Tag: BJP protests

  • ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

    ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

    – ವಕ್ಫ್‌ ಬಿಲ್‌ ಸಮಾಜವನ್ನು ಶಾಶ್ವತವಾಗಿ ವಿಭಜಿಸುವ ಬಿಜೆಪಿ ತಂತ್ರ; ಸೋನಿಯಾ ಗಾಂಧಿ
    – ಸಂವಿಧಾನದ ಮೇಲೆ ಮೋದಿ ಸರ್ಕಾರದ ಆಕ್ರಮಣ ಎಂದ ಜೈರಾಮ್‌ ರಮೇಶ್‌

    ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill) ಕುರಿತು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ (Sonia Gandhi) ಟೀಕೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ.

    ವಕ್ಫ್‌ ತಿದ್ದಿಪಡಿ ಮಸೂದೆ – 2024 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಕುರಿತು ಮಾತನಾಡಿದ ಸೋನಿಯಾ ಗಾಂಧಿ ಅವರು, ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸುವ ಮೂಲಕ ಸಮಾಜವನ್ನು ಶಾಶ್ವತವಾಗಿ ವಿಭಜಿಸಲು ಬಿಜೆಪಿ ಹೊರಟಿದೆ. ಈ ಮಸೂದೆಯೂ ಸಂವಿಧಾನದ ಮೇಲಿನ ಆಕ್ರಮಣವಾಗಿದೆ. ಸಮಾಜವನ್ನು ಶಾಶ್ವತವಾಗಿ ವಿಭಜಿಸಲು ಬಿಜೆಪಿಯ (BJP) ಉದ್ದೇಶಿತ ಕಾರ್ಯತಂತ್ರದ ಭಾಗವಾಗಿದೆ ಎಂದು ಕಿಡಿ ಕಾರಿದರು.

    ಸೋನಿಯಾ ಗಾಂಧಿ ಅವರ ಈ ಹೇಳಿಕೆ ಖಂಡಿಸಿ ಆಡಳಿತ ಪಕ್ಷದ ಸದಸ್ಯರು ಮೇಲ್ಮನೆಯಲ್ಲಿ ಗದ್ದಲ ಎಬ್ಬಿಸಿದ್ರು. ಸೋನಿಯಾ ಅವರು ಕ್ಷಮೆ ಕೇಳಬೇಕು (‘ಸೋನಿಯಾ ಗಾಂಧಿ ಮಾಫಿ ಮಾಂಗೊ’) ಎಂದು ಪಟ್ಟು ಹಿಡಿದರು. ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ವಿಕ್ಷಗಳ ಗದ್ದಲದ ನಡುವೆಯೂ ಮಾತು ಮುಂದುವರಿಸಿದ ಸೋನಿಯಾ ಗಾಂದಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತಿಲ್ಲ. ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಮಾತನಾಡಲು ಅವಕಾಶ ನೀಡದೇ ಇರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸತ್‌ನಲ್ಲಿ ವಕ್ಫ್‌ ಮಸೂದೆ ಅಂಗೀಕಾರ: ಐತಿಹಾಸಿಕ ಕ್ಷಣ ಎಂದು ಮೋದಿ ಬಣ್ಣನೆ

    ಇನ್ನೂ ವಕ್ಫ್‌ ಮಸೂದೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ವಕ್ಫ್‌ ತಿದ್ದುಪಡಿ ಮಸೂದೆಯ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು. ಅಲ್ಲದೇ ಇದು ಭಾರತದ ಸಂವಿಧಾನದ ಮೇಲೆ ಮೋದಿ ಸರ್ಕಾರದ ಆಕ್ರಮಣ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಟ್ರಂಪ್‌ ತೆರಿಗೆ ಸಮರ- ಇಂದು ಒಂದೇ ದಿನ ಕರಗಿತು ಹೂಡಿಕೆದಾರರ 11.19 ಲಕ್ಷ ಕೋಟಿ ಸಂಪತ್ತು

    ಮತ್ತೊಂದೆಡೆ, ವಕ್ಫ್ ಬಿಲ್-ಅಮೆರಿಕದ ಪ್ರತಿ ಸುಂಕ ವಿರೋಧಿಸಿ ಸಂಸತ್‌ನ ಒಳಗೆ ಹೊರಗೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ರು. ಸರಿಯಾದ ಚರ್ಚೆ ನಡೆಸದೇ ಬಲವಂತವಾಗಿ ವಕ್ಫ್ ಬಿಲ್‌ಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಆರೋಪಿಸಿದ್ರು. ವಕ್ಫ್ ಬಿಲ್ ಮೇಲಿನ ಚರ್ಚೆಯಲ್ಲಿ ಪ್ರಿಯಾಂಕಾ ಗಾಂದಿ ವಾದ್ರಾ ಪಾಲ್ಗೊಳ್ಳದೇ ಇರೋದಕ್ಕೆ ವಯನಾಡಿನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇನ್ನು, ವಕ್ಫ್ ಬಿಲ್ ಬೆಂಬಲಿಸಿದ ಜೆಡಿಯು ನಡೆ ಖಂಡಿಸಿ, ಐವರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದ ಹಾಗೇ, ಮೇಲ್ಮನೆ ಕಲಾಪ ಇಂದು ನಸುಕಿನಜಾವ 4 ಗಂಟೆಯವರೆಗೂ ನಡೀತು. ರಾಜ್ಯಸಭೆ ಚರಿತ್ರೆಯಲ್ಲೇ 17 ಗಂಟೆಯಷ್ಟು ಗರಿಷ್ಠ ಸಮಯ ಕಲಾಪ ನಡೆದಿರೋದು ಇದೇ ಮೊದಲು.

  • ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಂಟೆಗೆ ಬಂದರೆ ಸುಮ್ನಿರಲ್ಲ ಅಂದ್ರು ಡಿಕೆಶಿ

    ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಂಟೆಗೆ ಬಂದರೆ ಸುಮ್ನಿರಲ್ಲ ಅಂದ್ರು ಡಿಕೆಶಿ

    ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಇಂಧನ ಸಚಿವ ಡಿಕೆಶಿ ತಿರುಗಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ವೇಣುಗೋಪಾಲ್ ಗೋ ಬ್ಯಾಕ್ ಅನ್ನೋಕೆ ಏನಿದೆ? ಕೆ.ಸಿ. ವೇಣುಗೋಪಾಲ್ ಅವರನ್ನು ಡಿಸ್ಟರ್ಬ್ ಮಾಡಿದ್ರೆ ಬಿಜೆಪಿಯವರ ಕೇಂದ್ರದ ನಾಯಕರನ್ನ ಗುರಿಯಾಗಿಟ್ಟುಕೊಂಡು ನಾವು ಅದಕ್ಕಿಂತಲೂ ಶಕ್ತವಾಗಿ ಹೋರಾಟ ಮಾಡಬೇಕಾಗುತ್ತದೆ. ಅಷ್ಟು ಶಕ್ತಿಯನ್ನು ನಮಗೆ ನಮ್ಮ ಕಾರ್ಯಕರ್ತರು ನೀಡಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಸಿಎಂ ಯಾತ್ರೆ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಯಾತ್ರೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಹೈಕಮಾಂಡ್ ಕೂಡ ಸರ್ಕಾರದ ಕಾರ್ಯಕ್ರಮಗಳನ್ನು ಪ್ರವಾಸದ ಮೂಲಕ ಮಾಡಿ ಎಂದು ಹೇಳಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಭಾಗಿಯಾದರೆ ಸರ್ಕಾರಿ ಕಾರ್ಯಕ್ರಮ ಆಗಲ್ಲ ಪಕ್ಷದ ವೇದಿಕೆಯಾಗುತ್ತೆ. ಪಕ್ಷದ ಅಧ್ಯಕ್ಷರು ನಾವೆಲ್ಲಾ ಸೇರಿ ಯಾತ್ರೆ ಮಾಡುತ್ತೇವೆ ಎಂದರು.

    ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದವರು, ಅವರೇನು ಸರ್ಕಾರದ ವತಿಯಿಂದ ಎಲ್ಲಿಯೂ ಹೋಗಿಲ್ವಾ? ಅವರಿಗೆ ಅನುಭವ ಇದೆಯೋ ಇಲ್ವೋ ಗೊತ್ತಿಲ್ಲ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಸರ್ಕಾರದ ಕೆಲಸಕ್ಕೆ ಸರ್ಕಾರಿ ಕಾರಿನಲ್ಲೇ ಹೋಗಬೇಕು ಎಂದರು. ನೀತಿ ಸಂಹಿತೆ ಬರುವವರೆಗೂ ನಾವು ಸರ್ಕಾರಿ ಕಾರಿನಲ್ಲೇ ಹೋಗುತ್ತೇವೆ ಎಂದರು.