Tag: BJP leader

  • 150 ಕೋಟಿ ಹಣ ಕೊಡಿಸೋದಾಗಿ ನಂಬಿಸಿ 4.5 ಕೋಟಿ ವಂಚನೆ

    150 ಕೋಟಿ ಹಣ ಕೊಡಿಸೋದಾಗಿ ನಂಬಿಸಿ 4.5 ಕೋಟಿ ವಂಚನೆ

    – ಬಿಜೆಪಿ ಮುಖಂಡನಿಗೆ ಕೋಟಿ ಕೋಟಿ ವಂಚನೆ

    ಬೆಂಗಳೂರು: ವಂಚಕನೊಬ್ಬ ಕಡಿಮೆ ಬಡ್ಡಿಗೆ ಹಣ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಹಣ ಪಡೆದು ಬಿಜೆಪಿ ಮುಖಂಡನೊಬ್ಬನಿಗೆ ವಂಚಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದ ಹೆಚ್.ರವಿಂದ್ರ ವಂಚನೆಗೊಳಗಾದ ಬಿಜೆಪಿ ಮುಖಂಡ. ಹರಿ ಗೋಪಾಲಕೃಷ್ಣ ನಾಡರ್ ಎಂಬಾತ ಮೋಸ ಮಾಡಿದ್ದಾನೆ. ಈತ ಮೂಲತಃ ತಮಿಳುನಾಡಿನವನಾಗಿದ್ದು, ಹಣ ಕೊಡಿಸುವುದಾಗಿ ಮುಂಗಡವಾಗಿ 4.5 ಕೋಟಿ ಹಣ ಪಡೆದು ವಂಚಿಸಿದ್ದಾನೆಂದು ರವೀಂದ್ರ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸದ್ಯಕ್ಕೆ ಪ್ರಕರಣವನ್ನ ಸಿಸಿಬಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ. ಆರೋಪಿ ಹರಿ ಗೋಪಾಲಕೃಷ್ಣ ನಾಡರ್ ಬಂಧನವಾಗಿ ಜಾಮೀನಿನ ಮೇಲೆ ಹೊರಗಡೆಗೆ ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

    ಹರಿ ನಾಡರ್ ಕಡಿಮೆ ಬಡ್ಡಿ ದರದಲ್ಲಿ 150 ಕೋಟಿ ಹಣ ಕೊಡಿಸುವುದಾಗಿ ನಂಬಿಸಿದ್ದಾನೆ. ನಂತರ ಹಣವನ್ನು ಕೊಡಿಸದೆ ರವೀಂದ್ರ ಅವರ ಬಳಿ ಪಡೆದುಕೊಂಡ 4.5 ಕೋಟಿ ಹಣವನ್ನು ವಾಪಸ್ ಕೊಡದೇ ವಂಚನೆ ಮಾಡಿದ್ದಾನೆ. ಈ ಘಟನೆ ಸಂಬಂಧ ಪ್ರಮುಖ ಆರೋಪಿ ಹರಿಗೋಪಾಲಕೃಷ್ಣ ನಾಡರ್ ಗೆ ನೋಟಿಸ್ ಕೊಟ್ಡಿದ್ದು, ಬಂದು ವಿಚಾರಣೆಗೆ ಹಾಜರಾಗಿದ್ದಾನೆ.

    ವಿಚಾರಣೆ ವೇಳೆ ಈತನ ಜೊತೆ ಸ್ನೇಹಿತರು ಭಾಗಿಯಾಗಿರುವುದು ತಿಳಿದುಬಂದಿದೆ. ಹೀಗಾಗಿ ಆರೋಪಿಯ ಮೂವರು ಸ್ನೇಹಿತರು ಚೆನೈ ಮೂಲದವರಾಗಿದ್ದು, ತಲೆ ಮರೆಸಿಕೊಂಡಿದ್ದಾರೆ. ಸದ್ಯ ಪ್ರಮುಖ ಆರೋಪಿಯ ಹರಿ ಗೋಪಾಲಕೃಷ್ಣ ನಾಡರ್ ಮಾಹಿತಿ ಮೇರೆಗೆ ಉಳಿದ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಕೊಲೆ ಮಾಡಿ ಹೆಣದ ಸುತ್ತ ಡ್ಯಾನ್ಸ್ ಮಾಡಿದ್ದ ಆರೋಪಿ

    ಕೊಲೆ ಮಾಡಿ ಹೆಣದ ಸುತ್ತ ಡ್ಯಾನ್ಸ್ ಮಾಡಿದ್ದ ಆರೋಪಿ

    ಮೈಸೂರು: ಬಿಜೆಪಿ ಮುಖಂಡ ಆನಂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಬಳಿಕ ಆರೋಪಿ ಬಸವರಾಜ್ ಹೆಣದ ಪಕ್ಕ ಡ್ಯಾನ್ಸ್ ಮಾಡಿದ್ದಾನೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೊಲೆ ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನ ಜನತಾನಗರದ ನಿವಾಸಿ ಬಸವರಾಜು ಬಂಧಿತ ಆರೋಪಿ. ವೈಯಕ್ತಿಕ ದ್ವೇಷದಿಂದ ಬಿಜೆಪಿ ಮುಖಂಡ ಆನಂದ್‍ನನ್ನು ಬಸವರಾಜ್ ಕೊಲೆ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

    ತನ್ನನ್ನು ಬೆಳೆಯಲು ಆನಂದ್ ಬಿಡುತ್ತಿಲ್ಲ ಎಂಬ ಕಾರಣಕ್ಕೆ ಬಸವರಾಜ್ ಇತ್ತೀಚೆಗೆ ತಾನೇ ಆನಂದ್ ಜೊತೆ ಜಗಳವಾಡಿದ್ದ. ಕಳೆದ ನಾಲ್ಕೈದು ದಿನಗಳ ಹಿಂದೆ ಸ್ನೇಹಿತರ ಎದುರು ಬಸವರಾಜು ಮೇಲೆ ಆನಂದ್ ಹಲ್ಲೆ ಮಾಡಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆನಂದ್ ಬರ್ತ್ ಡೇ ಪಾರ್ಟಿಯ ಗುಂಗಿನಲ್ಲಿದ್ದಾಗಲ್ಲೇ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಬಸವರಾಜ್ ಹೆಣದ ಪಕ್ಕ ಡ್ಯಾನ್ಸ್ ಮಾಡಿದ್ದಾನೆ. ಇದನ್ನೂ ಓದಿ: ಜೊತೆಗೆ ಅಪಾರ್ಟ್‍ಮೆಂಟಿಗೆ ಬಂದ ಸ್ನೇಹಿತರಿಂದ್ಲೇ ಬಿಜೆಪಿ ಮುಖಂಡ ಕೊಲೆ

    ಬಿಯರ್ ಬಾಟಲಿಯಲ್ಲಿದ್ದ ರಕ್ತವನ್ನು ಕೋಣೆಯಲ್ಲೆಲ್ಲಾ ಚೆಲ್ಲಾಡಿ ವಿಕೃತಿ ಮೆರೆದಿದ್ದಾನೆ. ಕೊಲೆ ನಡೆದಾಗ ಸ್ಥಳದಲ್ಲಿದ್ದ ಸುರೇಶ್, ಗಿರಿ, ಮಂಜು ಎಂಬವರು ಪರಾರಿಯಾಗಿದ್ದಾರೆ. ಘಟನೆಗೂ ಮುನ್ನ ಸ್ಥಳದಲ್ಲಿದ್ದ ಪರಮೇಶ್ ಹಾಗೂ ಕೃಷ್ಣ ಎಂಬವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ

  • ಜೊತೆಗೆ ಅಪಾರ್ಟ್‍ಮೆಂಟಿಗೆ ಬಂದ ಸ್ನೇಹಿತರಿಂದ್ಲೇ ಬಿಜೆಪಿ ಮುಖಂಡ ಕೊಲೆ

    ಜೊತೆಗೆ ಅಪಾರ್ಟ್‍ಮೆಂಟಿಗೆ ಬಂದ ಸ್ನೇಹಿತರಿಂದ್ಲೇ ಬಿಜೆಪಿ ಮುಖಂಡ ಕೊಲೆ

    – ಮೈಸೂರು ಪೊಲೀಸ್ ಆಯುಕ್ತರ ಶಂಕೆ

    ಮೈಸೂರು: ಬಿಜೆಪಿ ಮುಖಂಡ ಆನಂದ್ ಕೊಲೆ ನಡೆದ ಕುವೆಂಪು ನಗರದ ಸರ್ವಿಸ್ ಅಪಾರ್ಟ್‍ಮೆಂಟಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಡಿಸಿಪಿ ಪ್ರಕಾಶ್‍ಗೌಡ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಜಾನೆ 3 ರಿಂದ 4 ಗಂಟೆ ವೇಳೆಯಲ್ಲಿ ಆನಂದ್ ಕೊಲೆಯಾಗಿದೆ. ಬಾಟಲ್‍ಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಗುರುವಾರ ಆನಂದ್ ಹುಟ್ಟುಹಬ್ಬವಿತ್ತು. ಹೀಗಾಗಿ ಆನಂದ್ ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ್ದ. ಮೊದಲು ಬೇರೆಡೆ ಪಾರ್ಟಿ ಮಾಡಿ ನಂತರ ಅಪಾರ್ಟ್‍ಮೆಂಟಿಗೆ ಬಂದಿದ್ದಾರೆ. ಇಲ್ಲಿಯೂ 5 ರಿಂದ 6 ಮಂದಿ ಪಾರ್ಟಿ ಮುಂದುವರೆಸಿದ್ದಾರೆ ಎಂದು ತಿಳಿಸಿದರು.

    ಪಾರ್ಟಿ ಮಾಡುವ ವೇಳೆ ಅಲ್ಲಿದ್ದವರಲ್ಲೇ ಗಲಾಟೆ ಆರಂಭವಾಗಿದೆ. ಆಗ ಬಾಟಲ್‍ನಲ್ಲಿ ಚುಚ್ಚಿ ಕೊಲೆ ಮಾಡಿರಬಹುದು. ಪಾರ್ಟಿಯಲ್ಲಿ ಯಾರ್ಯಾರು ಇದ್ದರು ಎಂಬ ಮಾಹಿತಿ ಗೊತ್ತಾಗಿದೆ. ಅವರೆಲ್ಲರನ್ನು ಹಿಡಿದು ವಿಚಾರಣೆ ಮಾಡುತ್ತೇವೆ. ಆದರೆ ಕೊಲೆ ಯಾವ ಕಾರಣಕ್ಕಾಗಿ ಆಗಿದೆ, ಯಾರು ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಕೊಲೆಯಾದ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

  • ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ

    ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ

    – ಬರ್ತ್ ಡೇ ದಿನವೇ ಪಾರ್ಟಿಯಲ್ಲಿ ಹೆಣವಾದ ರೌಡಿ ಶೀಟರ್
    – ಕೊಲೆಗೈದ ಸ್ನೇಹಿತರು ಪರಾರಿ

    ಮೈಸೂರು: ಬಿಯರ್ ಬಾಟಲಿನಿಂದ ಚುಚ್ಚಿ ಹುಟ್ಟುಹಬ್ಬದ ದಿನವೇ ಬಿಜೆಪಿ ಮುಖಂಡನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಎಂದು ಗುರುತಿಸಲಾಗಿದೆ. ಗುರುವಾರ ಆನಂದ್ ಹುಟ್ಟುಹಬ್ಬವಿದ್ದು, ಕುವೆಂಪು ನಗರದ ಲವಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್‍ಮೆಂಟ್‍ನಲ್ಲಿ ರೂಮ್ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾಗ ಸ್ನೇಹಿತರಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾನೆ.

    ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಬಂದಿದ್ದ ಆನಂದ್, ನಂತರ ವಾಪಸ್ ಬಂದು ಸರ್ವಿಸ್ ಅಪಾರ್ಟ್‍ಮೆಂಟ್ ನಲ್ಲಿ ರೂಮ್ ಫಿಕ್ಸ್ ಮಾಡಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ. ಪಾರ್ಟಿ ನಡೆಯುವಾಗಲೇ ಸ್ನೇಹಿತರೊಂದಿಗೆ ಮಾತಿನ ಚಕಮಕಿಯಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಿಯರ್ ಬಾಟಲಿಯಿಂದ ಸ್ನೇಹಿತರೇ ಆನಂದನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಕೊಲೆ ಮಾಡಿದ್ದ ಆನಂದ್
    ಬಿಜೆಪಿ ಮುಖಂಡ ರಾಜೀವ್ ಬೆಂಬಲಿಗನಾಗಿದ್ದ ಆನಂದ್, ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿದ್ದ. ಕಳೆದ 13 ವರ್ಷಗಳ ಹಿಂದೆ ಜನತಾನಗರದ ಮಾರುತಿ ಟೆಂಟ್ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನನ್ನು ಮರ್ಡರ್ ಮಾಡಿದ್ದ. ನಂತರ ಜೈಲು ಶಿಕ್ಷೆ ಅನುಭವಿಸಿ ವಾಪಸ್ ಆಗಿದ್ದ. ಆತನ ಮೇಲೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಓಪನ್ ಮಾಡಲಾಗಿತ್ತು. ಆದ್ದರಿಂದ ಹಳೇ ವೈಷಮ್ಯದ ಮೇಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು, ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಓರ್ವ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

  • ಹೊಟ್ಟೆಕಿಚ್ಚಿಗೆ ಬಿಎಸ್‍ವೈರನ್ನು ದ್ವೇಷಿಸುತ್ತಾರೆ: ಸುಬ್ರಮಣಿಯನ್ ಸ್ವಾಮಿ

    ಹೊಟ್ಟೆಕಿಚ್ಚಿಗೆ ಬಿಎಸ್‍ವೈರನ್ನು ದ್ವೇಷಿಸುತ್ತಾರೆ: ಸುಬ್ರಮಣಿಯನ್ ಸ್ವಾಮಿ

    – ಬಿಎಸ್‍ವೈ ಬೆಂಬಲಕ್ಕೆ ನಾನಿದ್ದೇನೆ

    ಬೆಂಗಳೂರು: ಹೊಟ್ಟೆಕಿಚ್ಚಿಗೆ ಕೆಲವರು ಮುಖ್ಯಮಂತ್ರಿ ಬಿ.ಎಸ್.ಯಡುಯೂರಪ್ಪ ಅವರನ್ನು ದ್ವೇಷಿಸುತ್ತಾರೆ. ಆದರೆ ಅವರ ಬೆಂಬಲಕ್ಕೆ ನಾನಿದ್ದೇನೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

    ನಗರದ ಶಿಕ್ಷಕರ ಸದನದಲ್ಲಿ ವಿರಾಟ್ ಹಿಂದೂಸ್ತಾನ್ ಸಂಗಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿರದ ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಹಳ್ಳಿ ಹಳ್ಳಿಗೆ ಸಂಚರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಕೆಲವರು ಹೊಟ್ಟೆ ಕಿಚ್ಚಿಗೆ ಅವರನ್ನು ದ್ವೇಷಿಸುತ್ತಾರೆ ಎಂದು ಸಿಎಂ ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದರು. 

    ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬೆಂಗಳೂರು ನನಗೆ ತುಂಬಾ ಇಷ್ಟವಾದ ನಗರ. ನನ್ನ ಅಪ್ಪ-ಅಮ್ಮ, ಅಕ್ಕ ಬೆಂಗಳೂರಿಗರೇ. ನಾನು ಚೆನ್ನೈಗೆ ಹೋದಾಗ ಅಲ್ಲಿನ ಜನರು ನಮಗೆ ಕಾವೇರಿ ನೀರು ಬಿಡುತ್ತಿಲ್ಲ ಎಂದು ಕೇಳುತ್ತಾರೆ. ನನ್ನ ಉತ್ತರ ಕೇಳಿ, ನೀವು ಕರ್ನಾಟಕದವರೋ, ತಮಿಳುನಾಡಿನವರೋ ಅಂತ ಪ್ರಶ್ನಿಸುತ್ತಾರೆ. ಆದರೆ ಕರ್ನಾಟಕದ ಜನತೆ, ನೀರು ಬೇಕಾದರೆ ಕೊಡುತ್ತೇವೆ. ಆದರೆ ಕಾವೇರಿಯನ್ನು ಕೊಡಲ್ಲ ಎನ್ನುತ್ತಾರೆ ಎಂದು ಹೇಳಿದರು.

    ಇದೇ ವೇಳೆ ಗಾಂಧಿ ಕುಟುಂಬ ವಿರುದ್ಧ ವ್ಯಂಗವಾಡಿದ ಅವರು, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಓದಿ, ಫೇಲ್ ಆಗಿದ್ದರು. ಅದೇ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾಸಾಗಿದ್ದರು. ಆದರೂ ನೆಹರು ಅವರಿಗೆ ಪಂಡಿತ್ ನೆಹರು ಎನ್ನುತ್ತಾರೆ. ನೆಹರು ಕುಟುಂಬದ ಒಬ್ಬರೂ ಪಾಸ್ ಆಗಿಲ್ಲ. ಹಾಗೆ ನೋಡಿದರೆ ಪಂಡಿತ್ ಅಂಬೇಡ್ಕರ್ ಅಂತ ಕರೆಯಬೇಕು ಎಂದು ಹೇಳಿದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತೆಳ್ಳನೆಯ ಇಟಲಿಯ ಮಹಿಳೆಗೆ ಹೆದರುತ್ತಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಕುಟುಕಿದರು. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿ, ಸಿಎಎಗೆ ಕಾಂಗ್ರೆಸ್‍ನವರು ವಿರೋಧಿಸುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶದಿಂದ ಬರುವ ನುಸುಳುಕೋರರಿಗೆ ಪೌರತ್ವ ನೀಡಲು ಹೇಗೆ ಸಾಧ್ಯ. ನಮ್ಮ ದೇಶದಲ್ಲಿ ಇರುವ ಮುಸ್ಲಿಮರಿಗೆ ನಾವು ಪ್ರಶ್ನಿಸುವುದಿಲ್ಲ ಎಂದರು.

  • ದೆಹಲಿ ವಾಯುಮಾಲಿನ್ಯಕ್ಕೆ ಪಾಕಿಸ್ತಾನ, ಚೀನಾ ಕಾರಣ – ಬಿಜೆಪಿ ನಾಯಕ

    ದೆಹಲಿ ವಾಯುಮಾಲಿನ್ಯಕ್ಕೆ ಪಾಕಿಸ್ತಾನ, ಚೀನಾ ಕಾರಣ – ಬಿಜೆಪಿ ನಾಯಕ

    ಲಕ್ನೋ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಉಂಟಾಗಿರುವ ಹೆಚ್ಚಿನ ವಾಯು ಮಾಲಿನ್ಯಕ್ಕೆ ಪಾಕಿಸ್ತಾನ ಹಾಗೂ ಚೀನಾ ಕಾರಣ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ.

    ನಮ್ಮ ದೇಶದ ಮೇಲೆ ವಿಷಕಾರಿ ಅನಿಲವನ್ನು ಹಾಕಲಾಗಿದೆ. ಈ ವಿಷಕಾರಿ ಅನಿಲವನ್ನು ನಮ್ಮ ನೆರೆಯ ಯಾವುದೇ ದೇಶಗಳು ಬಿಡುಗಡೆ ಮಾಡಿರುವ ಸಾಧ್ಯತೆ ಇದೆ. ಪಾಕಿಸ್ತಾನ ಅಥವಾ ಚೀನಾ ನಮಗೆ ಭಯ ಪಡುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರದಾ ಮೀರತ್‌ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

    ಪಾಕಿಸ್ತಾನ ಯಾವುದೇ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡಿರಬಹುದು ಎಂದು ನಾವು ಗಂಭೀರವಾಗಿ ಪರಿಗಣಿಸಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಾಕಿಸ್ತಾನ ನಿರಾಶೆಗೊಂಡಿದೆ. ಅಲ್ಲದೆ ಈವರೆಗಿನ ಯಾವುದೇ ಯುದ್ಧದಲ್ಲಿ ಒಂದೂ ಗೆಲವು ದಾಖಲಿಸಲು ಸಾಧ್ಯವಾಗದ ಕಾರಣ ಭಾರತದ ವಿರುದ್ಧ ಎಲ್ಲ ರೀತಿಯ ತಂತ್ರಗಳನ್ನು ಪಾಕಿಸ್ತಾನ ಅನುಸರಿಸುತ್ತಿದೆ ಎಂದು ಶಾರದಾ ಹೇಳಿದ್ದಾರೆ.

    ಪಾಕಿಸ್ತಾನ ಭಾರತದೊಂದಿಗೆ ಯುದ್ಧ ಮಾಡಿದಾಗಲೆಲ್ಲ ಅದನ್ನು ಸೋಲಿಸಲಾಗಿದೆ. ಇದೀಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಂದಾಗಿನಿಂದ ಪಾಕಿಸ್ತಾನ ನಿರಾಶೆಗೊಂಡಿದೆ ಎಂದರು.

    ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಕೃಷಿ ಸುಡುತ್ತಿರುವುದು ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಅಪಾಯಕಾರಿ ಮಟ್ಟ ತಲುಪಲು ಕಾರಣ ಎಂಬ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ಶಾಸಕ ಟೀಕೆ ವ್ಯಕ್ತಪಡಿಸಿದ್ದಾರೆ.

    ವಿನೀತ್ ಅಗರ್ವಾಲ್ ಅವರು ಮಹಾಭಾರತದ ಶ್ರೀಕೃಷ್ಣ ಹಾಗೂ ಅರ್ಜುನನಿಗೆ ಮೋದಿ ಹಾಗೂ ಅಮಿತ್ ಶಾರನ್ನು ಹೋಲಿಸಿದ್ದಾರೆ. ಕೃಷ್ಣಾರ್ಜುನರು ಮಹಾಭಾರತದ ಸಮಸ್ಯೆ ಬಗೆಹರಿಸಿದಂತೆ ಈ ಇಬ್ಬರು ನಾಯಕರು ದೆಹಲಿ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೊಂಡಾಡಿದ್ದಾರೆ.

  • ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ

    ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಂದು 8 ದಿನಗಳು ಕಳೆದರೂ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ.

    ಈಗಿರುವ ವಿಧಾನಸಭೆ ಅವಧಿಯ ಅಧಿಕಾರಾವಧಿ ನವೆಂಬರ್ 8ಕ್ಕೆ ಕೊನೆಗೊಳ್ಳಲಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ಸುಧೀರ್ ಮುಂಗಂಟಿವರ್, ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ನಮಗೆ ಬರೆದಿಟ್ಟುಕೊಳ್ಳಿ – ಬಿಜೆಪಿ ಇಲ್ಲದೇ ಸರ್ಕಾರ ರಚನೆಗೆ ಶಿವಸೇನೆ ಪ್ಲಾನ್

    ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಶಿವಸೇನ ಮಾತುಕತೆ ವಿಳಂಬವಾಗಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಮಾತುಕತೆ ನಡೆಸಿ, ಸರ್ಕಾರ ರಚಿಸಲಾಗುತ್ತದೆ. ರಾಜ್ಯದ ಜನತೆ ಯಾವುದೇ ಒಂದು ಪಕ್ಷಕ್ಕೆ ಬಹುಮತ ನೀಡಿಲ್ಲ. ಬಿಜೆಪಿ-ಶಿವಸೇನಯನ್ನು ಒಳಗೊಂಡ ಮೈತ್ರಿಗೆ ಜನರು ಬಹುಮತ ನೀಡಿದ್ದಾರೆ. ನಮ್ಮ ಮೈತ್ರಿ ಫೆವಿಕಾಲ್ ಅಥವಾ ಅಂಬುಜಾ ಸಿಮೆಂಟ್‍ಗಿಂತ ಬಲವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

    ಈ ನಡುವೆ ಮುಖ್ಯಮಂತ್ರಿ ಪಟ್ಟ ಬೇಕು ಅಂತ ಜೋತುಬಿದ್ದು ಬಿಜೆಪಿಗೆ ಬಿಸಿತುಪ್ಪವಾಗಿರುವ ಶಿವಸೇನೆ ಈಗ ಎನ್‍ಸಿಪಿ ಜೊತೆ ಡೈರೆಕ್ಟ್ ಡೀಲಿಂಗ್‍ಗೆ ಮುಂದಾಗಿದೆ. ಫೋನ್‍ಕಾಲ್ ಮೂಲಕ ಎನ್‍ಸಿಪಿ ಮುಖಂಡ ಶರದ್ ಪವಾರ್ ಜೊತೆ ಶಿವಸೇನ ನಾಯಕ ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಶಿವಸೇನೆಯ ನಾಯಕರೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಿವಸೇನ ಸಂಜಯ್ ರಾವತ್ ಹೇಳಿದ್ದಾರೆ.

    ಎನ್‍ಸಿಪಿ-ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಕೂರಲಿವೆ ಎಂದು ಎನ್‍ಸಿಪಿಯ ಅಜಿತ್ ಪವಾರ್ ಒಂದು ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಹಾರಾಷ್ಟ್ರ ಕೈ ಮುಖಂಡರಾದ ಪೃಥ್ವಿರಾಜ್ ಚೌವ್ಹಾಣ್, ಅಶೋಕ್ ಚೌವ್ಹಾಣ್ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ, ಜಾರ್ಖಂಡ್‍ಗೆ ನವೆಂಬರ್ 30ರಿಂದ ಡಿಸೆಂಬರ್ 20ರವೆಗೆ 5 ಹಂತದಲ್ಲಿ ಚುನಾವಣೆಯಲ್ಲಿದ್ದು, ಡಿಸೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  • ಬಿಜೆಪಿ ಯುವ ಮುಖಂಡನಿಗೆ ಮುಸುಕುಧಾರಿಗಳಿಂದ ಚಾಕು ಇರಿತ

    ಬಿಜೆಪಿ ಯುವ ಮುಖಂಡನಿಗೆ ಮುಸುಕುಧಾರಿಗಳಿಂದ ಚಾಕು ಇರಿತ

    ಬೆಂಗಳೂರು: ಸಿವಿ ರಾಮನ್ ಕ್ಷೇತ್ರದ ಶಾಸಕ ರಘು ಆಪ್ತ ಹಾಗೂ ಬಿಜೆಪಿ ಯುವ ಮುಖಂಡ ಲೋಕೇಶ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

    ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಮುಸುಕುಧಾರಿಗಳಾಗಿ ಬಂದಿದ್ದ ಮೂವರು ಆರೋಪಿಗಳು ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ಗುರುವಾರ ರಾತ್ರಿ 10:30ರ ಸುಮಾರಿಗೆ ಲೋಕೇಶ್ ರ ಲಕ್ಷ್ಮೀಪುರ ನಿವಾಸದ ಬಳಿ ಕಾರಿಂದ ಕೆಳಗಿಳಿಯೋ ವೇಳೆ ಹಿಂಬದಿಯಿಂದ ಅಟ್ಯಾಕ್ ಮಾಡಿರೋ ಮುಸುಕುಧಾರಿಗಳು ಬೆನ್ನು ಹಾಗೂ ಪಕ್ಕೆಲುಬಿಗೆ ಚಾಕುವಿನಿಂದ ಇರಿದಿದ್ದಾರೆ.

    ಈ ವೇಳೆ ಲೋಕೇಶ್ ಜೊತೆಯಲ್ಲಿದ್ದ ಆತನ ಸಹೋದರ ಹರೀಶ್ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

  • ಪಕ್ಷದ ಕಚೇರಿ ಮುಂದೆಯೇ ಪತ್ನಿಗೆ ಥಳಿಸಿದ ಬಿಜೆಪಿ ಮುಖಂಡ

    ಪಕ್ಷದ ಕಚೇರಿ ಮುಂದೆಯೇ ಪತ್ನಿಗೆ ಥಳಿಸಿದ ಬಿಜೆಪಿ ಮುಖಂಡ

    ನವದೆಹಲಿ: ಪಕ್ಷದ ಕಚೇರಿ ಮುಂದೆಯೇ ಬಿಜೆಪಿ ಮುಖಂಡ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಿಜೆಪಿಯ ಮೆಹ್ರೌಲಿ ಜಿಲ್ಲಾಧ್ಯಕ್ಷ ಆಜಾದ್ ಸಿಂಗ್ ತಮ್ಮ ಪತ್ನಿ, ದಕ್ಷಿಣ ದೆಹಲಿಯ ಮಾಜಿ ಮೇಯರ್ ಸರಿತಾ ಚೌಧರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಆಜಾದ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

    ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಚುನಾವಣೆ ಸಿದ್ಧತೆ ವಿಚಾರವಾಗಿ ಗುರುವಾರ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಮೆಹ್ರೌಲಿ ಜಿಲ್ಲಾಧ್ಯಕ್ಷ ಆಜಾದ್ ಸಿಂಗ್ ಕೂಡ ಸಭೆಗೆ ಹಾಜರಾಗಿದ್ದರು. ಈ ವೇಳೆ ಸಭೆಗೆ ಆಗಮಿಸಿದ ಪತ್ನಿಯನ್ನು ನೋಡಿದ ಆಜಾದ್ ಸಿಂಗ್ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಜಾವೆಡೆಕರ್ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಬಿಜೆಪಿ ಕಚೇರಿಯಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ.

    ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು, ಮಹಿಳೆಯ ಮೇಲೆ ನಡೆದ ಹಲ್ಲೆಯ ವಿಚಾರವಾಗಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ತನಿಖಾ ಸಮಿತಿಯನ್ನು ರಚಿಸಿದ್ದೇವೆ. ಜೊತೆಗೆ ಆಜಾದ್ ಸಿಂಗ್ ಅವರನ್ನು ಮೆಹ್ರೌಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

    ದಕ್ಷಿಣ ದೆಹಲಿ ಮಾಜಿ ಮೇಯರ್ ಸರಿತಾ ಹಾಗೂ ಪತಿ ಆಜಾದ್ ಸಿಂಗ್ ಮಧ್ಯೆ ಈ ಹಿಂದೆಯೂ ಜಗಳವಾಗಿತ್ತು. ಕೌಟುಂಬಿಕ ಕಲಹದಿಂದಾಗಿ ದಂಪತಿಯು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಆದರೆ ಈ ಘಟನೆಯ ಕುರಿತು ಇದುವರೆಗೂ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ದೆಹಲಿ ಪೋಲಿಸ್ ಅಧಿಕಾರಿಯೊಬ್ಬರು, ಘಟನೆಯಲ್ಲಿ ಭಾಗಿಯಾದ ಯಾರಿಂದಲೂ ನಮಗೆ ಯಾವುದೇ ದೂರು ಬಂದಿಲ್ಲ. ನಮಗೆ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಎಂದು ಹೇಳಿದ್ದಾರೆ.

    ಸಭೆಗೆ ಆಗಮಿಸಿದ್ದ ಪತ್ನಿ ಸರಿತಾ ಚೌಧರಿ ಅವರು ಮೊದಲು ನನ್ನನ್ನು ನಿಂದಿಸಿದರು. ಅಷ್ಟೇ ಅಲ್ಲ ಹಲ್ಲೆಗೆ ಯತ್ನಿಸಿದರು. ತಕ್ಷಣವೇ ರಕ್ಷಣೆಗಾಗಿ ಅವರನ್ನು ತಳ್ಳಿದ್ದೇನೆ ಎಂದು ಆಜಾದ್ ಸಿಂಗ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  • ಬಿಜೆಪಿ ಮುಖಂಡನಿಂದ ಸೊಸೆಗೆ ಲೈಂಗಿಕ ಕಿರುಕುಳ!

    ಬಿಜೆಪಿ ಮುಖಂಡನಿಂದ ಸೊಸೆಗೆ ಲೈಂಗಿಕ ಕಿರುಕುಳ!

    ಲಕ್ನೋ: ಬಿಜೆಪಿ ಮುಖಂಡನೊಬ್ಬ ತನ್ನ ಸೊಸೆಗೆ ಲೈಂಗಿಕ ಕಿರಿಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‍ನಗರ ಜಿಲ್ಲೆಯ ಜನಸತ್ ಪಟ್ಟಣದಲ್ಲಿ ನಡೆದಿದೆ.

    ಬಿಜೆಪಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಹೇಶ್ ಚಂದ್ ಶರ್ಮಾ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮಗ ಮತ್ತು ಸೊಸೆಯ ನಡುವಿನ ಆಸ್ತಿ ವಿವಾದದಿಂದಾಗಿ ಈ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ನಾನು ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಮಹೇಶ್ ಚಂದ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

    ಮಹೇಶ್ ಚಂದ್ ಶರ್ಮಾ ವಿರುದ್ಧ ಸೊಸೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354(ಮಹಿಳೆಯ ಮುಗ್ದತೆ ದುರುಪಯೋಗ ಪಡಿಸಿಕೊಂಡು ಆಕೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿ ಶುಕ್ರವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ, ಜನಸತ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯಲ್ಲಿ ಐವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರಶ್ನಿಸಿದ ಆಕೆಯ ಕುಟುಂಬದ ಸದಸ್ಯರನ್ನೂ ಸಹ ಥಳಿಸಿದ್ದಾರೆ. ಪರಾರಿಯಾಗಿದ್ದ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.