Tag: bjo

  • ಉಡುಪಿ, ಮಂಗಳೂರನ್ನು ತಾಲಿಬಾನ್ ಮಾಡಲು ಬಿಡಲ್ಲ – ಮೋದಿ ವರ್ಚಸ್ಸಿಗೆ ಕಳಂಕ ತರಲು ಕಾಂಗ್ರೆಸ್ ಯತ್ನ

    ಉಡುಪಿ, ಮಂಗಳೂರನ್ನು ತಾಲಿಬಾನ್ ಮಾಡಲು ಬಿಡಲ್ಲ – ಮೋದಿ ವರ್ಚಸ್ಸಿಗೆ ಕಳಂಕ ತರಲು ಕಾಂಗ್ರೆಸ್ ಯತ್ನ

    ಬೆಂಗಳೂರು: ಹಿಜಬ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಂತೆ ಸಮವಸ್ತ್ರ ವಿವಾದವನ್ನು ತಾಲಿಬಾನ್ ಹಂತಕ್ಕೆ ಹೋಲಿಸಿ ಬಿಜೆಪಿಯೂ ರಾಡಿ ಎಬ್ಬಿಸಿದೆ. ಯಾವುದೇ ಕಾರಣಕ್ಕೂ ಮಂಗಳೂರು, ಉಡುಪಿಯನ್ನು ಮತ್ತೊಂದು ತಾಲಿಬಾನ್ ಆಗಲು ಬಿಡಲ್ಲ ಎಂದು ಸಚಿವ ಸುನೀಲ್ ಕುಮಾರ್ ಗುಡುಗಿದ್ದಾರೆ.

    ಧರ್ಮದ ಕಾರಣಕ್ಕೆ, ಮತೀಯವಾದದ ಕಾರಣಕ್ಕೆ ಹೀಗೆ ಇಷ್ಟ ಬಂದ ವಸ್ತ್ರ ಹಾಕಿಕೊಂಡು ಬರುವುದನ್ನ ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಶಾಲೆಗೆ ಶುಲ್ಕ ಕಟ್ಟೋಕೆ ಕಷ್ಟ ಅನ್ನೋ ಒಂದು ವಲಯದವರು ಕೋರ್ಟ್‍ಗೆ ಹೋಗ್ತಾರೆ ಅಂದ್ರೆ ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ, ಖಾದರ್, ಜಮೀರ್ ಮಾತನ್ನು ಕೇಳ್ತಿದ್ರೆ ಇದರ ಹಿಂದೆ ಅವರೇ ಇದ್ದಂತಿದೆ ಎಂದು ಸುನೀಲ್ ಕುಮಾರ್ ಆಪಾದಿಸಿದ್ದಾರೆ.

    ಸಿದ್ದರಾಮಯ್ಯನವ್ರೇ ಶಾಸಕ ರಘುಪತಿ ಭಟ್ ಯಾವೋನೋ ಅಲ್ಲ. ಅವರು ಎಸ್‍ಡಿಎಂಸಿ ಅಧ್ಯಕ್ಷರು. ಅವರಿಗೆ ಹೇಳೋಕೆ ಅಧಿಕಾರ ಇದೆ ಸಚಿವ ಬಿಸಿ ನಾಗೇಶ್ ತಿರುಗೇಟು ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡ್ತಿದ್ದಾರೆ. ಮೋದಿ ಜನಪ್ರಿಯತೆ ತಡೆಯಲು ಇಂತಹ ಕೃತ್ಯ ಮಾಡ್ತಿದ್ದಾರೆ ಎಂದು ಬಿಸಿ ನಾಗೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಪರ ಸಿದ್ದರಾಮಯ್ಯ ಬಣದ ಬ್ಯಾಟಿಂಗ್ – ಹೆಣ್ಮಕ್ಕಳ ವಿದ್ಯಾಭ್ಯಾಸ ತಡೆಗೆ ಹುನ್ನಾರದ ಆರೋಪ

    ಇತ್ತ ಸಿಟಿ ರವಿ ಟ್ವೀಟ್ ಮಾಡಿ, ಇಂದು ಅವರು ಹಿಜಬ್ ಧರಿಸಿ ಶಾಲೆಗೆ ಹೋಗಲು ಅನುಮತಿ ಕೇಳೋರು ನಾಳೆ ಷರಿಯಾ ಕಾನೂನಿಗೂ ಒತ್ತಾಯ ಮಾಡ್ತಾರೆ. ನೀವು ಶಾಲೆಯ ನಿಯಮ ಅನುಸರಿಸಿ, ಇಲ್ಲ ಅಂದ್ರೆ ಶಾಲೆಗೆ ಹೋಗೋದನ್ನೇ ನಿಲ್ಲಿಸಿ ಎಂದು ಹೇಳಿದ್ದಾರೆ. ಸಚಿವ ಈಶ್ವರಪ್ಪ ಅಂತೂ, ಮುಸಲ್ಮಾನರು ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ಉಸಿರು ಗಟ್ಟಿ ಸತ್ತೇ ಹೋಗುತ್ತೆ ಎಂದು ಲೇವಡಿ ಮಾಡಿದ್ದಾರೆ.

    ಮಾಜಿ ಸಿಎಂ ಯಡಿಯೂರಪ್ಪ ಮಾತ್ರ, ಈ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ. ಈ ಮಧ್ಯೆ ಮುಸ್ಲಿಂ ವಿದ್ಯಾರ್ಥಿನಿಯರ ಹೋರಾಟದ ಹಿಂದೆ ಎಸ್‍ಡಿಪಿಐ, ಪಿಎಫ್‍ಐ, ಎಂಐಎಂ ಸಂಘಟನೆಗಳಿವೆ. ಶಿಕ್ಷಣದಲ್ಲಿ ಇಸ್ಲಾಮೀಕರಣ ಮಾಡಲಾಗುತ್ತಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

  • ಪಕ್ಷಗಳಿಗೆ ಲೋಕಲ್ ಎಲೆಕ್ಷನ್ ಟೆಸ್ಟ್ – ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭ

    ಪಕ್ಷಗಳಿಗೆ ಲೋಕಲ್ ಎಲೆಕ್ಷನ್ ಟೆಸ್ಟ್ – ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭ

    ಬೆಂಗಳೂರು: ಶತಕ ಬಾರಿಸಿದ ಬೆನ್ನಲ್ಲೇ ದೋಸ್ತಿ ಸರ್ಕಾರಕ್ಕೆ ಮತ್ತು ವಿಪಕ್ಷ ಬಿಜೆಪಿಗೆ ಲೋಕಲ್ ಟೆಸ್ಟ್ ನಡೆಯುತ್ತಿದ್ದು, ರಾಜ್ಯದ 22 ಜಿಲ್ಲೆಗಳಲ್ಲಿ ಮೊದಲ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ಆರಂಭವಾಗಿದೆ.

    ರಾಜ್ಯದ ಮೂರು ಮಹಾನಗರ ಪಾಲಿಕೆಗಳಾದ ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಸೇರಿ 102 ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿದೆ. 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಈ ಎಲೆಕ್ಷನ್ ನಡೆಯುತ್ತಿದೆ.

    ಒಟ್ಟು 2634 ವಾರ್ಡ್‍ಗಳಲ್ಲಿ ಕಣಕ್ಕೆ ಇಳಿದಿದ್ದಾರೆ. 9,121 ಅಭ್ಯರ್ಥಿಗಳಿದ್ದು, ಈ ಪೈಕಿ ನಗರಸಭೆಯ 12, ಪುರಸಭೆಯ 17 ವಾರ್ಡ್‍ಗಳಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ. ಲೋಕಸಮರಕ್ಕೆ ಮುನ್ನ 49 ಲಕ್ಷ ಮತದಾರರು ಲೋಕಲ್ ಭವಿಷ್ಯ ಬರೆಯಲಿದ್ದಾರೆ. ಪ್ರಕೃತಿ ವಿಕೋಪಕ್ಕೆ ತುತ್ತಾದ ಮಡಿಕೇರಿ 3 ಪಟ್ಟಣ ಪಂಚಾಯಿತಿಗಳಲ್ಲಿ ಈ ಚುನಾವಣೆ ಇಲ್ಲ.

    ಅಫಜಲಪುರ ಪುರಸಭೆಯ 19ನೇ ವಾರ್ಡ್‍ನಲ್ಲಿ ಸಲ್ಲಿಕೆಯಾಗಿದ್ದ ಎಲ್ಲಾ ನಾಮಪತ್ರ ತಿರಸ್ಕೃತಗೊಂಡಿದೆ. ಕೊಳ್ಳೆಗಾಲ ನಗರಸಭೆಯ 9ನೇ ವಾರ್ಡ್‍ನಲ್ಲಿ ಬಿಎಸ್‍ಪಿ ಅಭ್ಯರ್ಥಿ ನಿಧನದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಲಾಗಿದ್ದು, ಸೆಪ್ಟೆಂಬರ್ 3ರಂದು ದೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv