Tag: BJP State President

  • ವಾರದಲ್ಲಿ ಪಕ್ಷದ ಗೊಂದಲಗಳಿಗೆ ತೆರೆ – ಮತ್ತೆ ರಾಜ್ಯಾಧ್ಯಕ್ಷನಾಗಿ ಪಕ್ಷ ಬಲಪಡಿಸ್ತೇನೆ : ವಿಜಯೇಂದ್ರ ವಿಶ್ವಾಸ

    ವಾರದಲ್ಲಿ ಪಕ್ಷದ ಗೊಂದಲಗಳಿಗೆ ತೆರೆ – ಮತ್ತೆ ರಾಜ್ಯಾಧ್ಯಕ್ಷನಾಗಿ ಪಕ್ಷ ಬಲಪಡಿಸ್ತೇನೆ : ವಿಜಯೇಂದ್ರ ವಿಶ್ವಾಸ

    ಶಿವಮೊಗ್ಗ: ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ. ಮತ್ತೆ ರಾಜ್ಯಾಧ್ಯಕ್ಷನಾಗಿ ಪಕ್ಷ ಬಲಪಡಿಸ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ವಿಶ್ವಾಸ ವ್ಯಕ್ತಪಡಿಸಿದರು.

    ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಈ ವ್ಯವಸ್ಥೆಯಿಲ್ಲ. ವ್ಯವಸ್ಥಿತವಾಗಿ ಸಂಘಟನೆ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಮಂಡಲ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟ, ರಾಜ್ಯಾಧ್ಯಕ್ಷರ ಚುನಾವಣೆ ಮತ್ತು ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಎಲ್ಲವೂ ಕೂಡ ವ್ಯವಸ್ಥಿತವಾಗಿ ನಡೆಯುತ್ತಿವೆ. ಕೇಂದ್ರದ ವರಿಷ್ಠರು ನಿರ್ಧಾರ ಮಾಡಿದಂತೆ ಎಲ್ಲವೂ ನಡೆಯುತ್ತಿದೆ ಎಂದು ಹೇಳಿದರು.ಇದನ್ನೂ ಓದಿ: ಫ್ರೀಯಾಗಿ ಸಿಗರೇಟ್ ನೀಡದ್ದಕ್ಕೆ ಬೇಕರಿ ಮಾಲೀಕನ ಮೇಲೆಯೇ ಹಲ್ಲೆ

    ಯತ್ನಾಳ್ ಬಣದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದ ಬಣ ರಾಜ್ಯಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸುವ ತಯಾರಿ ನಡೆಸಿದೆ ಎಂದರು.

    ಇದೇ ವೇಳೆ ಪಕ್ಷದ ಸಂಘಟನಾತ್ಮಕ ಚುನಾವಣೆಯ ಕುರಿತು ಮಾಹಿತಿ ಹಂಚಿಕೊಂಡು, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮ್ಮ ಎಲ್ಲಾ ಕಾರ್ಯಕರ್ತರು, ಪಕ್ಷದ ಹಿರಿಯರು ಒಟ್ಟಾಗಿ ಈ ಭ್ರಷ್ಟ ಹಾಗೂ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ. ನನ್ನ ಕಳೆದ ಒಂದು ವರ್ಷದ ಅವಧಿಯಲ್ಲಿ, ರಾಜ್ಯಾಧ್ಯಕ್ಷನಾಗಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ರಾಜ್ಯದ ಜನತೆಗೂ ಗೊತ್ತಿದೆ, ನಮ್ಮ ಕಾರ್ಯಕರ್ತರಿಗೂ ಗೊತ್ತಿದೆ. ಪಕ್ಷದ ಹಿರಿಯರು, ಶಾಸಕರಿಗೂ ಕೂಡ ಗೊತ್ತಿದೆ. ಎಲ್ಲರ ಸಹಕಾರದಿಂದ ರಾಜ್ಯಾಧ್ಯಕ್ಷನಾಗಿ ಮುಂದುವರಿದು ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇನೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.ಇದನ್ನೂ ಓದಿ: ಬೆಂಗಳೂರು: ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಡಿಎಲ್ ಅಮಾನತು!

     

  • ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ನಿರೀಕ್ಷೆಯಿದೆ – ಕುಮಾರ್ ಬಂಗಾರಪ್ಪ

    ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ನಿರೀಕ್ಷೆಯಿದೆ – ಕುಮಾರ್ ಬಂಗಾರಪ್ಪ

    – ನಾನು ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದ ಮಾಜಿ ಸಚಿವ

    ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಜನವರಿಯಲ್ಲಿ ಬದಲಾಗುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ (Kumar Bangarappa) ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆ ಈ ಬಾರಿ ಮಂಡನೆಯಾಗುವುದು ಅನುಮಾನ

    ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರಿಂದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರ ಸ್ಥಾನ ಖಾಲಿಯಾಗುವ ನಿರೀಕ್ಷೆ ಇದೆ. ನಾನು ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.

    ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ರಾಜ್ಯ ಬಿಜೆಪಿಯ ಭಿನ್ನಮತದ ಬಗ್ಗೆ ಕೇಂದ್ರದ ವರಿಷ್ಠರು ಗಮನಹರಿಸಿದ್ದಾರೆ. ಶೀಘ್ರವಾಗಿ ತೀಕ್ಷ÷್ಣವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಕಳೆದ 30 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಕಾಂಗ್ರೆಸ್ ಅಹಿಂದ ಸಂಘಟನೆಯಾಗಿದ್ದು, ಅದಕ್ಕೆ ವಿರುದ್ಧವಾಗಿ ಹಾಗೂ ಬಿಜೆಪಿ ಒಬಿಸಿ ಸಂಘಟನೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಒಬಿಸಿ ನಾಯಕರಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಒಬಿಸಿ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರ ಬಂದರೆ ನನ್ನನ್ನು ಪರಿಗಣಿಸಿ ಎಂದಿದ್ದೇನೆ. ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗಬಹುದು ಎಂಬ ನಿರೀಕ್ಷೆ ಇದೆ. ಏನು ಆಗಲಿದೆ ಕಾದು ನೋಡಬೇಕಿದೆ ಎಂದು ತಿಳಿಸಿದರು.ಇದನ್ನೂ ಓದಿ: ಮಾಣಿಪ್ಪಾಡಿ ಹೇಳಿರುವ ವಿಡಿಯೋ ಆಧಾರದ ಮೇಲೆ ಮಾತನಾಡಿದ್ದೇನೆ- ಸಿಎಂ

  • ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

    ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

    ಶಿವಮೊಗ್ಗ: ಬಿಜೆಪಿ (BJP) ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಕಾರ್ಯಕರ್ತನನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಗೋಕುಲ್ ಕೃಷ್ಣನ್ ಎಂದು ಗುರುತಿಸಲಾಗಿದೆ. ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣನ್ ಭದ್ರಾವತಿಯಲ್ಲಿ ನಡೆಯುತ್ತಿರುವ ಇಸ್ಪೀಟು, ಓಸಿ ದಂಧೆ ಸೇರಿದಂತೆ ಅಕ್ರಮ ದಂಧೆ ಕುರಿತು, ಅಲ್ಲದೇ ಈ ದಂಧೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ಕೈವಾಡ ಇದೆ ಎಂಬುದಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ದುಷ್ಕರ್ಮಿಗಳು ಮನೆಯ ಮುಂದೆ ನಿಲ್ಲಿಸಿದ್ದ ಗೋಕುಲ್ ಕೃಷ್ಣನ್ ಕಾರನ್ನು ಜಖಂಗೊಳಿಸಿದ್ದರು.

    ಈ ಬಗ್ಗೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಗೋಕುಲ್ ಕೃಷ್ಣನ್ ಮೇಲೆ ಹಲ್ಲೆ ನಡೆಸಿದ್ದಾರೆ. ಭದ್ರಾವತಿಯ ಬಿ.ಹೆಚ್.ರಸ್ತೆಯಲ್ಲಿರುವ ಕಾಂಚನ ಹೋಟೆಲ್ ಗೆ ಊಟ ಪಾರ್ಸಲ್ ತರಲು ಗೋಕುಲ್ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೇಳು ಮಂದಿ ದುಷ್ಕರ್ಮಿಗಳು ಏಕಾಏಕಿ ಗೋಕುಲ್ ಮೇಲೆ ನೀರಿನ ಜಗ್ಗ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: 64 ವರ್ಷದ ಮಾಜಿ ಯೋಧನಿಗೆ ಮದುವೆ ಮಾಡಿಸೋದಾಗಿ 10 ಲಕ್ಷ ವಂಚನೆ- ಮೂವರ ಬಂಧನ

    ಹಲ್ಲೆಯಿಂದಾಗಿ ಗೋಕುಲ್ ಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ಭದ್ರಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯನ್ನು ಖಂಡಿಸಿರುವ ಬಿಜೆಪಿ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ

    ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ

    – ಡಿ.6ರ ಬಳಿಕ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆಂದ ಬಿಜೆಪಿ ನಾಯಕ

    ಮೈಸೂರು: ಹೈಕಮಾಂಡ್ ಸೂಚನೆಯನ್ನ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಅನ್ನೋದನ್ನ ಡಿಸೆಂಬರ್ 6ರ ನಂತರ ಹೇಳ್ತೀನಿ. ಬಿಡಿಬಿಡಿಯಾಗಿ ವಿವರಿಸ್ತೀನಿ ಎಂದು ಮಾಜಿ ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.

    ಮೈಸೂರಿನಲ್ಲಿಂದು (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ (BY Vijayendra) ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕನಿಂದ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ‌ಒತ್ತಾಯ – ಪೋಷಕರಿಂದ ಆರೋಪ, ಕ್ರಮಕ್ಕೆ ಆಗ್ರಹ

    ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ 6ನೇ ತಾರೀಖಿನ ನಂತರ ನನ್ನ ಮನಸ್ಸಿನ ಭಾವನೆಯನ್ನ ಹೇಳುತ್ತೇನೆ, ಬಿಡಿಬಿಡಿಯಾಗಿ ವಿವರಿಸ್ತೀನಿ. ರಾಜಕಾರಣ ದೊಂಬರಾಟ ಅಲ್ಲ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿಯೂ ಅಲ್ಲ. ಒಳ ಒಪ್ಪಂದಕ್ಕೆ ಸಿಮೀತವೂ ಅಲ್ಲ ಎಂದು ಬೇಸರ ಹೊರಹಾಕಿದ್ದಾರೆ.

    ಇದೇ ವೇಳೆ ಯಡಿಯೂರಪ್ಪ (BS Yediyurappa) ತಮ್ಮನ್ನು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ ಸೋಮಣ್ಣ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಯಾರನ್ನೂ ಸಂಪರ್ಕಿಸಿಲ್ಲ. ಆ ತರಹ ಯಾವ ಪ್ರಯತ್ನವೂ ನಡೆದಿಲ್ಲ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 60ಕ್ಕೂ ಹೆಚ್ಚುಬಾರಿ ಯುವಕನ ಕತ್ತು ಕೊಯ್ದು ಕೊಲೆ; ಹೆಣದ ಮೇಲೆ ಕುಣಿದು ವಿಕೃತಿ – 16ರ ಹುಡುಗ ಅರೆಸ್ಟ್‌

    ಅಂತರ ಕಾಯ್ದುಕೊಂಡ ನಾಯಕರು: ಮಾಜಿ ಸಚಿವ ವಿ.ಸೋಮಣ್ಣ ಅವರಿಂದ ಮೈಸೂರು ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡರು. ಬಿಜೆಪಿಯ ಓರ್ವ ಶಾಸಕ, ಓರ್ವ ಸಂಸದ ಹಾಗೂ ಮಾಜಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಸೋಮಣ್ಣ ಭೇಟಿಗೆ ಹಿಂದೇಟು ಹಾಕಿದರು. ಸೋಮಣ್ಣ ಕಟ್ಟಾ ಬೆಂಬಲಿಗರು ಬಿಟ್ಟರೆ ಉಳಿದ ಯಾರೂ ಅವರ ಭೇಟಿಗೆ ಮುಂದಾಗಲಿಲ್ಲ. ತಮ್ಮ ಆಪ್ತರೊಂದಿಗೆ ಉಪಾಹಾರ ಸೇವಿಸಿ, ಖಾಸಗಿ ಹೋಟೆಲ್‌ನಲ್ಲಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

  • ವಿಜಯೇಂದ್ರ ತಮ್ಮ ಸಾಮರ್ಥ್ಯದಿಂದ ನೇಮಕಗೊಂಡಿದ್ದಾರೆ: ಜೆ.ಪಿ.ನಡ್ಡಾ

    ವಿಜಯೇಂದ್ರ ತಮ್ಮ ಸಾಮರ್ಥ್ಯದಿಂದ ನೇಮಕಗೊಂಡಿದ್ದಾರೆ: ಜೆ.ಪಿ.ನಡ್ಡಾ

    – ವಿರೋಧಿಗಳಿಗೆ ಟಾಂಗ್‌ ಕೊಟ್ಟ ರಾಷ್ಟ್ರೀಯ ಅಧ್ಯಕ್ಷ

    ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (Vijayendra) ಅವರನ್ನು ನೇಮಕ ಮಾಡಿದ್ದನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ವಿರೋಧಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

    ಪತ್ರಿಕೆಯೊಂದು ನಡೆಸಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಜೆ.ಪಿ.ನಡ್ಡಾ (J.P.Nadda), ಬಿ.ವೈ.ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯದಿಂದಾಗಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಪಕ್ಷದ ಆಸ್ತಿ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ.15ಕ್ಕೆ ವಿಜಯೇಂದ್ರ ಪದಗ್ರಹಣ

    ಎಲ್ಲರೂ ಬಹುನಿರೀಕ್ಷಿಸುತ್ತಿದ್ದ ಸಮಯದಲ್ಲಿ, ಕರ್ನಾಟಕದಲ್ಲಿ ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ನಿರ್ಧಾರದ ಹಿಂದೆ ಏನು ಸಂದೇಶ ಅಡಗಿದೆ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ನಡ್ಡಾ, ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯದ ಮೂಲಕ ಈ ನಾಯಕತ್ವವನ್ನು ಗಳಿಸಿದ್ದಾರೆ ಎನ್ನುವುದೇ ಅದರ ಮೊದಲ ಸಂದೇಶ ಎಂದಿದ್ದಾರೆ.

    ಪಕ್ಷ ಸಂಘಟನೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಲ್ಲದೇ, ಅವರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭವಾಗಿದೆ. ಪಕ್ಷಕ್ಕೆ ತಾವು ದೊಡ್ಡ ಆಸ್ತಿ ಎಂದು ಅವರು ಸಾಬೀತುಪಡಿಸಿದ್ದಾರೆ. ಯುವ ನಾಯಕರಾಗಿರುವ ವಿಜಯೇಂದ್ರ ಅವರ ನೇಮಕವಾಗಿದೆ. ಬಿಜೆಪಿಯು ಶ್ರಮಶೀಲ ಯುವಶಕ್ತಿಯನ್ನು ಗೌರವಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಬೆಂಗಾವಲು ವಾಹನ, ಪೊಲೀಸ್‌ ಭದ್ರತೆ ಕಲ್ಪಿಸಿದ ಸರ್ಕಾರ

    ಈ ನೇಮಕಾತಿಯ ನಂತರ ಕರ್ನಾಟಕದ ಸಂಘಟನೆಯಲ್ಲಿ ದೊಡ್ಡ ಪರಿವರ್ತನೆಯನ್ನು ನಾವು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ, ನಾವು ಯಾವಾಗಲೂ ಧನಾತ್ಮಕ ಬದಲಾವಣೆ ಮತ್ತು ಸುಧಾರಣೆಯನ್ನು ಪ್ರತಿಪಾದಿಸಿದ್ದೇವೆ. ಈ ನೇಮಕಾತಿಯು ಸಕಾರಾತ್ಮಕ ಬೆಳವಣಿಗೆಗಳನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ನೀವು ಪಕ್ಷದ ಕರ್ನಾಟಕ ಘಟಕದಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರ ನೇಮಕವು ಬಿಜೆಪಿ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಿ.ಸೋಮಣ್ಣ ಅವರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ

  • ಬಿಜೆಪಿಗೆ ವಿಜಯೇಂದ್ರ ಹಿಟ್ ಮ್ಯಾನ್: ಶ್ರೀರಾಮುಲು

    ಬಿಜೆಪಿಗೆ ವಿಜಯೇಂದ್ರ ಹಿಟ್ ಮ್ಯಾನ್: ಶ್ರೀರಾಮುಲು

    ಚಿತ್ರದುರ್ಗ: ಭಾರತ ಕ್ರಿಕೆಟ್ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಬಳಿಕ ರೋಹಿತ್ ನಾಯಕತ್ವ ವಹಿಸಿಕೊಂಡು ಹಿಟ್ ಮ್ಯಾನ್ ಆಗಿರುವಂತೆ ಬಿಜೆಪಿಗೂ ವಿಜಯೇಂದ್ರ (BY Vijayendra) ಹಿಟ್ ಮ್ಯಾನ್ (Hit Man) ಆಗಲಿದ್ದಾರೆ ಎಂದು ಬಿಜೆಪಿ (BJP) ಶಾಸಕ ಶ್ರೀರಾಮುಲು (B Sriramulu) ಭವಿಷ್ಯ ನುಡಿದಿದ್ದಾರೆ.

    ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದರು. ವಿಧಾನಸಭೆ ಚುನಾವಣೆ (Assembly Election) ಸೋತ ಬಳಿಕ ಪಕ್ಷವು ವಿಜಯೇಂದ್ರಗೆ ಅವಕಾಶ ನೀಡಿದೆ. ಹೀಗಾಗಿ 30 ವರ್ಷಗಳಿಂದ ನಾನು ವಿಜಯೇಂದ್ರ ಅವರನ್ನು ನೋಡಿದ್ದು, ಯುವಕರಿಗೆ ಭವಿಷ್ಯದಲ್ಲಿ ಅವಕಾಶ ಸಿಗಬೇಕು. ಹೀಗಾಗಿ ಪಕ್ಷವು ಹಂತ ಹಂತವಾಗಿ ಗುರುತಿಸಿ ಅವಕಾಶ ನೀಡಿದೆ ಹೊರತು ಬಿಎಸ್ ಯಡಿಯೂರಪ್ಪ (BS Yediyurappa) ಅವರ ಮಗ ಅಂತ ಜವಾಬ್ದಾರಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗ್ಯಾರಂಟಿಗಳ ಅನುಷ್ಠಾನದ ಚರ್ಚೆಗೆ ರೆಡಿ – ಸಿಎಂಗೆ ಹೆಚ್‍ಡಿಕೆ ಸವಾಲ್

    ವಿಜಯೇಂದ್ರ ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ. ಇಂತಹ ವೇಳೆ ಪಕ್ಷ ಜವಾಬ್ದಾರಿ ನೀಡಿದೆ. ವಿಜಯೇಂದ್ರಗೆ ಶುಭವಾಗಲಿ ಎಂದು ಹಾರೈಸಿದರು. ಇನ್ನು ರಾಜ್ಯದ ಕಾಂಗ್ರೆಸ್ ನಾಯಕರು ಲೋಕಸಭಾ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ-ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸುತ್ತೇವೆ ಎಂದಿದ್ದಾರೆ. ಆದರೆ ಡಿಕೆಶಿ ಅವರು ಹಗಲುಗನಸು ಕಾಣುತ್ತಿದ್ದಾರೆ. ಹಾಗೆಯೇ ಇನ್ನು ನಾಲ್ಕೈದು ತಿಂಗಳಲ್ಲಿ ಕಾಂಗ್ರೆಸ್‌ನ (Congress) ಅಸಲಿ ಬಣ್ಣ ಜನರಿಗೆ ತಿಳಿಯಲಿದೆ. ಬಿಜೆಪಿ ಪಕ್ಷ ಕೂಡ 4-5 ತಿಂಗಳಲ್ಲೇ ಅಸಲಿ ದರ್ಶನ ಕೊಡುತ್ತದೆ. ಕಾಂಗ್ರೆಸ್ ಗ್ಯಾರಂಟಿ ಕೊಟ್ಟ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದರು. ಇದನ್ನೂ ಓದಿ: ನೆಹರು ಅವರ ಗಾಂಧಿ ಕುಟುಂಬ ಇರಬಾರದು ಎಂದು ಬಿಜೆಪಿ ಏನೇನೋ ಮಾಡಲು ಹೊರಟಿದೆ: ಡಿಕೆಶಿ ಕಿಡಿ

    ಮುಂಬರುವ ಲೋಕಸಭೆ ಚುನಾವಣೆ ಆ ರೀತಿ ಆಗುವುದಿಲ್ಲ. ನಮ್ಮ ರಾಜ್ಯದಿಂದ ದೊಡ್ಡ ಶಕ್ತಿಯಾಗಿ ಸಂಸದರನ್ನು ಕಳುಹಿಸುತ್ತೇವೆ ಎಂದರು. ವಿಜಯೇಂದ್ರಗೆ ಜವಾಬ್ದಾರಿಯಿಂದಾಗಿ ಬಿಜೆಪಿ ನಾಯಕರ ಅಸಮಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಕೆಲವೊಮ್ಮೆ ಮನುಷ್ಯನ ವರ್ಚಸ್ಸಿನ ಮೇಲೆ ಕುರ್ಚಿಗೆ ಬೆಲೆ ಬರುತ್ತದೆ. ಕಿರಿಯರು, ಹಿರಿಯರು ಎಂಬ ಪ್ರಶ್ನೆ ಬರುವುದಿಲ್ಲ. ಈ ರಾಜ್ಯದ ಯುವಕರು ಹಾಗೂ ಹಿರಿಯರನ್ನು ಒಗ್ಗೂಡಿಸಲು ವಿಜಯೇಂದ್ರಗೆ ಪಕ್ಷದ ವರಿಷ್ಠರು ಹೊಣೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದೀಪಾವಳಿಗೆ ಕರೆಂಟ್‌ ಕಳ್ಳತನ – ಬೆಸ್ಕಾಂ ನೋಟಿಸ್‌ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್‌ಡಿಕೆ

    ನಾಯಕರಾದ ಸಿ.ಟಿ ರವಿ, ಯತ್ನಾಳ್, ಸೋಮಣ್ಣ, ಲಿಂಬಾವಳಿ ಸೇರಿದಂತೆ ನಾವೆಲ್ಲರೂ ಒಂದು ಕುಟುಂಬ ಎಂದು ಸಮರ್ಥಿಸಿಕೊಂಡ ಅವರು, ಯಾರು ಸಹ ಪಕ್ಷ ಬಿಡಲ್ಲ ಎಂದರು. ಅದರಲ್ಲೂ ವಿ.ಸೋಮಣ್ಣ ನೇರವಾಗಿ ಮಾತನಾಡುವಂತಹ ವ್ಯಕ್ತಿಯಾಗಿದ್ದು, ಅವರಲ್ಲಿಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದರೆ ಸರಿ ಮಾಡುತ್ತೇವೆ. ಬೈ ಎಲೆಕ್ಷನ್ ವೇಳೆ ಸೋಮಣ್ಣನವರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಹೀಗಾಗಿ ಮುಂಬರುವ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದು, ವಿಜಯೇಂದ್ರ ಅವರಿಗೆ ಮಾರ್ಗದರ್ಶನ ಮಾಡಿ ಪಕ್ಷ ಕಟ್ಟುತ್ತೇವೆ ಎಂದರು. ಈ ವೇಳೆ ಮಾಜಿ ಶಾಸಕ ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ ಉಪಸ್ಥಿತರಿದ್ದರು. ಇದನ್ನೂ ಓದಿ: ಹೆಚ್‌ಡಿಕೆ ನಿವಾಸಕ್ಕೆ ಅಕ್ರಮ ವಿದ್ಯುತ್‌ – ಮಾಜಿ ಸಿಎಂಗೆ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದ ಕಾಂಗ್ರೆಸ್‌

  • ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ

    ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ

    ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಬಿ.ವೈ.ವಿಜಯೇಂದ್ರ (Vijayendra) ಅವರನ್ನು ಮಾಜಿ ಸಚಿವ ಸಿ.ಟಿ.ರವಿ ಅಭಿನಂದಿಸಿದ್ದಾರೆ.

    ಸೋಮವಾರ ವಿಜಯೇಂದ್ರ ಅವರ ನಿವಾಸಕ್ಕೆ ಆಗಮಿಸಿದ ಸಿ.ಟಿ.ರವಿ (C.T.Ravi) ಅವರು ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಶುಭಕೋರಿದ್ದಾರೆ. ಇದರ ಫೋಟೋಗಳನ್ನು ವಿಜಯೇಂದ್ರ ಅವರು ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಟಾಕಿ ಸೌಂಡ್ ಜೋರು; ಕಣ್ಣಿಗೆ ಹಾನಿಯಾಗಿ 25ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

    ಇಂದು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಸಿ.ಟಿ.ರವಿ ಅವರನ್ನು ಭೇಟಿಯಾಗಿ ದೀಪಾವಳಿ ಹಬ್ಬದ ಶುಭಕೋರಿ, ಅವರ ಸಲಹೆ ಹಾಗೂ ಮಾರ್ಗದರ್ಶನ ಕೋರಲಾಯಿತು ಎಂದು ವಿಜಯೇಂದ್ರ ಬರೆದುಕೊಂಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸಿ.ಟಿ.ರವಿ ಅವರು ಸ್ಥಾನ ಕೈತಪ್ಪಿದ್ದಕ್ಕೆ ನಿರಾಸೆಗೊಂಡಿದ್ದರು ಎನ್ನಲಾಗಿತ್ತು. ಇವರ ಜೊತೆಗೆ ಆಕಾಂಕ್ಷಿಗಳಾಗಿದ್ದ ವಿ.ಸೋಮಣ್ಣ, ಅರವಿಂದ್‌ ಬೆಲ್ಲದ್‌ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಬೇಡ ಅಂದ್ರೆ ಮನೆಯಲ್ಲಿರ್ತೀನಿ – ಸಿ.ಟಿ ರವಿ

    ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಬೇಸರವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಸಿ.ಟಿ.ರವಿ ಕೊನೆಗೂ ವಿಜಯೇಂದ್ರರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಇದರ ನಡುವೆ ಅಸಮಾಧಾನಿತ ನಾಯಕರನ್ನು ಸಮಾಧಾನ ಪಡಿಸುವ ಕಾರ್ಯವನ್ನು ಬಿ.ಎಸ್‌.ಯಡಿಯೂರಪ್ಪ ಮಾಡುತ್ತಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ಫೋನ್‌ ಕರೆ ಮಾಡಿ ಪಕ್ಷ ಸಂಘಟನೆಗೆ ಒಗ್ಗಟ್ಟಾಗಿರೋಣ ಎಂಬ ಸಂದೇಶವನ್ನು ಬಿಎಸ್‌ವೈ ರವಾನಿಸುತ್ತಿದ್ದಾರೆ.

  • ವಿಜಯೇಂದ್ರಗೆ ಮೋದಿ, ಅಮಿತ್‌ ಶಾ ಮಹತ್ವದ ಹೊಣೆ ನೀಡಿದ್ದಾರೆ: ಎಸ್.ಎಂ ಕೃಷ್ಣ ಶ್ಲಾಘನೆ

    ವಿಜಯೇಂದ್ರಗೆ ಮೋದಿ, ಅಮಿತ್‌ ಶಾ ಮಹತ್ವದ ಹೊಣೆ ನೀಡಿದ್ದಾರೆ: ಎಸ್.ಎಂ ಕೃಷ್ಣ ಶ್ಲಾಘನೆ

    ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರಿಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರನ್ನು (SM Krishna) ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದರು.

    ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎಸ್.ಎಂ ಕೃಷ್ಣ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರರನ್ನ ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಹತ್ತಾರು ವರ್ಷಗಳಿಂದ ಬಿಜೆಪಿಯನ್ನು (BJP) ಕರ್ನಾಟಕದಲ್ಲಿ ಭದ್ರವಾದ ಬುನಾದಿಯ ಮೇಲೆ ಕಟ್ಟಲು ಯಡಿಯೂರಪ್ಪನವರು (Yediyurappa) ಶ್ರಮಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಸರಿಯಾದ ಸಮಯದಲ್ಲಿ ಆಯ್ಕೆ – ಹೆಚ್‌ಡಿಡಿ ಭೇಟಿಯಾದ ವಿಜಯೇಂದ್ರ

    ಯಡಿಯೂರಪ್ಪ ಅವರು ಕಟ್ಟಿದ ಅಸ್ಥಿಭಾರದ ಮೇಲೆ ವಿಜಯೇಂದ್ರ ಅವರು ಬೃಹತ್ತಾಗಿ ಪಕ್ಷವನ್ನು ಕಟ್ಟುವ ಹಾಗೂ ಮುಂದಿನ ಲೋಕಸಭಾ ಚುನಾವಣೆ, ನಂತರ ಬರುವ ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಛಾಪನ್ನು ಒತ್ತಿ ತೋರಿಸುವ ದೊಡ್ಡ ಜವಾಬ್ದಾರಿ ಹೊರಲಿದ್ದಾರೆ. ಈ ಯುವ ಹೆಗಲಿನ ಮೇಲೆ ಅಂತಹ ಹೊಣೆ ನೀಡಲಾಗಿದೆ. ಈ ಪ್ರತಿಭೆಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಜೆ.ಪಿ ನಡ್ಡಾರವರು (JP Nadda) ಮಹತ್ವದ ಹೊಣೆ ನೀಡಿದ್ದಾರೆ. ವಿಜಯೇಂದ್ರರಿಗೆ ಎಲ್ಲ ರೀತಿಯಿಂದಲೂ ಯಶಸ್ಸು ಸಿಗಲೆಂದು ಹಾರೈಸುವುದಾಗಿ ತಿಳಿಸಿದರು.

    ಯುವಕರಿಗೆ ಅಧ್ಯಕ್ಷ ಸ್ಥಾನ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಂದಲ್ಲ ನಾಳೆ ಯುವ ಪ್ರತಿಭೆಗಳು ಹೊರಹೊಮ್ಮಬೇಕು. ಅವರ ಜೊತೆ ಹಿರಿಯರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಅದಕ್ಕೆ ನಾವು ಅನುವು ಮಾಡಿಕೊಟ್ಟು ಅವರ ಕೈಗಳನ್ನು ಬಲಪಡಿಸಬೇಕು. ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ನಿನ್ನ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬೋಣ – ಬೊಮ್ಮಾಯಿ ಆಶೀರ್ವಾದ ಪಡೆದ ವಿಜಯೇಂದ್ರ

    ಶಾಸಕರಾದ ಕೃಷ್ಣಪ್ಪ, ಸಿ.ಕೆ ರಾಮಮೂರ್ತಿ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು. ಇದನ್ನೂ ಓದಿ: ಹಬ್ಬಕ್ಕೆ ಬಟ್ಟೆ ಕೊಂಡೊಯ್ಯುತ್ತಿದ್ದ ಪುರಸಭೆ ಸದಸ್ಯನ ತಡೆದು ಮಾರಕಾಸ್ತ್ರದಿಂದ ಹಲ್ಲೆ

  • ಸಾಮಾನ್ಯ ಕಾರ್ಯಕರ್ತನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ – ಸಿಹಿ ತಿನ್ನಿಸಿ, ಸನ್ಮಾನಿಸಿ ಸಂಭ್ರಮಾಚರಣೆ

    ಸಾಮಾನ್ಯ ಕಾರ್ಯಕರ್ತನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ – ಸಿಹಿ ತಿನ್ನಿಸಿ, ಸನ್ಮಾನಿಸಿ ಸಂಭ್ರಮಾಚರಣೆ

    – ಮೊದಲ ಆದ್ಯತೆ ಕಾರ್ಯಕರ್ತರು ಎಂಬ ಸಂದೇಶ ರವಾನಿಸಿದ ವಿಜಯೇಂದ್ರ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮರುದಿನವೇ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ಹಿರಿಯ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿ ಸಂಭ್ರಮಾಚರಣೆ ಮಾಡಿದ್ದಾರೆ.

    ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷ ಶಶಿಧರ್ ಮನೆಗೆ ವಿಜಯೇಂದ್ರ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿದರು. ಅಲ್ಲದೇ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಮೊದಲ ಆದ್ಯತೆ ಕಾರ್ಯಕರ್ತರು ಎಂಬ ಸಂದೇಶ ರವಾನೆ ಮಾಡಿದ್ದಾರೆ.

    ಶಶಿಧರ್‌ ಮನೆಗೆ ಭೇಟಿ ಕೊಟ್ಟ ವಿಜಯೇಂದ್ರ ಅವರು ಕಾರ್ಯಕರ್ತನಿಗೆ ಸಿಹಿ ತಿನ್ನಿಸಿದರು. ನಂತರ ಪಕ್ಷದ ಶಾಲು ಹಾಕಿ ಕಾರ್ಯಕರ್ತನನ್ನು ಸನ್ಮಾನಿಸಿದರು. ಶಶಿಧರ್ ಕುಟುಂಬಸ್ಥರಿಗೆ ದೀಪಾವಳಿ ಶುಭ ಕೋರಿದರು. ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯ ಮೂಡಿಸುವ ನಿಟ್ಟಿನಲ್ಲಿ ವಿಜಯೇಂದ್ರ ಈ ಪ್ರಯತ್ನ ಆರಂಭಿಸಿದ್ದಾರೆ.

    ವಿಜಯೇಂದ್ರ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಕಾರ್ಯಕರ್ತ ಶಶಿಧರ್‌, ವಿಜಯೇಂದ್ರ ಅವರು ಯುವಕರಿದ್ದಾರೆ. ತಂದೆಯ ಅನುಭವ ಹೊಂದಿದ್ದಾರೆ. ನಿನ್ನೆ ಬರ್ತೀನಿ ಅಂದಿದ್ದರು. ನಂಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು.

    ಆಯ್ಕೆಯಾದ ಕೂಡಲೇ ಸ್ಥಳೀಯ ಕಾರ್ಯಕರ್ತರ ಭೇಟಿಗೆ ಬರ್ತಾ ಇದ್ದಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಯುವಕರು ರಾಜ್ಯಾಧ್ಯಕ್ಷರಾಗಿರುವುದು ಖುಷಿ ಕೊಟ್ಟಿದೆ ಎಂದು ಶಶಿಧರ್‌ ತಿಳಿಸಿದ್ದಾರೆ.

    ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಆಯ್ಕೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದರು. ಆಯ್ಕೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿಜಯೇಂದ್ರಗೆ ಫೋನ್‌ ಕರೆ ಮಾಡಿ ಶುಭಾಶಯ ತಿಳಿಸಿದರು. ಪಕ್ಷ ಸಂಘಟನೆ ಮಾಡುವಂತೆ ಸಲಹೆ ನೀಡಿದರು. ಬಳಿಕ ವಿಜಯೇಂದ್ರ ಅವರು ತಂದೆ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

  • ಯಡಿಯೂರಪ್ಪನವರ ಮಗನಿಗೆ ಅಭಿನಂದನೆಗಳು- ಬಿಜೆಪಿ ಕಾಲೆಳೆದ ಕಾಂಗ್ರೆಸ್

    ಯಡಿಯೂರಪ್ಪನವರ ಮಗನಿಗೆ ಅಭಿನಂದನೆಗಳು- ಬಿಜೆಪಿ ಕಾಲೆಳೆದ ಕಾಂಗ್ರೆಸ್

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಬಿ.ವೈ ವಿಜಯೇಂದ್ರ (BY Vijayendra) ಅವರು ಅಲಂಕರಿಸುತ್ತಿದ್ದಂತೆಯೇ ಕಾಂಗ್ರೆಸ್ (Congress) ಪಕ್ಷವು ಬಿಜೆಪಿಯ (BJP) ಕಾಲೆಳೆದಿದೆ.

    ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ತಮ್ಮ ಎಕ್ಸ್ ಖಾತೆಯಲ್ಲಿ, “ಯಡಿಯೂರಪ್ಪನವರ ಮಗ” ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ “ಯಡಿಯೂರಪ್ಪನವರ (bS Yediyurappa) ಮಗ”ನಿಗೆ ಅಭಿನಂದನೆಗಳು. “ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ” ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ ಎಂದು ಬರೆದುಕೊಳ್ಳಲಾಗಿದೆ.

    ಇತ್ತ ರಾಜ್ಯಾಧ್ಯಕ್ಷರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪನ ಮಗ ಎನ್ನುವ ಕಾರಣಕ್ಕೆ ನನಗೆ ಈ ಪೋಸ್ಟ್ ಕೊಟ್ಟಿಲ್ಲ. ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬೀಡುವ ಯೋಚನೆಯಲ್ಲಿ ಇರೋರನ್ನು ಒಟ್ಟಿಗೆ ತಗೊಂಡು ಹೋಗುತ್ತೇನೆ. ದೆಹಲಿಯಿಂದ ವೀಕ್ಷಕರು ಬರಲಿದ್ದಾರೆ. ಸೋಮಣ್ಣ ಅಶೋಕ್ ಯತ್ನಾಳ್ ಬೊಮ್ಮಾಯಿ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.