– ಬಿಹಾರದಲ್ಲಿ ಮತದಾರ ಅಧಿಕಾರ ಯಾತ್ರೆ ವೇಳೆ ಘಟನೆ
– ಮೋದಿ ಹೀಗೆ ಸಾರ್ವಜನಿಕವಾಗಿ ಓಡಾಡಬಹುದೇ ಅಂತ ಪ್ರಶ್ನೆ
ಪಾಟ್ನಾ: ಬಿಹಾರದಲ್ಲಿ ವೋಟ್ ಅಧಿಕಾರ ಯಾತ್ರೆ ವೇಳೆ ತನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆವೈಎಂ ಕಾರ್ಯಕರ್ತರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಿಹಿ ತಿಂಡಿ ಕೊಟ್ಟ ಘಟನೆ ನಡೆದಿದೆ.
#WATCH | Arrah, Bihar: Lok Sabha LoP and Congress MP Rahul Gandhi offered candies to BJYM workers who showed him black flags and confronted him over the alleged derogatory remarks made against the Prime Minister and his late mother at a Mahagathbandhan event in Darbhanga. pic.twitter.com/dkFXz8WJeB
— ANI (@ANI) August 30, 2025
ಬಿಹಾರದ ದರ್ಭಾಂಗದಲ್ಲಿ (Darbhanga) ರಾಹುಲ್ ಗಾಂಧಿ ಅವರ ‘ಮತದಾರ ಅಧಿಕಾರ ಯಾತ್ರೆ’ ವೇಳೆ ಕಾಂಗ್ರೆಸ್ ಧ್ವಜ ಹಿಡಿದ ವ್ಯಕ್ತಿಯೋರ್ವ ಪ್ರಧಾನಿ ಮೋದಿ (PM Modi) ಮತ್ತು ಅವರ ದಿವಂಗತ ತಾಯಿ ಹೀರಾಬೆನ್ ಮೋದಿ ಅವರ ಬಗ್ಗೆ ಅವಾಚ್ಯ ಪದ ಬಳಸಿ ನಿಂದಿಸಿದ ಘಟನೆ ನಡೆದಿತ್ತು. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ಕೂಡ ನಡೆಸಿತ್ತು. ಇಂದು ಬಿಜೆವೈಎಂ ಕಾರ್ಯಕರ್ತರು ಸಹ ರಾಹುಲ್ ಗಾಂಧಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85%ಗೆ ಏರಿಕೆ: ತೇಜಸ್ವಿ ಯಾದವ್
ರಾಹುಲ್ ಗಾಂಧಿ ಇದ್ದ ವಾಹನದ ಕಡೆಗೆ ಬಂದು ಕಪ್ಪು ಬಾವುಟ ಪ್ರದರ್ಶಿಸಿದರು. ಆದರೂ ಕೋಪಗೊಳ್ಳದ ರಾಹುಲ್ ಬಿಜೆವೈಎಂ ಕಾರ್ಯಕರ್ತನಿಗೆ ಸಿಹಿ ತಿಂಡಿ ಕೊಟ್ಟು ಕಳಿಸಿದರು. ಈ ಕುರಿತ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪಾಕ್ ಹುಟ್ಟಡಗಿಸಲು ಐಎಎಫ್ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

ವಿಡಿಯೋನಲ್ಲಿ ಏನಿದೆ?
ಮತದಾರ ಅಧಿಕಾರ ಯಾತ್ರೆ ಹೊರಡುತ್ತಿದ್ದ ಹಾದಿಯಲ್ಲಿ ಪ್ರತಿಭಟನೆ ಗಮನಿಸಿದ ರಾಹುಲ್ ಗಾಂಧಿ ವಾಹನ ನಿಲ್ಲಿಸುವಂತೆ ಡ್ರೈವರ್‌ಗೆ ಹೇಳಿದರು. ಬಳಿಕ ಬಿಜೆವೈಎಂ ಕಾರ್ಯಕರ್ತರಲ್ಲಿ ಒಬ್ಬರನ್ನ ಕರೆದುಕೊಂಡುಬರುವಂತೆ ಕಾಂಗ್ರೆಸ್ ನಾಯಕರಿಗೆ ಹೇಳಿದ್ರು. ಆದ್ರೆ ಪ್ರತಿಭಟನಾಕಾರ ರಾಹುಲ್ ಕಾರಿನ ಬಳಿ ಹೋಗಲು ಕೊಂಚ ಹೆದರಿದರು. ಬಳಿಕ ರಾಹುಲ್ ಕಾರಿನ ಬಳಿ ಬಂದಾಗ ಆತನಿಗೆ ಸಿಹಿ ತಿಂಡಿ ಕೊಟ್ಟು ಕಳಿಸಿದರು.
ಇದೇ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ʻನಿಮ್ಮ ಮೋದಿ ಈ ರೀತಿ ಸಾರ್ವಜನಿಕವಾಗಿ ಓಡಾಡಬಹುದೇ?ʼ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ‘ಮಾನವ ಜಿಪಿಎಸ್’ ಎಂದೇ ಕುಖ್ಯಾತಿ ಪಡೆದಿದ್ದ ಬಾಗು ಖಾನ್ ಹತ್ಯೆ

