Tag: BJP Ticket

  • ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

    ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

    ನವದೆಹಲಿ: ಲೋಕಸಭಾ ಚುನಾವಣೆ (Lok Sabha Polls) ಹಿನ್ನೆಲೆ 17 ರಾಜ್ಯಗಳ 111 ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಯಕರು, ಕೋರ್ಟ್‌ ಮಾಜಿ ನ್ಯಾಯಾಧೀಶರು, ಸಿನಿಮಾ ರಂಗದ ತಾರೆಯರು ಹಾಗೂ ಖ್ಯಾತ ಉದ್ಯಮಿಗಳಿಗೂ ಪಕ್ಷ ಟಿಕೆಟ್‌ ನೀಡಿದೆ.

    ಈ ಪೈಕಿ ಗೋವಾದಿಂದ ಡೆಂಪೊ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಪಲ್ಲವಿ ಡೆಂಪೊ (Pallavi Dempo) ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಗೋವಾ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುತ್ತಿದ್ದಾರೆ. ಇದನ್ನೂ ಓದಿ: ನಟಿ ಕಂಗನಾ ರಣಾವತ್‌ಗೆ ಬಿಜೆಪಿ ಟಿಕೆಟ್‌; 111 ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ ಯಾರ‍್ಯಾರು ಕಣಕ್ಕೆ?

    ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊ ಯಾರು?
    ಗೋವಾದ ವಾಣಿಜ್ಯೋದ್ಯಮಿ ಹಾಗೂ ಶಿಕ್ಷಣತಜ್ಞೆಯೂ ಆಗಿರುವ ಪಲ್ಲವಿ ಡೆಂಪೊ ಅವರು ಪುಣೆಯ ಎಂಐಟಿಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ 49 ವರ್ಷ ವಯಸ್ಸಿನ ಪಲ್ಲವಿ ಅವರು, ಡೆಂಪೊ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ ಮಾಧ್ಯಮ ಮತ್ತು ರಿಯಲ್ ಎಸ್ಟೇಟ್ ವಿಭಾಗವನ್ನು ನಿರ್ವಹಣೆ ಮಾಡುತ್ತಿದ್ದಾರೆ.

    ಇಂಡೋ-ಜರ್ಮನ್ ಎಜುಕೇಶನಲ್ ಅಂಡ್ ಕಲ್ಚರಲ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ, ಇದು ಜರ್ಮನಿ ಮತ್ತು ಗೋವಾ ನಡುವಿನ ಸಾಂಸ್ಕೃತಿಕ ಬಾಂಧವ್ಯವವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿದೆ. ಅಲ್ಲದೇ ಪಲ್ಲವಿ ಅವರು ಪ್ರಾರಂಭಿಸಿದ ಫ್ಯಾಷನ್ ಮತ್ತು ಜವಳಿ ವಸ್ತುಸಂಗ್ರಹಾಲಯವಾದ ಮೋಡಾ ಗೋವಾ ಫೌಂಡೇಶನ್‌ನ ಟ್ರಸ್ಟಿಯಾಗಿದ್ದಾರೆ. ಜೊತೆಗೆ 2012 ರಿಂದ 2016ರ ವರೆಗೆ ಗೋವಾ ವಿಶ್ವವಿದ್ಯಾಲಯದ ಸಂಯೋಜಿತ ಶೈಕ್ಷಣಿಕ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗೋವಾ ಕ್ಯಾನ್ಸರ್ ಸೊಸೈಟಿಯ ವ್ಯವಸ್ಥಾಪಕ ಸಮಿತಿಯ ಭಾಗವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಕೈಗಾರಿಕೋದ್ಯಮಿ, ಕಾಂಗ್ರೆಸ್‌ ಮಾಜಿ ಸಂಸದ ನವೀನ್‌ ಜಿಂದಾಲ್‌ ಬಿಜೆಪಿಗೆ ಸೇರ್ಪಡೆ

    ಪಲ್ಲವಿ ಡೆಂಪೊ ಅವರ ಪತಿ ಶ್ರೀನಿವಾಸ್ ಡೆಂಪೊ ಗೋವಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಮುಖ್ಯಸ್ಥರಾಗಿದ್ದಾರೆ. ಇದರೊಂದಿಗೆ ಡೆಂಪೊ ಕುಟುಂಬವು ಬಡ ಹೆಣ್ಣುಮಕ್ಕಳಿಗೆ ಗ್ರಾಮೀಣ ಶಾಲೆ ದತ್ತು ಕಾರ್ಯಕ್ರಮದಡಿ ಸರ್ಕಾರಿ ಪ್ರೌಢ ಶಾಲೆಗಳನ್ನು ದತ್ತು ಪಡೆದಿದೆ. ಈ ಮೂಲಕ ವೃತ್ತಿಪರ ತರಬೇತಿ ನೀಡುವ ಕೆಲಸ ಮಾಡುತ್ತಿದೆ.

    ದಕ್ಷಿಣ ಗೋವಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಫ್ರಾನ್ಸಿಸ್ಕೊ ಸರ್ದಿನ್ಹಾ ಪ್ರತಿನಿಧಿಸುತ್ತಿದ್ದಾರೆ. 1962 ರಿಂದ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಕೇವಲ ಎರಡು ಬಾರಿ (1999 ಮತ್ತು 2014 ರಲ್ಲಿ) ಗೆದ್ದಿದೆ. ಈ ಬಾರಿ ಪಲ್ಲವಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದನ್ನೂ ಓದಿ: ಪಾಕ್‌ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನ ಆಗುತ್ತೆ: ರಾಜನಾಥ್‌ ಸಿಂಗ್‌ ಭರವಸೆ

  • ಸೋಮವಾರವೇ ಬಿಜೆಪಿಯ 2ನೇ ಪಟ್ಟಿ ರಿಲೀಸ್? – ರಾಜ್ಯದ 15 ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ

    ಸೋಮವಾರವೇ ಬಿಜೆಪಿಯ 2ನೇ ಪಟ್ಟಿ ರಿಲೀಸ್? – ರಾಜ್ಯದ 15 ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ

    ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Elections) ಸಂಬಂಧ ಬಿಜೆಪಿ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸೋಮವಾರ (ಮಾ.11) ಸಂಜೆ ಪ್ರಕಟಿಸುವ ಸಾಧ್ಯತೆಯಿದೆ. ಈ ಸಂಬಂಧ ದೆಹಲಿಯಲ್ಲಿ ಬಿಜೆಪಿ ಸಿಇಸಿ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ ಸೇರಿ ಕೇಂದ್ರ ಚುನಾವಣಾ ಸಮಿತಿ ನಾಯಕರು ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸೋಮವಾರ ಸಭೆಯ ಬಳಿಕ 2ನೇ ಪಟ್ಟಿ ಬಿಡುಗಡೆಯಾಗಲಿದ್ದು, ಇದರಲ್ಲಿ ರಾಜ್ಯದ 15 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಯಾರು ಸೇಫ್ ಝೋನ್? ಯಾರು ಡೇಂಜರ್ ಝೋನ್? ಯಾರದ್ದು ವೇಯ್ಟಿಂಗ್ ಲಿಸ್ಟ್? ಯಾವ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿ? ಅನ್ನೋದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ: ಹೆಚ್‍ಡಿಕೆ ಗರಂ

    ಜೋರಾಯ್ತು ಆಂತರಿಕ ಕಲಹ:
    ಟಿಕೆಟ್ ಘೋಷಣೆಯ ಹೊತ್ತಿನಲ್ಲೇ ಬಿಜೆಪಿ ಆಕಾಂಕ್ಷಿಗಳ ಮಧ್ಯೆ ಆಂತರಿಕ ಕಚ್ಚಾಟ ಜೋರಾಗ್ತಿದೆ. ಅಲ್ಲದೇ ಬಿಜೆಪಿ ಕಾರ್ಯಕರ್ತರಿಂದ ಪ್ರಮುಖ ನಾಯಕರ ವಿರುದ್ಧ ಅಪಸ್ವರದ ಘೋಷಣೆಗಳು ಕೇಳಿಬರುತ್ತಿವೆ. ಅದರಲ್ಲೂ, ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ-ಸಿಟಿ ರವಿ (CT Ravi) ಮಧ್ಯೆ ಜಟಾಪಟಿ ತಾರಕಕ್ಕೇರಿದೆ. ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ `ಗೋಬ್ಯಾಕ್ ಶೋಭಕ್ಕ’ ಕ್ಯಾಂಪೇನ್ ಮುಂದುವರಿದಿದೆ. ಈ ಬಾರಿ ಚಿಕ್ಕಮಗಳೂರಿನವರಿಗೇ ಯಾರಿಗಾದರೂ ಟಿಕೆಟ್ ಕೊಡಿ ಅಂತ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಇನ್ನೂ, ಸಿಟಿ ರವಿ ಪ್ರತಿಕ್ರಿಯಿಸಿ, ನನ್ನ ಗ್ರಹಚಾರ ಸರಿ ಇರಲಿಲ್ಲ, ನನ್ನ ಅತಿಯಾದ ವಿಶ್ವಾಸದಿಂದಲೇ ವಿಧಾನಸಭೆಯಲ್ಲಿ ಸೋತಿದ್ದೇನೆ. ಮತ್ತೊಬ್ಬರ ಕಡೆ ಬೊಟ್ಟು ಮಾಡಲ್ಲ, ಅವರವರ ಕರ್ಮ ಅವರವರು ಅನುಭವಿಸಬೇಕು. ಯಾರಾದ್ರೂ ಪಕ್ಷ ದ್ರೋಹ ಮಾಡಿದ್ರೆ ಕರ್ಮ ಬೆಂಬಿಡದೆ ಕಾಡುತ್ತೆ. ಯಾರೇ ಅಭ್ಯರ್ಥಿಯಾದರೂ ಮೋದಿ ನಮ್ಮ ಅಭ್ಯರ್ಥಿ ಅಂತ ಕೆಲಸ ಮಾಡಬೇಕು ಅಂತ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾನ ಸನ್ನಿಧಾನಕ್ಕೆ ತೆರಳಿ ಕೊನೆಯುಸಿರೆಳೆದ ಆರ್‌ಎಸ್‌ಎಸ್‌ ಕಾರ್ಯಕರ್ತ

    ಮೈಸೂರಿನಲ್ಲಿ ಪ್ರತಾಪ್ ಸಿಂಹ ಪರ ಬ್ಯಾಟಿಂಗ್‌:
    ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹಗೆ (Pratap Simha) ಈ ಬಾರಿ ಟಿಕೆಟ್ ಕೈತಪ್ಪುತ್ತೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಸಂಸದರ ಪರವಾಗಿ ಹೋರಾಟದ ಎಚ್ಚರಿಕೆ ಮೊಳಗಿದೆ. ಪ್ರತಾಪ್ ಸಿಂಹಗೆ ಟಿಕೆಟ್ ಕೊಡದಿದ್ದರೆ `ನೋಟ’ಗೆ ವೋಟ್ ಹಾಕೋದಾಗಿ ಕೆಲವರು ಅಭಿಯಾನ ಶುರು ಮಾಡಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸಂಸದರ ಪರ ಬ್ಯಾಟಿಂಗ್ ಮಾಡಿದ್ದಾರೆ. ನೂರಕ್ಕೆ ನೂರರಷ್ಟು ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತೆ. ಕಳೆದ 2 ಚುನಾವಣೆಗಳಲ್ಲೂ ಬೆಂಬಲಿಸಿದ್ದೆ, ಈಗಲೂ ಬೆಂಬಲಿಸುತ್ತೇನೆ ಅಂದಿದ್ದಾರೆ. ಬಿಜೆಪಿ ಶಾಸಕ ಶ್ರೀವತ್ಸ ಕೂಡ, ಈ ಬಾರಿ ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗುತ್ತೆ. ಅಭಿಪ್ರಾಯ ಸಂಗ್ರಹಿಸಿದಾಗಲೂ ಅವರ ವಿರುದ್ಧ ಅಪಸ್ವರ ಕೇಳಿ ಬಂದಿಲ್ಲ ಅಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತಾಡಿ, 8 ಸಲ ಗೆದ್ದವರಿಗೆ, 2 ಸಲ ಗೆದ್ದವರಿಗೆ ಟಿಕೆಟ್ ಕೊಡಲಾಗಿದೆ. ಊಹಾಪೋಹಗಳಿಗೆ ಉತ್ತರಿಸಲ್ಲ ಅಂದಿದ್ದಾರೆ. ಇದನ್ನೂ ಓದಿ: ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡದಂತೆ ರಸ್ತೆ ತಡೆದು ಆಕ್ರೋಶ 

  • ಬಿಜೆಪಿ ಟಿಕೆಟ್ ಕೊಡಿಸೋದಾಗಿ ಚೈತ್ರಾ ಮಾದರಿಯಲ್ಲೇ ಕೋಟಿ ಕೋಟಿ ವಂಚನೆ- ಆರೋಪಿ ಅರೆಸ್ಟ್

    ಬಿಜೆಪಿ ಟಿಕೆಟ್ ಕೊಡಿಸೋದಾಗಿ ಚೈತ್ರಾ ಮಾದರಿಯಲ್ಲೇ ಕೋಟಿ ಕೋಟಿ ವಂಚನೆ- ಆರೋಪಿ ಅರೆಸ್ಟ್

    ಬಳ್ಳಾರಿ: ಬಿಜೆಪಿ ಟಿಕೆಟ್ (BJP Ticket) ಕೊಡಿಸುವುದಾಗಿ ನಿವೃತ್ತ ಎಂಜಿನಿಯರ್ ಒಬ್ಬರಿಗೆ ಕೋಟಿ ಕೋಟಿ ಹಣ ವಂಚಿಸಿದ ಆರೋಪದ (Fraud Case) ಮೇಲೆ ಬಿಜೆಪಿಯ ಮಾಜಿ ಮುಖಂಡ ಹಾಗೂ ಹಾಲಿ ಕೆಆರ್‌ಪಿಪಿ ಪಕ್ಷದ ನಾಯಕ ರೇವಣ ಸಿದ್ದಪ್ಪನನ್ನು ಕೊಟ್ಟೂರು ಪೊಲೀಸರು (Police) ಬಂಧಿಸಿದ್ದಾರೆ.

    ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆರೋಪಿ ರೇವಣ ಸಿದ್ದಪ್ಪ, ಪುತ್ತೂರು ಮೂಲದ ಶೇಖರ್ ಜೊತೆ ಸೇರಿ ಕೊಟ್ಟೂರಿನ ನಿವೃತ್ತ ಎಂಜಿನಿಯರ್ ಶಿವಮೂರ್ತಿ ಅವರಿಗೆ 1.95 ಕೋಟಿ ರೂ. ಪಡೆದು ವಂಚಿಸಿದ್ದಾನೆ. ಬೇರೆಯವರಿಗೆ ಟಿಕೆಟ್ ಘೋಷಣೆಯಾದ ಬಳಿಕ ವಿಚಾರ ತಿಳಿದ ಶಿವಮೂರ್ತಿ ಪ್ರಶ್ನಿಸಿದಾಗ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‍ಗಾಗಿ ಕೋಟಿ ಕೋಟಿ ಡೀಲ್ – ಚೈತ್ರಾ ಮಾದರಿ ಮತ್ತೊಂದು ಪ್ರಕರಣ ಬಯಲಿಗೆ

    ಇದಾದ ಬಳಿಕ ಊರಿನ ಮುಖಂಡರು ರಾಜಿ ಕೂಡ ಮಾಡಿಸಿದ್ದರು. ಈ ವೇಳೆ ಆರೋಪಿ ಹಣ ವಾಪಸ್ ನೀಡುವುದಾಗಿ ಎರಡು ಚೆಕ್‍ಗಳನ್ನು ನೀಡಿದ್ದ. ಈ ಚೆಕ್‍ಗಳು ಬೌನ್ಸ್ ಆಗಿದ್ದವು. ಬಳಿಕ ಈ ಬಗ್ಗೆ ಶಿವಮೂರ್ತಿ ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಪ್ರಕರಣ ದಾಖಲಾದ ದಿನದಿಂದ ಪ್ರಕರಣದ ಪ್ರಮುಖ ಆರೋಪಿ ರೇವಣ ಸಿದ್ದಪ್ಪ ತಲೆ ಮರೆಸಿಕೊಂಡಿದ್ದ. ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನವನ್ನು ವಿಜಯನಗರ (Vijayanagar) ಎಸ್‍ಪಿ ಶ್ರೀಹರಿಬಾಬು ಅವರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ದರೋಡೆ, ಅತ್ಯಾಚಾರ, ಜೈಲಿಗೆ ಹೋಗೋದ್ರಲ್ಲಿ ಮುಸ್ಲಿಮರೇ ನಂ.1- ವಿವಾದಕ್ಕೀಡಾದ ಅಜ್ಮಲ್ ಹೇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಟಿಕೆಟ್‍ಗಾಗಿ ಕೋಟಿ ಕೋಟಿ ಡೀಲ್ – ಚೈತ್ರಾ ಮಾದರಿ ಮತ್ತೊಂದು ಪ್ರಕರಣ ಬಯಲಿಗೆ

    ಬಿಜೆಪಿ ಟಿಕೆಟ್‍ಗಾಗಿ ಕೋಟಿ ಕೋಟಿ ಡೀಲ್ – ಚೈತ್ರಾ ಮಾದರಿ ಮತ್ತೊಂದು ಪ್ರಕರಣ ಬಯಲಿಗೆ

    ವಿಜಯನಗರ: ವಿಧಾನಸಭಾ ಚುನಾವಣೆ ಮುಗಿದು ತಿಂಗಳುಗಳೇ ಕಳೆದರೂ ಬಿಜೆಪಿ ಟೆಕೆಟ್ (BJP Ticket) ಹೆಸರಲ್ಲಿ ನಡೆದ ವಂಚನೆ ಪ್ರಕರಣಗಳು (Fraud Case) ಮತ್ತೆ ಮತ್ತೆ ಬೆಳಕಿಗೆ ಬರುತ್ತಿವೆ. ಇದೀಗ ಹಗರಿಬೊಮ್ಮನಹಳ್ಳಿ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ನಿವೃತ್ತ ಇಂಜಿನಿಯರ್ ಶಿವಮೂರ್ತಿ ಎಂಬವರಿಗೆ 2 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಚೈತ್ರಾ ಪ್ರಕರಣದ ಮಾದರಿಯಲ್ಲೇ ವಂಚನೆ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಲ್ಲಿದ್ದ ಅವರಿಗೆ ಬಿಜೆಪಿ (BJP) ನಾಯಕರು ಪರಿಚಯ ಮಾಡಿಕೊಂಡು ಟಿಕೆಟ್ ಕೊಡಿಸುವುದಾಗಿ ಹೇಳಿದ್ದಾರೆ. ಬಳಿಕ ಬಿಜೆಪಿ ಮುಖಂಡರ ಹೆಸರನ್ನು ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ನಗರಸಭಾ ಸದಸ್ಯನ ಹತ್ಯೆಗೆ ಯತ್ನ – ಮೂವರು ವಶಕ್ಕೆ

    ಬಿಜೆಪಿ ಮಾಜಿ ಮುಖಂಡ ಮತ್ತು ಹಾಲಿ ಕೆಆರ್‌ಪಿಪಿ ಪಕ್ಷದ ವಿಜಯನಗರ (Vijayanagar) ಜಿಲ್ಲಾಧ್ಯಕ್ಷ ರೇವಣ್ಣ ಸಿದ್ದಪ್ಪ ಹಗರಿಬೊಮ್ಮನ ಟಿಕೆಟ್ ಕೊಡಿಸುವ ನೆಪದಲ್ಲಿ ಬಿಜೆಪಿಯ ಕೆಲ ನಾಯಕರನ್ನು ಪರಿಚಯ ಮಾಡಿಸುತ್ತಾರೆ. ಟಿಕೆಟ್‍ಗಾಗಿ ಹಣ ನೀಡಬೇಕೆಂದು ಹೇಳಿ ರೇವಣ್ಣ ಸಿದ್ದಪ್ಪ ಮತ್ತು ಪುತ್ತೂರಿನ ಶೇಖರ್ ಎಂಬಾತ ಹಂತ ಹಂತವಾಗಿ ಎರಡು ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ.

    ಚುನಾವಣೆ ವೇಳೆ ಟಿಕೆಟ್ ಬ್ಯಾಲ ಹುಣಸಿ ರಾಮಣ್ಣ ಅವರಿಗೆ ಸಿಗುತ್ತದೆ. ಈ ವೇಳೆ ಆಕ್ರೋಶಗೊಂಡ ಶಿವಮೂರ್ತಿ ಹಣ ವಾಪಸ್ ಕೇಳಿದ್ದರು. ಆಗ ವಾಗ್ವಾದ ನಡೆದು ಗಲಾಟೆಯಾಗಿತ್ತು. ಆರಂಭದಲ್ಲಿ ಮರ್ಯಾದೆಗೆ ಅಂಜಿ ವಿಷಯ ಬಹಿರಂಗಪಡಿಸದೆ ಸುಮ್ಮನಿದ್ದರು. ಬಳಿಕ ಕೊಟ್ಟೂರಿನ ಕೆಲವು ಪ್ರಮುಖರು ರಾಜಿ ಪಂಚಾಯಿತಿ ಮಾಡಿ ವಿಚಾರ ಮುಚ್ಚಿಡಲು ಯತ್ನಿಸಿದ್ದಾರೆ.

    ಇದೀಗ ಮೂರು ತಿಂಗಳಾದರೂ ಹಣ ವಾಪಾಸ್ ನೀಡಿಲ್ಲ. ನೀಡಿದ್ದ ಎರಡು ಚೆಕ್‍ಗಳೂ ಬೌನ್ಸ್ ಆಗಿವೆ. ಇದೇ ಕಾರಣಕ್ಕೆ ಶಿವಮೂರ್ತಿ, ಇದೀಗ ಕೊಟ್ಟೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ದೂರನ್ನು ನೀಡಿದ್ದಾರೆ.

    ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಸಿದ್ದಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಪೊಲೀಸರು (Police) ಕೂಡ ಅವರನ್ನು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಪುರುಷರಿಗೂ ಪ್ರಯಾಣ ಉಚಿತ ಮಾಡಿ: ವಾಟಾಳ್ ಆಗ್ರಹ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣ ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೋ ಇಲ್ವೋ? ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು: ಜಗದೀಶ್ ಶೆಟ್ಟರ್

    ಹಣ ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೋ ಇಲ್ವೋ? ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಕೆಲವು ಕಡೆ ಹಣ ತೆಗೆದುಕೊಂಡು ಟಿಕೆಟ್ (BJP Ticket) ಕೊಟ್ಟಿದ್ದಾರೆ ಅನ್ನೋ ಊಹಾಪೋಹಗಳಿವೆ. ಕೆಲವು ಕಡೆ ಸುದ್ದಿ ಹೊರಗೆ ಬರ್ತಿದೆ, ಕೆಲವು ಕಡೆ ಹೊರಗೆ ಬರ್ತಿಲ್ಲ. ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌‌ (Jagadish Shettar) ಒತ್ತಾಯಿಸಿದ್ದಾರೆ.

    ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೊಡಿಸುವ ಸಲುವಾಗಿ ಇಂತಹದ್ದೊಂದು ಟೀಮ್ ರೆಡಿಯಾಯ್ತು ಅಂದ್ರೆ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಎಲ್ಲೋ ಒಂದು ಕಡೆ ಹಣದ ವ್ಯವಹಾರ ನಡೆದಿದೆ ಅಂದ್ರೆ ಅದು ಬಿಜೆಪಿಗೇ ಬಂದು ನಿಲ್ಲುತ್ತೆ. ಆದ್ರೆ ಬಿಜೆಪಿ ನಾಯಕರು (BJP Leaders) ಅಂತಹ‌ ಪದ್ದತಿ ಪಕ್ಷದಲ್ಲಿ ಇಲ್ಲ ಅಂತಾರೆ ಎಂದಿದ್ದಾರೆ. ಇದನ್ನೂ ಓದಿ: ಬರಗಾಲ ಘೋಷಣೆಗೆ ಒತ್ತಾಯ – ಶಾಸಕರ ಕಾರ್ಯಕ್ರಮಗಳ ಘೇರಾವ್‍ಗೆ ರೈತ ಸಂಘ ನಿರ್ಧಾರ

    ಮಾಹಿತಿ‌ ಪ್ರಕಾರ, ಹಿಂದೂ ಕಾರ್ಯಕರ್ತರೇ ಡೀಲ್‌ನಲ್ಲಿ ತೊಡಗಿದ್ದಾರೆ. ಕನಕಗಿರಿಯಲ್ಲೂ ಟಿಕೆಟ್ ಡೀಲ್ (BJP Ticket Deal) ಆಗಿರುವ ಬಗ್ಗೆ ದೂರು ದಾಖಲಾಗಿದೆ. ಯಾವ ಆಧಾರದ ಮೇಲೆ ಈ ಪ್ರಕರಣಗಳೆಲ್ಲಾ ಹೊರಗೆ ಬರುತ್ತಿವೆ. ಇನ್ನೂ ಹಲವು ಕಡೆ ದೂರು ದಾಖಲಾಗಿರಬಹುದು. ದೂರು ಕೊಡದೆ ಇರೋರು ಸಾಕಷ್ಟು ಜನ ಇರಬಹುದು, ಕೆಲವರು ಧೈರ್ಯ ಮಾಡದೇ ದೂರು ನೀಡದಿರಬಹುದು. ಕೆಲವೇ ವ್ಯಕ್ತಿಗಳ ಕೈಯಲ್ಲಿ ಬಿಜೆಪಿ ಇದೆ ಅನ್ನೋದು ಇವಾಗ ಪ್ರೂವ್ ಆಗ್ತಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: DCM ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು, ಅದು ಸಾಂವಿಧಾನಿಕ ಹುದ್ದೆಯಲ್ಲ: ಟಿ.ಬಿ ಜಯಚಂದ್ರ

    ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್‌ ಕೊಡದೇ ಇರುವ ಪರಿಸ್ಥಿತಿ ನೋಡಿದಾಗ ಇಂತಹ ಪ್ರಕರಣಗಳು ಹೊರಗೆ ಬರುತ್ತೆ. ಇದನ್ನ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ವ್ಯಕ್ತಿ ನೋಡಿ ಟಿಕೆಟ್ ಕೊಡುವ ಬೆಳವಣಿಗೆ ಮೊದಲು ಇತ್ತು. ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೆಟ್ ಕೊಡಿಸಿದ್ದೇನೆ. ರಾಮದುರ್ಗದಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿಗೆ ಟಿಕೆಟ್ ಕೊಡ್ತಾರೆ ಅಂದ್ರೆ ಏನರ್ಥ? ಇದರಿಂದಲೇ ಅರ್ಥ ಮಾಡಿಕೊಳ್ಳಿ. ಏನೋ ಅವ್ಯವಹಾರ ನಡೆದಿದೆ ಅನ್ನೋದಂತೂ ಸತ್ಯ. ಪ್ರಾಥಮಿಕ ಹಂತದಲ್ಲಿ ಹಣದ ವ್ಯವಹಾರ ನಡೆದಿದೆ ಅನ್ನೋದು ಸಾಬೀತಾಗಿದೆ. ಚೈತ್ರಾ ಕುಂದಾಪುರ ಆರೋಪಿ ಸ್ಥಾನದಲ್ಲಿ ‌ನಿಂತಿದ್ದಾರೆ. ‌ಚೈತ್ರಾ ಕುಂದಾಪುರ ಕೇಸ್ ಆದ ಮೇಲೆ ಕೆಲವರಿಗೆ ಧೈರ್ಯ ಬಂದಿದೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯಸಭೆ, ಪರಿಷತ್ ಚುನಾವಣೆ – ಬಿಜೆಪಿ ಟಿಕೆಟ್ ಶನಿವಾರ ಫೈನಲ್, ಸಿಎಂ ದೆಹಲಿಗೆ ದೌಡು

    ರಾಜ್ಯಸಭೆ, ಪರಿಷತ್ ಚುನಾವಣೆ – ಬಿಜೆಪಿ ಟಿಕೆಟ್ ಶನಿವಾರ ಫೈನಲ್, ಸಿಎಂ ದೆಹಲಿಗೆ ದೌಡು

    ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನಪರಿಷತ್‍ಗೆ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ಭಾನುವಾರ ನವದೆಹಲಿಯಲ್ಲಿ ನಡೆಯಲಿದೆ.

    ಈ ಹಿನ್ನೆಲೆಯಲ್ಲಿ ವರಿಷ್ಠರ ಬುಲಾವ್ ಮೇರೆಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಂಜೆ ದೆಹಲಿಗೆ ದೌಡಾಯಿಸಲಿದ್ದಾರೆ. ಇತ್ತೀಚೆಗೆ ಬಿಜೆಪಿ ರಾಜ್ಯ ಕೋರ್ ಕಮಿಟಿ, ಪಕ್ಷದ ಅಭ್ಯರ್ಥಿಗಳ ಆಕಾಂಕ್ಷಿತರ ಪಟ್ಟಿಯನ್ನು ವರಿಷ್ಠರಿಗೆ ರವಾನಿಸಿತ್ತು. ಪರಿಷತ್‍ನ ನಾಲ್ಕು ಸ್ಥಾನಗಳಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಸೇರಿದಂತೆ 30 ಮಂದಿಯ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಇದನ್ನೂ ಓದಿ: ಬಿಪಿಎಲ್ ಇರಲಿ ಯಾವುದೇ ಕಾರ್ಡ್ ಇದ್ರೂ ಸರ್ಕಾರ ಪರಿಹಾರ ಕೊಡ್ಬೇಕು: ಸಿದ್ದರಾಮಯ್ಯ

    ಅದೇ ರೀತಿ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಾಲಿ ಸದಸ್ಯ ಕೆಸಿ ರಾಮಮೂರ್ತಿ, ಪಕ್ಷದ ಉಪಾಧ್ಯಕ್ಷ ನಿರ್ಮಲ್ ಸುರಾನ, ಲೆಹರ್ ಸಿಂಗ್, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಲಹರಿ ವೇಲು ಮೊದಲಾದವರ ಹೆಸರನ್ನು ಕಳುಹಿಸಿಕೆೊಟ್ಟಿದೆ. ಇವೆಲ್ಲವನ್ನೂ ಪರಿಶೀಲಿಸಿ ಭಾನುವಾರ ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಸಿಎಂ ಜೊತೆ ವರಿಷ್ಠರ ಒಂದು ಸುತ್ತು ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ನಾಳೆ ತಡ ರಾತ್ರಿ ಸಿಎಂ ಬೊಮ್ಮಾಯಿ ದಾವೋಸ್‍ಗೆ ಪ್ರಯಾಣ ಬೆಳೆಸಲಿದ್ದು, ಅದಕ್ಕೂ ಮುನ್ನ ಸಮಾಲೋಚನೆಗೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

  • ಅರುಣ್ ಕುಮಾರ್ ಪೂಜಾರ್ ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ

    ಅರುಣ್ ಕುಮಾರ್ ಪೂಜಾರ್ ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ

    ಹಾವೇರಿ: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅರುಣ್ ಕುಮಾರ್ ಪೂಜಾರ್ ಅವರಿಗೆ ನೀಡಲಾಗಿದೆ. ಅನರ್ಹ ಶಾಸಕ ಆರ್.ಶಂಕರ್ ಬಿಜೆಪಿ ಸೇರಿದ್ರೂ ಪಕ್ಷ ಟಿಕೆಟ್ ನೀಡಿರಲಿಲ್ಲ. ಬದಲಾಗಿ ಎಂ.ಎಲ್.ಸಿ ಮಾಡಿ ಸಚಿವರನ್ನಾಗಿ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.

    ಗುರುವಾರ 13 ಕ್ಷೇತ್ರಗಳಿಗೆ ಮಾತ್ರ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್‍ಗಾಗಿ ಆಕಾಂಕ್ಷಿಗಳು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಆರ್. ಶಂಕರ್ ಅವರನ್ನ ಎಂ.ಎಲ್.ಸಿ ಮಾಡಿ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ ಬೆನ್ನಲ್ಲೇ ಕ್ಷೇತ್ರದ ಕಮಲ ನಾಯಕರು ಟಿಕೆಟ್‍ಗಾಗಿ ಜೋರು ಲಾಬಿ ನಡೆಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ, ಡಾ. ಬಸವರಾಜ್ ಕೇಲಗಾರ, ಸಚಿವ ಈಶ್ವರಪ್ಪ ಪುತ್ರ ಕಾಂತೇಶ್, ಪ್ರಕಾಶ್ ಬುರಡೀಕಟ್ಟಿ ಸೇರಿ ಹಲವರು ಟಿಕೆಟ್ ರೇಸ್‍ನಲ್ಲಿದ್ದರು.

    ಆರ್‌ಎಸ್‌ಎಸ್‌ ಲಿಸ್ಟ್ ನಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ್ ಕಲಕೋಟಿ ಹೆಸರು ಕೇಳಿ ಬಂದಿತ್ತು. ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಅಂತಿಮವಾಗಿ ಅರುಣ್ ಕುಮಾರ್ ಪೂಜಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

  • ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನ- ಬಿಜೆಪಿ ಸೇರಲು ಜಿಟಿಡಿ ನಿರ್ಧಾರ!

    ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನ- ಬಿಜೆಪಿ ಸೇರಲು ಜಿಟಿಡಿ ನಿರ್ಧಾರ!

    ಬೆಂಗಳೂರು: ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನವಾಗುವ ಲಕ್ಷಣ ಕಾಣುತ್ತಿದೆ. ಸರ್ಕಾರ ಬಿದ್ದ ಮೇಲೆ ಪಕ್ಷದಿಂದ ಬಹುತೇಕ ದೂರವೇ ಉಳಿದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ.

    ಹುಣಸೂರು ಉಪ ಚುನಾವಣೆಯ ಬಿಜೆಪಿ ಟಿಕೆಟ್ ಅನ್ನು ತಮ್ಮ ಮಗನಿಗೆ ನೀಡುವಂತೆ ಕೇಸರಿ ಪಡೆಯ ನಾಯಕರಿಗೆ ಜಿ.ಟಿ.ದೇವೇಗೌಡ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಟಿಕೆಟ್ ಸಿಕ್ಕರೆ ಮಾಜಿ ಸಚಿವರು ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರುವುದು ಪಕ್ಕಾ ಆಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಈ ನಿಟ್ಟಿನಲ್ಲಿ ಜಿ.ಟಿ.ದೇವೇಗೌಡ ಅವರು ಈಗಾಗಲೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವರ ಮೂಲಕ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ನಾಯಕರ ಜೊತೆಯೂ ಸಂಪರ್ಕದಲ್ಲಿ ಇದ್ದಾರೆ. ಹುಣಸೂರು ಕ್ಷೇತ್ರದಿಂದ ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಪರ್ಧೆ ಮಾಡುವುದು ಬಹುತೇಕ ಡೌಟ್. ಹೀಗಾಗಿ ತಮ್ಮ ಮಗನಿಗೆ ಟಿಕೆಟ್ ಕೊಡುವಂತೆ ಬಿಜೆಪಿ ನಾಯಕರಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಬಿಜೆಪಿ ನಾಯಕರು ಜಿ.ಟಿ.ದೇವೇಗೌಡ ಅವರ ಮನವಿಗೆ ಒಪ್ಪಿದರೆ ಬಹುತೇಕ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇತ್ತ ಬಿಜೆಪಿಯು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಟಿಕೆಟ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಜಿಟಿ ದೇವೇಗೌಡ ಅವರಿಗೆ ತಿಳಿಸಿದೆ. ಹೀಗಾಗಿ ಬುಧವಾರ ಹೊರ ಬೀಳಲಿರುವ ಅನರ್ಹ ಶಾಸಕರ ಪ್ರಕರಣದ ತೀರ್ಪಿನ ಮೇಲೆ ಜಿಟಿ ದೇವೇಗೌಡ ಅವರ ಬೇಡಿಕೆ ನಿರ್ಧಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಜಿ.ಟಿ.ದೇವೇಗೌಡ ಅವರು ವಾರದ ಹಿಂದಷ್ಟೇ ಕಂದಾಯ ಸಚಿವ ಆರ್.ಅಶೋಕ್ ಅವರ ಮನೆಗೆ ನೀಡಿದ್ದರು. ಈ ವೇಳೆ ಬಿಜೆಪಿ ಸೇರ್ಪಡೆ ಕುರಿತ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದರು. ಉಪಚುನಾವಣೆಗೂ ಮುನ್ನ ಪಕ್ಷ ಸೇರ್ಪಡೆಗೊಂಡರೆ ಬಿಜೆಪಿಗೆ ಬಲ ಸಿಗುತ್ತದೆ. ಜೊತೆಗೆ ಮಗನ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಮಾಜಿ ಸಚಿವರು ಹಾಕಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

  • ಅನರ್ಹರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಆಸೆ-ಆಕಾಂಕ್ಷೆ ಇಟ್ಕೊಂಡೇ ಬಂದಿದ್ದಾರೆ: ಬಿಜೆಪಿ ನಾಯಕ

    ಅನರ್ಹರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಆಸೆ-ಆಕಾಂಕ್ಷೆ ಇಟ್ಕೊಂಡೇ ಬಂದಿದ್ದಾರೆ: ಬಿಜೆಪಿ ನಾಯಕ

    -ಅನರ್ಹರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಆರ್. ಶಂಕರ್‌ಗೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಬೇಡಿ. ಒಂದು ವೇಳೆ ಅವರಿಗೆ ಟಿಕೆಟ್ ಕೊಟ್ಟಿದ್ದೇ ಆದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗೋದು ಗ್ಯಾರಂಟಿ ಎಂದು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ 2018ರ ವಿಧಾನಸಭೆಯ ಪರಾಜಿತ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೇಲಗಾರ ಎಚ್ಚರಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹ ಶಾಸಕರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಅವರಿಂದ ತ್ಯಾಗ, ಬಲಿದಾನ, ಶ್ರಮ, ಹೋರಾಟ ಎಂಬುದಿಲ್ಲ. ಅವರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ. ಆಸೆ, ಆಕಾಂಕ್ಷೆ ಇಟ್ಟುಕೊಂಡೇ ಅವರು ಪಕ್ಷದಿಂದ ಹೊರಬಂದಿದ್ದಾರೆ. ಅವರಿಗೆ ಅಧಿಕಾರ ಕೊಡಿ, ಎಂಎಲ್‍ಸಿ, ಮಂತ್ರಿ, ನಿಗಮ ಮಂಡಳಿ ಕೊಡಿ. ಆದರೆ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೊಡಬೇಡಿ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಸಲಹೆ ನೀಡಿದ್ದಾರೆ.

    ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಳೆದ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಕ್ಕಿತ್ತು. ಆಗ ಐವತ್ತು ಸಾವಿರ ಮತಗಳನ್ನು ಪಡೆದಿದ್ದೇನೆ. ಹೀಗಾಗಿ ಹೈಕಮಾಂಡ್ ಟಿಕೆಟ್ ಕೊಡೋ ವಿಶ್ವಾಸವಿದೆ. ನಾನು ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದಿಲ್ಲ. ಬಿಜೆಪಿ ನಮ್ಮ ಮನೆ. ಅಲ್ಲಿಯೇ ಗಟ್ಟಿಯಾಗಿ ನಿಂತು ಟಿಕೆಟ್ ತಗೋತೀನಿ. ಹೈಕಮಾಂಡ್ ಕೂಡ ಅಳೆದು ತೂಗಿ ನೋಡಿ ಟಿಕೆಟ್ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಶಾಸಕ ತಿಪ್ಪೇಸ್ವಾಮಿ ಅವರು ಸಂಸದ ಶ್ರೀರಾಮುಲು ಅವರ ಸವಾಲಿಗೆ ಪ್ರತಿ ಸವಾಲು ಎಸೆದಿದ್ದಾರೆ.

    ತನ್ನ ವಿರುದ್ಧ ಚುನಾವಣೆಯಲ್ಲಿ ನಿಂತು ಸ್ಪರ್ಧೆ ಮಾಡಿ ಗೆದ್ದು ತೋರಿಸಿ ಎಂಬ ಶ್ರೀ ರಾಮುಲು ಅವರ ಸವಾಲನ್ನು ಸ್ವೀಕರಿಸಿ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೀನು ಗಂಡಸಾಗಿದ್ರೆ. ನಾಯಕನೇ ಆಗಿದ್ರೆ. ಇಲ್ಲಿ ಗೆದ್ದು ತೋರಿಸು ನಿಮ್ಮಂತವರಿಗೆ ಇಲ್ಲಿನ ಜನರು ಹೆದರುವುದಿಲ್ಲ. ಇದು ಮದಕರಿನಾಯಕ ಕಟ್ಟಿದ ಜಿಲ್ಲೆ ಎಂದು ಕಟು ಶಬ್ಧಗಳಲ್ಲಿ ಪ್ರತಿ ಸವಾಲು ಹಾಕಿದರು.

    ಮೊಳಕಾಲ್ಮೂರು ಕ್ಷೇತ್ರದ ಸ್ವ-ಗ್ರಾಮದಲ್ಲಿ ಬೆಂಬಲಿಗರ ಸಭೆ ಬಳಿಕ ಮಾತನಾಡಿದ ತಿಪ್ಪೇಸ್ವಾಮಿ, ಶತಾಯಗತಾಯ ಶ್ರೀರಾಮುಲು ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುತ್ತೇನೆ. ಪಕ್ಷದಲ್ಲಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನಾನು ಯಾವ ಪಕ್ಷದವರನ್ನೂ ಟಿಕೆಟ್ ಗಾಗಿ ಸಂಪರ್ಕಿಸಿಲ್ಲ ಎಂದರು.

    ಬಳ್ಳಾರಿಯಲ್ಲಿ ಸೋಲಿನ ಭೀತಿಯಿಂದ ಶ್ರೀರಾಮುಲು ವರು ಚಿತ್ರದುರ್ಗಕ್ಕೆ ಬಂದಿದ್ದಾರೆ. ಅಲ್ಲದೇ ತನಗೆ ಟಿಕೆಟ್ ನೀಡುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಬಿಜೆಪಿ ಮೋಸ ಮಾಡಿದ ಪಕ್ಷ, ಬಿಜೆಪಿಗೆ ಮತ ಹಾಕಬೇಡಿ. ಅಲ್ಲದೇ ನಾಗೇಂದ್ರ, ಆನಂದ್ ಸಿಂಗ್ ಅವರೆಲ್ಲ ಶ್ರೀರಾಮುಲು ಅವರನ್ನು ಯಾಕೆ ಬಿಟ್ಟು ಹೋದರು ನನಗೆ ತಿಳಿದಿದೆ. ಆದರೆ ಅವರು ಇಲ್ಲಿನ ಕೆಲ ಸ್ಥಳೀಯರ ಮಾತು ಕೇಳಿದ್ದಾರೆ. ಅಂಥವರ ಮಾತಿನಿಂದ ಎಲ್ಲರೂ ಹಾಳಾಗಬೇಕಾಗುತ್ತದೆ. ಪದೇ ಪದೇ ಸೋಲು ಖಚಿತ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ರಾಮುಲು ಅವರು ಹೇಳುತ್ತಾರೆ ಆದ್ರೆ ಅವರದ್ದು, ಮಾತು ಕೊಟ್ಟು ಮೋಸ ಮಾಡಿದ ರಕ್ತ ಎಂದು ತೀವ್ರ ವಾಗ್ದಾಳಿ ನಡೆಸಿದರು.

    ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಎಲ್ಲಾ ಸಮುದಾಯದವರೂ ನನ್ನ ಜೊತೆಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನನ್ನ ಕುಟುಂಬಕ್ಕೆ ಅನ್ಯಾಯ ಮಾಡಿದೆ ಎಂದು ತಮ್ಮ ಸಹೋದರನ ಹೆಸರು ಹೇಳದೆ ಶ್ರೀರಾಮುಲು ವಿರುದ್ಧ ಕೆಂಡಾಮಂಡಲರಾದ್ರು.  ಇದನ್ನೂ ಓದಿ:   ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು