Tag: BJP government

  • ಸಭೆಗೆ ಕಳಪೆ ವಸ್ತು ತಂದು ಮೆಸ್ಕಾಂ ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ಈಶ್ವರಪ್ಪ

    ಸಭೆಗೆ ಕಳಪೆ ವಸ್ತು ತಂದು ಮೆಸ್ಕಾಂ ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ಈಶ್ವರಪ್ಪ

    ಶಿವಮೊಗ್ಗ: ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಕಾಮಗಾರಿ ಕುರಿತಂತೆ ಮೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಿಲ್ಲಾಧಿಕಾರಿಗಳ ಕಛೇರಿ ಸಂಭಾಗಣಕ್ಕೆ ಕಾಮಗಾರಿಯಲ್ಲಿ ಅಳವಡಿಸಿರುವ ಕಳಪೆ ವಸ್ತುಗಳ ಜೊತೆಗೆ ಸಭೆಗೆ ಆಗಮಿಸಿದ ಸಚಿವ ಈಶ್ವರಪ್ಪನವರು, ಯೋಜನೆಯಡಿ ಅಳವಡಿಸಿರುವ ಕಳಪೆ ವಸ್ತುಗಳನ್ನು ಅಧಿಕಾರಿಗಳ ಎದುರು ಪ್ರದರ್ಶಿಸಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ಮಾಡಿದ್ದಾರೆ.

    ನಿರಂತರ ಯೋಜನೆಯಡಿ ಕಳಪೆ ಕಾಮಗಾರಿ ನಡೆದಿದೆ ಎಂಬುದನ್ನು ನಾನು ಸಾಕ್ಷಿ ಸಮೇತ ನಿಮ್ಮ ಮುಂದೆ ಇಟ್ಟಿದ್ದೇನೆ. ಗುತ್ತಿಗೆದಾರ ಕಳಪೆ ವಸ್ತುಗಳನ್ನು ಬಳಸುವಾಗ ನೀವೆಲ್ಲಾ ಏನು ಮಾಡುತ್ತಿದ್ದೀರಿ? ಕಣ್ಣು ಮುಚ್ಚಿಕೊಂಡು ಕುಳಿತಿದ್ರಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡಿ ಕಾಮಗಾರಿ ನಡೆಸುತ್ತಿದೆ. ಕಾಮಗಾರಿ ನಡೆಯುತ್ತಿದೆ ಎಂದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದವರು ಯಾರು? ಇದನ್ನೆಲ್ಲಾ ಗಮನಿಸುವುದು ನಿಮ್ಮ ಕರ್ತವ್ಯ ತಾನೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ಗುತ್ತಿಗೆದಾರ ಟೆಂಡರ್‍ನಲ್ಲಿ ಉಲ್ಲೇಖಿಸಿರುವ ಸಾಮಾಗ್ರಿಗಳನ್ನು ಕಾಮಗಾರಿಯಲ್ಲಿ ಬಳಸಿಲ್ಲ. ಅದರಲ್ಲೂ ಸಾಮಾಗ್ರಿಗಳನ್ನು ಹಾಕದೇ ಬಿಲ್ ಕೂಡಾ ಮಾಡಿಸಿಕೊಂಡಿದ್ದಾನೆ. ಈ ಬಗ್ಗೆ ಆತನನ್ನು ಯಾರು ಪ್ರಶ್ನೆ ಮಾಡಬೇಕು. ನೀವು ಸರಿಯಿದ್ದರೆ ಇದೆಲ್ಲಾ ನಡೆಯಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ ಅವರು ಈ ಕಾಮಗಾರಿಯನ್ನು ಕೂಡಲೇ ಪರಿಶೀಲಿಸಿ, ತನಿಖೆ ನಡೆಸಿ 15 ದಿನಗಳೊಳಗೆ ವರದಿ ನೀಡಬೇಕು. ಈ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಎಲ್ಲೆಲ್ಲಿ ಕಾಮಗಾರಿ ನಡೆಸಿದ್ದಾನೆ ಎಂಬುದನ್ನು ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

  • ಬಿಜೆಪಿ ಸರ್ಕಾರದಿಂದ ಡ್ರಗ್ಸ್ ಮುಕ್ತ ಕರ್ನಾಟಕ ಮಾಡೇ ಮಾಡ್ತೀವಿ: ಈಶ್ವರಪ್ಪ

    ಬಿಜೆಪಿ ಸರ್ಕಾರದಿಂದ ಡ್ರಗ್ಸ್ ಮುಕ್ತ ಕರ್ನಾಟಕ ಮಾಡೇ ಮಾಡ್ತೀವಿ: ಈಶ್ವರಪ್ಪ

    – ಡ್ರಗ್ಸ್ ವ್ಯವಸ್ಥೆಯಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಭಾಗಿ

    ಶಿವಮೊಗ್ಗ: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಚಿತ್ರ ನಟಿಯರು ಹಾಗೂ ಅವರಿಗೆ ಡ್ರಗ್ಸ್ ಪೂರೈಸಿದವರು ಈಗಾಗಲೇ ಜೈಲಿನಲ್ಲಿದ್ದು, ಈ ಪ್ರಕರಣದಲ್ಲಿ ಇನ್ನೂ ಅನೇಕ ಪ್ರಭಾವಿ ವ್ಯಕ್ತಿಗಳು ಇದ್ದಾರೆ. ಯಾರೇ ಪ್ರಭಾವಿಗಳು ಇದ್ದರೂ ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಸಹಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಡ್ರಗ್ಸ್ ಮುಕ್ತ ಕರ್ನಾಟಕ ಸಹಿ ಅಭಿಯಾನ ಕಾರ್ಯಕ್ರಮವೇ ನಮ್ಮ ಸಂಸ್ಕೃತಿಗೆ ನಾಚಿಕೆಗೇಡು ಎಂದರು.

    ಅನೇಕ ವರ್ಷಗಳಿಂದ ಡ್ರಗ್ಸ್, ಮಾದಕ ವಸ್ತು ಸೇವನೆ ಹಾಗೂ ಲೈಂಗಿಕ ಚಟುವಟಿಕೆ ನಡೆಯುತ್ತಿದೆ. ನಮ್ಮ ರಾಜ್ಯಕ್ಕೆ ಬೇರೆ ಬೇರೆ ರಾಜ್ಯ ಹಾಗೂ ವಿದೇಶದಿಂದ ಡ್ರಗ್ಸ್ ಸರಬರಾಜು ಆಗುತ್ತಿದೆ. ಡ್ರಗ್ಸ್ ವಿರುದ್ಧ ಬಿಜೆಪಿ ಸರ್ಕಾರ ಒಂದು ದಿಟ್ಟ ನಿಲುವು ಕೈಗೊಂಡಿದ್ದು, ರಾಜ್ಯದಲ್ಲಿ ಇನ್ನು ಮುಂದೆ ಡ್ರಗ್ಸ್ ಇರಬಾರದು ಎಂಬ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

    ಡ್ರಗ್ಸ್ ವ್ಯವಸ್ಥೆ ಬಗ್ಗೆ ವಿಧಾನ ಮಂಡಲದ ಒಳಗೆ ಹಾಗೂ ಹೊರಗೆ ಸಾಕಷ್ಟು ಚರ್ಚೆ ಆಯಿತು. ಆದರೆ ಈ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಡ್ರಗ್ಸ್ ವಿಚಾರದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಬೆಂಬಲ ಕೊಡಲಿಲ್ಲ ಎಂಬುದು ತುಂಬ ನೋವಿನ ಸಂಗತಿ. ಡ್ರಗ್ಸ್ ವಿಚಾರದಲ್ಲಿ ಪೊಲೀಸರು ಒಳ್ಳೆಯ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಸಹ ಪೊಲೀಸರ ಬೆಂಬಲಕ್ಕೆ ಇದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿಯೇ ತೀರುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

  • 6 ಆರು ವರ್ಷಗಳಿಂದ ರೈತರ ಮೇಲೆ ಮೋದಿಯವ್ರ ವಕ್ರದೃಷ್ಟಿ ಬಿದ್ದಿರ್ಲಿಲ್ಲ: ಕೃಷ್ಣಭೈರೇಗೌಡ

    6 ಆರು ವರ್ಷಗಳಿಂದ ರೈತರ ಮೇಲೆ ಮೋದಿಯವ್ರ ವಕ್ರದೃಷ್ಟಿ ಬಿದ್ದಿರ್ಲಿಲ್ಲ: ಕೃಷ್ಣಭೈರೇಗೌಡ

    ಬೆಂಗಳೂರು: ಕಳೆದ ಆರು ವರ್ಷಗಳಿಂದ ರೈತರ ಮೇಲೆ ಪ್ರಧಾನಿ ಮೋದಿಯವರ ವಕ್ರದೃಷ್ಟಿ ಬಿದ್ದಿರಲಿಲ್ಲ. ಹೀಗಾಗಿ ರೈತರ ಆದಾಯ ಕಡಿಮೆ ಆಗಿರಲಿಲ್ಲ ಎಂದು ಶಾಸಕ ಕೃಷ್ಣಭೈರೇಗೌಡ ಹೇಳಿದ್ದಾರೆ.

    ನಗರದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈಗ ಅಂಬಾನಿ ಮತ್ತು ಅದಾನಿ ಮಾತ್ರ ಶ್ರೀಮಂತರಾದ್ರು. ದೇಶ ಹಿಂದೆ ಬಿದ್ರೆ ಅಂಬಾನಿ ಮಾತ್ರ ಪ್ರಪಂಚದಲ್ಲಿಯೇ ಐದನೇ ಶ್ರೀಮಂತರಾದ್ರು. ಬಿಜೆಪಿ ಇದೇ ರೀತಿ ಮುಂದುವರಿಯಲು ಬಿಟ್ರೆ ದೇಶ ಅಧೋಗತಿಗೆ ಹೋಗುತ್ತೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಕಿತ್ತು ಒಗೆಯುವವರೆಗೂ ಸುಮ್ಮನೆ ಕೂರಬಾರದು ಎಂದು ವಾಗ್ದಾಳಿ ನಡೆಸಿದರು.

    ಅಂಬಾನಿ ಪ್ರಪಂಚದ ಐದನೇ ಶ್ರೀಮಂತ ಆಗಿದ್ದಾರೆ. ದೇಶ ಕೆಳಗೆ ಹೋಗಿದೆ, ಇವರು ಮೇಲೆ ಹೋಗುತ್ತಿದ್ದಾರೆ. ದೇಶದಲ್ಲಿ ಏರ್ ಪೊರ್ಟ್ ಗಳನ್ನು ಅದಾನಿಗೆ ನೀಡುತ್ತಿದ್ದಾರೆ. ಇವರ ಕೆಂಗಣ್ಣಿಗೆ ರೈತರಿ ಕಂಡಿರಲಿಲ್ಲ, ಈಗ ಇವರ ಕೆಂಗಣ್ಣಗೆ ಗುರಿ ಮಾಡುತ್ತಿದ್ದಾರೆ. ಅಂಬಾನಿ , ಅದಾನಿಗೆ ಇವರುಗಳು ಎಲ್ಲವನ್ನೂ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಇದನ್ನೂ ಓದಿ: ತೇಜಸ್ವಿ ಸೂರ್ಯರಿಂದ ಕನ್ನಡಿಗರಿಗೆ ಅಪಮಾನ: ಡಿಕೆಶಿ

    ಕಾಂಗ್ರೆಸ್ ಧರ್ಮ ಜನರ ಸಮಸ್ಯೆಗಳಲ್ಲಿ ಭಾಗಿಯಾಗುವುದು. ಸಮಸ್ಯೆಗಳನ್ನು ನಾವು ಹೊರಗೆ, ವಿಧಾನಸಭೆಯಲ್ಲಿ ಮಾತಾಡಿದ್ದೇವೆ. ಇವರನ್ನು ತೆಗೆಯದಿದ್ದರೆ ರೈತರು ಉಳಿಯಲ್ಲ, ಕಾರ್ಮಿಕರೂ ಉಳಿಯಲ್ಲ. ಬರಿ ಅದಾನಿ, ಅಂಬಾನಿ ಉಳಿಯುತ್ತಾರೆ. ನಾವು ಚುನಾವಣೆ ಬಂದಾಗ ತಯಾರಿ ಮಾಡುವುದಲ್ಲ ಈಗಿನಿಂದಲೇ ಹೋರಾಟ ಮಾಡಬೇಕು. ಬರೀ ಸಮಸ್ಯೆಗೆ ಪರಿಹಾರ ಬಿಜೆಪಿಯನ್ನು ಕಿತ್ತೊಗೆಯುವುದು. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ಕೆಲಸ ಮಾಡಬೇಕು ಎಂದರು.

  • ಡ್ರಗ್ ಮಾಫಿಯಾ, ಆ ವುಡ್ ಈ ವುಡ್ ಯಾವುದನ್ನೂ ಬಿಡಲ್ಲ: ಕೋಟ

    ಡ್ರಗ್ ಮಾಫಿಯಾ, ಆ ವುಡ್ ಈ ವುಡ್ ಯಾವುದನ್ನೂ ಬಿಡಲ್ಲ: ಕೋಟ

    ಉಡುಪಿ: ಇಲ್ಲಿ ಆ ವುಡ್ ಈ ವುಡ್ ಎಂಬ ಪ್ರಶ್ನೆ ಬರುವುದಿಲ್ಲ. ಡ್ರಗ್ ಮಾಫಿಯಾ ವಿಚಾರದಲ್ಲಿ ಗೃಹ ಸಚಿವರು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಇಡೀ ಮಂತ್ರಿಮಂಡಲ ಬೆಂಬಲಿಸುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಕೋಟ, ಡ್ರಗ್ಸ್ ವಿಚಾರದಲ್ಲಿ ವ್ಯಕ್ತಿಗಳು ಗೌಣ. ವಿಚಾರ ಅಷ್ಟೇ ಮುಖ್ಯ. ಸಣ್ಣವರು ದೊಡ್ಡವರು ಎಂಬ ಪ್ರಶ್ನೆ ಬರುವುದಿಲ್ಲ. ರಾಜ್ಯ ಬಿಜೆಪಿ ಸರ್ಕಾರ ವಿಷಯಗಳ ಮೇಲೆ ಹೋಗುತ್ತದೆ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು.

    ಮಾದಕ ದ್ರವ್ಯದ ಸೇವನೆ ಮತ್ತು ಮಾರಾಟ ವಿಚಾರ ರಾಜ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಗೃಹ ಸಚಿವ ಬೊಮ್ಮಾಯಿ ಕಟುವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ಪರವಾಗಿಲ್ಲ. ಮಾದಕ ದ್ರವ್ಯದ ಜಾಡನ್ನು ಮಟ್ಟ ಹಾಕುತ್ತೇವೆ. ಮಾದಕ ದ್ರವ್ಯದ ಜಾಲವನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದರು.

  • ಸಿಎಂ ಶ್ರಮಜೀವಿ ಅವರಿಗೆ ಎಲ್ಲರೂ ಬೆಂಬಲ ನೀಡಬೇಕು: ಶಾಸಕ ಉಮೇಶ್ ಕತ್ತಿ

    ಸಿಎಂ ಶ್ರಮಜೀವಿ ಅವರಿಗೆ ಎಲ್ಲರೂ ಬೆಂಬಲ ನೀಡಬೇಕು: ಶಾಸಕ ಉಮೇಶ್ ಕತ್ತಿ

    ಬೆಳಗಾವಿ/ಚಿಕ್ಕೋಡಿ: ಕೋವಿಡ್ ಸಂದರ್ಭದಲ್ಲಿ ಶ್ರಮಿಸುತ್ತಿರುವ ಸಿಎಂ ಯಡಿಯೂರಪ್ಪ ಶ್ರಮಜೀವಿ. ಅವರಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಹುಕ್ಕೇರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಯಡಿಯೂರಪ್ಪ ಪರ ಮಾತನಾಡಿದ್ದಾರೆ.

    ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರ್ಣಗೊಂಡ ನೆನಪಿನ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿ ಅವರು ಹುಕ್ಕೇರಿ ತಾಲೂಕಿನ ಪಂಚಾಯತಿ ಕಚೇರಿ ಆವರಣದಲ್ಲಿ ಸಸಿ ನೆಟ್ಟಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಸಿಎಂ ಯಡಿಯೂರಪ್ಪ ಅತ್ಯುತ್ತಮವಾಗಿ ಸರ್ಕಾರ ನಡೆಸಿದ್ದಾರೆ. ಅತಿವೃಷ್ಟಿ ಹಾಗೂ ಕೋವಿಡ್ ಸಂದರ್ಭದಲ್ಲೂ ಚೆನ್ನಾಗಿ ಆಡಳಿತ ನಡೆಸಿದ್ದಾರೆ ಎಂದು ಸಿಎಂ ಪರ ಮಾತನಾಡಿದರು.

    ವಿರೋಧ ಪಕ್ಷಗಳು ಅವ್ಯವಹಾರದ ಬಗ್ಗೆ ಸುಳ್ಳು ಆರೋಪ ಮಾಡುವುದನ್ನ ನಿಲ್ಲಿಸಬೇಕು. ಸಿದ್ದರಾಮಯ್ಯನವರು ಕೋವಿಡ್ ಸಂದರ್ಭದಲ್ಲಿ ಆರೋಪ ಮಾಡುವುದನ್ನ ಬಿಟ್ಟು ಸಹಕಾರ ನೀಡಬೇಕು. ಮುಂದಿನ ಮೂರು ವರ್ಷ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದರು.

    ಯಡಿಯೂರಪ್ಪನವರಿಗೆ ಪ್ರಧಾನಿ ಸೇರಿದಂತೆ ಎಲ್ಲ ಕೇಂದ್ರ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ನಿಗಮ ಮಂಡಳಿ ಆಯ್ಕೆ ಹಿನ್ನೆಲೆ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ನಿಗಮ ಮಂಡಳಿ ಆಯ್ಕೆ ಸಂದರ್ಭದಲ್ಲಿ ಕೆಲ ಗೊಂದಲಗಳಿರುತ್ತವೆ, ಅದು ಸ್ವಾಭಾವಿಕ. ಶಾಸಕ ತಿಪ್ಪಾರೆಡ್ಡಿ ನಾನು ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಇಬ್ಬರು ಸಚಿವರಾಗುವ ದಿನಗಳು ದೂರ ಇಲ್ಲ ಎಂದು  ಹೇಳಿದ್ದಾರೆ.

  • ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಸಹಕಾರ ಕೊಡಬೇಕಾ?: ಡಿಕೆಶಿ

    ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಸಹಕಾರ ಕೊಡಬೇಕಾ?: ಡಿಕೆಶಿ

    – ಕೊರೊನಾದಿಂದ ರೈತರಿಗಾದ ನಷ್ಟಕ್ಕೆ ಪರಿಹಾರ ಸಿಕ್ಕಿಲ್ಲ

    ಬೆಂಗಳೂರು: ಕೆಲವೊಂದು ಮಾಹಿತಿಗಳನ್ನು ಬಿಡುಗಡೆ ಮಾಡಿ ಅಂತ ನಾವು ಕೇಳಿದ್ದು ತಪ್ಪಾ?, ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಸಹಕಾರ ಕೊಡಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರವಾಹದ ಹಾನಿ ಸುಮಾರು 30 ಸಾವಿರ ಕೋಟಿ ಆಗಿತ್ತು. ಆದರೆ ಕೇಂದ್ರ ಕೊಟ್ಟಿದ್ದು ಎಷ್ಟು?. ಅಮಿತ್ ಶಾ ಬಳಿ 5 ಸಾವಿರ ಕೋಟಿ ಪರಿಹಾರ ಕೇಳಿದ್ರು. 10 ನಿಮಿಷಗಳಲ್ಲಿ ಯಡಿಯೂರಪ್ಪ, ಅಮಿತ್ ಶಾ ಭೇಟಿ ಮುಕ್ತಾಯವಾಗಿತ್ತು ಎಂದು ಗರಂ ಆದರು.

    ಕೊರೊನಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪರಿಹಾರ ಸಹ ಕೊಡಲಿಲ್ಲ. ರೈತರಿಗೆ ಸಾವಿರಾರು ಕೋಟಿ ನಷ್ಟವಾಗಿದೆ. ರೈತರಿಗೆ ಕೊಟ್ಟ ಪರಿಹಾರದ ಬಗ್ಗೆ ಪತ್ರ ಬಿಡುಗಡೆ ಮಾಡಿ. ವೈಟ್ ಪೇಪರ್ ಬಿಡುಗಡೆ ಮಾಡಿ ಅಂತ ಕೇಳಿದ್ರೆ ತಪ್ಪಾ?, ನಿಮ್ಮ ಭ್ರಷ್ಟಾಚಾರಕ್ಕೆ ಬೆಂಬಲ ಕೊಡಬೇಕಾ ಎಂದಿ ಡಿಕೆಶಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ‘ಒಂದು ವರ್ಷದ ಬಿಎಸ್‍ವೈ ಆಟ’- ತಮ್ಮದೇ ಶೈಲಿಯಲ್ಲಿ ಡಿಕೆಶಿ ವಿವರಣೆ

    10 ವರ್ಸೆಂಟ್ ಸರ್ಕಾರ ಅಂತ ಟೀಕೆ ಮಾಡಿದ್ರಿ. ಈಗ ನೂರಾರು ಪಟ್ಟು ಜಾಸ್ತಿ ಹಣ ಕೊಟ್ಟು ವೈದ್ಯಕೀಯ ಉಪಕರಣಗಳನ್ನ ಖರೀದಿ ಮಾಡಿದ್ದೀರಿ. ಇದನ್ನು ತನಿಖೆಗೆ ಕೊಡಿ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಹೇಳ್ತಿದ್ದೀರಿ. ಅದನ್ನೂ ತನಿಖೆ ನಡೆಸಿ ಬೇಡ ಅಂದವರು ಯಾರು. ನಾವು ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ, ಗಲ್ಲಿಗೆ ಹಾಕಿಸಿ ಎಂದು ಹೇಳಿದರು.

    1600 ಕೋಟಿ ಕೊರೊನಾ ಪ್ಯಾಕೇಜ್ ಕೇವಲ ಘೋಷಣೆ ಮಾಡಿದ್ದಾರೆ. ಯಾರು, ಯಾರಿಗೆ ಎಷ್ಟು ಕೊಟ್ಟಿದ್ದೀರಾ ಅನ್ನೋ ಮಾಹಿತಿ ಬಿಡುಗಡೆ ಮಾಡಲಿ. ಶ್ವೇತಪತ್ರ ಹೊರಡಿಸಿ ಅಂತ ಕೇಳಿದ್ರೆ ತಪ್ಪಾ?, ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಸಹಕಾರ ಕೊಡಬೇಕಾ ಎಂದು ಮತ್ತೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ನಮ್ಮ ಕಾಂಗ್ರೆಸ್ ಸರ್ಕಾರವನ್ನ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಧಾನಿ ಹೇಳಿದ್ದರು. ಇದು ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ. ಕೊರೊನಾ ಸಂದರ್ಭದಲ್ಲಿ ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಶೇ.200, 300 ರಷ್ಟು ಭ್ರಷ್ಟಾಚಾರ ಆಗಿದೆ. ನಮ್ಮ ಅವಧಿಯಲ್ಲೂ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ. ಬೇಕಾದ್ರೆ ನಮ್ಮ ಅವಧಿ, ಮೈತ್ರಿ ಸರ್ಕಾರದ ಅವಧಿ ಬಗ್ಗೆ ತನಿಖೆಯಾಗಲಿ. ನಾವು ಯಾವುದೇ ತನಿಖೆಗೂ ಸಿದ್ಧರಿದ್ದೇವೆ ಎಂದು ಆಗ್ರಹಿಸಿದರು.

    ಕಳೆದ 5 ತಿಂಗಳಿನಿಂದ ಪಿಂಚಣಿ ಹಣ ಸಿಗುತ್ತಿಲ್ಲ. ಒಂದು ಮಾಸ್ಕ್ ಗೆ 281 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಎನ್ 95 10 ಲಕ್ಷ ಮಾಸ್ಕ್ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಖರೀದಿ ಮಾಡಿದ್ದಾರೆ. ನಾನು ಆ ಇಲಾಖೆಯ ಮಂತ್ರಿಯಾಗಿದ್ದೆ. ನನಗೇನೂ ಮಾಹಿತಿ ಸಿಗಲ್ವಾ..?, ಈ ಭ್ರಷ್ಟಾಚಾರಕ್ಕೆ ನಾವು ನಿಮ್ಗೆ ಸಹಕಾರ ಕೊಡಬೇಕಾ ಎಂದು ಡಿಕೆಶಿ ಕಿಡಿಕಾರಿದ್ದಾರೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

  • ‘ಒಂದು ವರ್ಷದ ಬಿಎಸ್‍ವೈ ಆಟ’- ತಮ್ಮದೇ ಶೈಲಿಯಲ್ಲಿ ಡಿಕೆಶಿ ವಿವರಣೆ

    ‘ಒಂದು ವರ್ಷದ ಬಿಎಸ್‍ವೈ ಆಟ’- ತಮ್ಮದೇ ಶೈಲಿಯಲ್ಲಿ ಡಿಕೆಶಿ ವಿವರಣೆ

    ಬೆಂಗಳೂರು: ಅಧಿಕಾರಕ್ಕೆ ಬಂದು ಬಿಜೆಪಿ ಸರ್ಕಾರಕ್ಕೆ ಇಂದು 1 ವರ್ಷದ ಸಂಭ್ರಮ. ಇತ್ತ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಒಂದು ವರ್ಷದ ಬಿ.ಎಸ್ ಯಡಿಯೂರಪ್ಪನ ಆಟವೆಂದು ತಿಂಗಳಲ್ಲಿ ವಿವರಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ಒಂದು ವರ್ಷ ಮುಗಿದಿದೆ. ಯಡಿಯೂರಪ್ಪ ಅವರ ಸಾಧನೆ ಬಿಚ್ಚಿಟ್ಟಿದ್ದಾರೆ. ಇದು ಬಹಳ ಸಂತೋಷದ ವಿಚಾರವಾಗಿದೆ. ಆದರೆ ಅವರು ಮಾಧ್ಯಮ ಮುಂದೆ ಏನೇನು ಹೇಳಿದ್ದಾರೆ ಅಂತ ನಾನು ಬಿಡಿಸಿ ಹೇಳಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ಇದೇ ವೇಳೆ ಬಿ.ಎಸ್ ಯಡಿಯೂರಪ್ಪ ಅವರ ಒಂದು ವರ್ಷದ ಆಟ ಹೀಗಿದೆ ಎಂದ ಅವರು, ಒಂದನೇ ತಿಂಗಳು- ಮಂತ್ರಿಮಂಡಲ ಇಲ್ಲದೆ ತಿರುಗಾಟ, ಎರಡನೇ ತಿಂಗಳು- ನೆರೆ ಪರಿಹಾರ ಕೊಡದೆ ನರಳಾಟ, ಮೂರನೇ ತಿಂಗಳು- ಉಪಚುನಾವಣೆ ಎಂಬ ಬಯಲಾಟ, ನಾಲ್ಕನೇ ತಿಂಗಳು- ಮಂತ್ರಿ ಮಂಡಲ ಎಂಬ ದೊಂಬರಾಟ, ಐದು ಮತ್ತು ಆರನೇ ತಿಂಗಳಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ, ಏಳು ಹಾಗೂ ಎಂಟನೇ ತಿಂಗಳಲ್ಲಿ ಕೊರೊನಾ ಲಾಕ್‍ಡೌನ್ ಎಂಬ ಹೊರಳಾಟ, ಒಂಬತ್ತು ಮತ್ತು ಹತ್ತನೇ ತಿಂಗಳಲ್ಲಿ ಕೊರೊನಾ ಕೊರೊನಾ ಎಂಬ ಕಿರುಚಾಟ, ಹನ್ನೊಂದು-ಹನ್ನೆರಡನೇ ತಿಂಗಳಲ್ಲಿ ಜನ ಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ ಎಂದು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

    ಒಟ್ಟಿನಲ್ಲಿ ಒಂದು ವರ್ಷದಲ್ಲಿ ಯಡಿಯೂರಪ್ಪನವರದು ಸುಳ್ಳಿನ ಸರಮಾಲೆ ಎಂದು ಬಣ್ಣಿಸಿದ್ದಾರೆ. ಒಂದು ವರ್ಷದಲ್ಲಿ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿರೋ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಳೆದ 5 ತಿಂಗ್ಳಿಂದ ವೃದ್ಧಾಪ್ಯ, ವಿಧವಾ, ಅಂಗವಿಕಲರನ್ನು ಸರ್ಕಾರ ಅಲೆದಾಡಿಸ್ತಿದೆ: ಹೆಚ್‍ಡಿಕೆ

  • ಕಳೆದ 5 ತಿಂಗ್ಳಿಂದ ವೃದ್ಧಾಪ್ಯ, ವಿಧವಾ, ಅಂಗವಿಕಲರನ್ನು ಸರ್ಕಾರ ಅಲೆದಾಡಿಸ್ತಿದೆ: ಹೆಚ್‍ಡಿಕೆ

    ಕಳೆದ 5 ತಿಂಗ್ಳಿಂದ ವೃದ್ಧಾಪ್ಯ, ವಿಧವಾ, ಅಂಗವಿಕಲರನ್ನು ಸರ್ಕಾರ ಅಲೆದಾಡಿಸ್ತಿದೆ: ಹೆಚ್‍ಡಿಕೆ

    ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಸಂಭ್ರಮದಲ್ಲಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಕ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸರ್ಕಾರ ಕಳೆದ 5 ತಿಂಗಳಿನಿಂದ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು, ತಕ್ಷಣ ಅವರಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಐದಾರು ತಿಂಗಳಿನಿಂದ ಪಿಂಚಣಿ ಹಣ ಪಾವತಿಯಾಗದೇ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರು ಪರಿತಪಿಸುತ್ತಿದ್ದಾರೆ. ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಕ್ಷಣ ಬಿಡುಗಡೆ ಮಾಡಲು ಸರ್ಕಾರ ತುರ್ತು ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಕೊರೋನಾ ಸಂಕಷ್ಟದ ಸಮಯದಲ್ಲಿ ಸಕಾಲಕ್ಕೆ ಪಿಂಚಣಿ ಕೈಗೆ ಸಿಗದೇ ಅಗತ್ಯ ಔಷಧಗಳನ್ನು ಕೊಳ್ಳಲೂ ಈ ಫಲಾನುಭವಿಗಳು ಪರದಾಡುತ್ತಿದ್ದಾರೆ. ಹಲವು ಮಂದಿಗೆ ಊಟಕ್ಕೂ ತತ್ವಾರವಾಗಿದೆ. ವರ್ಷಾಚರಣೆಯ ಸಂಭ್ರಮದಲ್ಲಿರುವ ಬಿಜೆಪಿ ಸರ್ಕಾರ ಮೊದಲು ಹಣ ಬಿಡುಗಡೆಗೆ ಆದೇಶ ಮಾಡುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ಪಿಂಚಣಿ ಹಣಕ್ಕಾಗಿ ಕಳೆದ 5 ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸಲಾಗುತ್ತಿದೆ. ಇದು ನಾಚಿಕೆಗೇಡು. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿಗಳು ಇಲ್ಲ. ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ ಎಂಬ ಬೀಜ ಮಂತ್ರ ಪಠಿಸುತ್ತಿರುವ ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಗೆ ಇದಕ್ಕಿಂತ ಉದಾಹರಣೆ ಬೇಕೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

    ಒಟ್ಟಿನಲ್ಲಿ ಸರ್ಕಾರ ವರ್ಷದ ಸಂಭ್ರಮದಲ್ಲಿದ್ದರೆ ವಿರೋಧಪಕ್ಷಗಳು ಸರ್ಕಾರದ ವೈಫಲ್ಯಗಳನ್ನು ಹಿಡಿದುಕೊಂಡು ಟೀಕಿಸುತ್ತಿವೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

  • ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ – ಕೈ ನಾಯಕರಿಗೆ ಸುಧಾಕರ್ ತಿರುಗೇಟು

    ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ – ಕೈ ನಾಯಕರಿಗೆ ಸುಧಾಕರ್ ತಿರುಗೇಟು

    ಬೆಂಗಳೂರು: ಕೊರೊನಾ ವಿಚಾರದಲ್ಲಿ ಬಿಜೆಪಿ ಸರ್ಕಾರ ಗೋಲ್‍ಮಾಲ್ ಮಾಡಿದೆ ಎಂಬ ಕಾಂಗ್ರೆಸ್ ನಾಯಕ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಅಸೂಯೆ ಅಧಃಪತನಕ್ಕೆ ನಾಂದಿ ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

    ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ರೂ. ಲೂಟಿ ಮಾಡಿದೆ ಎಂದು ದಾಖಲೆ ಸಮೇತ ಆರೋಪಿಸಿದ್ದರು. ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುಧಾಕರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ

    ಇಷ್ಟು ವರ್ಷದ ರಾಜಕೀಯ ಅನುಭವದಲ್ಲಿ ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸಗೊತ್ತಿಲ್ಲ ಎಂದು ಕಾಣುತ್ತದೆ. ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ವೆಚ್ಚದಲ್ಲಿ ಉಪಕರಣ ಖರೀದಿಯಾಗಿದೆ ಎಂದಿದ್ದಾರೆ. ಆದರೆ ಖರ್ಚು ಕೇವಲ 33 ಕೋಟಿ ರೂ. ಅಷ್ಟೇ, ಪ್ರಸ್ತಾವನೆ ಖರ್ಚಿನ ಲೆಕ್ಕ ಹೇಗೆ ಆಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.

    ಜಗತ್ತಿನಲ್ಲಿ ನಾನೇ ಬಲ್ಲವನೆಂದು. ನಾನೇ ಸತ್ಯವಂತನೆಂದುಕೊಂಡರೆ ಅಂಥವರು ಎಲ್ಲರಿಗಿಂತಲೂ ಕೀಳಾಗುತ್ತಾರೆ. ಸೇವಾ ಕಾರ್ಯದಲ್ಲಿ ಪ್ರೀತಿ ಕರುಣೆ ಇರಬೇಕೆ ಹೊರತು ಪ್ರತಿಷ್ಠೆ ಕೀರ್ತಿ ಮತ್ತು ಕಾಮನೆಗಳಲ್ಲ. ಅಸೂಯೆ ಅಧಃಪತನಕ್ಕೆ ನಾಂದಿ. ಸತ್ಯ ಯಾವತ್ತು ಧಾನ್ಯವಿದ್ದಂತೆ, ಸುಳ್ಳು ತೌಡಿದ್ದಂತೆ. ಜನರಿಗೆ ಗಟ್ಟಿ, ಜೊಳ್ಳು ಯಾವುದು ಎಂದು ಗೊತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ ಅಂತ ನಾವು ದಾಖಲೆಗಳನ್ನು ಬಿಡುಗಡೆ ಮಾಡಿದರೂ ಮಾನ್ಯ ವಿರೋಧ ಪಕ್ಷದ ನಾಯಕರು ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಜ ಸತ್ಯದ ಅರಿವಾಗುವ ತನಕ ನೀವು ತಿಳಿದಿರುವ ಸತ್ಯವೆಲ್ಲವೂ ಕಾಲ್ಪನಿಕ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.

    ಒಟ್ಟು ನಾಲ್ಕು ಸರಣಿ ಟ್ವೀಟ್ ಮಾಡಿರುವ ಸುಧಾಕರ್, ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ನಿಮ್ಮ ಆಧಾರ ರಹಿತ ಆರೋಪಗಳನ್ನು ರಾಜ್ಯದ ಜನ ನಂಬುವುದಿಲ್ಲ. ಜನರಿಗೆ ಸತ್ಯಯಾವುದು ಸುಳ್ಳು ಯಾವುದು ಗೊತ್ತಿದೆ. ಯಾರೂ ಬೇಕಾದರೂ ಲೆಕ್ಕ ಕೇಳಿದರೂ ನಮ್ಮ ಬಳಿ ಸರಿಯಾದ ದಾಖಲೆಗಳಿವೆ ಎಂದಿದ್ದಾರೆ.

  • ಸಿದ್ದರಾಮಯ್ಯ, ಡಿಕೆಶಿ ನಡುವೆ ಹೊಂದಾಣಿಕೆ ಇದ್ಯಾ- ಸೋಮಶೇಖರ್ ಪ್ರಶ್ನೆ

    ಸಿದ್ದರಾಮಯ್ಯ, ಡಿಕೆಶಿ ನಡುವೆ ಹೊಂದಾಣಿಕೆ ಇದ್ಯಾ- ಸೋಮಶೇಖರ್ ಪ್ರಶ್ನೆ

    ಹಾವೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಹೊಂದಾಣಿಕೆ ಇದೆಯಾ? ನೂರಕ್ಕೆ ನೂರರಷ್ಟು ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಹೊಂದಾಣಿಕೆ ಇಲ್ಲ ಎಂಬ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ನಮ್ಮಲ್ಲಿ ಎಲ್ಲ ಮಂತ್ರಿಗಳ ನಡುವೆ ಹೊಂದಾಣಿಕೆ ಇದೆ. ಬಿಜೆಪಿ ಸರ್ಕಾರ ಎಲ್ಲ ಮಂತ್ರಿಗಳು ಒಂದಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ ಎಂದರು.

    ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಕೊರೊನಾ ವಿಚಾರದಲ್ಲಿ ನಾವು ಖರ್ಚು ಮಾಡಿರುವ ಹಣಕ್ಕೂ, ಅವರ ಅವ್ಯವಹಾರ ಆಗಿದೆ ಅಂತಿರುವ ಹಣಕ್ಕೂ ವ್ಯತ್ಯಾಸವಿದೆ. ಖರ್ಚು ಮಾಡಿರುವ ಹಣವೇ ಕಡಿಮೆ. ಹೀಗಿರುವಾಗ ಹೆಚ್ಚಿನ ಹಣದ ಅವ್ಯವಹಾರ ಆಗಿದೆ ಅಂದರೆ ಹೇಗೆ? ಸಿದ್ದರಾಮಯ್ಯ ಪ್ರಚಾರಕ್ಕಾಗಿ ಲೆಕ್ಕಕೊಡಿ, ಲೆಕ್ಕಕೊಡಿ ಅಂತಿದ್ದಾರೆ. ಲೆಕ್ಕ ಕೊಡಲು ನಾವು ಸಿದ್ಧರಿದ್ದರೂ ಲೆಕ್ಕ ತೆಗೆದುಕೊಳ್ಳಲು ಸಿದ್ದರಾಮಯ್ಯ ಸಿದ್ಧರಿಲ್ಲ ಎಂದು ತಿರುಗೇಟು ನೀಡಿದರು.

    ಮಂತ್ರಿ ಮಾಡುವುದು, ಮಂತ್ರಿ ಮಂಡಲದಿಂದ ತೆಗೆಯುವುದು ಸಿಎಂ ಅವರ ಪರಮಾಧಿಕಾರ. ಈಗ ನಾವು ರಾಜೀನಾಮೆ ಕೊಡುವ ಪ್ರಮೇಯ ಬರುವುದಿಲ್ಲ. ರಾಜೀನಾಮೆ ಕೊಟ್ಟ ಕೆಲವರಿಗೆ ಎಂಎಲ್‍ಸಿ ಮಾಡಿದ್ದಾರೆ. ಸಿಎಂ ಯಾರಿಗೆ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ ಎಂದು ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡರು.