ಸಹ ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ರು. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸುವಂತೆ ಸಚಿವಾಕಾಂಕ್ಷಿಗಳು ಸಿಎಂ ಯಡಿಯೂರಪ್ಪಗೆ ಒತ್ರಾಯಿಸಿದ್ರು. ಈ ಮಧ್ಯೆ ಮರಾಠಾ ಕ್ಷತ್ರೀಯ ಸಮಯದಾಯದ ಮುಖಂಡರು ಸಹ ಸಿಎಂ ಭೇಟಿ ಮಾಡಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿದರು.

    ಇದೆಲ್ಲದರ ನಡುವೆ ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ಲಕ್ಷ್ಮಣ ಸವದಿ ಹೋರಾಟ ಮುಂದುವರಿಸಿದ್ದಾರೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಡಿಸಿಎಂ ಸ್ಥಾನ, ತಮ್ಮ ಭವಿಷ್ಯ ಕುರಿತು ಚರ್ಚಿಸಿ ಬಂದಿದ್ರು ಲಕ್ಷ್ಮಣ್ ಸವದಿ. ದೆಹಲಿಯಿಂದ ವಾಪಸಾದ ಬಳಿಕ ಇವತ್ತು ಡಿಸಿಎಂ ಲಕ್ಷ್ಮಣ್ ಸವದಿ ಸಿಎಂ ಭೇಟಿ ಮಾಡಿ ಚರ್ಚಿಸಿದರು. ಹೈಕಮಾಂಡ್ ನಾಯಕರ ಜೊತೆಗಿನ ಮಾತುಕತೆಯನ್ನೂ ಸವದಿ ಸಿಎಂ ಜೊತೆ ಹಂಚಿಕೊಂಡ್ರು ಎನ್ನಲಾಗಿದೆ.

    ಕಳೆದ ವಾರಾಂತ್ಯದ ಎರಡು ದಿನ ಸಿಎಂ ಅವರ ಧವಳಗಿರಿ ನಿವಾಸದಲ್ಲಿ ಶಾಂತಿ ನೆಲೆಸಿತ್ತು. ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಕ್ಷೇತ್ರಗಳಿಗೆ ಮರಳಿದ್ರು. ಆದ್ರೆ ನಿನ್ನೆ ಬಿ ಎಲ್ ಸಂತೋಷ್ ಭೇಟಿ ಮತ್ತೆ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಕೆದಕುವಂತೆ ಮಾಡಿದೆ.

  • ಸಂಘಟನಾತ್ಮಕ ವೀರ ಕೇರಳ, ಆಂಧ್ರದಲ್ಲಿ ಪಕ್ಷಕ್ಕೆ ಎಷ್ಟು ಸೀಟು ತಂದು ಕೊಟ್ಟರು: ಸಂತೋಷ್ ವಿರುದ್ಧ ಯತ್ನಾಳ್ ಕಿಡಿ

    ಸಂಘಟನಾತ್ಮಕ ವೀರ ಕೇರಳ, ಆಂಧ್ರದಲ್ಲಿ ಪಕ್ಷಕ್ಕೆ ಎಷ್ಟು ಸೀಟು ತಂದು ಕೊಟ್ಟರು: ಸಂತೋಷ್ ವಿರುದ್ಧ ಯತ್ನಾಳ್ ಕಿಡಿ

    – ಸೂಲಿಬೆಲೆ ಪರ ಬ್ಯಾಟಿಂಗ್, ಸದಾನಂದಗೌಡರಿಗೆ ಟಾಂಗ್
    – ಇದೇ ಖಾತೆ ಬೇಕು ಅಂತ ಸರ್ಕಾರಿ ಕಾರು ಬಿಟ್ಟು ಓಡಿ ಹೋಗ್ಲಿಲ್ಲ
    – ಸಿ.ಟಿ.ರವಿ ವಿರುದ್ಧ ಗುಡುಗಿದ ಯತ್ನಾಳ್

    ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ದಕ್ಷಿಣ ಭಾರತದಲ್ಲಿ ಸಂಘಟನಾತ್ಮಕ ಚತುರರು, ವೀರರು, ಧೀರರು ಎಂದು ಹೇಳಿಕೊಳ್ಳುವವರು ಕೇರಳ, ಆಂಧ್ರಪ್ರದೇಶದ ಉಸ್ತುವಾರಿ ಹೊಂದಿದ್ದಾಗ ಎಷ್ಟು ಸೀಟು ಗೆದ್ದು ತಂದರು. ಕೇರಳದಲ್ಲಿ ಐದು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಭಾಷಣ ಮಾಡಿದರು. ಕೊನೆಗೆ ಗೆದ್ದಿದ್ದು ಎಷ್ಟು? ಒಂದೇ ಒಂದು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬರಲಿಲ್ಲ. ಬರೀ ಕಥೆ ಹೇಳಿದರು ಎಂದು ಬಿ.ಎಸ್.ಸಂತೋಷ್ ವಿರುದ್ಧ ಕಿಡಿಕಾರಿದರು.

    ಕೇರಳದಲ್ಲಿ ಶಬರಿಮಲೆ ವಿವಾದ ಇದ್ದಾಗಲೂ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಕೆಲ ಮಾಧ್ಯಮಗಳು ಜಾತಿ ಅಭಿಮಾನದಿಂದ ಅವರನ್ನೇ ಹೊಗಳಿದವು ಎಂದು ಮಾಧ್ಯಮಗಳ ಮೇಲೆ ಗೂಬೆ ಕೂಡಿಸಿದರು.

    ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ದಿವಂಗತ ಅನಂತ್‍ಕುಮಾರ್ ಅವರು ರಾಜ್ಯದಲ್ಲಿ ವ್ಯವಸ್ಥಿತವಾಗಿ ಪಕ್ಷ ಕಟ್ಟಿದ್ದಾರೆ. ಈ ಇಬ್ಬರು ನಾಯಕರು ಮಕ್ಕಳು, ಮನೆ ಬಿಟ್ಟು ಪಕ್ಷವನ್ನು ಬೆಳೆಸಿದ್ದಾರೆ. ಅನಂತ್‍ಕುಮಾರ್ ಅವರು ಇದ್ದಿದ್ದರೆ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡುವ ನಾಯಕರು ಇಂದು ರಾಜ್ಯದಲ್ಲಿ ಯಾರೂ ಇಲ್ಲ ಎಂದು ಪರೋಕ್ಷವಾಗಿ ರಾಜ್ಯ ಬಿಜೆಪಿ ಸಂಸದರ ವಿರುದ್ಧ ಕಿಡಿಕಾರಿದರು.

    ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಚಿಂತಕ ಚಕ್ರವರ್ತಿ ಸೂಲಿಬೆಲೆ ಕೇಳುವುದರಲ್ಲಿ ತಪ್ಪೇನಿಲ್ಲ. ಅವರು ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ತಪಸ್ಸು ಮಾಡಿದವರು. ನಿಮ್ಮ ವೈಫಲ್ಯಗಳನ್ನು ಅವರ ಮೇಲೆ ಯಾಕೆ ಹಾಕುತ್ತೀರಿ. ಅವರ ವಿರುದ್ಧ ಟೀಕೆ ಮಾಡುವ ನೈತಿಕತೆ ನಿಮಗೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ಚಕ್ರವರ್ತಿ ಸೂಲಿಬೆಲೆ ಅವರನ್ನು ಬೈದು ನಿಮ್ಮ ಗೌರವ ಅಷ್ಟೇ ಅಲ್ಲ ಪ್ರಧಾನಿ ಮೋದಿ ಗೌರವವನ್ನು ಕಳೆಯಬೇಡಿ. ಅವರನ್ನ ಬೈದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಸೂಲಿಬೆಲೆ ಅವರಿಗೆ ಏನು ಆಗಲ್ಲ, ಅವರೇನು ಚುನಾವಣೆಗೆ ನಿಲ್ಲುವುದಿಲ್ಲ, ರಾಜಕೀಯ ಬಯಸಿದವರಲ್ಲ. ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿ ಎಂದು ಕೇಂದ್ರ ಸಚಿವರನ್ನು ಜಾಡಿಸಿದರು.

    ಹೋಗ್ರಿ ಪ್ರಧಾನಿ ಬಳಿ ಪರಿಹಾರ ಹಣ ತನ್ನಿ. ಒಬ್ಬರು ಹುಬ್ಬಳ್ಳಿಯಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ ಕುಳಿತು ಏನ್ ಮಾಡುತ್ತಿದ್ದಿರೀ. ಕರ್ನಾಟಕಕ್ಕೆ 10 ಸಾವಿರ ಕೋಟಿ ರೂ. ಪರಿಹಾರ ತೆಗೆದುಕೊಂಡು ಬನ್ನಿ. ಇಲ್ಲೆ ಕುಳಿತು ಯಾರ್ಯಾರಿಗೋ ದೇಶದ್ರೋಹಿ ಎಂದು ಟೀಕೆ ಮಾಡುತ್ತೀರಿ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಡಿ.ವಿ.ಸದಾನಂದಗೌಡ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

    ರಾಜ್ಯದಲ್ಲಿ ಹುಡುಗಾಟಿಕೆ ಹಚ್ಚಿದ್ದೀರಾ? ಸಂಸದರಾಗಿ ಕಥೆ ಹೇಳುದ್ದೀರಿ. ಹೇಳುವವರು ಕೇಳುವವರು ಇಲ್ವಾ ನಿಮಗೆ? ನಾನು ಪಕ್ಷ ಕಟ್ಟಿದ್ದೇನೆ, 10 ವರ್ಷ ಸಂಸದನಾಗಿ, ಕೇಂದ್ರ ಸಚಿವನಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ನೀವು ಮಾತ್ರ ಜಿಲ್ಲೆಗೆ ಸೀಮಿತವಾಗಿ ಉಳಿದಿದ್ದಿರಾ, ಜಿಲ್ಲೆ ಬಿಟ್ಟು ಹೊರಗೆ ಬನ್ನಿ. ಹೋಗಿ ಹಠ ಹಿಡಿದು ನೆರೆ ಪರಿಹಾರ ಹಣ ತೆಗೆಕೊಂಡು ಬನ್ನಿ ಎಂದು ರಾಜ್ಯದ ಸಂಸದರನ್ನು ತರಾಟೆಗೆ ತೆಗೆದುಕೊಂಡರು.

    ಉದ್ದೇಶ ಇಟ್ಟುಕೊಂಡು ಯತ್ನಾಳ್ ಅವರು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ ಎಂಬ ಸಚಿವ ಸಿ.ಟಿ.ರವಿ ಅವರ ಹೇಳಿ ವಿರುದ್ಧ ಕಿಡಿಕಾರಿದ ಶಾಸಕರು, ನಾನೇನು ಮಂತ್ರಿಯಾಗಬೇಕು ಅಂತ ಯಾರ ಕಾಲು ಹಿಡಿದಿಲ್ಲ. ಇದೇ ಖಾತೆ ಬೇಕು ಅಂತ ಸರ್ಕಾರಿ ಕಾರು ಬಿಟ್ಟು ಓಡಿ ಮನೆಗೆ ಹೋಗಿ ಮಲಗಲಿಲ್ಲ. ಅರ್ಹತೆ ಇದ್ದರೆ ಸಚಿವ ಸ್ಥಾನ ನೀಡುತ್ತಾರೆ. ಮಾಜಿ ಪ್ರಧಾನಿ ಅಟಲ್ ಬಿಹರಿ ವಾಜಪೇಯಿ ಅವರು ನನ್ನ ಅರ್ಹತೆ ಗುರುತಿಸಿಯೇ ಮಂತ್ರಿ ಮಾಡಿದ್ದರು ಎಂದು ಟಾಂಗ್ ಕೊಟ್ಟರು.

  • ನಮಗೆ ಒಳ್ಳೆಯದು ಬರುತ್ತೆ, ಹನುಮಂತನ ರೀತಿ ಬೆಂಕಿ ಹಚ್ಚಲು ಬರುತ್ತೆ: ಬಿ.ಎಲ್ ಸಂತೋಷ್

    ನಮಗೆ ಒಳ್ಳೆಯದು ಬರುತ್ತೆ, ಹನುಮಂತನ ರೀತಿ ಬೆಂಕಿ ಹಚ್ಚಲು ಬರುತ್ತೆ: ಬಿ.ಎಲ್ ಸಂತೋಷ್

    ಬಳ್ಳಾರಿ: ನಾವೂ ಒಳ್ಳೆಯರಾಗಿ ಹೇಳುತ್ತೇವೆ ಕೇಳಿ. ಇಲ್ಲದಿದ್ದರೆ ನಮಗೆ ಹನುಮಂತನ ತರಹ ಬೆಂಕಿ ಹಚ್ಚಲು ಬರುತ್ತೆ ಎಂದು ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದಾರೆ.

    ಬಳ್ಳಾರಿಯ ಮೋಕಾ ಸಮೀಪದ ಮರೂರು ಗ್ರಾಮದಲ್ಲಿ ಹನುಮ ಮಾಲಾಧಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂತೋಷ್, ಮತಾಂತರ ಮತ್ತು ಗೋಹತ್ಯೆ ಮಾಡೋರನ್ನು ಉದ್ದೇಶಿಸಿ ಈ ರೀತಿ ಮಾತನಾಡಿದ್ದಾರೆ. ಅಲ್ಲದೇ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಈ ಬಾರಿ ನಮ್ಮ ಪರ ತೀರ್ಪು ಬರುತ್ತದೆ. ನ್ಯಾಯಾಧೀಶರಿಗೆ ನಮ್ಮ ಕೂಗು ಕೇಳಿಸುವಂತೆ ಜೈ ಶ್ರೀ ರಾಮ್ ಎಂದು ಕೂಗಿ ಎಂದು ಹೇಳಿದರು.

    ನ್ಯಾಯಾಲಯ ಸಾಮಾನ್ಯ ಜನರ ಭಾವನೆಗೆ ಬೆಲೆಕೊಟ್ಟು ವಿಚಾರಣೆ ಕೈಗೆತ್ತಿಕೊಂಡಿದೆ ಯಾವುದ್ಯಾವುದೋ ಕೇಸ್‍ಗಳಿಗೆ ಮಧ್ಯರಾತ್ರಿ 2 ಗಂಟೆಗೆ ತೀರ್ಪು ಕೊಡುತ್ತಾರೆ. ಈ ವಿಚಾರದಲ್ಲಿ ಹಾಗೇ ಮಾಡಲಿ. ತೀರ್ಪು ನಮ್ಮ ಪರ ಬರುತ್ತದೆ ಎಂದು ನಂಬಿಕೆ ಇದೆ. ಇನ್ನೊಂದು 25 ದಿನ ಕಾಯೋಣ, ಈ ಬಾರಿ ನಮ್ಮ ಸಂಕಲ್ಪ ಪೂರ್ಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.