Tag: BJP government

  • ಬಿಜೆಪಿ ದೇಶದ ರಾಜಕೀಯವನ್ನು ಕಲುಷಿತಗೊಳಿಸುತ್ತಿದೆ: ಅಖಿಲೇಶ್ ಯಾದವ್

    ಬಿಜೆಪಿ ದೇಶದ ರಾಜಕೀಯವನ್ನು ಕಲುಷಿತಗೊಳಿಸುತ್ತಿದೆ: ಅಖಿಲೇಶ್ ಯಾದವ್

    ಲಕ್ನೋ: ಆಡಳಿತ ಸರ್ಕಾರ ಬಿಜೆಪಿ ದೇಶದ ರಾಜಕೀಯವನ್ನು ಕಲುಷಿತಗೊಳಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ನರೇಂದ್ರ ಮೋದಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಲೆ ಇದೆ ಎಂದು ಪ್ರತಿಪಕ್ಷದ ನಾಯಕರು ವಾದಿಸುತ್ತಾರೆ. ಆದರೆ ಇದು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಪದೇ, ಪದೇ ಸುಳ್ಳು ಹೇಳುವ ಮೂಲಕ ಸುಳ್ಳನ್ನೇ ಸತ್ಯ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಇದು ನದಿಗಳನ್ನು ಮಾತ್ರವಲ್ಲದೇ ದೇಶದ ರಾಜಕೀಯವನ್ನೂ ಕಲುಷಿತಗೊಳಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

    ಈಗ ಬಿಜೆಪಿ ವಿರುದ್ಧದ ಅಲೆ ಎದ್ದಿದೆ. ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದಾರೆ ಮತ್ತು ಅದನ್ನು ತೊಡೆದು ಹಾಕಲು ಮತ್ತು ಯುಪಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಅವಕಾಶ ನೀಡಲು ಕಾಯುತ್ತಿದ್ದಾರೆ. ವಿಧಾನಸಭಾ ಚುನಾವಣೆಯು ರಾಜ್ಯದ ಭವಿಷ್ಯವನ್ನು ಮಾತ್ರವಲ್ಲದೇ ಕೇಂದ್ರ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕರ ಮನೆಯ ಮೇಲೆ ಐಟಿ ದಾಳಿ ವಿಚಾರ ಕುರಿತಂತೆ ಮಾತನಾಡಿದ ಅವರು, ಸೋಲಿನ ಭಯದಿಂದ ಬಿಜೆಪಿ ಈಗ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಮುಂದಾಗಿದೆ. ಆದರೆ ಈ ವಿಚಾರ ಬಿಜೆಪಿ ವಿರುದ್ಧ ಸಾರ್ವಜನಿಕ ಕೋಪವನ್ನು ಹೆಚ್ಚಿಸಿದೆ. ಜನರು ಇನ್ನು ಮುಂದೆ ಪ್ರಜಾಪ್ರಭುತ್ವ ವಿರೋಧಿ, ಜನ ವಿರೋಧಿ ಸರ್ಕಾರವನ್ನು ದೀರ್ಘಕಾಲ ಅಧಿಕಾರದಲ್ಲಿ ನೋಡಲು ಬಯಸುವುದಿಲ್ಲ ಎಂದಿದ್ದಾರೆ.  ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

    ಸಮಾಜವಾದಿ ಪಕ್ಷವು ಸಮಾಜವಾದಿ ವಿಜಯ ಯಾತ್ರೆಯನ್ನು ಪ್ರಾರಂಭಿಸಿದೆ ಮತ್ತು ಬಿಜೆಪಿಯು ಆರು ರಥಯಾತ್ರೆಗಳ ಸರಣಿಯನ್ನು ಪ್ರಾರಂಭಿಸಿದೆ ಅದು ಈಗ ರಾಜ್ಯವನ್ನು ದಾಟುತ್ತಿದೆ.

  • MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್

    MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್

    ಬೆಳಗಾವಿ: ಎಂಇಎಸ್ ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಶುಕ್ರವಾರ ತಡರಾತ್ರಿ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಗರದಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿದ ಧಾಂದಲೆ ಕುರಿತಂತೆ ಇದೀಗ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದು, ಇದೀಗ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಸದ್ಯ ಈ ಕುರಿತಂತೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ರಾಜ್ಯದಲ್ಲಿ ಶಾಂತಿ ಕಾಪಾಡುವುದು ಕಾಂಗ್ರೆಸ್ ಪಕ್ಷದ ಸಂಕಲ್ಪವಾಗಿದೆ. ನಾನು ಯಾವುದೋ ಸಂಘನೆ ಈ ಕೆಲಸ ಮಾಡಿದೆ ಎಂದು ಹೆಸರು ಹೇಳುವುದಿಲ್ಲ. ಅದು ಎಂಇಎಸ್ ಇದ್ದರೂ ಇರಬಹುದು. ಆದರೆ ಯಾರೋ ಕಿಡಿಗೇಡಿಗಳು ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ಮೊದಲಿನಿಂದಲೂ ಬಿಜೆಪಿ ಸರ್ಕಾರ ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡಿತು. ಇದು ಈ ಘಟನೆಗೆ ಪ್ರಮುಖ ಕಾರಣವಾಗಿದೆ. ಆರೋಪಿಗಳು ಯಾರೇ ಆಗಿದ್ದರೂ ಸರ್ಕಾರ ಕೂಡಲೇ ಈ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಬೆಳಗಾವಿ ಪ್ರಕರಣದಲ್ಲಿ MESನ ಪ್ರಮುಖರನ್ನು ಬಂಧಿಸಲಾಗಿದೆ: ಬೊಮ್ಮಾಯಿ

    ಕನ್ನಡ ಸಂಘಟನೆಗಳು ಕಾನೂನನ್ನು ಕೈಗೆತೆಗೆದುಕೊಳ್ಳಬಾರದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಲಿ, ಬೇರೆ ಪಕ್ಷದ ಕಾರ್ಯಕರ್ತರಾಗಲಿ ಯಾರು ಸಹ ಕಾನೂನನನು ಕೈಗೆ ತೆಗೆದುಕೊಳ್ಳಬಾರದು. ಪೊಲೀಸರು ನಿರ್ಧಾಕ್ಷಿಣ್ಯಾವಾಗಿ ರಾಜಕಾರಣಿಗಳ ಮಾತನ್ನು ಬಿಟ್ಟು ಅವರ ಕರ್ತವ್ಯವನ್ನು ನಿಭಾಯಿಸಬೇಕು.

    ಅಧಿವೇಶನದಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ರಾಜ್ಯದಲ್ಲಿಯೇ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಸ್ಟೇಷನ್ ಮುಂದೆ ಕಾಕಿ ಬಟ್ಟೆಯನ್ನು ಕಿತ್ತು ಹಾಕಿ, ಕಾವಿ ಬಟ್ಟೆ ಹಾಕಿಕೊಂಡು ಕುಳಿತುಕೊಂಡರೆ ಹೇಗಪ್ಪಾ? ಎಂದಿದ್ದಾರೆ.

  • ಜನ ಸೇವೆಯೇ ನಿಜವಾದ ರಾಮ ರಾಜ್ಯ: ಯೋಗಿ ಆದಿತ್ಯನಾಥ್

    ಜನ ಸೇವೆಯೇ ನಿಜವಾದ ರಾಮ ರಾಜ್ಯ: ಯೋಗಿ ಆದಿತ್ಯನಾಥ್

    ಲಕ್ನೋ: ಸರ್ಕಾರ ರಚನೆಗೂ ಮೊದಲು 2017ರಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಏಕೆಂದರೆ ನಾವು ಜನರ ಸೇವೆಯೇ ನಿಜವಾದ ರಾಮ ರಾಜ್ಯ ಅಂತ ಪರಿಗಣಿಸಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಭಾನುವಾರ ಮಥುರಾದಿಂದ ಜನ್ ವಿಶ್ವಾಸ್ ಯಾತ್ರೆಗೆ ಚಾಲನೆ ನಿಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಮಾಜದ ಪ್ರತಿಯೊಂದು ವರ್ಗದ ಅಗಾಧ ಅಭಿವೃದ್ಧಿಗೆ ಬಿಜೆಪಿಯ ತುಷ್ಟೀಕರಣ ನೀತಿಯೇ ಕಾರಣ. ಬಡವರಿಗೆ 5 ಲಕ್ಷ ರೂ.ವರೆಗೆ ಉಚಿತ ವಸತಿ, ಶೌಚಾಲಯಗಳು ಮತ್ತು ವಿಮಾ ರಕ್ಷಣೆಯನ್ನು ಒದಗಿಸುವ ಕಾರ್ಯವೇ ನಿಜವಾದ ರಾಮರಾಜ್ಯವಾಗಿದೆ ಎಂದರು. ಇದನ್ನೂ ಓದಿ: ತಮ್ಮ ಕ್ಷೇತ್ರದ ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಕೆ – ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಸಚಿವ

    ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗರಾಜ್‍ನಲ್ಲಿ ಕಾರ್ಮಿಕರ ಪಾದಗಳನ್ನು ತೊಳೆದರು, ಕಾಶಿಯಲ್ಲಿ ಕಾರ್ಮಿಕರ ಮೇಲೆ ಗುಲಾಬಿ ಹೂವನ್ನು ಸುರಿಸಿದರು ಮತ್ತು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ದೇವರಿಗೆ ನಮನ ಸಲ್ಲಿಸಿದ್ದು, ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

    ಮಥುರಾ, ವೃಂದಾವನ, ಗೋವರ್ಧನ್, ನಂದಗಾಂವ್, ಬರ್ಸಾನಾ, ಗೋಕುಲ್ ಮತ್ತು ಬಲ್ದಿಯೊಗೆ ರಾಮಮಂದಿರ ನಿರ್ಮಾಣ ಸೇರಿದಂತೆ ವಿವಿಧ ತೀರ್ಥಕ್ಷೇತ್ರಗಳ ಅಭಿವೃದ್ಧಿಗೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಅಥವಾ ಕಾಂಗ್ರೆಸ್ ಪಕ್ಷ ವಿಶೇವಾದ ಸ್ಥಾನಮಾನ ನೀಡುತ್ತದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

    ಕೋವಿಡ್-19 ಸಮಯದಲ್ಲಿ ಕೂಡ ಅಯೋಧ್ಯೆ ಮತ್ತು ಕಾಶಿ ವಿಶ್ವನಾಥ ಕಾರಿಡಾರ್, ಬಡವರಿಗೆ ಉಚಿತ ಪಡಿತರವನ್ನು ವಿಸ್ತರಣೆ ಹೀಗೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿತು. ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಒಂದು ದೇಶ, ಒಂದು ಧ್ವಜ ಮತ್ತು ಒಂದು ಸಂವಿಧಾನದ ಕನಸನ್ನು ನನಸುಗೊಳಿಸಿದ್ದಾರೆ ಎಂದರು.

    ಕಳೆದ ಐದು ವರ್ಷಗಳಲ್ಲಿ ಹೊಸ ಉತ್ತರ ಪ್ರದೇಶ ಸೃಷ್ಟಿಯಾಗಿದೆ. ಹೊಸ ರಾಜ್ಯ ಒಂದು ಕಡೆ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯಾಗುತ್ತಿದ್ದರೆ ಮತ್ತೊಂದೆಡೆ ಮಾಫಿಯಾವನ್ನು ತೊಡೆದುಹಾಕಲಾಗುತ್ತಿದೆ ಎಂದು ಯೋಗಿ ಪ್ರತಿಪಾದಿಸಿದರು.

  • ರಾಜ್ಯದಲ್ಲಿ MES ಬ್ಯಾನ್ ಆಗಬೇಕು: ನಟ ಪ್ರೇಮ್

    ರಾಜ್ಯದಲ್ಲಿ MES ಬ್ಯಾನ್ ಆಗಬೇಕು: ನಟ ಪ್ರೇಮ್

    ಹುಬ್ಬಳ್ಳಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು ಎಂದು ನಟ ನೆನಪಿರಲಿ ಪ್ರೇಮ್ ಹೇಳಿದ್ದಾರೆ.

    ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುಂಡಾಟಿಕೆಯಿಂದ ದೇಶದಲ್ಲಿ ಎಂಇಎಸ್‍ಗೆ ಒಳ್ಳೆಯ ಹೆಸರು ಬರಲ್ಲ. ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಭಾಂದವ್ಯದಿಂದ ಇದ್ದಾರೆ. ಆ ಭಾಂದವ್ಯವನ್ನ ಹಾಳು ಮಾಡುವಂತಹ ಕೆಲಸಕ್ಕೆ ಎಂಇಎಸ್ ಕೈ ಹಾಕಬಾರದು. ಯಾವುದೇ ಸಂಘಟನೆಗಳಿರಲಿ ಶಾಂತಿ ಕಾಪಾಡಬೇಕು ವ್ಯಕ್ತಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ

    ರಾಜ್ಯದಲ್ಲಿ ಮರಾಠಿ ಚಿತ್ರಗಳಿಗೂ ಹಾಗೂ ಹಿಂದಿ ಚಿತ್ರಗಳಿಗೂ ಅವಕಾಶ ನೀಡಲಾಗಿದೆ. ಎಂಇಎಸ್‍ನವರು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಎಂಇಎಸ್ ಬ್ಯಾನ್ ವಿಚಾರದಲ್ಲಿ ಸರ್ಕಾರದ ನಿಲುವು ಏನಿದೆಯೋ ಗೊತ್ತಿಲ್ಲ. ಆದರೆ ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲ. ಕನ್ನಡ ಚಿತ್ರರಂಗ ಹೋರಾಟಕ್ಕಿಳಿದರೆ ನಮ್ಮವರಿಗೆ ತೊಂದರೆಯಾಗಲಿದೆ ಎನ್ನುವ ಹಿನ್ನೆಲೆ ಶಾಂತ ರೀತಿಯಲ್ಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

  • ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

    ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

    ಲಕ್ನೋ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳಷ್ಟೇ ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷಗಳು ರ‍್ಯಾಲಿ ವೇಳೆ ವಾಕ್ಚಾತುರ್ಯ, ಯೋಜನೆಗಳ ಬಗ್ಗೆ ಮತ್ತು ಪ್ರತಿಸ್ಪರ್ಧಿಗಳನ್ನು ಕೆಣಕುವ ಮೂಲಕ ಮತದಾರರನ್ನು ತಮ್ಮ ಸೆಳೆಯಲು ಪ್ರಯತ್ನಿಸುತ್ತಿವೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

     

    ಈ ಮಧ್ಯೆ ಅಸಾದುದ್ದೀನ್ ಓವೈಸಿ ಅವರು ಸಹ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಮುಸ್ಲಿಮರಿಗೆ ತಮ್ಮದೇ ಆದ ರಾಜಕೀಯ ಶಕ್ತಿಬೇಕಾಗಿದೆ. ನಾಯಕತ್ವವನ್ನು ಗೌರವಿಸಬೇಕು ಮತ್ತು ತಾರತಮ್ಯ ಮಾಡಬಾರದು ಎಂದು ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರಲು ಸಾಧ್ಯವಿಲ್ಲ. ಬಿಜೆಪಿಯ ಕಾರಣದಿಂದಾಗಿ ಮುಸ್ಲಿಮರನ್ನು ಅನುಮಾನದಿಂದ ನೋಡಲಾಗುತ್ತದೆ. ಬಿಜೆಪಿಯು ಮುಸ್ಲಿಂ ಸಮುದಾಯದ ವ್ಯವಹಾರಗಳನ್ನು ನಾಶಪಡಿಸುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಲ್ಲಿದೆ. ಜ್ಞಾನವಾಪಿ ಮಸೀದಿ ಮತ್ತು ಅಜ್ಮೀರ್ ದರ್ಗಾವನ್ನು ಸರ್ಕಾರ ಏಕೆ ಅಭಿವೃದ್ಧಿಪಡಿಸುತ್ತಿಲ್ಲ? ಎಂದು ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಈ ಮುನ್ನ ಉತ್ತರ ಪ್ರದೇಶದ ಮೀರತ್‍ನ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರು ಯಾವಾಗ ಎಚ್ಚುತ್ತುಕೊಳ್ಳುತ್ತೀರಾ ಎಂದು ನಾನು ನಿಮ್ಮೆಲ್ಲರನ್ನು ಕೇಳಲು ಬಯಸುತ್ತೇನೆ. ಉತ್ತರ ಪ್ರದೇಶದಲ್ಲಿರುವ ಶೇಕಡ 19ರಷ್ಟು ಮುಸ್ಲಿಮರಿಗೆ ಗೌರವ, ನಮ್ಮ ಯುವಕರಿಗೆ ಶಿಕ್ಷಣ, ಸಮಾನ ಭಾಗವಹಿಸುವಿಕೆ ಮತ್ತು ಅವಕಾಶಗಳನ್ನು ಪಡೆಯಲು ತಮ್ಮದೇ ಆದ ರಾಜಕೀಯ ಶಕ್ತಿ, ನಾಯಕತ್ವಬೇಕು ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದರು.

  • ನೈತಿಕ ಪೊಲೀಸ್‌ಗಿರಿ ನೀಡಿದ ಪ್ರೋತ್ಸಾಹದಿಂದ ಬೆಳಗಾವಿಯಲ್ಲಿ ದುಷ್ಕೃತ್ಯ: ಡಿ.ಕೆ. ಶಿವಕುಮಾರ್

    ನೈತಿಕ ಪೊಲೀಸ್‌ಗಿರಿ ನೀಡಿದ ಪ್ರೋತ್ಸಾಹದಿಂದ ಬೆಳಗಾವಿಯಲ್ಲಿ ದುಷ್ಕೃತ್ಯ: ಡಿ.ಕೆ. ಶಿವಕುಮಾರ್

    ಬೆಂಗಳೂರು: ಬೆಳಗಾವಿ ಪುಂಡಾಟಿಕೆ ಅಕ್ಷಮ್ಯ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರದ ನಿಲುವು ಸರಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

    ತಡರಾತ್ರಿ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಪುಂಡಾಟಿಕೆ ಅಕ್ಷಮ್ಯ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರದ ನಿಲುವು ಸರಿಯಿಲ್ಲ. ಇದು ನೈತಿಕ ಪೊಲೀಸ್ ಗಿರಿಯನ್ನು ಪ್ರೋತ್ಸಾಹಿಸಿದ ಪರಿಣಾಮವಾಗಿದೆ. ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಆದಾಗ ಲಘುವಾಗಿ ತೆಗೆದುಕೊಂಡರು. ಕೇಸರಿ ಅದು ಇದು ಅಂತ ಹೇಳಿ ಸೌಹಾರ್ದತೆ ಕೆಡಿಸುವಾಗ ಸರ್ಕಾರ ಬೆಂಬಲಿಸಿತು. ಪುಣ್ಯ ಪುರುಷರ ಪ್ರತಿಮೆ ವಿರೂಪಗೊಳಿಸಿದವರನ್ನು ಬಿಡಬಾರದು ಎಂಇಎಸ್ ಪುಂಡಾಟಿಕೆಯನ್ನು ಉಗ್ರವಾಗಿ ಖಂಡಿಸ್ತೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಸರ್ಕಾರ ಪೊಲೀಸ್ ದುರ್ಬಳಕೆ ಮಾಡಿತು. ಬಿಗಿ ನಿಲುವು ಇಲ್ಲ. ರಾಜ್ಯದಲ್ಲಿ ಹಾಗಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಕೆಲಸದಲ್ಲಿ ಹಸ್ತಕ್ಷೇಪ ಮಾಡಿ ಗೌರವ ಮಣ್ಣುಪಾಲಾಗಿದೆ. ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕು. ಶಾಂತಿ ಕಾಪಾಡಬೇಕು ಕರ್ನಾಟಕದಲ್ಲಿ ಇರುವವರೆಲ್ಲಾ ಕನ್ನಡಿಗರೇ. ಎಲ್ಲರೂ ಅಣ್ಣ, ತಮ್ಮಂದಿರಂತೆ ಜೀವಿಸುತ್ತಾ ಇದ್ದೇವೆ ಎಂದು ಹೇಳಿದ್ದಾರೆ. . ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

    ಬೆಳಗಾವಿಯಲ್ಲಿನ ಪುಂಡಾಟವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು. ಮುಖ್ಯಮಂತ್ರಿಗಳಿಗೆ ಪದೇ ಪದೇ ನೈತಿಕ ಪೊಲೀಸ್ ಗಿರಿಗೆ ಬೆಂಬಲ ಕೊಡಬೇಡಿ ಅಂದಿದ್ದೇವು. ಆದರೆ ಸಿಎಂ ಅದನ್ನೇ ಪ್ರೋತ್ಸಾಹಿಸಿದ್ದರು. ಈಗ ಮುಖ್ಯಮಂತ್ರಿಗಳು ಮತ್ತು ನಾವೆಲ್ಲ ಈಗ ಪಶ್ಚಾತಾಪ ಪಡುವಂತಾಗಿದೆ. ದೇಶಕ್ಕೋಸ್ಕರ ಹೋರಾಟ ಮಾಡಿದವರ ಪ್ರತಿಮೆ, ಅದು ಯಾವುದೇ ಜಾತಿಯಾಗಲಿ, ಧರ್ಮದವರದ್ದಾಗಲಿ ಹೀಗೇ ಮಾಡುವುದು ತಪ್ಪು. ಬೆಳಗಾವಿಯಲ್ಲಿ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸ್ ಒತ್ತಡದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ ಯಾರೂ ಕೂಡ ಶಾಂತಿ ಕದಡುವ ಕೆಲಸ ಮಾಡಬಾರದು. ಶಾಂತಿಯುತವಾಗಿ ಎಲ್ಲರೂ ವರ್ತಿಸಬೇಕು ಎಂದಿದ್ದಾರೆ.

  • ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ

    ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ

    ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು ಕರ್ನಾಟಕ ಮತ್ತು ಕನ್ನಡಿಗರನ್ನು ಕೆಣಕಿರುವ ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಕೊಲ್ಲಾಪುರದಲ್ಲಿ ನಮ್ಮ ಧ್ವಜ ದಹನ ಮಾಡಿರುವುದು ಅತ್ಯಂತ ನೀಚತನದ ಪರಮಾವಧಿ. ಕನ್ನಡ ದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ವರ್ತಿಸಬೇಕು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಅಪಚಾರ ಕ್ಷಮಾರ್ಹವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಇದನ್ನು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಪರಮ ಕಿರಾತಕ ಕೃತ್ಯಕ್ಕೆ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣವಾಗಿ ವರ್ತಿಸಬೇಕು. ನಮ್ಮ ಧ್ವಜವನ್ನು ಅಪಮಾನಿಸಿದ ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

    ಕನ್ನಡಕ್ಕಾಗಿ ಹೋರಾಡಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಒಂದು ವೇಳೆ ಕನ್ನಡ ದ್ರೋಹಿಗಳನ್ನು ಹಾಗೆಯೇ ಬಿಟ್ಟರೆ ಕರ್ನಾಟಕ ನಿಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕ್ರಮ ವಹಿಸಬೇಕು ಎಂಬುದು ನನ್ನ ಆಗ್ರಹ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

  • ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

    ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

    ಹುಬ್ಬಳ್ಳಿ: ಹರ್ಯಾಣ ರಾಜ್ಯದ ಗುರುಗ್ರಾಮ್ ನಗರದಲ್ಲಿ ಮುಸ್ಲಿಂ ಸಮುದಾಯದವರಿಗೆ ಧಾರ್ಮಿಕ ಆಚರಣೆ ಮಾಡಲು, ನಮಾಜ್ ಮಾಡಲು ಹಾಗೂ ಮಸೀದಿಗಳನ್ನು ಕಟ್ಟಲು ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಎಐಎಮ್‍ಐಎಮ್ ಪಕ್ಷದ ವತಿಯಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

    ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಹರ್ಯಾಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಹರ್ಯಾಣ ರಾಜ್ಯ ಸರ್ಕಾರ 2018ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ನಮಾಜ್ ಮಾಡಲು ಅವಕಾಶ ನೀಡಿತ್ತು. ಸಾರ್ವಜನಿಕ ಸ್ಥಳಗಳು ಸಾರ್ವಜನಿಕ ಬಳಕೆಗೆ ಮುಕ್ತವಾಗಿರುತ್ತದೆ. ಆದರೆ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ಧಾರ್ಮಿಕ ಆಚರಣೆಗೆ ನಮಾಜ್ ಮಾಡಲು ಹರಿಯಾಣ ರಾಜ್ಯ ಬಿಜೆಪಿ ಸರ್ಕಾರ ಕಡಿವಾಣ ಹಾಕುತ್ತಿದೆ ಎಂದು ಕಿಡಿಕಾರಿದರು.

    ಹರ್ಯಾಣ ರಾಜ್ಯದ ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮುಸ್ಲಿಂ ಸಮುದಾಯದವರ ಧಾರ್ಮಿಕ ಆಚರಣೆಗೆ ಕಡಿವಾಣ ಹಾಕುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕನ್ನಡ ಕಾರ್ಯಕರ್ತರಿಂದ MES ಮುಖಂಡನ ಮುಖಕ್ಕೆ ಮಸಿ

    ಈ ಬಗ್ಗೆ ರಾಷ್ಟ್ರಪತಿಗಳು ಗಂಭೀರವಾಗಿ ಪರಿಗಣಿಸಿ ಮುಸ್ಲಿಂ ಸಮುದಾಯಕ್ಕೆ ಸಂವಿಧಾನ ಬದ್ಧ ಹಕ್ಕುಗಳನ್ನು ಕಲ್ಪಿಸಿಕೊಡಬೇಕೆಂದು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

  • ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

    ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

    ಶಿವಮೊಗ್ಗ: ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಸಚಿವ ಈಶ್ವರಪ್ಪ ಅವರಿಗೆ ಸಿಎಂ ಮೇಲೆ ನಂಬಿಕೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

    ವಿಧಾನ ಪರಿಷತ್ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ನ 20 ಸ್ಥಾನಗಳಲ್ಲಿ ಕನಿಷ್ಠ 15 ಸ್ಥಾನದಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

    ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಗೆ ಜೆಡಿಎಸ್ ಬೆಂಬಲಿಸುತ್ತಾರೆ. ಕೆಲವು ಕ್ಷೇತ್ರದಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾರೆ ಎಂದರು. ಸಚಿವ ಈಶ್ವರಪ್ಪ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ್ದಾರೆ. ಅವರು ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುತ್ತಾರೆ. ಅವರಿಗೆ ಸಿಎಂ ಮೇಲೆ ನಂಬಿಕೆ ಇಲ್ಲ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: 76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

    ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ನಿರ್ವಹಣೆ ಮಾಡಲು ಆಗದೇ ಇದ್ದರೆ ರಾಜೀನಾಮೆ ನೀಡಬೇಕು. ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಕೊಳೆತು ನಾರುತ್ತಿದೆ ಎನ್ನುವುದು ಮನವರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

    ಅಧಿವೇಶನ ಆರಂಭವಾಗುತ್ತಿದೆ. ಅತಿವೃಷ್ಟಿ ಸಮಸ್ಯೆಯಾಗಿದೆ. ಮೂರು ನಾಲ್ಕು ಪಟ್ಟು ಮಳೆ ಹೆಚ್ಚಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಆಗಿದೆ. ಒಂದು ತಿಂಗಳಾಯ್ತು, ಇನ್ನು ಕೂಡಾ ಬೆಳೆ ಹಾನಿ ಬಗ್ಗೆ ಸರ್ವೇ ಆಗಿಲ್ಲ. 6 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರ ವಿರೋಧಿ ಸರ್ಕಾರ ಇದಾಗಿದೆ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದಕ್ಕೆ ಜನರು ಶಾಪ ಹಾಕುತ್ತಿದ್ದಾರೆ. ರಾಜಕೀಯದಲ್ಲಿ ಧುೃವೀಕರಣ ಶುರುವಾಗಿದೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಅನೇಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆ ಹೊರ ದೇಶದಿಂದ ಬಂದವರು ಮಿಸ್ಸಿಂಗ್ ಆಗಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಏರ್ ಪೋರ್ಟ್ ನಲ್ಲಿ ಭ್ರಷ್ಟಾಚಾರ ಇರಬೇಕು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಮಿಸ್ಸಿಂಗ್ ಆಗಿದ್ದಾರೆ. ಇದು ಲಂಚ ಹೊಡೆಯುವ ಸರ್ಕಾರ. ಇದರ ಮೇಲೆ ಯಾವುದೇ ನಿರೀಕ್ಷೆ ಇಲ್ಲ. ಶೇ.40 ಸರ್ಕಾರ ಆಗಿದೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತ್ನಿಯ ಕತ್ತು ಸೀಳಿ ಕೊಂದ ಪತಿ

    ಈಗಾಗಲೇ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರಿಗೆ ಪತ್ರ ಬರೆದಿರುವೆ. ನ್ಯಾಯಾಂಗ ತನಿಖೆ ಆಗಬೇಕು. ರಾಜ್ಯಪಾಲ ಆಡಳಿತ ರಾಜ್ಯದಲ್ಲಿ ಜಾರಿಯಾಗಬೇಕು. ಕಾಂಗ್ರೆಸ್ ಸರ್ಕಾರ ಸೇರಿ ಎಲ್ಲ ತನಿಖೆ ಮಾಡಲಿ. ಇವರಿಗೆ ಧಮ್ ಇಲ್ಲ. ತನಿಖೆ ಆದರೆ ಅವರು ಬೆತ್ತಲೆ ಆಗುತ್ತಾರೆ. ನನ್ನನ್ನು ಟೀಕೆ ಮಾಡಿದ್ರೆ ಈಶ್ವರಪ್ಪ ಲೀಡರ್ ಆಗುತ್ತೇನೆ ಅಂದು ಕೊಂಡಿದ್ದಾನೆ. ಜನರ ಆಶೀರ್ವಾದ ಇದ್ದರೇ ಮಾತ್ರ ನಾಯಕ ಆಗಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ಪ್ರಧಾನಿ ಮೋದಿ ಸರ್ಕಾರದಿಂದ ನಿರ್ಧಾರ

    ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ಪ್ರಧಾನಿ ಮೋದಿ ಸರ್ಕಾರದಿಂದ ನಿರ್ಧಾರ

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಿನ್ನಲೆ ಈ ಬಾರಿಯ ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆ ನವೆಂಬರ್ 26 ರಂದು ಅದ್ದೂರಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಸಂವಿಧಾನ ದಿನ ಆಚರಣೆ ಬಗ್ಗೆ ಮಾಹಿತಿ ನೀಡಿದರು. ನವೆಂಬರ್ 26 ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟವನ್ನು ಕಾಂಕ್ರೀಟ್ ಕಾಡು ಮಾಡಬೇಡಿ – ಮೋದಿಗೆ ಪತ್ರ ಬರೆದ ಭೈರಪ್ಪ

    ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭೆ ಸ್ಪೀಕರ್ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಲಿದ್ದು ಇದೇ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂವಿಧಾನದ ಪೀಠಿಕೆ ಓದಲಿದ್ದಾರೆ. ಇನ್ನು ಸಂವಿಧಾನದ ಓದು ಕಾರ್ಯಕ್ರಮದಲ್ಲಿ ಜನರನ್ನು ಭಾಗಿ ಮಾಡಲು ನಿರ್ಧರಿಸಿದ್ದು ಇದಕ್ಕಾಗಿ ಎರಡು ಆ್ಯಪ್‍ಗಳನ್ನು ನಿರ್ಮಿಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನೇತೃತ್ವದಲ್ಲಿ ಇದರ ಪ್ರಚಾರ ನಡೆಯಲಿದ್ದು ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಓದಲಿದ್ದಾರೆ ಮತ್ತು ಇನ್ನು ಆ್ಯಪ್‍ಗಳಲ್ಲಿ 22 ಭಾಷೆಗಳಲ್ಲಿ ಸಂವಿಧಾನದ ಪೀಠಿಕೆ ಇರಲಿದ್ದು, ಅದನ್ನು ಓದಿ ವೆಬ್‍ಸೈಟ್‍ಗೆ ಅಪ್ಲೋಡ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದಾಗಿದೆ. ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಇನ್ನೂ ವೆಬ್‍ನಲ್ಲಿ ಸಂವಿಧಾನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದ್ದು ಸಾವಿರಕ್ಕೂ ಅಧಿಕ ಪ್ರಶ್ನೆಗಳು ಇರಲಿದೆ. ಇದರಲ್ಲೂ ಜನರೂ ಭಾಗಿಯಾಗಿ ಉತ್ತರಿಸಬಹುದು. ಸಂವಿಧಾನದ ರಚನೆ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಹೆಚ್ಚು ಪ್ರಶ್ನೆಗಳಿರಲಿದ್ದು ಸರಿಯಾದ ಉತ್ತರ ನೀಡದವರಿಗೆ ಸರ್ಟಿಫಿಕೇಟ್ ಕೂಡ ಸಿಗಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.