Tag: Bitter Gourd

  • ಬಾಯಿಗೆ ಕಹಿ ಇದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು – ಹಾಗಲಕಾಯಿ ಡ್ರೈ ಪಲ್ಯ ಮಾಡಿ

    ಬಾಯಿಗೆ ಕಹಿ ಇದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು – ಹಾಗಲಕಾಯಿ ಡ್ರೈ ಪಲ್ಯ ಮಾಡಿ

    ಹಾಗಲಕಾಯಿ ಎಂದರೇ ಇಷ್ಟ ಪಡುವುದಕ್ಕಿಂತ ಮೂಗು ಮುರಿಯುವವರೆ ಹೆಚ್ಚು. ಹಾಗಲಕಾಯಿ ಪಲ್ಯ, ಸಾರು, ಕರಿ ಎಷ್ಟೇ ಇದ್ದರೂ ಈ ತರಕಾರಿ ತಿನ್ನುವವರೂ ತುಂಬಾ ವಿರಳ. ಆದರೆ ಈ ತರಕಾರಿಯಿಂದ ಎಷ್ಟು ಲಾಭವಿದೆ ಎಂದು ತಿಳಿದವರಿಗೆ ಮಾತ್ರ ಇದರ ಮಹತ್ವ ಗೊತ್ತು. ಹಾಗಲಕಾಯಿ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ಮಧುಮೇಹ, ಅನಗತ್ಯ ಕೊಬ್ಬುಗಳನ್ನು ಶ್ರೀಘ್ರವೇ ಶಮನ ಮಾಡಲು ತುಂಬಾ ಸಹಾಯ ಮಾಡುತ್ತೆ. ಅದಕ್ಕೆ ಇಂದು ನಾವು ಹೇಳಿಕೊಡುತ್ತಿರುವ ‘ಹಾಗಲಕಾಯಿ ಡ್ರೈ ಪಲ್ಯ’ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಹಾಗಲಕಾಯಿ – 2 ಕಪ್
    * ಎಣ್ಣೆ – ಅರ್ಧ ಟೀ ಸ್ಪೂನ್
    * ಜೀರಿಗೆ – ಅರ್ಧ ಟೀ ಸ್ಪೂನ್
    * ಕರಿಬೇವು – 3 ರಿಂದ 4
    * ಕತ್ತರಿಸಿದ ಈರುಳ್ಳಿ – 1 ಕಪ್


    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
    * ಚಿಲ್ಲಿ ಪೌಡರ್ – 2 ಟೀ ಸ್ಪೂನ್
    * ಅರಿಶಿನ – ಅರ್ಧ ಟೀ ಸ್ಪೂನ್
    * ದನಿಯಾ ಪುಡಿ – ಅರ್ಧ ಟೀ ಸ್ಪೂನ್
    * ಗರಂ ಮಸಾಲಾ – ಅರ್ಧ ಟೀ ಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಹುಣಿಸೇಹಣ್ಣು ಸಾರ – ಅರ್ಧ ಕಪ್
    * ಬೆಲ್ಲ – 1 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ಹಾಗಲಕಾಯಿಯನ್ನು ದಪ್ಪಕ್ಕೆ ಸ್ಲೈಸ್ ಮಾಡಿ ಬೀಜಗಳನ್ನು ತೆಗೆದುಹಾಕಿ.
    * ಉಪ್ಪು ಸೇರಿಸಿ, ಹಾಗಲಕಾಯಿಯನ್ನು ಉರಿದು ನೀರು ಸೇರಿಸಿ ಮತ್ತು 20-30 ನಿಮಿಷ ನೆನೆಯಲು ಬಿಡಿ.
    * ದೊಡ್ಡ ಕಡೈಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.


    * ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಚಿಲ್ಲಿ ಪೌಡರ್ ಸೇರಿಸಿ. ಈರುಳ್ಳಿ ಚೆನ್ನಾಗಿ ಬೇಯಿಸಿ.
    * ಹಾಗಲಕಾಯಿಯನ್ನು ಕಡೈಗೆ ಸೇರಿಸಿ ಒಂದು ನಿಮಿಷದವರೆಗೆ ಫ್ರೈ ಮಾಡಿ. ಅದಕ್ಕೆ ಅರಶಿನ, ದನಿಯಾ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ.
    * ಕಡಿಮೆ ಉರಿಯಲ್ಲಿ ಮಸಾಲೆಗಳನ್ನು ಚೆನ್ನಾಗಿ ಬೇಯಿಸಿ.
    * ಹುಣಿಸೇಹಣ್ಣು ರಸ, ಬೆಲ್ಲವನ್ನು ಸೇರಿಸಿ. 20 ನಿಮಿಷಗಳ ಕಾಲ ಹಾಗಲಕಾಯಿಯನ್ನು ಡ್ರೈಯಾಗುವವರೆಗೂ ಫ್ರೈ ಮಾಡಿ.

    – ಅಂತಿಮವಾಗಿ, ಕೊತ್ತಂಬರಿ ಸೊಪ್ಪು ಸೇರಿಸಿ, ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ʼಹಾಗಲಕಾಯಿ ಡ್ರೈ ಪಲ್ಯʼ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಟಫ್ಡ್ ಹಾಗಲಕಾಯಿಯನ್ನು ಒಮ್ಮೆ ಮಾಡಿ ನೋಡಿ – ಮತ್ತೆಂದೂ ಈ ತರಕಾರಿ ಬೇಡ ಎನ್ನಲ್ಲ

    ಸ್ಟಫ್ಡ್ ಹಾಗಲಕಾಯಿಯನ್ನು ಒಮ್ಮೆ ಮಾಡಿ ನೋಡಿ – ಮತ್ತೆಂದೂ ಈ ತರಕಾರಿ ಬೇಡ ಎನ್ನಲ್ಲ

    ತ್ಯಂತ ಆರೋಗ್ಯಕರ ತರಕಾರಿ ಹಾಗಲಕಾಯಿಯನ್ನು (Bitter Gourd) ಹೆಚ್ಚಿನವರು ಅದರ ಕಹಿಯಾದ ರುಚಿಯಿಂದಲೇ ಇಷ್ಟಪಡುವುದಿಲ್ಲ. ಆದರೆ ಹಾಗಲಕಾಯಿಯ ಅಡುಗೆ ಮಾಡುವುದೇ ಒಂದು ಕಲೆ. ಸರಿಯಾದ ಪದಾರ್ಥಗಳನ್ನು ಬಳಸಿ ಹಾಗಲಕಾಯಿಯ ಅಡುಗೆ ಮಾಡಿದರೆ ಅದು ಕಹಿಯಾದರೂ ರುಚಿಕರವನ್ನಾಗಿ ಮಾಡಬಹುದು. ಇಂದು ನಾವು ಸ್ಟಫ್ಡ್ ಹಾಗಲಕಾಯಿ (Stuffed Bitter Gourd) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದನ್ನು ಒಮ್ಮೆ ಮಾಡಿ ನೋಡಿದರೆ, ಮತ್ತೆಂದೂ ನೀವು ಹಾಗಲಕಾಯಿಯನ್ನು ಬೇಡ ಎನ್ನಲ್ಲ.

    ಬೇಕಾಗುವ ಪದಾರ್ಥಗಳು:
    ಹಾಗಲಕಾಯಿ – ಅರ್ಧ ಕೆಜಿ
    ಉಪ್ಪು – 1 ಟೀಸ್ಪೂನ್
    ಅರಿಶಿನ – 1 ಟೀಸ್ಪೂನ್
    ಎಣ್ಣೆ – 2-3 ಟೀಸ್ಪೂನ್

    ಸ್ಟಫಿಂಗ್ ಮಸಾಲೆ ತಯಾರಿಸಲು:
    ಎಣ್ಣೆ – 1-2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 2
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಆಮ್ಚೂರ್ ಪುಡಿ – 2 ಟೀಸ್ಪೂನ್
    ಬೆಲ್ಲ – 2 ಟೀಸ್ಪೂನ್
    ಹಿಂಗ್ – ಚಿಟಿಕೆ
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಹುರಿದ ಕಡಲೆಕಾಯಿ – 3-4 ಟೀಸ್ಪೂನ್ (ಸ್ವಲ್ಪ ಒರಟಾಗಿ ಪುಡಿ ಮಾಡಿ)
    ಒಣ ತೆಂಗಿನ ತುರಿ – 2-3 ಟೀಸ್ಪೂನ್ ಇದನ್ನೂ ಓದಿ: ದೇಸಿ ಮಸಾಲಾ ಸ್ವೀಟ್ ಕಾರ್ನ್ ಮನೆಯಲ್ಲೇ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಸಣ್ಣ ಹಾಗೂ ಎಳೆಯ ಹಾಗಲಕಾಯಿಗಳನ್ನು ಆರಿಸಿ, ಅದರ ಒರಟಾದ ಸಿಪ್ಪೆಯನ್ನು ಪೀಲರ್ ಬಳಸಿ ತೆಗೆಯಿರಿ.
    * ಈಗ ಹಾಗಲಕಾಯಿಯ ಮಧ್ಯ ಭಾಗದಲ್ಲಿ ಅರ್ಧದಷ್ಟು ಸೀಳಿ, ಚಮಚದ ಸಹಾಯದಿಂದ ಅದರ ಒಳಗಿನ ಬೀಜಗಳನ್ನು ಹೊರಗೆ ತೆಗೆಯಿರಿ.
    * ಈಗ ಹಾಗಲಕಾಯಿಗೆ ಉಪ್ಪು ಹಾಗೂ ಅರಿಶಿನವನ್ನು ಸವರಿ, 30 ನಿಮಿಷ ಪಕ್ಕಕ್ಕಿಡಿ.
    * 30 ನಿಮಿಷಗಳ ಬಳಿಕ ಹಾಗಲಕಾಯಿಯನ್ನು ನೀರಿನಿಂದ ತೊಳೆಯಿರಿ. ಇರದಿಂದ ಹಾಗಲಕಾಯಿಯ ಕಹಿ ರುಚಿ ಹೋಗುತ್ತದೆ.
    * ಈಗ ಸ್ಟಫಿಂಗ್ ತಯಾರಿಸಲು ಒಂದು ಬಾಣಲೆಯನ್ನು ತೆಗೆದುಕೊಳ್ಳಿ. 2-3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಆದ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿ.
    * ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಮಧ್ಯಮ ಉರಿಯಲ್ಲಿ 2-3 ನಿಮಿಷ ಹುರಿಯಿರಿ.
    * ಬಳಿಕ ಅರಿಶಿನ, ಕೆಂಪು ಮೆಣಸಿನ ಪುಡಿ, ಆಮ್ಚೂರ್ ಪುಡಿ, ಬೆಲ್ಲ, ಉಪ್ಪು, ಹಿಂಗ್, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಸೇರಿಸಿ, 1-2 ನಿಮಿಷ ಹುರಿಯಿರಿ.
    * ಮಿಶ್ರಣ ಒಣ ಎನಿಸಿದರೆ ಸ್ವಲ್ಪ ನೀರು ಸೇರಿಸಬಹುದು.
    * ಈಗ ಒರಟಾಗಿ ಪುಡಿ ಮಾಡಿದ ಹುರಿದ ಕಡಲೆಕಾಯಿ ಹಾಗೂ ಒಣ ತೆಂಗಿನ ತುರಿಯನ್ನು ಮಸಾಲೆ ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ.
    * ಈಗ ಮಸಾಲೆಯನ್ನು ಆರಲು ಬಿಡಿ. ಬಳಿಕ ಹಾಗಲಕಾಯಿಯೊಳಗೆ 1-2 ಟೀಸ್ಪೂನ್‌ನಷ್ಟು ಹೂರಣದಂತೆ ಮಸಾಲೆಯನ್ನು ತುಂಬಿ, ಎಲ್ಲವನ್ನೂ ತಯಾರಿಸಿ ಪಕ್ಕಕ್ಕಿಡಿ.
    * ಈಗ ಒಂದು ಬಾಣಲೆಯಲ್ಲಿ 2-3 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಸ್ಟಫ್ ಮಾಡಿದ ಹಾಗಲಕಾಯಿಗಳನ್ನು ಅದರ ಮೇಲಿರಿಸಿ, ಕಡಿಮೆ ಉರಿಯಲ್ಲಿ 3-4 ನಿಮಿಷ ಮುಚ್ಚಿ ಬೇಯಿಸಿ.
    * ಬೇಕೆಂದರೆ ಸ್ವಲ್ಪ ನೀರು ಚುಮುಕಿಸಿ, ತಿರುವಿ ಹಾಕಿ, ಮತ್ತೊಂದು ಬದಿಯಲ್ಲಿ ಮಧ್ಯಮ ಉರಿಯಲ್ಲಿ 3-4 ನಿಮಿಷ ಬೇಯಿಸಿ.
    * ಸ್ಟಫ್ ಮಸಾಲೆ ಇನ್ನಷ್ಟು ಉಳಿದಿದ್ದರೆ, ಕೊನೆಯಲ್ಲಿ ಸೇರಿಸಬಹುದು.
    * ಇದೀಗ ಸ್ಟಫ್ಡ್ ಹಾಗಲಕಾಯಿ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]

  • ಚಹಾದೊಂದಿಗೆ ಆನಂದಿಸಿ ಹಾಗಲಕಾಯಿ ಫ್ರೈ

    ಚಹಾದೊಂದಿಗೆ ಆನಂದಿಸಿ ಹಾಗಲಕಾಯಿ ಫ್ರೈ

    ಹಿಯಾದ ಹಾಗಲಕಾಯಿಯ ಅಡುಗೆಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಅತ್ಯಂತ ಆರೋಗ್ಯಕರ ತರಕಾರಿ ಪಟ್ಟಿಯಲ್ಲಿ ಇದು ಸೇರುತ್ತದೆ. ಮನೆಯ ಎಲ್ಲಾ ಸದಸ್ಯರಿಗೂ ಹಾಗಲಕಾಯಿಯ ಅಡುಗೆಯನ್ನು ಮಾಡಿ ಬಡಿಸುವುದು ಗೃಹಿಣಿಯರಿಗೆ ಒಂದು ಸವಾಲಾಗಿಯೇ ಉಳಿದಿದೆ. ಆದರೆ ಇಂದು ನಾವು ತೋರಿಸುತ್ತಿರುವ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿದರೆ, ಎಂತಹ ಹಾಗಲಕಾಯಿ ದ್ವೇಷಿಗಳೂ ಅದನ್ನು ಇಷ್ಟಪಡುತ್ತಾರೆ.

    ಬೇಕಾಗುವ ಪದಾರ್ಥಗಳು:
    * ಹಾಗಲಕಾಯಿ – 2
    * ಕಾರ್ನ್ ಫ್ಲೋರ್ – 1 ಟೀಸ್ಪೂನ್
    * ಕಡಲೆ ಹಿಟ್ಟು – 1
    * ಅರಿಶಿನ – ಅರ್ಧ ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಅಕ್ಕಿ ಹಿಟ್ಟು – 1 ಟೀಸ್ಪೂನ್
    * ಆಮ್ಚೂರ್ ಪುಡಿ – 1 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು

    ಮಾಡುವ ವಿಧಾನ:

    * ಮೊದಲಿಗೆ ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ.
    * ಕತ್ತರಿಸಿದ ಹಾಗಲಕಾಯಿಗೆ ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ.
    * ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸ್ವಲ್ಪ ಸ್ವಲ್ಪವೇ ಹಾಗಲಕಾಯಿ ಮಿಶ್ರಣವನ್ನು ಎಣ್ಣೆಗೆ ಹಾಕಿ ಕರಿಯಿರಿ.
    * ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ.

    – ಗರಿಗರಿಯಾದ ಹಾಗಲಕಾಯಿ ಫ್ರೈ ತಯಾರಾಗಿದ್ದು, ಇದನ್ನು ಟೀ ಟೈಮ್ ಅಥವಾ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಬಹುದು.

    Live Tv

  • ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

    ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

    ಹಾಗಲಕಾಯಿ ಕಹಿಯಾಗಿರುವುದರಿಂದ ಅದನ್ನು ಕೆಲವರು ಆದಷ್ಟು ದೂರವಿಡುತ್ತಾರೆ. ಆದರೆ ಈ ಕಹಿಯನ್ನು ಹೋಗಲಾಡಿಸಲು ಕೆಲವೊಂದು ಸಾಮಾಗ್ರಿಗಳನ್ನು ಸೇರಿಸಿಕೊಂಡು ಇದನ್ನು ರುಚಿ ರೆಸಿಪಿಯನ್ನ ತಯಾರಿಸಬಹುದಾಗಿದೆ. ವಾರಕ್ಕೆ ಒಮ್ಮಯಾದ್ರೂ ಹಾಗಲಕಾಯಿ ಪಲ್ಯವನ್ನು ತಿನ್ನುವುದು ಒಳ್ಳೆಯದಾಗಿದೆ. ಕಹಿಯಾದ ಹಾಗಲಕಾಯಿಯನ್ನು ಬಳಸಿಕೊಂಡು ಒಂದು ರುಚಿಯಾದ ರೆಸಿಪಿಯನ್ನು ತಯಾರಿಸಿ ಸೇವಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹಾಗಲಕಾಯಿ – 1 ಕಪ್
    * ಈರುಳ್ಳಿ – ಅರ್ಧ ಕಪ್
    * ಹಸಿಮೆಣಸು – 4 ರಿಂದ 5
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಹುಣಸೆ ಹಣ್ಣಿನ ಹುಳಿ ನೀರು – 1 ಚಮಚ
    * ಅರಿಶಿಣ – ಅರ್ಧ ಚಮಚ
    * ಕೆಂಪು ಮೆಣಸಿನ ಹುಡಿ -2 ಚಮಚ
    * ಗರಮಂ ಮಸಾಲಾ – 1 ಚಮಚ
    * ಅಡುಗೆ ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಹಾಗಲಕಾಯಿ ಸಿಪ್ಪೆಯನ್ನು ತೆಗೆದು ಕತ್ತರಿಸಿಕೊಂಡು ಉಪ್ಪು ಹಾಕಿ ಸ್ವಲ್ಪ ಸಮಯ ನೆನೆಸಿಟ್ಟಿರಬೇಕು.
    * ನಂತರ ಹಾಗಲಕಾಯಿಯನ್ನು ನೀರಿಗೆ ಹಾಕಿ ಕುದಿಸಿಕೊಂಡು ಇದಕ್ಕೆ ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ ಕುದುಸಿಕೊಂಡು ನೀರಿನಿಂದ ತೆಗೆದು ಬೇರೆ ಬಟ್ಟಲಿನಲ್ಲಿ ಎತ್ತಿಟ್ಟಿರಬೇಕು. ಇದನ್ನೂ ಓದಿ:  ರುಚಿಕರವಾದ ಆಲೂ ಕ್ಯಾಪ್ಸಿಕಂ ಕರಿ ಮಾಡಲು ಟ್ರೈ ಮಾಡಿ

     

    * ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಸೇರಿಸಿ. ಇದಕ್ಕೆ ಹಸಿಮೆಣಸು, ಅರಿಶಿಣ, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ:  ಬಿದಿರು ಕಳಲೆ ಸಾಂಬಾರ್ ಸೂಪರ್ ಟೇಸ್ಟ್

    * ತದನಂತರ ಕೆಂಪು ಮೆಣಸಿನ ಹುಡಿ, ಗರಮಂ ಮಸಾಲಾವನ್ನು ಹಾಕಿ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು ಇದನ್ನೂ ಓದಿ:  ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

     

    * ಇದಕ್ಕೆ ಹುಳಿ ನೀರು, ಉಪ್ಪು, ನೀರನ್ನು ಮಿತವಾಗಿ ಹಾಕಿ, ಸಣ್ಣ ಉರಿಯಲ್ಲಿ ಇದನ್ನು ಬೇಯಿಸಿಕೊಳ್ಳಿ.

    * ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ರುಚಿಯಾದ ಹಾಗಲಕಾಯಿ ರೆಸಿಪಿ ಸಿದ್ಧವಾಗುತ್ತದೆ.

  • ಕಹಿಯಾದ ಹಾಗಲಕಾಯಿಯಲ್ಲಿದೆ ಹಲವು ಆರೋಗ್ಯಕರ ಅಂಶ

    ಕಹಿಯಾದ ಹಾಗಲಕಾಯಿಯಲ್ಲಿದೆ ಹಲವು ಆರೋಗ್ಯಕರ ಅಂಶ

    ಹಾಗಲಕಾಯಿ ಎಂದರೆ ಹಲವರು ಮೂಗು ಮುರಿಯುತ್ತಾರೆ. ಈ ಕಹಿಯಾದ ಹಾಗಲಕಾಯಿಂದ ಹಲವಾರು ಆರೋಗ್ಯಕರ ಅಂಶಗಳು ಸಿಗಲಿದೆ. ಕೆಲವರು ಹಾಗಲಕಾಯಿ ಅಂದ್ರೆ ಸಾಕು ಕಹಿ ಇರುವ ಕಾರಣ ಇಷ್ಟಪಡುವುದಿಲ್ಲ. ದೇಹಕ್ಕೆ ಖಾರ, ಉಪ್ಪು, ಹುಳಿಯ ಅಂಶ ಹೇಗೆ ಹಿತಮಿತವಾಗಿ ಬೇಕೋ ಅದೇ ರೀತಿ ಕಹಿ ಅಂಶ ಕೂಡಾ ಮುಖ್ಯ.

    ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್‍ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆ ಮಾಗಲು ಸಹಾಯ ಮಾಡುತ್ತದೆ. ಹಾಗಲಕಾಯಿಯ ಪ್ರಮುಖ ಆರು ಆರೋಗ್ಯಕಾರಿ ಗುಣಗಳೇನು ಎಂಬ ವಿವರ ಇಲ್ಲಿದೆ ನೋಡಿ.

    * ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ ವೈರಸ್ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    * ಕೊಂಚ ಕಹಿ ಎನಿಸಿದರೂ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

    * ಹಾಗಲಕಾಯಿಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

    * ಇದರಲ್ಲಿರುವ ಫೈಟೋನ್ಯೂಟ್ರಿಯೆಂಟುಗಳು ಮತ್ತು ವಿವಿಧ ಪೋಷಕಾಂಶಗಳು ದೇಹದ ಕೊಬ್ಬನ್ನು ಬಹಳವಾಗಿ ಬಳಸುವುದರಿಂದ ತೂಕ ಕಡಿಮೆಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತರಾಗಿರುವವರಿಗೆ ಸೂಕ್ತವಾದ ಆಹಾರವಾಗಿದೆ.

     

    * ವಿಟಮಿನ್ ಎ ಅಂಶದ ಉತ್ತಮ ಮೂಲವಾಗಿದೆ. ನಿಮ್ಮ ಕಣ್ಣಿನ ಆರೋಗ್ಯ ಮತ್ತು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

    * ಮದ್ಯದ ಅಥವಾ ಇತರ ಔಷಧಿಗಳ ಅಡ್ಡಪರಿಣಾಮದಿಂದಾಗಿ ಬಹುಕಾಲ ಅಮಲು ಇಳಿಯದೇ ಇದ್ದರೆ ಒಂದು ಲೋಟ ಹಾಗಲಕಾಯಿಯ ಜ್ಯೂಸ್ ಕುಡಿಯುವುದರಿಂದ ಅಮಲು ಕೂಡಲೇ ಇಳಿದು ಸ್ವಸ್ಥತೆಯನ್ನು ಅನುಭವಿಸಬಹುದು.