Tag: BJP candidate list

  • 40 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು – ಏಪ್ರಿಲ್‌ 11ರಂದು ಬಿಜೆಪಿ ಫಸ್ಟ್‌ ಲಿಸ್ಟ್‌ ರಿಲೀಸ್..?

    40 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು – ಏಪ್ರಿಲ್‌ 11ರಂದು ಬಿಜೆಪಿ ಫಸ್ಟ್‌ ಲಿಸ್ಟ್‌ ರಿಲೀಸ್..?

    – ಸಮೀಕ್ಷೆಗಳ ವ್ಯತ್ಯಾಸ ಕಂಡು ಅಮಿತ್ ಶಾ ಗರಂ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಬೀಳಲು ಮೂರು ದಿನಗಳು ಬಾಕಿ ಉಳಿದಿದೆ. ಆದರೂ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಕಳೆದ ಎರಡು ದಿನಗಳಿಂದಲೂ ದೆಹಲಿಯಲ್ಲಿ ಸಾಲು ಸಾಲು ಸಭೆ ನಡೆದಿದ್ದರೂ, ಮೊದಲ ಪಟ್ಟಿ ಬಿಡುಗಡೆ ಕಗ್ಗಂಟಾಗಿಯೇ ಉಳಿದಿದೆ.

    ಭಾನುವಾರ 170-180 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ, ರಿಲೀಸ್ ಆಗೋದಷ್ಟೇ ಬಾಕಿಯಿದೆ ಎನ್ನಲಾಗಿತ್ತು. ಆದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಿಸಿದೆ. ಸೋಮವಾರ ಬೆಳ್ಳಂಬೆಳಗ್ಗೆ ಸಿಎಂ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ ಅಮಿತ್ ಶಾ, ಸುಮಾರು 40 ಕ್ಷೇತ್ರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದರು. ರಾಜ್ಯ ನಾಯಕರು ನಡೆಸಿದ ಸರ್ವೆ ಮತ್ತು ಕೇಂದ್ರದಿಂದ ನಡೆದ ಸರ್ವೆಯಲ್ಲಿ ವ್ಯತಾಸಗಳಿದ್ದು ಈ ಬಗ್ಗೆ ಮತ್ತೊಂದು ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ. ಮುಖ್ಯವಾಗಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಮತ್ತು ಹಾಲಿ ಶಾಸಕರನ್ನು ಮುಂದುವರಿಸುವ ವಿಚಾರದಲ್ಲಿ ಗೊಂದಲವಿದೆ. ಹೀಗಾಗಿಯೇ ಸಿಇಸಿಯಲ್ಲಿ ಅನುಮತಿ ಸಿಕ್ಕಿದ್ದ ಪಟ್ಟಿಯನ್ನ ಪ್ರಕಟಿಸದಂತೆ ಅಮಿತ್ ಶಾ ತಡೆ ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಬಿಎಸ್‌ವೈ ಹೊರಗಿಟ್ಟು ಅಮಿತ್ ಶಾ, ಸಿಎಂ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಿ.ವೈ ವಿಜಯೇಂದ್ರ ಅವರನ್ನ ಎಲ್ಲಿ ಕಣಕ್ಕಿಳಿಸಬೇಕು ಎನ್ನುವ ಬಗ್ಗೆ ಅಭಿಪ್ರಾಯ ಪಡೆದಿದ್ದಾರೆ. ಮತ್ತೊಂದುಕಡೆ ಬಿ.ಎಸ್‌ ಯಡಿಯೂರಪ್ಪ ಜೊತೆ ಜೆಪಿ ನಡ್ಡಾ ಪ್ರತ್ಯೇಕ ಸಭೆ ನಡೆಸಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಗೊಂದಲಗಳು ಹಾಗೆಯೇ ಉಳಿದಿರುವ ಕಾರಣ ನಡ್ಡಾ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ. ಆದ್ರೆ, ಈ ಸಭೆಗೂ ಮುನ್ನವೇ ಬೆಂಗಳೂರು ವಿಮಾನ ಹತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.

    ಬಿಜೆಪಿ ಫಸ್ಟ್ ಲಿಸ್ಟ್ ವಿಳಂಬಕ್ಕೆ ಕಾರಣ ಏನು?
    40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಸರ್ವೇ ರಿಪೋರ್ಟ್‌ಗಳಲ್ಲಿ ಗೊಂದಲ ಹಾಗೂ ವ್ಯತ್ಯಾಸ ಕಂಡುಬಂದಿದೆ. ನೈಜ ವರದಿ ನೀಡಲು ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ. ಹಲವು ಕ್ಷೇತ್ರಗಳಲ್ಲಿ ಭಾರೀ ಬಂಡಾಯ ಭೀತಿ ಎದುರಾಗಿದ್ದು, ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಮುಂದೂಡಲು ಹೊಸ ತಂತ್ರ ನಡೆಸಲಾಗಿದೆ ಎಂದು ತಿಳಿದುಬಂದಿದೆ.

    ಸನ್‌ ಸ್ಟ್ರೋಕ್‌ ನೀಡುತ್ತಾ ಹೈಕಮಾಂಡ್?
    ಟಿಕೆಟ್‌ ಹಂಚಿಕೆ ರಹಸ್ಯವಾಗಿದ್ದು, ಕುಟುಂಬ ರಾಜಕಾರಣಕ್ಕೆ ಅಂತ್ಯ ಆಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಎಲ್ಲರಿಗೂ ಈ ನಿಯಮ ಅನ್ವಯ ಅನುಮಾನವಾಗಿದೆ. ಶಿಕಾರಿಪುರದಿಂದ ತಮ್ಮ ಬದಲಾಗಿ ಪುತ್ರ ವಿಜಯೇಂದ್ರನಿಗೆ ಬಿಎಸ್‌ವೈ ಟಿಕೆಟ್‌ ಕೇಳಿದ್ದಾರೆ. ಈ ನಡುವೆ ಸಚಿವ ವಿ. ಸೋಮಣ್ಣ ಪುತ್ರ ಅರುಣ್‌ಗೆ ಗುಬ್ಬಿ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದಾರೆ. ಸವಿವ ಎಂಟಿಬಿ ನಾಗರಾಜು ಪುತ್ರ ನಿತಿನ್‌ಗೆ ಹೊಸಕೋಟೆಯಿಂದ, ಶಾಸಕ ತಿಪ್ಪಾರೆಡ್ಡಿ ಪುತ್ರ ಡಾ. ಸಿದ್ದಾರ್ಥ್‌ಗೆ ಚಿತ್ರದುರ್ಗದಿಂದ, ಮಾಡಾಳ್‌ ವಿರೂಪಾಕ್ಷಪ್ಪ ಮಲ್ಲಿಕಾರ್ಜುನ್‌ಗೆ ಚನ್ನಗಿರಿ ಕ್ಷೇತ್ರದಿಂದ, ಸಂಸದ ಸಿದ್ದೇಶ್ವರ ಪುತ್ರ ಅನಿತ್‌ಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ, ದಿವಂಗತ ಉಮೇಶ್ ಕತ್ತಿ ಕುಟುಂಬಸ್ಥರು ಹುಕ್ಕೇರಿ ಕ್ಷೇತ್ರದಿಂದ ಹಾಗೂ ದಿವಂಗತ ಆನಂದ್ ಮಾಮನಿ ಕುಟುಂಬಸ್ಥರು ಸವದತ್ತಿ ಕ್ಷೇತ್ರದಿಂದ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ವಿಜಯೇಂದ್ರಗೆ ಶಿಕಾರಿ ಪುರದಿಂದ ಬಹುತೇಕ ಟಿಕೆಟ್‌ ಫಿಕ್ಸ್‌ ಆಗಿದ್ದು, ಉಳಿದವರಿಗೆ ಟಿಕೆಟ್‌ ನೀಡುವುದು ಸಂಶಯವಾಗಿದೆ.

    ಇವರಿಗೆ ಕೈತಪ್ಪುತ್ತಾ ಬಿಜೆಪಿ ಟಿಕೆಟ್?
    * ಹಾಲಾಡಿ ಶ್ರೀನಿವಾಸ ಶೆಟ್ಟಿ – ಕುಂದಾಪುರ ( ನಿವೃತ್ತಿ ಘೋಷಣೆ)
    * ಎಸ್.ಎ.ರವೀಂದ್ರನಾಥ್ – ದಾವಣಗೆರೆ ಉತ್ತರ ( ನಿವೃತ್ತಿ ಘೋಷಣೆ)
    * ಲಿಂಗಣ್ಣ – ಮಾಯಕೊಂಡ
    * ಮಾಡಾಳ್ ವಿರೂಪಾಕ್ಷಪ್ಪ – ಚನ್ನಗಿರಿ
    * ಸಂಜೀವ್ ಮಠಂದೂರು – ಪುತ್ತೂರು
    * ಬಸವರಾಜ ದಡೇಸುಗೂರು – ಕನಕಗಿರಿ
    * ಮಹೇಶ್ ಕುಮಟಳ್ಳಿ – ಅಥಣಿ
    * ಶ್ರೀಮಂತ ಪಾಟೀಲ್ – ಕಾಗವಾಡ
    * ಅರುಣ್ ಪೂಜಾರ್ – ರಾಣೆಬೆನ್ನೂರು
    * ಸುನೀಲ್ ನಾಯ್ಕ್ – ಭಟ್ಕಳ
    * ಲಾಲಾಜಿ ಮೆಂಡನ್ – ಕಾಪು
    * ಸುಕುಮಾರ್ ಶೆಟ್ಟಿ – ಬೈಂದೂರು
    * ರಘುಪತಿ ಭಟ್ – ಉಡುಪಿ

  • ಉತ್ತರಾಖಂಡ ಚುನಾವಣೆ: ಅತ್ಯಾಚಾರ ಆರೋಪಿ ಸೇರಿ 10 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಬಿಜೆಪಿ

    ಉತ್ತರಾಖಂಡ ಚುನಾವಣೆ: ಅತ್ಯಾಚಾರ ಆರೋಪಿ ಸೇರಿ 10 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಬಿಜೆಪಿ

    ಡೆಹ್ರಾಡೂನ್: ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತ್ಯಾಚಾರ ಆರೋಪಿ ಸೇರಿದಂತೆ 10 ಮಂದಿ ಹಾಲಿ ಶಾಸಕರನ್ನು ಬಿಜೆಪಿ ಪಟ್ಟಿಯಿಂದ ಕೈಬಿಟ್ಟಿದೆ.

    59 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ಅತ್ಯಾಚಾರ ಆರೋಪಿ ಮಹೇಶ್‌ ನೇಗಿ ಹಾಗೂ ಮಾಜಿ ಮುಖ್ಯಮಂತ್ರಿ ಭುವನ್‌ ಚಂದ್ರ ಖಂಡೂರಿ ಪುತ್ರಿ ರಿತು ಖಂಡೂರಿ ಅವರಿಗೆ ಟಿಕೆಟ್‌ ಕೈತಪ್ಪಿದೆ. ಇದನ್ನೂ ಓದಿ: ಯುಪಿ ಕಾಂಗ್ರೆಸ್‍ನ ‘ನಾನು ಹುಡುಗಿ ಹೋರಾಡಬಲ್ಲೆ’ ಪೋಸ್ಟರ್ ಗರ್ಲ್ ಬಿಜೆಪಿಗೆ ಸೇರ್ಪಡೆ

    ಇನ್ನುಳಿದ 11 ಸ್ಥಾನಗಳಿಗೆ ಆಡಳಿತಾರೂಢ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಈ ಸ್ಥಾನಗಳಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಇದೆ. ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಈ ಸ್ಥಾನಗಳ ಬಗ್ಗೆ ಬಿಜೆಪಿ ಆತುರದ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

    ಹಾಲಿ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರು ಖತೀಮಾ ಕ್ಷೇತ್ರದಿಂದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಮದನ್‌ ಕೌಶಿಕ್‌ ಹರಿದ್ವಾರದಿಂದಲೂ ಕಣಕ್ಕಿಳಿಯಲಿದ್ದಾರೆ. ಸಂಪುಟದ ಬಹುಪಾಲು ಸಚಿವರು ಹಾಗೂ ಶಾಸಕರು ಸದ್ಯ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಂದಲೇ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: UP Election: ಚುಣಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಶಾಸಕನನ್ನು ಓಡಿಸಿದ ಗ್ರಾಮಸ್ಥರು

    ಶಾಸಕ ಮಹೇಶ್‌ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದಾಗಿನಿಂದ ಬಿಜೆಪಿ ಭಾರೀ ಮುಜುಗರ ಅನುಭವಿಸಿದೆ. ಪರಿಣಾಮವಾಗಿ ನೇಗಿ ಅವರನ್ನು ಪಕ್ಷ ಕೈಬಿಟ್ಟಿದ್ದು, ಅನಿಲ್‌ ಶಾಹಿ ಅವರಿಗೆ ಅವಕಾಶ ನೀಡಿದೆ.