Tag: BJP Candidate First List

  • ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಶೀಘ್ರ ಬಿಡುಗಡೆ – ಆಯ್ಕೆಗೆ ಮೋದಿ, ಅಮಿತ್‌ ಶಾ ತಂತ್ರವೇನು?

    ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಶೀಘ್ರ ಬಿಡುಗಡೆ – ಆಯ್ಕೆಗೆ ಮೋದಿ, ಅಮಿತ್‌ ಶಾ ತಂತ್ರವೇನು?

    ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election) ಮುನ್ನ ರಾಜಕೀಯ ಕದನ ಬಿಸಿ ಏರುತ್ತಿದ್ದು, ಈ ವಾರಾಂತ್ಯದ ವೇಳೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಗುರುವಾರ ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಸುಮಾರು 4 ಗಂಟೆಗಳ ಕಾಲ ಸಭೆ ನಡೆದಿದೆ.

    ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಮುಂಬರುವ ಲೋಕಸಭೆ ಚುನಾವಣೆಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದರು. ಚುನಾವಣಾ ಕಣಕ್ಕೆ ಸೂಕ್ತವೆಂದು ಪರಿಗಣಿಸಲಾದ ಅಭ್ಯರ್ಥಿಗಳನ್ನು ಸೂಕ್ಷ್ಮವಾಗಿ ಆಯ್ಕೆ ಮಾಡಲು ಬಿಜೆಪಿ ಈ ಬಾರಿ ವಿಶಿಷ್ಟ ತಂತ್ರವನ್ನು ರೂಪಿಸಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: LPG Price Hike: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರೂ. ಹೆಚ್ಚಳ

    ಸಂಸದರ ಕಾರ್ಯವೈಖರಿ ತಿಳಿಯಲು ನಮೋ ಆ್ಯಪ್!
    ಅಭ್ಯರ್ಥಿಗಳ ಆಯ್ಕೆಗೆ ತಾಂತ್ರಿಕ ವಿಧಾನ ಅಳವಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ತಳಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಲು ಪಕ್ಷವು ವಿಶಿಷ್ಟ ವಿಧಾನ ಅಳವಡಿಸಿಕೊಂಡಿದೆ. ನಮೋ ಆ್ಯಪ್ ಮೂಲಕ ಪ್ರಸ್ತುತ ಸಂಸದರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಯಿತು. ಸಾಂಪ್ರದಾಯಿಕ ವಿಧಾನಗಳನ್ನು ಕೈಬಿಟ್ಟು ಪಕ್ಷವು ಪ್ರತಿ ಪ್ರದೇಶದಲ್ಲಿ ಮೂರು ಅತ್ಯಂತ ಜನಪ್ರಿಯ ನಾಯಕರ ಬಗ್ಗೆ ಅಭಿಪ್ರಾಯಗಳನ್ನು ಕೇಳುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ. ಬಿಜೆಪಿ ತನ್ನ ಸಂಸದರ ಕಾರ್ಯಕ್ಷಮತೆಯನ್ನು ಸಕ್ರಿಯವಾಗಿ ನಿರ್ಣಯಿಸಿದೆ. ಪ್ರತಿ ಸಂಸದೀಯ ಕ್ಷೇತ್ರದ ಸಮಗ್ರ ವರದಿಗಳನ್ನು ಕಂಪೈಲ್ ಮಾಡಲು ಸಮೀಕ್ಷೆ ಏಜೆನ್ಸಿಗಳೊಂದಿಗೆ ಪಕ್ಷವು ಕೆಲಸ ಮಾಡಿದೆ.

    ಲೋಕಸಭೆ ಕ್ಷೇತ್ರಗಳಿಗೆ ಭೇಟಿ, ವಿವರವಾದ ವರದಿಗಳ ಸಂಗ್ರಹ ಮತ್ತು ಹಾಲಿ ಸಂಸದರ ಕಾರ್ಯವೈಖರಿಯ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಒದಗಿಸುವ ಕಾರ್ಯವನ್ನು ಸಚಿವರಿಗೆ ಹೆಗಲಿಗೆ ವಹಿಸಿತ್ತು. ಸಚಿವರು ಮತ್ತು ಸಾಂಸ್ಥಿಕ ಚಾನೆಲ್‌ಗಳು ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಡೇಟಾವನ್ನು ರಾಜ್ಯ ಮಟ್ಟದ ಚುನಾವಣಾ ಸಮಿತಿ ಸಭೆಗಳಲ್ಲಿ ಪರಿಶೀಲಿಸಲಾಯಿತು. ಅಂತಿಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಇದು ಆಧಾರವಾಗಿದೆ. ಈ ಚರ್ಚೆಗಳ ನಂತರ ರಾಜ್ಯ ಮಟ್ಟದ ಬಿಜೆಪಿ ಗುಂಪುಗಳು ನಡ್ಡಾ, ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಂತಹ ಉನ್ನತ ನಾಯಕರೊಂದಿಗೆ ಚರ್ಚೆಯಲ್ಲಿ ತೊಡಗಿದವು. ಇದನ್ನೂ ಓದಿ: ಶೇಖ್ ಷಹಜಹಾನ್ 6 ವರ್ಷ ಪಕ್ಷದಿಂದ ಅಮಾನತು – ಬ್ರಿಜ್ ಭೂಷಣ್ ವಿರುದ್ಧ ಕ್ರಮ ಯಾವಾಗ ಬಿಜೆಪಿಗೆ ಟಿಎಂಸಿ ಪ್ರಶ್ನೆ

    ಹೊಸ ಮುಖಗಳಿಗೆ ಅವಕಾಶ?
    ವಿವಿಧ ಹಿನ್ನೆಲೆಯ ಅಭ್ಯರ್ಥಿಗಳನ್ನು ಸೆಳೆಯುವ ಸಂಘಟಿತ ಪ್ರಯತ್ನದಲ್ಲಿ ಬಿಜೆಪಿ ತನ್ನ ವ್ಯಾಪ್ತಿಯನ್ನು ಪಕ್ಷದ ಗಡಿರೇಖೆ ಮೀರಿ ವಿಸ್ತರಿಸಿದೆ. ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಸಂಸದರನ್ನು ಕೈಬಿಡಲು ಹಿಂಜರಿಯುವುದಿಲ್ಲ ಎಂದು ಪಕ್ಷದ ನಾಯಕತ್ವ ಸ್ಪಷ್ಟಪಡಿಸಿದೆ. ಇದು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು 60-70 ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಲು ಕಾರಣವಾಗಬಹುದು.

    ಇತರೆ ಹಿಂದುಳಿದ ವರ್ಗಗಳ (OBC) ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಲಾಗಿದೆ. ಅನೇಕ OBC ಸಂಸದರು ಮತ್ತೆ ಸ್ಪರ್ಧಿಸಲು ಬಿಜೆಪಿ ನಿರೀಕ್ಷಿಸಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 85 OBC ಸಮುದಾಯದ ಸಂಸದರು ಗೆಲುವು ದಾಖಲಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರಿಕೆ ಹೆಜ್ಜೆಯಿಟ್ಟಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ 6 ಕಾಂಗ್ರೆಸ್‌ ಶಾಸಕರು ಅನರ್ಹ

    ಚುನಾವಣೆಯ ಅಧಿಕೃತ ಘೋಷಣೆಯ ಮೊದಲು 50 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಗುರಿಯನ್ನು BJP ಹೊಂದಿದೆ. ಪ್ರತಿ ಕ್ಷೇತ್ರಕ್ಕೆ ಹೆಚ್ಚು ಸೂಕ್ತ ಅಭ್ಯರ್ಥಿಗಳನ್ನು ಗುರುತಿಸುವ ಗುರಿಯನ್ನು ಪಕ್ಷ ಹೊಂದಿದೆ.

  • BJP Candidate First List: ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್

    BJP Candidate First List: ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಬಿಜೆಪಿ ಮಂಗಳವಾರ ರಾತ್ರಿ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಒಟ್ಟು 189 ಅಭ್ಯರ್ಥಿಗಳ ಪೈಕಿ 8 ಮಹಿಳೆಯರಿಗೆ ಟಿಕೆಟ್‌ (Karnataka BJP Women Candidates) ಘೋಷಿಸಿದೆ.

    ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಹಾಲಿ ಶಾಸಕಿಯರು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಶಿಕಲಾ ಜೊಲ್ಲೆ, ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರೂಪಾಲಿ ಸಂತೋಷ್‌ ನಾಯ್ಕ್‌ ಹಾಲಿ ಶಾಸಕರು. ಈ ಬಾರಿ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಇದರೊಂದಿಗೆ 5 ಮಂದಿ ವಕೀಲರು, 9 ಮಂದಿ ವೈದ್ಯರು, ಒಬ್ಬರು ನಿವೃತ್ತ ಐಎಎಸ್‌, ಒಬ್ಬರು ಐಪಿಎಸ್‌ ಅಧಿಕಾರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಇದನ್ನೂ ಓದಿ: Karnataka Election 2023: ಬಿಜೆಪಿ ಟಿಕೆಟ್‌ ಉಳಿಸಿಕೊಂಡ ಆ 35 ಕ್ಷೇತ್ರಗಳು ಯಾವುವು..?

    ಯಾರಿಗೆ ಎಲ್ಲಿ ಬಿಜೆಪಿ ಟಿಕೆಟ್?
    1. ನಿಪ್ಪಾಣಿ – ಶಶಿಕಲಾ ಜೊಲ್ಲೆ
    2. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
    3. ಸವದತ್ತಿ – ರತ್ನಾ ವಿಶ್ವನಾಥ್‌ ಮಾಮನಿ
    4. ಕಾರವಾರ – ರೂಪಾಲಿ ನಾಯ್ಕ್
    5. ಸಂಡೂರು – ಶಿಲ್ಪಾ ರಾಘವೇಂದ್ರ
    5. ನಾಗಮಂಗಲ – ಸುಧಾ ಶಿವರಾಮೇಗೌಡ
    6. ಪುತ್ತೂರು – ಆಶಾ ತಿಮ್ಮಪ್ಪ ಗೌಡ
    7. ಸುಳ್ಯ – ಭಾಗೀರಥಿ ಮುರುಳ್ಯ

  • Karnataka Election 2023: ಬಿಜೆಪಿ ಟಿಕೆಟ್‌ ಉಳಿಸಿಕೊಂಡ ಆ 35 ಕ್ಷೇತ್ರಗಳು ಯಾವುವು..?

    Karnataka Election 2023: ಬಿಜೆಪಿ ಟಿಕೆಟ್‌ ಉಳಿಸಿಕೊಂಡ ಆ 35 ಕ್ಷೇತ್ರಗಳು ಯಾವುವು..?

    ಬೆಂಗಳೂರು: ಅಳೆದೂ ತೂಗಿ ಕೊನೆಗೂ ಬಿಜೆಪಿ ಕರ್ನಾಟಕ ಚುನಾವಣೆಗೆ (Karnataka Election 2023) ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. (BJP Karnataka Election Candidates) 224 ಕ್ಷೇತ್ರಗಳ ಪೈಕಿ 189 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದು ಇನ್ನು 35 ಕ್ಷೇತ್ರಗಳನ್ನು ಉಳಿಸಿಕೊಂಡಿದೆ.

    ಟಿಕೆಟ್‌ ಬಾಕಿ ಇರುವ ಕ್ಷೇತ್ರಗಳು ಯಾವುವು?: ದೇವರಹಿಪ್ಪರಗಿ, ಬಸವನಬಾಗೇವಾಡಿ, ನಾಗಠಾಣ, ಇಂಡಿ, ಗುರುಮಿಟ್ಕಲ್, ಸೇಡಂ, ಬೀದರ್ ನಗರ, ಭಾಲ್ಕಿ, ಮಾನ್ವಿ, ಗಂಗಾವತಿ, ಕೊಪ್ಪಳ, ರೋಣ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಕಲಘಟಗಿ, ಹಾನಗಲ್, ಹಾವೇರಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಶಿವಮೊಗ್ಗ ನಗರ, ಬೈಂದೂರು, ಮೂಡಿಗೆರೆ, ಗುಬ್ಬಿ,ಶಿಡ್ಲಘಟ್ಟ, ಕೆಜಿಎಫ್, ಹೆಬ್ಬಾಳ, ಗೋವಿಂದ ರಾಜನಗರ, ಕೃಷ್ಣ ರಾಜ, ಅರಸೀಕೆರೆ, ಹೆಚ್ ಡಿ ಕೋಟೆ, ಮಹಾದೇವಪುರ, ಶ್ರವಣಬೆಳಗೊಳ. ಇದನ್ನೂ ಓದಿ: BJP Candidates First List: 8 ಮಹಿಳೆಯರು, 5 ವಕೀಲರು, 9 ಡಾಕ್ಟರ್ಸ್‌ಗೆ ಟಿಕೆಟ್‌ ಘೋಷಣೆ

    35 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಟಿಕೆಟ್‌ ಘೋಷಣೆಯಾಗಲಿದ್ದು, ಈ ಪೈಕಿ 19 ಹಾಲಿ ಶಾಸಕರ ಕ್ಷೇತ್ರಗಳು ಸೇರಿವೆ ಎನ್ನುವುದೂ ವಿಶೇಷ. ಇದನ್ನೂ ಓದಿ: ವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್‌

  • ವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್‌

    ವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್‌

    ನವದೆಹಲಿ/ಮೈಸೂರು: ವಸತಿ ಸಚಿವ ವಿ. ಸೋಮಣ್ಣ (V Somanna) ಅವರಿಗೆ ಮೈಸೂರು ಜಿಲ್ಲೆಯ ವರುಣಾ ಹಾಗೂ ಚಾಮರಾಜನಗರ ಜಿಲ್ಲೆ ಎರಡೂ ಕ್ಷೇತ್ರಗಳಿಂದ ಟಿಕೆಟ್‌ ಘೋಷಣೆ ಮಾಡಲಾಗಿದೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ (Varuna Constituency) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿ. ಸೋಮಣ್ಣ ಕಣಕ್ಕಿಳಿಯಲಿದ್ದಾರೆ.

    ಈ ಬಾರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ (BS Yediyurappa) ಪುತ್ರ ಬಿ.ವೈ ವಿಜಯೇಂದ್ರ ಅವರನ್ನ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಪ್ಲಾನ್‌ ಮಾಡಿತ್ತು. ಆದರೆ, ಬಿ.ಎಸ್‌ ಯಡಿಯೂರಪ್ಪ ಅವರು ವಿಜಯೇಂದ್ರ (BY Vijayendra)) ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ್ದರು. ನಂತರ ಪ್ರಬಲ ಎದುರಾಳಿಯನ್ನ ಕಣಕ್ಕಿಳಿಸಲು ಪ್ಲಾನ್‌ ಮಾಡಿದ್ದ ಬಿಜೆಪಿ ಹೈಕಮಾಂಡ್‌ ವಿ. ಸೋಮಣ್ಣ ಅವರನ್ನ ಆಯ್ಕೆ ಮಾಡಿದೆ.

    ವಿ. ಸೋಮಣ್ಣ ಅವರು ಪ್ರಸ್ತುತ ಪ್ರತಿನಿಧಿಸಿರುವ ಗೋವಿಂದರಾಜನಗರ ಕ್ಷೇತ್ರ ಹಾಗೂ ಚಾಮರಾಜನಗರದಿಂದ (Chamarajanagar) ಟಿಕೆಟ್‌ ಕೇಳಿದ್ದರು. ಆದರೆ ಸೋಮಣ್ಣ ಬಯಸಿದಂತೆ ಚಾಮರಾಜನಗರದಿಂದ ಟಿಕೆಟ್‌ ನೀಡಿದ್ದು, ಗೋವಿಂದರಾಜನಗರಕ್ಕೆ ಬದಲಾಗಿ ವರುಣಾ ಕ್ಷೇತ್ರದಿಂದ ಟಿಕೆಟ್‌ ಘೋಷಣೆ ಮಾಡಲಾಗಿದೆ. ಬಿ.ಎಸ್‌ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದಲೇ ಟಿಕೆಟ್‌ ನೀಡಲಾಗಿದೆ.

  • BJP Candidates First List: 8 ಮಹಿಳೆಯರು, 5 ವಕೀಲರು, 9 ಡಾಕ್ಟರ್ಸ್‌ಗೆ ಟಿಕೆಟ್‌ ಘೋಷಣೆ

    BJP Candidates First List: 8 ಮಹಿಳೆಯರು, 5 ವಕೀಲರು, 9 ಡಾಕ್ಟರ್ಸ್‌ಗೆ ಟಿಕೆಟ್‌ ಘೋಷಣೆ

    ನವದೆಹಲಿ: ಕೊನೆಗೂ ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಧರ್ಮೇಂದ್ರ ಪ್ರಧಾನ್‌ (Dharmendra Pradhan) ಹಾಗೂ ಅರುಣ್‌ ಸಿಂಗ್‌ (Arun Singh) ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ.

    ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಇನ್ನುಳಿದ 35 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ – ನಿಮ್ಮ ಕ್ಷೇತ್ರದ ಅಭ್ಯರ್ಥಿಗಳಿವರು

    ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಅಲ್ಲದೇ, 8 ಮಂದಿ ಮಹಿಳೆಯರು, 5 ಮಂದಿ ವಕೀಲರು, 9 ಮಂದಿ ವೈದ್ಯರಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಇದರೊಂದಿಗೆ ಒಬ್ಬರು ನಿವೃತ್ತ ಐಎಎಸ್‌, ಒಬ್ಬರು ಐಪಿಎಸ್‌ ಅಧಿಕಾರಿಗೆ ಟಿಕೆಟ್‌ ಘೋಷಣೆ ಮಾಡಿದೆ.