Tag: BJP< BS Yeddyurappa

  • ಆರಂಭಕ್ಕೂ ಮುನ್ನವೇ ಆಪರೇಷನ್ ಕಮಲ ಫ್ಲಾಪ್!

    ಆರಂಭಕ್ಕೂ ಮುನ್ನವೇ ಆಪರೇಷನ್ ಕಮಲ ಫ್ಲಾಪ್!

    ಬೆಂಗಳೂರು: ನಾಲ್ಕನೇ ಬಾರಿಯೂ ಆಪರೇಷನ್ ಕಮಲ ಫ್ಲಾಪ್ ಆಗಿದೆ. ಈ ಸಲ ಆಪರೇಷನ್ ಕಮಲ ಆರಂಭಕ್ಕೂ ಮುನ್ನವೇ ಫೇಲ್ ಆಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ನಂಬಿಸಿ ಐವರು ಶಾಸಕರು ಕೈಕೊಟ್ಟಿದ್ದಾರಂತೆ. ಕಾಂಗ್ರೆಸ್‍ನ ಐವರು ಅತೃಪ್ತರು ಕೈಕೊಟ್ಟಿದ್ದಕ್ಕೆ ಆಪರೇಷನ್ ಫೇಲ್ ಆಗಿದೆ. ಈ ಮೂಲಕ ಸಿಎಂ ಆಗುವ ಕನಸು ಕಂಡಿದ್ದ ಬಿಎಸ್‍ವೈಗೆ ನಿರಾಸೆಯಾಗಿದೆ ಎಂದು ಹೇಳಲಾಗುತ್ತಿದೆ.

    `ಕೈ’ ಕೊಟ್ಟ ಶಾಸಕರು ಯಾರು!
    ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ರಾಣೆಬೆನ್ನೂರು ಶಾಸಕ ಆರ್.ಶಂಕರ್, ಮುಳಬಾಗಿಲು ಶಾಸಕ ನಾಗೇಶ್ ಇವರುಗಳು ಬಿಜೆಪಿ ಪಕ್ಷಕ್ಕೆ ಬರುತ್ತೇವೆ ಎಂದು ಹೇಳಿ ಇದೀಗ ಯಡಿಯೂರಪ್ಪ ಅವರಿಗೆ ಕೈ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

  • ಕಾಂಗ್ರೆಸ್-ಜೆಡಿಎಸ್‍ಗೆ ಬಿಎಸ್‍ವೈ ಸವಾಲು

    ಕಾಂಗ್ರೆಸ್-ಜೆಡಿಎಸ್‍ಗೆ ಬಿಎಸ್‍ವೈ ಸವಾಲು

    ದಾವಣಗೆರೆ: ಕಾಂಗ್ರೆಸ್, ಜೆಡಿಎಸ್ ಗೆ ತಾಕತ್ ಇದ್ರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ. ಈ ಕ್ಷಣದಲ್ಲೇ ವಿಧಾನಸಭೆ ವಿಸರ್ಜನೆಗೊಳಿಸಿದ್ರೆ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬರತ್ತೆ ಎಂದು ಬಿಎಸ್ ಯಡಿಯೂರಪ್ಪ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಸವಾಲೆಸೆದ್ರು.

    ನಗರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಬೆಂಬಲ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ ಪರ ಮತಯಾಚನೆ ಸಭೆ ವೇಳೆ ಮಾತನಾಡಿದ ಅವರು, ರಾಜ್ಯ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಮುಖಂಡರು ಅತೃಪ್ತಿ, ಅಸಮಾಧಾನ ಹೊರ ಹಾಕ್ತಾ ಇದ್ದಾರೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದಿದ್ದಾರೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾವು 20 ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಹಿನ್ನಡೆಯಾಗಿದೆ. ಹಾಗಾಗಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಂಡಿದ್ದೇವೆ. ಆದ್ರೆ ಈಗ ಅನುಕೂಲ ಸಿಂಧು ರಾಜಕೀಯ ಮಾಡಿದ ಕಾಂಗ್ರೆಸ್, ಜೆಡಿಎಸ್ ಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಅಂದ್ರು.

    ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಂಗ್ರೆಸ್, ಜೆಡಿಎಸ್ ಗೆ ತಕ್ಕ ತಕ್ಕ ಪಾಠ ಕಲಿಸಿ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಎಲ್ಲ ಕ್ಷೇತ್ರದ ಎಂಎಲ್‍ಎ ಗಳು ಶ್ರಮಿಸಬೇಕಿದೆ. ಆರು ವಿಧಾನ ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮ ಗುರಿ ಎಂದರು.