Tag: bjp candidate

  • 52,148 ಮತಗಳ ಅಂತರದಿಂದ ರಾಘವೇಂದ್ರಗೆ ಗೆಲುವು- ಶಿವಮೊಗ್ಗದಲ್ಲಿ ಯಾರಿಗೆ ಎಷ್ಟು ಮತ?

    52,148 ಮತಗಳ ಅಂತರದಿಂದ ರಾಘವೇಂದ್ರಗೆ ಗೆಲುವು- ಶಿವಮೊಗ್ಗದಲ್ಲಿ ಯಾರಿಗೆ ಎಷ್ಟು ಮತ?

    ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು 52,148 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತಗಳನ್ನು ಗಳಿಸಿದ್ದರು. ಈ ಪ್ರಬಲ ಸ್ಪರ್ಧಿಯ ನಡುವೆಯೂ ಕಣಕ್ಕೆ ಇಳಿದ್ದ ಜೆಡಿಯು ಮಹಿಮಾ ಪಟೇಲ್ 8,713 ಹಾಗೂ ಪಕ್ಷೇತರ ಶಶಿಕುಮಾರ್ ಗೌಡ 17,189 ವೋಟ್‍ಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 10,687 ಮತದಾರರು ನೋಟಾ ಒತ್ತಿದ್ದಾರೆ.

    ಇತ್ತ ಮತ ಎಣಿಕೆ ಪ್ರಾರಂಭ ಹಂತವಾದ ಅಂಚೆ ಮತಗಳಲ್ಲಿಯೂ ಬಿ.ವೈ.ರಾಘವೇಂದ್ರ ಮುನ್ನಡೆ ಸಾಧಿಸಿದ್ದರು. ಒಟ್ಟು 86 ಅಂಚೆ ಮತಗಳಲ್ಲಿ, ರಾಘವೇಂದ್ರ 23, ಮಧು ಬಂಗಾರಪ್ಪ 17 ಪಡೆದಿದ್ದರು. ಉಳಿದಂತೆ 46 ಮತಗಳು ತಿರಸ್ಕೃತಗೊಂಡಿವೆ.

    2014ರ ಚುನಾವಣೆಯಲ್ಲಿ ಯಡಿಯೂರಪ್ಪ 3,63,305 ಮತಗಳ ಅಂತರದಿಂದ ಜಯಗಳಿಸಿದ್ದರು. ಯಡಿಯೂರಪ್ಪ 6,06,216 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ಸಿನ ಮಂಜುನಾಥ ಭಂಡಾರಿ 2,42,911 ಮತಗಳನ್ನು ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯ ಬಂದಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿಯನ್ನ ನೋಡೋಕೆ ಬಂದ ಅಭಿಮಾನಿಗಳು!

    ಸಿದ್ದರಾಮಯ್ಯ ಬಂದಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿಯನ್ನ ನೋಡೋಕೆ ಬಂದ ಅಭಿಮಾನಿಗಳು!

    – ನಾಮಬಲದಿಂದಾದ್ರೂ ನಾನು ಗೆಲ್ಲಲಿ ಎಂದ ಡಾ. ಸಿದ್ದರಾಮಯ್ಯ

    ಮಂಡ್ಯ: ಇಲ್ಲಿನ ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಸ್ಮರಿಸಿದ್ದು ಅವರ ನಾಮಬಲದಿಂದ ಒಂದಷ್ಟು ಮತ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು, ನನ್ನ ಹೆಸರು ಒಂದೇ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡವರು. ಒಂದೇ ಹೆಸರು ಇರೋದ್ರಿಂದ ಅವರೇ ಅಭ್ಯರ್ಥಿ ಎಂಬಂತಾಗಿದೆ. ಅವರ ನಾಮಬಲದಿಂದಲೂ ಒಂದಷ್ಟು ಮತ ಬರಲಿ. ಅವರ ನಾಮಬಲ ನಮಗೆ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಇಂದು ಬೆಳ್ಳಂ ಬೆಳಗ್ಗೆ ಪಾರ್ಕ್‍ಗಳಿಗೆ ಹೋಗಿ ವಾಕಿಂಗ್ ಮಾಡುತ್ತಿದ್ದವರ ಜೊತೆ ಮತಯಾಚನೆ ಮಾಡುತ್ತಿದ್ದ ಡಾಕ್ಟರ್ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಅನುಭವವಾಯ್ತಂತೆ. ವಾಕ್ ಮಾಡುತ್ತಿದ್ದವರು ಸಿದ್ದರಾಮಯ್ಯ ಎಂಬ ಹೆಸರು ಕೇಳಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದಿದ್ದಾರೆ ಎಂದು ಹುಡುಕುತ್ತಿದ್ದರಂತೆ. ಆಗ ಅವರಿಗೆ ನಾನೇ ಡಾಕ್ಟರ್ ಸಿದ್ದರಾಮಯ್ಯ, ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಹೇಳುತ್ತಿದ್ದೆ ಅಂತ ಸ್ಪಷ್ಟನೆ ನೀಡಿದೆ ಅಂದ್ರು.

    ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸುವುದರ ಬಗ್ಗೆ ಮಾತನಾಡಿದ ಅವರು, ಅದರಿಂದ ಎಫೆಕ್ಟೇನೂ ಆಗಲ್ಲ. ಮಂಡ್ಯದಲ್ಲಿ ಎಚ್ಚೆತ್ತ ಮತದಾರರಿದ್ದಾರೆ. ನಾವು ಕೂಡ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿನಿಮಾ ನಿರ್ಮಾಪಕ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ ಪರ ದರ್ಶನ್ ಪ್ರಚಾರ!

    ಸಿನಿಮಾ ನಿರ್ಮಾಪಕ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ ಪರ ದರ್ಶನ್ ಪ್ರಚಾರ!

    ಮೈಸೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ.

    ಸಂದೇಶ್ ಸ್ವಾಮಿ ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ಸಿನಿಮಾ ನಿರ್ಮಾಪಕ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ. ಹಾಗಾಗಿ ದರ್ಶನ್ ಇಂದು ಮಧ್ಯಾಹ್ನ 3 ರಿಂದ 6 ಗಂಟೆವರೆಗೂ ರ್ಯಾಲಿ ನಡೆಸಲಿದ್ದಾರೆ. ಇದನ್ನೂ ಓದಿ: ಧಿಕ್ಕಾರಕ್ಕೆ ಬಗ್ಗದ ನಟ ದರ್ಶನ್‍ರಿಂದ ಚಾಮುಂಡೇಶ್ವರಿಯಲ್ಲಿ ಅಬ್ಬರದ ಪ್ರಚಾರ

    ಮೈಸೂರಿನ ಯರಗನಹಳ್ಳಿ ರಾಘವೇಂದ್ರ ಬಡಾವಣೆ, ಕ್ಯಾತಮಾರನಹಳ್ಳಿ ಗಾಂಧಿ ನಗರ, ನರಸಿಂಹರಾಜ ಮೊಹಲ್ಲಾ ಸೇರಿದಂತೆ ಹಲವು ಕಡೆ ರೋಡ್ ಶೋ ನಡೆಸಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ದರ್ಶನ್ ಸಿಎಂ ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದ್ದರು.

    ನಾಗನಹಳ್ಳಿಯಲ್ಲಿ ದರ್ಶನ್ ಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಈಗ ದರ್ಶನ್ ಸಂದೇಶ್ ಸ್ವಾಮಿ ಪರ ಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ಕುತೂಹಲ ಕೆರಳಿಸಿದೆ.

  • ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ವೃದ್ಧ-ವಿಡಿಯೋ ವೈರಲ್

    ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ವೃದ್ಧ-ವಿಡಿಯೋ ವೈರಲ್

    ಭೋಪಾಲ್: ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕರೊಬ್ಬರಿಗೆ ವಯೋವೃದ್ಧರೊಬ್ಬರು ಚಪ್ಪಲಿ ಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಧಾನಿ ಭೋಪಾಲ್‍ನಿಂದ ಸುಮಾರು 272 ಕಿ.ಮೀ ದೂರದಲ್ಲಿರುವ ಧಾಮನೋದ್ ನಗರದಲ್ಲಿ ಸ್ಥಳೀಯ ಚುನಾವಣೆಗೆ ಭಾನುವಾರ ಪ್ರಚಾರ ನಡೆಯುತ್ತಿತ್ತು. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮನೆ ಮನೆಗೂ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೇಳುತ್ತಿದ್ದರು.

    ವಿಡಿಯೋದಲ್ಲಿ ದಿನೇಶ್ ಶರ್ಮಾ ಸಾಲಾಗಿ ನಿಂತಿದ್ದ ವ್ಯಕ್ತಿಗಳ ಬಳಿ ಮತ ಹಾಕುವಂತೆ ಕೇಳುತ್ತಿದ್ದು, ಈ ಮಧ್ಯ ವೃದ್ಧರೊಬ್ಬರು ಕೈಗೆ ಚಪ್ಪಲಿ ಹಾರ ಎತ್ತಿಕೊಂಡಿದ್ದಾರೆ. ಆಗ ಶರ್ಮಾ ಮೊದಲು ಹಿಂದಕ್ಕೆ ಸರಿಯಲು ಯತ್ನಿಸಿದ್ದಾರೆ. ಆದ್ರೆ ನಂತರ ಅವರೇ ಹಾರ ಹಾಕಿಸಿಕೊಂಡಿರೋದನ್ನ ಕಾಣಬಹುದು.

    ಈ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಅವರು ನನ್ನವರಲ್ಲಿ ಒಬ್ಬರು. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನವಾಗಿ ಈ ರೀತಿ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ ಎಂದು ಹೇಳಿದ್ದಾರೆ.

    ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಆದ್ದರಿಂದ ಹಲವು ಬಾರಿ ಈ ಬಗ್ಗೆ ನಮ್ಮ ಮಹಿಳೆಯರು ಆಗಿನ ಅಧ್ಯಕ್ಷರಿಗೆ ದೂರು ನೀಡಲು ಹೋಗಿದ್ದರು. ಆದ್ರೆ ಬದಲಿಗೆ ಅವರ ವಿರುದ್ಧವೇ ದೂರು ದಾಖಲಾಗಿತ್ತು. ರಾತ್ರಿ ಹೊತ್ತಲ್ಲೂ ಪೊಲೀಸ್ ಠಾಣೆಗೆ ಅನೇಕ ಬಾರಿ ಕರೆಸಿದ್ದಾರೆ. ಅದಕ್ಕಾಗಿ ಈ ರೀತಿ ಮಾಡಿದೆ ಎಂದು ಚಪ್ಪಲಿ ಹಾರ ಹಾಕಿದ ವೃದ್ಧ ಮಾಧ್ಯಮಗಳಿಗೆ ಹೇಳಿದ್ದಾರೆ.