Tag: bit coin

  • ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿಗರ ಪಾತ್ರ ಬಹಿರಂಗಪಡಿಸಿ – ಕಾಂಗ್ರೆಸ್‍ಗೆ ಗೋಪಾಲಯ್ಯ ಸವಾಲು

    ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿಗರ ಪಾತ್ರ ಬಹಿರಂಗಪಡಿಸಿ – ಕಾಂಗ್ರೆಸ್‍ಗೆ ಗೋಪಾಲಯ್ಯ ಸವಾಲು

    ಹಾಸನ: ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಯಾವ ಶಾಸಕರು ಮತ್ತು ಸಚಿವರು ಭಾಗಿಯಾಗಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಬೇಕೆಂದು ಹಾಸನ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸವಾಲು ಹಾಕಿದ್ದಾರೆ.

    ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿತ್ತು. ಇದು ಕಾಂಗ್ರೆಸ್‍ನವರ ಪಾಪದ ಕೂಸು. ಇಚ್ಛಾಶಕ್ತಿ ಇದ್ದಿದ್ದರೆ ಅವರೇ ಹಗರಣದ ಸೂತ್ರದಾರಿಗಳನ್ನು ಬಲಿ ಹಾಕಬಹುದಿತ್ತು ಎಂದರು. ಇದನ್ನೂ ಓದಿ: ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

    Gopalaiah

    ಈ ಹಗರಣವನ್ನು ಯಾವ ತನಿಖೆಗೆ ವಹಿಸಬೇಕೆನ್ನುವುದನ್ನು ರಾಜ್ಯ ಸರ್ಕಾರ ಶೀಘ್ರವೇ ನಿರ್ಧಾರ ಮಾಡಲಿದೆ. ಈಗಾಗಲೇ ಬಿಟ್ ಕಾಯಿನ್ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಧಾನಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಇಡಿ ಮತ್ತು ಆದಾಯ ತೆರಿಗೆ ಇಲಾಖೆಯ ಗಮನಕ್ಕೂ ತಂದಿದ್ದಾರೆ. ಶೀಘ್ರದಲ್ಲಿ ಯಾವ ತನಿಖಾ ಸಂಸ್ಥೆಗೆ ಇದರ ತನಿಖಾ ಜವಾಬ್ದಾರಿ ವಹಿಸಬೇಕೆನ್ನುವುದನ್ನು ನಿರ್ಧರಿಸಲಿದೆ ಎಂದು ಹೇಳಿದರು.

    bommai

    ಪರಿಷತ್ ಚುನಾವಣಾ ಮತ್ತು ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖರನ್ನು ಒಳಗೊಂಡ ನಾಲ್ಕು ತಂಡಗಳನ್ನು ಮಾಡಲಾಗಿದ್ದು, ರಾಜ್ಯಾದ್ಯಂತ ಪ್ರವಾಸ ನಡೆಸಲಾಗುವುದು ಎಂದು ನುಡಿದರು. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್‌ ಸಿಎಂ ಸಮರ್ಥನೆ

    nalin kumar kateel

    ಜಗದೀಶ್ ಶೆಟ್ಟರ್ ನೇತೃತ್ವದ ನಮ್ಮ ತಂಡ ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದರು.

    ಇದೇ ವೇಳೆ ಹಾಸನ ಜಿಲ್ಲೆಯಲ್ಲಿ ತೀವ್ರವಾದ ಮಳೆಯಿಂದ ಆಗಿರುವ ಕಾಫಿ ಮತ್ತು ಇತರೆ ಬೆಳೆಗಳ ನಷ್ಟದ ಕುರಿತ ಮುಖ್ಯಮಂತ್ರಿಗಳು, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಕಾಡಾನೆ ಹಾವಳಿತಡೆಗೂ ಆದ್ಯ ಗಮನ ಹರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಪರಿಷತ್ ಚುನಾವಣೆಯನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ನಾಲ್ಕೈದು ಅಭ್ಯರ್ಥಿಗಳ ಹೆಸರು ಹೋಗಿದೆ. ರಾಜ್ಯ ಕೋರ್ ಕಮಿಟಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದೆ. ಹಾಸನ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದ್ದು, ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.

  • ಪ್ರಿಯಾಂಕ್ ಖರ್ಗೆ ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ: ರಾಜೂಗೌಡ

    ಪ್ರಿಯಾಂಕ್ ಖರ್ಗೆ ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ: ರಾಜೂಗೌಡ

    ಯಾದಗಿರಿ: ಪ್ರಿಯಾಂಕ್ ಖರ್ಗೆ ಅವರು ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ ಎಂದು ಹುಣಸಗಿ ತಾಲೂಕಿನ ಕೊಡೇಕಲ್ ನಲ್ಲಿ ಶಾಸಕ ರಾಜೂಗೌಡ ವಾಗ್ದಾಳಿ ಮಾಡಿದರು.

    priyank kharge

    ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ. ಅವರು ಯಾವ ಯಾವ ಖಾತೆ ನಿರ್ವಹಿಸುತ್ತಿದ್ದಾರೆ ಎನ್ನುವುದು ಮರೆತಿದ್ದಾರೆ. ಒಂದು ಬೆರಳು ನೀವು ನೇರ ಮಾಡಿದರೆ, ನಾಲ್ಕು ಬೆರಳು ನಿಮಗೆ ಉಲ್ಟಾ ತೋರಿಸುತ್ತವೆ. ದಯವಿಟ್ಟು ಬೀಟ್ ಕಾಯಿನ್ ಬಗ್ಗೆ ಇಲ್ಲಸಲ್ಲದ ಹೇಳಿಕೆ ಕೊಡಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಾವು ಜೆಡಿಎಸ್‍ನಿಂದ ಪರಿಷತ್‍ಗೆ ಸ್ಪರ್ಧೆ ಮಾಡಲ್ಲ: ಜಿಟಿ ದೇವೇಗೌಡ

    ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿರುವ ಕುರಿತು ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೇ ಅವರೇ ನಿಮ್ಮ ತಂದೆಯವರು ಹೋಮ್ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಹೋಗಿ ಅವರನ್ನು ಕೇಳಿ ಪೊಲೀಸ್ ಇಲಾಖೆ ಏನು ಎಂದು ನಿಮ್ಮಪ್ಪನಿಗೆ ಹೋಗಿ ಕೇಳಿ, ಆಮೇಲೆ ಹೇಳಿಕೆ ಕೊಡಿ. ಅದು ಬಿಟ್ಟು ಬಿಟ್ ಕಾಯಿನ್ ಬಗ್ಗೆ ಸುಮ್ಮನೆ ಹೇಳಿಕೆ ಕೊಡಬೇಡಿ ಎಂದರು.

    ವಿರೋಧ ಪಕ್ಷದಲ್ಲಿದ್ದೀವಿ ಅಂತ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ನೀವು ಮಾಡುವ ಆರೋಪಕ್ಕೆ ಘನತೆ ಇರಬೇಕು. ನಮ್ಮ ಮೇಲೆ ಆರೋಪ ಮಾಡಲು ಯಾವುದೇ ವಿಷಯ ಇಲ್ಲ. ಹೀಗಾಗಿ ಕಾಂಗ್ರೇಸ್ ಅವರು ಬಿಟ್ ಕಾಯಿನ್, ಬಿಟ್ ಕಾಯಿನ್ ಅಂತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಕಾಂಗ್ರೇಸ್ ಅವರಿಗೆ ಮಾಹಿತಿ ಇಲ್ಲ. ಬಿಟ್ ಕಾಯಿನ್ ಬಗ್ಗೆ ಬೇರೆಯವರನ್ನು ಕೇಳಿ ಹೇಳ್ತಾರೆ. ಜನರಿಗೆ ಬಿಟ್ ಕಾಯಿನ್ ಬಗ್ಗೆ ಗೊಂದಲ ಇದೆ. ಕಾಂಗ್ರೆಸ್ ಅವರು ಜನರ ತಲೆಯಲ್ಲಿ ಹುಳ ಬೀಡುವ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗರಂ ಅದರು. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ

  • ಸಿದ್ದರಾಮಯ್ಯ ಅವ್ರೆ ಯಾರೋ ಬರೆದ್ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು: ಪ್ರತಾಪ್ ಸಿಂಹ

    ಸಿದ್ದರಾಮಯ್ಯ ಅವ್ರೆ ಯಾರೋ ಬರೆದ್ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು: ಪ್ರತಾಪ್ ಸಿಂಹ

    ಮೈಸೂರು: ಸಿದ್ದರಾಮಯ್ಯ ಅವರೇ ಯಾರೋ ಬರೆದು ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು ವಿವರಿಸುವುದು ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

    ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ, ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡುವವರಿಗೂ ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಮಾಹಿತಿ ಇಲ್ಲ. ಕಾಂಗ್ರೆಸ್‍ನವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಸುರ್ಜೆವಲಾಗೆ ಸಿದ್ದರಾಮಯ್ಯ – ಡಿಕೆಶಿ ನಡುವಿನ ಗಲಾಟೆ ಬಿಡಿಸಲು ಆಗುತ್ತಿಲ್ಲ. ಹೀಗಾಗಿ, ಸುರ್ಜೆವಲಾ ದೆಹಲಿಯಲ್ಲೇ ಕೂತು ಸುದ್ದಿಗೋಷ್ಠಿ ನಡೆಸಿ ಊಹಾಪೋಹ ಹಬ್ಬಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ದಯವಿಟ್ಟು ಹೇಳಿ ಈ ಬಿಟ್ ಕಾಯಿನ್ ಅಂದರೇ ಏನೂ ಅಂತ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ರಾಜಕಾರಣದಲ್ಲಿ ಕೆಲವರು ಮಾಧ್ಯಮಗಳ ಕೂಡ ಸುದ್ದಿಗಳನ್ನು ಪ್ಲಾಂಟ್ ಮಾಡಿಸುತ್ತಿದ್ದಾರೆ. ಸಿಎಂ ಬದಲಾಗುತ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆ ಎಂದು ಕೆಲವರು ಸುದ್ದಿ ಪ್ಲಾಂಟ್ ಮಾಡಿಸುತ್ತಿದ್ದಾರೆ. ಕಾಲು, ಬಾಲ ಇಲ್ಲದ ಸುದ್ದಿಗಳನ್ನು ಕಾಂಗ್ರೆಸ್ ಹರಡಿಸುತ್ತಿದೆ. ಶ್ರೀಕಿಯನ್ನು ಬಂಧಿಸಿದವರ ಮೇಲೆ ಯಾಕೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಶ್ರೀಕಿಗೆ ವ್ಯವಹಾರ ಇರೋದು ಕಾಂಗ್ರೆಸ್ ಮುಖಂಡರ ಮಕ್ಕಳ ಜೊತೆ ಮರಿ ಖರ್ಗೆ ಹಾಗಾಗ ಮಾಧ್ಯಮಗಳ ಮುಂದೆ ಬಂದು ಕಾಕಾ ಎನ್ನುತ್ತಿದ್ದಾರೆ. ದಿನವೂ ರಂಗು ರಂಗಾದ ಕಥೆಗಳನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ. ಯಾವ ಜನಧನ್ ಅಕೌಂಟ್ ಹ್ಯಾಕ್ ಆಗಿದೆ? ಯಾರ ಅಕೌಂಟ್‍ನಿಂದ ಹಣ ಕದಿಯಲಾಗಿದೆ. ಒಂದು ಫ್ರೂಪ್ ಕೊಡಿ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಕೆಲವರು ಭ್ರಷ್ಟಾಚಾರ ಮಾಡಿ ಅಕೌಂಟ್‍ಗೆ ಹಾಕಿಕೊಂಡಿರಬೇಕು. ಶ್ರೀಕಿ ಇಂತಹ ಅಕೌಂಟ್‍ಗಳನ್ನು ಹ್ಯಾಕ್ ಮಾಡಿ ಹಣ ಕದ್ದಿರಬೇಕು. ಹೀಗಾಗಿ, ಸಿದ್ದರಾಮಯ್ಯ ಬಾಯಿ ಬಡಿದುಕೊಳ್ಳುತ್ತಿರಬೇಕು. ಸಿದ್ದರಾಮಯ್ಯನವರದು ಉಗಿದು ಓಡಿ ಹೋಗುವ ಪ್ರವೃತಿ ಎಂದಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    ಸಿದ್ದರಾಮಯ್ಯ ಅವರೇ ಯಾರೋ ಬರೆದು ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು ವಿವರಿಸೋದು. ಬರೀ ಉಗಿದು ಓಡಿ ಹೋಗುವ ರಾಜಕಾರಣ ಮಾಡಿ, ಬೊಮ್ಮಾಯಿ ವಿರುದ್ಧ ಬಾಹ್ಯ, ಆಂತರಿಕ ಶತೃಗಳು ಕಾಲ್ಪನಿಕ ಭ್ರಷ್ಟಾಚಾರ ಸೃಷ್ಟಿ ಮಾಡಿ ಆರೋಪ ಮಾಡಲಾಗುತ್ತಿದೆ. ಬೊಮ್ಮಾಯಿ ನೆಮ್ಮದಿಯಾಗಿ ಆಡಳಿತ ನಡೆಸಬಾರದು ಎಂಬುದು ಕೆಲವರ ಷಡ್ಯಂತ್ರ. ಸಿದ್ದರಾಮಯ್ಯ ಅವರೇ ನೀವು ಭ್ರಷ್ಟಾಚಾರ ದಲ್ಲಿ ಮಾಡಿದ ಹಣ ಕಳೆದುಕೊಂಡು ಈಗ ಸಂಕಟ ಪಡುತ್ತಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿ ಅವರಿವರ ಹೆಸರಿನಲ್ಲಿ ಇಟ್ಟ ಹಣವನ್ನು ಶ್ರೀಕಿ ಕದ್ದಿರಬೇಕು. ಹೀಗಾಗಿ, ಸಿದ್ದರಾಮಯ್ಯ ಸಂಕಟದಲ್ಲಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಭವಿಷ್ಯದ ಚಿಂತೆ ನಿಮಗೆ ಬೇಡ. ನಿಮ್ಮ, ನಿಮ್ಮ ಭವಿಷ್ಯ ನೀವು ಮೊದಲು ನೋಡಿಕೊಳ್ಳಿ. ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು ನಾವು ಯಾಕೆ ಬಂಧಿಸುತ್ತಿದ್ವಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಟ್‌ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೆ ಖಂಡಿತವಾಗಿಯೂ ಬಲಿ ಹಾಕ್ತೇವೆ: ಬಸವರಾಜ ಬೊಮ್ಮಾಯಿ

    Siddaramaiah, Pratap simha, Bit Coin, pressmeet, Mysuru

  • ಬಿಟ್‌ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೆ ಖಂಡಿತವಾಗಿಯೂ ಬಲಿ ಹಾಕ್ತೇವೆ: ಬಸವರಾಜ ಬೊಮ್ಮಾಯಿ

    ಬಿಟ್‌ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೆ ಖಂಡಿತವಾಗಿಯೂ ಬಲಿ ಹಾಕ್ತೇವೆ: ಬಸವರಾಜ ಬೊಮ್ಮಾಯಿ

    ಬೆಂಗಳೂರು: ಬಿಟ್ ಕಾಯಿನ್ ಹಗರಣದ ಹಿಂದೆ ಯಾರ್ಯಾರು ಇದ್ದಾರೆ ಯಾರನ್ನು ಕೂಡ ಬಿಡುವುದಿಲ್ಲ. ಖಂಡಿತವಾಗಿಯೂ ಬಲಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ 2016ರಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. 2016ರಿಂದ ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಇದ್ದಿದ್ರೆ, ನಿಮ್ಮ ಸರ್ಕಾರ ಇದ್ದಾಗ ತಾವು ಏಕೆ ತನಿಖೆ ಮಾಡಲಿಲ್ಲ. ರಂದೀಪ್ ಸುರ್ಜೇವಾಲ ಅವರು ಆಗ ಅಧಿಕಾರದಲ್ಲಿದ್ದ ಸಚಿವರು ಹಾಗೂ ಮುಖ್ಯಮಂತ್ರಿಗೆ ಈ ಪ್ರಶ್ನಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    2016ರಲ್ಲಿ ಶ್ರೀಕಿಯನ್ನು ಬಂಧಿಸಿ ನಂತರ ರಿಲೀಸ್ ಮಾಡಿದ್ರಿ. ಅಂದೇ ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು. ಆತ ಬೇಲ್ ತೆಗೆದುಕೊಂಡ ನಂತರ ಕೂಡ ವಿಚಾರಣೆ ಮಾಡಬಹುದಾಗಿತ್ತು. ಆದರೆ ನೀವು ವಿಚಾರಣೆ ಮಾಡಲಿಲ್ಲ. 2020ರಲ್ಲಿ ಆತನನ್ನು ನಾವು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದೇವು. ಈ ವೇಳೆ ಹ್ಯಾಕಿಂಗ್ ಕುರಿತ ವಿಚಾರವೆಲ್ಲಾ ಬಹಿರಂಗವಾಯಿತು. 2018ರಲ್ಲಿ ನೀವು ಅಧಿಕಾರದಲ್ಲಿದ್ದಾಗ ವಿಚಾರಣೆ ಮಾಡಲಿಲ್ಲ. ಈಗ ನಮಗೆ ಪ್ರಶ್ನೆ ಮಾಡುತ್ತೀರಾ? ಶ್ರೀಕಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಬಿಟ್ಟಿದ್ದು ಕಾಂಗ್ರೆಸ್ ಎಂದು ಸುರ್ಜೇವಾಲಾ ಪ್ರಶ್ನೆಗಳಿಗೆ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ಒಂದು ಟ್ವಿಟ್ಟರ್ ಹ್ಯಾಂಡಲ್ ಮೇಲೆ ನೀವು ವಿಚಾರಗಳನ್ನು ಪ್ರಸ್ತಾಪ ಮಾಡುತ್ತೀರಾ ಅಂದರೆ ನಿಮ್ಮ ಚಿಂತನೆಯ ದಿವಾಳಿ ಎಷ್ಟಾಗಿದೆ. ಟ್ವಿಟ್ಟರ್‍ನಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಟ್ವಿಟ್ಟರ್ ವಿಚಾರವನ್ನು ನೀವು ಪ್ರಸ್ತಾಪಿಸುವುದೇ ಆದ್ರೆ, ನೀವು ಸಾಕ್ಷಿ ಪುರಾವೆಗಳನ್ನು ಹಿಡಿದುಕೊಂಡು ಮಾತನಾಡಬೇಕಾಗಿತ್ತು. ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ಲಕ್ಷಗಟ್ಟಲೇ, ಕೋಟಿಗಟ್ಟಲೇ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುವುದು. ಒಬ್ಬ ರಾಷ್ಟ್ರೀಯ ಪಕ್ಷದ ನಾಯಕನಿಗೆ ಕ್ಷೋಭೆಯಲ್ಲ ಎಂದು ಹೇಳಿದ್ದಾರೆ.

    ಬಿಟ್ ಕಾಯಿನ್ ಹಗರಣವನ್ನು ಬಯಲು ಮಾಡಿದ್ದೆ ನಾವು. ಈ ಕುರಿತಂತೆ ಇಡಿ ಮತ್ತು ಸಿಬಿಐಗೆ ತನಿಖೆಗೆ ಕೊಟ್ಟಿದ್ದೆ ನಾವು. ಇಂದು ಈ ಕುರಿತಂತೆ ತನಿಖೆಯಾಗುತ್ತಿದೆ. ಅವರು ಹಲವಾರು ಮಾಹಿತಿಗಳನ್ನು ಕೇಳಿದ್ದಾರೆ ಅದನ್ನು ಸಹ ಕೊಟ್ಟಿದ್ದೇವೆ. ಇದರ ಹಿಂದೆ ಯಾರ್ಯಾರು ಇದ್ದಾರೆ ಯಾರನ್ನು ಕೂಡ ಬಿಡುವುದಿಲ್ಲ. ಖಂಡಿತವಾಗಿಯೂ ಬಲಿ ಹಾಕುತ್ತೇವೆ. ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲದೇ ಇರುವವರ ಹೆಸರನ್ನು ಬಹಿರಂಗಪಡಿಸುತ್ತಿದ್ದೀರಾ. ಬಿಟ್ ಕಾಯಿನ್ ಹಗರಣದ ಹಿಂದೆ ಇಬ್ಬರು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಅಂತೀರಲ್ಲ. ಆ ಇಬ್ಬರು ಪ್ರಭಾವಿಗಳ ಹೆಸರೇಳಿ, ದಾಖಲೆ ರಿಲೀಸ್ ಮಾಡಿ ಎಂದು ಕಾಂಗ್ರೆಸ್‍ಗೆ ಸವಾಲು ಹಾಕಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಮತ್ತು ವ್ಯಕ್ತಿಗಳಿಗೆ ಯಾವುದೇ ಮೋಸ ಆಗಿದ್ದರೆ, ಯಾರು ಮೋಸ ಮಾಡಿದ್ದರೂ ಕೂಡ ಮುಖ, ಮೂಲಾಜಿಲ್ಲದೇ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

  • ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ. ಅತ್ಯಂತ ಜವಾಬ್ದಾರಿಯಿಂದ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಪಾರದರ್ಶಕವಾಗಿ ತನಿಖೆಯನ್ನು ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ಆರೋಗ್ಯ ಸಚಿವ ಸುಧಾಕರ್ ತೀರುಗೇಟು ನೀಡಿದ್ದಾರೆ.

    ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಸಂಚಲನ ಸೃಷ್ಟಿಸಿದೆ. ಶನಿವಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ. ಬಹುಕೋಟಿ ಹಗರಣದಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ಈ ಕುರಿತಂತೆ ಸುಧಾಕರ್ ಅವರು, ಅನೇಕ ವರ್ಷಗಳಿಂದ ಡ್ರಗ್ ಮೇನಸ್ ಏನಾಗುತ್ತಿದೆ ಎಂದು ಕಂಡು ಹಿಡಿಯಬೇಕೆಂದು ನಮ್ಮ ಆಡಳಿತದಲ್ಲಿಯೇ ಇದನ್ನು ಮಟ್ಟ ಹಾಕಬೇಕೆಂದು ಅಂದಿನ ಸರ್ಕಾರದಲ್ಲಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತೀರ್ಮಾನಿಸಿದರು. ಇಂದು ತನಿಖೆಗೆ ಆದೇಶ ಸೂಚಿಸಿ, ಅದರಲ್ಲಿ ಶ್ರೀಕಿ ಸಿಕ್ಕಿಹಾಕಿಕೊಂಡು ಇನ್ನಷ್ಟು ತೀವ್ರವಾಗಿ ತನಿಖೆ ಮಾಡಿಸುತ್ತಿದ್ದಾರೆ. ಇವತ್ತು ಅವರು ನಟರಾ? ಇದರಲ್ಲಿ ಯಾರು ಕೂಡ ನಟರಿಲ್ಲ. ಅತ್ಯಂತ ಜವಾಬ್ದಾರಿಯಿಂದ ಅಂದಿನ ಗೃಹಸಚಿವರಾಗಿದ್ದವರು ಇಂದು ಪಾರದರ್ಶಕವಾಗಿ ತನಿಖೆಯನ್ನು ಮಾಡಿಸಿದ್ದಾರೆ ಎಂದಿದ್ದಾರೆ.

    ನಮ್ಮ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಅಧಿಕಾರಿಗಳು ಚಾರ್ಜ್‍ಶೀಟ್‍ನಲ್ಲಿ ಏನು ತಿಳಿಸಿದ್ದರೋ ಅದನ್ನೇ ನಿಮ್ಮ ಮುಂದೆ ಓದಿದ್ದಾರೆ. ಬೇರೆ ಏನನ್ನೋ ಕಂಡು ಹಿಡಿದು ಯಾವುದೋ ಸ್ಪಷ್ಟವಾಗಿರುವ ಸಾಕ್ಷಿ ಇಟ್ಟುಕೊಂಡು ಅದನ್ನು ತೋರಿಸುವಂತಹ ಕೆಲಸವನ್ನು ಅವರು ಮಾಡಿಲ್ಲ. ಪೊಲೀಸಿನವರು, ಪೊಲೀಸ್ ಇಲಾಖೆ ಅವರು ಅತ್ಯಂತ ಪಾರಾದರ್ಶಕತೆಯಿಂದ ಇಂದು ನಡೆದುಕೊಂಡಿದ್ದಾರೆ. ಯಾರನ್ನು ರಕ್ಷಣೆಯಾಗಲಿ, ಮಾಹಿತಿಯನ್ನು ಬಚ್ಚಿಡುವ ಪ್ರಯತ್ನವನ್ನು ಎಲ್ಲೂ ಕೂಡ ಮಾಡಿಲ್ಲ. ಈ ಎಲ್ಲಾ ಅಪಾಧನೆ, ಸ್ಪೀಕರ್ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿರುವ ಮಾತುಗಳಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

    ಸುಳ್ಳನ್ನು ನಿಜ ಮಾಡಲು ಹೊರಟಿದ್ದೀರಾ. ಅದು ಸಾಧ್ಯವಾಗುವುದಿಲ್ಲ. ಇದರಿಂದ ನೀವೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಾ. ನಮ್ಮ ಸರ್ಕಾರ ಸ್ಪಷ್ಟವಾಗಿದ್ದು, ನಾವು ಯಾರನ್ನು ರಕ್ಷಿಸುವುದಿಲ್ಲ. ನಾವೇ ಇದನ್ನು ಬೆಳಕಿಗೆ ತಂದಿದ್ದೇವೆ. ಹಾಗಾಗಿ ಈ ಕುರಿತಂತೆ ಯಾವ ಹಂತದಲ್ಲಿ ತನಿಖೆ ಮಾಡಿಸಬೇಕು ಎಂಬುವುದನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಸತ್ಯವನ್ನು ಜನರ ಮುಂದಿಡುವ ಕೆಲಸವನ್ನು ಮಾಡಿತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

    ಇದರ ನಡುವೆ ಇಂದು ಕೂಡ ರಣದೀಪ್ ಸಿಂಗ್ ಸುರ್ಜೆವಾಲಾ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡ ಭಾಗವಹಿಸಲಿದ್ದಾರೆ. ಈ ವೇಳೆ ಮಹತ್ವದ ದಾಖಲೆ ಏನಾದರು ಬಿಡುಗಡೆ ಮಾಡುತ್ತಾರಾ ಎಂದು ಕುತೂಹಲ ಮೂಡಿಸಿದೆ.

  • ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ ಅದನ್ನೇ ಇಟ್ಟುಕೊಂಡು ಪದೇ ಪದೇ ಟಾರ್ಗೆಟ್ ಮಾಡಬೇಡಿ: ನಲಪಾಡ್

    ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ ಅದನ್ನೇ ಇಟ್ಟುಕೊಂಡು ಪದೇ ಪದೇ ಟಾರ್ಗೆಟ್ ಮಾಡಬೇಡಿ: ನಲಪಾಡ್

    ಬೆಂಗಳೂರು: ನನ್ನ ಪಾಡಿಗೆ ನನ್ನನ್ನು ಬದುಕಲು ಬಿಡಿ. ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ. ಅದನ್ನೇ ಇಟ್ಟುಕೊಂಡು ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡಬೇಡಿ. ಒಂದೇ ಒಂದು ಕೇಸ್‍ ಅದನ್ನೆ ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಒಬ್ಬ ಸಾಮಾನ್ಯ ಮನುಷ್ಯ ನನಗೂ ಭಾವನೆಗಳಿವೆ. ನನಗೆ ಜೀವನ ಮಾಡೋಕೆ ಬಿಡಿ ಎಂದು ಬಿಟ್ ಕಾಯಿನ್ ಬಗ್ಗೆ ಕೇಳಿದ ಪ್ರಶ್ನೆಗೆ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಕೈ ಮುಗಿದು ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಲಪಾಡ್, 2018 ರವರೆಗೆ ಶ್ರೀಕಿ ನಮ್ಮ ಸಂಪರ್ಕದಲ್ಲಿದ್ದ. ನನ್ನ ತಮ್ಮ ಉಮರ್ ಸ್ನೇಹಿತ ಮನಿಷ್ ಡಿ.ಕೆ. ಅಂತ ಅವನ ಸ್ನೇಹಿತ ಈ ಶ್ರೀಕಿ. ಫರ್ಜಿ ಕೆಫೆ ಗಲಾಟೆ ನಂತರ ಅವನಿಗೂ ನಮಗೂ ಸಂಪರ್ಕ ಇಲ್ಲ. ಆ ವರದಿಯಲ್ಲೂ ಅವನು ಅದನ್ನೆ ಹೇಳಿದ್ದಾನೆ. ಫರ್ಜಿ ಕೆಫೆಯ ಗಲಾಟೆಯಲ್ಲಿ ಬಾಟಲಿ ಎಸೆದಿದ್ದ ಎ3 ಆರೋಪಿ ಆತ. ಈಗ ನೂರಕ್ಕೆ ನೂರು ನಮ್ಮ ಸಂಪರ್ಕದಲ್ಲಿ ಇಲ್ಲ. ಈ ಹಿಂದೆ ಇದ್ದ ಒಂದು ಕೇಸ್‍ನಿಂದ ಹೊರಬಂದು ಈಗಷ್ಟೇ ಉತ್ತಮ ಕೆಲಸಗಳತ್ತ ಮುನ್ನುಗ್ಗುತ್ತಿದ್ದೇನೆ. ಇದೀಗ ಇನ್ನೊಂದು ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಿಹಾಕಲು ನೋಡುತ್ತಿದ್ದಾರೆ. ನನಗೂ ತಂದೆ, ತಾಯಿ ಅಜ್ಜ, ಅಜ್ಜಿ ಇದ್ದಾರೆ ಅವರಿಗೆ ಏನು ಅನ್ನಿಸಬಹುದು ಎಂದು ಗದ್ಗದಿತನಾಗಿ ಕೈ ಮುಗಿದ ನಲಪಾಡ್ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

    ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಬಿಜೆಪಿಯವರಿಗೂ, ನಮ್ಮ ಪಕ್ಷದವರಿಗೂ ಕೈ ಮುಗಿದು ಕೇಳುತ್ತೇನೆ. ನನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನನಗೆ ಯಾವಾಗೆಲ್ಲಾ ಒಳ್ಳೆಯದಾಗುತ್ತೆ ಅನ್ನಿಸುತ್ತೋ ಆಗೆಲ್ಲಾ ಹೀಗೆ ಆಗುತ್ತದೆ. ಯುವ ಕಾಂಗ್ರೆಸ್ ಅಧ್ಯಕ್ಷನಾಗಬೇಕಿದ್ದಾಗ ಹೀಗೆ ಆಯಿತು. ಈಗ ಮತ್ತೆ ಅಧ್ಯಕ್ಷ ಸ್ಥಾನ ಸಿಗುವಾಗ ಹೀಗಾಗುತ್ತಿದೆ. ಬಿಟ್ ಕಾಯಿನ್ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಇದನ್ನೂ ಓದಿ: ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ, ಕಾಲೇಜಿನಲ್ಲಿ ಪರಿಚಯ ಅಷ್ಟೇ: ಉಮರ್ ನಲಪಾಡ್

    2018 ಗಲಾಟೆ ಆದ ನಂತರ ಯಾರು ಸಹ ನನ್ನನ್ನು ಸರಿಯಾಗಿ ನೋಡಲ್ಲ. ರಿಕ್ವೆಸ್ಟ್ ಮಾಡ್ಕೋತೀನಿ ನಾನು ಜನರ ಮಧ್ಯೆ ಕೆಲಸ ಮಾಡಬೇಕು ಯುವಕರನ್ನು ಕಟ್ಟಬೇಕು. ನನ್ನನ್ನು ಬದುಕಲು ಬಿಡಿ ನನಗೂ ಶ್ರೀಕಿಗೂ ಯಾವುದೇ ಸಂಬಂಧವಿಲ್ಲ. ಬಿಟ್‍ಕಾಯಿನ್ ಪ್ರಕರಣದಲ್ಲಿ ನನ್ನನ್ನು ಸುಮ್ಮನೆ ಎಳೆದು ತರಬೇಡಿ. ಈ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಿ ಹಾಕಲು ಕುತಂತ್ರ ನಡೆಯುತ್ತಿದೆ. ದಯವಿಟ್ಟು ನಾನು ಯಾವುದೇ ಬಿಟ್‍ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದರು. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

  • ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ನವದೆಹಲಿ: ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ. ಬಹುಕೋಟಿ ಹಗರಣದಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದಾರೆ.

    ದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಬಳಿಕದ ಅತಿದೊಡ್ಡ ಹಗರಣ ಇದಾಗಿದೆ. ಒಂದು ಕಾಯಿನ್ ಬೆಲೆ 51 ಲಕ್ಷ ರೂ. ಇದೆ. ಕರ್ನಾಟಕ ಸರ್ಕಾರ ಕೂಡ ಈ ಹಗರಣದಲ್ಲಿ ಭಾಗಿಯಾಗಿದೆ. ಇಷ್ಟು ದೊಡ್ಡ ಹಗರಣ ನಡೆದರೂ ಇಂಟರ್ ಪೋಲ್, ಎನ್‍ಐಎ, ಇಡಿ ಎಲ್ಲವೂ ಸುಮ್ಮನೆ ಇವೆ. ಇದೆಲ್ಲವನ್ನೂ ಗಮನಿಸಿದರೆ ಸರ್ಕಾರ ಹಗರಣವನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದ್ದಾರೆ.

    ಈ ಹಗರಣದಲ್ಲಿ ತನಿಖಾ ಸಂಸ್ಥೆಗಳ ದಾರಿ ತಪ್ಪಿಸಲಾಗುತ್ತಿದೆ. ನವೆಂಬರ್ 14ರಂದು ಹ್ಯಾಕರ್ ಶ್ರೀಕಿ ಬಂಧನವಾಗಿತ್ತು. ಆಗ ಶ್ರೀಕಿ ತಾನು ಕದ್ದಿದ್ದ ಒಂದು ಬಿಟ್ ಕಾಯಿನ್ ವರ್ಗಾವಣೆ ಮಾಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ಇದೆಲ್ಲ ನಡೆಯಲು ಹೇಗೆ ಸಾಧ್ಯ? 5,240 ಕೋಟಿ ಮೊತ್ತದ ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಅಧಿಕಾರದಲ್ಲಿ ಇರುವವರ ಪಾತ್ರದ ಬಗ್ಗೆ ಅನುಮಾನ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

    ಇಷ್ಟು ದೊಡ್ಡ ಹಗರಣ ನಡೆದರೂ ಕರ್ನಾಟಕ ಸರ್ಕಾರ ಯಾಕೆ ಸುಮ್ಮನಿದೆ. ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರು ಏಕೆ ಮೌನವಹಿಸಿದ್ದಾರೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಸಿಎಂಗೆ ಪ್ರಧಾನಿ ಯಾಕೆ ಹೇಳಿದ್ದಾರೆ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಆಡಳಿತ ಹಾಗೂ ಪ್ರತಿಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.

  • ಬಿಟ್ ಕಾಯಿನ್‍ಗೆ ಹೊಸ ಟ್ವಿಸ್ಟ್ – ಸೀಜೇ ಮಾಡಿಲ್ಲವೆಂದು ಕೋರ್ಟಿಗೆ ಸಿಸಿಬಿ ರಿಪೋರ್ಟ್

    ಬಿಟ್ ಕಾಯಿನ್‍ಗೆ ಹೊಸ ಟ್ವಿಸ್ಟ್ – ಸೀಜೇ ಮಾಡಿಲ್ಲವೆಂದು ಕೋರ್ಟಿಗೆ ಸಿಸಿಬಿ ರಿಪೋರ್ಟ್

    ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಬಿಟ್ ಕಾಯಿನ್ ಬೆನ್ನತ್ತಿದ ಪಬ್ಲಿಕ್ ಟಿವಿಗೆ ಸಿಕ್ಕಿದೆ ಪಕ್ಕಾ ದಾಖಲೆ ಸಿಕ್ಕಿದೆ.

    ಹೌದು. ಅಂದು 31 ಬಿಟ್ ಕಾಯಿನ್ ವಶಕ್ಕೆ ಪಡಿದಿದ್ದೇವೆ ಎಂದು ಸಿಸಿಬಿ ಹೇಳಿತ್ತು, ಆದರೆ ಇದೀಗ ಬಿಟ್ ಕಾಯಿನ್ ವಶಕ್ಕೆ ಪಡೆದಿಲ್ಲ ಎಂದು ಕೋರ್ಟಿಗೆ ವರದಿ ನೀಡಿದೆ. ಹಾಗಾದರೆ ವಿಚಾರಣೆ ವೇಳೆ ಶ್ರೀಕಿ ಸಿಸಿಬಿ ತೋರಿಸಿದ ವ್ಯಾಲೆಟ್ ಯಾವುದು ಎಂಬುದರ ಬಗ್ಗೆ ಎಕ್ಸ್ ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ.

    ಜ.8ರಂದು ಸುದ್ದಿಗೋಷ್ಠಿ ನಡೆಸಿದ್ದ ಸಿಸಿಬಿ, ಹ್ಯಾಕರ್ ಶ್ರೀಕೃಷ್ಣ ಬಂಧಿಸಿದ್ದ ವೇಳೆ 31 ಬಿಟ್ ಕಾಯಿನ್ ಸೀಜ್ ಮಾಡಲಾಗಿದೆ. ಇದು ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಎಂದು ಹೇಳಿತ್ತು. ಆದರೆ ಸೈಬರ್ ತಜ್ಞರು ಕೊಟ್ಟ ವರದಿಯಲ್ಲಿ ಈ ಅಂಶ ಬಯಲಾಗಿದೆ. ಸಿಸಿಬಿ ಶ್ರೀಕಿಯಿಂದ ಒಂದೇ ಒಂದು ಬಿಟ್ ಕಾಯಿನ್ ವಶಕ್ಕೆ ಪಡೆದಿಲ್ಲ ಎಂಬುದು ಸಾಬೀತಾಗಿದೆ. ಇದನ್ನೂ ಓದಿ: ಪೊಲೀಸರೇ ಡ್ರಗ್ಸ್ ನೀಡಿದ್ರು – ಶ್ರೀಕಿ ಆರೋಪ ಸುಳ್ಳು

    ಗ್ರೂಪ್ ಸೈಬರ್ ಐಡಿ ಟೆಕ್ನಾಲಜಿ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಕುಮಾರ್ ಹಾಗೂ ಯೂನೋ ಕಾಯಿನ್ ಟೆಕ್ನಾಲಜಿಸ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಸಾತ್ವಿಕ್ ನೆರವನ್ನು ಸಿಸಿಬಿ ಪಡೆದಿತ್ತು. ಅದರಂತೆ ಅವರ ಸಹಾಯದ ಮೂಲಕ ಜನವರಿ 8 ರಂದು 31 ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿದೆ ಎಂದಿತ್ತು. ಬಳಿಕ ಪತ್ರಿಕಾ ಪ್ರಕಟಣೆಯನ್ನೂ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಜನವರಿ 22ರಂದು ವಾಲೆಟ್ ಅನ್ನು ತೆರೆದಾಗ 186 ಬಿಟ್ ಕಾಯಿನ್ ಇರೋದು ಗೊತ್ತಾಗಿದೆ. ಆಗ ಹೆಚ್ಚಿನ ತನಿಖೆ ನಡೆಸಿದ ಸಿಸಿಬಿಗೆ ಶಾಕ್ ಕಾದಿತ್ತು.

    ಬಿಟ್ ಕಾಯಿನ್ ಎಕ್ಸ್ ಚೇಂಜ್ ಎಜೆನ್ಸಿಯ ವ್ಯಾಲೆಟ್‍ನಲ್ಲಿದ್ದ ಬಿಟ್ ಕಾಯಿನ್‍ಗಳನ್ನು ಶ್ರೀಕಿ ತೋರಿಸಿದ್ದಾನೆ ಎನ್ನುವುದು ಗೊತ್ತಾಯಿತು. ಬಳಿಕ ಸಿಸಿಬಿ ಪೊಲೀಸರು ಯಾವುದೇ ಬಿಟ್ ಕಾಯಿನ್ ಅನ್ನು ವಶಕ್ಕೆ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಆಗಿ ಸಿಕ್ಕಿದೆ.

  • ಬಿಟ್‍ಕಾಯಿನ್ ಹಗರಣಕ್ಕೆ ಸ್ಫೋಟಕ ತಿರುವು – ಪೊಲೀಸ್ ಕಸ್ಟಡಿಯಲ್ಲೇ ಶ್ರೀಕಿಗೆ ಮಾದಕ ದ್ರವ್ಯ!

    ಬಿಟ್‍ಕಾಯಿನ್ ಹಗರಣಕ್ಕೆ ಸ್ಫೋಟಕ ತಿರುವು – ಪೊಲೀಸ್ ಕಸ್ಟಡಿಯಲ್ಲೇ ಶ್ರೀಕಿಗೆ ಮಾದಕ ದ್ರವ್ಯ!

    – ಪೊಲೀಸರ ವಿರುದ್ಧ ಶ್ರೀಕಿ ತಂದೆ ಆರೋಪ

    ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬೆಂಗಳೂರು ಪೊಲೀಸರ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಈ ಸಂಬಂಧ ಹ್ಯಾಕರ್ ಶ್ರೀಕಿ ತಂದೆ ಗೋಪಾಲ್ ರಮೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಹೌದು. ಹ್ಯಾಕರ್ ಶ್ರೀಕಿಗೆ ಪೊಲೀಸರೇ ಮಾದಕ ದ್ರವ್ಯ ನೀಡಿದ್ದಾರಂತೆ. ಕಸ್ಟಡಿಯಲ್ಲಿದ್ದಾಗಲೇ ಪೊಲೀಸರೇ ಡ್ರಗ್ಸ್ ನೀಡಿದ್ದರು ಎಂದು ನ್ಯಾಯಾಧೀಶರ ಎದುರೇ ಇನ್ಸ್‍ಪೆಕ್ಟರ್ ಚಂದ್ರಾಧರ್ ವಿರುದ್ಧ ಶ್ರೀಕಿ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಶ್ರೀಕಿ ಆರೋಪ ಹಿನ್ನೆಲೆಯಲ್ಲಿ ಮಾದಕದ್ರವ್ಯ ಪರೀಕ್ಷೆಗೆ ಕೋರ್ಟ್ ಆದೇಶ ನೀಡಿದೆ.

    ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಕೋರ್ಟ್ ಆದೇಶಿಸಿತ್ತು. ಆದರೆ ವಿಕ್ಟೋರಿಯಾದಲ್ಲಿ ಕೋವಿಡ್ ವಾರ್ಡ್ ಇದ್ದ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಮಾದಕ ದ್ರವ್ಯ ಪರೀಕ್ಷೆಗೆ ಸೂಚಿಸಿತ್ತು. ನಂತರ ಪೊಲೀಸರ ಮನವಿ ಪರಿಗಣಿಸಿ ಬೌರಿಂಗ್ ಆಸ್ಪತ್ರೆಗೆ ಪರೀಕ್ಷೆಗೆ ಆದೇಶ ನೀಡಿದೆ. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

    ಇತ್ತ ಪ್ರಕರಣ ಸಂಬಂಧ ಗೋಪಾಲ್ ರಮೇಶ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಪೊಲೀಸರ ವಿರುದ್ಧ ನನ್ನ ಮಗ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಎಂದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಶ್ರೀಕಿ ತಂದೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

    ನನ್ನ ಮಗನಿಂದ ಒತ್ತಾಯಪೂರ್ವಕವಾಗಿ ಬೇರೆ ಕೆಲಸ ಮಾಡಿಸಲು ಯತ್ನ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸರ ವಿರುದ್ಧವೇ ಶ್ರೀಕಿ ತಂದೆ ಸ್ಫೋಟಕ ಆರೋಪ ಮಾಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ನನ್ನ ಮಗನಿಗೆ ಮಾದಕ ದ್ರವ್ಯ ನೀಡಿದ್ದಾರೆ. ಆತನಿಂದ ಬೆಂಗಳೂರು ಪೊಲೀಸರು ಬಲವಂತವಾಗಿ ಹೇಳಿಕೆ ಪಡೀತಿದ್ದಾರೆ. ಆತನಿಂದ ಏನೋ ಬೇರೆ ಬೇರೆ ಕೆಲಸ ಮಾಡಿಸಲು ಪೊಲೀಸರು ಯತ್ನಿಸ್ತಿದ್ದಾರೆ. ನನ್ನ ಮಗನೇ ಆರೋಪಿಸಿರುವ ಕಾರಣ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಿ. ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಶ್ರೀಕಿ ತಂದೆ ಗೋಪಾಲ್ ರಮೇಶ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

  • ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

    ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

    ಬೆಂಗಳೂರು: ಶ್ರೀಕಿ ನನಗೆ ಪರಿಚಯ ಇರುವುದು ನಿಜ ಎಂದು ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

    ಬಿಟ್ ಕಾಯಿನ್ ವಿಚಾರವಾಗಿ ಶ್ರೀಕಿಗೂ ಹ್ಯಾರೀಸ್ ಪುತ್ರರಿಗೂ ನಂಟಿದೆ ಎಂಬುದರ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಫರ್ಜಿ ಕೆಫೆ ಕೇಸ್ ಸಂಬಂಧ ಅದೊಂದು ಲೇಟರ್ ಮೇಲೆ ನೀವು ಮಾತನಾಡ್ತಾ ಇದ್ದೀರಾ. ಪ್ರೈಮಿನಿಸ್ಟರ್ ಗೆ ಬರೆದಿರೋ ಪತ್ರದಲ್ಲಿ ಬೇರೆಯವರ ಹೆಸರು ಇದೆ ಅದನ್ನ ಯಾಕೆ ಹೇಳ್ತಾ ಇಲ್ಲಾ ನೀವು..?. ಫರ್ಜಿ ಕೆಫೆ ಕೇಸ್ ನಡೆದಾಗ ಶ್ರೀಕಿ ನನ್ನ ಜೊತೆ ಇದ್ದ. ಶ್ರೀಕಿ ನನಗೆ ಗೊತ್ತಿಲ್ಲ ಅನ್ನೋದು ತಪ್ಪು. ಶ್ರೀಕಿ ನನ್ನ ತಮ್ಮನಿಗೆ ಗೊತ್ತಿದ್ದ. ಅದನ್ನ ನಾವು ಮರೆಮಾಚೋದಕ್ಕೆ ಆಗಲ್ಲ ಎಂದರು.

    ಹೇಳಿಕೆಯಲ್ಲಿ ನಲಪಾಡ್ ಹಾಗೂ ಉಮರ್ ನಲಪಾಡ್ ಹ್ಯಾಕ್ ಮಾಡಿದ್ದಾರೆ ಅಂತ ಎಲ್ಲಿಯಾದರೂ ಇದೆಯಾ..? ಆ ಸ್ಟೆಟ್ಮೆಂಟ್ ನಲ್ಲಿ ಮನೀಶ್ ಬಗ್ಗೆ ಬರೆದಿದ್ದಾರೆ. ಲೇಟರ್ ನಲ್ಲಿ ಶ್ರೀಕಿಯನ್ನು ಬಳಸಿಕೊಂಡು ಬೇರೆ ಬೇರೆಯವರು ಹ್ಯಾಕ್ ಮಾಡಿದ್ದಾರೆ ಅಂತ ಇದೆ. ಮಾಜಿ ಮಖ್ಯಮಂತ್ರಿಗಳ ಮಗನ ಹೆಸರಿದೆ. ಮುಖ್ಯಮಂತ್ರಿಗಳ ಹೆಸರಿದೆ. ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳ ಹೆಸರಿದೆ. ಯಾಕೆ ತೆಗೆದುಕೊಳ್ತಿಲ್ಲ ಯಾಕೆ ನೀವು ಉಮರ್ ನಲಪಾಡ್ ಹಾಗೂ ನನ್ನ ಹೆಸರನ್ನು ಮಾತ್ರ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

    ಸಿಸಿಬಿ ಮುಂದೆ ಹೇಳಿಕೆ ಕೊಟ್ಟಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ನಾನು ಸ್ವಲ್ಪವೂ ಹಣವಿಲ್ಲದೆ ಎಲ್ಲೆಲ್ಲೋ ಸುತ್ತಾಡ್ತಿದ್ದೆ. ನೆಟ್‍ವರ್ಕ್ ಹೆಚ್ಚಿಸಿಕೊಳ್ಳೋಕೆ ಸ್ವಿಟ್ಜರ್‍ಲ್ಯಾಂಡ್, ಸ್ವೀಡನ್, ಫ್ರಾನ್ಸ್, ಜರ್ಮನಿ ಸುತ್ತಾಡಿದೆ. ಒಮ್ಮೆ ‘ಬಿಟ್ ಫ್ಲಿಕ್ಸ್’ ಅನ್ನೋ ಸರ್ವರ್ ಹ್ಯಾಕ್ ಮಾಡಿದ್ದೆ. 2015ರಲ್ಲಿ ಭಾರತಕ್ಕೆ ವಾಪಸ್ ಬಂದೆ. 2015ರಲ್ಲಿ ನನ್ನ ಸ್ನೇಹಿತ ಮನಿಶ್ ಮೂಲಕ ಉಮರ್ ನಲಪಾಡ್ ಜೊತೆ ಸ್ನೇಹವಾಯಿತು. 2018ರಿಂದ ಪ್ರತಿದಿನ ಕೂಡ ಪಾರ್ಟಿಗಳಲ್ಲಿ ಭಾಗಿ ಆಗ್ತಿದ್ವಿ. ಉಮರ್ ನಲಪಾಡ್, ಅಭಿಷೇಕ್, ಗ್ಯಾರಿ ಜೊತೆ ಚಂಡೀಗಢ, ಜೈಪುರ ಸುತ್ತಾಡಿದ್ದೆ ಎಂದು ಹೇಳಿರುವುದು ಬಯಲಾಗಿದೆ. ಇದನ್ನೂ ಓದಿ: ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ, ಕಾಲೇಜಿನಲ್ಲಿ ಪರಿಚಯ ಅಷ್ಟೇ: ಉಮರ್ ನಲಪಾಡ್

    ಇತ್ತ ಮೊಹಮ್ಮದ್ ನಲಪಾಡ್ ಜೊತೆಗೂ ಶ್ರೀಕಿ ನಂಟು ಹೊಂದಿದ್ದ. 2018ರ ಫರ್ಜಿ ಕೆಫೆ ಗಲಾಟೆಯಲ್ಲಿ ನಲಪಾಡ್ ಆರೋಪಿ ನಂಬರ್ 1 ಆಗಿದ್ದ. ಇದೇ ಗಲಾಟೆ ಪ್ರಕರಣದಲ್ಲಿ ಶ್ರೀಕೃಷ್ಣ ನಂಬರ್ 3 ಆರೋಪಿಯಾಗಿದ್ದ. ಈ ಪ್ರಕಾರ ನಲಪಾಡ್ ಬ್ರದರ್ಸ್-ಶ್ರೀಕಿ ಸ್ನೇಹಿತರಾಗಿದ್ದಾರೆ. ಆದರೆ ಬಿಟ್ ಕಾಯಿನ್ ವ್ಯವಹಾರದಲ್ಲಿ ನಲಪಾಡ್ ಬ್ರದರ್ಸ್ ಹೆಸರಿಲ್ಲ, ಶ್ರೀಕಿ ಎಲ್ಲೂ ಹೇಳಿಲ್ಲ. ಆದರೆ ಸಿಸಿಬಿ ಮುಂದೆ ನಲಪಾಡ್ ಬದ್ರರ್ಸ್ ನನ್ನ ಫ್ರೆಂಡ್ಸ್ ಅಷ್ಟೇ ಅಂತ ಶ್ರೀಕಿ ಹೇಳಿದ್ದಾನೆ.