Tag: BJP MP Shobha Karandlaje

  • ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಕಣ್ಣೀರಿಟ್ಟ ಅಜ್ಜಿ

    ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಕಣ್ಣೀರಿಟ್ಟ ಅಜ್ಜಿ

    ಬೆಳಗಾವಿ: ಸಂಸದೆ ಶೋಭಾ ಕರಂದ್ಲಾಜೆ ಅವರು ನಗರದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ನೋವನ್ನು ಆಲಿಸಿದರು. ಹಾಗೆಯೇ ನಿಮ್ಮ ಬದುಕನ್ನು ಕಟ್ಟಿಕೊಡುವುದು ನಮ್ಮ ಜವಾಬ್ದಾರಿ. ಯಾರು ಹೆದರಬೇಡಿ ಧೈರ್ಯದಿಂದ ಇರಿ ಎಂದು ಭರವಸೆ ನೀಡಿದ್ದಾರೆ.

    ಖಾಸಬಾಗದ ಓಂ ನಗರದಲ್ಲಿರುವ ಸಾಯಿ ಹಾಲ್‍ನಲ್ಲಿ ನೂರಾರು ಪ್ರವಾಹಪೀಡಿತರು ಆಶ್ರಯ ಪಡೆದಿದ್ದಾರೆ. ಈ ಕೇಂದ್ರಕ್ಕೆ ಶೋಭಾ ಹಾಗೂ ಸ್ಥಳಿಯ ಶಾಸಕರಾದ ಅನೀಲ ಬೆನಕೆ ಹಾಗೂ ಅಭಯ ಪಾಟೀಲ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯ ಬಗ್ಗೆ ಆಲಿಸಿದರು. ಆಗ ಲಕ್ಣೀನಗರದ ನಾಗವ್ವಾ ಅವರು ಮಳೆಗೆ ತಮ್ಮ ಮನೆ ಬಿದ್ದು ನಾಶವಾಗಿರುವ ಬಗ್ಗೆ ಮಾಹಿತಿ ನೀಡಿ, ಪರಿಹಾರ ಕೊಡಿಸಿ ಎಂದು ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.

    ನಿರಾಶ್ರಿತರಿಗೆ ಧೈರ್ಯ ತುಂಬಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಯಾರು ಕೂಡ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿ ನಮ್ಮದು ಎಂದು ಸಂತ್ರಸ್ತರಿಗೆ ಸಂಸದೆ ಭರವಸೆ ಕೊಟ್ಟಿದ್ದಾರೆ.

    ಇಂದು ಧಾರವಾಡದಲ್ಲಿ ಮನೆ ಕಳೆದುಕೊಂಡವರಿಗೆ ನಾನೇ ಸ್ವತಃ ಸ್ಥಳಕ್ಕೆ ಭೇಟಿ ಕೊಟ್ಟು ಸರ್ಕಾರದ ವತಿಯಿಂದ ಪರಿಹಾರದ ಮೊದಲ ಕಂತಿನ 94 ಸಾವಿರ ಹಣ ವಿತರಿಸಿ ಬಂದಿದ್ದೇನೆ. ಅಲ್ಲದೆ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಬಸವ ವಸತಿ ಯೋಜನೆಯಡಿ ಹೊಸ ಮನೆ ನಿರ್ಮಿಸಿಕೊಡಲಾಗುವುದು. ಮಂಗಳವಾರದಿಂದಲೇ ಪರಿಹಾರ ಚೆಕ್ ವಿತರಣೆ ಮಾಡಲಾಗುತ್ತದೆ ಧೈರ್ಯದಿಂದ ಇರಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಿದ್ದಾರೆ.

  • ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ: ಸೂಲಿಬೆಲೆ ಹೇಳಿಕೆಗೆ ಕರಂದ್ಲಾಜೆ ಟಾಂಗ್

    ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ: ಸೂಲಿಬೆಲೆ ಹೇಳಿಕೆಗೆ ಕರಂದ್ಲಾಜೆ ಟಾಂಗ್

    – ವಿಫಲತೆ ಮುಚ್ಚಿಟ್ಟುಕೊಳ್ಳಲು ಮೋದಿ ಕಡೆ ತೋರಿಸ್ತಾರೆ
    – ಮಾಜಿ ಸಿಎಂಗೆ ಸಂಸದೆ ಟಾಂಗ್

    ನವದೆಹಲಿ: ಯಾರದೋ ಟೀಕೆಗೆ ನಾನು ಉತ್ತರ ಕೊಡುವುದಿಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವೆಲ್ಲ ಗೆದ್ದಿರುವುದು ಹೆಮ್ಮೆಯ ವಿಚಾರ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರತಿಕ್ರಿಯಿಸಿದ್ದಾರೆ.

    ಬಿಜೆಪಿ ಸಂಸದರ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಟೀಕೆ ವಿಚಾರವಾಗಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರದ ಅಭಿವೃದ್ಧಿ ಕೆಲಸಗಳು ನಮ್ಮೆಲ್ಲರನ್ನೂ ಗೆಲ್ಲಿಸಿದೆ. ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಾದ ಕೆಲಸಕ್ಕಿಂತ ಹೆಚ್ಚು ಬಿಜೆಪಿ 5 ವರ್ಷದಲ್ಲಿ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿಯೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ – ಸೂಲಿಬೆಲೆ

    ಹಿಂಜರಿಯುವ, ಅವಮಾನಕ್ಕೆ ಒಳಗಾಗುವ ಅಥವಾ ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ. ಯಾಕೆ ಟೀಕೆ ಮಾಡಿದ್ದಾರೆ ಅಂತ ಮಾಧ್ಯಮದವರು ಚಕ್ರವರ್ತಿ ಸೂಲಿಬೆಲೆ ಅವರನ್ನೇ ಕೇಳಬೇಕು ಎಂದು ಅಸಮಾಧಾನ ಹೊರಹಾಕಿದರು.

    ಇದೇ ವೇಳೆ, ಕೆಲಸ ನಮ್ಮದು ವೋಟು ಬಿಜೆಪಿಗೆ ಎಂಬ ಮಾಜಿ ಸಿಎಂ ಹೇಳಿಕೆ ವಿರುದ್ಧ ಗುಡುಗಿದ ಅವರು, ತಮ್ಮ ವಿಫಲತೆ ಮುಚ್ಚಿಟ್ಟುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ತೋರಿಸುತ್ತಿದ್ದಾರೆ. ರಾಜ್ಯದ ಜನರು ಅಭಿವೃದ್ಧಿ ವಿಚಾರಗಳ ಬಗ್ಗೆ ಕೇಳುತ್ತಿದ್ದಾರೆ. ಅವರಿಗೆ ಉತ್ತರ ನೀಡಲಾಗದೆ ಕೇಂದ್ರದ ಕಡೆ ಬೊಟ್ಟು ತೋರಿಸುತ್ತಿದ್ದಾರೆ. ನಿಮಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ. ಪ್ರಧಾನಿ ಮೋದಿ ಅವರಿಗೆ ಕರ್ನಾಟಕದಲ್ಲೂ ಆಡಳಿತ ನಡೆಸುವುದು ಗೊತ್ತು ಎಂದು ವಾಗ್ದಾಳಿ ನಡೆಸಿದರು.