Tag: bjp raitha morcha

  • ಹಳೇ ವೈಷಮ್ಯ, ಬಿಜೆಪಿ ನಾಯಕನ ಸಂಬಂಧಿ ಹತ್ಯೆ ಕೇಸ್ – ಆರೋಪಿಗಳು ಅಂದರ್

    ಹಳೇ ವೈಷಮ್ಯ, ಬಿಜೆಪಿ ನಾಯಕನ ಸಂಬಂಧಿ ಹತ್ಯೆ ಕೇಸ್ – ಆರೋಪಿಗಳು ಅಂದರ್

    ಹುಬ್ಬಳ್ಳಿ: ಬಿಜೆಪಿ ಪಕ್ಷದ ಧಾರವಾಡ ಜಿಲ್ಲಾ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಈಶ್ವರ ಗೌಡ ಪಾಟೀಲ್ ಸೋದರ ಸಂಬಂಧಿಯನ್ನ ಹತ್ಯೆ ಮಾಡಿದ್ದ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಎಸಿಪಿ ವಿನೋದ್ ಮುಕ್ತೆದಾರ್ ತಂಡ ಕೇವಲ ಮೂರು ಗಂಟೆಯಲ್ಲಿ ಬಂಧಿಸಿದೆ. ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರ ಗೌಡ ಪಾಟೀಲ್ ಅವರ ಚಿಕ್ಕಪ್ಪನ ಮಗ ಅಭಿಷೇಕ್ ಗೌಡ ಪಾಟೀಲ್ ಎಂಬವರನ್ನು ಚಾಕುವಿನಿಂದ ಇರಿದು ಕಳೆದ ರಾತ್ರಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿ ಪರಾರಿಯಾದ ಪ್ರವೀಣ್ ಬೇವಿನ ಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರ್ ಇದ್ದಲಗಿ ಎಂಬವರನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಕೆಲವು ದಿನಗಳ ಹಿಂದೆ ಅಭಿಷೇಕ್‍ನೊಂದಿಗೆ ಜಗಳವಾಡಿದ್ದ ಆರೋಪಿಗಳಾದ ಪ್ರವೀಣ್ ಬೇವಿನ ಕಟ್ಟಿ, ಪಾಟೀಲ್‍ರ ಮನೆಯ ಮುಂದಿನ ಕಾರಿನ ಗಾಜನ್ನು ಒಡೆದು ಹೋಗಿದ್ದ. ಅದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಅದೇ ಕಾರಣದಿಂದಲೇ ಭಾನುವಾರವೂ ಕೂಡಾ ಜಗಳವಾದ ನಂತರ ಪ್ರವೀಣ್ ತನ್ನ ಸ್ನೇಹಿತರಾದ ಸಾಯಿ ಮತ್ತು ಕುಮಾರ್‍ನನ್ನು ಕಳಿಸಿ ಕೊಲೆ ಮಾಡಿಸಿದ್ದಾನೆ.

    ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಘಟನೆಯ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಮಾರಣ್ಣ ಕೈಕಟ್ಟಿ ನಿಲ್ಲುವುದು ಭಯದಿಂದ ಅಲ್ಲ, ಸಂಸ್ಕಾರದಿಂದ – ಜೆಡಿಎಸ್ ಅಭಿಮಾನಿಗಳು