Tag: BJP MP’s

  • ಪ್ರತಿಭಟನೆ ವೇಳೆ ನೂಕಾಟದಿಂದ ಬಿಜೆಪಿಯ ಇಬ್ಬರು ಸಂಸದರಿಗೆ ಗಾಯ – ರಾಹುಲ್‌ ಗಾಂಧಿ ವಿರುದ್ಧ FIR

    ಪ್ರತಿಭಟನೆ ವೇಳೆ ನೂಕಾಟದಿಂದ ಬಿಜೆಪಿಯ ಇಬ್ಬರು ಸಂಸದರಿಗೆ ಗಾಯ – ರಾಹುಲ್‌ ಗಾಂಧಿ ವಿರುದ್ಧ FIR

    ನವದೆಹಲಿ: ಸಂಸತ್‌ನ ಹೊರಗೆ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿಯ ಇಬ್ಬರು ಸಂಸದರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಪ್ರತಿಭಟನೆಯ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಅವರ ತಲೆಗೆ ಗಾಯಗಳಾಗಿವೆ. ಇಬ್ಬರೂ ನಾಯಕರು ಆಸ್ಪತ್ರೆಯಲ್ಲಿದ್ದಾರೆ. ಬಿಜೆಪಿ ದೂರಿನ ಮೇರೆಗೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಕೇಸ್‌ ದಾಖಲಾಗಿದೆ. ಸ್ವಯಂಪ್ರೇರಣೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು, ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆ, ಕ್ರಿಮಿನಲ್ ಬಲದ ಬಳಕೆ, ಕ್ರಿಮಿನಲ್ ಬೆದರಿಕೆ ಮೊದಲಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

    ಇಂದು ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್, ಸಂಸದರಾದ ಬಾನ್ಸುರಿ ಸ್ವರಾಜ್ ಮತ್ತು ಹೇಮಂಗ್ ಜೋಶಿ ಅವರು ದೂರು ದಾಖಲಿಸಿದ್ದಾರೆ. ಅವರು ಇತರ ವಿಷಯಗಳ ಜೊತೆಗೆ ಕೊಲೆ ಯತ್ನದ ಆರೋಪ ಮಾಡಿದ್ದಾರೆ.

    ಇಂದು ನಾವು ರಾಹುಲ್ ಗಾಂಧಿ ವಿರುದ್ಧ ಹಲ್ಲೆಗೆ ಸಂಬಂಧ ದೂರು ದಾಖಲಿಸಿದ್ದೇವೆ. ಸಂಸತ್ ಭವನದ ಮಕರ ದ್ವಾರದ ಹೊರಗೆ ಎನ್‌ಡಿಎ ಸಂಸದರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ನಡೆದ ಘಟನೆಯನ್ನು ವಿವರವಾಗಿ ಪ್ರಸ್ತಾಪಿಸಿದ್ದೇವೆ. ರಾಹುಲ್ ಗಾಂಧಿ ತಳ್ಳಿದ್ದರಿಂದ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

  • ಇನ್ನೊಂದು ತಿಂಗಳಲ್ಲಿ ಬಂಗಲೆ ಖಾಲಿ ಮಾಡ್ಬೇಕು – ವಿಧಾನಸಭೆಯಲ್ಲಿ ಗೆದ್ದ ಸಂಸದರಿಗೆ ಸೂಚನೆ

    ಇನ್ನೊಂದು ತಿಂಗಳಲ್ಲಿ ಬಂಗಲೆ ಖಾಲಿ ಮಾಡ್ಬೇಕು – ವಿಧಾನಸಭೆಯಲ್ಲಿ ಗೆದ್ದ ಸಂಸದರಿಗೆ ಸೂಚನೆ

    – ಶೋಭಾ ಕರಂದ್ಲಾಜೆಗೆ ಹೆಚ್ಚುವರಿ ಖಾತೆಯ ಹೊಣೆ

    ನವದೆಹಲಿ: ಪಂಚರಾಜ್ಯಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿರುವ ಸಂಸದರು ಮತ್ತು ಕೇಂದ್ರ ಸಚಿವರಿಗೆ (Union Ministers) 30 ದಿನದಲ್ಲಿ ಮನೆ ಖಾಲಿ ಮಾಡುವಂತೆ ಲೋಕಸಭೆ ಕಾರ್ಯಲಯ ಹೇಳಿದೆ. ಸಂಸದ (BJP MPs) ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನಲೆ ಮನೆ ಖಾಲಿ ಮಾಡುವಂತೆ ಅದು ಸೂಚಿಸಿದೆ.

    ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ಮಧ್ಯಪ್ರದೇಶದ ರಾಕೇಶ್ ಸಿಂಗ್, ಉದ್ಯಾ ಪ್ರತಾಪ್ ಸಿಂಗ್ ಮತ್ತು ರಿತಿ ಪಾಠಕ್, ರಾಜಸ್ಥಾನದಿಂದ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಛತ್ತೀಸ್‌ಗಢದಿಂದ ಗೋಮತಿ ಸಾಯಿ ಮತ್ತು ಅರುಣ್ ಸಾವ್. ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಕೂಡ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅಂಗೀಕರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಬರ ಪರಿಹಾರಕ್ಕೆ ಇನ್ನೆರಡು ದಿನಗಳಲ್ಲಿ ಮಾನದಂಡ ಬಿಡುಗಡೆ: ಚೆಲುವರಾಯಸ್ವಾಮಿ

    ಕೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಸರೂತಾ ನೀಡಿದ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಗೀಕರಿಸಿದ್ದಾರೆ. ಖಾಲಿಯಾದ ಸಚಿವ ಸ್ಥಾನಗಳ ಪೈಕಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಉಸ್ತುವಾರಿಯನ್ನು ಅರ್ಜುನ್ ಮುಂಡಾ ಅವರಿಗೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಜವಬ್ದಾರಿಯನ್ನು ಶೋಭಾ ಕರಂದ್ಲಾಜೆ ಅವರಿಗೆ ವಹಿಸಲಾಗಿದೆ. ಇದನ್ನೂ ಓದಿ: ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರ ನೇಮಿಸಿದ ಹೈಕಮಾಂಡ್

    ಅಲ್ಲದೇ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಡಾ. ಭಾರತಿ ಪ್ರವೀಣ್ ಪವಾರ್ ದ್ರೌಪದಿ ಮುರ್ಮು ವಹಿಸಿದ್ದಾರೆ. ತಮ್ಮ ಖಾತೆಗಳ ಜೊತೆಗೆ ಹೆಚ್ಚುವರಿ ನಿಭಾಯಿಸಲು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್‌ ಹಗರಣ – ಸದನದಲ್ಲಿ ಯತ್ನಾಳ್‌ ಬಾಂಬ್‌

  • ಬಿಜೆಪಿ ಸಂಸದರು ಕೇಂದ್ರದ ಗುಲಾಮರಂತೆ ವರ್ತಿಸ್ತಿದ್ದಾರೆ: ಈಶ್ವರ್ ಖಂಡ್ರೆ

    ಬಿಜೆಪಿ ಸಂಸದರು ಕೇಂದ್ರದ ಗುಲಾಮರಂತೆ ವರ್ತಿಸ್ತಿದ್ದಾರೆ: ಈಶ್ವರ್ ಖಂಡ್ರೆ

    ಬೀದರ್: ಬಿಜೆಪಿಯ ಸಂಸದರು ಹಾಗೂ ನಾಯಕರು ಕೇಂದ್ರದ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

    ನಗರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಪ್ರಹಾರ ಮಾಡುತ್ತಿದೆ. ಕರ್ನಾಟಕಕ್ಕೆ ಬಿಜೆಪಿಯವರು ಘೋರ ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿ ಸಂಸದರು ಮತ್ತು ನಾಯಕರು ‌ಲೋಕಸಭೆಯಲ್ಲಾಗಲಿ ಅಥವಾ ಪ್ರಧಾನಿ ಮುಂದೆಯಾಗಲಿ ರಾಜ್ಯದ ಹಕ್ಕು ಕೇಳುವ ಧೈರ್ಯ ಮಾಡದ ಅಂಜುಬುರುಕರಾಗಿದ್ದಾರೆ. ಪರಿಣಾಮವಾಗಿ ರಾಜ್ಯ ಬಳಲುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ

    ಕೇಂದ್ರ ಸರ್ಕಾರ ಯಾವ ರೀತಿ ರಾಜ್ಯವನ್ನು ಕಡೆಗಣಿಸುತ್ತಿದೆಯೋ ಅದೇ ರೀತಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಘೋರ ಅನ್ಯಾಯ ಮಾಡಿದೆ. ಕಲ್ಯಾಣ ಕರ್ನಾಟಕ ಮಂಡಳಿಯನ್ನೇ ಇನ್ನೂ ರಚಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈವರೆಗೆ ಒಂದು ಸಭೆ ಕೂಡ ಮಾಡಿಲ್ಲ. ಪರಿಷತ್ ಚುನಾವಣೆಯಿಂದ ಬಿಜೆಪಿಗೆ ಒಂದು ಸಂದೇಶ ಹೋಗಬೇಕಾಗಿದೆ. ಜಿಲ್ಲೆಯ ಎಲ್ಲಾ ಕಡೆ ಕಾಂಗ್ರೆಸ್ ಅಲೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 140ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು: BSY ಸಂಕಲ್ಪ

    ಕಾಂಗ್ರೆಸ್ ಅಭ್ಯರ್ಥಿ ಭೀಮ್‌ರಾವ್ ಬಿ ಪಾಟೀಲ್ ಸಮರ್ಥ ಅಭ್ಯರ್ಥಿಯಾಗಿದ್ದು, ಹೆಚ್ಚಿನ ಮತಗಳಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಪ್ರಚಾರ ಸಭೆಯಲ್ಲಿ ಈಶ್ವರ ಖಂಡ್ರೆ ಆಶಯ ವ್ಯಕ್ತಪಡಿಸಿದ್ದಾರೆ.

  • ರಸ್ತೆ ಚೆನ್ನಾಗಿ ಮಾಡಿದ್ರೆ ಅಪಘಾತಗಳು ಹೆಚ್ಚಾಗುತ್ತವೆ – ಬಿಜೆಪಿ ಸಂಸದ

    ರಸ್ತೆ ಚೆನ್ನಾಗಿ ಮಾಡಿದ್ರೆ ಅಪಘಾತಗಳು ಹೆಚ್ಚಾಗುತ್ತವೆ – ಬಿಜೆಪಿ ಸಂಸದ

    ದಿಸ್ಪುರ್: ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಬಿಜೆಪಿ ಸಂಸದರೊಬ್ಬರು ವಿಲಕ್ಷಣ ಹೇಳಿಕೆ ನೀಡಿದ್ದು, ರಸ್ತೆಗಳು ಚೆನ್ನಾಗಿದ್ದರೆ ಅಪಘಾತಗಳು ಹೆಚ್ಚುತ್ತವೆ ಎಂದು ಹೇಳುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಅಸ್ಸಾಂ ಬಿಜೆಪಿ ಸಂಸದ ಪಲ್ಲಾಬ್ ಲೋಚನ್ ದಾಸ್ ಈ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ಅಸ್ಸಾಂನ ತೇಜ್‍ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಸ್ಸಾಂನಲ್ಲಿನ ಕಳಪೆ ರಸ್ತೆಗಳ ಪರಿಸ್ಥಿತಿ ಕುರಿತು ಉತ್ತರಿಸುವಾಗ ಈ ಸಂಸದರು ಹೇಳಿಕೆಯನ್ನು ನೀಡಿದ್ದಾರೆ. ಉತ್ತಮ ರಸ್ತೆಗಳನ್ನು ನಿರ್ಮಿಸುವುದರಿಂದ ಪ್ರಯೋಜನಗಳಿಗಿಂತ ಹೆಚ್ಚಾಗಿ, ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎಂದು ಹೇಳಿದ್ದಾರೆ.

    ಈ ಹೇಳಿಕೆಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೆಟ್ಟ ರಸ್ತೆಗಳು ಅಪಘಾತಗಳನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಉತ್ತಮ ರಸ್ತೆಗಳನ್ನು ನಿರ್ಮಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಕೆಟ್ಟ ರಸ್ತೆಗಳಲ್ಲಿ ಯುವಕರು ವಾಹನಗಳನ್ನು ನಿಧಾನವಾಗಿ ಚಲಾಯಿಸುತ್ತಾರೆ. ಇದರಿಂದ ರಾಜ್ಯದಲ್ಲಾಗುವ ಅಪಘಾತಗಳ ಸಂಖ್ಯೆ ಇಳಿಕೆಯಾಘುತ್ತದೆ. ಹೀಗಾಗಿ ಹೆಚ್ಚು ಉತ್ತಮ ರಸ್ತೆಗಳು ಇರಬಾರದು ಎಂಬ ಬಾಲಿಶ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ಅಸ್ಸಾಂನ ಬಿಜೆಪಿ ಸರ್ಕಾರ ಉತ್ತಮ ರಸ್ತೆಗಳನ್ನು ನಿರ್ಮಿಸಿದೆ. ಹೀಗಾಗಿ ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂದು ದಾಸ್ ಹೇಳಿದ್ದಾರೆ.

  • ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ, ಕುಂಕುಮ ಹಾಗೆ ಇಟ್ಟಿದ್ದೇವೆ: ತಂಗಡಗಿ

    ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ, ಕುಂಕುಮ ಹಾಗೆ ಇಟ್ಟಿದ್ದೇವೆ: ತಂಗಡಗಿ

    – ಯತ್ನಾಳ್ ನಿಜವಾಗಿಯೂ ತಾಕತ್ತು ಇರುವ ಮನುಷ್ಯ

    ಕೊಪ್ಪಳ: ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ ಮತ್ತು ಕುಂಕುಮ ಹಾಗೆ ಇಟ್ಟಿದ್ದೇವೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಸಂಸದರು ಮತ್ತು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನೆಡಸಿದರು.

    ಕೊಪ್ಪಳದ ಕನಕಗಿರಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಇಂದು ಕಾಂಗ್ರೆಸ್ ಸದ್ಭಾವನ ಯಾತ್ರೆ ಆಯೋಜಿಸಲಾಗಿತ್ತು. ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದಿಂದ 14 ಕಿಮೀ ಪಾದಯಾತ್ರೆ ಮೂಲಕ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಕನಕಗಿರಿವರೆಗೆ ಪಾದಯಾತ್ರೆ ಮಾಡಿದರು.

    ಈ ವೇಳೆ ಕೆಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ತಂಗಡಗಿ ಬಿಜೆಪಿ ಪಕ್ಷದ ಸಂಸದರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ನೆರೆ ಸಂತ್ರಸ್ತರಿಗೆ ಕೊಡಬೇಕಾದ ಪರಿಹಾರ ಇನ್ನೂ ಪೂರ್ತಿಯಾಗಿ ಕೇಂದ್ರ ಕೊಟ್ಟಿಲ್ಲ. ತಂಗಡಗಿ ಸೀರೆ, ಕುಂಕಮ ಕಳಿಸ್ತಾರೆ ಅಂತಾನೆ ಕೇಂದ್ರ 1200 ಕೋಟಿ ಅನುದಾನ ನೀಡಲಾಗಿದೆ. ಇನ್ನೂಳಿದ ಪರಿಹಾರಕ್ಕಾಗಿ 15 ದಿನ ಗಡುವು ನೀಡುತ್ತೇವೆ. ಕೂಡಲೇ ಸರ್ಕಾರ ಎರಡನೇ ಹಂತದ ಅನುದಾನ ನೀಡಬೇಕು. ಇಲ್ಲಾಂದರೆ ಸೀರೆ, ಕುಂಕಮ ಫಿಕ್ಸ್ ಎಂದು ವಾಗ್ದಾಳಿ ನೆಡಸಿದರು.

    ಉಪಚುನಾವಣೆ ನಂತರ ಬಿಜೆಪಿ ಜೊತೆಗೆ ಬಿಎಸ್‍ವೈ ಸರ್ಕಾರ ಪತನವಾಗಲಿದೆ. ಕನಕಗಿರಿಯಲ್ಲಿ ಬಿಜೆಪಿ ಶಾಸಕ ಬಸವರಾಜ್ ದಡೇಸೂಗುರು ಗೆಲ್ಲುವಾಗ ಬಿಎಸ್‍ವೈ ಹೆಸರು ಹೇಳುತ್ತಿದ್ದರು. ಇವಾಗ ಯಡಿಯೂರಪ್ಪ ಗೆ ಬಿಜೆಪಿಯಲ್ಲಿ ಸಂಕಷ್ಟ ಇದೆ. ಬಸವರಾಜ್ ದಡೇಸೂಗುರು ಈ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಿ ಪಕ್ಷದಿಂದ ತೆಗೆದು ಹಾಕುತ್ತಾರೆ ಎಂದು ಬಿಜೆಪಿ ಶಾಸಕರಲ್ಲಿ ಭಯ ಕಾಡುತ್ತಿದೆ ಎಂದು ಹೇಳಿದರು.

    ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಾಕತ್ತಿನ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ನಿಜವಾದ ಕಾಳಜಿ ಬಿಜೆಪಿಯಲ್ಲಿ ಯತ್ನಾಳ್‍ಗಿದೆ. ಯತ್ನಾಳ್ ನಿಜವಾಗಿ ತಾಕತ್ತು ಇರುವ ಮನುಷ್ಯ. ನೆರೆ ಪರಿಹಾರ ಕೇಳಿದರೆ ಕೇಂದ್ರ ನೋಟಿಸ್ ಕೊಡುವ ಕೆಲಸ ಮಾಡುತ್ತಿದೆ. ಇಂತಹ ಸಾವಿರ ನೋಟಿಸ್ ಕೊಟ್ಟರು ಉ.ಕರ್ನಾಟಕ ಮಂದಿ ಜಗ್ಗಲ್ಲಾ ಎಂದು ಹೇಳಿ ಶಾಸಕ ಯತ್ನಾಳ್ ಪರ ತಂಗಡಗಿ ಬ್ಯಾಟಿಂಗ್ ಮಾಡಿದರು.

  • ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    – ಟ್ರೋಲ್ ಆದ ಹೇಮಾ ಮಾಲಿನಿ

    ನವದೆಹಲಿ: ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದೆ ಹೇಮಾ ಮಾಲಿನಿ ಸೇರಿದಂತೆ ಅನೇಕರು ಸಂಸತ್ ಆವರಣವನ್ನು ಸ್ವಚ್ಛಗೊಳಿಸಿದರು.

    ಸ್ವಚ್ಛ ಭಾರತ್ ಅಭಿಯಾನದ ನಿಮಿತ್ತ ಇಂದು ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಕೆಲ ಸಂಸದರು ಕಸ ಗುಡಿಸಿದರು. ಆದರೆ ಹೇಮಾ ಮಾಲಿನಿ ಅವರು ಕಸ ಗುಡಿಸಲು ಬಾರದೇ ಪೇಚಾಡಿದರು.

    ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ನಿಮಿತ್ತ ಸಂಸತ್ ಆವರಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸಲು ಸ್ಪೀಕರ್ ಅವರು ಅವಕಾಶ ನೀಡಿದ್ದು ಶ್ಲಾಘನೀಯ. ಮುಂದಿನ ವಾರ ನನ್ನ ಕ್ಷೇತ್ರವಾದ ಮಥುರಾಕ್ಕೆ ತೆರಳುತ್ತೇನೆ. ಅಲ್ಲಿಯೂ ಸ್ವಚ್ಛ ಭಾರತ್ ಅಭಿಯಾನ ಮಾಡುತ್ತೇನೆ ಎಂದು ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

    ಕಸ ಗುಡಿಸಲು ಪೇಚಾಡಿದ ಹೇಮಾ ಮಾಲಿನಿ ಅವರನ್ನು ನೆಟ್ಟಿಗರು ಕುಟುಕಿದ್ದಾರೆ. ‘ಹೇಮಾ ಜಿ, ಚಲನಚಿತ್ರಗಳಲ್ಲಿ ಮಾಡಿದ್ದಕ್ಕಿಂತ ಇಂದು ಸಂಸತ್ ಆವರಣದಲ್ಲಿ ಮಾಡಿದ ನಟನೆ ಚನ್ನಾಗಿದೆ ಎಂದು ವಿಕಾಸ್ ವಿಕ್ರಂ ತಿವಾರಿ ಎಂಬವರು ವ್ಯಂಗ್ಯವಾಡಿದ್ದಾರೆ.

    ಹೇಮಾ ಮಾಲಿನಿ ಅವರೇ ನೀವು ಪೊರಕೆಯನ್ನು ಹಿಡಿಯುವುದನ್ನು ಮೊದಲು ಕಲಿಯಬೇಕು. ನಿಮ್ಮ ಮನೆಯಲ್ಲಿ ಕೆಲಸ ಮಾಡುವ ನೌಕರರ ಜೊತೆಗೆ ನೀವು ಮೊದಲು ಕೈಗೂಡಿಸಿ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

  • ಮುಂದಿನ ಸಲ ಮೋದಿ ಹೆಸರು ಹೇಳಿದ್ರೆ ಬಾಯಲ್ಲಿ ಬೂಟು ಹಾಕ್ತೀವಿ: ಮುತಾಲಿಕ್

    ಮುಂದಿನ ಸಲ ಮೋದಿ ಹೆಸರು ಹೇಳಿದ್ರೆ ಬಾಯಲ್ಲಿ ಬೂಟು ಹಾಕ್ತೀವಿ: ಮುತಾಲಿಕ್

    ಕಲಬುರಗಿ: ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

    ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವಿ ಎಂದು ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಜುಲೈ 1ರಂದು ವಿರಾಟ್ ಹಿಂದೂ ಮಹಾಸಮಾವೇಶ ಕಾರ್ಯಕ್ರಮದಲ್ಲಿ ಮುತಾಲಿಕ್ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ ನೋಡಿ ಈ ಬಾರಿ ನಿಮಗೆ ವೋಟ್ ಹಾಕಿದ್ದೇವೆ. ಐದು ವರ್ಷ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೀವಿ ಎಂದು ವಾಗ್ದಾಳಿ ನಡೆಸಿದ್ದಾರೆ.