Tag: BJP Manifesto

  • Delhi Poll | ಗರ್ಭಿಣಿಯರಿಗೆ 21,000 ರೂ., ಪ್ರತಿ ಮಹಿಳೆಗೆ 2,500 ರೂ., 500 ರೂ.ಗೆ ಗ್ಯಾಸ್‌ ಸಿಲಿಂಡರ್‌ – ಬಿಜೆಪಿ ʻಸಂಕಲ್ಪ ಪತ್ರʼ ಬಿಡುಗಡೆ

    Delhi Poll | ಗರ್ಭಿಣಿಯರಿಗೆ 21,000 ರೂ., ಪ್ರತಿ ಮಹಿಳೆಗೆ 2,500 ರೂ., 500 ರೂ.ಗೆ ಗ್ಯಾಸ್‌ ಸಿಲಿಂಡರ್‌ – ಬಿಜೆಪಿ ʻಸಂಕಲ್ಪ ಪತ್ರʼ ಬಿಡುಗಡೆ

    ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗಾಗಿ ʻಸಂಕಲ್ಪ ಪತ್ರʼ (ಪ್ರಣಾಳಿಕೆ) ಬಿಡುಗಡೆ ಮಾಡಿರುವ ಬಿಜೆಪಿ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ.

    ಫೆ.5ರಂದು ನಡೆಯಲಿರುವ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವರೂ ಆಗಿರುವ ಪಕ್ಷದ ರಾಷ್ಟ್ರೀಯ ಜೆ.ಪಿ ನಡ್ಡಾ ಅವರು ಸಂಕಲ್ಪ ಪತ್ರ ಬಿಡುಗಡೆಗೊಳಿಸಿದರು. ಅಲ್ಲದೇ ಆಡಳಿತಾರೂಢ ಆಪ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಲೇ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭರವಸೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದರು. ಇದನ್ನೂ ಓದಿ: 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ – ದೆಹಲಿ ಚುನಾವಣೆಗೆ `ಕೈ’ ಗ್ಯಾರಂಟಿ

    ಮಹಿಳೆಯರಿಗೆ 6 ಪೌಷ್ಠಿಕಾಂಶ ಕಿಟ್‌ಗಳು, ಗರ್ಭಿಣಿಯರಿಗೆ 21,000 ರೂ. ನೀಡಲಾಗುವುದು. ಅಲ್ಲದೇ ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೆರವು, 500 ರೂ. ಗೆ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಘೋಷಿಸಿದರು. ಇದರೊಂದಿಗೆ 60-70 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ 2,500 ರೂ. ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಸಿಕ 3,000 ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

    ಅಲ್ಲದೇ ಪಕ್ಷ ಅಧಿಕಾರಕ್ಕೆ ಬಂದರೆ, ಮೊದಲ ಸಂಪುಟ ಸಭೆಯಲ್ಲೇ ಆಯುಷ್‌ಮಾನ್‌ ಭಾರತ್ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗುವುದು ಜೊತೆಗೆ ಹೆಚ್ಚುವರಿಯಾಗಿ ಆರೋಗ್ಯ ರಕ್ಷಣೆಗಾಗಿ 5 ಲಕ್ಷ ರೂ. ನೀಡಲಾಗುವುದು. 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ನೀಡುವ ಜೊತೆಗೆ ಹೋಳಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ 1 ಉಚಿತ ಸಿಲಿಂಡ‌ರ್ ನೀಡಲಾಗುವುದು ಎಂದು ಗ್ಯಾರಂಟಿ ನೀಡಿದರು.

    ಇದೇ ವೇಳೆ ಆಪ್‌ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ನಡ್ಡಾ, ಬಿಜೆಪಿಯ ಪ್ರಣಾಳಿಕೆ ದೆಹಲಿಯ ಅಭಿವೃದ್ಧಿಗೆ ಅಡಿಪಾಯ ಎಂದು ಬಣ್ಣಿಸಿದರು. ಇದನ್ನೂ ಓದಿ: ಕುಂಭಮೇಳದಲ್ಲಿ ಪಾಲ್ಗೊಳ್ಳಲು 50 ವರ್ಷದ ವ್ಯಕ್ತಿಯಿಂದ ಸೈಕಲ್‌ನಲ್ಲಿ 1,100 ಕಿಮೀ ಪ್ರಯಾಣ

  • 25 ಲಕ್ಷ ಉದ್ಯೋಗಾವಕಾಶ, 1 ಟ್ರಿಲಿಯನ್ ಡಾಲರ್‌ ಆರ್ಥಿಕ ಗುರಿ, ಉದ್ಯಮಿಗಳಿಗೆ ಬೆಂಬಲ – ಮಹಾರಾಷ್ಟ್ರಕ್ಕೆ ಬಿಜೆಪಿ 25 ಗ್ಯಾರಂಟಿ

    25 ಲಕ್ಷ ಉದ್ಯೋಗಾವಕಾಶ, 1 ಟ್ರಿಲಿಯನ್ ಡಾಲರ್‌ ಆರ್ಥಿಕ ಗುರಿ, ಉದ್ಯಮಿಗಳಿಗೆ ಬೆಂಬಲ – ಮಹಾರಾಷ್ಟ್ರಕ್ಕೆ ಬಿಜೆಪಿ 25 ಗ್ಯಾರಂಟಿ

    ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Assembly Election) ಹಿನ್ನೆಲೆ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಪ್ರಣಾಳಿಕೆ (Manifesto) ಬಿಡುಗಡೆ ಮಾಡಿದ್ದು, 25 ಭರವಸೆಗಳನ್ನು ನೀಡಿದೆ.

    ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah), ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಸೇರಿದಂತೆ ಪಕ್ಷದ ಹಿರಿಯ ನಾಯಕರು ʻಸಂಕಲ್ಪ ಪತ್ರʼ ಬಿಡುಗಡೆಗೊಳಿಸಿದರು. ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದರು. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ಏನೇನು ಭರವಸೆ?
    ಮುಂದಿನ 5 ವರ್ಷಗಳಲ್ಲಿ ರಾಜ್ಯದ ಯುವಜನತೆಗೆ 25 ಲಕ್ಷ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಅಲ್ಲದೇ ರೈತರ ಸಾಲ ಮನ್ನಾ ಜೊತೆಗೆ ʻಲಡ್ಕಿ ಬೆಹನ್ʼ ಯೋಜನಾ ಭತ್ಯೆಯನ್ನು 1,500 ರಿಂದ 2,100ಕ್ಕೆ ಹೆಚ್ಚಿಸುವುದು ಸೇರಿದಂತೆ 25 ಭರವಸೆಗಳನ್ನು ಈಡೇರಿಸುವುದಾಗಿ ಮೈತ್ರಿಕೂಟವು ಪ್ರತಿಜ್ಞೆ ಮಾಡಿದೆ. ಮುಖ್ಯವಾಗಿ ʻಮಿಷನ್‌ ಒಲಿಂಪಿಕ್ಸ್‌ 36ʼ ನಮ್ಮ ಗುರಿ. ಅಲ್ಲದೇ 1 ಟ್ರೆಲಿಯನ್‌ ಡಾಲರ್‌ ಆರ್ಥಿಕತೆಯ ಗುರಿ ಸಾಧಿಸುವುದು, ನಾಗ್ಪುರ, ಪುಣೆ, ನಾಸಿಕ್‌ನಂತರ ನಗರಗಳನ್ನು ಏರೋಸ್ಪೇಸ್‌ ಹಬ್‌ ಮಾಡುವುದು, 50 ಲಕ್ಷ ಮಹಿಳೆಯರನ್ನು ಲಖ್ಪತಿ ದೀದಿಗಳನ್ನಾಗಿ ಮಾಡುವುದು, ಸರ್ಕಾರಿ ಶಾಲೆಗಳಲ್ಲಿ AI ತರಬೇತಿ, ಕೌಶಲ್ಯ ಗಣತಿ, ಉದ್ಯಮಿಗಳಿಗೆ ಬೆಂಬಲ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವುದು ನಮ್ಮ ಗುರಿ. ಈ‌ ಭರವಸೆಗಳನ್ನು ಸರ್ಕಾರ ರಚನೆಯಾದ 100 ದಿನಗಳಲ್ಲಿ ಈಡೇರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

    ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅಮಿತ್‌ ಶಾ, ಬಿಜೆಪಿ ಪ್ರಣಾಳಿಕೆಯು ಮಹಾರಾಷ್ಟ್ರದ ಜನತೆಯ ಆಕಾಂಕ್ಷೆಗಳ ನಿಜವಾದ ಪ್ರತಿಬಿಂಬವಾಗಿದೆ. ಮಹಾರಾಷ್ಟ್ರ ಸಾಮಾಜಿಕ ಸುಧಾರಣೆಗೆ ದಾರಿ ಮಾಡಿಕೊಟ್ಟಿದೆ. ಈ ರಾಜ್ಯದ ಆಕಾಂಕ್ಷೆಗಳು ಪ್ರಣಾಳಿಕೆಯಲ್ಲಿ ಪ್ರತಿಫಲಿಸುತ್ತದೆ. ಛತ್ರಪತಿ ಶಿವಾಜಿ ಮಹರಾಜ್‌ ಕೂಡ ಇಲ್ಲಿಯೇ ತಮ್ಮ ಪ್ರಯಾಣ ಆರಂಭಿಸಿದರು ಎಂದು ಸ್ಮರಿಸಿದ್ದಾರೆ.

    ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿ, ಮಹಾರಾಷ್ಟ್ರದ ಜನತೆ ಬಿಜೆಪಿ, ಮಹಾಯುತಿ ಮೈತ್ರಿಯನ್ನು ನಂಬುತ್ತಾರೆ. ನಾವು ಘೋಷಣೆ ಮಾಡಿರುವ 25 ಪ್ರಮುಖ ಭರವಸೆಗಳಲ್ಲಿ ʻಲಡ್ಕಿ ಬೆಹೆನ್ʼ, ಕೃಷಿ ಸಾಲ ಮನ್ನಾ ಯೋಜನೆಗಳೂ ಸೇರಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

    ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಇದೇ ನವೆಂಬರ್‌ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಪೆರೋಲ್ ಮೇಲೆ ಹೊರಬಂದಿದ್ದ ಕೊಲೆ ಅಪರಾಧಿಗೆ ಗುಂಡಿಕ್ಕಿ ಹತ್ಯೆ – ಗ್ಯಾಂಗ್‌ಸ್ಟರ್‌ ಅರ್ಷದೀಪ್ ಸಹಚರರ ಬಂಧನ

  • ಮಹಿಳೆಯರಿಗೆ 2,100 ರೂ., ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ – ಜಾರ್ಖಂಡ್‌ ಚುನಾವಣೆಗೆ ಬಿಜೆಪಿ ಗ್ಯಾರಂಟಿ

    ಮಹಿಳೆಯರಿಗೆ 2,100 ರೂ., ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ – ಜಾರ್ಖಂಡ್‌ ಚುನಾವಣೆಗೆ ಬಿಜೆಪಿ ಗ್ಯಾರಂಟಿ

    ರಾಂಚಿ: ಮುಂಬರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು (BJP Manifesto) ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಭಾನುವಾರ ಬಿಡುಗಡೆಗೊಳಿಸಿದರು.

    ಬಿಜೆಪಿ ಜಾರ್ಖಂಡ್‌ನಲ್ಲಿ (Jharkhand) ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 2,100 ರೂ. ನೀಡುವುದು ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಇದನ್ನೂ ಓದಿ: 10 ದಿನಗಳಲ್ಲಿ ರಾಜೀನಾಮೆ ಕೊಡದಿದ್ರೆ ಸಿದ್ದಿಕಿಯಂತೆ ಹತ್ಯೆ – ಸಿಎಂ ಯೋಗಿಗೆ ಬೆದರಿಕೆ ಹಾಕಿದ್ದ ಮಹಿಳೆ ಅರೆಸ್ಟ್

    ಬಿಜೆಪಿ ಪ್ರಣಾಳಿಕೆ ಏನು?
    * ಪ್ರತಿ ಮನೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಮತ್ತು ವಾರ್ಷಿಕ 2 ಉಚಿತ ಸಿಲಿಂಡರ್‌

    * ನುಸುಳುಕೋರರು ಆಕ್ರಮಿಸಿಕೊಂಡಿರುವ ಆದಿವಾಸಿಗಳ ಭೂಮಿಯನ್ನು ಆದಿವಾಸಿಗಳಿಗೆ ಹಿಂದಿರುಗಿಸುವುದಾಗಿ ಪ್ರತಿಜ್ಞೆ

    * ಬುಡಕಟ್ಟು ಜನಾಂಗದವರನ್ನು ಮದುವೆಯಾಗುವ ನುಸುಳುಕೋರರ ಮಕ್ಕಳಿಗೆ ಬುಡಕಟ್ಟು ಸ್ಥಾನಮಾನ ರದ್ದು

    * ಆದಿವಾಸಿಗಳನ್ನು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವ್ಯಾಪ್ತಿಯಿಂದ ಹೊರಗಿಡಲಾಗುವುದು

    * ಪ್ರಶ್ನೆ ಪತ್ರಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ

    * 5 ವರ್ಷಗಳಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ಅವಕಾಶಗಳನ್ನು ಖಾತರಿಪಡಿಸುತ್ತೇವೆ

    * 2,87,500 ಸರ್ಕಾರಿ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆಯಲಿದ್ದು, ಮೊದಲ ಕ್ಯಾಬಿನೆಟ್‌ನಲ್ಲೇ ಪ್ರಕ್ರಿಯೆ ಶುರುವಾಗಲಿದೆ.

    * 2025ರ ನವೆಂಬರ್‌ ಒಳಗೆ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

    81 ಸದಸ್ಯ ಬಲದ ಕ್ಷೇತ್ರಗಳಿಗೆ ನ.13 ಮತ್ತು 20 ರಂದು ಚುನಾವಣೆ (Jharkhand Assembly Election) ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್‌ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್‌

  • 10 ವರ್ಷಗಳಲ್ಲಿ ಬಿಜೆಪಿಗರು ಕೊಟ್ಟ ಭರವಸೆ ಈಡೇರಿಸಿದ್ದಾರಾ? – ಬಿಜೆಪಿ ಪ್ರಣಾಳಿಕೆಗೆ ಸಿಎಂ ವ್ಯಂಗ್ಯ

    10 ವರ್ಷಗಳಲ್ಲಿ ಬಿಜೆಪಿಗರು ಕೊಟ್ಟ ಭರವಸೆ ಈಡೇರಿಸಿದ್ದಾರಾ? – ಬಿಜೆಪಿ ಪ್ರಣಾಳಿಕೆಗೆ ಸಿಎಂ ವ್ಯಂಗ್ಯ

    – ಹೆಚ್‍ಡಿಕೆ ಹೆಣ್ಣುಮಕ್ಕಳ ಬಗ್ಗೆ ಹೀಗೆ ಮಾತಾಡಿದ್ರೆ ಹೇಗೆ?

    ಮಡಿಕೇರಿ: ಈಗ ಕೊಟ್ಟಿರುವ ಭರವಸೆಗಳಿರಲಿ, 10 ವರ್ಷಗಳಿಂದ ಕೊಟ್ಟಿರುವ ಭರವಸೆಗಳನ್ನು ಈಡೇರಿಸಿದ್ದಾರಾ? ಅವುಗಳ ಬಗ್ಗೆ ಚರ್ಚೆಯಾಗಬೇಕಾಗಿದೆ ಎಂದು ಬಿಜೆಪಿ ಪ್ರಣಾಳಿಕೆ (BJP manifesto) ವಿಚಾರವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ವ್ಯಂಗ್ಯವಾಡಿದ್ದಾರೆ.

    ಕೊಡಗಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಸಿದ್ದಾರಾ? ಮೇಕ್ ಇನ್ ಇಂಡಿಯಾ ಮಾಡುತ್ತೇವೆ ಎಂದಿದ್ದರು. ಮೇಕ್ ಇನ್ ಇಂಡಿಯಾ ಮಾಡಿದ್ದಾರಾ? ಅಚ್ಛೇದಿನ್ ಆಯೇಗಾ ಎಂದಿದ್ದರು, ಅಚ್ಛೇದಿನ್ ಬಂತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್

    ಎಲ್ಲಾ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಿದೆಯೇ? 2018 ರಲ್ಲಿಯೂ ಬಿಜೆಪಿ ಹಲವು ಭರವಸೆಗಳನ್ನು ನೀಡಿತ್ತು. ಅದರಲ್ಲಿ ಎಷ್ಟೋ ಭರವಸೆಗಳು ಇನ್ನೂ ಈಡೇರಿಸಿಲ್ಲ. ಬಿಜೆಪಿ ಯಾವತ್ತೂ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಈಗಲೂ ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲ್ಲ. 25 ಕೋಟಿ ಉದ್ಯೋಗ ಸೃಷ್ಟಿಸಿದ್ದೇವೆ ಎನ್ನುತ್ತಾರೆ. ನಿಮಗೆ ಉದ್ಯೋಗ ಸಿಕ್ಕಿದೆಯಾ ಎಂದು ಯುವಕರನ್ನು ಪ್ರಶ್ನಿಸಿ, ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

    ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಮಾಜಿ ಸಿಎಂ ಹೆಚ್‍ಡಿಕೆ (H.D Kumaraswamy) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದಾರಿತಪ್ಪಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಹೆಣ್ಣುಮಕ್ಕಳ ಬಗ್ಗೆ ಹೀಗೆ ಮಾತನಾಡಿದರೆ ಹೇಗೆ? ಹೆಣ್ಣುಮಕ್ಕಳು ಇದನ್ನು ಸಹಿಸಿಕೊಳ್ಳುತ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ.

    ಬೆಲೆ ಹೆಚ್ಚಳ ಮಾಡಿ ಗ್ಯಾರಂಟಿ ಯೋಜನೆ ಮಾಡಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆ ವಿಚಾರವಾಗಿ, ಮದ್ಯ ಹಾಗೂ ಸ್ಟಾಂಪ್ ಡ್ಯೂಟಿ ದರ ಹೆಚ್ಚಳದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತೆ ಎಂದು ವಿಜಯೇಂದ್ರಗೆ ಗೊತ್ತಾ? ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 58 ಸಾವಿರ ಕೋಟಿ ರೂ. ಬೇಕು. ದರ ಹೆಚ್ಚಳದಿಂದ ಸರ್ಕಾರಕ್ಕೆ ಇಷ್ಟು ಆದಾಯ ಬರುತ್ತಾ? ಸುಮ್ಮನೇ ಏನೋ ಹೇಳಬೇಕು ಎಂದು ಹೇಳುವುದಲ್ಲ ಎಂದು ವಿಜಯೇಂದ್ರಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: 3 ಕೋಟಿ ಬಡವರಿಗೆ ಮನೆ, ದೇಶದ 4 ದಿಕ್ಕುಗಳಿಗೂ ಬುಲೆಟ್‌ ಟ್ರೈನ್‌: ಮೋದಿ ಗ್ಯಾರಂಟಿ

  • 3 ಕೋಟಿ ಬಡವರಿಗೆ ಮನೆ, ದೇಶದ 4 ದಿಕ್ಕುಗಳಿಗೂ ಬುಲೆಟ್‌ ಟ್ರೈನ್‌: ಮೋದಿ ಗ್ಯಾರಂಟಿ

    3 ಕೋಟಿ ಬಡವರಿಗೆ ಮನೆ, ದೇಶದ 4 ದಿಕ್ಕುಗಳಿಗೂ ಬುಲೆಟ್‌ ಟ್ರೈನ್‌: ಮೋದಿ ಗ್ಯಾರಂಟಿ

    * ತೃತೀಯಲಿಂಗಿಗಳಿಗೂ ಆಯುಷ್ಮಾನ್‌ ಭಾರತ್‌ ಯೋಜನೆ ವಿಸ್ತರಣೆ
    * ದಿವ್ಯಾಂಗರಿಗೆ ವಿಶೇಷ ಮನೆಗಳ ನಿರ್ಮಾಣ

    ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ʻಸಂಕಲ್ಪ ಪತ್ರʼ (Sankalp Patra) ಹೆಸರಿನಲ್ಲಿ ಬಹುನಿರೀಕ್ಷಿತ ಪ್ರಣಾಳಿಕೆ ಬಿಡುಗಡೆ ಮಾಡಿದೆ. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿಂದು ಪ್ರಧಾನಿ ಮೋದಿ ಪ್ರಣಾಳಿಕೆ (BJP Manifesto) ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಜೆ.ಪಿ ನಡ್ಡಾ, ರಾಜನಾಥ್‌ ಸಿಂಗ್‌ ವೇದಿಕೆಯಲ್ಲಿದ್ದರು.

    ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ (PM Modi), ಇಂದು ಅತ್ಯಂತ ಪವಿತ್ರವಾದ ದಿನ, ದೇಶದ ಹಲವು ರಾಜ್ಯಗಳು ವಿವಿಧ ರೀತಿಯಲ್ಲಿ ಹೊಸವರ್ಷವನ್ನು ಆಚರಿಸುತ್ತಿವೆ. ಇಂದು ಅಂಬೇಡ್ಕರ್‌ ಅವರ ಜಯಂತಿಯ ದಿನವೂ ಆಗಿದೆ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: 70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?

    ಇಡೀ ದೇಶ ಈ ಪ್ರಣಾಳಿಕೆಗಾಗಿ ಕಾಯುತ್ತಿದೆ. ಕಳೆದ 10 ವರ್ಷದಲ್ಲಿ ನೀಡಿದ ಎಲ್ಲ ಭರವಸೆ ಗ್ಯಾರಂಟಿ (Modi Guarantee) ರೂಪದಲ್ಲಿ ತಳಮಟ್ಟದಿಂದ ಜಾರಿ ಮಾಡಿದೆ. ಈ ಬಾರಿ ಯುವಶಕ್ತಿ, ನಾರಿಶಕ್ತಿ, ಬಡವರು ಮತ್ತು ರೈತರಿಗೆ ನಮ್ಮ ಪ್ರಣಾಳಿಕೆ ಶಕ್ತಿ ತುಂಬಲಿದೆ. ಗೌರವಯುತ ಜೀವನ, ಗುಣಮಟ್ಟದ ಜೀವನ, ಅವಕಾಶಗಳ ಸೃಷ್ಟಿ ಮಾಡುವ ಬಗ್ಗೆ ನನ್ನ `ಸಂಕಲ್ಪ’ ಇದೆ. ಮೂಲಸೌಕರ್ಯಗಳ ಅಭಿವೃದ್ಧಿ ಮೂಲಕ ಉದ್ಯೋಗ ಹೆಚ್ಚಿಸುವ ಗುರಿ ಹೊಂದಿದೆ. ಸ್ಟಾರ್ಟ್ಅಪ್‌ಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಯುವ ಜನರಿಗೆ ಹೆಚ್ಚು ಅವಕಾಶ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆ ಮುಂದಿನ 5 ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಗ್ಯಾರಂಟಿ ನೀಡಿದ್ದಾರೆ.

    75 ವರ್ಷ ಮೇಲ್ಪಟ್ಟವರು, ತೃತೀಯ ಲಿಂಗಿಗಳು ʻಆಯುಷ್ಮಾನ್‌ ಭಾರತ್‌ʼ ವ್ಯಾಪ್ತಿಗೆ:
    ಇತ್ತೀಚಿನ ದಿನಗಳಲ್ಲಿ ವೃದ್ಧರು ತಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದು ದೊಡ್ಡ ಚಿಂತೆಯಾಗಿದೆ. ಮಧ್ಯಮ ವರ್ಗದ ಜನರಿಗೆ ಇದು ಇನ್ನೂ ಗಂಭೀರ ಚಿಂತನೆಯಾಗಿದೆ. ಹಾಗಾಗಿ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರನ್ನೂ ಆಯುಷ್ಮಾನ್‌ ಭಾರತ್‌ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಈ ಮೂಲಕ 5 ಲಕ್ಷ ರೂ. ರೈ.ವೆರೆಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಅಲ್ಲದೇ ತೃತೀಯ ಲಿಂಗಿಗಳನ್ನೂ ಆಯುಷ್ಮಾನ್‌ ಭಾರತ್‌ ಯೋಜನೆ ವ್ಯಾಪ್ತಿಯಲ್ಲಿ ತರಲು ನಿರ್ಧರಿಸಿದೆ. ಇದರೊಂದಿಗೆ ಜನೌಷಧಿ ಕೇಂದ್ರದಲ್ಲಿ ಮೆಡಿಸನ್‌ಗಳಿಗೆ 80% ರಿಯಾಯಿತಿ ಸಿಗಲಿದೆ ಎಂದಿದ್ದಾರೆ.

    ಮೋದಿ ಭಾಷಣದ ಮುಖ್ಯಾಂಶಗಳು:
    * `ನಾರಿ ಶಕ್ತಿ’ ಯೋಜನೆಯಲ್ಲಿ ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ತರಬೇತಿ. `ನಮೋ ಡ್ರೋನ್’ ಅಡಿ 3 ಕೋಟಿ ಮಹಿಳೆಯರನ್ನು `ಲಕ್ ಪತಿ’ ದೀದಿ ಮಾಡುವ ಗುರಿ. ಮಹಿಳಾ ಕ್ರೀಡಾಪಟುಗಳಿಗೆ ವಿಶೇಷ ಯೋಜನೆ, ಮಹಿಳೆಯರಲ್ಲಿ ಉಂಟಾಗುವ ರೋಗಗಳ ಬಗ್ಗೆ ವಿಶೇಷ ಅಭಿಯಾನ, ಕಿಸಾನ್ ಕಾರ್ಡ್ ಯೋಜನೆ ವಿಸ್ತರಣೆ, `ಪಿಎಂ ಶ್ರೀಅನ್ನ’ ಯೋಜನೆಗೆ ಹೆಚ್ಚಿನ ಒತ್ತು.

    * ದೇಶಾದ್ಯಂತ ಸಂಚರಿಸುತ್ತಿರುವ ಒಂದೇ ಭಾರತ್ ಇನ್ಮುಂದೆ ಸ್ಲೀಪರ್, ಚೇರ ಕಾರ್ ಮತ್ತು ಮೆಟ್ರೋ ಮೂರು ಆಯಾಮದಲ್ಲಿ ಸಂಚಾರ ಮಾಡಲಿದೆ. ಬುಲೆಟ್ ಟ್ರೈನ್ ಕೆಲಸ ಅಂತ್ಯಕ್ಕೆ ಬಂದಿದೆ. ದಕ್ಷಿಣ ಭಾರತಕ್ಕೆ ಬುಲೆಟ್ ಟ್ರೈನ್‌ ಸಮೀಕ್ಷೆ ಶೀಘ್ರದಲ್ಲೇ ಶುರುವಾಗಲಿದ್ದು, ಉತ್ತರ, ದಕ್ಷಿಣ ಮತ್ತು ಈಶಾನ್ಯ ಭಾಗದಲ್ಲಿ ಬುಲೆಟ್ ಟ್ರೈನ್ ಕಾರ್ಯ ಆರಂಭಿಸಲಾಗುವುದು. ಒಂದೇ ಭಾರತ್ ಮೆಟ್ರೋ ಸಹ ಶುರುವಾಗಲಿದೆ. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    * ಇನ್ನೂ ಗ್ರೀನ್ ಎನರ್ಜಿಗೆ ಆದ್ಯತೆ ನೀಡಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸಲಿದೆ. ಕಳೆದ ವರ್ಷ 17 ಲಕ್ಷ ವಾಹನ ಮಾರಾಟವಾಗಿದೆ. ಪ್ರತಿ ವರ್ಷ 5 ಸಾವಿರ ಕಿಮೀ ರೈಲ್ವೇ ಹಳಿ ಸಂಪರ್ಕ ವಿಸ್ತರಣೆ ಮಾಡಲಾಗಿದೆ. ರೈಲು ಅಪಘಾತ ತಪ್ಪಿಸಲು `ಕವಚ’ ಸಿಸ್ಟಮ್ ವಿಸ್ತರಣೆ ಮಾಡಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣಗಳನ್ನ ನಿರ್ಮಾಣ ಮಾಡಲಾಗಿದೆ.

    * ನಮ್ಮ ಸರ್ಕಾರ ದೇಶಾದ್ಯಂತ 25 ಕೋಟಿ ಜನರನ್ನು ಬಡತನದಿಂದ ಹೊರ ತಂದಿದೆ. ಇಲ್ಲಿಗೆ ಕೆಲಸ ಮುಗಿದಿಲ್ಲ, ಬಡತನದಿಂದ ಹೊರ ಬಂದ ಜನರನ್ನ ಇನ್ನೂ ಮುಂದೆತರುವ ಅನಿವಾರ್ಯತೆ ಇದೆ. ಅದಕ್ಕಾಗಿ `ಗರೀಬ್ ಕಲ್ಯಾಣ್’ ಯೋಜನೆಗಳನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಿಸಲಿದೆ.

    * ದೇಶಾದ್ಯಂತ 4 ಕೋಟಿ ಮನೆ ಬಡವರಿಗೆ ಕಟ್ಟಿಕೊಡಲಾಗಿದೆ. ಇನ್ನೂ 3 ಕೋಟಿ ಮನೆಗಳನ್ನು ಕಟ್ಟಿ ಕೊಡಲಾಗುವುದು. ಅಂಗವಿಕಲರಿಗೂ ವಿಶೇಷ ಮನೆ ವ್ಯವಸ್ಥೆ ಮಾಡಲಾಗುವುದು. ಕಡಿಮೆ ಬೆಲೆಯಲ್ಲಿ ಸಿಲಿಂಡರ್ ನೀಡಲಾಗಿತ್ತು. ಇನ್ಮುಂದೆ ಪೈಪ್‌ಲೈನ್ ಮೂಲಕ ಗ್ಯಾಸ್ ನೀಡುವ ಯೋಜನೆ ಜಾರಿಗೆ ತರಲಾಗುವುದು. ಮುದ್ರಾ ಯೋಜನೆಯಡಿ ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ. ಅಲ್ಲದೇ ಈ ಯೋಜನೆಯಡಿ 10 ಲಕ್ಞ ರೂ.ವರೆಗೆ ಪಡೆಯುತ್ತಿದ್ದ ಸಾಲದ ಪ್ರಮಾಣವನ್ನು 20 ಲಕ್ಷ ರೂ. ವರೆಗೆ ಹೆಚ್ಚಿಸಲಾಗುವುದು.

  • ಬಿಜೆಪಿ‌ ಪ್ರಣಾಳಿಕೆ ಬಿಡುಗಡೆ ದಿನವೇ ತಮ್ಮ ಪ್ರಣಾಳಿಕೆ ಘೋಷಿಸಿದ ಈಶ್ವರಪ್ಪ

    ಬಿಜೆಪಿ‌ ಪ್ರಣಾಳಿಕೆ ಬಿಡುಗಡೆ ದಿನವೇ ತಮ್ಮ ಪ್ರಣಾಳಿಕೆ ಘೋಷಿಸಿದ ಈಶ್ವರಪ್ಪ

    – ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ಪ್ರಣಾಳಿಕೆ (BJP Manifesto) ಬಿಡುಗಡೆ ದಿನವೇ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ (K.S.Eshwarappa) ತಮ್ಮ ಪ್ರಣಾಳಿಕೆಯನ್ನೂ ಪ್ರಕಟಿಸಿದ್ದಾರೆ.

    ಪ್ರಣಾಳಿಕೆ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಈಶ್ವರಪ್ಪ, ಹಿಂದುತ್ವದ ಉಳಿವು, ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ ಎಂದು ಘೋಷಿಸುವ ಮೂಲಕ ಬಿ.ಎಸ್‌.ಯಡಿಯೂರಪ್ಪ ಕುಟುಂಬಕ್ಕೆ ಈಶ್ವರಪ್ಪ ಠಕ್ಕರ್‌ ಕೊಟ್ಟಿದ್ದಾರೆ. ಇದನ್ನೂ ಓದಿ: 70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?

    ರಾಜ್ಯ ಬಿಜೆಪಿ ಮಾನ್ಯ ಅಧ್ಯಕ್ಷ ವಿಜಯೇಂದ್ರ ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ. ಪ್ರಧಾನಿ ಮೋದಿ, ಅಮಿತ್‌ ಶಾ ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • 70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?

    70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?

    – 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’
    – ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆಯಡಿ ಉಚಿತ ವಿದ್ಯುತ್‌
    – ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಣೆ

    ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ತನ್ನ ಬಹುನಿರೀಕ್ಷಿತ ಪ್ರಣಾಳಿಕೆಯನ್ನು (BJP Manifesto) ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ (Narendra Modi) ಅವರು ಬಡವರು, ಮಹಿಳೆಯರು, ರೈತರು, ಮಹಿಳೆಯರ ಅಭಿವೃದ್ಧಿ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

    3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’
    70 ವರ್ಷ ಮೇಲ್ಪಟ್ಟ ಎಲ್ಲರನ್ನೂ ಹಾಗೂ ತೃತೀಯಲಿಂಗಿಗಳನ್ನು ಆಯುಷ್ಮಾನ್ ಭಾರತ್‌ ವ್ಯಾಪ್ತಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಆ ಮೂಲಕ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ, 3 ಕೋಟಿ ಮನೆ ನಿರ್ಮಾಣ, ಪೈಪ್ ಮೂಲಕ ಮನೆಗೆ ಅಡುಗೆ ಅನಿಲ, 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’ ಯೋಜನೆ ಫಲಾನುಭವಿಗಳಾಗಲಿದ್ದಾರೆಂಬ ಭರವಸೆಯನ್ನು ಪ್ರಣಾಳಿಕೆ ನೀಡಿದೆ. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಗರ್ಭಕಂಠ ಕ್ಯಾನ್ಸರ್ ತಡೆಗೆ ವಿಶೇಷ ಯೋಜನೆ, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ತಡೆಯಲು ಕಠಿಣ ಕಾನೂನು, ಹಿರಿಯ ನಾಗರಿಕರಿಗೆ ಜ್ಞಾನ ಹಂಚಿಕೆ ಪೋರ್ಟಲ್ ಹಾಗೂ ಬಡವರಿಗೆ ಉಚಿತ ಪಡಿತರ, ನೀರು ಮತ್ತು ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದೆ.

    ಕಾಲಕ್ಕೆ ತಕ್ಕಂತೆ ಎಂಎಸ್‌ಪಿ ಜಾರಿ
    ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು, ಅಂಚೆ‌ ಮತ್ತು ಡಿಜಿಟಲ್‌ ನೆಟ್ವರ್ಕ್ ಸಹಯೋಗ, ಹಿರಿಯ ನಾಗರಿಕರಿಗೆ ಯುಪಿಐ ಬಗ್ಗೆ ತರಬೇತಿ – ಮೋಸ ವಂಚನೆಗಳಿಂದ ತಪ್ಪಿಸಲು ಕ್ರಮಕೈಗೊಳ್ಳುವುದು, ಹಿರಿಯ ನಾಗರಿಕರಿಗೆ ಆಯುಷ್ ಕ್ಯಾಂಪ್‌ ಆಯೋಜನೆ, ರಾಜ್ಯ ಸರ್ಕಾರಗಳ ಜೊತೆ ಸೇರಿ ಹಿರಿಯ ನಾಗರಿಕರಿಗೆ ಸುಗಮ ತೀರ್ಥಯಾತ್ರೆ ವ್ಯವಸ್ಥೆ, ಕಾಲಕ್ಕೆ ತಕ್ಕಂತೆ ಎಂಎಸ್‌ಪಿ ಜಾರಿ, ಭಾರತವನ್ನು ಅಂತಾರಾಷ್ಟ್ರೀಯ ನ್ಯೂಟ್ರಿ ಹಬ್ ಮಾಡುವುದು, ಕೃಷಿಗಾಗಿ ಪ್ರತ್ಯೇಕ ಸ್ಯಾಟಲೈಟ್ ಮೊದಲಾದ ಭರವಸೆಗಳನ್ನು ಬಿಜೆಪಿ ಜನರಿಗೆ ನೀಡಿದೆ. ಇದನ್ನೂ ಓದಿ: ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?

    ಶೂನ್ಯ ವಿದ್ಯುತ್ ಬಿಲ್
    ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಸಾಮಾನ್ಯ ಮತದಾರರ ಪಟ್ಟಿಯನ್ನು ತರುವುದು, ಏಕರೂಪ ನಾಗರಿಕ ಸಂಹಿತೆ (UCC) ಜಾರಿ, ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್, ಮಹಿಳೆಯರಿಗಾಗಿ ಶೌಚಾಲಯಗಳ ಸಂಖ್ಯೆ ಹೆಚ್ಚಳ ಮತ್ತು ಮಹಿಳಾ ಶಕ್ತಿ ವಂದನ್ ಕಾಯ್ದೆಯ ಅನುಷ್ಠಾನ, ವಂದೇ ಭಾರತ್ ರೈಲು ಜಾಲದ ವಿಸ್ತರಣೆ, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳು ಬರಲಿವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

    ಹೊಸ ವಿಮಾನ ನಿಲ್ದಾಣ, ಹೆದ್ದಾರಿಗಳು, ಮೆಟ್ರೋ ಮತ್ತು ನೀರಿನ ಮೆಟ್ರೋಗಳು ಬರಲಿವೆ. ಹೆದ್ದಾರಿಗಳಲ್ಲಿ ಟ್ರಕ್ ಚಾಲಕರಿಗೆ ಆಧುನಿಕ ಸೌಲಭ್ಯಗಳು, ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಹಾಲಿ, ಮಾಜಿ ಪ್ರಧಾನಿಗಳ ಸಮಾಗಮದಿಂದ ದೊಡ್ಡ ಸಂದೇಶ ರವಾನೆ: ಯದುವೀರ್‌

  • ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    – ಪ್ರತಿ ಕ್ಷಣವೂ ದೇಶಕ್ಕಾಗಿ.. 24*7 For 2047: ಚುನಾವಣಾ ಘೋಷವಾಕ್ಯ
    – ಫಲಾನುಭವಿಗಳಿಗೆ ಸಂಕಲ್ಪ ಪತ್ರ ವಿತರಿಸಿದ ಮೋದಿ

    ನವದೆಹಲಿ: ಲೋಕಸಭಾ ಚುನಾವಣೆಗೆ ‘ಸಂಕಲ್ಪ ಪತ್ರ’ (Sankalp Patra) ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು (BJP Manifesto) ಭಾನುವಾರ ಬಿಡುಗಡೆ ಮಾಡಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಪಕ್ಷದ ಹಿರಿಯ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದರು.

    ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ದಿನದಂದೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತು. ಇದಕ್ಕೂ ಮುನ್ನ ಅಂಬೇಡ್ಕರ್‌ ಅವರ ಪುತ್ಥಳಿಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪುಷ್ಪನಮನ ಸಲ್ಲಿಸಿದರು. ಇದನ್ನೂ ಓದಿ: ಅಂಬೇಡ್ಕರ್‌ ಜನ್ಮದಿನದಂದೇ ಸಂಕಲ್ಪ ಪತ್ರ – ಭಾನುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಪ್ರತಿ ಕ್ಷಣವೂ ದೇಶಕ್ಕಾಗಿ.. 24*7 For 2047 ಚುನಾವಣಾ ಘೋಷವಾಕ್ಯದೊಂದಿಗೆ ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಇದೇ ವೇಳೆ ಪ್ರಧಾನಿ ಮೋದಿ ಅವರ 10 ವರ್ಷಗಳ ಸಾಧನೆ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

  • ವಿವಾಹಿತೆಯರಿಗೆ ವರ್ಷಕ್ಕೆ 12,000 ರೂ. ನೀಡುತ್ತೇವೆ: ‘ಮೋದಿ ಕಿ ಗ್ಯಾರಂಟಿ’ ಘೋಷಿಸಿದ ಅಮಿತ್‌ ಶಾ

    ವಿವಾಹಿತೆಯರಿಗೆ ವರ್ಷಕ್ಕೆ 12,000 ರೂ. ನೀಡುತ್ತೇವೆ: ‘ಮೋದಿ ಕಿ ಗ್ಯಾರಂಟಿ’ ಘೋಷಿಸಿದ ಅಮಿತ್‌ ಶಾ

    – ಛತ್ತೀಸ್‌ಗಢದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ರಾಯ್ಪುರ: ವಿಧಾನಸಭಾ ಚುನಾವಣೆಗಾಗಿ ಛತ್ತೀಸ್‌ಗಢದಲ್ಲಿ (Chhattisgarh Polls) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ‘ಮೋದಿ ಕಿ ಗ್ಯಾರಂಟಿ 2023’ (Modi Ki Guarantee) ಎಂಬ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಛತ್ತೀಸ್‌ಗಢದ ಜನರಿಗೆ ಬಿಜೆಪಿಯ ಪ್ರಮುಖ ಭರವಸೆಗಳನ್ನು ಘೋಷಿಸಿದ್ದಾರೆ.

    ಎಲ್ಲಾ ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂ.ಗಳನ್ನು ನೀಡಲು ನಿರ್ಧರಿಸಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 18 ಲಕ್ಷ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ರಾಜ್ಯದ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುತ್ತೇವೆ. ನಾವು ಭೂರಹಿತ ರೈತರಿಗೆ ವಾರ್ಷಿಕ 10,000 ರೂ. ಅನುದಾನ ನೀಡುತ್ತೇವೆ. ರಾಜ್ಯಾದ್ಯಂತ 500 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ 23 ದಿನ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಆದೇಶ

    ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವಂತೆ, ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕೃಷಿ ಉನ್ನತಿ ಯೋಜನೆಯನ್ನು ಪ್ರಾರಂಭಿಸುತ್ತದೆ. ಇದರ ಭಾಗವಾಗಿ ನಾವು 21 ಕ್ವಿಂಟಾಲ್/ಎಕರೆ ಭತ್ತವನ್ನು 3,100 ರೂ. ದರದಲ್ಲಿ ಖರೀದಿಸುತ್ತೇವೆ. ನಮ್ಮ ಖರೀದಿಯಿಂದ ಸಂಗ್ರಹಿಸಿದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು. ಎರಡು ವರ್ಷಗಳಲ್ಲಿ ಒಂದು ಲಕ್ಷ ಖಾಲಿ ಹುದ್ದೆಗಳನ್ನು (ಸರ್ಕಾರಿ ಕಚೇರಿಗಳಲ್ಲಿ) ಭರ್ತಿ ಮಾಡಲಾಗುವುದು. ಡಬಲ್ ಇಂಜಿನ್ ಸರ್ಕಾರವು ಆಯ್ಕೆಯಾದರೆ ಮುಂದಿನ ಐದು ವರ್ಷಗಳಲ್ಲಿ ಛತ್ತೀಸ್‌ಗಢವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲಿದೆ ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವರು, ಎಡಪಂಥೀಯ ಉಗ್ರವಾದದಿಂದ (ಎಲ್‌ಡಬ್ಲ್ಯೂಇ) ಉದ್ಭವಿಸುವ ಭದ್ರತಾ ಸವಾಲುಗಳನ್ನು ಕೇಂದ್ರವು ಪರಿಹರಿಸಿದೆ. ಕಾಂಗ್ರೆಸ್ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡುವ ಬದಲು ಸಾರ್ವಜನಿಕ ಹಣವನ್ನು ದೋಚಿದೆ ಎಂದಿದ್ದಾರೆ. ಇದನ್ನೂ ಓದಿ: ಗಾಜಾದಲ್ಲಿ ಮುಗ್ಧ ಕಂದಮ್ಮಗಳು ಜೀವ ಕಳೆದುಕೊಳ್ಳುತ್ತಿವೆ: ಇರ್ಫಾನ್‌ ಪಠಾಣ್‌ ಬೇಸರ

    ಅವರು (ಕಾಂಗ್ರೆಸ್) ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡುವ ಬದಲು ಜನರ ಹಣವನ್ನು ಲೂಟಿ ಮಾಡಿದ್ದಾರೆ. ಜನರು ಹಲವಾರು ಮಾನದಂಡಗಳ ಮೇಲೆ ಕಾಂಗ್ರೆಸ್‌ಗೆ ಮತ ಹಾಕಿದರು. ನಕ್ಸಲ್ ಚಟುವಟಿಕೆ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಯಾಗಬಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ ರಾಜ್ಯ ಸರ್ಕಾರದ ಬದಲಿಗೆ ನಾವು (ಕೇಂದ್ರಗಳು) ರಾಜ್ಯದ ಭದ್ರತಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ

    ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ

    ಉಡುಪಿ: ಸೀರೆಯ ಒಳಗಿಟ್ಟು ಮಲ್ಲಿಗೆ ಹೂವನ್ನು ಸುತ್ತಿ ಬಿಜೆಪಿ (BJP Manifesto) ಜಿಲ್ಲಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ನಟಿ ತಾರಾ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೊಂದು ಅಪ್ಯಾಯಮಾನ ಘಟನೆ ಎಂದು ತಾರಾ (Actress Thara) ಹೇಳಿದರು.

    ಭಾರತೀಯ ಜನತಾ ಪಾರ್ಟಿ (BJP) ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸಮಾಜ ಕಲ್ಯಾಣ- ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary), ನಟಿ ತಾರಾ ಹಾಗೂ ಬಿಜೆಪಿಯ ಜಿಲ್ಲಾ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 24 ವಿವಿಧ ಯೋಜನೆಗಳ ಪಟ್ಟಿಯನ್ನು ಪ್ರಣಾಳಿಕೆ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರಿ ಮೆಡಿಕಲ್ ಕಾಲೇಜು ಕೈಗಾರಿಕಾ ವಲಯ ಕಿರು  ಬಂದರು ಐಟಿ ಪಾರ್ಕ್ ಜೊತೆಗೆ ಪಾರಂಪರಿಕ ಕ್ಷೇತ್ರಗಳ ಕಾರಿಡಾರ್ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಉಡುಪಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಒಂದು ವಿಶೇಷ ಪ್ರಣಾಳಿಕೆ ಬಿಡುಗಡೆ ಎಂದು ಅನಿಸಿತು. ತಾಯಿಯ ಸೀರೆಯ ಸೆರಗಿನಿಂದ ಪ್ರಣಾಳಿಕೆಯನ್ನು ತೆಗೆದು ಬಿಡುಗಡೆ ಮಾಡಲಾಯಿತು. ನನಗೆ ಬಹಳ ಅಪ್ಯಾಯಮಾನ ಅನ್ನಿಸಿತು. ಸೃಷ್ಟಿ ಮಾಡುವ ಗುಣ ಇರುವುದು ತಾಯಿ ಮತ್ತು ಪ್ರಕೃತಿಗೆ ಮಾತ್ರ. ಅರ್ಥಪೂರ್ಣ ಭಾವ ಆಗಿತ್ತು ಎಂದು ತಾರಾ ಹೇಳಿದರು.

    ಉಡುಪಿ ಜಿಲ್ಲೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿದೆ ಜಿಲ್ಲೆ ಬೆಳೆದಂತೆ ಮತ್ತಷ್ಟು ಬೇಡಿಕೆಗಳು ಇದ್ದೇ ಇರುತ್ತದೆ. ಈ ಭಾಗದ ಜನರ ಉದ್ಯೋಗ ಶಿಕ್ಷಣ ಆರೋಗ್ಯಕ್ಕೆ ಸಂಬಂಧಪಟ್ಟಂತೆ 24 ವಂಶಗಳ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯ ಮಟ್ಟದಲ್ಲಿ ಪ್ರಣಾಳಿಕೆಯು ಬಿಡುಗಡೆಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡುತ್ತದೆ ಎಂದರು. ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತೆಯ ಸೇನಾ ಹೆಲಿಕಾಪ್ಟರ್‌ – ಮುಂದೇನಾಯ್ತು?