Tag: BJP leader

  • ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಆಸ್ತಿ ಪತ್ತೆ ಕೇಸ್‍ಗೆ ಟ್ವಿಸ್ಟ್ – ಅಮರ್ ಲಾಲ್ ಬೆನ್ನಿಗೆ ನಿಂತ ಬಿಜೆಪಿ ಲೀಡರ್!

    ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಆಸ್ತಿ ಪತ್ತೆ ಕೇಸ್‍ಗೆ ಟ್ವಿಸ್ಟ್ – ಅಮರ್ ಲಾಲ್ ಬೆನ್ನಿಗೆ ನಿಂತ ಬಿಜೆಪಿ ಲೀಡರ್!

    ಬೆಂಗಳೂರು: ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಉದ್ಯಮಿ ಅಮರ್ ಲಾಲ್ ಬೆನ್ನಿಗೆ ರಾಜಕಾರಣಿಗಳು ನಿಂತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಅವಿನಾಶ್ ಅಮರ್ ಲಾಲ್ ಬೆನ್ನಿಗೆ ದೆಹಲಿ ಬಿಜೆಪಿ ಪರಮೋಚ್ಚ ನಾಯಕ ನಿಂತಿದ್ದು, ತನಿಖೆಗೆ ಅಡ್ಡಿಪಡಿಸಲು ಒತ್ತಾಯ ಹೆಚ್ಚಾಗಿದೆಯಂತೆ. ಆದ್ದರಿಂದ ಐಟಿ ಇಲಾಖೆಯೂ ತನಿಖೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಅಮರ್ ಲಾಲ್ ನನ್ನು ಸದ್ಯಕ್ಕೆ ತನಿಖೆ ಮಾಡಬಾರದು. ವಿಚಾರಣೆಯನ್ನು ಸ್ವಲ್ಪ ನಿಧಾನ ಮಾಡಿ ಎಂದು ಐಟಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ

    ಐಟಿ ಅಮರ್ ಲಾಲ್ ಗೆ ನೋಟೀಸ್ ಒಂದನ್ನು ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅತ್ತ ಜಾರಿ ನಿರ್ದೇಶನಾಲಯದಿಂದಲೂ ಎಫ್‍ಐಆರ್ ದಾಖಲು ಮಾಡಲು ಮೀನಾಮೇಷ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ವಿದೇಶಿ ಕರೆನ್ಸಿ ಪತ್ತೆಯಾದರೂ ಕೂಡ ಐಟಿ ಅಧಿಕಾರಿಗಳು ಲಿಮಿಟ್ಸ್ ಬಗ್ಗೆ ತನಿಖೆ ನಡೆಸಿಲ್ಲ. ಆದ್ದರಿಂದ ಅವಿನಾಶ್ ಅಮರ್ ಲಾಲ್ ಪ್ರಕರಣದಲ್ಲೀಗ ಅನುಮಾನದ ಹುತ್ತ ಬೆಳೆಯುತ್ತಿದೆ.

    ಸದ್ಯಕ್ಕೆ ಅವಿನಾಶ್ ಅಮರ್‍ಲಾಲ್ ಇಂದು ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಐಟಿ ಅಧಿಕಾರಿಗಳು ಶನಿವಾರ ನೋಟಿಸ್ ನೀಡಿ 5 ದಿನಗಳ ಗಡುವು ನೀಡಲಾಗಿತ್ತು. ಆದ್ದರಿಂದ ಅವಿನಾಶ್ ಅಮರ್‍ಲಾಲ್ ಇಂದು ವಿಚಾರಣೆ ಹಾಜರಾಗುವ ಸಾಧ್ಯತೆ ಇದೆ.

    ಅವಿನಾಶ್ ಅಮರ್ ಲಾಲ್ ಲಾಕರ್‍ನಲ್ಲಿ 3.90 ಕೋಟಿ ನಗದು 10 ಕೋಟಿ ವಜ್ರಾಭರಣ, ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿತ್ತು. ಇದರಿಂದ ಆರೋಪಿ ಉದ್ಯಮಿ ಅವಿನಾಶ್ ಅಮರ್ ಲಾಲ್ ಕುಕ್ರೇಜ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಇಂದು ಸಂಜೆ 4 ಗಂಟೆಗೆ ಆಡಳಿತ ಮಂಡಳಿ ಈ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ.

  • ಜಮೀನಿನ ವಿಚಾರಕ್ಕಾಗಿ ಬಿಜೆಪಿ ಮುಖಂಡನಿಂದ ಮಾರಣಾಂತಿಕ ಹಲ್ಲೆ

    ಜಮೀನಿನ ವಿಚಾರಕ್ಕಾಗಿ ಬಿಜೆಪಿ ಮುಖಂಡನಿಂದ ಮಾರಣಾಂತಿಕ ಹಲ್ಲೆ

    ಧಾರವಾಡ: ಜಮೀನು ವಿಚಾರದಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡನೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಗುರುನಾಥಗೌಡ ಹಲ್ಲೆ ನಡೆಸಿದ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡ. ಗುರುನಾಥಗೌಡ ಹೆಬ್ಬಳ್ಳಿ ಗ್ರಾಮದ ವಿಠ್ಠಲ್ ಭೀಮಕ್ಕನವರ ಹಾಗೂ ಆತನ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

    ಕಳೆದ ಕೆಲವು ವರ್ಷಗಳಿಂದ ಗುರುನಾಥಗೌಡ ಹಾಗೂ ಭೀಮಕ್ಕನವರ ಕುಟುಂಬದ ಮಧ್ಯೆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆದಿತ್ತು. ಅಲ್ಲದೇ ನ್ಯಾಯಾಲಯವು ಭೀಮಕ್ಕನವರ ಪರ ತೀರ್ಪು ನೀಡಿದ್ದು, ಜಮೀನು ಭೀಮಕ್ಕನವರ ಕುಟುಂಬದ ಕೈ ಸೇರಿತು. ಆದರೆ ಬುಧವಾರ ಜಮೀನಿನಲ್ಲಿ ಬಿತ್ತನೆ ಮಾಡಲು ಮುಂದಾದ ವಿಠ್ಠಲ್ ಭೀಮಕ್ಕನವರ ಹಾಗೂ ಅವರ ಸಹೋದರ ಮೇಲೆ ಗುರುನಾಥಗೌಡ ಹಾಗೂ ಆತನ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ತಮ್ಮ ಮೇಲೆ ಹಲ್ಲೆ ಮಾಡಲು ಗುರುನಾಥಗೌಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತಂದಿದ್ದ ಎಂದು ಹಲ್ಲೆಗೊಳಗಾದ ವಿಠ್ಠಲ್ ಹಾಗೂ ಆತನ ಸಹೋದರ ತಿಳಿಸಿದ್ದಾರೆ. ಈ ಕುರಿತು ಗುರುನಾಥಗೌಡನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ರಾಯಚೂರು: ಜಿಲ್ಲೆಯ ಸಿಂಧನೂರು ನಗರ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನೋರ್ವರನ್ನು ಬಂಧಿಸಿದ್ದಾರೆ.

    ಸಿಂಧನೂರು ತಾಲೂಕು ಬಿಜೆಪಿ ಎಸ್‍ಸಿ ಘಟಕದ ಅಧ್ಯಕ್ಷ ಹುಸೇನಪ್ಪ ಶ್ರೀಪುರಂ ಬಂಧಿತ ಮುಖಂಡ. ನಗರದ ಆದರ್ಶ ಕಾಲೋನಿಯಲ್ಲಿ ಅಕ್ರಮ ದಂಧೆ ನಡೆಸಲಾಗ್ತಿದೆ ಅಂತ ಸಾರ್ವಜನಿಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

    ಹೀಗಾಗಿ ಖಚಿತ ಮಾಹಿತಿ ಮತ್ತು ದೂರಿನ ಅನ್ವಯ ಪೊಲೀಸರು ಅಡ್ಡೆಯ ಮೇಲೆ ರಾತ್ರಿ 8 ಗಂಟೆಯ ಸುಮಾರಿಗೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ಹುಸೇನಪ್ಪನನ್ನು ಸಿಂಧನೂರು ಪೊಲೀಸರು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಹುಸೇನಪ್ಪ ಈ ವೇಶ್ಯಾವಾಟಿಕೆಯನ್ನ ನಡೆಸುತ್ತಿದ್ದ ಅಂತ ಹೇಳಲಾಗುತ್ತಿದ್ದು, ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

  • ಹಿಟ್&ರನ್- 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಪೊಲೀಸರಿಗೆ ಶರಣು

    ಹಿಟ್&ರನ್- 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಬಿಜೆಪಿ ನಾಯಕ ಪೊಲೀಸರಿಗೆ ಶರಣು

    ಪಾಟ್ನಾ: ಕುಡಿದ ಮತ್ತಿನಲ್ಲಿ ಎಸ್‍ಯುವಿ ಕಾರ್ ಹರಿಸಿ 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ, ಅಮಾನತುಗೊಂಡಿರುವ ಬಿಹಾರದ ಬಿಜೆಪಿ ನಾಯಕ ಬುಧವಾರದಂದು ಇಲ್ಲಿನ ಮುಜಾಫರ್‍ಪುರ್‍ನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

    ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕ ಮನೋಜ್ ಬೈತಾ ಶನಿವಾರದಿಂದ ಕಾಣೆಯಾಗಿದ್ದರು. ಬುಧವಾರದಂದು ಬೈತಾ ಪೊಲೀಸರಿಗೆ ಶರಣಾಗಿದ್ದಾರೆ. ಅಪಘಾತದಲ್ಲಿ ಗಾಯಗಳಾದ ಹಿನ್ನೆಲೆಯಲ್ಲಿ ಬಂಧನದ ಬಳಿಕ ಬೈತಾ ಅವರನ್ನ ಚಿಕಿತ್ಸೆಗಾಗಿ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

    ವರದಿಗಳ ಪ್ರಕಾರ ಬೈತಾ ಅವರನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರವಿದ್ದು, ಈ ಪ್ರಕರಣದ ಬಗ್ಗೆ ವಿರೋಧ ಪಕ್ಷದವರು ವಾಗ್ದಾಳಿ ನಡೆಸುತ್ತಿರೋದ್ರಿಂದ ಬಿಜೆಪಿಗೆ ಮುಜುಗರ ತಂದಿದೆ. ರಾಜ್ಯ ಬಿಜೆಪಿ ನಾಯಕರ ನಿರ್ದೇಶನದಂತೆ ಬೈತಾ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಘಟನೆ ಬಳಿಕ ಬೈತಾ ಅವರನ್ನ ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ.

    ಶನಿವಾರದಂದು ಮುಜಾಫರ್‍ಪುರ್ ಹೊರವಲಯದ ಸರ್ಕಾರಿ ಶಾಲಾ ಕಟ್ಟಡವೊಂದರ ಬಳಿ ಮನೋಜ್ ಬೈತಾ ಚಲಿಸುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ಮಕ್ಕಳ ಮೇಲೆ ಹರಿದಿತ್ತು. ಪರಿಣಾಮ 9 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 20 ವಿದ್ಯಾರ್ಥಿಗಳು ಗಾಯಗೊಂಡಿದ್ದರು.

    ಘಟನೆ ಬಳಿಕ ಬೈತಾ ಕಾರಿನಿಂದ ಇಳಿದು ಪರಾರಿಯಾಗಿದ್ದರು. ಅಪಘಾತದಲ್ಲಿ ಐವರು ಮೊಮ್ಮಕ್ಕಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಬಗ್ಗೆ ದೂರು ದಾಖಲಿಸಿದ್ದರು. ಈ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಲಾಗಿದ್ದು, ಬೈತಾ ಅವರೇ ಕಾರು ಚಲಾಯಿಸುತ್ತಿದ್ದುದು ಗೊತ್ತಾಗಿದೆ.

    ಬಿಹಾರದಲ್ಲಿ ಮದ್ಯಪಾನ ನಿಷೇಧವಿದ್ದರೂ ಈ ಘಟನೆ ನಡೆದಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಅರೆಸ್ಟ್

    ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಅರೆಸ್ಟ್

    ನವದೆಹಲಿ: ಸ್ಥಳೀಯ ಬಿಜೆಪಿ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

    ರಾಜು ಕುಮಾರ್ ಅಲಿಯಾಸ್ ರಾಜು ಪೆಹಲ್ವಾನ್ (33) ಬಂಧಿತ ಆಟಗಾರ. ಆರೋಪಿ ರಾಜುನನ್ನು ಬುಧವಾರ ಪೊಲೀಸರು ದೆಹಲಿಯ ಹೊರವಲದ ಸಿರಾಸ್ಪುರ್‍ದಲ್ಲಿ ಬಂಧಿಸಿದ್ದಾರೆ.

    ಘಾಜಿಯಬಾದ್ ಖೋಡಾ ಕಾಲೋನಿ ಬಳಿ ಸೆಪ್ಟಂಬರ್ 2 ರಂದು ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಬಂದು ಏಕಾಏಕಿ ಗುಂಡಿನ ದಾಳಿ ಮಾಡಿ ಬಿಜೆಪಿ ನಾಯಕ ಗಂಜೇಂದ್ರ ಭಾಟಿ ಅವರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಭಾಟಿ ಅವರ ಸಹಾಯಕ ಬಲ್ಬೀರ್ ಸಿಂಗ್ ಚೌಹಾಣ್ ಗಾಯಗೊಂಡಿದ್ದರು.

    ಉತ್ತರ ಪ್ರದೇಶ ಪೊಲೀಸರು ಸೆಪ್ಟಂಬರ್ 11 ರಂದು ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ನರೇಂದರ್ ಅಲಿಯಾಸ್ ಫೌಜಿಯನ್ನು ಅರೆಸ್ಟ್ ಮಾಡಿದ್ದರು. ಆತನ ವಿಚಾರಣೆ ವೇಳೆ ಈ ಕೃತ್ಯದಲ್ಲಿ ರಾಜು ಪೆಹಲ್ವಾನ್ ಕೂಡ ಭಾಗಿಯಾಗಿದ್ದಾನೆ ಎಂದು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ರಾಜು ಪೆಹಲ್ವಾನ್ ಸಿರಾಸ್ಪುರ್‍ದಲ್ಲಿ ಇರುವ ಮಾಹಿತಿ ತಿಳಿದು ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಒಂದು ತಂಡವನ್ನು ರಚನೆ ಮಾಡಿಕೊಂಡರು. ಆರೋಪಿ ರಾಜು ಬೇರೆ ಸ್ಥಳಕ್ಕೆ ನಾಪತ್ತೆಯಾಗಲು ಜಿಟಿ ಕಾರ್ನಾಲ್ ರಸ್ತೆ ಸಮೀಪದ ಸಿರಾಸ್ಪುರ್‍ದ ಗುರುದ್ವಾರದ ಬಸ್ ನಿಲ್ದಾಣದಲ್ಲಿ ನಿಂತಿದ್ದನು. ಪೊಲೀಸರು ಹಿಡಿಯಲು ಮುಂದಾಗಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಕೊನೆಗೆ ಪೊಲೀಸರು ರಾಜುವನ್ನು ಸೆರೆ ಹಿಡಿದಿದ್ದಾರೆ.

    ಕೊಲೆ ಕೃತ್ಯ ಎಸಗಲು ಇಬರಿಬ್ಬರು ಮುಂಗಡವಾಗಿ 10 ಲಕ್ಷ ಮತ್ತು 50 ಸಾವಿರ ರೂ. ಹಣವನ್ನು ಪಡೆದಿದ್ದರು ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.

    2013 ರಲ್ಲಿ ನಮ್ಮ ವಾಹನಗಳು ಗ್ರೇಟರ್ ನೋಯ್ಡಾದ ಬಳಿ ಡಿಕ್ಕಿ ಹೊಡೆದ ಬಳಿಕ ಭಾಟಿ ನಮ್ಮ ಮೇಲೆ ದಾಳಿ ನಡೆಸಿದ್ದರು. ನಂತರ 2015 ರಲ್ಲಿ ಭಾಟಿ ಬಲವಂತವಾಗಿ ರಾಜಿ ಮಾಡಿಸಿದ್ದರು. ಆದರೆ ಅವರು ಬೆದರಿಕೆ ಹಾಕಿ ಕ್ರೀಡಾ ಆವರಣದಲ್ಲಿ ಗುಂಡು ಹಾರಿಸಿದ್ದರು. ನಾನು ಪೊಲೀಸರಿಗೆ ದೂರು ನೀಡಲು ಹೋದಾಗ ಆ ಪ್ರದೇಶದಲ್ಲಿ ಅವರು ಪ್ರಭಾವಿ ವ್ಯಕ್ತಿಯಾದ್ದರಿಂದ ಯಾರು ಕೇಸ್ ದಾಖಲಿಸಿಕೊಂಡಿರಲಿಲ್ಲ. ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ವಿಚಾರಣೆಯ ವೇಳೆಯಲ್ಲಿ ಬಂಧಿತ ರಾಜು ಹೇಳಿದ್ದಾನೆ.

    ಕೊನೆಗೆ ರಾಜು ಭಾಟಿ ಅವರನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಎರಡು ತಿಂಗಳ ಹಿಂದೆ ಫೌಜಿಯ ಜೊತೆ ಸಂಪರ್ಕದಲ್ಲಿದ್ದು, ಲೋನಿ ನಗರದ ಭೂಪ್ಖೇರಿ ಗ್ರಾಮದ ಮುಖೇಶ್ ಹಾಗೂ ರಾಜಕೀಯ ವೈರತ್ವ ಹೊಂದಿದ್ದ ಶರ್ಮಾ ಅವರು ಇವರ ಜೊತೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೇ ಸಂಜೀವ್ ನಗರದ ಇಬ್ಬರು ಉದ್ಯಮಿಗಳಾದ ಸೂರಜ್ ಮತ್ತು ಪರ್ಮೋಡಾ ಅವರ ಹತ್ತಿರ ಭಾಟಿಯನ್ನು ಕೊಲ್ಲಲು 8 ಲಕ್ಷ ರೂ. ಹಣವನ್ನು ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜು ಪೆಹಲ್ವಾನ್ ವಿವಿಧ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಆಟವಾಡಿದ್ದಾನೆ. 2005 ಮತ್ತು 2009 ರಲ್ಲಿ ಉತ್ತರ ಪ್ರದೇಶದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಟವಾಡಿ ಪ್ರತಿನಿಧಿಸಿದ್ದ ಜೊತೆಗೆ ಭಾರತದ ಕಬಡ್ಡಿ ತಂಡದಲ್ಲೂ ಸ್ಥಾನವನ್ನು ಪಡೆದಿದ್ದ.