Tag: Bishnupur

  • ಮಣಿಪುರ | ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ಗುಂಡಿನ ದಾಳಿ – ಇಬ್ಬರು ಯೋಧರು ಹುತಾತ್ಮ, ಐವರಿಗೆ ಗಾಯ

    ಮಣಿಪುರ | ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ಗುಂಡಿನ ದಾಳಿ – ಇಬ್ಬರು ಯೋಧರು ಹುತಾತ್ಮ, ಐವರಿಗೆ ಗಾಯ

    ಇಂಫಾಲ್‌: ಮಣಿಪುರದಲ್ಲಿ (Manipur) ಶಾಂತಿ ಸ್ಥಾಪನೆಯಾಗಬೇಕು ಎನ್ನುವ ಹೊತ್ತಲ್ಲೇ ಇಂಫಾಲ್‌ನ ಹೊರ ವಲಯದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ.

    ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್‌ನ ಟ್ರಕ್ (Assam Rifles) ಮೇಲೆ ಬಂದೂಕುಧಾರಿಗಳ ಗುಂಪೊಂದು ಹೊಂಚು ಹಾಕಿ ದಾಳಿ ನಡೆಸಿದೆ. ಪರಿಣಾಮ ಇಬ್ಬರು ಯೋಧರು (Soldiers) ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಇಂಫಾಲ್‌ನಲ್ಲಿರುವ ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಂಜೆ 6 ಗಂಟೆ ಸುಮಾರಿಗೆ 33 ಅಸ್ಸಾಂ ರೈಫಲ್ಸ್‌ ಘಟಕದ ಸೈನಿಕರ ತಂಡ ಇಂಫಾಲದಿಂದ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಬಿಷ್ಣುಪುರ ಕಡೆಗೆ ಹೊರಟಿತ್ತು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಬಂಧೂಕುದಾರಿಗಳ ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸಿದೆ. ‌ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆಂದು ಗುವಾಹಟಿಯ ರಕ್ಷಣಾ ಪಿಆರ್‌ಒ ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ತೆರೆಯಲು ಕುಕಿ ಗ್ರೂಪ್ ಒಪ್ಪಿಗೆ ಸೂಚಿಸಿತ್ತು. ಇದರಿಂದ ಮಣಿಪುರದಲ್ಲಿ ಶಾಂತಿ ನೆಲೆಸಿತ್ತು. ಪ್ರಧಾನಿ ಮೋದಿ ಕೂಡ ಕಳೆದವಾರ ಭೇಟಿ ನೀಡಿ, ಅಭಿವೃದ್ಧಿ ಯೋಜನೆಗಳನ ಉದ್ಘಾಟನೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಮತ್ತೆ ಗುಂಡಿನ ದಾಳಿ ನಡೆಸಿರುವುದು ಜನರ ನಿದ್ದೆಗೆಡಿಸಿದೆ.

  • ಮಣಿಪುರ ಸಂಘರ್ಷ – ಪೊಲೀಸ್ ಅಧಿಕಾರಿಯನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿದ ಕಿಡಿಗೇಡಿಗಳು

    ಮಣಿಪುರ ಸಂಘರ್ಷ – ಪೊಲೀಸ್ ಅಧಿಕಾರಿಯನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿದ ಕಿಡಿಗೇಡಿಗಳು

    ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ (Manipur Violence) ಕಳೆದ 3 ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಲೇ ಇದ್ದು, ಗುರುವಾರ ಕಿಡಿಗೇಡಿಗಳು ಇಂಫಾಲದಲ್ಲಿ (Imphal) ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿರುವ ಘಟನೆ ನಡೆದಿದೆ.

    ಗುರುವಾರ ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡ ಗುಂಪು ಬಿಷ್ಣುಪುರ್ ಜಿಲ್ಲೆಯ ಮಣಿಪುರ ಸಶಸ್ತ್ರ ಪೊಲೀಸ್ ಎರಡನೇ ಬೆಟಾಲಿಯನ್‌ನ ಕೀರೆನ್‌ಫಾಬಿ ಪೊಲೀಸ್ ಔಟ್‌ಪೋಸ್ಟ್ ಹಾಗೂ ತಂಗಲವಾಯ್ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜನಸಮೂಹ ಹೀಂಗಾಂಗ್ ಹಾಗೂ ಸಿಂಗ್ಜಮೇಯಿ ಪೊಲೀಸ್ ಠಾಣೆಗಳಿಂದಲೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಭದ್ರತಾಪಡೆಗಳು ಅವರ ದಾಳಿಯನ್ನು ವಿಫಲಗೊಳಿಸಿದೆ. ಕೌಟ್ರುಕ್, ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೇದಾರನಾಥ ಮಾರ್ಗದಲ್ಲಿ ಭಾರಿ ಭೂಕುಸಿತ – ಹಲವರ ಸಮಾಧಿ ಶಂಕೆ

    ಕಳೆದ 24 ಗಂಟೆಗಳಲ್ಲಿ ರಾಜ್ಯದ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ವಿವಿಧ ಸ್ಥಳಗಳಲ್ಲಿ ಜನರ ಸಮೂಹ ಅಶಿಸ್ತಿನಿಂದ ವರ್ತಿಸಿ ಗುಂಡು ಹಾರಿಸುವ ಹಾಗೂ ಗುಂಪುಗೂಡುವುದು ಸಂಭವಿಸುತ್ತಲೇ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಣಿಪುರದ ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿ ಒಟ್ಟು 129 ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 1,047 ಜನರನ್ನು ಬಂಧಿಸಲಾಗಿದೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಪ್ರಾರಂಭವಾದ ಜನಾಂಗೀಯ ಘರ್ಷಣೆ ಕಳೆದ 3 ತಿಂಗಳಿನಿಂದ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಇದನ್ನೂ ಓದಿ: ಟೈಟ್‌ ಸೆಕ್ಯುರಿಟಿಯೊಂದಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ಆರಂಭ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಹೊಸ ಸಂಘರ್ಷ – ಎರಡು ಸಮುದಾಯಗಳ ನಡುವೆ ಗುಂಡಿನ ಚಕಮಕಿ

    ಮಣಿಪುರದಲ್ಲಿ ಹೊಸ ಸಂಘರ್ಷ – ಎರಡು ಸಮುದಾಯಗಳ ನಡುವೆ ಗುಂಡಿನ ಚಕಮಕಿ

    ಇಂಫಾಲ: ಜನಾಂಗೀಯ ಸಂಘರ್ಷಕ್ಕೆ ಬೆಂದು ಹೋಗಿರುವ ಮಣಿಪುರದಲ್ಲಿ (Manipur) ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಮಣಿಪುರದ ಬಿಷ್ಣುಪುರ್ (Bishnupur) ಜಿಲ್ಲೆಯ ಮೊಯಿರಾಂಗ್‌ನಲ್ಲಿ ಎರಡು ಸಮುದಾಯಗಳ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಗ್ರಾಮಸ್ಥರ ಪ್ರಕಾರ ಬುಧವಾರ ರಾತ್ರಿಯಿಂದ ಗುಂಡಿನ ಸದ್ದು ಕೇಳಿ ಬರುತ್ತಿದೆ.

    ಹಿಂಸಾಚಾರದ ಸಂದರ್ಭದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಗುಂಡಿನ ಚಕಮಕಿ ನಡೆದ ಸ್ಥಳದ ಸಮೀಪದಲ್ಲಿ ವಾಸಿಸುತ್ತಿದ್ದ ಅನೇಕ ಗ್ರಾಮಸ್ಥರು ಬೇರೆಡೆ ಆಶ್ರಯ ಪಡೆಯುತ್ತಿದ್ದಾರೆ. ನಿರಂತರ ಗುಂಡಿನ ಕಾಳಗದಿಂದ ಗ್ರಾಮಸ್ಥರೆಲ್ಲ ಭಯಗೊಂಡಿದ್ದಾರೆ ಎಂದು ಮತ್ತೊಬ್ಬರು ಸ್ಥಳೀಯರು ಹೇಳಿದ್ದಾರೆ.

    ಇದಕ್ಕೂ ಮುನ್ನ ಬುಧವಾರ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ಬಸ್‌ಗಳಿಗೆ ಗುಂಪೊಂದು ಬೆಂಕಿ ಹಚ್ಚಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಂಗಳವಾರ ಸಂಜೆ ದಿಮಾಪುರದಿಂದ ಬಸ್‌ಗಳು ಬರುತ್ತಿದ್ದಾಗ ಸಪೋರ್ಮಿನಾದಲ್ಲಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಸಾಲ ವಾಪಸ್ ಕೊಟ್ಟಿಲ್ಲ ಅಂತ ಪತಿಯೆದುರೇ ಮಹಿಳೆಯ ಅತ್ಯಾಚಾರ

    ಸುಮಾರು 3 ತಿಂಗಳ ಹಿಂದೆ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಅಂದಿನಿಂದ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಣಿಪುರ ಸಂಘರ್ಷ ಎಫೆಕ್ಟ್‌ – ಮೈತೇಯ್‌ ಸಮುದಾಯದ ಪತಿಯಿಂದ ಬೇರೆಯಾದ ಕುಕಿ ಮಹಿಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಹಿಂಸಾಚಾರದಲ್ಲಿ ಮತ್ತೆ ಮೂವರ ಸಾವು

    ಮಣಿಪುರ ಹಿಂಸಾಚಾರದಲ್ಲಿ ಮತ್ತೆ ಮೂವರ ಸಾವು

    ಇಂಫಾಲ: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ (Manipur Violence) ವರದಿಯಾಗಿದ್ದು, ಘಟನೆಯಲ್ಲಿ ಭಾನುವಾರ ಮೂವರು ಸಾವನ್ನಪ್ಪಿದ್ದಾರೆ.

    ಮಣಿಪುರದ ಬಿಷ್ಣುಪುರ್ (Bishnupur) ಜಿಲ್ಲೆಯ ಖೋಯ್ಜುಮಂತಬಿ ಗ್ರಾಮದಲ್ಲಿ ಹಿಂಸಾಚಾರ ವರದಿಯಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೂವರು ಕೂಡಾ ಗ್ರಾಮದಲ್ಲಿ ಸ್ವಯಂಸೇವಕರಾಗಿದ್ದು, ತಾತ್ಕಾಲಿಕ ಬಂಕರ್ ಪ್ರದೇಶವನ್ನು ಕಾಪಾಡುತ್ತಿದ್ದರು ಎನ್ನಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಶನಿವಾರ ರಾತ್ರಿ ನಡೆದಿರುವ ಗುಂಡಿನ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಅವರ ಪೈಕಿ ಗಾಯಗೊಂಡಿರುವ ದಂಪತಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಇಂಫಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ನಡುವೆ ಕುಕಿ (Kuki) ಸಮುದಾಯದ ಸಂಘಟನೆಗಳಾದ ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್) ಹಾಗೂ ಕುಕಿ ನ್ಯಾಷನಲ್ ಆರ್ಗನೈಸೇಶನ್ 2 ತಿಂಗಳ ಬಳಿಕ ಮಣಿಪುರದ ಕಾಂಗ್ ಪೊಕ್ಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 2 ರಲ್ಲಿ ರಸ್ತೆ ತಡೆಯನ್ನು ಹಿಂತೆಗೆದುಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.

    ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿಗಾಗಿ ಮಿಟೈ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮೇ 3 ರಂದು ಬುಡಕಟ್ಟು ಐಕ್ಯತಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಆದರೆ ಇದಾದ ಬಳಿಕ ಹಿಂಸಾಚಾರ ಭುಗಿಲೆದ್ದು, ಮಣಿಪುರದಾದ್ಯಂತ ಜನಾಂಗೀಯ ಘರ್ಷಣೆ ಉಂಟಾಯಿತು. ಇದನ್ನೂ ಓದಿ: KRS ನಲ್ಲಿ ನೀರಿನ ಕೊರತೆ – ಕುಡಿಯುವ ನೀರಿಗೆ ಶುರುವಾಯ್ತು ಆತಂಕ!

    ಹಿಂಸಾಚಾರದ ಬಳಿಕ ಮಣಿಪುರದ 8 ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಯಿತು ಹಾಗೂ ಇಡೀ ರಾಜ್ಯದಲ್ಲಿ ಹಲವು ದಿನಗಳ ವರೆಗೆ ಮೊಬೈಲ್ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಲಾಯಿತು. ಕಳೆದ 2 ತಿಂಗಳಿನಲ್ಲಿ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಉಗ್ರರ ದಾಳಿ – ಓರ್ವ ಪೊಲೀಸ್ ಹುತಾತ್ಮ, ನಾಲ್ವರು ಗಂಭೀರ

    ಮಣಿಪುರದಲ್ಲಿ ಉಗ್ರರ ದಾಳಿ – ಓರ್ವ ಪೊಲೀಸ್ ಹುತಾತ್ಮ, ನಾಲ್ವರು ಗಂಭೀರ

    ಇಂಪಾಲ: ಉಗ್ರರು (Militants) ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಮಣಿಪುರದಲ್ಲಿ (Manipur) ನಡೆದಿದೆ.

    ಟೊರ್ಬಂಗ್ ಪ್ರದೇಶದಲ್ಲಿ ಇಬ್ಬರು ನಾಗರಿಕರನ್ನು ಉಗ್ರರು ಇತ್ತೀಚೆಗೆ ಅಪಹರಿಸಿದ್ದರು. ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದ ವೇಳೆ ಸಮೀಪದ ಪ್ರದೇಶ ಒಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ಬಂದಿತ್ತು. ಇದರಿಂದಾಗಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಫೋನ್ ನಂಬರ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ: ಕುಸ್ತಿಪಟು ಬಜರಂಗ್ ಪೂನಿಯಾ ಆರೋಪ

    ಇತ್ತೀಚೆಗೆ ರಾಜ್ಯದಲ್ಲಿ ಮೀಸಲಾತಿ ವಿಚಾರವಾಗಿ ಹಿಂಸಾಚಾರ ಬುಗಿಲೆದ್ದಿತ್ತು. ಕೆಲವು ಜಿಲ್ಲೆಗಳಲ್ಲಿ ಇನ್ನೂ ಕರ್ಫ್ಯೂ (Curfew) ಜಾರಿಯಲ್ಲಿದೆ. ಇದರ ನಡುವೆಯೇ ಉಗ್ರರು, ಪೊಲೀಸರು ಬೀಡು ಬಿಟ್ಟಿರುವ ಪ್ರದೇಶಗಳಲ್ಲಿ ಚಟುವಟಿಕೆ ಆರಂಭಿಸಿದ್ದಾರೆ. ಉಗ್ರರನ್ನು ಹತ್ತಿಕ್ಕಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನೊಂದು ಘಟನೆಯಲ್ಲಿ ದಿಮಾಪುರ್‌ನಿಂದ (Dimapur) ಇಂಫಾಲಗೆ (Imphal) ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ 100 ಟ್ರಕ್‍ಗಳನ್ನು ಉತ್ತರ ಕಾಂಗ್‍ಫೋಕ್ಪಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಅಪರಿಚಿತರು ತಡೆದ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆಯ ಗುಮಾಸ್ತನಿಂದ 4ರ ಬಾಲಕಿಗೆ ಕಿರುಕುಳ