ಮಂಗಳೂರು: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಇಂದು ದಿಢೀರ್ ಕಾಣಿಸಿಕೊಂಡು ಬೆಳ್ತಂಗಡಿ ಠಾಣೆಗೆ (Belthangady Police Station) ಆಗಮಿಸಿದ್ದಾರೆ.
ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಇಂದು ಹಾಜರಾಗಿದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಅವರನ್ನು ನಿಂದಿಸಿದ ಆರೋಪದ ಅಡಿ ಬ್ರಹ್ಮಾವರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆಗಸ್ಟ್ 21 ರಂದು ಉಜಿರೆಯ ತಿಮರೋಡಿಗೆ ಪೊಲೀಸರು ಆಗಮಿಸಿ ಮಹೇಶ್ ಶೆಟ್ಟಿಯನ್ನು ಬಂಧಿಸಿದ್ದರು. ಇದನ್ನೂಓದಿ: ತಿಮರೋಡಿ ತೋಟದಲ್ಲಿ ಸಿಕ್ತಾ ಚಿನ್ನಯ್ಯ ತಂದ ಬುರುಡೆ?
ಬಂಧನದ ವೇಳೆ ತಿಮರೋಡಿ ಸೇರಿದಂತೆ ಹಲವು ಮಂದಿ ಅಡ್ಡಿ ಪಡಿಸಿದ್ದರು. ಹೀಗಾಗಿ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ತಿಮರೋಡಿ ಇಂದು ಬೆಳಗ್ಗೆ ಠಾಣೆಗೆ ಬಂದಿದ್ದಾರೆ.
ಆ.26 ರಂದು ಚಿನ್ನಯ್ಯನನ್ನು ತಿಮರೋಡಿಯ ನಿವಾಸಕ್ಕೆ ಮಹಜರು ಮಾಡಲು ಕರೆದುಕೊಂಡು ಬರಲಾಗಿತ್ತು. ಮಹಜರಿಗೆ ಕರೆ ತರುವ ಕೆಲ ಗಂಟೆಯ ಮೊದಲು ತಿಮರೋಡಿ ಮನೆಯಿಂದ ಹೊರಗಡೆ ಹೋಗಿದ್ದರು.
ಬಿ.ಎಲ್ ಸಂತೋಷ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡೋ ಮೂಲಕ ಹಿಂದೂ ಧರ್ಮದ ನಾಯಕನ ನಿಂದನೆ ಮಾಡಿ ಧರ್ಮ, ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡಿದ್ದಾರೆ ಎಂದು ಬಹ್ಮಾವರ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ದೂರು ದಾಖಲಿಸಿದ್ದರು. ಸುಳ್ಳು ನಿಂದನೆ, ಸಾರ್ವಜನಿಕವಾಗಿ ಶಾಂತಿ ಕದಡುವ ಸೆಕ್ಷನ್‌ನಲ್ಲಿ ಕೇಸ್ ದಾಖಲಾಗಿತ್ತು.
ಆ.21 ರಂದು ಉಜಿರೆ ಬಳಿಯ ತಿಮರೋಡಿಯ ನಿವಾಸಕ್ಕೆ 8 ವಾಹನಗಳಲ್ಲಿ ಬ್ರಹ್ಮಾವರ ಪೊಲೀಸರು ಹೋಗಿದ್ದರು. ಈ ವೇಳೆ, ಕೋಣೆಯಲ್ಲಿ ಲಾಕ್ ಮಾಡಿಕೊಂಡು ತಿಮರೋಡಿ ಕೂತಿದ್ದರು. ಪೊಲೀಸರ ಜೊತೆ ಗಿರೀಶ್ ಮಟ್ಟಣ್ಣನವರ್ ಹಾಗೂ ತಿಮರೋಡಿ ಬೆಂಬಲಿಗರು ವಾಗ್ವಾದ ನಡೆಸಿದದ್ದರು. ಭಾರೀ ಹೈಡ್ರಾಮಾದ ನಡುವೆ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ದರು.
ಉಡುಪಿ: ಬಿ.ಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಜೈಲು ಸೇರಿರುವ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarody) ಇಂದು ಮಹತ್ವದ ದಿನವಾಗಿದೆ. ಗುರುವಾರ ಬ್ರಹ್ಮಾವರ ಪೊಲೀಸರು ತಿಮರೋಡಿಯನ್ನ ವಶಕ್ಕೆ ಪಡೆದು ಬಳಿಕ ಅರೆಸ್ಟ್ ಮಾಡಿದ್ದರು. ನಂತರ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಹಿರಿಯಡ್ಕ ಸಬ್ ಜೈಲಿನಲ್ಲಿರುವ ತಿಮರೋಡಿಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ್ದಕ್ಕೆ ಬ್ರಹ್ಮಾವರ ಪೊಲೀಸರು ಮಹೇಶ್ ತಿಮರೋಡಿಯನ್ನು ಬಂಧಿಸಿ ಆನಂತರ ಹೈಡ್ರಾಮಾ ನಡೆದು ಕೋರ್ಟ್‌ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಹಿರಿಯಡ್ಕ ಸಬ್ ಜೈಲಿನಲ್ಲಿರುವ ಮಹೇಶ್ ತಿಮರೋಡಿ ಪ್ರತ್ಯೇಕ ಸೆಲ್‌ನಲ್ಲಿ ಚಡಪಡಿಸುತ್ತಾ ಎರಡು ದಿನ ಕಳೆದಿದ್ದಾರೆ. ತಿಮರೋಡಿ ಭೇಟಿಗೆ ಬಂದ ಬೆಂಬಲಿಗರಿಗೆ ಅವಕಾಶವೂ ಸಿಕ್ಕಿಲ್ಲ. ಬಿಪಿ ಏರುಪೇರು ಆದ ಕಾರಣ ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಲಾಗಿದೆ. ಇದನ್ನೂ ಓದಿ: ಭೀಮಾ ನದಿಗೆ 2.10 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತ
ಗುರುವಾರ ಬ್ರಹ್ಮಾವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸಂಚಾರಿ ಪೀಠವಾದ ಕಾರಣ ಇಂದು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ತಿಮರೋಡಿ ಬೇಲ್ ಸಂಬಂಧ ಕೋರ್ಟ್‌ನಲ್ಲಿ ಯಾವೆಲ್ಲಾ ಅಂಶಗಳ ಮೇಲೆ ವಾದ-ಪ್ರತಿವಾದ ನಡೆಯಲಿದೆ? ನ್ಯಾಯಾಲಯದ ಮುಂದೆ ಇರುವ ಆಯ್ಕೆಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ: Nelamangala | 16 ವರ್ಷದ ಬಾಲಕಿ ನೇಣಿಗೆ ಶರಣು
ನ್ಯಾಯಾಲಯದ ಮುಂದೆ ಹಲವು ಆಯ್ಕೆಗಳು:
-ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಬಹುದು.
-ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಿ ವಾದ-ಪ್ರತಿವಾದ.
-ವಾದ-ಪ್ರತಿವಾದ ನಡೆದು ತೀರ್ಪನ್ನು ಕಾಯ್ದಿರಿಸುವ ಅವಕಾಶ.
-ಮಹೇಶ್ ಶೆಟ್ಟಿ ತಿಮರೋಡಿಗೆ ಬೇಲ್ ಸಿಗಬಹುದು.
-ಬೇಲ್ ಸಿಕ್ಕ ನಂತರವೂ ಬಾಡಿ ವಾರೆಂಟ್ ಪಡೆದು ಮತ್ತೆ ಅರೆಸ್ಟ್ ಸಾಧ್ಯತೆ.
-ಬೆಳ್ತಂಗಡಿ ಕೇಸ್‌ನ ಆಧಾರದಲ್ಲಿ ಬಾಡಿ ವಾರೆಂಟ್ ಮೇಲೆ ಮತ್ತೆ ಬಂಧಿಸಬಹುದು.
-ಈ ಮಧ್ಯೆ ಆರೋಪಿ ಹೈಕೋರ್ಟ್ನಿಂದ ಸ್ಟೇ ತರಲು ಅವಕಾಶ ಇದೆ.
-ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ ಕೇಸ್‌ಗೆ ಸ್ಟೇ ಪಡೆಯಬಹುದು.
-ತಡೆಯಾಜ್ಞೆ ಸಿಕ್ಕರೆ ಆರೋಪಿ ತಿಮರೋಡಿ ಬಿಡುಗಡೆಯೂ ಆಗಬಹುದು.
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarody) ಒದ್ದು ಒಳಗೆ ಹಾಕಿದ್ದೀವಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.ಇದನ್ನೂಓದಿ: ಮಟ್ಟಣ್ಣನವರ್ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲು
ಮೊಹಂತಿ ಮತ್ತು ತಂಡ ಕ್ಲೀನ್ ಆಗಿ ಕೆಲಸ ಮಾಡುತ್ತಿದೆ. ಬಿಎಲ್ ಸಂತೋಷ್ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯವಾಗಿ ನಮಗೂ ಅವರಿಗೂ 100 ವಿರೋಧ ಇರಬಹುದು. ಏನೇ ಹೋರಾಟ ಮಾಡುವುದಿದ್ದರೂ ಸೈದ್ಧಾಂತಿಕವಾಗಿ ಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ತೇಜೋವಧೆ ಮಾಡಬಾರದು ಎಂದರು. ಇದನ್ನೂಓದಿ: ಧರ್ಮಸ್ಥಳ ಕೇಸ್- ಮೊದಲ ಬಾರಿಗೆ ಮೌನ ಮುರಿದ ಸಿಎಂ
ಈ ಹಿಂದೆ ಆ ವ್ಯಕ್ತಿ ನನ್ನ ವಿರುದ್ಧವೂ ಮಾತನಾಡಿದ್ದ. ಸಿಎಂ ವಿರುದ್ಧವೂ ಮಾತನಾಡಿದ್ದ. ಆರೋಪ ಮಾಡುವುದಾದರೆ ದಾಖಲೆ ಇಟ್ಟು ಮಾತನಾಡಬೇಕು. ಮಾತನಾಡಿದನ ಹತ್ತಿರ ಏನು ದಾಖಲೆ ಇದೆ? ವಿರೋಧಿಗಳ ವಿರುದ್ಧ ಮಾತನಾಡಿದ್ದಾನೆ ಅಂತ ನಾವು ಖುಷಿ ಪಡುವುದಲ್ಲ. ಮುಂದೆ ನಮ್ಮ ವಿರುದ್ಧವೂ ಆತ ಮಾತನಾಡಬಹುದು. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಇವುಗಳಿಗೆಲ್ಲ ನಾವು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉಡುಪಿ: ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarodi) ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಇಂದು ಉಡುಪಿಯ ಬ್ರಹ್ಮಾವರ ಪೊಲೀಸರು ಉಜಿರೆಗೆ ತೆರಳಿ ನಿವಾಸದಿಂದ ತಿಮರೋಡಿಯನ್ನು ಬಂದಿಸಿದ್ದರು.
ಮಧ್ಯಾಹ್ನ ಮೆಡಿಕಲ್ ಪರೀಕ್ಷೆ ನಡೆಸಿ ಬ್ರಹ್ಮಾವರ ತಾಲೂಕು ಕೋರ್ಟ್‌ಗೆ ಹಾಜರು ಪಡಿಸಿದರು. ಈ ಸಂದರ್ಭದಲ್ಲಿ ತಿಮರೋಡಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಜಾಮೀನು ನೀಡಲು ನಿರಾಕರಿಸಿದ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಮಹೇಶ್ ಶೆಟ್ಟಿಯ ಜಾಮೀನು ಅರ್ಜಿಯ ವಿಚಾರಣೆ ಅಗಸ್ಟ್ 23ಕ್ಕೆ ನಡೆಯಲಿದೆ.
ಕೋರ್ಟ್ ಆದೇಶದ ಹಿನ್ನೆಲೆ ಮಹೇಶ್ ತಿಮರೋಡಿ ಈಗ ಹಿರಿಯಡ್ಕ ಸಬ್ ಜೈಲು ಸೇರಿದ್ದಾರೆ.
ತಿಮರೋಡಿ ವಕೀಲ ವಿಜಯವಾಸು ಪೂಜಾರಿ ಪ್ರತಿಕ್ರಿಯಿಸಿ, ತಿಮರೋಡಿಯವರ ಹೇಳಿಕೆಯನ್ನ ಪೊಲೀಸರು ದಾಖಲು ಮಾಡಿದ್ದಾರೆ. ತಿಮರೋಡಿ ಅವರು ಬಿಪಿ ಸಮಸ್ಯೆಯಿಂದ ಬಳಲ್ತಿದ್ದಾರೆ. ಹೈ ಬಿಪಿಗೆ ವೈದ್ಯರು ಮಾತ್ರೆ ನೀಡಿದ್ದರು. ಹೈಕೋರ್ಟ್ ಸುಪ್ರೀಂ ಕೋರ್ಟ್ ಆದೇಶವನ್ನು ಕೋರ್ಟ್‌ನಲ್ಲಿ ಉಲ್ಲೇಖಿಸಲಾಯ್ತು. ಈ ಸೆಕ್ಷನ್‌ನಲ್ಲಿ ಏಳು ವರ್ಷದವರೆಗೆ ಮಾತ್ರ ಶಿಕ್ಷೆಯಿದೆ. ಜಾಮೀನು ರಹಿತಿ ಸೆಕ್ಷನ್‌ನಲ್ಲಿ ಕೇಸ್ ದಾಖಲಾಗಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ ಎಂದು ತಿಳಿಸಿದರು.
ಸೋಮವಾರ ಇನ್ನೊಂದು ಬಾರಿ ವಿಚಾರಣೆ ನಡೆಯಲಿದೆ. ಬಿ ಎಲ್ ಸಂತೋಷ್ ಅವರು ಎಲ್ಲಿಯೂ ಪ್ರಕರಣವನ್ನು ದಾಖಲು ಮಾಡಿಲ್ಲ. ಆ.16 ರಂದು ವಿಡಿಯೋ ವೈರಲ್ ಆಗಿದ್ದರೂ ಇಲ್ಲಿಯವರೆಗೆ ಈವರೆಗೂ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಶಾಂತಿ ಕದಡುವ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದರು.
ದೂರಿನಲ್ಲಿ ಎರಡು ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಎರಡು ಸೆಕ್ಷನ್ ನಲ್ಲಿ ಮೂರು ವರ್ಷ ಶಿಕ್ಷೆ ಮತ್ತು ದಂಡ ಇರುತ್ತದೆ. ಸೋಮವಾರ ನೂರಕ್ಕೆ ನೂರು ತಿಮರೋಡಿಗೆ ಜಾಮೀನು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
– ಸೌಜನ್ಯಳಿಗೆ ನ್ಯಾಯ ಸಿಗಬೇಕು, ಅತ್ಯಾಚಾರಿಗಳ ಬಂಧನವಾಗಬೇಕೆಂದು ಒತ್ತಾಯ
ಮಂಗಳೂರು: ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ ಹಾಗೂ ಇಡೀ ಬಿಜೆಪಿ ನಾಯಕರು ಹೊಣೆ ಎಂದು ಸಾಮಾಜಿಕ ಕಾರ್ಯಕರ್ಯ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಹೇಳಿದ್ದಾರೆ.
ಏನಿದು ಪ್ರಕರಣ?
ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ ಬಿಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್ ಕುಲಾಲ್ (Rajeev Kulal) ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರೀ ಹೈಡ್ರಾಮಾದ ಬಳಿಕ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 8 ವಾಹನಗಳಲ್ಲಿ ತಿಮರೋಡಿ ನಿವಾಸಕ್ಕೆ ತೆರಳಿದ್ದ ಸುಮಾರು 30 ಪೊಲೀಸರ ತಂಡ ಉಜಿರಿಯಲ್ಲಿರುವ ಅವರ ಮನೆಯಲ್ಲೇ ವಶಕ್ಕೆ ಪಡೆದಿದೆ. ಇದನ್ನೂ ಓದಿ: Exclusive ಸುಜಾತ ಭಟ್ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್
ತಿಮರೋಡಿ ನಿವಾಸದ ಬಳಿ ಹೈಡ್ರಾಮಾ
ಇದಕ್ಕೂ ಮುನ್ನ ಮನೆಯ ಮುಂಭಾಗ ದೊಡ್ಡಮಟ್ಟದಲ್ಲಿ ಜಮಾಯಿಸಿದ್ದ ತಿಮರೋಡಿ ಬೆಂಬಲಿಗರು ಬಂಧಿಸದಂತೆ ಆಗ್ರಹಿಸಿದರು. ಏನೇ ವಿಚಾರಣೆ ಇದ್ದರೂ ಇಲ್ಲೇ ನಡೆಸಿ ಎಂದು ಪಟ್ಟು ಹಿಡಿದರು. ಗಿರೀಶ್ ಮಟ್ಟಣ್ಣನವರ್ (Girish Mattannavar) ಕೂಡ ಕಾರಣ ಕೇಳಿ ಪೊಲೀಸರೊಂದಿಗೆ ವಾಗ್ದಾದ ನಡೆಸಿದರು.
ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ ಪೊಲೀಸರು ತಿಮರೋಡಿಯನ್ನ ವಶಕ್ಕೆ ಪಡೆದು ಖಾಸಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಆಂತರಿಕ ಕಚ್ಚಾಟ ಮತ್ತಷ್ಟು ತೀವ್ರಗೊಂಡಿದೆ. ಪರಸ್ಪರ ವೈಯಕ್ತಿಕ ನಿಂದನೆ ಹೆಚ್ಚಾಗಿದೆ. ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಸಮೀಪ ಪರಿಸ್ಥಿತಿ ಕೈ ಮೀರಿದ್ದು, ವಸ್ತುಸ್ಥಿತಿ ಪಡೆಯಲು ಬಿಎಲ್ ಸಂತೋಷ್ (B. L. Santhosh) ರಾಜ್ಯಕ್ಕೆ ಬಂದಿದ್ದಾರೆ. ಈ ಮಧ್ಯೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸುನಿಲ್ ಕುಮಾರ್ (Sunil Kumar) ವಿಮುಕ್ತಿ ಕೇಳೋ ಮೂಲಕ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆ ಪಕ್ಷದೊಳಗಿನ ಬಣಗಳ ಮಧ್ಯೆ ಬಲ ಪ್ರದರ್ಶನಕ್ಕೆ ವೇದಿಕೆ ಆಗುವ ಎಲ್ಲಾ ಲಕ್ಷಣಗಳೂ ಈಗಿಂದಲೇ ಕಾಣಿಸುತ್ತಿದೆ. ಹೌದು, ಬಿಜೆಪಿ ಮನೆ ಬಿರುಕು ಮುಚ್ಚಲಾಗದಷ್ಟು ಹೆಚ್ಚಾಗಿದ್ದು, ಆಂತರಿಕ ಕಚ್ಚಾಟ ಉಲ್ಬಣಗೊಂಡಿದೆ. ಯತ್ನಾಳ್ ತಂಡ ಹಾಗೂ ವಿಜಯೇಂದ್ರ ಮಧ್ಯೆ ವಾಕ್ಸಮರ ತೀವ್ರಗೊಂಡಿದ್ದು, ವೈಯಕ್ತಿಕ ಹಂತಕ್ಕೆ ಹೋಗಿದೆ. ಇದನ್ನೂ ಓದಿ: ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಸೋಂಕು – ಆತಂಕದಲ್ಲಿ ಕಾಫಿನಾಡ ಜನ
ರಮೇಶ್ ಜಾರಕಿಹೊಳಿಯವರು ಇತ್ತೀಚೆಗಷ್ಟೇ ಯಡಿಯೂರಪ್ಪ ಪ್ರವಾಸದ ಬಗ್ಗೆ ಟೀಕೆ ಮಾಡಿದ್ದರು. ಇದರಿಂದ ಕೆರಳಿದ ವಿಜಯೇಂದ್ರ ನಾಲಿಗೆ ಬಿಗಿ ಹಿಡಿದು ಮಾತನಾಡುವಂತೆ ಎಚ್ಚರಿಕೆ ಕೊಟ್ಟಿದ್ದರು. ಅಲ್ಲದೇ ತಾವೇ ಮುಂದಿನ ಅಧ್ಯಕ್ಷ ಆಗೋದು ಖಚಿತ ಎಂದು ಭಿನ್ನರನ್ನು ಕೆಣಕಿದ್ದರು. ಇದರಿಂದ ರೆಬೆಲ್ ಪಡೆ ಉಗ್ರರೂಪ ತಾಳಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವೈಯಕ್ತಿಕ ಹಂತಕ್ಕಿಳಿದು ವಾಕ್ಸಮರ ನಡೆಸುತ್ತಿದೆ. ವಿಜಯೇಂದ್ರ ಬಚ್ಚಾ, ರಾಜ್ಯಾಧ್ಯಕ್ಷ ಆಗಲು ಯೋಗ್ಯರಲ್ಲ, ಕಲೆಕ್ಷನ್ ಮಾಸ್ಟರ್, ಯಡಿಯೂರಪ್ಪ ಜೈಲಿಗೆ ಹೋಗಲು ವಿಜಯೇಂದ್ರ ಕಾರಣ ಎಂದೆಲ್ಲಾ ಯತ್ನಾಳ್-ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಕೂಡ ಹಲವರಿಗೆ ಮೋಸ ಮಾಡಿದ್ದು, ಈಗ ಮೊಮ್ಮಕ್ಕಳ ಜೊತೆ ಆಟ ಆಡಿಕೊಂಡಿರಲಿ, ಪುತ್ರ ವ್ಯಾಮೋಹ ಬಿಡಲಿ ಎಂದು ಯತ್ನಾಳ್, ಟೀಕಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ, ತಮ್ಮ ಕಡೆಯಿಂದಲೂ ಒಬ್ಬರ ಸ್ಪರ್ಧೆ ಖಚಿತ ಎಂದು ಭಿನ್ನರು ಸವಾಲೆಸೆದಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ
ಇತ್ತ ವಿಜಯೇಂದ್ರ ಸಹ ರೆಬೆಲ್ ತಂಡವನ್ನ ಕೆಣಕಿದ್ದಾರೆ. ವರಿಷ್ಠರು ನನ್ನನ್ನೇ ಮತ್ತೊಂದು ಅವಧಿಗೆ ಮುಂದುವರೆಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಆದರೆ ಬಿಎಸ್‌ವೈ ಪ್ರವಾಸದ ಬಗ್ಗೆ ಮಾತಾಡಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ ವಿಜಯೇಂದ್ರ ರಾಯಚೂರಿನಲ್ಲಿ ಇಂದು ಮಾತನಾಡಿ, ಯತ್ನಾಳ್‌ಗೆ ಒಳ್ಳೆಯದಾಗಲಿ, ಅವರಿಗೆಲ್ಲ ಭಗವಂತ ಒಳ್ಳೆಯದು ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಜಾತಿನಿಂದನೆ ಪದ ಬಳಕೆ – ರಟಕಲ್ ಪಿಎಸ್‌ಐ ಸಸ್ಪೆಂಡ್
ಪಕ್ಷದಲ್ಲಿ ಇಷ್ಟೆಲ್ಲಾ ಜಟಾಪಟಿ ನಡೀತಿರುವ ನಡುವೆ ನಾಯಕರಿಗೆ ಶಾಸಕ ಸುನಿಲ್ ಕುಮಾರ್ ಶಾಕ್ ಕೊಟ್ಟಿದ್ದಾರೆ. ತಮ್ಮನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಿಮುಕ್ತಿಗೊಳಿಸಲು ಸುನಿಲ್ ಕುಮಾರ್ ವಿಜಯೇಂದ್ರ ಹಾಗೂ ಬಿ ಎಲ್ ಸಂತೋಷ್ ಬಳಿ ಕೇಳಿಕೊಂಡಿದ್ದು, ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಸುನಿಲ್ ಕುಮಾರ್ ರಾಜೀನಾಮೆ ಕೊಡಲು ಮುಂದಾಗಿದ್ದಕ್ಕೆ ವಿಜಯೇಂದ್ರ ಕಾರಣ ಎಂದು ಯತ್ನಾಳ್ ಆರೋಪಿಸಿದ್ದಾರೆ. ಇದನ್ನೂ ಓದಿ: ವಿಶೇಷ ಕಾರ್ಯಾಚರಣೆ – ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ ಗದಗ ಎಸ್‌ಪಿ
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ತೀವ್ರಗೊಂಡ ಬೆನ್ನಲ್ಲೇ ಇಂದು ಬಿಜೆಪಿ ಕಚೇರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಭೇಟಿ ಕೊಟ್ಟಿದ್ದರು. ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಮುನ್ನ ಸಂತೋಷ್ ವಸ್ತುಸ್ಥಿತಿ ರಿಪೋರ್ಟ್ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಬಿಜೆಪಿ ಮನೆ ಕಂಟ್ರೋಲ್ ತಪ್ಪಿರೋದಂತೂ ಸ್ಪಷ್ಟ. ಇದನ್ನೂ ಓದಿ: Bihar | ಗಂಗಾ ನದಿಯಲ್ಲಿ ದೋಣಿ ಮಗುಚಿ ಮೂವರು ಸಾವು – ನಾಲ್ವರು ನಾಪತ್ತೆ
ಬೆಂಗಳೂರು: ಬಿಜೆಪಿಯಲ್ಲೇ ಬಿ.ಎಲ್ ಸಂತೋಷ್ (BL Santosh) ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ಸರ್ಕಾರವೇ ಇರಲಿ ಅಂತ ಬಯಸುತ್ತಿದ್ದಾರೆ. ಅವರ ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಟಾಂಗ್ ನೀಡಿದ್ದಾರೆ.
40 ಜನ ಬಿಜೆಪಿ (BJP) ಸೇರ್ತಾರೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಾರಕಿಹೊಳಿ, ಈ ಸನ್ನಿವೇಶಕ್ಕೆ ಇಂತಹ ಮಾತು ಸರಿಯಲ್ಲ. ಬಿ.ಎಲ್ ಸಂತೋಷ್ ಅವರು ರಾಷ್ಟ್ರಮಟ್ಟದ ರಾಜಕಾರಣ ಮಾಡುವವರು. 40 ಜನರನ್ನ ತೆಗೆದುಕೊಂಡು ಏನು ಮಾಡ್ತಾರೆ ಅಂತಾ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: G20ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ
ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್‌ಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಆ ಭಾಗದಲ್ಲಿ ಸದ್ಯಕ್ಕೆ ಯಾರೂ ಇಲ್ಲ. ಇದ್ದರೆ ನೇರವಾಗಿ ಸಿಎಂ, ಡಿಸಿಎಂ ಭೇಟಿ ಮಾಡ್ತಾರೆ. ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವರು ಬರೋದಕ್ಕೆ ರೆಡಿ ಇದ್ದಾರೆ. ಅನೇಕರು ಭೇಟಿಯಾಗ್ತಾ ಇದ್ದಾರೆ. ಓಪನ್ ಆಗಿಯೇ ಭೇಟಿ ಆಗುತ್ತಿದೆ. ಕೆಲವೊಂದು ಪರೋಕ್ಷವಾಗಿ ಸಂಪರ್ಕ ಆಗ್ತಾ ಇದೆ. ಎಲ್ಲದಕ್ಕೂ ಸಮಯ ಸಂದರ್ಭ ಬೇಕಲ್ಲವೇ? ಯಾರೇ ಬಂದರೂ ಸ್ವಾಗತ ಮಾಡ್ತೀವಿ ಅಂತಾ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ: ಬಿಎಲ್ ಸಂತೋಷ್ (BL Santosh) ಅವರು ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ. ಅವರ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಉಳಿಸಿಕೊಂಡು, ಪಕ್ಷದ ಅಸ್ತಿತ್ವ ಉಳಿಸಿಕೊಂಡರೆ ಸಾಕಾಗಿದೆ. ಒಂದು ವೇಳೆ ಅವರ ಸಂಪರ್ಕದಲ್ಲಿ ಶಾಸಕರುಗಳು ಇದ್ದರೆ ನಾಳೆಯಿಂದಲೇ ಆಪರೇಶನ್ ಸ್ಟಾರ್ಟ್ ಮಾಡಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಎಲ್ ಸಂತೋಷ್ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಜೆಪಿ ನಾಯಕರು ಬಿಟ್ಟು ಬಿಡಲಿ. ಬರೀ ಆಪರೇಶನ್ ಮಾಡಿ ಸರ್ಕಾರ ರಚನೆ ಮಾಡೋದಾ? ಇಡೀ ರಾಷ್ಟ್ರದಲ್ಲಿ ಬೆಳಗ್ಗೆ ಇಂದ ಸಾಯಂಕಾಲವರೆಗೂ ಆಪರೇಶನ್ ಮಾಡೋದು, ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ನಿಮ್ಮ ಕೆಲಸ. ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಅಧೋಗತಿಗೆ ಹೋಗ್ತಿದೆ. ಬಿಜೆಪಿ ಮುಳುಗುತ್ತಿರೋ ಹಡಗು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ
ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ತಿದೆ. ಇದಕ್ಕೆ ಕಾರಣ ಬಿಜೆಪಿ ಕೆಲವೇ ಜನರ ಕೈಯಲ್ಲಿದೆ. ಅದರಿಂದ ಹೊರಬಂದರೆ ಮಾತ್ರ ಭವಿಷ್ಯ. ಅದರಿಂದ ಹೊರಬರೋಕೆ ಆಗತ್ತೋ ಇಲ್ವೋ, ಆದರೆ ನಾನೇ ಹೊರಗೆ ಬಂದು ಬಿಟ್ಟಿದ್ದೆನೆ. ರಾಜ್ಯ ಬಿಜೆಪಿ ನಾಯಕರ ಪರಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ. ದೆಹಲಿಯಲ್ಲಿ ಕೂತ ನಾಯಕರು ಈ ಬಗ್ಗೆ ಯೋಚನೆ ಮಾಡಬೇಕು. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಆದರೆ ಕಾಂಗ್ರೆಸ್‌ಗೆ 136 ಸೀಟ್ ಬಂದಿದೆ ಎಂದರು. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‍ನ್ಯೂಸ್- ಇಂದಿನಿಂದ ಹೆಚ್ಚುವರಿ ಸರ್ವಿಸ್
ಬೆಂಗಳೂರು: ವಿಧಾನಸಭೆ ಚುನಾವಣೆ ನಂತರ ಸೋಲಿನ ಹತಾಶೆಯಲ್ಲಿರುವ ರಾಜ್ಯ ಬಿಜೆಪಿಗೆ ಬೂಸ್ಟ್ ಕೊಡಲು ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನ ಬಿಜೆಪಿ (BJP) ಕಚೇರಿಯಲ್ಲಿಂದು ಮಹತ್ವದ ಸಭೆ ನಡೆಸಿ ನಾಯಕರಲ್ಲಿ ಜೋಷ್ ತುಂಬೋ ಕೆಲಸ ಮಾಡಿದ್ದಾರೆ. ಲೋಕಸಭೆ ಚುನಾವಣಾ ತಯಾರಿಗೆ ಟಾಸ್ಕ್ ಕೊಟ್ಟಿದ್ದಾರೆ. ಇದೇ ವೇಳೆ ಆಪರೇಷನ್ ಹಸ್ತಕ್ಕೆ ಠಕ್ಕರ್ ಕೊಡಲು ರಿವರ್ಸ್ ಆಪರೇಷನ್‌ನ ಸುಳಿವನ್ನೂ ಸಭೆಯಲ್ಲಿ ಬಿಎಲ್ ಸಂತೋಷ್ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಮುಗಿದು ಮೂರೂವರೆ ತಿಂಗಳಾದರೂ ರಾಜ್ಯ ಬಿಜೆಪಿಯಲ್ಲಿ ಶೂನ್ಯ ಮನಸ್ಥಿತಿ. ಯಾವ ನಾಯಕರಲ್ಲೂ ಜೋಷ್ ಉಳಿದಿಲ್ಲ. ಪರಿಣಾಮ ಪಕ್ಷ ಸಂಘಟನೆಯಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ಈ ಪರಿಣಾಮ ಅರಿತ ಹೈಕಮಾಂಡ್ ಈಗ ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಮೂಲಕ ರಾಜ್ಯ ಬಿಜೆಪಿಗೆ ಬೂಸ್ಟ್ ಕೊಡಿಸುವ ಕಾರ್ಯಕ್ಕೆ ಕೈ ಹಾಕಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ಬಿಎಲ್ ಸಂತೋಷ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಹಾಲಿ/ಮಾಜಿ ಸಂಸದರು, ಶಾಸಕರು, ಜಿಲ್ಲಾ ಸಂಘಟನಾ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಬಿಜೆಪಿಯ ಪರಿಸ್ಥಿತಿ, ಪಕ್ಷ ಸಂಘಟನೆ, ಲೋಕಸಭೆ ಚುನಾವಣಾ ತಯಾರಿ, ಗ್ಯಾರಂಟಿಗಳ ಜಾರಿ, ಸರ್ಕಾರದ ನಕಾರಾತ್ಮಕ ನಡೆ, ನಿರ್ಧಾರಗಳು, ಆಪರೇಷನ್ ಹಸ್ತ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ನಾಯಕರಿಗೆ ಬಿಎಲ್ ಸಂತೋಷ್ ಪಕ್ಷ ಸಂಘಟನೆ ಕುರಿತು ಟಾಸ್ಕ್‌ಗಳನ್ನು ನೀಡಿದರು.
ಮುಖ್ಯವಾಗಿ ಚುನಾವಣಾ ಸೋಲಿಗೆ ಹೆದರದಂತೆ, ನಿರಾಶರಾಗದಂತೆ ಸಂತೋಷ್ ಧೈರ್ಯ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ. ಆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನಾಗುತ್ತೆ ಅಂತಾ ನೋಡಿ. ನಮ್ಮಲ್ಲಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆಯೇ ಸಂಪರ್ಕದಲ್ಲಿ 40-45 ಜನ ಇದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆಯೇ ಒಂದು ದಿನದ ಕೆಲಸ. ಆದರೆ ನಮಗೆ ಈಗ ಆಪರೇಷನ್ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ. ಮುಂದೆ ನೋಡೋಣ ಅಂತ ಸಂತೋಷ್ ರಿವರ್ಸ್ ಆಪರೇಷನ್ ಸುಳಿವು ಕೊಟ್ಟಿದ್ದಾರೆ. ಪಕ್ಷ ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ ಅಂತಲೂ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ – ಸಿಎಂರಿಂದ ಸಿಗುತ್ತಾ ಪರಿಹಾರ?
ಇನ್ನು ರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆ ಸಭೆಯಲ್ಲಿ ಮಾತಾಡಿದ ಸಂತೋಷ್, ನೇಮಕ ಆಗಿದೆ ನಿಜ. ಆದರೆ ಅದರ ಬಗ್ಗೆ ಎಲ್ಲ ನೀವು ತಲೆಕೆಡೆಸಿಕೊಳ್ಳಬೇಡಿ. ಅದರ ಬಗ್ಗೆ ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದ್ದಾರೆ. ಆದರೆ ನೀವಂತೂ ಒಟ್ಟಾಗಿ ಪಕ್ಷದ ಕೆಲಸ ಮಾಡಿ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ನಾಯಕರಿಗೆ ಸಂತೋಷ್ ಕಿವಿಮಾತು ಹೇಳಿದ್ದಾರೆ.
ಆಪರೇಷನ್ ಹಸ್ತದ ಆತಂಕ ಇರೋ ಹಿನ್ನೆಲೆಯಲ್ಲಿ ವಲಸಿಗರ ವಿಶ್ವಾಸ ಗಳಿಸುವ ಕಸರತ್ತಿಗೂ ಬಿಜೆಪಿ ಮುಂದಾಗಿದೆ. ಈ ಸಭೆಯಲ್ಲಿ ಮಾತಾಡಿರುವ ಬಿಎಲ್ ಸಂತೋಷ್, ಬಾಂಬೆ ಬಾಯ್ಸ್, ವಲಸಿಗರು ಅಂತಾ ನಮ್ಮ ಜೊತೆ ಬಂದವರನ್ನು ನಾವೇ ಹೇಳುವುದು ಬೇಡ ಎಂದು ಎಲ್ಲರಿಗೂ ತಾಕೀತು ಮಾಡಿದ್ದಾರೆ. ಅವರು ನಮ್ಮ ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಅಂತಾ ನಾವೇ ಹೇಳುವುದು ಸರಿಯಲ್ಲ ಎಂದು ವಲಸಿಗರ ಪರ ಸಭೆಯಲ್ಲಿ ಸಂತೋಷ್ ಬ್ಯಾಟಿಂಗ್ ಮಾಡಿದ್ದಾರೆ.
ಈ ಸಭೆಗೆ ಶಾಸಕ ಎಸ್‌ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಮಾಜಿ ಸಚಿವರಾದ ವಿ ಸೋಮಣ್ಣ, ನಾರಾಯಣ ಗೌಡ, ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ರೇಣುಕಾಚಾರ್ಯ ಮತ್ತಿತರರು ಗೈರಾಗುವ ಮೂಲಕ ಸೆಡ್ಡು ಹೊಡೆದಿದ್ದಾರೆ. ಸಭೆಗೆ ರಮೇಶ್ ಜಾರಕಿಹೊಳಿ ಅಂಡ್ ಟೀಂ, ಮಾಜಿ ಸಚಿವ ಡಾ.ಕೆ ಸುಧಾಕರ್, ಬಿಸಿ ಪಾಟೀಲ್ ಮತ್ತಿತರ ವಲಸಿಗರು ಭಾಗವಹಿಸಿದರು. ಇದನ್ನೂ ಓದಿ: ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು