Tag: BJP Govt

  • ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಶ್ರೀನಗರ: ಕೇಂದ್ರಾಡಳಿತ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆಗಳು ಹೆಚ್ಚುತ್ತಿದೆ. ಈ ಹಿನ್ನೆಲೆ ಶೀಘ್ರದಲ್ಲಿಯೇ ಸರ್ಕಾರ ಏನನ್ನು ಮಾಡದೇ ಹೋದರೆ ಕಾಶ್ಮೀರದಲ್ಲಿ ಖಂಡಿತ 100% ಹಿಂದೂಗಳು ಕಡಿಮೆಯಾಗುತ್ತಾರೆ ಎಂದು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‍ಸಿ) (Jammu and Kashmir National Conference) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

    ಈ ಕುರಿತಂತೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, 1990ರಲ್ಲಿ ಸಂಭವಿಸಿದ್ದ ಪರಿಸ್ಥಿತಿಗಳು ಕಾಶ್ಮೀರಿ ಪಂಡಿತರಿಗೆ ಪುನಃ ಬಂದಿದೆ. ಈ ವಿಚಾರವಾಗಿ ಸರ್ಕಾರ ಕೂಡಲೇ ಏನ್ನಾನಾದರೂ ಮಾಡಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಕಾಶ್ಮೀರದಲ್ಲಿ ಶೇ. 100% ಹಿಂದೂಗಳು ಕಡಿಮೆಯಾಗುತ್ತಾರೆ. ಅಲ್ಲದೇ ನಾನು ಯಾವುದೇ ಭಯೋತ್ಪಾದಕರ ಪರ ಹೇಳಿಕೆಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

    ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಧ್ಯಸ್ಥಿಕೆ ವಹಿಸಬೇಕು. ಈ ಬಗ್ಗೆ ಗಮನ ಹರಿಸಬೇಕು. ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗಳು ಮತ್ತು ಅಲ್ಪಸಂಖ್ಯಾತ ಹಿಂದೂಗಳ ವಲಸೆಯ ಬಗ್ಗೆ ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ 21 ಐಎಎಸ್ ಅಧಿಕಾರಿಗಳ ವರ್ಗಾವಣೆ

    ಕರ್ನಾಟಕದ 21 ಐಎಎಸ್ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಉತ್ತರ ಕನ್ನಡ ಡಿಸಿಗಳು ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಡಾ. ಬಗಾದಿ ಗೌತಮ್ ಅವರನ್ನು ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಚಾಮರಾಜನಗರದ ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಸೋಮಲ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಆ ಸ್ಥಾನಕ್ಕೆ ರಮೇಶ್ ಡಿ.ಎಸ್ ಅವರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: 4ರ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ – ಶಾಲೆಯನ್ನೇ ಮುಚ್ಚಿಸಿದ ಸರ್ಕಾರ

    ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಎಸ್ ಅವರನ್ನು ಬೆಂಗಳೂರಿನ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಗೆ ಆಯುಕ್ತರಾಗಿ ವರ್ಗಾಯಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಡಾ. ರಾಜೇಂದ್ರ ಕೆ.ವಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲೈ ಮುಹಿಲನ್ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.

    ಹಾವೇರಿ ಜಿಲ್ಲಾಧಿಕಾರಿಯಾಗಿ ರಘುನಂದನ್ ಮೂರ್ತಿ ಅವರನ್ನು ವರ್ಗಾಯಿಸಲಾಗಿದೆ. ಹೀಗೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್

    Live Tv
    [brid partner=56869869 player=32851 video=960834 autoplay=true]

  • ಮೋದಿ ಪ್ರಧಾನಿಯಾಗಿ 8 ವರ್ಷ – ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇಗೆ ಚಾಲನೆ

    ಮೋದಿ ಪ್ರಧಾನಿಯಾಗಿ 8 ವರ್ಷ – ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇಗೆ ಚಾಲನೆ

    ನವದೆಹಲಿ: ಜಪಾನ್ ಪ್ರವಾಸಿ ಮುಗಿದ ನಂತರ ಭಾರತಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಲಿದ್ದಾರೆ.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಹಾಗೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎಂಟು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆ ಮೋದಿ ಗುರುವಾರ ಹೈದರಾಬಾದ್ ಹಾಗೂ ತಮಿಳುನಾಡಿನಲ್ಲಿ ಮಾಡಲಿರುವ ಭಾಷಣ ಮೇಲೆ ಎಲ್ಲರ ನಿರೀಕ್ಷೆಗಳಿದೆ.

    ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನರೇಂದ್ರ ಮೋದಿ ಅವರು, ಇದೇ ಮೊದಲ ಬಾರಿಗೆ ತಮಿಳುನಾಡಿಗೆ ಭೇಟಿ ನೀಡುತ್ತಿದ್ದು ಹಲವು ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ.

    ಹೈದರಾಬಾದ್ ಭೇಟಿ: ಪ್ರಧಾನಿ ಮೋದಿ ಅವರು ಇಂದು 2 ಗಂಟೆ ಸುಮಾರಿಗೆ ಹೈದರಾಬಾದ್‍ಗೆ ಆಗಮಿಸಲಿದ್ದು, ಬಳಿಕ ಐಎಸ್‍ಬಿ 20ನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಪದವಿ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ತಮಿಳುನಾಡು ಭೇಟಿ: ಸಂಜೆ 5.45ರ ಸುಮಾರಿಗೆ ಚೆನ್ನೈ ತಲುಪಲಿರುವ ಮೋದಿ ಅವರು, 31,400 ಕೋಟಿಯ ಒಟ್ಟು 11 ಯೋಜನೆಗಳಿಗೆ ಅವರು ಶಿಲನ್ಯಾಸ ಮಾಡಲಿದ್ದು, ಇದೇ ವೇಳೆ 2,900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾಲ್ಕು ರೈಲ್ವೆ ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 910 ಕೋಟಿ ವೆಚ್ಚದಲ್ಲಿ 271 ಕಿಮೀ ಉದ್ದದ ತಿರುವಳ್ಳೂರು-ಬೆಂಗಳೂರು ಭಾಗದ ನೈಸರ್ಗಿಕ ಅನಿಲ ಪೈಪ್‍ಲೈನ್‍ಗೂ ಅವರು ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 116 ಕೋಟಿ ವೆಚ್ಚದಲ್ಲಿ ಚೆನ್ನೈನ ಲೈಟ್ ಹೌಸ್ ಯೋಜನೆಯ ಭಾಗವಾಗಿ ನಿರ್ಮಿಸಲಾದ 1,152 ಮನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಭಾರತ – ರಿಯಾಯಿತಿ ಬಗ್ಗೆ ಆಗಿಲ್ಲ ನಿರ್ಧಾರ

    PM MET STALIN

    28,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಇದು 262 ಕಿಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರಸ್ತೆ ಒಳಗೊಂಡಿದೆ. 14,870 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಎರಡರಿಂದ ಮೂರು ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡ್ತಿದೆ, ಆಡಳಿತ ವಿರೋಧಿಗಳಿಗೆ ಅದೇ ಉತ್ತರ: ಬೊಮ್ಮಾಯಿ

    ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡ್ತಿದೆ, ಆಡಳಿತ ವಿರೋಧಿಗಳಿಗೆ ಅದೇ ಉತ್ತರ: ಬೊಮ್ಮಾಯಿ

    ಹುಬ್ಬಳ್ಳಿ: ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡುತ್ತಿದೆ. ಆಡಳಿತ ವಿರೋಧಿಗಳಿಗೆ ಅದೇ ಉತ್ತರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಸರ್ಕಾರದ ಗಂಡಸ್ತನ ತೋರಿಸುತ್ತಿಲ್ಲ ಎಂಬ ಪ್ರಶ್ನೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಹಿಜಬ್, ಹಲಾಲ್, ಆಜಾನ್ ವಿಚಾರವನ್ನು ಸಮರ್ಥವಾಗಿ ನಿಭಾಯಿಸಿದೆ. ಎಲ್ಲ ವಿಷಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಆಜಾನ್ ಸಹ ಸುಪ್ರೀಂಕೋರ್ಟ್ ಆದೇಶ ಆಗಿದೆ. ನ್ಯಾಯ ಸಮ್ಮತವಾಗಿ ಬಗೆಹರಿಸುವ ಆಡಳಿತ ಮಾಡುತ್ತಿದ್ದೇವೆ. ಇದೇ ನಮ್ಮ ಉತ್ತರ ಅಂತ ಟಾಂಗ್ ನೀಡಿದರು. ಇದನ್ನೂ ಓದಿ:  ಆಭರಣ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನ – ಕಳ್ಳನ ಲಾಂಗ್ ಕಿತ್ತು ಕಳುಹಿಸಿದ ಮಾಲೀಕ

    SUPREME COURT

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸದ್ಯ ವಿಧಾನ ಪರಿಷತ್, ರಾಜ್ಯ ಸಭಾ ಚುನಾವಣೆಯಲ್ಲಿ ಬ್ಯುಸಿ ಇದ್ದೇವೆ, ಬಹುತೇಕ ನಾಳೆ ನಾನು ಎಲ್ಲರನ್ನೂ ಸಂಪರ್ಕ ಮಾಡುತ್ತೇನೆ. ನಮ್ಮ ವರಿಷ್ಠರ ನಿರ್ಧಾರದ ಮೇಲೆ ತೀರ್ಮಾನ ಮಾಡುತ್ತೇನೆ. ಇನ್ನೂ ವಿಜಯೇಂದ್ರರನ್ನು ಮಂತ್ರಿ ಮಾಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಹೇಳಿದರು. ಇದನ್ನೂ ಓದಿ:  ಗಂಡನ ಜೊತೆ ಜಗಳ – ಸಾಯ್ತೀನಿ ಅಂತ ಕೆರೆಯಲ್ಲಿ ಕೂತ ಮಹಿಳೆ

  • ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ರಾಣೆಗೆ ಕ್ಯಾಬಿನೆಟ್‍ನಲ್ಲಿ ಖಾಯಂ ಸ್ಥಾನ ಕೊಟ್ಟ ಗೋವಾ ಸರ್ಕಾರ

    ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ರಾಣೆಗೆ ಕ್ಯಾಬಿನೆಟ್‍ನಲ್ಲಿ ಖಾಯಂ ಸ್ಥಾನ ಕೊಟ್ಟ ಗೋವಾ ಸರ್ಕಾರ

    ಪಣಜಿ: ಗೋವಾ ಬಿಜೆಪಿ ಸರ್ಕಾರವು ಹಿರಿಯ ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ರಾಣೆ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನವನ್ನು ಖಾಯಂಗೊಳಿಸಿದೆ. 87 ವರ್ಷದ ಪ್ರತಾಪ್ ಸಿಂಗ್ ರಾಣೆ ಅವರು ಸಾಕಷ್ಟು ವರ್ಷಗಳ ಕಾಲ ಗೋವಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

    ಪ್ರತಾಪ್‍ಸಿಂಹ ರಾಣೆ ಅವರ ಪುತ್ರ ವಿಶ್ವಜಿತ್ ಬಿಜೆಪಿಯಲ್ಲಿದ್ದು, ಪ್ರಸ್ತುತ ಗೋವಾದ ಆರೋಗ್ಯ ಸಚಿವರಾಗಿದ್ದಾರೆ. 2017 ರ ವಿಧಾನಸಭಾ ಚುನಾವಣೆಯ ನಂತರ ವಿಶ್ವಜಿತ್ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಯಾದರು. ಪ್ರತಾಪ್ ಸಿಂಗ್ ರಾಣೆ ಅವರು ಇಲ್ಲಿಯವರೆಗೂ ಹಲವಾರು ಖಾತೆಗಳನ್ನು ನಿಭಾಯಿಸಿದ್ದು, ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಈ ಕುರಿತಂತೆ ಪ್ರಮೋದ್ ಸಾವಂತ್, ನಮ್ಮ ಸರ್ಕಾರವು ಗೋವಾ ರಾಜ್ಯಕ್ಕೆ ಉತ್ತಮ ಸೇವೆಗಳನ್ನಿ ಸಲ್ಲಿಸಿರುವ ಹಿರಿಯ ಶಾಸಕರಾದ ಪ್ರತಾಪ್‍ಸಿಂಗ್ ರಾಣೆ ಅವರಿಗೆ ಖಾಯಂ ಕ್ಯಾಬಿನೆಟ್ ಸ್ಥಾನಮಾನವನ್ನು ನೀಡಲು ನಿರ್ಧರಿಸಿದೆ. ಗೋವಾ ವಿಧಾನಸಭೆಯ ಮುಖ್ಯಮಂತ್ರಿ ಮತ್ತು ಸ್ಪೀಕರ್ ಆಗಿ ಅವರು ರಾಜ್ಯದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಪ್ರತಾಪ್ ಸಿಂಗ್ ರಾಣೆ ಮತ್ತು ಅವರ ಮಗ ವಿಶ್ವಜಿತ್ ಪೊರಿಯಮ್ ವಿಧಾನಸಭಾ ಕ್ಷೇತ್ರದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ತನ್ನ ತಂದೆಯನ್ನು 11 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುತ್ತೇನೆ ಎಂದು ವಿಶ್ವಜಿತ್ ಸವಾಲು ಹಾಕಿದ್ದಾರೆ. ಜೊತೆಗೆ ವಿಶ್ವಜಿತ್ ಅವರು ತಮ್ಮ ತಂದೆ ಪ್ರತಾಪ್ ಸಿಂಗ್ ರಾಣೆ ಅವರ ಕೆಲಸವನ್ನು ಗುರುತಿಸಿದ ಗೋವಾ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ