Tag: BJP Modi

  • ಕಾಂಗ್ರೆಸ್ ನಲ್ಲಿ ಬರ್ತ್, ಡೆತ್ ಸರ್ಟಿಫಿಕೇಟಿದ್ದರೆ ಸಾಕು, ಪ್ರಧಾನಿಯಾಗ್ಬಹುದು- ನಟಿ ತಾರಾ

    ಕಾಂಗ್ರೆಸ್ ನಲ್ಲಿ ಬರ್ತ್, ಡೆತ್ ಸರ್ಟಿಫಿಕೇಟಿದ್ದರೆ ಸಾಕು, ಪ್ರಧಾನಿಯಾಗ್ಬಹುದು- ನಟಿ ತಾರಾ

    ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಡೆತ್ ಸರ್ಟಿಫಿಕೇಟ್, ಬರ್ತ್ ಸರ್ಟಿಫಿಕೇಟ್ ಇದ್ರೆ ಸಾಕು ಪ್ರಧಾನಿ, ಪಕ್ಷದ ಅಧ್ಯಕ್ಷ ಆಗಬಹುದು ಎಂದು ನಟಿ, ವಿಧಾನ ಪರೀಷತ್ ಸದಸ್ಯೆ ತಾರಾ ಹೇಳಿದ್ದಾರೆ.

    ಬೆಳಗಾವಿ ಮಿಲೇನಿಯಮ್ ಗಾರ್ಡನ್ ನಲ್ಲಿ ಎಬಿವಿಪಿ ಏರ್ಪಡಿಸಿದ್ದ ರಂಗ್‍ದೇ ಬಸಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹೇಳಿಕೆ ನೀಡಿದ್ದಾರೆ. ನೆಹರು ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ನಂತರ ಇಂದಿರಾ ಗಾಂಧಿಯಿಂದ ಡೆತ್ ಸರ್ಟಿಫಿಕೇಟ್ ಪಡೆದು ರಾಜೀವ್ ಗಾಂಧಿ ಸಹ ಪ್ರಧಾನಿಯಾಗಿದ್ದರು. ರಾಜೀವ್ ಗಾಂಧಿಯ ಡೆತ್ ಸರ್ಟಿಫಿಕೇಟ್ ಪಡೆದು ಸೊನಿಯಾ ಗಾಂಧಿ ಸಹ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದೀಗ ಸೋನಿಯಾ ಗಾಂಧಿಯಿಂದ ಬರ್ತ್ ಸರ್ಟಿಫಿಕೇಟ್ ಪಡೆದ ರಾಹುಲ್ ಸಹ ಎಐಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಅಂದ್ರು.

    ಆದರೆ ಈ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿ ಇಲ್ಲ. ಇಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶದ ಪ್ರಧಾನಿ ಆಗಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಧರ್ಮ ಒಡೆಯುವ ಸಂಸ್ಕೃತಿ ಆರಂಭವಾಗಿದ್ದು, ಇದರ ವಿರುದ್ಧ ಎಬಿವಿಪಿ ಜಾಗೃತಿ ಮೂಡುವ ಅವಶ್ಯಕತೆ ಇದೆ ಎಂದು ತಾರಾ ಕರೆ ನೀಡಿದ್ರು.

  • 22 ವರ್ಷಗಳನ್ನು ಆಳಿದ ಬಿಜೆಪಿ ಸರ್ಕಾರ ಸಾಧನೆ ಏನು: ರಾಹುಲ್ ಗಾಂಧಿ ಪ್ರಶ್ನೆ

    ಅಹಮದಾಬಾದ್: ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನತೆಗೆ ನೀಡಿರುವ ಭರವಸೆಗಳ ಬಗ್ಗೆ ಉತ್ತರ ನೀಡಬೇಕಿದೆ ಎಂದು ರಾಹುಲ್ ಗಾಂಧಿ ಆಗ್ರಹಿಸುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ನಂತರ ವಿಸಾವದರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಿಜೆಪಿ ಸರ್ಕಾರದ ಸಾಧನೆಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಈ ಬಾರಿ ಗುಜರಾತ್ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ ದಿನಕ್ಕೆ ಒಂದು ಪ್ರಶ್ನೆ ಕೇಳುವುದಾಗಿ ಹೇಳಿದ್ದು, ಇಂದು ಜನತೆಗೆ ಸರ್ಕಾರ ನೀಡಿದ ಮನೆ ನಿರ್ಮಿಸಿಕೊಡುವ ಯೋಜನೆ ಕುರಿತು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರು ಗುಜರಾತಿನ ಜನತೆಗೆ 2012 ರಲ್ಲಿ 50 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ 5 ವರ್ಷಗಳ ಆಡಳಿತ ಅವಧಿಯಲ್ಲಿ ಕೇವಲ 4.72 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಂತೆ ಪ್ರಧಾನಿಗಳ ಭರವಸೆ ಈಡೇರಿಸಲು 45 ವರ್ಷಗಳು ಬೇಕಾಗುತ್ತದೆ ಎಂದು ಹೇಳಿ ವ್ಯಂಗ್ಯವಾಡಿದರು.

    ರಾಹುಲ್ ಗಾಂಧಿ ಅವರು 2 ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದು, ಎರಡು ದಿನಗಳ ಪ್ರಚಾರ ಅವಧಿಯಲ್ಲಿ ರಾಹುಲ್ ಗಾಂಧಿ ಗುಜರಾತ್‍ನ ಪ್ರಮುಖ ಮೂರು ಜಿಲ್ಲೆಗಳ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.