Tag: BJP leader

  • ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

    ಸೋನಾಲಿ ಪೋಗಟ್‌ಗೆ ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್‌ ನೀಡಿದ್ವಿ: ತಪ್ಪೊಪ್ಪಿಕೊಂಡ ಆರೋಪಿಗಳು

    ಪಣಜಿ: ಬಿಜೆಪಿ ನಾಯಕಿ ಸೋನಾಲಿ ಪೋಗಟ್‌ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಾರ್ಟಿ ವೇಳೆ ಪೋಗಟ್‌ಗೆ ಬಲವಂತವಾಗಿ ಮಾದಕ ದ್ರವ್ಯ (ಡ್ರಗ್ಸ್‌) ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋನಾಲಿ ಫೋಗಟ್ ಅವರು ಗೋವಾದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸಹಚರರು ಬಲವಂತವಾಗಿ ಮಾದಕ ದ್ರವ್ಯ ನೀಡಿದ್ದಾರೆ. ರೆಸ್ಟೋರೆಂಟ್‌ನಿಂದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಇದು ತಿಳಿದುಬಂದಿದ್ದು, ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

    ಬಿಜೆಪಿ ನಾಯಕಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಸಹಚರರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಅವರು ನಿರಂತರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸೋನಾಲಿ ಪೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಸೊನಾಲಿ ಫೋಗಟ್ ಆತ್ಮಹತ್ಯೆ ಪ್ರಕರಣ- ಇಬ್ಬರು ಸಹಚರರ ವಿರುದ್ಧ ಕೇಸ್

    ಟಿಕ್‌ ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೋನಾಲಿ ಪೋಗಟ್‌, 14ನೇ ಆವೃತ್ತಿಯ ʼಬಿಗ್‌ಬಾಸ್‌ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್‌

    ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್‌

    ಹೈದರಾಬಾದ್: ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದಕ್ಕೆ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಿನ್ನೆ ರಾತ್ರಿ ಹೈದರಾಬಾದ್‌ನಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು. ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕಾನೂನಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೈದರಾಬಾದ್‌ನ ದಕ್ಷಿಣ ವಲಯದ ಉಪ ಪೊಲೀಸ್ ಆಯುಕ್ತ ಪಿ.ಸಾಯಿ ಚೈತನ್ಯ ತಿಳಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೈಯಲು ಟರ್ಕಿಯಲ್ಲಿ ಉಗ್ರನಿಗೆ ಐಸಿಸ್ ತರಬೇತಿ!

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವ ವೀಡಿಯೋವನ್ನು ಸಿಂಗ್ ಬಿಡುಗಡೆ ಮಾಡಿದ್ದರು. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರ ಕಚೇರಿ ಮತ್ತು ಹೈದರಾಬಾದ್‌ನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು.

    ಸಿಂಗ್ ಅವರು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ತಕ್ಷಣ ಅವರನ್ನು ವಶಕ್ಕೆ ಪಡೆದು ನಂತರ ವಿವಿಧ ಠಾಣೆಗಳಿಗೆ ರವಾನಿಸಲಾಗಿದೆ. ಇದನ್ನೂ ಓದಿ: 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಅನುಮತಿ

    ನಗರದ ಗೋಶಾಮಹಲ್‌ನ ಶಾಸಕ ಟಿ.ರಾಜಾ ಸಿಂಗ್‌ ಕಳೆದ ವಾರ ಹಾಸ್ಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದರು. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವ್ವರ್ ಫಾರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲು ಸುಮಾರು 50 ಬೆಂಬಲಿಗರೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ತಲುಪಲು ಪ್ರಯತ್ನಿಸಿದಾಗ ಅವರನ್ನು ಶುಕ್ರವಾರ ಪೊಲೀಸರು ತಡೆದು ಕಸ್ಟಡಿಗೆ ತೆಗೆದುಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ನಾಯಕ ಸಲ್ಲಿಸಿದ್ದ ಅರ್ಜಿ ವಜಾ – ಅತ್ಯಾಚಾರ ಪ್ರಕರಣ ದಾಖಲಿಸಲು ಹೈಕೋರ್ಟ್‌ ಸೂಚನೆ

    ಬಿಜೆಪಿ ನಾಯಕ ಸಲ್ಲಿಸಿದ್ದ ಅರ್ಜಿ ವಜಾ – ಅತ್ಯಾಚಾರ ಪ್ರಕರಣ ದಾಖಲಿಸಲು ಹೈಕೋರ್ಟ್‌ ಸೂಚನೆ

    ಹೊಸದಿಲ್ಲಿ: ಅತ್ಯಾಚಾರ ಆರೋಪದಡಿ ಮಹಿಳೆಯೊಬ್ಬರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಶಾನವಾಜ್ ಹುಸೇನ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.

    ನ್ಯಾಯಮೂರ್ತಿ ಆಶಾ ಮೆನನ್ ಅವರು, ಎಫ್‌ಐಆರ್ ದಾಖಲಿಸಲು ನಿರ್ದೇಶಿಸುವ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಕೆ 47 ಪತ್ತೆಯಾದ ದೋಣಿ ಆಸ್ಟ್ರೇಲಿಯಾ ಪ್ರಜೆಗೆ ಸೇರಿದೆ: ಫಡ್ನವೀಸ್

    ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಒಪ್ಪುವಂತಹ ಅಂಶಗಳಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮಧ್ಯಂತರ ಆದೇಶಗಳು ತೆರವುಗೊಂಡಿವೆ. ಎಫ್‌ಐಆರ್ ಅನ್ನು ತಕ್ಷಣವೇ ದಾಖಲಿಸಬೇಕು. ತನಿಖೆಯನ್ನು ಪೂರ್ಣಗೊಳಿಸಿ ಮತ್ತು ಸೆಕ್ಷನ್ 173 ಸಿಆರ್‌ಪಿಸಿ ಅಡಿಯಲ್ಲಿ ವಿವರವಾದ ವರದಿಯನ್ನು ಮೂರು ತಿಂಗಳೊಳಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಬುಧವಾರ ತನ್ನ ಆದೇಶದಲ್ಲಿ ತಿಳಿಸಿದೆ.

    ಪೊಲೀಸರು ಇನ್ನೂ ಕೂಡ ಎಫ್‌ಐಆರ್‌ ದಾಖಲಿಸದೇ ಇರುವುದಕ್ಕೆ ಕಿಡಿಕಾರಿರುವ ಹೈಕೋರ್ಟ್‌, ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ಪೊಲೀಸರು ನಿರಾಸಕ್ತಿ ಹೊಂದಿರುವಂತೆ ತೋರುತ್ತದೆ. ತನಿಖೆಯ ನಂತರವೇ ಪೊಲೀಸರು ಅಪರಾಧ ಎಸಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ತಿಳಿದು ಬರಲಿದೆ ಎಂದಿದೆ. ಇದನ್ನೂ ಓದಿ: ಏಕರೂಪದ ಚಾರ್ಜರ್‌ ಜಾರಿಗೆ ತಜ್ಞರ ಸಮಿತಿ ರಚನೆಗೆ ಮುಂದಾದ ಕೇಂದ್ರ : ಸಭೆಯಲ್ಲಿ ಏನಾಯ್ತು?

    2018ರಲ್ಲಿ ದೆಹಲಿ ಮೂಲದ ಮಹಿಳೆಯೊಬ್ಬರು, ಶಹನವಾಜ್ ಹುಸೇನ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಲು ಕೋರಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜುಲೈ 7, 2018 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಧ್ವಜಕ್ಕೆ ಅಪಮಾನ – ಬಿಜೆಪಿ ನಾಯಕನ ವಿರುದ್ಧ ಕೇಸ್

    ರಾಷ್ಟ್ರಧ್ವಜಕ್ಕೆ ಅಪಮಾನ – ಬಿಜೆಪಿ ನಾಯಕನ ವಿರುದ್ಧ ಕೇಸ್

    ಕವರಟ್ಟಿ: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದಡಿ ಲಕ್ಷದ್ವೀಪ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕಾಸಿಂ ಎಚ್‍ಕೆ ವಿರುದ್ಧ ಕವರಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಮೊಹಮ್ಮದ್ ಕಾಸಿಂ ಅವರು ತಮ್ಮ ಪತ್ನಿಯೊಂದಿಗೆ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ನೋಟಿಸ್ ಕಳುಹಿಸಿದ್ದಾರೆ.

    CrPC ಯ ಸೆಕ್ಷನ್ 41-A ನ ಸೆಕ್ಷನ್ (1) ಉಪವಿಭಾಗದ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸುವಾಗ, ರಾಷ್ಟ್ರಧ್ವಜಕ್ಕೆ U/s 2 ಅವಮಾನ ಮಾಡಿರುವ ಆರೋಪದಡಿ ನೀವು ಕವರಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿ ಎಂದು ಶಂಕಿಸಲಾಗಿರುಬುದಾಗಿ ಈ ಮೂಲಕ ತಿಳಿಸುತ್ತೇನೆ.  ಇದನ್ನೂ ಓದಿ: ಮದರಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ – ಶೀಘ್ರವೇ ಸರ್ಕಾರದ ಆದೇಶ ಸಾಧ್ಯತೆ

    ಆಗಸ್ಟ್ 14 ರಂದು ರಾಷ್ಟ್ರೀಯ ಗೌರವ ಕಾಯಿದೆ 1971ರ ಪ್ರಕಾರ ಮತ್ತು ಈ ಪ್ರಕರಣದ ವಿಚಾರಣೆಗಾಗಿ ಆಗಸ್ಟ್ 25 ರಂದು ಬೆಳಗ್ಗೆ 10:30ಕ್ಕೆ ಲಕ್ಷದ್ವೀಪದ ಕವರಟ್ಟಿ, ಲಕ್ಷದ್ವೀಪ ಪೊಲೀಸ್ ಠಾಣೆಗೆ ಹಾಜರಾಗಲು ನಿಮಗೆ ಸೂಚಿಸಲಾಗಿದೆ. ಈ ಆದೇಶದ ಅನುಸಾರ ಬರಲು ನಿರಾಕರಿಸಿದ್ದಕ್ಕೆ U/s 174 IPC ಶಿಕ್ಷಾರ್ಹವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಸಿರಿಯಾ ಗಡಿಯಲ್ಲಿ ಟರ್ಕಿಯ ವೈಮಾನಿಕ ದಾಳಿ – 17 ಸೈನಿಕರ ಸಾವು

    Live Tv
    [brid partner=56869869 player=32851 video=960834 autoplay=true]

  • ಮಹಿಳೆ ನಿಂದನೆ, ಹಲ್ಲೆ ಆರೋಪ – ಬಿಜೆಪಿ ನಾಯಕ ಅರೆಸ್ಟ್‌

    ಮಹಿಳೆ ನಿಂದನೆ, ಹಲ್ಲೆ ಆರೋಪ – ಬಿಜೆಪಿ ನಾಯಕ ಅರೆಸ್ಟ್‌

    ಲಕ್ನೋ: ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ನಂತರ ಪರಾರಿಯಾಗಿದ್ದ ನೊಯ್ಡಾದ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಇಂದು ಮೀರತ್‌ನಲ್ಲಿ ಬಂಧಿಸಿದ್ದಾರೆ.

    ತ್ಯಾಗಿ ಅವರ ವಕೀಲರು ಗ್ರೇಟರ್ ನೋಯ್ಡಾ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದರು. ತ್ಯಾಗಿ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಇದಾದ ಬಳಿಕ ತ್ಯಾಗಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ – ಬಿಜೆಪಿ ನಾಯಕನ ಅಕ್ರಮ ಕಟ್ಟಡ ನೆಲಸಮ

    ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆ ಮೇಲೆ ತ್ಯಾಗಿ ಹಲ್ಲೆ ನಡೆಸಿದ್ದರು. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಘಟನೆ ಬಳಿಕ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದರು.

    ನಿನ್ನೆ ಪೊಲೀಸ್ ಸಿಬ್ಬಂದಿಯೊಂದಿಗೆ ನೊಯ್ಡಾದ ಸೆಕ್ಟರ್ -93ಬಿನಲ್ಲಿರುವ ಗ್ರಾಂಡ್ ಓಮ್ಯಾಕ್ಸ್ ಸೊಸೈಟಿಗೆ ತಲುಪಿದ ಅಧಿಕಾರಿಗಳು, ನಂತರ ಬಿಜೆಪಿಯ ಕಿಸಾನ್ ಮೋರ್ಚಾದ ಆಪಾದಿತ ಸದಸ್ಯ ಶ್ರೀಕಾಂತ್ ತ್ಯಾಗಿ ಅವರಿಗೆ ಸೇರಿದ್ದ ಅಕ್ರಮ ಕಟ್ಟಡವನ್ನು ಕೆಡವಿದ್ದರು. ಇದನ್ನೂ ಓದಿ: ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

    ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

    ಹೈದರಾಬಾದ್: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಜ್ಞಾನೇಂದ್ರ ಪ್ರಸಾದ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ‌

    ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್‌ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

    ಮಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸೋಮವಾರ ಬೆಳಗ್ಗೆ ಮಿಯಾಪುರ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ನಂತರ ಘಟನೆ ಬೆಳಕಿಗೆ ಬಂದಿದೆ.

    ತಕ್ಷಣವೇ ಒಂದು ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್‌ ಮೃತದೇಹ ಕಂಡುಬಂದಿದೆ. ಇದನ್ನೂ ಓದಿ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಆ್ಯಸಿಡ್ ದಾಳಿ

    ಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸಾದ್ ಕಳೆದ ಕೆಲವು ದಿನಗಳಿಂದ ತಮ್ಮ ಪೆಂಟ್‌ಹೌಸ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಆರ್‌ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್‌ ಮನೆಗೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿ – ನೆಟ್ಟಾರು ಕುಟುಂಬಕ್ಕೆ 5 ಲಕ್ಷ ಪರಿಹಾರ

    ಪ್ರವೀಣ್‌ ಮನೆಗೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿ – ನೆಟ್ಟಾರು ಕುಟುಂಬಕ್ಕೆ 5 ಲಕ್ಷ ಪರಿಹಾರ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ನೀಡಿದರು.

    ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ಸಂಪೂರ್ಣ ಕಷ್ಟದಲ್ಲಿ ಇರೋದು ಮಾತುಕತೆ ನಂತರ ಗೊತ್ತಾಗಿದೆ. ಸಾವಿಗೆ ಕಾರಣಕರ್ತರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಕುಟುಂಬದ ಅಭಿಪ್ರಾಯ ಕೂಡಾ ಅದೇ ಆಗಿದೆ. ನೋವನ್ನ ನಮ್ಮ ಮುಂದೆ ಹೇಳಿಕೊಂಡಿದ್ದಾರೆ. ಕಾಟಾಚಾರದ ತನಿಖೆ ಆಗಬಾರದು. ವಿಧವೆ ತಂಗಿಯನ್ನು ಸಾಕುವ ಜವಾಬ್ದಾರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಸರಣಿ ಹತ್ಯೆ ಪ್ರಕರಣ- ದಕ್ಷಿಣ ಕನ್ನಡಕ್ಕೆ DGP ಪ್ರವೀಣ್ ಸೂದ್ ಭೇಟಿ

    ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲು ಆಗದೆ ತನಿಖಾ ಅಧಿಕಾರ ಹಸ್ತಾಂತರ ಮಾಡಿದೆ. ರಾಜ್ಯ ಬಿಜೆಪಿ ಸರ್ಕಾರ ಬೇಜವಾಬ್ದಾರಿ ತೀರ್ಮಾನ ತೆಗೆದುಕೊಂಡಿದೆ. ನಮ್ಮ ಅಧಿಕಾರಿಗಳು ಬಹಳ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯದ ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವ ನಡೆ ಇದು. ಈ ಹಿಂದೆ NIA ಕೊಟ್ಟ ಪ್ರಕರಣಗಳ ರಿಸಲ್ಟ್ ಏನು? ನಮ್ಮ ರಾಜ್ಯದಲ್ಲಿ ಅದೆಷ್ಟೋ ದಕ್ಷ ಅಧಿಕಾರಿಗಳಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

    ಪ್ರವೀಣ್ ಕುಟುಂಬಕ್ಕೆ ನನ್ನ ಮೊಬೈಲ್ ನಂಬರ್ ನೀಡಿದ್ದೇನೆ. ಯಾವುದೇ ಸಂದರ್ಭದಲ್ಲಿ ಸಮಸ್ಯೆಯಾದರೆ ನೇರವಾಗಿ ಕರೆ ಮಾಡಿ ಮಾತನಾಡಬಹುದು. ಅಗತ್ಯಬಿದ್ದರೆ ಮತ್ತೆ ಆರ್ಥಿಕ ಹಣಕಾಸು ನೀಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರು ಪೊಲೀಸರ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಮುಖಂಡನ ಕೊಲೆ

    ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಮುಖಂಡನ ಕೊಲೆ

    ಮಂಗಳೂರು: ಅಪರಿಚಿತರ ಗುಂಪೊಂದು ಬಿಜೆಪಿ ಯುವ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯಲ್ಲಿ ನಡೆದಿದೆ.

    ದುಷ್ಕರ್ಮಿಗಳ ದಾಳಿಯಿಂದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಪುತ್ತೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಾಯಿ ಓದುವಂತೆ ಒತ್ತಾಯಿಸುತ್ತಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ – 2 ವಾರಗಳಲ್ಲಿ 3ನೇ ಸಾವು

    ಬೈಕಲ್ಲಿ ಬಂದ ಅಪರಿಚಿತರು ಕೃತ್ಯ ಎಸಗಿದ್ದಾರೆ. ಸದ್ಯ ಪುತ್ತೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪುತ್ತೂರು, ಬೆಳ್ಳಾರೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಇದನ್ನೂ ಓದಿ: 55ರ ಮಹಿಳೆಯೊಂದಿಗೆ 29ರ ಯುವಕ ರೊಮ್ಯಾನ್ಸ್ – ಮದುವೆ ಎಂದೊಡನೇ ಯುವಕ ಎಸ್ಕೇಪ್

    ಒಂದು ವಾರದ ಹಿಂದೆಯಷ್ಟೇ ನಡೆದ ಕೊಲೆಗೆ ಸೇಡು ತೀರಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಪ್ರವೀಣ್ ಅವರನ್ನು ಹತ್ಯೆ ಮಾಡಲು ಬಂದಿದ್ದ ದುಷ್ಕರ್ಮಿಗಳ ಬೈಕ್ ನಂಬರ್ ಕೇರಳದ ನೋಂದಣಿ ಸಂಖ್ಯೆಯಾಗಿದ್ದವು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಕಳೆದ ವಾರ 8 ಮಂದಿ ಯುವಕರ ತಂಡ ಒಬ್ಬ ಯುವಕನನ್ನು ಭೀಕರವಾಗಿ ಕೊಲೆ ಮಾಡಿತ್ತು. ಈ ಸಂಬಂಧ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಟ್ವೀಟ್ – ಬಿಜೆಪಿ ಮುಖಂಡ ಅರೆಸ್ಟ್

    ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಟ್ವೀಟ್ – ಬಿಜೆಪಿ ಮುಖಂಡ ಅರೆಸ್ಟ್

    ಲಕ್ನೋ: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿದ್ದ ಉತ್ತರ ಪ್ರದೇಶದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

    ಕಾನ್ಪುರದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಶ್ರೀವಾಸ್ತವನನ್ನು ಬಂಧಿಸಿದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಕಾನ್ಪುರದಲ್ಲಿ ಕೋಮುಗಲಭೆ ನಡೆದ ನಾಲ್ಕು ದಿನಗಳ ಬಳಿಕ ಈ ಘಟನೆ ನಡೆದಿದೆ. ಹರ್ಷಿತ್ ಮಾಡಿದ್ದ ಟ್ವೀಟ್‌ನಿಂದಾಗಿ ಇನ್ನಷ್ಟು ಗೊಂದಲದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇತ್ತು. ಹರ್ಷಿತ್ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯೋನ್ಮುಖರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಜ್ಞಾನವಾಪಿ ಮಸೀದಿ ಕುರಿತು ನಡೆಯುತ್ತಿದ್ದ ಚರ್ಚೆ ವೇಳೆ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ರಾಷ್ಟ್ರವ್ಯಾಪಿಯಾಗಿ ವಿವಾದ ಹರಡಿತ್ತು. ಅದೇ ವಿಚಾರವಾಗಿ ಕಾನ್ಪುರದಲ್ಲೂ ಹಿಂಸಾಚಾರ ನಡೆದಿತ್ತು. ಹಲವು ರಾಷ್ಟ್ರಗಳಿಂದ ಖಂಡನೆಯೂ ವ್ಯಕ್ತವಾಗಿದ್ದು, ಇಂಡೋನೇಷ್ಯಾ ಸರ್ಕಾರದಿಂದ ಭಾರತದ ರಾಯಭಾರಿಗೆ ಸಮನ್ಸ್ ಸಹ ನೀಡಲಾಗಿದೆ. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ 

    ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ಕಾನ್ಪುರದಲ್ಲಿ ಹಿಂಸಾಚಾರ ನಡೆದಿತ್ತು. ಗಲಭೆಗೆ ಸಂಬಂಧಿಸಿದಂತೆ ಕನಿಷ್ಠ 50 ಜನರನ್ನು ಬಂಧಿಸಲಾಗಿದ್ದು, ಸುಮಾರು 10 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

    ಈ ಬೆನ್ನಲ್ಲೇ ಹರ್ಷಿತ್ ಟ್ವೀಟ್ ಉತ್ತರ ಪ್ರದೇಶ ಸರ್ಕಾರದ ನಿದ್ದೆಗೆಡಿಸುವಂತೆ ಮಾಡಿದೆ. ಸದ್ಯ ಆತನ ವಿರುದ್ಧ ಕರ್ನೈಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಟ್ವೀಟ್ ಅನ್ನು ಅಳಿಸಿ ಹಾಕಲಾಗಿದೆ.

  • ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಕೇಸ್- 2 ಡೆತ್ ನೋಟ್‍ಗಳು ಲಭ್ಯ

    ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಕೇಸ್- 2 ಡೆತ್ ನೋಟ್‍ಗಳು ಲಭ್ಯ

    ಬೆಂಗಳೂರು: ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಸಂಬಂಧ ಡೆತ್ ನೋಟ್ ಇದೀಗ ಹೊರಬಂದಿದೆ. ಡೆತ್ ನೋಟ್ ಮೇಲೆ ರೇಖಾ ಅರೆಸ್ಟ್ ಬಳಿಕ ಸುಮಾ ರೋಲ್ ಬಗ್ಗೆಯೂ ಸಾಕಷ್ಟು ಆಡಿಯೊಗಳು ಹೊರಬಂದಿದ್ದವು. ಇದೀಗ ಡೆತ್ ನೋಟ್ ನ ಅಸಲಿ ಪ್ರತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಡೆತ್‍ನೋಟ್‍ನಲ್ಲಿ ಏನಿದೆ..?
    ಪ್ರಿಯ ಪತ್ನಿ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ. ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವೀಡಿಯೊಗಳ ಟ್ರ್ಯಾಪ್ ಗೆ ಸಿಲುಕಿದ್ದೆ. ಬ್ಲ್ಯಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ಮಕ್ಕಳನ್ನ ಚೆನ್ನಾಗಿ ನೋಡಿಕೋ. ಇಂತಿ ನಿನ್ನ ಮೋಸಗಾರ ಎಂದು ಹೇಳಿದ್ದಾರೆ. ಅಲ್ಲದೆ ಇನ್ಸ್ ಪೆಕ್ಟರ್ ನನಗೆ ಕಿರುಕುಳ ನೀಡಿ ಬ್ಲ್ಯಾಕ್ ಮೇಲ್ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತ ಪತ್ರದಲ್ಲಿ ಅನಂತ್ ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

    ಇನ್ಸ್ ಪೆಕ್ಟರ್ ಬರೆದ ಡೆತ್ ನೋಟ್ ಕೂಡ ವೈರಲ್ ಆಗಿದೆ. ಇದೇ ಡೆತ್ ನೋಟ್ ಗಳ ಮೇಲೆ ಅನಂತ್ ರಾಜು ಪತ್ನಿ ಸುಮಾ ದೂರು ನೀಡಿದ್ದರು. ಎಫ್‍ಐಆರ್ ದಾಖಲಿಸಿದ್ದ ಪೊಲೀಸರು ರೇಖಾಳನ್ನ ಬ್ಲಾಕ್ ಮೇಲ್ ಮತ್ತು ಹನಿಟ್ರ್ಯಾಪ್ ನಡಿ ಬಂಧಿಸಿದ್ರು. ಯಾವಾಗ ರೇಖಾ ಬಂಧನವಾಯಿತೋ ಅವಾಗ ರೇಖಾ, ತನ್ನ ಬಳಿಯಿದ್ದ ಸುಮಾ ಜೊತೆ ಮಾತನಾಡಿದ್ದ ಆಡಿಯೋ ಹೊರಗೆ ಬಿಟ್ಟಿದ್ರು. ಇದ್ರಲ್ಲಿ ಸುಮಾ ಕಿರುಕುಳ ಕೊಡುತ್ತಿದ್ದರ ಬಗ್ಗೆ ಗೊತ್ತಾಗಿತ್ತು. ಹನಿಟ್ರ್ಯಾಪ್ ಮಾಡೋದಾಗಿದ್ರೆ 6 ವರ್ಷ ಜೊತೆಯಲ್ಲಿ ಇರಬೇಕಿರಲಿಲ್ಲ ಅಂತಾ ಕೂಡ ರೇಖಾ ಹೇಳಿದ್ರು. ಈ ಹಿಂದೆ ಸ್ಯೂಸೈಡ್ ಅಟೆಂಪ್ಟ್ ಮಾಡಿದ್ದಾಗ ಬರೆಸಿಟ್ಟುಕೊಂಡಿರುವ ಡೆತ್ ನೋಟ್ ಅಂತಾ ರೇಖಾ ಆರೋಪಿಸುತ್ತಿದ್ದಾರೆ.