Tag: BJP government

  • ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರ ಟೇಕಾಫ್ ಆಗಿತ್ತಾ : ಭೈರತಿ ಬಸವರಾಜ್

    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರ ಟೇಕಾಫ್ ಆಗಿತ್ತಾ : ಭೈರತಿ ಬಸವರಾಜ್

    ದಾವಣಗೆರೆ: ಸರ್ಕಾರ ಟೇಕಾಫ್ ಆಗಿಲ್ಲ, ಜಾಸ್ತಿ ದಿನ ಉಳಿಯಲ್ಲ ಎಂಬ ಮಾಜಿ ಸಿಎಂಸಿದ್ದರಾಮಯ್ಯ ಹೇಳಿಕೆಗೆ ಇವರು ಸಿಎಂ ಆಗಿದ್ದಾಗ ಟೇಕಾಫ್ ಆಗಿದ್ರಾ, ಹಂಗೇ ಆಕಾಶದಲ್ಲಿ ಹಾರಿಕೊಂಡು ಹೋಗಿದ್ರಾ ಎಂದು ಭೈರತಿ ಬಸವರಾಜ್ ರವರು ಗರಂ ಆಗಿದ್ದಾರೆ.

    ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಎಂಟತ್ತು ದಿನ ಆಗಿಲ್ಲ. ನಾಲ್ಕು ಜಿಲ್ಲೆ ಪ್ರವಾಸ ಮಾಡಿ ಅಭಿವೃದ್ದಿ ಚಿಂತನೆ ಮಾಡುತ್ತಿದ್ದಾರೆ, ಬೆಂಗಳೂರು ನಗರ ಬಗ್ಗೆ ಮೀಟಿಂಗ್ ಮಾಡಿ ಆರು ಸಾವಿರ ಕೋಟಿ ಅನುದಾನ ಕೊಡುತ್ತೇವೆ ಅಂತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಶತ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಸತತ ಸಭೆ ನಡೆಸುತ್ತಿದ್ದಾರೆ. ಇದೆಲ್ಲ ಅಭಿವೃದ್ಧಿಯಲ್ವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಪ್ರಶ್ನಿಸಿದ್ದಾರೆ.

    ಒಂದು ಬಾರಿಯಾದರು ವಿಪಕ್ಷ ನಾಯಕ ಸಿದ್ದರಾಮಯ್ಯ ಗಡಿ ಜಿಲ್ಲೆಗಳಿಗೆ ಹೋಗದೆ ಎಲ್ಲೋ ಕೂತು, ಏನೋ ಒಂದು ಹೇಳೋದು ಬಿಡಲಿ. ಮಾಜಿ ಸಿಎಂ ವಸ್ತುಸ್ಥಿತಿ ಬಗ್ಗೆ ಸಲಹೆ ನೀಡಲಿ, ಅದನ್ನು ಬಿಟ್ಟು ಸರ್ಕಾರ ಉಳಿಯಲ್ಲ, ಟೇಕಾಫ್ ಆಗಿಲ್ಲ ಎನ್ನುವುದು ಸರಿಯಲ್ಲ. ಸರ್ಕಾರ ಬೀಳುತ್ತೆ ಅಂತ ಇವರೇನು ಭವಿಷ್ಯ ಹೇಳ್ತಾರೆ, ಕಾಂಗ್ರೆಸ್ ನಲ್ಲಿ ಎಲ್ಲರೂ ಕಿತ್ತಾಡುತ್ತಿದ್ದಾರೆ, ಮೊದಲು ಇವರ ಭವಿಷ್ಯ ಇವರು ನೋಡಿಕೊಳ್ಳಲಿ, ಸಿಎಂ ಆಗ್ತಾರಾ ಇಲ್ಲ ಅಂತ ಭವಿಷ್ಯ ಹೇಳಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಗುರುವಾರ ಕ್ಯಾಬಿನೆಟ್ ಮೀಟಿಂಗ್ ಇದ್ದು, ಅಲ್ಲಿ ಸಾಧಕ ಬಾಧಕ ಚರ್ಚೆ ಮಾಡುತ್ತೇವೆ. ಕೊನೆಯಲ್ಲಿ ಈ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ.  ಇದನ್ನೂ ಓದಿ:ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ,ಭವಿಷ್ಯ ಹೇಳಲು ಶುರು ಮಾಡಿದ್ದಾರೆ- ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ಕಿಡಿ

  • ಈಗ ಸಿಸೇರಿಯನ್ ಆಗಿದೆ, ಈಗಲೇ ಕುಲಾವಿ ಹಾಕಿಕೊಳ್ಳಬೇಡಿ: ಶಿವರಾಮೇಗೌಡ

    ಈಗ ಸಿಸೇರಿಯನ್ ಆಗಿದೆ, ಈಗಲೇ ಕುಲಾವಿ ಹಾಕಿಕೊಳ್ಳಬೇಡಿ: ಶಿವರಾಮೇಗೌಡ

    – ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಶಾಸಕರಿಗೆ ಲೇವಡಿ

    ಮಂಡ್ಯ: ಸಿಸೇರಿಯನ್ ಆಗಿ ಇನ್ನೂ ಹೊಲಿಗೆನೇ ಹಾಕಿಲ್ಲ. ಆಗಲೇ ಕುಲಾವಿ ಹಾಕಿಕೊಂಡು ತಿರುಗಿದರೆ ಹೆಂಗೆ ಎನ್ನುವ ಮೂಲಕ ಮಂತ್ರಿ ಸ್ಥಾನಕ್ಕೆ ಓಡಾಡುತ್ತಿರುವ ಬಿಜೆಪಿ ಶಾಸಕರಿಗೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಲೇವಡಿ ಮಾಡಿದ್ದಾರೆ.

    ನಾಗಮಂಗಲದಲ್ಲಿ ಮಾತನಾಡಿದ ಅವರು, ಈಗ ತಾನೇ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈಗಲೇ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿ, ಅಸಮಾಧಾನವನ್ನು ಹೊರಹಾಕುವುದು ಸರಿಯಲ್ಲ. ಇದು ಒಂಥರ ಸಿಸೇರಿಯನ್ ಆಗಿ ಇನ್ನೂ ಹೊಲಿಗೇನೆ ಹಾಕಿಲ್ಲ ಆಗಲೇ ಕುಲಾವಿ ಹಾಕಿಕೊಂಡು ಓಡಾಡಿದ ಹಾಗೇ ಆಗುತ್ತದೆ ಎಂದು ಸಚಿವ ಸ್ಥಾನಕ್ಕೆ ಪೈಪೋಟಿ ಮಾಡುತ್ತಿರುವ ಶಾಸಕರುಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರ ಭೇಟಿಯ ಕುರಿತು ಮಾತನಾಡಿದ ಅವರು, ದೇವೇಗೌಡರು ನಿಮ್ಮ ಸರ್ಕಾರದ ಜೊತೆ ನಾವಿದ್ದೀವಿ ಎಂದು ಹೇಳಿರುವುದು ರಾಜ್ಯದ ಜನರ ಒಳಿತಿಗಾಗಿ. ಕೊರೊನಾ, ಪ್ರವಾಹದಂತಹ ಸಂಕಷ್ಟದಲ್ಲಿ ರಾಜ್ಯದಲ್ಲಿ ಒಂದು ಸರ್ಕಾರ ಸ್ಥಿರವಾಗಿ ಇರಬೇಕು ಎನ್ನುವ ಕಾರಣಕ್ಕೆ ಗೌಡರು ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ. ರಾಜ್ಯದ ಜನತೆ ಹಿತದೃಷ್ಟಿಯಿಂದ ದೇವೇಗೌಡರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾರು ಕೂಡ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸೂಕ್ತ ಅಲ್ಲ ಎಂದಿದ್ದಾರೆ.

    ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕು ಎಂದರೆ ಮಂಡ್ಯದವರೇ ಉಸ್ತುವಾರಿ ಸಚಿವರಾಗಬೇಕು. ಸದ್ಯ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕ ಎಂದರೆ ಅದು ನಾರಾಯಣಗೌಡ ಮಾತ್ರ. ನಾರಾಯಣಗೌಡರಿಗೆ ಮಂತ್ರಿ ಸ್ಥಾನ ನೀಡಿ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕು. ಆಗ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಲು ಸಾಧ್ಯ ಎನ್ನುವ ಮೂಲಕ ಪರೋಕ್ಷವಾಗಿ ನಾರಾಯಣಗೌಡ ಅವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಶಿವರಾಮೇಗೌಡ ನಾರಾಯಣಗೌಡ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಕೋವಿಡ್ ಬರೋಕೆ ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ: ಸಿದ್ದರಾಮಯ್ಯ

  • ಮೋದಿಗೆ ಸ್ನೇಹಿತರ ದಿನಾಚರಣೆಯ ಶುಭಕೋರಿ ಕಾಲೆಳೆದ ರಾಹುಲ್

    ಮೋದಿಗೆ ಸ್ನೇಹಿತರ ದಿನಾಚರಣೆಯ ಶುಭಕೋರಿ ಕಾಲೆಳೆದ ರಾಹುಲ್

    ನವದೆಹಲಿ: ಸ್ನೇಹಿತರ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಕೈಗಾರಿಕೋದ್ಯಮದ ಜೊತೆ ಕೈ ಜೋಡಿಸಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಮೋದಿಗೆ ಸ್ನೇಹಿತರ ದಿನಾಚರಣೆಯ ದಿನದಂದು ಕಾಲೆಳೆದಿದ್ದಾರೆ.

    ಈ ವೀಡಿಯೋದಲ್ಲಿ ಮೋದಿ ಹಲವಾರು ಕೈಗಾರಿಕೋದ್ಯಮದ ಗಣ್ಯ ವ್ಯಕ್ತಿಗಳಿಗೆ ಶೇಕ್ ಹ್ಯಾಂಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋವನ್ನು ರಾಹುಲ್ ಗಾಂಧಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಮ್ ದೋ ಹಾಮಾರೆ ದೋ ಕಿ ಸರ್ಕಾರ್‌ಗೆ ಸ್ನೇಹಿತರ ದಿನಾಚರಣೆ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಶುಭಾಶಯ ಕೋರಿದ್ದಾರೆ.

    ಮೋದಿಯವರ ಹಳೆಯ ಫೋಟೋಗಳನ್ನು ಬಳಸಿ, ಹಮ್ ದೋ ಹಾಮಾರೆ ದೋ ಕಿ (ನಾವಿಬ್ಬರು, ನಮಗಿಬ್ಬರು) ಎನ್ನುತ್ತಾ, ಕೇವಲ ನಾಲ್ಕು ಜನರಿಂದ ದೇಶವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

     

    View this post on Instagram

     

    A post shared by Rahul Gandhi (@rahulgandhi)

    ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶದ ವೇಳೆ ಕೂಡ ಹಮ್ ದೋ, ಹಮಾರೆ ದೋ ಎಂಬ ಪದ ಬಳಸಿದ್ದರು ಮತ್ತು ನೂತನ ಕೃಷಿ ಕಾಯ್ದೆ ವಿರುದ್ಧ ಹರಿಹಾಯ್ದಿದ್ದರು. ಈಗ ಮತ್ತೆ ನಾಲ್ಕು ಜನರು ಮಾತ್ರ ದೇಶವನ್ನು ನಡೆಸುತ್ತಿದ್ದಾರೆ ಹಾಗೂ ಅವರು ಯಾರೆಂದು ಎಲ್ಲರಿಗೂ ತಿಳಿದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ:ಬಿಜೆಪಿಯಲ್ಲಿ ಅಸಮಾಧಾನ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

  • ಗೊಂದಲದಲ್ಲಿರುವ ಬಿಜೆಪಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ: ಎನ್.ಎಸ್.ಬೋಸರಾಜು

    ಗೊಂದಲದಲ್ಲಿರುವ ಬಿಜೆಪಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ: ಎನ್.ಎಸ್.ಬೋಸರಾಜು

    ರಾಯಚೂರು: ಬಿಜೆಪಿ ಪಕ್ಷದಲ್ಲಿ ಕಳೆದ ಒಂದು ವರ್ಷದಿಂದ ಬಹಳ ಗೊಂದಲಗಳಿವೆ. ಪಕ್ಷದ ಗೊಂದಲಗಳಿಂದ ಸರ್ಕಾರ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿಲ್ಲ. ಗೊಂದಲದಲ್ಲಿರುವ ಪಕ್ಷದ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಅಂತ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ಆಡಳಿತ ಚುಕ್ಕಾಣಿ ಹಿಡಿದ ಪಕ್ಷ ಸ್ಥಿರ ಸರ್ಕಾರ ಕೊಡಬೇಕು. ಬಿಜೆಪಿ ರಾಜ್ಯಾಧ್ಯಕ್ಷರ ಮಾತುಗಳನ್ನ ನೋಡಿದರೆ ಪಕ್ಷದಲ್ಲಿ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಪಕ್ಷದ ಗೊಂದಲಗಳನ್ನು ಬಗೆಹರಿಸಿಕೊಂಡು ಉತ್ತಮ ಸರ್ಕಾರ ನಡೆಸಬೇಕು ಎಂದಿದ್ದಾರೆ.

    ಕೋವಿಡ್ ವಿಚಾರದಲ್ಲಿ ಬರೀ ಸುಳ್ಳು ಅಂಕಿ-ಅಂಶಗಳನ್ನು ಸರ್ಕಾರ ಹೇಳಿಕೊಂಡು ಬಂದಿದೆ. ಅವರು ಕೊಟ್ಟ ಸಂಖ್ಯೆಗಿಂತ ನಾಲ್ಕುಪಟ್ಟು ಜನ ಸತ್ತಿದ್ದಾರೆ. ಲಕ್ಷಾಂತರ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸ್ಥಿರ ಸರ್ಕಾರ ನಡೆಸಬೇಕು ಅಂತ ಮಾಜಿ ಎಂಎಲ್‍ಸಿ ಎನ್.ಎಸ್.ಬೋಸರಾಜು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ: ರಂಭಾಪುರಿ ಶ್ರೀ

  • ರಾಜ್ಯದಲ್ಲಿ ಅಧಿಕಾರ ಹಿಡಿಯಲು ಪಂಚ ಕೌರವರು ಪ್ರಯತ್ನಿಸುತ್ತಿದ್ದಾರೆ: ಈಶ್ವರಪ್ಪ

    ರಾಜ್ಯದಲ್ಲಿ ಅಧಿಕಾರ ಹಿಡಿಯಲು ಪಂಚ ಕೌರವರು ಪ್ರಯತ್ನಿಸುತ್ತಿದ್ದಾರೆ: ಈಶ್ವರಪ್ಪ

    ಶಿವಮೊಗ್ಗ: ಮಹಾಭಾರತ ಎಂದಾಕ್ಷಣ ಪಂಚ ಪಾಂಡವರು ನೆನಪಿಗೆ ಬರುತ್ತಾರೆ. ಆದರೆ ರಾಜ್ಯದಲ್ಲಿ ಪಂಚ ಕೌರವರು ಕಾಣ ಸಿಗುತ್ತಿದ್ದಾರೆ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಪಂಚ ಕೌರವರಿಗೆ ಹೋಲಿಕೆ ಮಾಡಿದ್ದಾರೆ.

    ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಈಗಲೇ ಲಾಬಿ ಆರಂಭವಾಗಿದೆ. ಐದು ಜಾತಿಯವರು ಒಬ್ಬೊಬ್ಬರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ತನ್ವೀರ್ ಸೇಠ್ ಸೇರಿದಂತೆ ಹಲವರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದರು.

    ಸಮಾಜವಾದವನ್ನು ಅಳವಡಿಸಿಕೊಂಡಿದ್ದೇನೆ, ಸಾಮಾಜಿಕ ನ್ಯಾಯ ನೀಡುತ್ತೇನೆ ಎಂದು ಕೇವಲ ಬಾಯಿ ಮಾತಲ್ಲಿ ಹೇಳುವ ಸಿದ್ದರಾಮಯ್ಯ ಸಿಎಂ ರೇಸ್ ನಲ್ಲಿದ್ದಾರೆ. ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡಬಾರದು ಎನ್ನುವ ಡಿಕೆಶಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರ ಮೂಲಕ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ದಲಿತ ಮುಖ್ಯಮಂತ್ರಿ ಎಂದು ಹೇಳುವ ಪರಮೇಶ್ವರ್ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಇನ್ನು ತನ್ವೀರ್ ಸೇಠ್ ಅಲ್ಪ ಸಂಖ್ಯಾತರಿಂದ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

    ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಜನರಿಂದ ತಿರಸ್ಕಾರಗೊಂಡ ಬಳಿಕ ಸುಮ್ಮನಿರಬೇಕಿತ್ತು. ಧರ್ಮವನ್ನು ಹಾಳು ಮಾಡುವ ಕಾಂಗ್ರೆಸ್ ನವರನ್ನು ಜನರೇ ತಿರಸ್ಕರಿಸಿ ಹೊರಗಿಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇನ್ನು ಅಧಿಕಾರದಲ್ಲಿದೆ. ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ತಾವು ಮುಖ್ಯಮಂತ್ರಿ ಎಂದು ಕಾಂಗ್ರೆಸ್ ನವರು ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ವ್ಯಂಗ ಮಾಡಿದರು. ಇದನ್ನೂ ಓದಿ:ಮೂರು ತಿಂಗಳೊಳಗೆ ಶೇ.80 ಜನರಿಗೆ ಕೋವಿಡ್ ಲಸಿಕೆ ಹಾಕಿಸಿ- ಡಿ.ಕೆ.ಶಿವಕುಮಾರ್ ಒತ್ತಾಯ

  • ಬಿಎಸ್‍ವೈ ಆಪರೇಷನ್ ಕಮಲದ ಪಿತಾಮಹ: ಶಾಸಕ ಭೀಮಾನಾಯ್ಕ್

    ಬಿಎಸ್‍ವೈ ಆಪರೇಷನ್ ಕಮಲದ ಪಿತಾಮಹ: ಶಾಸಕ ಭೀಮಾನಾಯ್ಕ್

    ವಿಜಯನಗರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಪರೇಷನ್ ಕಮಲದ ಪಿತಾಮಹ ಇದ್ದಂತೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮನಾಯ್ಕ್ ಹೇಳಿದ್ದಾರೆ.

    ದೇಶದಲ್ಲಿ ಜಾತಿಗಳ ಮಧ್ಯೆ ಕಲಹ ತಂದಿಟ್ಟು ಸಮಾಜದಲ್ಲಿನ ಸಹಬಾಳ್ವೆಗೆ ಬೆಂಕಿಯಿಟ್ಟು ಪೆಟ್ರೋಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಹೆಚ್ಚಳ ಮಾಡಿ ಶ್ರಮಿಕ ವರ್ಗವನ್ನು ತೆರಿಗೆ ಎಂಬ ಕೂಪಕ್ಕೆ ಸಿಲುಕಿಸಿದೆ ಎಂದು ಭೀಮನಾಯ್ಕ್‍ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ತೈಲ ಬೆಲೆ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಳ್ಳಾರಿ ಜಿಲ್ಲೆಯ ಕೊಟ್ಟರು ಪಟ್ಟಣದ ಉಜ್ಜಿನಿ ರಸ್ತೆಯ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಂಬಿ ಮತ ಹಾಕಿದ ಎಲ್ಲಾ ಮತದಾರರಿಗೂ ತಮ್ಮ ತಮ್ಮ ಖಾತೆಗೆ 15 ಲಕ್ಷ ರೂ ಹಣ, ಎರಡು ಲಕ್ಷ ಕೋಟಿ ಉದ್ಯೋಗ ನೀಡದೇ ಸುಳ್ಳು ಭರವಸೆ ನೀಡಿ ದೇಶದ ಜನರಿಂದ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಖಾರವಾಗಿ ನುಡಿದಿದ್ದಾರೆ.

    ಈಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಪರೇಷನ್ ಕಮಲದ ಪಿತಾಮಹ ಇದ್ದಂತೆ ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವಾಗ ನಮ್ಮ ಸಮ್ಮಿಶ್ರ ಸರ್ಕಾರದ 19 ಶಾಸಕರನ್ನು ಲಂಚ ಕೊಟ್ಟು ಖರೀದಿ ಮಾಡಿಕೊಂಡು ಕಳ್ಳದಾರಿಯಲ್ಲಿ ಬಂದು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ:  ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ: ಆರ್.ವಿ.ದೇಶಪಾಂಡೆ

  • ಬಿಜೆಪಿಗೆ ಮತ ಹಾಕಿದ ಜನರು ಬೀದಿ ಬೀದಿಯಲ್ಲಿ ಉಗಿತಾ ಇದ್ದಾರೆ: ಜಮೀರ್ ಅಹ್ಮದ್

    ಬಿಜೆಪಿಗೆ ಮತ ಹಾಕಿದ ಜನರು ಬೀದಿ ಬೀದಿಯಲ್ಲಿ ಉಗಿತಾ ಇದ್ದಾರೆ: ಜಮೀರ್ ಅಹ್ಮದ್

    ಕೋಲಾರ: ಬಿಜೆಪಿಗೆ ಮತ ಹಾಕಿದ ಜನರು ಬೀದಿ ಬೀದಿಯಲ್ಲಿ ಉಗಿತಾ ಇದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವ್ಯಂಗ್ಯಮಾಡಿದರು.

    ಕೋಲಾರದ ಮಾಲೂರಿನಲ್ಲಿ ಶಾಸಕ ಕೆ.ವೈ.ನಂಜೇಗೌಡ ಹುಟ್ಟು ಹಬ್ಬದ ಪ್ರಯುಕ್ತ ಕೊರೊನಾ ವಾರಿಯರ್ಸ್‍ಗಾಗಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಒಳ್ಳೆ ಭವಿಷ್ಯ ಬಂದಿಲ್ಲ. ಬದಲಾಗಿ ಬಿಜೆಪಿ ನಾಯಕರಿಗೆ ಮಾತ್ರ ಅಚ್ಚೇ ದಿನ ಬಂದಿದೆ. ಪಿಎಂ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಲ್ಲೂ ಆಗಿಲ್ಲ. ಬಿಜೆಪಿಗೆ ಮತ ಹಾಕಿದ ಜನರು ಬೀದಿ ಬೀದಿಯಲ್ಲಿ ಉಗಿತಾ ಇದ್ದಾರೆ, ಒಂದು ಕಡೆ ಕೊರೊನಾದಿಂದ ಜನ ಸಾಯುತ್ತಿದ್ದರೆ, ಮತ್ತೊಂದಡೆ ತೈಲ ಬೆಲೆ ಏರಿಕೆ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನು ಓದಿ:ಕೊರೊನಾ ನಿಯಮ ಮರೆತು ಲಸಿಕೆಗೆ ಮುಗಿಬಿದ್ದ ಜನರು

    ಪಿಎಂ ಅವರಿಗೆ ತೈಲ ಬೆಲೆ ಏರಿಕೆಯ ತೆರಿಗೆ ಕಡಿಮೆ ಮಾಡಲು ಆಗುತ್ತಿಲ್ಲ. ಕೊರೊನಾ ಸಮಯದಲ್ಲಿ ಯಾರಾದರೂ ಮೋಸ ಮಾಡಿ ಹಣ ತಿಂದರೆ ಹುಳು ಬೀಳುತ್ತೆ. ರಾಜ್ಯ ಸರ್ಕಾರ ಆಟೋ ಚಾಲಕರಿಗೆ ನೀಡಿರುವ ಪರಿಹಾರ ನಾಮಕಾವಸ್ಥೆ, ಅದು ಅಪ್ ಲೋಡ್ ಮಾಡಲು ಅಪ್ಲಿಕೇಶನ್ನೇ ಓಪನ್ ಆಗುತ್ತಿಲ್ಲ, ಅದಕ್ಕೆ ಬದಲಾಗಿ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ 10 ಸಾವಿರ ರೂಪಾಯಿ ಹಾಕಿ. ತಮಿಳುನಾಡಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಹಣ ಹಾಕಿದ್ದಾರೆ. ಅವರದು ಜನ ಪರ ಕಾಳಜಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

    ನಿನ್ನೆ ಪ್ರಧಾನಿ ಮೋದಿ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಟೆಸ್ಟಿಂಗ್ ಕಡಿಮೆ ಮಾಡಿದ್ದಾರೆ. ಮೊದಲು ಎರಡುವರೆ ಲಕ್ಷ ಟೆಸ್ಟಿಂಗ್ ಮಾಡುತ್ತಿದ್ದರು. ಈಗ 94 ಸಾವಿರ ಜನರಿಗೆ ಟೆಸ್ಟಿಂಗ್ ಮಾಡುತ್ತಿದ್ದಾರೆ. ಕೊರೊನಾ ಹೋಗಲಾಡಿಸಲು ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಈಗ ನೋಡಿದರೆ ವ್ಯಾಕ್ಸಿನ್ ಸಿಗುತ್ತಿಲ್ಲ. ಜನರಿಗೆ ವ್ಯಾಕ್ಸಿನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೇ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು. ಇದನ್ನು ಓದಿ:ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ

  • ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ : ಸಿ.ಪಿ.ಯೋಗೇಶ್ವರ್

    ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ : ಸಿ.ಪಿ.ಯೋಗೇಶ್ವರ್

    ಬೆಂಗಳೂರು: ಈ ಸರ್ಕಾರ ರಚನೆಯಾಗುವುದಕ್ಕೆ ನನ್ನದೂ ಅಳಿಲು ಸೇವೆ ಇದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ರವರು ಹೇಳಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಸ್ನೇಹ ಕಿತ್ತು ಹಾಕಿ ಬಿಜೆಪಿ ಸರ್ಕಾರ ತಂದಿದ್ದೇವೆ. ಸರ್ಕಾರ ರಚನೆಯಾಗಲು ನನ್ನದೂ ಅಳಿಲು ಸೇವೆ ಇದೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನು ಎರಡು ವರ್ಷ ಮುಂದುವರಿಯಬೇಕು ಎಂಬುದು ನನ್ನ ಇಚ್ಛೆ. ನನ್ನ ನೋವನ್ನು ಎಲ್ಲಿ ಹೇಳಿಕೊಳ್ಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳುತ್ತೇವೆ ಎಂದರು. ಇದನ್ನು ಓದಿ: ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

    ಆರ್.ಅಶೋಕ್ ಬಗ್ಗೆ ಮಾತನಾಡುತ್ತಿದ್ದಂತೆ. ಎಲ್ಲ ನನ್ನ ಸ್ನೇಹಿತರು ಅವರು ಏನು ಬೇಕಾದರೂ ಹೇಳಬಹುದು. ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನುಣಿಚಿಕೊಂಡರು.

    ಯೋಗೇಶ್ವರ್‍ರವರು ಮಠಗಳಿಗೆ ಲಾಪ್ ಟ್ಯಾಪ್ ಹಿಡಿದು ಹೋಗಿದ್ದರು ಎಂಬ ಡಿ.ಕೆ ಶಿವಕುಮಾರ್ ಆರೋಪ ವಿಚಾರವಾಗಿ, ಡಿಕೆ ಶಿವಕುಮಾರ್‍ಗೆ ನನ್ನ ವಿರುದ್ಧ ಮಾತಾನಾಡುವುದು ಅನಿವಾರ್ಯ ಆಗಿದೆ. ಬಿಜೆಪಿಗೆ ಅವರು ಸಾಮಾನ್ಯ ಸದಸ್ಯನಾಗಿ ಸದಸ್ಯತ್ವ ತೆಗೆದುಕೊಳ್ಳೋದು ಒಳ್ಳೆಯದು. ಸಿಡಿ ಸಂಸ್ಕೃತಿ ಡಿಕೆ ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತು. ನಮ್ಮ ಜಿಲ್ಲೆಯ ಎಲ್ ಎನ್ ಮೂರ್ತಿ ಅನ್ನೋರು ಅವರು ಯಾರು ಯಾರಿಗೆ ಸಿಡಿ ತೋರಿಸುತ್ತಿದ್ದರು ಎಂದು ಬರೆದಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರು ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು. ಇದನ್ನು ಓದಿ: ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್‍ಟಾಪ್ ತೋರಿಸಿದ್ದಾರೆ: ಡಿಕೆಶಿ

    ನನ್ನ ಬಗ್ಗೆ ಕುಚೋದ್ಯ ಮಾಡಬೇಕು, ಸಮಾಜದಲ್ಲಿ ಕಳಂಕ ತರಿಸಬೇಕು ಅಂತ ಡಿಕೆ ಶಿವಕುಮಾರ್ ಹೀಗೆಲ್ಲ ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ನನ್ನ ರಾಜಕೀಯ ವಿರೋಧಿ. ನನ್ನನ್ನ ಏನೋ ಮಾಡಿ ತಗಲು ಹಾಕಬೇಕು ಅಂತ ಹೀಗೆಲ್ಲ ಮಾತಾನಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರನ್ನು ನೋಡಿದರೆ ನನ್ನನ್ನ ನೋಡಿದರೆ ವಿಚಲಿತರಾಗುತ್ತಾರೆ. ತಿಹಾರ್ ಜೈಲಿಗೆ ಹೋಗಿ ಬಂದವರ ಬಗ್ಗೆ ನಾನೇನು ಮಾತಾನಾಡುವುದಿಲ್ಲ. ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಅವರು ಏನೇನೋ ಮಾತಾನಾಡುತ್ತಿದ್ದಾರೆ. ಅಲ್ಲದೇ ನಾನು ಆದಿಚುಂಚನಗಿರಿ ಮಠಕ್ಕೆ ಹೋಗುವುದು ಇದೇ ಮೊದಲಲ್ಲ. ಅನೇಕ ಬಾರಿ ಹೋಗಿದ್ದೇನೆ. ನಾನು ಮಠಕ್ಕೆ ಹೋಗಿ ಬಂದ ತಕ್ಷಣ ಡಿಕೆ ಶಿವಕುಮಾರ್‍ರವರು ಹೋಗುತ್ತಾರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಅದಕ್ಕೆ ನಾನು ಉತ್ತರ ಕೊಡೊಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಯೋಗೇಶ್ವರ್‍ರವರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಓದಿ:ಯಾರೂ ರಾಜಕೀಯ ಹೇಳಿಕೆಗಳನ್ನು ನೀಡಕೂಡದು: ಆಪ್ತರಿಗೆ ಸಿಎಂ ಸಂದೇಶ

  • ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ : ಡಿಕೆ ಶಿವಕುಮಾರ್

    ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ : ಡಿಕೆ ಶಿವಕುಮಾರ್

    ಹಾಸನ: ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ. ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿ ಎಂದು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ವ್ಯಂಗ್ಯ ಮಾಡಿ ಕಿಡಿಕಾರಿದ್ದಾರೆ.

    ಹಾಸನದ ಶ್ರೀನಗರ ಬಡಾವಣೆಯಲ್ಲಿ ಪುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಅದು ಗೊತ್ತಾಗುವುದಿಲ್ಲ. ಹಾಗಾಗಿ ನಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೆ. ಅದರಂತೆ ಗೊತ್ತಿಲ್ಲದವರು ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಆನ್ ಲೈನ್ ರಿಜಿಸ್ಟ್ರೇಷನ್ ನಿಲ್ಲಿಸಿದೆ ಎಂದು ದೂರಿದರು.

    ಸರ್ಕಾರದ ಬಳಿ 18 ರಿಂದ 44 ವರ್ಷದವರೆಗೆ ಯುವಕರಿಗೆ ನೀಡಲು ಯಾವ ಲಸಿಕೆಯೂ ಇಲ್ಲ. ನಮ್ಮ ಉದ್ದೇಶ ವ್ಯಾಕ್ಸಿನೇಷನ್ ನೀಡಬೇಕು. ಜನರ ಜೀವ ಉಳಿಯಬೇಕು. ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ. ಲಸಿಕೆ ಕೊಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ. ಎಲ್ಲರಿಗೂ ವ್ಯಾಕ್ಸಿನೇಷನ್ ನೀಡಿ ಎಲ್ಲರ ಜೀವ ಉಳಿಸಿ ಎಂದಿದ್ದಾರೆ. ಇದನ್ನು ಓದಿ: ಮುಳಬಾಗಿಲು ಪಟ್ಟಣದಲ್ಲಿ ಸುಸಜ್ಜಿತ ಕೋವಿಡ್ ಕೇರ್ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ

    ಕೆಲವು ಜನರಿಗೆ ಖರೀದಿ ಮಾಡಲು ಲಸಿಕೆ ಸಿಗುತ್ತದೆ. ಆದರೆ ಸರ್ಕಾರಕ್ಕೆ ಏಕೆ ಸಿಗುತ್ತಿಲ್ಲ. ಅದ್ಯಾರೋ ಸಂಸದರು 900 ರೂ. ಗೆ ಲಸಿಕೆ ಸಿಗುತ್ತೆ ಅಂತಾರೆ ಅದು ಹೇಗೆ ಎಂದು ಪರೋಕ್ಷವಾಗಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಶ್ನಿಸುತ್ತಾ, ಜನರಿಗೆ ಲಸಿಕೆ ಕೊಟ್ಟು ಒಳ್ಳೆಯ ಹೆಸರು ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ತಿಳಿ ಹೇಳಿದರು.

    ರಮೇಶ್ ಜಾರಕಿಹೋಳಿ ಎಸ್‍ಐಟಿ ತನಿಖೆಗೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಸಿಎಂ, ಗೃಹ ಸಚಿವರು ಎರಡು ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಆ ಎರಡು ಹೇಳಿಕೆಯಲ್ಲಿ ಗೊತ್ತಾಗುತ್ತಿದೆ. ಯಾವ ರೀತಿ ರಕ್ಷಣೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ನಾವು ರಾಜ್ಯಾದ್ಯಂತ ನಮ್ಮದೇ ಆದ ಹೋರಾಟ ಮಾಡುತ್ತೇವೆ. ಇದನ್ನು ಬಿಡುವುದಿಲ್ಲ. ಅಧಿಕಾರಿಗಳು ಸರ್ಕಾರದ ಮಾತು ಕೇಳಿ ಏನು ಮಾಡುತ್ತಿದ್ದಾರೆ. ನಮಗೆ ಗೊತ್ತಿದೆ ಇದರ ವಿರುದ್ದ ಹೋರಾಟದ ರೂಪುರೇಷೆ ಮಾಡುತ್ತೇನೆ ಎಂದು ಹೇಳಿದರು. ಇದನ್ನು ಓದಿ: ಲಾಕ್‍ಡೌನ್ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ

    ನಾನು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ರೈತರ ಕಷ್ಟ ಆಲಿಸುತ್ತಿದ್ದೇನೆ. ಇಂದು ಮಾರುಕಟ್ಟೆಗಳಲ್ಲಿ ಹೂವು ಹಣ್ಣು, ತರಕಾರಿ ಮಾರಾಟ ಮಾಡುವ ರೈತರ ಜೊತೆ ಮಾತನಾಡಲು ಬಂದಿದ್ದೆ. ಆದರೆ ಲಾಕ್ ಡೌನ್ ಇರುವುದರಿಂದ ಸಾಧ್ಯವಾಗಲಿಲ್ಲ ಮತ್ತೊಮ್ಮೆ ಬರುತ್ತೇನೆ ಎಂದರು.

  • ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ

    ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ

    ಬಾಗಲಕೋಟೆ: ಕೊರೊನಾ ಎರಡನೇ ಅಲೆ ತಡೆಯುವಲ್ಲಿ ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ದೂರಿದ್ದಾರ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣಕ್ಕೆ ಆಗಮಿಸಿ, ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಕುರಿತಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2ನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರ್ಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್ ಡಿಸಿವರ್, ವೆಂಟಿಲೇಟರ್ ಬೆಡ್‍ಗಳ ಸಿದ್ದತೆ ನಡೆಸಲಿಲ್ಲ. ರೋಗಿಗಳಿಗೆ ಆಕ್ಸಿಜನ್, ರೆಮ್‍ಡಿಸಿವರ್ ಇಂಜೆಕ್ಷನ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

    ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ನಮ್ಮ ರೋಗವಲ್ಲ. ಬಿಜೆಪಿಯವರಿಗೆ ಬಂದ ರೋಗ. ಬಿಜೆಪಿ ಅವರು ಬೀದಿ ಜಗಳ ಮಾಡುತ್ತಿದ್ದಾರೆ. ಮಾಡಲಿ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಮೊದಲೇ ಆಡಳಿತ ಇಲ್ಲ, ಈ ಬೀದಿ ಜಗಳದಿಂದ ಇನ್ನಷ್ಟು ಆಡಳಿತ ಕುಸಿದು ಹೋಗುತ್ತದೆ ಎಂದು ಹೇಳಿದರು.

    ಸಿಎಂ ಬದಲಾವಣೆ ಆಗುತ್ತದೆ ಎಂಬ ಮಾಹಿತಿ ನನಗಿದೆ. ಆದರೆ ಕೊರೊನಾ ಹಿನ್ನೆಲೆ ಮುಂದಕ್ಕೆ ಹಾಕುತ್ತಾ ಇರಬೇಕು, ನನಗೆ ಗೊತ್ತಿಲ್ಲ ಎಂದರು. ಇದೇ ಸಮಯದಲ್ಲಿ ಹಕ್ಕು ಚ್ಯುತಿ ಮಂಡನೆ ವಿಚಾರವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆ ಝೂಮ್ ಮೀಟ್‍ಗೆ ಅವಕಾಶ ಕೇಳಿದ್ದೆ. ಕೊಡುವುದಕ್ಕೆ ಆಗಲ್ಲ ನೀವು ಸರ್ಕಾರದ ಭಾಗವಲ್ಲ ಅಂದರು. ನಾನೊಬ್ಬ ವಿರೋಧ ಪಕ್ಷದ ನಾಯಕ, ನಾನು ಎಕ್ಸ್ ಚೀಫ್ ಮಿನಿಸ್ಟರ್. ವಿರೋಧ ಪಕ್ಷದ ನಾಯಕ ಅಂದರೆ ಶ್ಯಾಡೋ ಆಫ್ ಚೀಫ್ ಮಿನಿಸ್ಟರ್ ಇದ್ದಾಂಗೆ ನಾನು ಮಾಹಿತಿ ತಿಳಿದುಕೊಳ್ಳುವಂತಿಲ್ಲ ಎಂದರೆ ಇದು ಪ್ರಜಾಪ್ರಭುತ್ವದ ವ್ಯವಸ್ಥೆ ನಾ ಎಂದು ಆಕ್ಷೇಪಿಸಿ ಪ್ರಶ್ನೆ ಮಾಡಿದರು. ಇದನ್ನು ಓದಿ: ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತೆ, ಆಧಾರವಿಲ್ಲದ ಸುದ್ದಿಯೂ ಬರುತ್ತೆ: ಸಿ.ಟಿ.ರವಿ