Tag: BJP and Public TV

  • ಆರ್‌ಎಸ್‌ಎಸ್  ಮುಖಂಡರೊಂದಿಗೆ ಕಾಣಿಸಿಕೊಂಡ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್

    ಆರ್‌ಎಸ್‌ಎಸ್ ಮುಖಂಡರೊಂದಿಗೆ ಕಾಣಿಸಿಕೊಂಡ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್

    ಮಂಗಳೂರು: ಆಪರೇಷನ್ ಕಮಲದ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಳ್ಳಾರಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಆರ್ ಎಸ್‍ಎಸ್ ಮುಖಂಡರೊಂದಿಗೆ ಕಾಣಿಸಿಕೊಂಡಿದ್ದು, ಮತ್ತೆ ಮಾತೃಪಕ್ಷ ಬಿಜೆಪಿಗೆ ಸೇರುತ್ತಾರ ಎಂಬ ಚರ್ಚೆ ರಾಜಕೀಯ ವಲಯದಿಂದ ಕೇಳಿ ಬಂದಿದೆ.

    ಆರ್ ಎಸ್‍ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಕ್ರೀಡೋತ್ಸವದಲ್ಲಿ ಆನಂದ್ ಸಿಂಗ್ ಭಾಗಿಯಾಗಿದ್ದರು.

    ಇಡೀ ಕಾರ್ಯಕ್ರಮದಲ್ಲಿ ಬಿಜೆಪಿ, ಆರ್ ಎಸ್‍ಎಸ್ ಮುಖಂಡರುಗಳನ್ನು ಹೊರತುಪಡಿಸಿ ಬೇರೆ ಯಾರೂ ಅತಿಥಿಗಳು ಇರಲಿಲ್ಲ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿಯೂ ಆನಂದ್ ಸಿಂಗ್ ಹೆಸರು ಇರಲಿಲ್ಲ. ಹೀಗಿದ್ದರೂ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕುತೂಹಲ ಕೆರಳಿಸಿದೆ.

    ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಬಿಜೆಪಿ ಆಪರೇಷನ್ ನಡೆಸುತ್ತೆ ಎಂಬ ಆರೋಪ ಬಿಜೆಪಿ ಮುಖಂಡರ ಮೇಲೆ ಕೇಳಿ ಬಂದಿತ್ತು. ಆನಂದ್ ಸಿಂಗ್ ಅವರ ನಡೆ ಸದ್ಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಆನಂದ್ ಸಿಂಗ್ ಮತ್ತೆ ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿತ್ತು.

    ಸಮ್ಮಿಶ್ರ ಸರ್ಕಾರದ ರಚನೆಗೂ ಮುನ್ನ ಆನಂದ್ ಸಿಂಗ್ ಬಿಜೆಪಿ ಸೇರುವ ಬಗ್ಗೆ ಮಾತು ಕೇಳಿಬಂದಿತ್ತು. ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಸಮಯದಲ್ಲೂ ಸದನಕ್ಕೆ ತಡವಾಗಿ ಆಗಮಿಸಿದ್ದರು. ಆದರೆ ಈ ವೇಳೆ ಅವರು ತಾವು ಕಾಂಗ್ರೆಸ್ ಪಕ್ಷದಲ್ಲೇ ಇರುವುದಾಗಿ ತಿಳಿಸಿದ್ದರು. ಆದರೆ ಬೆಳಗಾವಿ ಅಧಿವೇಶನಕ್ಕೂ ಮುನ್ನ ಕಲ್ಲಡ್ಕದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡಿದ್ದಲ್ಲದೆ, ಪ್ರಭಾಕರ್ ಭಟ್ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ.

    ಈ ಹಿಂದೆ ಶಾಸಕ ಆನಂದ್ ಸಿಂಗ್ ಬಿಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಇದ್ದಕ್ಕೆ ರಾಜ್ಯ ಬಿಜೆಪಿ ಮುಖಂಡರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಂತೆಯೇ ಜಯಂತಿಯಲ್ಲಿ ಭಾಗವಹಿಸಿದ್ದಕ್ಕೆ ಉತ್ತರ ನೀಡಬೇಕೆಂದು ಬಿಜೆಪಿ ಆನಂದ್ ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ಸಹ ಜಾರಿ ಮಾಡಿತ್ತು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಆನಂದ್ ಸಿಂಗ್ ಅವರು ಕಾಂಗ್ರೆಸ್ ಪಕ್ಷ ಸೇರಿ ಶಾಸಕರಾಗಿ ಆಯ್ಕೆ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅನ್ವರ್ಥರಾಗಿದ್ದರು: ತಾರಾ

    ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅನ್ವರ್ಥರಾಗಿದ್ದರು: ತಾರಾ

    ಬೆಂಗಳೂರು: ಒಬ್ಬ ಕಲಾವಿದೆಯಾಗಿದ್ದ ನಾನು ರಾಜಕೀಯ ಪ್ರವೇಶ ಪಡೆದ ನಂತರ ನನಗೆ ಗಣ್ಯ ರಾಜಕೀಯ ವ್ಯಕ್ತಿಗಳ ಹಿಂದಿನ ಶ್ರಮ ಅರಿವಾಯಿತು. ಇತ್ತೀಚೆಗೆ ಅನಂತ್ ಕುಮಾರ್ ಅವರ ಆತ್ಮಕಥೆಯ ಪುಸ್ತಕವನ್ನು ಅವರಿಂದಲೇ ಪಡೆದಿದ್ದೆ. ಅಲ್ಲದೇ ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅನ್ವರ್ಥರಾಗಿದ್ದರು ಎಂದು ಮಾಜಿ ವಿಧಾನಪರಿಷತ್ ಸದಸ್ಯೆ, ನಟಿ ತಾರಾ ಅವರು ಹೇಳಿದ್ದಾರೆ.

    ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ತಾರಾ ಅವರು ಅನಂತ್ ಕುಮಾರ್ ಅವರ ಬಗೆಗಿನ ನೆನಪುಗಳನ್ನು ಬಿಚ್ಚಿಟ್ಟರು. ಕಳೆದ 6 ತಿಂಗಳ ಹಿಂದೆಯಷ್ಟೇ ಅನಂತ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದೆ. ಅವರೇ ತಮ್ಮ ಆತ್ಮಕಥೆಯ ಪುಸ್ತಕವನ್ನು ನನಗೆ ನೀಡಿ ಓದು ಎಂದು ತಿಳಿಸಿದರು. ಅವರ ಪುಸ್ತಕ ಓದಿದ ಬಳಿಕ ನನಗೆ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು ಎಂದರು.

    ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ ಹೆಗ್ಗಳಿಕೆಯಲ್ಲಿ ಅವರ ಪಾಲು ದೊಡ್ಡದು. ರಾಜಕೀಯ ಹೊರತು ಪಡಿಸಿ ಅವರ ಮನಸ್ಸು ಸೂಕ್ಷ್ಮವಾಗಿತ್ತು. ಯಾರನ್ನಾದರು ನೋಡಿದರೆ ಮನಸ್ಸಿನಿಂದ ನಗು ತೋರುತ್ತಿದ್ದರು. ದೆಹಲಿಗೆ ಹೋಗಿದ್ದ ವೇಳೆ ಕರೆ ಮಾಡಿದರೆ ತಾರಾ ಜೀ ಎಂದು ಕರೆಯುತ್ತಿದ್ದರು. ಆಗ ನನಗೆ ಅವರು ದೆಹಲಿಯಲಿದ್ದಾರೆ ಎಂದು ತಿಳಿಯುತ್ತಿತ್ತು. ಕರ್ನಾಟಕದಲ್ಲಿ ಇರುವ ವೇಳೆ ತಾರಾಮ್ಮ ಎಂದು ಕರೆಯುತ್ತಿದ್ದಾಗಿ ತಿಳಿಸಿದರು.

    ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅವರು ಅನ್ವರ್ಥರಾಗಿದ್ದರು. ಅವರನ್ನು ಕೊನೆ ಬಾರಿಗೆ ನೋಡಿದ್ದು, ಸಾವಿತ್ರಿ ಬಾಯಿ ಪುಲೆ ಅವರ ಸಿನಿಮಾ ಟ್ರೇಲರ್ ಬಿಡುಗಡೆಯ ವೇಳೆ ನಾನು ದೆಹಲಿಗೆ ತೆರಳಿದ್ದೆ. ಆಗ ಅವರು ನಮ್ಮೊಂದಿಗೆ ಹೆಚ್ಚು ಸಮಯ ಇದ್ದರು. ಪಕ್ಷದ ಕಾರ್ಯದಲ್ಲಿ ನಮಗೇ ಮುಂದೇ ಇರುವಂತೆ ಮಾಡುತ್ತಿದ್ದರು. ಅವರ ಈ ಅನಿರೀಕ್ಷತ ಸಾವು ನಮಗೇ ಹೆಚ್ಚಿನ ನೋವು. ಹೆಬ್ಬೆಟ್ಟು ರಾಮಕ್ಕ ಸಿನಿಮಾ ಸಿಡಿ ನೀಡುವಂತೆ ಇಂಗ್ಲೆಂಡ್‍ಗೆ ತೆರಳುವ ಮುನ್ನ ಮನವಿ ಮಾಡಿದ್ದರು. ಆದರೆ ನಾನು ಸಿಡಿ ನೀಡಲು ಸಾಧ್ಯವಾಗಿರಲಿಲ್ಲ. ನನ್ನ ಅಣ್ಣ ಕಳೆದುಕೊಂಡ ನೋವು ಆಗುತ್ತಿದೆ ಎಂದು ಭಾವುಕರಾದರು.

    https://www.youtube.com/watch?v=tqWFvDrVIAs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews