Tag: bit coin

  • ಕ್ರಿಪ್ಟೋ ಕರೆನ್ಸಿ ಹಗರಣ – ಬೆಂಗಳೂರು ಸೇರಿ ದೇಶದ 60 ಕಡೆ ಸಿಬಿಐ ದಾಳಿ

    ಕ್ರಿಪ್ಟೋ ಕರೆನ್ಸಿ ಹಗರಣ – ಬೆಂಗಳೂರು ಸೇರಿ ದೇಶದ 60 ಕಡೆ ಸಿಬಿಐ ದಾಳಿ

    ನವದೆಹಲಿ/ಬೆಂಗಳೂರು: ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು (Bengaluru) ಸೇರಿ ದೇಶದ 60 ಕಡೆ ಸಿಬಿಐ (CBI) ದಾಳಿ ನಡೆಸಿದೆ.

    ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್, ನಾಂದೇಡ್, ಕೊಲ್ಲಾಪುರ ಸೇರಿದಂತೆ ಹಲವೆಡೆ ಸಿಬಿಐ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಿದೆ. ಪ್ರಮುಖ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ:  ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ

    ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ ಹಗರಣ ಸಂಬಂಧ ಹಲವೆಡೆ ಎಫ್‌ಐಆರ್ ದಾಖಲಾಗಿತ್ತು. ದೇಶದ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ದೊಡ್ಡ ಮಟ್ಟದ ವಂಚನೆ ಹಾಗೂ ಮನಿ ಲಾಂಡರಿಂಗ್ ಹಿನ್ನೆಲೆ ಹಗರಣ ಸಂಬಂಧ ಸಿಬಿಐ ತನಿಖೆ ಕೈಗೊಂಡಿತ್ತು. ಈ ಸಂಬಂಧ ಮಂಗಳವಾರ ಬೆಂಗಳೂರು ಸೇರಿ 60 ಕಡೆಗಳಲ್ಲಿ ದಾಳಿ ನಡೆಸಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು

    ದಾಳಿ ವೇಳೆ ಕ್ರಿಪ್ಟೋ ವ್ಯಾಲೆಟ್‌ಗಳು, ಡಿಜಿಟಲ್ ಸಾಕ್ಷ್ಯಗಳು, ಡಿಜಿಟಲ್ ಸಾಧನಗಳು ಪತ್ತೆಯಾಗಿವೆ. ಇಮೇಲ್ ಮತ್ತು ಕ್ಲೌಡ್‌ನಲ್ಲಿದ್ದ ಸಾಕ್ಷ್ಯಗಳನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ಕುರಿತು ಸಿಬಿಐ ತನಿಖೆ ಮುಂದುವರಿಸಿದೆ. ಇದನ್ನೂ ಓದಿ: ಭಾರತಕ್ಕೆ ಪ್ರವೇಶಿಸುವ ವಿದೇಶಿಯರಿಗೆ ಹೊಸ ಕಾನೂನು – ಕಠಿಣ ವಲಸೆ ನಿಯಮದಲ್ಲಿ ಏನಿರಲಿದೆ? 

  • ಇಡಿಯಿಂದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಸೇರಿದ 97 ಕೋಟಿ ರೂ. ಆಸ್ತಿ ಜಪ್ತಿ

    ಇಡಿಯಿಂದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಸೇರಿದ 97 ಕೋಟಿ ರೂ. ಆಸ್ತಿ ಜಪ್ತಿ

    ಮುಂಬೈ: ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಪತಿ ರಾಜ್ ಕುಂದ್ರಾಗೆ (Raj Kundra) ಸೇರಿದ ಅಂದಾಜು 97 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ (ED) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಆಸ್ತಿಯಲ್ಲಿ ಮುಂಬೈನ ಪ್ರತಿಷ್ಠಿತ ಜುಹುವಿನಲ್ಲಿರುವ ಅಪಾರ್ಟ್ ಮೆಂಟ್ ಕೂಡ ಸೇರಿದೆ.

    2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದಿ ಅಡಿ (PMLA) ಇಡಿ ಪ್ರಕರಣವನ್ನು ದಾಖಲಿಸಿದ್ದು, ಜಾರಿ ನಿರ್ದೇಶನಾಲಯವು 97.97 ಕೋಟಿ ರೂಪಾಯಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದೆ. ಜಪ್ತಿಯಾದ ಆಸ್ತಿಗಳಳ್ಲಿ ಪುಣೆಯಲ್ಲಿರುವ ಬಂಗ್ಲೆ, ಫ್ಲಾಟ್ ಹಾಗೂ ಇಕ್ವಿಟಿ ಷೇರು ಕೂಡ ಹೊಂದಿವೆ.  ಇದನ್ನೂ ಓದಿ: Exclusive: ನಾವೇ ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದು: ಕುಮಾರಸ್ವಾಮಿ

    ಈ ಹಿಂದೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಸ್ಥೆಯ ಮೂಲಕ ಅಮಿತ್ ಭಾರದ್ವಾಜ್, ವಿವೇಕ್, ಅಜಯ್, ಮಹೇಂದರ್ ಹೀಗೆ ಹಲವಾರು ಏಜೆಂಟರ್ ಗಳು ಬಿಟ್ ಕಾಯಿನ್ (Bit Coin) ರೂಪದಲ್ಲಿ 2017ರಲ್ಲಿ 6,600 ಕೋಟಿ ರೂ. ಹಣ ಸಂಗ್ರಹಿಸಿದ್ದರು. ಇವರ ಜೊತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವ್ಯವಹಾರ ಮಾಡಿದ್ದರು ಎನ್ನುವ ಆರೋಪವಿದೆ. ಇದನ್ನೂ ಓದಿ: ಹಬ್ಬಗಳನ್ನೂ ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿರೋದು ದುರ್ದೈವ: ಪ್ರಿಯಾಂಕ್ ಖರ್ಗೆ ವಿಷಾದ

    ಉಕ್ರೇನ್‌ನಲ್ಲಿ ಬಿಟ್ ಕಾಯಿನ್ ಮೈನಿಂಗ್ ಫಾರ್ಮ್ ಶುರು ಮಾಡುವುದಕ್ಕೆ ಶಿಲ್ಪಾ ಮತ್ತು ರಾಜ್ ಕುಂದ್ರಾ ದಂಪತಿ ಅಮಿತ್ ಭಾರದ್ವಾಜ್ ಬಳಿ 285 ಬಿಟ್ ಕಾಯಿನ್ ಪಡೆದಿದ್ದಾರೆ. ಸದ್ಯ ಈ ಬಿಟ್‌ ಕಾಯಿನ್‌ ಮೌಲ್ಯ ಸುಮಾರು 150 ಕೋಟಿ ರೂ. ಎಂದು ಎಂದು ತನಿಖಾ ಸಂಸ್ಥೆ ಹೇಳಿದೆ.

  • ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್‌!

    ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್‌!

    ಬೆಂಗಳೂರು: ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಬಿಟ್ ಕಾಯಿನ್ ಪ್ರಕರಣದ (Bit Coin Scam) ಆರೋಪಿ ಶ್ರೀಕಿಗೆ (Sriki) ಈಗ ಗನ್ ಮ್ಯಾನ್ (Gunman) ನೀಡಲಾಗಿದೆ.

    ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ದಳ (SIT) ರಚನೆ ಮಾಡಿತ್ತು. ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿ ನೀಡಿದ್ದ ಶ್ರೀಕಿಗೆ ಈಗ ಕೊಲೆ ಬೆದರಿಕೆ ಇದೆ. ಅಷ್ಟೇ ಅಲ್ಲದೇ ಶ್ರೀಕಿ ಪೊಲೀಸರ ಕೈಯಲ್ಲಿ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಹೀಗಾಗಿ ಎಸ್‌ಐಟಿ ಶ್ರೀಕಿಗೆ ಗನ್ ಮ್ಯಾನ್ ನೀಡಿದೆ.

     

    ವಿಧಾನಸಭಾ ಚುನಾವಣೆಯಲ್ಲಿ (Vidhan Sabha Election) ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.  ಇದನ್ನೂ ಓದಿ: ಇಸ್ತಾಂಬುಲ್ ನೈಟ್‍ಕ್ಲಬ್‍ನಲ್ಲಿ ಅಗ್ನಿ ದುರಂತ – 29 ಮಂದಿ ದುರ್ಮರಣ

    ಶ್ರೀಕಿಯನ್ನು ಬಳಸಿಕೊಂಡು ರಾಜಕಾರಣಿಗಳು ಬಿಟ್‌ಕಾಯಿನ್ ಹಗರಣಗಳನ್ನು ಎಸಗಿದ ಆರೋಪವಿದೆ. ವಿವಿಧ ಸೈಬರ್ ಕ್ರೈಂಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ಹಾಗೂ ನಾಲ್ವರು ಇತರರ ವಿರುದ್ಧ 2021ರ ಫೆಬ್ರವರಿ 22ರಂದು ಮೊದಲ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಅಧಿಕಾರಕ್ಕೆ ಬಂದ ಕಾಂಗ್ರೆಸ್‌ (Congress) ಸರ್ಕಾರ ಈ ಪ್ರಕರಣದ ಮರು ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು.

     

    ಶ್ರೀಕೃಷ್ಣ (ಶ್ರೀಕಿ) ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ. ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ ಆರೋಪವಿದೆ.

     

  • ಬಿಟ್‌ಕಾಯಿನ್‌ ಕೇಸ್‌ ತನಿಖೆ IPS ಅಧಿಕಾರಿ ಬುಡಕ್ಕೆ – ಸಂದೀಪ್ ಪಾಟೀಲ್‌ಗೆ ನೋಟಿಸ್!

    ಬಿಟ್‌ಕಾಯಿನ್‌ ಕೇಸ್‌ ತನಿಖೆ IPS ಅಧಿಕಾರಿ ಬುಡಕ್ಕೆ – ಸಂದೀಪ್ ಪಾಟೀಲ್‌ಗೆ ನೋಟಿಸ್!

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೊಲೀಸರೇ ಹಗರಣದ ದಿಕ್ಕು ತಪ್ಪಿಸಿದ್ದಲ್ಲದೇ ಬಿಟ್‌ಕಾಯಿನ್ ಹಗರಣದಲ್ಲಿ (Bit Coin Case) ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ಸರ್ಕಾರ (Congress Government) ಬಿಟ್‌ಕಾಯಿನ್‌ ತನಿಖೆಯ ಹೊಣೆಯನ್ನು ಎಸ್‌ಐಟಿ ವಹಿಸಿದ್ದು, ಇದೀಗ ಬಿಟ್‌ಕಾಯಿನ್‌ ತನಿಖೆ ಹಿರಿಯ ಐಪಿಎಸ್ ಅಧಿಕಾರಿಯ ವಿಚಾರಣೆ ಹಂತಕ್ಕೆ ತಲುಪಿದೆ.

    ಬಿಟ್‌ಕಾಯಿನ್ (Bit Coin) ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ. ಈತನನ್ನು ಸಿಸಿಬಿ ಅಧಿಕಾರಿಗಳು (CCB Officers) ಪದೇ ಪದೇ ವಿಚಾರಣೆ ನಡೆಸಿದ್ದಾರೆ. ಎಸ್‌ಐಟಿ ಸಹ ತನಿಖೆಯ ಜವಾಬ್ದಾರಿ ವಹಿಸಿದ ಮೇಲೆ ಶ್ರೀಕಿಯ ವಿಚಾರಣೆಯನ್ನು ಮಾಡಿತ್ತು. ಇದೀಗ ಬಿಟ್‌ಕಾಯಿನ್ ಹಗರಣ ತನಿಖೆಗೆ ಹಾಜರಾಗುವಂತೆ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ಗೆ ಎಸ್‌ಐಟಿ ನೊಟೀಸ್ ನೀಡಿದೆ.

    ಇನ್ನೂ ಬಿಟ್‌ಕಾಯಿನ್ ಹಗರಣದ ತನಿಖೆ ಎಸ್‌ಐಟಿ ಕೈಗೊಳ್ಳುತ್ತಿದ್ದಂತೆ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು, ಸಂತೋಷ್‌ರನ್ನು ವಿಚಾರಣೆ ಮಾಡಿ ಬಂಧಿಸಲಾಗಿತ್ತು. ಈ ಹಗರಣ ನಡೆದ ವೇಳೆ ಸಿಸಿಬಿಯ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ಗೂ ಹಲವು‌ ಮಾಹಿತಿಗಳು ನೀಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದವ್ಳು ಪರಪುರುಷನ ಜೊತೆ ಡೇಟಿಂಗ್- ರೊಚ್ಚಿಗೆದ್ದ ಪತಿ ಮಚ್ಚಿನಿಂದ ಅಟ್ಯಾಕ್

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ ಅವರ ಹೇಳಿಕೆ ಪಡೆಯುವ ಉದ್ದೇಶದಿಂದ ನೊಟೀಸ್ ನೀಡಲಾಗಿದೆ. ಬಿಟ್‌ಕಾಯಿನ್‌ನ ಸತ್ಯಾಂಶ ಏನು ಅನ್ನೋದು ಹೊರಬರಬೇಕಿದೆ. ಇದನ್ನೂ ಓದಿ: 84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ

  • ಬಿಟ್ ಕಾಯಿನ್ ಹಗರಣ ಕೇಸ್‌ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಬಿಟ್ ಕಾಯಿನ್ ಹಗರಣ ಕೇಸ್‌ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಬೆಂಗಳೂರು: ಬಿಟ್ ಕಾಯಿನ್ (Bit Coin) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ  1ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ (Judicial Custody)  ವಿಧಿಸಿದೆ.

    6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ (Police Custody) ಇನ್ಸ್‌ಪೆಕ್ಟರ್‌ ಪ್ರಶಾಂತ್ ಬಾಬು ಮತ್ತು ಟೆಕ್ನಿಕಲ್ ಎಕ್ಸ್‌ಪರ್ಟ್‌ ಸಂತೋಷ್ 14 ದಿನ ನ್ಯಾಯಾಂಗ ಬಂಧನಕ್ಕೆ ಹೋಗಿದ್ದಾರೆ.  ಇದನ್ನೂ ಓದಿ: ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ರಾಮಲಲ್ಲಾಗೆ ನಮಿಸಿದ 350 ಮಂದಿ ಮುಸ್ಲಿಮರು!

    court order law

    ಪ್ರಕರಣದಲ್ಲಿ ಇನ್ನಷ್ಟು ವಿಚಾರಣೆ ಬಾಕಿ ಇದೆ ಹಾಗಾಗಿ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಎಸ್‌ಐಟಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಆರೋಪಿ ಸಂತೋಷ್ ಪರ ವಕೀಲ ಸುಧನ್ವ ಆಕ್ಷೇಪಣೆ ವ್ಯಕ್ತಪಡಿಸಿದರು. 6 ದಿನಗಳ ಕಸ್ಟಡಿಯಲ್ಲಿ ತನಿಖೆಗೆ ಪೂರಕ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿಲ್ಲ ಎಂದು ವಾದ ಮಂಡಿಸಿದರು.

    ವಾದ – ಪ್ರತಿವಾದ ಆಲಿಸಿದ 1ನೇ ಎಸಿಎಂಎಂ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ‌ ಕಳುಹಿಸಿ ಆದೇಶ ನೀಡಿತು.

     

  • ರೇಡ್ ಪಾಲಿಟಿಕ್ಸ್ ಆರೋಪಕ್ಕೆ ಕೌಂಟರ್‌ – ಬಿಜೆಪಿಗೆ ಶಾಕ್‌ ನೀಡಲು ಕಾಂಗ್ರೆಸ್‌ ತಯಾರಿ

    ರೇಡ್ ಪಾಲಿಟಿಕ್ಸ್ ಆರೋಪಕ್ಕೆ ಕೌಂಟರ್‌ – ಬಿಜೆಪಿಗೆ ಶಾಕ್‌ ನೀಡಲು ಕಾಂಗ್ರೆಸ್‌ ತಯಾರಿ

    ಬೆಂಗಳೂರು: ರೇಡ್ ಪಾಲಿಟಿಕ್ಸ್ (Raid Politics) ಆರೋಪ ಪ್ರತ್ಯಾರೋಪದ ನಡುವೆ ಕೌಂಟರ್ ಅಸ್ತ್ರ ಜೋರಾಗಿದೆ. ಮೆಡಿಕಲ್ ಹಗರಣ (Medical Corruption), ಬಿಟ್ ಕಾಯಿನ್ ಹಗರಣದ (Bit Coin Corruption) ತನಿಖೆಯ ಶಾಕ್ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.

    ರೇಡ್ ಪಾಲಿಟಿಕ್ಸ್ ಜಾಸ್ತಿಯಾದ್ರೆ ಟಕ್ಕರ್ ನೀಡಲು ಕಾಂಗ್ರೆಸ್‌ (Congress) ಪಾಳಯ ಸಿದ್ದತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಐಟಿ ರೇಡ್ (Income Tax Raid) ದಿನ ಕಳೆದಂತೆ ಜೋರಾಗುತ್ತಿದ್ದು, ಅಕ್ರಮವಾಗಿ ಸಿಕ್ಕ ಹಣದ ಮೂಲ ಕಾಂಗ್ರೆಸ್ ಎಂಬ ಆರೋಪವನ್ನು ಬಿಜೆಪಿ (BJP) ನಾಯಕರು ಮಾಡುತ್ತಿದ್ದಾರೆ.   ಇದನ್ನೂ ಓದಿ: ಚಂದ್ರಯಾನ-3ರ ಬಳಿಕ ಇಸ್ರೋ ತಂತ್ರಜ್ಞಾನ ಬಯಸಿದ ನಾಸಾ: ಸೋಮನಾಥ್

     
    ಯಾವುದೇ ದಾಖಲೆ ಇಲ್ಲದೆ ಮಾಡುತ್ತಿರುವ ಆರೋಪ ರಾಜಕೀಯ ಎನ್ನುವುದು ಕೈ ಪಾಳಯದ ವಾದ. ಆದರೆ ಐಟಿ ರೇಡ್ ಮಾತ್ರ ರಾಜಕೀಯ ಕಾರಣಕ್ಕಾಗಿಯೇ ಆಗುತ್ತಿವೆ ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.

    ಈ ಆರೋಪಕ್ಕೆ ಪ್ರತಿಯಾಗಿ ರಾಜ್ಯ ಮಟ್ಟದ ತನಿಖೆಗಳ ಚುರುಕುಗೊಳಿಸಿ ಬಿಸಿ ಮುಟ್ಟಿಸಲು ಕಾಂಗ್ರೆಸ್‌ ಮುಂದಾಗಿದೆ. ಮೆಡಿಕಲ್ ಹಗರಣ ಅಥವಾ ಬಿಟ್ ಕಾಯಿನ್‌ನಂತ ಹಗರಣಗಳ ತನಿಖೆ ಚುರುಕಾದರೆ ಸಹಜವಾಗಿಯೇ ಬಿಜೆಪಿಗೆ ಕೌಂಟರ್ ಮಾಡಬಹುದು. ಇಂತಹದೊಂದು ಲೆಕ್ಕಾಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿದ್ದು, ಐಟಿ ದಾಳಿ ಕೌಂಟರ್‌ಗೆ ಸ್ಥಳೀಯ ತನಿಖೆಗಳನ್ನ ಚುರುಕುಗೊಳಿಸುವ ಸಲಹೆ ನೀಡುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್‌ ಟಿವಿಗೆ ಸಿಕ್ಕಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಇನ್ನೆರಡು ದಿನದಲ್ಲಿ ಆದೇಶ

    ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಇನ್ನೆರಡು ದಿನದಲ್ಲಿ ಆದೇಶ

    ಬೆಂಗಳೂರು: ಬಿಟ್ ಕಾಯಿನ್ (Bit Coin) ಹಗರಣಕ್ಕೆ ಮರುಜೀವ ಸಿಕ್ಕಂತಾಗಿದೆ. ಅಧಿಕೃತವಾಗಿ ಚಾಲನೆಗೆ ಬಂದಿದ್ದು, ಮರು ತನಿಖೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದ ಡಿಜಿ&ಐಜಿ ಅಲೋಕ್ ಮೋಹನ್ ಪ್ರಕರಣದ ಸಾರಾಂಶ ತಿಳಿಸಿದ್ದಾರೆ. ಈ ಮೂಲಕ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಕಾಂಗ್ರೆಸ್ (Congress) ಸರ್ಕಾರ.

    ಪ್ರಕರಣದ ಮೊದಲ ಹಂತವಾಗಿ ನಗರ ಪೊಲೀಸ್ ಆಯುಕ್ತ ದಯಾನಂದ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಬಳಿಕ ಅಲೋಕ್ ಮೋಹನ್ ಪತ್ರದ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಯಾವ ತನಿಖಾ ಸಂಸ್ಥೆಗೆ ತನಿಖೆಗೆ ನೀಡಬೇಕೆಂದು ತೀರ್ಮಾನ ಮಾಡಲಿರೋ ಸರ್ಕಾರ ಸಿಐಡಿಯಿಂದಲಾ? ಎಸ್‌ಐಟಿ ಇಂದಲಾ ತನಿಖೆ? ಎಂಬುದನ್ನು ಇನ್ನೆರಡು ದಿನಗಳಲ್ಲಿ ಸ್ಪಷ್ಟಪಡಿಸಲಿದೆ‌‌‌. ಇದನ್ನೂ ಓದಿ: ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್

    ಕಾಟನ್ ಪೇಟೆಯಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಮತ್ತೆ ತನಿಖೆ ಮಾಡಿಸಲು ಮುಂದಾದ ಸರ್ಕಾರ, ಬಿಜೆಪಿ ಕಾಲದ ಪ್ರಕರಣಕ್ಕೆ ಮರು ಜೀವದ ತೀರ್ಮಾನ ಮಾಡಿದೆ.

    ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: ಕೋಲಾರದ ರೆಸಾರ್ಟ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 14 ಜನರ ಬಂಧನ, 6 ಮಹಿಳೆಯರ ರಕ್ಷಣೆ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬಿಜೆಪಿಯವ್ರಿಗೆ ಮಾನ-ಮರ್ಯಾದೆ ಇಲ್ಲ, ರಾಕೇಶ್ ಈಗ ಬದುಕಿದ್ದಾರಾ?- ಸಿದ್ದು ಗರಂ

    ಬಿಜೆಪಿಯವ್ರಿಗೆ ಮಾನ-ಮರ್ಯಾದೆ ಇಲ್ಲ, ರಾಕೇಶ್ ಈಗ ಬದುಕಿದ್ದಾರಾ?- ಸಿದ್ದು ಗರಂ

    ಬೆಂಗಳೂರು: ಬಿಟ್ ಕಾಯಿನ್ ಕೆಸರೆರಚಾಟದಲ್ಲಿ ಪುತ್ರನನ್ನು ಎಳೆದು ತಂದ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ರಾಕೇಶ್ ಈಗ ಬದುಕಿಲ್ಲ, ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲಾ. ಬಿಜೆಪಿಯವರು ಸುಮ್ಮನೆ ಬಿಟ್ ಕಾಯಿನ್ ಬಗ್ಗೆ ಮಾತಾಡ್ತಿದ್ದಾರಾ..? ಯಾಕೆ ಎಲ್ಲರೂ ರಿಯಾಕ್ಟ್ ಮಾಡ್ತಿದ್ದಾರೆ. ಅಲ್ಲಿಗೆ ಏನೋ ಇದೆ ಅಂತ ಆಯ್ತಲ್ಲ. ಬೆಂಕಿ ಇಲ್ಲದೆ ಹೊಗೆಯಾಡುತ್ತಾ…?. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಯಾಕೆ…?. ಸುಪ್ರಿಂ ಕೋರ್ಟ್ ಹಾಲಿ ನ್ಯಾಯ ಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಲಿ. ಎಲ್ಲವೂ ತನಿಖೆ ಆಗಲಿ 2013 ರಿಂದಲೂ ತನಿಖೆ ನಡೆಸಲಿ ಆದರೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.

    ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲೇ ನಡೆದಿರಲಿ. ಒಂದು ನ್ಯಾಯಾಂಗ ತನಿಖೆ ಮಾಡಿಸಿ. ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ. ಯಾರು ತಪ್ಪು ಮಾಡಿದ್ದಾರೆ ಗೊತ್ತಾಗುತ್ತಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್.ಐ.ಟಿ ರಚನೆ ಮಾಡಿ ತನಿಖೆಗೆ ಕೊಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ

    ಶ್ರೀಕಿ ಬಂಧಿಸಿದಾಗ ಗೃಹ ಸಚಿವರಾಗಿದ್ದವರು ಬೊಮ್ಮಾಯಿ ಅವರಲ್ಲವೇ..? ಶ್ರೀಕಿಯಿಂದ ಬಿಟ್ ಕಾಯಿನ್ ವರ್ಗಾವಣೆಗೆ ಪೊಲೀಸರು wallet ಮಾಡಿಕೊಂಡಿದ್ರು. wallet ಗೆ ವರ್ಗಾವಣೆಯಾದ 0.8 ಬಿಟ್ ಕಾಯಿನ್ ಏನಾಯ್ತು..?ಇದಕ್ಕೆ ಉತ್ತರ ಕೊಡಬೇಕು ಅವರು. ಅಧಿವೇಶನ ಬರಲಿ, ಪಕ್ಷದಲ್ಲಿ ಚರ್ಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸಿಎಂ ಬೊಮ್ಮಾಯಿ ಅವರ ಪಾತ್ರವಿದೆ ಅಂತ ನಾನು ನೇರವಾಗಿ ಹೇಳಲ್ಲ. ತನಿಖೆ ನಡೆಯಬೇಕು ಆಗಲೇ ಸತ್ಯ ಬಹಿರಂಗಗೊಳ್ಳಲಿದೆ. ನನ್ನ ಬಳಿ ದಾಖಲೆಗಳಿಲ್ಲ ಆಧಾರ ಇಲ್ಲದೆ ನಾನು ಮಾತಾಡಲ್ಲ ಎಂದರು.

  • ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಹುಬ್ಬಳ್ಳಿ: ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಜನಸ್ವರಾಜ ಯಾತ್ರೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಸ್ವರಾಜ ಯಾತ್ರೆ ಹಿನ್ನೆಲೆಯಲ್ಲಿ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವೆ. ಒಟ್ಟು ನಾಲ್ಕು ಭಾಗಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ನಳಿನ್ ಕುಮಾರ್ ಕಟೀಲ್, ಮತ್ತೊಂದು ಕಡೆ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ

    ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಬಹುಮತ ಪಡೆಯಬೇಕು ಎಂಬ ಅಪೇಕ್ಷೆ ಇದೆ. ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ. ನಾವು ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಾನು ಉತ್ತರ ಕನ್ನಡ ಮುಗಿಸಿ ಮತ್ತೆ ಹಾವೇರಿಗೆ ಹೋಗುತ್ತೇನೆ. ನಂತರ ಗದಗ, ಬಾಗಲಕೋಟೆ, ಬಿಜಾಪುರ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

    ಕಾಂಗ್ರೆಸ್ ಎರಡು ಬಣವಾಗಿರುವ ಕುರಿತು ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ಯಾವ ಪಕ್ಷದ ಬಗ್ಗೆಯೂ ಟೀಕೆ,ಟಿಪ್ಪಣಿಗಳನ್ನು ಮಾಡುವುದಿಲ್ಲ. ಕಾಂಗ್ರೆಸ್ ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮುಂದೆ ನೋಡೋಣ ಎಂದು ತಿಳಿಸಿದರು.

    ಬಿಟ್ ಕಾಯಿನ್ ಮುಚ್ಚಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪ ಕುರಿತು ಮಾತನಾಡಿದ ಅವರು, ಅದೆಲ್ಲ ಸುಳ್ಳು. ಈ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಪಕ್ಷದಲ್ಲಿ ಈ ಕುರಿತು ಯಾವುದೇ ದಾಖಲೆಗಳಿದ್ದರೂ ನಮಗೆ ಕೊಟ್ಟರೆ ಅವರ ವಿರುದ್ಧ ನಾವು ಕ್ರಮಕೈಗೊಳ್ಳುತ್ತೇವೆ. ಯಾವುದನ್ನು ಮುಚ್ಚಿಡುವುದಿಲ್ಲ, ಯಾರನ್ನು ರಕ್ಷಣೆಯನ್ನು ಸಹ ನಾವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು: ಮೋದಿ ಕರೆ 

    mandya rain

    ರಾಜ್ಯದ ಪ್ರವಾಹ ಕುರಿತು ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ಈಗಾಗಲೇ ಸರ್ವೇ ಮಾಡಿಸುತ್ತಿದ್ದಾರೆ. ಈ ಕುರಿತು ಪರಿಹಾರ ಕೊಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಭೆಗಳನ್ನು ಮಾಡುತ್ತಿದ್ದಾರೆ. ಎಲ್ಲೆಲ್ಲಿ ಬೆಳೆ ನಾಶವಾಗಿದೆ ಅವರಿಗೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

  • ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ

    ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ

    ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಎನ್ನಲಾದ ಶ್ರೀಕಿ ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.

    ಶ್ರೀಕಿ 12 ಕಂಪನಿಗಳ ವೆಬ್‍ಸೈಟ್ ಹ್ಯಾಕ್ ಮಾಡಿದ್ದಾನೆ. ಆತನ ವಿರುದ್ಧ ಇಂಟರ್ ಪೋಲ್ ಇಂದ ಕ್ರಮಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತರಿಗೆ, ತನಿಖಾಧಿಕಾರಿ ಇನ್ಸ್‌ಪೆಕ್ಟರ್‌ ಚಂದ್ರಾದರ್ ಪತ್ರದ ಮೂಲಕ ಮನವಿಸಲ್ಲಿಸಿದ್ದಾರೆ. ಶ್ರೀಕಿ, ದೇಶ, ವಿದೇಶದಲ್ಲಿ ಸಾಕಷ್ಟು ಹ್ಯಾಕಿಂಗ್ ಮಾಡಿದ್ದಾನೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ವಂಚನೆಮಾಡಿದ್ದು, ಈ ಬಗ್ಗೆ ತನಿಖಾ ವ್ಯಾಪ್ತಿ ಹೆಚ್ಚಿರೋದರಿಂದ ನಾವು ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಂಟರ್ ಪೋಲ್‍ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    ಅದಲ್ಲದೆ ಬಿಟ್‍ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಎನ್ನಲಾದ ಶ್ರೀಕಿ ಜೊತೆ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆಗೆ ಸಂಪರ್ಕ ಇತ್ತು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ. ಪ್ರಿಯಾಂಕ್ ಐಟಿ ಬಿಟಿ ಮಂತ್ರಿ ಆಗಿದ್ದಾಗ ಶ್ರೀಕಿಯನ್ನು ಭೇಟಿ ಮಾಡಿ ಬಿಟ್ ಕಾಯಿನ್ ಹಗರಣದಿಂದ ಕಪ್ಪು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದ್ದು, ಅವರು ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್‍ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಬೇಕು ಎಂದು ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ