Tag: bjp activist

  • ಕಾರಿಗೆ ಡಿಕ್ಕಿ ಹೊಡೆದು ಬಿದ್ದವನ ಮೇಲೆ ಬಸ್ ಹರಿದಿದೆ: ಶೋಭಾ ಕರಂದ್ಲಾಜೆ

    ಕಾರಿಗೆ ಡಿಕ್ಕಿ ಹೊಡೆದು ಬಿದ್ದವನ ಮೇಲೆ ಬಸ್ ಹರಿದಿದೆ: ಶೋಭಾ ಕರಂದ್ಲಾಜೆ

    – ಮೃತ ಪ್ರಕಾಶ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ

    ಬೆಂಗಳೂರು: ಕಾರಿನ ಡೋರ್ ಓಪನ್ ಮಾಡುವಾಗ ನಮ್ಮ ಕಾರ್ಯಕರ್ತ ಹಿಂದಿನಿಂದ ಬಂದು ಗುದ್ದಿದ್ದಾನೆ. ಈ ವೇಳೆ ಬೈಕ್‍ನಿಂದ ಬಿದ್ದಾಗ ಅವನ ಮೇಲೆ ಬಸ್ ಹರಿದಿದೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ಪ್ರತಿಕ್ರಿಯಿಸಿದರು.

    ಘಟನೆ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇವತ್ತು ನಮ್ಮ ಪಕ್ಷದ ರ‍್ಯಾಲಿ ಇತ್ತು. ಎಲ್ಲರೂ ರ‍್ಯಾಲಿ ಮುಗಿಸಿಕೊಂಡು ಬರುವಾಗ ಕೆಆರ್ ಪುರಂ ಸರ್ಕಲ್ (KR Puram Circle) ಬಳಿ ಕಾರು ನಿಲ್ಲಿಸಿದ್ವಿ. ನಮ್ಮ ಕಾರ್ಯಕರ್ತ ಹಿಂಬದಿಯಿಂದ ಬಂದು ಗುದ್ದಿಕೊಂಡಿದ್ದಾನೆ. ಕಾರ್ ನಮ್ಮದೇ, ಡೋರ್ ತೆಗೆದಾಗ ಬಿದ್ದಿದ್ದಾರೆ. ನಂತರ ಅವರ ಮೇಲೆ ಬಸ್ ಹರಿದಿದೆ. ಪೋಸ್ಟ್ ಮಾರ್ಟಮ್ ವರದಿ ಬಂದ ನಂತರ ಎಲ್ಲವೂ ತಿಳಿಯುತ್ತೆ ಎಂದು ಶೋಭಾ ಹೇಳಿದರು.

    ಪ್ರಕಾಶ್ ಸಾವು ಸಂಭವಿಸಿರೋದು ನಿಜಕ್ಕೂ ದುರ್ದೈವ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ನಾವು ಅವರ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತೀವಿ. ಅವರ ಕುಟುಂಬದ ಜೊತೆಗೆ ನಾವೀದ್ದೇವೆ. ಅಲ್ಲದೇ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ನಮ್ಮ ಪಕ್ಷ ನಿರ್ಧರಿಸುತ್ತೆ ಎಂದು ಹೇಳಿದರು. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಡಿಕ್ಕಿ- ಸವಾರ ಸಾವು

  • ಪೀಸ್‌ ಪೀಸ್‌ ಆಗಿ ಕೊಲೆಯಾಗಿರೋ ವೃದ್ಧೆ ಬಿಜೆಪಿ ಕಾರ್ಯಕರ್ತೆ- ಓರ್ವ ವಶಕ್ಕೆ

    ಪೀಸ್‌ ಪೀಸ್‌ ಆಗಿ ಕೊಲೆಯಾಗಿರೋ ವೃದ್ಧೆ ಬಿಜೆಪಿ ಕಾರ್ಯಕರ್ತೆ- ಓರ್ವ ವಶಕ್ಕೆ

    ಬೆಂಗಳೂರು: ನಗರದ ಕೆಆರ್ ಪುರಂನಲ್ಲಿ ತುಂಡು ತುಂಡಾಗಿ ಕತ್ತರಿಸಿ ಹತ್ಯೆಯಾಗಿರುವ ವೃದ್ಧೆ ಬಿಜೆಪಿಯ ಕಾರ್ಯಕರ್ತೆ ಎಂಬುದಾಗಿ ಬಯಲಾಗಿದೆ.

    ಮೃತ ಸುಶೀಲಮ್ಮ (76) ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಬೆಂಗಳೂರಿಗೆ ಬಂದು ನೆಲೆಸಿದ್ದರು. ಆಸ್ತಿ ಮಾರಾಟದಿಂದ ಬಂದಿದ್ದ ಹಣದಲ್ಲಿ ಮನೆಯನ್ನ ಲೀಸ್ ಗೆ ಪಡೆದು ವಾಸವಿದ್ದರು. ಸುಶೀಲಮ್ಮಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದಾನೆ. ಆದರೆ ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಸುಶೀಲಮ್ಮ ಕಿರಿಯ ಪುತ್ರಿ ಕೂಡ ಅದೇ ಕಟ್ಟಡದಲ್ಲಿ ವಾಸವಾಗಿದ್ದರು. ಪುತ್ರ ಪ್ರತೀ ತಿಂಗಳು ತಾಯಿಗೆ 2 ರಿಂದ 3 ಸಾವಿರ ಹಣವನ್ನು ನೀಡುತ್ತಿದ್ದನು.

    ಇತ್ತ ಸುಶೀಲಮ್ಮ ಅವರು ಕೆಲವೊಮ್ಮೆ ಮನೆಯಿಂದ ಹೋದ್ರೆ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಹೀಗಾಗಿ ಮಕ್ಕಳು ಕೂಡ ಅಷ್ಟೊಂದು ತಲೆ ಕೆಡಿಸಿಕೊಂಡು ಹುಡುಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಜ್ಜಿ ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ತುಂಡು ತುಂಡಾಗಿ ಕತ್ತರಿಸಿ ವೃದ್ಧೆಯ ಭೀಕರ ಹತ್ಯೆ

     

    ಬೆಳಕಿಗೆ ಬಂದಿದ್ದು ಹೇಗೆ..?: ನಿಸರ್ಗ ಲೇಔಟ್‌ನ ಮನೆಗಳ ಓಣಿಯಲ್ಲಿ 2 ದಿನಗಳಿಂದ 10 ಲೀಟರ್‌ ಸಾಮರ್ಥ್ಯದ ಡ್ರಮ್‌ ಒಂದು ಅನಾಥವಾಗಿ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಭಾನುವಾರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಡ್ರಮ್‌ ಒಳಗೆ ವೃದ್ಧೆಯ ಮೃತದೇಹ ಇರುವುದು ಬಯಲಾಗಿದೆ. ಅಲ್ಲದೇ ಈ ಕೊಲೆಯ ಹಿಂದೆ ಪರಿಚಿತರ ಕೈವಾಡ ಶಂಕೆ ವ್ಯಕ್ತಪಡಿಸಿದ್ದಾರೆ.

    ಚುನಾವಣಾ ಪ್ರಚಾರ: ಹಿಂದಿನ ಬಾರಿಯ ಚುನಾವಣಾ ಪ್ರಚಾರದಲ್ಲಿ ಸುಶೀಲಮ್ಮಗೆ ದಿನೇಶ್‌ ಎಂಬಾತನ ಪರಿಚಯವಾಗಿತ್ತು. ಈತ ಆಗಾಗ ಮನೆಗೆ ಬಂದು ಸುಶೀಲಮ್ಮನ ಮಾತಾಡಿಸಿಕೊಂಡು ಹೋಗುತ್ತಿದ್ದನು. ಅಂತೆಯೇ ಭಾನುವಾರವೂ ಬಂದಿದ್ದು, ತಾಯಿ ಜೊತೆ ಮಾತನಾಡುತ್ತಿದ್ದಿದ್ದನ್ನು ಸುಶೀಲಮ್ಮನ ಮೊಮ್ಮಗಳು ನೋಡಿದ್ದಾಳೆ. ಹೀಗಾಗಿ ದಿನೇಶ್‌ ಮೇಲೆ ಅನುಮಾನ ಹೆಚ್ಚಾಗಿದೆ. ಶಂಕೆಯ ಮೇರೆಗೆ ಸುಶೀಲಮ್ಮನ ಪರಿಚಿತ ದಿನೇಶ್‌ ಹಾಗೂ ಆತನ ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹಣಕ್ಕಾಗಿ ಕೊಲೆ ಶಂಕೆ: ಸುಶೀಲಮ್ಮನ ಹತ್ಯೆ ಪ್ರಕರಣಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಬಯಲಾಗಬೇಕಿದೆ. ಆದರೆ ಹಣಕ್ಕಾಗಿ ದಿನೇಶ್‌ ಕೊಲೆ ಮಾಡಿರುವ ಅನುಮಾನಗಳಿವೆ. ಸದ್ಯ ಪೊಲೀಸರು ದಿನೇಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

    ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

    – ಬಿ.ಕೆ ಹರಿಪ್ರಸಾದ್‍ರನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ

    ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರೇ ಕಾರಣ ಎಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ (AbhayChandra Jain) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣ. ಸಿದ್ದರಾಮಯ್ಯ (Siddaramaiah) ನಾಳೆ ಅಧಿಕಾರ ಸ್ವೀಕಾರ ಮಾಡಬೇಕು. ಕಲ್ಲಡ್ಕ ಭಟ್ ಈ ಘಟನೆಗೆ ಕಾಂಗ್ರೆಸ್ ಕಾರಣ ಅಂತಾ ಹೇಳುತ್ತಾರೆ. ಕಟೀಲ್ ಲೋಕಸಭಾ ಸದಸ್ಯನಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡಿಸ್ತಾರೆ ಅಂದ್ರೆ ಅವರಿಗೆ ಮಾನವೀಯತೆ ಇದ್ಯಾ ಎಂದು ಜೈನ್ ಪ್ರಶ್ನಿಸಿದರು.

    ಇದೇ ವೇಳೆ ಬಿ.ಕೆ ಹರಿಪ್ರಸಾದ್ (BK Hariprasad) ರನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಮೊಯ್ಲಿ, ಆಸ್ಕರ್, ಪೂಜಾರಿಯವರಂತಹ ನಾಯಕ ನಮಗೆ ಬೇಕು. ಈ ಜಿಲ್ಲೆಗೆ ಬಲಿಷ್ಠ ನಾಯಕ ಬೇಕು. ಇದನ್ನು ಹೈಕಮಾಂಡ್, ಕಾಂಗ್ರೆಸ್ ಪ್ರಮುಖರು ಇದನ್ನು ಅರಿಯಬೇಕು. ಹೀಗಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಗೃಹ ಸಚಿವರನ್ನಾಗಿ ಮಾಡಬೇಕು. ಹಾಗೆಯೇ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿಯೂ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳುವಳಿಕೆಯುಳ್ಳ ವ್ಯಕ್ತಿಯಾಗಿದ್ದಾರೆ. ಹರಿಪ್ರಸಾದ್ ಉಸ್ತುವಾರಿ ಮಂತ್ರಿ ಆದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಅವರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಜನರನ್ನು ಸಮಾನಾಗಿ ಕಾಣುತ್ತಾರೆ. ಹರಿಪ್ರಸಾದ್ ಅವರು ಗಡುಸಾಗಿ ಆಡಳಿತ ನಡೆಸುವ ವ್ಯಕ್ತಿಯಾಗಿದ್ದಾರೆ. ಅವರು ಛಲದಂಕ ಮಲ್ಲ,1978 ರಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೊಟ್ಟರೆ ಜನ ಸಾಮರಸ್ಯದ ಜೀವನ ಮಾಡಬಹುದು. ಜಿಲ್ಲೆಗೆ ಶಕ್ತಿ ತುಂಬುವ ಕೆಲಸವನ್ನು ಬಿ.ಕೆ ಹರಿಪ್ರಸಾದ್ ಮಾಡಲಿದ್ದಾರೆ. ಯುಟಿ ಖಾದರ್ (UT Khader) ಗೂ ಒಳ್ಳೆಯ ಮಂತ್ರಿ ಸ್ಥಾನ ಸಿಗಬೇಕು ಎಂದರು.

    ಹರಿಪ್ರಸಾದ್ ಗೆ ಉಸ್ತುವಾರಿ ಸ್ಥಾನ, ಖಾದರ್ ಗೆ ಮಂತ್ರಿ ಸ್ಥಾನ ಕೊಡಬೇಕು. ಕಾಂಗ್ರೆಸ್ ನ ಐದು ಗ್ಯಾರಂಟಿ ಜಿಲ್ಲೆಯಲ್ಲಿ ಯಶಸ್ವಿಯಾಗಿಲ್ಲ. ಆದರೆ ಈ ಜಿಲ್ಲೆಗೂ ಆ ಯೋಜನೆಯನ್ನು ಜಾರಿ ಮಾಡಬೇಕು. ಯುಟಿ ಖಾದರ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಯುಟಿ ಖಾದರ್ ರಲ್ಲಿ ಡ್ಯಾಶಿಂಗ್ ನೇಚರ್ ಇಲ್ಲ. ಖಾದರ್ ಮೇಲೆ ಕೋಮು ಭಾವನೆ ತೋರಿಸಿ ಅವರನ್ನು ಸ್ತಬ್ಧ ಮಾಡುತ್ತಾರೆ ಎಂದು ಹೇಳಿದರು.

  • ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ಮುಂದಾದ ಬಿಜೆಪಿ ಕಾರ್ಯಕರ್ತ

    ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ಮುಂದಾದ ಬಿಜೆಪಿ ಕಾರ್ಯಕರ್ತ

    ಕೊಪ್ಪಳ: ಅಭಿಮಾನಿಯೊಬ್ಬರು ತನ್ನ ಮಗಳಿಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಎಂದು ನಾಮಕರಣ ಮಾಡಲು ಮುಂದಾಗಿದ್ದಾನೆ.

    ಹೌದು, ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪೂರ ನಿವಾಸಿಯಾಗಿರುವ ಬಿಜೆಪಿ ಕಾರ್ಯಕರ್ತ ದೇವರಾಜ್ ಅವರು ತಮ್ಮ ಮಗಳಿಗೆ ದಿವಂಗತೆ ಸುಷ್ಮಾ ಸ್ವರಾಜ್ ಹೆಸರಿಡಲು ಮುಂದಾಗಿದ್ದಾರೆ. ವಿಶೇಷವೆಂದರೆ ಈ ಹೆಸರು ನಾಮಕರಣ ಮಾಡಲು ಸುಷ್ಮಾ ಸ್ವರಾಜ್ ಅವರ ಮಾನಸಪುತ್ರರಾದ ಸಚಿವ ಬಿ. ಶ್ರೀರಾಮುಲು ಹಾಗೂ ಜಿ. ಜನಾರ್ದನರಡ್ಡಿ ಅವರೇ ಬರಬೇಕು ಎಂದು ದೇವರಾಜ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಸುಷ್ಮಾ ಸ್ವರಾಜ್ ಅವರಿಗೆ ಜನಾರ್ದನ ರೆಡ್ಡಿ ಹಾಗೂ ರಾಮುಲು ಮಾನಸ ಪುತ್ರರು. ಹೀಗಾಗಿ ನನ್ನ ಮಗಳಿಗೆ ಅವರು ಬಂದು ನಾಮಕಾರಣ ಮಾಡಬೇಕು. ಅವರು ಬರುವವರೆಗೂ ಮಗಳಿಗೆ ನಾಮಕಾರಣ ಮಾಡಲ್ಲ ಎಂದು ದೇವರಾಜ್ ಹಠ ಹಿಡಿದು ಕುಳಿತುಕೊಂಡಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿ, ರಾಮುಲು ಆಪ್ತ ಸಹಾಯಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

    ಅಪ್ಪಟ ಸುಷ್ಮಾ ಸ್ವರಾಜ್ ಅಭಿಮಾನಿಯಾಗಿರುವ ದೇವರಾಜ್ ತನಗೆ ಹೆಣ್ಣು ಮಗು ಜನಿಸಿದರೆ ಸುಷ್ಮಾ ಸ್ವರಾಜ್ ಎಂದು ನಾಮಕಾರಣ ಮಾಡುತ್ತೇನೆ ಅಂದುಕೊಂಡಿದ್ದೆ. ಮೊದಲನೆಯದು ಗಂಡು ಮಗುವಾದ ಕಾರಣ ಹೆಸರನ್ನಿಡಲು ಆಗಲಿಲ್ಲ. ಇತ್ತೀಚೆಗೆ ಎರಡನೇಯದಾಗಿ ಹೆಣ್ಣು ಮಗು ಜನಿಸಿದೆ. ಆ ಮಗುವಿಗೆ ನನ್ನ ಆಸೆಯಂತೆ ಸುಷ್ಮಾ ಸವರಾಜ್ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ದೇವರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ

    Live Tv
    [brid partner=56869869 player=32851 video=960834 autoplay=true]

  • ಅನುಮಾನಸ್ಪದವಾಗಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

    ಅನುಮಾನಸ್ಪದವಾಗಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

    ಕೋಲ್ಕತ್ತಾ: ಬಿಜೆಪಿ ಕಾರ್ಯಕರ್ತರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಉತ್ತರ ಕೋಲ್ಕತ್ತಾದ ಕಾಶಿಪುರ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

    ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಮೃತದೇಹವು ಘೋಷ್ ಬಗಾನ್ ಪ್ರದೇಶದ ಕಟ್ಟಡವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಬಿಜೆಪಿಯು ಆಡಳಿತಾರೂಢ ಟಿಎಂಸಿ ವಿರುದ್ಧ ಕೊಲೆಗೈದಿದ್ದಾರೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ಟಿಎಂಸಿಯು ನಿರಾಕರಿಸಿದೆ.

    ಈ ಮಧ್ಯೆ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಶಾ ಇಂದು ಮಧ್ಯಾಹ್ನ ಚೌರಾಸಿಯಾ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಅವರು ಪಕ್ಷದ ದಕ್ಷ ಕಾರ್ಯಕರ್ತರಾಗಿದ್ದರು ಎಂದು ರಾಜ್ಯ ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಈ ಸುದ್ದಿ ಕೇಳಿದ ನಂತರ ಅಮಿತ್ ಶಾ ಬೇಸರಗೊಂಡಿದ್ದಾರೆ. ಘಟನೆ ಹಿನ್ನೆಲೆ ಎನ್‍ಎಸ್‍ಸಿ ಬೋಸ್ ವಿಮಾನ ನಿಲ್ದಾಣದಲ್ಲಿ ಅವರ ಭವ್ಯ ಸ್ವಾಗತವನ್ನು ರದ್ದುಗೊಳಿಸಲು ಅವರು ನಮಗೆ ಹೇಳಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಪೊಲೀಸರ ಜಂಟಿ ಸಭೆ

    ಶಾ ಅವರು ತಮ್ಮ ಎರಡು ದಿನಗಳ ಭೇಟಿಯ ಎರಡನೇ ಹಂತದಲ್ಲಿ ಉತ್ತರ ಬಂಗಾಳದಿಂದ ನಗರಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ಆರೋಪವನ್ನು ತಳ್ಳಿಹಾಕಿದ ಟಿಎಂಸಿ ಸಂಸದ ಸಂತಾನು ಸೇನ್, ನಮ್ಮ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆ. ಪೊಲೀಸರು ಈ ವಿಷಯವನ್ನು ತನಿಖೆ ಮಾಡಲಿ ಎಂದು ಹೇಳಿದ್ದಾರೆ.

    ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೌರಾಸಿಯಾ ಅವರ ಕುಟುಂಬದವರು ಅವರ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಪೊಲೀಸರು ಸ್ಥಳದಿಂದ ಶವವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಬಿಜೆಪಿ ನಾಯಕನನ್ನು ದೆಹಲಿ ಪೊಲೀಸರಿಗೆ ಮಾತ್ರ ಹಸ್ತಾಂತರಿಸುತ್ತೇವೆ: ಹರಿಯಾಣ ಗೃಹ ಸಚಿವ

    ಘಟನಾ ಸ್ಥಳಕ್ಕೆ ದೌಡಾಯಿಸಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ. ಕೇಂದ್ರ ಗೃಹ ಸಚಿವರು ರಾಜ್ಯದಲ್ಲಿದ್ದಾಗ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ.

    ಶಾ ಅವರ ಭೇಟಿಯ ಸಂದರ್ಭದಲ್ಲಿ ಸಮಸ್ಯೆಯನ್ನು ಸೃಷ್ಟಿಸಲು ಕೇಸರಿ ಪಾಳಯದಲ್ಲಿನ ಆಂತರಿಕ ಕಲಹದಿಂದ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇಸರಿ ಪಾಳಯದವರು ನಿರ್ಮಿಸಿರುವ ಚಿತ್ರಕಥೆ ಇದು ಎಂದರು. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಗಳ ಕುರಿತು ಶಾ ಗುರುವಾರ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

    ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

    ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಮಾಧ್ಯಮ ಪತ್ರಿನಿಧಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಡರಾತ್ರಿ ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಪ್ರತಿನಿಧಿಗಳು ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಉಡುಪಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂತೋಷ್ ಪಾಟೀಲ್  ಪತ್ತೆಯಾಗಿದ್ದಾರೆ. ಮೊಬೈಲ್‌ನಲ್ಲಿ ವಾಟ್ಸಾಪ್  ಸಂದೇಶ ಕಳುಹಿಸಿದ್ದ ಸಂತೋಷ್ ಪಾಟೀಲ್ ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಓಲೈಕೆ ರಾಜಕಾರಣ ಗೊತ್ತಿಲ್ಲ: ಇಬ್ಬರು ಮಾಜಿ ಸಿಎಂಗಳಿಗೆ ಕುಟುಕಿದ  ಬೊಮ್ಮಾಯಿ

    ಪತ್ರದ ಸಾರಾಂಶ:
    ನನ್ನ ಸಾವಿಗೆ ನೇರ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ. ಕರ್ನಾಟಕ ಸರ್ಕಾರದಿಂದ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿವರೆನ್ನದೇ ಎಲ್ಲರು ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ನನ್ನ ಗೆಳಯರಾದ ಸಂತೋಷ್ ಮತ್ತು ಪ್ರಶಾಂತ್‍ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡ ಬಂದಿರುತ್ತೇನೆ ಅಷ್ಟೇ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ತಾಯಿ ಗರ್ಭದಷ್ಟೇ ಭೂಗರ್ಭಕ್ಕೆ ಮಹತ್ವವಿದೆ- ಮಣ್ಣು ಉಳಿಸಿ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

  • 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    ಹುಬ್ಬಳ್ಳಿ: ಗ್ರಾಮೀಣಾಭಿವೃದ್ಧಿ ಇಲಾಖೆ 40% ಕಮಿಷನ್ ಇಲಾಖೆಯಿದ್ದ ಹಾಗೆ. ಕಾಮಗಾರಿಗಳ ಬಿಲ್ ಆಗಬೇಕು ಅಂದ್ರೆ 40% ಕಮಿಷನ್ ಕೊಡಲೇ ಬೇಕು ಅಂತ, ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದು, ಸಚಿವ ಕೆಎಸ್ ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

    MODi

    ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರ ಸಂತೋಷ್, ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಅಭಿವೃದ್ಧಿಗಾಗಿ, 4 ಕೋಟಿ ವೆಚ್ಚದಲ್ಲಿ ಸುಮಾರು 108 ವಿವಿಧ ಕಾಮಗಾರಿಗಳನ್ನು ಈಶ್ವರಪ್ಪ ಮಂಜೂರು ಮಾಡಿದ್ದರು. ಸದ್ಯ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಗುತ್ತಿಗೆದಾರ ಸಂತೋಷ ಅವರಿಗೆ ಇನ್ನೂ ಒಂದು ರೂಪಾಯಿ ಸಹ ಬಂದಿಲ್ಲ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

    ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಈಶ್ವರಪ್ಪ ಆಪ್ತರು ಮತ್ತು ಇಲಾಖೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತು ಹಣ ಬಿಡುಗಡೆ ಮಾಡಲು ಸೂಚನೆ ನೀಡುವಂತೆ ಪ್ರಧಾನಿ ಮೋದಿಗೆ ಗುತ್ತಿಗೆದಾರ ಸಂತೋಷ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ

  • ಠಾಕ್ರೆ ಪತ್ನಿಯನ್ನು “ಮರಾಠಿ ರಾಬ್ರಿ ದೇವಿ” ಅಂದ ಬಿಜೆಪಿ ಕಾರ್ಯಕರ್ತ – ಮುಂಬೈ ಪೊಲೀಸರಿಂದ ಸಮನ್ಸ್

    ಠಾಕ್ರೆ ಪತ್ನಿಯನ್ನು “ಮರಾಠಿ ರಾಬ್ರಿ ದೇವಿ” ಅಂದ ಬಿಜೆಪಿ ಕಾರ್ಯಕರ್ತ – ಮುಂಬೈ ಪೊಲೀಸರಿಂದ ಸಮನ್ಸ್

    ಮುಂಬೈ: ಮಹಾರಾಷ್ಟ್ರ ಬಿಜೆಪಿ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿಯನ್ನು “ಮರಾಠಿ ರಾಬ್ರಿ ದೇವಿ” ಎಂದು ಕರೆಯುವ ಮೂಲಕ ಟ್ವೀಟ್ ಮಾಡಿದ್ದು, ಈ ಪೋಸ್ಟ್ ಇದೀಗ ಭಾರೀ ವಿವಾದ ಸೃಷ್ಟಿಸಿದೆ.

    ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರಿಗೆ ರಶ್ಮಿ ಠಾಕ್ರೆ ಅವರನ್ನು ಹೋಲಿಸಿದ ಆರೋಪದಡಿ ಮುಂಬೈ ಪೊಲೀಸರು ಗುರುವಾರ ಬಿಜೆಪಿ ಕಾರ್ಯಕರ್ತ ಜಿತೇನ್ ಗಜಾರಿಯಾ ಅವರಿಗೆ ಸಮನ್ಸ್ ನೀಡಿದ್ದಾರೆ. ಬಿಜೆಪಿ ಸೋಶಿಯಲ್ ಮೀಡಿಯಾ ವಿಭಾಗದ ಜಿತೇನ್ ಗಜಾರಿಯಾ ಆಕ್ಷೇಪಾರ್ಹ ಟ್ವೀಟ್ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ರಶ್ಮಿ ಠಾಕ್ರೆ ಅವರ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ರಾಬ್ರಿ ದೇವಿ ಎಂದು ಜಿತೇನ್ ಗಜಾರಿಯಾ ಟ್ವೀಟ್ ಮಾಡಿದ್ದರು. ಈ ಹೇಳಿಕೆ ಕುರಿತಂತೆ ಗಜಾರಿಯಾ ಅವರನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ಗೆ ವಿಚಾರಣೆಗೆ ಪೊಲೀಸರು ಕರೆಸಿರುವುದಾಗಿ ಮುಂಬೈ ವಕ್ತಾರ ವಿವೇಕಾನಂದ ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಮತ್ತೊಂದೆಡೆ ಬೆನ್ನು ಮೂಳೆಯ ಸಮಸ್ಯೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ಉದ್ಧವ್ ಠಾಕ್ರೆ ಅವರು ಅಸ್ವಸ್ಥರಾಗಿರುವ ಕಾರಣ ಮಹಾರಾಷ್ಟ್ರದ ಹಲವು ಬಿಜೆಪಿ ನಾಯಕರು, ಠಾಕ್ರೆ ಅವರಿಗೆ ತಮ್ಮ ಶಿವಸೇನೆ ಸಹೋದ್ಯೋಗಿಗಳು, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರಲ್ಲಿ ನಂಬಿಕೆ ಇಲ್ಲದಿದ್ದರೆ, ಅವರ ಪತ್ನಿ ಅಥವಾ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮಹಾರಾಷ್ಟ್ರದ ಸಿಎಂ ಆಗಿ ನೇಮಿಸಬೇಕು ಎಂದು ಪತ್ತಾಯಿಸುತ್ತಿದ್ದಾರೆ.

  • ರಸ್ತೆ ಗುಂಡಿಗೆ ಬಿದ್ದು ಬಿಜೆಪಿ ಕಾರ್ಯಕರ್ತ ದುರ್ಮರಣ

    ರಸ್ತೆ ಗುಂಡಿಗೆ ಬಿದ್ದು ಬಿಜೆಪಿ ಕಾರ್ಯಕರ್ತ ದುರ್ಮರಣ

    ಆನೇಕಲ್(ಬೆಂಗಳೂರು): ಬಿಜೆಪಿ ಕಾರ್ಯಕರ್ತರೊಬ್ಬರು ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಆನೇಕಲ್-ಹೊಸೂರು ಮುಖ್ಯರಸ್ತೆಯ ಸಬ್ ಮಂಗಲದಲ್ಲಿ ಈ ಅವಘಡ ಸಂಭವಿಸಿದೆ.

    ಸಬ್ ಮಂಗಲದ ಮಾದೇಶಣ್ಣ(50) ಮೃತ ಬಿಜೆಪಿ ಕಾರ್ಯಕರ್ತ. ರಸ್ತೆ ಕಾಮಗಾರಿಗಾಗಿ ಮರ ತೆರವಿಗೆ ಗುಂಡಿ ಅಗೆಯಲಾಗಿತ್ತು. ಆದರೆ 2 ತಿಂಗಳ ಹಿಂದೆಯೇ ಗುಂಡಿ ತೆಗೆದು ಆ ಬಳಿಕ ಮುಚ್ಚಿರಲಿಲ್ಲ. ರಾತ್ರಿ ಬೈಕ್‍ನಲ್ಲಿ ಹೋಗುವಾಗ ಮಾದೇಶಣ್ಣ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್

    ಈ ರಸ್ತೆ ಕಾಮಗಾರಿ ಆದ ಬಳಿಕ ಇಲ್ಲಿಯವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ. 3 ವರ್ಷದ ಹಿಂದೆಯೇ ಶುರು ಆಗಿದ್ದ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಆನೇಕಲ್ ತಹಶೀಲ್ದಾರ್ ದಿನೇಶ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಎಸ್‍ಎಂಕೆ ಸರಿಯಾದ ಆಯ್ಕೆ – ಸಿಎಂಗೆ ಪ್ರತಾಪ್ ಸಿಂಹ ಅಭಿನಂದನೆ

  • ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ನೇಣಿಗೆ ಶರಣು..?

    ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ನೇಣಿಗೆ ಶರಣು..?

    – ಟಿಎಂಸಿ ಮೇಲೆ ಬಿಜೆಪಿ ನಾಯಕರು ಕಿಡಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಇದೀಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಮೃತ ಬಿಜೆಪಿ ಕಾರ್ಯಕರ್ತನನ್ನು ಉದಯ್ ದುಬೆ ಎಂದು ಗುರುತಿಸಲಾಗಿದೆ. ಇವರ ಮೃತದೇಹ ನಂದಿಗ್ರಾಮದ ಭೆಕುಟಿಯಾ ಪ್ರದೇಶದಲ್ಲಿರುವ ನಿವಾಸದಲ್ಲಿ ದೊರೆತಿದೆ. ಸದ್ಯ ಬಿಜಿಪಿ ನಾಯಕರು ಟಿಎಂಸಿ ಪಕ್ಷದೆವರ ಮೇಲೆ ಬೊಟ್ಟು ಮಾಡುತ್ತಿದ್ದು, ದುಬೆ ಸಾವಿಗೆ ಅವರೇ ಕಾರಣ ಎಂದು ಆರೋಪಿಸುತ್ತಿದ್ದಾರೆ.

    ದುಬೆ ಇತ್ತೀಚೆಗೆ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ ಅವರು ಸುವೆಂದು ಅಧಿಕಾರಿ ಪರ ನಡೆಸಿದ್ದ ರೋಡ್ ಶೋ ದಲ್ಲಿ ಭಾಗಿಯಾಗಿದ್ದರು. ಆ ಬಳಿಕದಿಂದ ಅವರಿಗೆ ಹಲವಾರು ಬೆದರಿಕೆಗಳು ಬರಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಬಿಜೆಪಿ ನಾಯಕರು ತೃಣಮೂಲಕ ಕಾಂಗ್ರೆಸ್ ಕಾರ್ಯಕರ್ತರು(ಟಿಎಂಸಿ) ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ.

    ಈ ಸಂಬಂಧ ಸುವೇಂದು ಅಧಿಕಾರಿ ಮಾತನಾಡಿ, ಸಮ್ಸಾಬಾದ್ ನ ಕಂಚನ್ ನಗರದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಇತ್ತ ನಂದಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಎರಡೂ ಘಟನೆಗಳ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಕ್ರಮ ಕೈಗೊಳ್ಳುತ್ತಾರೆ. ಒಟ್ಟಿನಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ತಿಳಿಸಿದ್ದಾರೆ.

    ಈ ಮಧ್ಯೆ ದುಬೆ ಅವರನ್ನು ಟಿಎಂಸಿ ‘ಗೂಂಡಾಗಳು’ ಗಲ್ಲಿಗೇರಿಸಬಹುದೆಂದು ಬಿಜೆಪಿ ಹೇಳಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಆದರೆ ಟಿಎಂಸಿ ಮಾತ್ರ ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದೆ. ಅಲ್ಲದೆ ಬಿಜೆಪಿ ನಾಯಕರು ಸಾವಿನಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

    ಇತ್ತ ಟಿಎಂಸಿಯ ಹಿರಿಯ ಮುಖಂಡರೊಬ್ಬರು, ಕೌಟುಂಬಿಕ ಕಲಹದಿಂದ ದುಬೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಮರಣೋತ್ತರ ವರದಿಯನ್ನು ಪಡೆದ ನಂತರ ನಿಖರವಾದ ಕಾರಣವನ್ನು ಕಂಡುಹಿಡಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸುವೆಂದು ಅಧಿಕಾರಿಯ ನಡುವಿನ ಹೈ-ವೋಲ್ಟೇಜ್ ಚುನಾವಣಾ ಸ್ಪರ್ಧೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಂದಿಗ್ರಾಮ್ ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.