Tag: Bishnoi Gang

  • ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್‌ ಗ್ಯಾಂಗ್‌

    ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್‌ ಗ್ಯಾಂಗ್‌

    ಒಟ್ಟಾವಾ: ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆನಡಾದಲ್ಲಿ ದಾಳಿ ನಡೆಸಿದೆ. ಭಾರತೀಯ ಮೂಲದ ಅಬಾಟ್ಸ್‌ಫೋರ್ಡ್ ಕೈಗಾರಿಕೋದ್ಯಮಿಯೊಬ್ಬರ ಹತ್ಯೆ ಮತ್ತು ಪಂಜಾಬಿ ಗಾಯಕನ ಮನೆಯ ಮೇಲೆ ಗುಂಡು ಹಾರಿಸಿದ ಹೊಣೆಯನ್ನು ಈ ಗ್ಯಾಂಗ್ ಹೊತ್ತುಕೊಂಡಿದೆ.

    ರಾಜಸ್ಥಾನದ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಜಗದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು ಅಮೆರಿಕದಲ್ಲಿ ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಎರಡು ದಾಳಿಗಳು ನಡೆದಿವೆ. ಬಿಷ್ಣೋಯ್ ಗ್ಯಾಂಗ್ ಸದಸ್ಯ ಗೋಲ್ಡಿ ಧಿಲ್ಲೋನ್, ಭಾರತೀಯ ಮೂಲದ ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಸಹಸಿ ಅವರ ಹತ್ಯೆಯ ಹಿಂದೆ ಈ ಗುಂಪಿನ ಕೈವಾಡವಿದೆ ಎಂದು ಹೇಳಿದ್ದಾರೆ.

    68 ವರ್ಷದ ದರ್ಶನ್‌ ಸಿಂಗ್ ದೊಡ್ಡ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದರು. ಈ ಗ್ಯಾಂಗ್ ಅವರಿಂದ ಹಣಕ್ಕೆ ಬೇಡಿಕೆ ಇಟ್ಟಿತ್ತು. ಹಣ ಸಿಗದ ಕಾರಣ, ಗ್ಯಾಂಗ್ ಆತನನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.

    ಸೋಮವಾರ ಬೆಳಗ್ಗೆ ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್‌ಫೋರ್ಡ್‌ನಲ್ಲಿರುವ ಅವರ ಮನೆಯ ಹೊರಗೆ ಉದ್ಯಮಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಿಂಗ್‌ ಹೊರಗೆ ಬರುವುದನ್ನೇ ಕಾದು ನಂತರ ಹತ್ಯೆ ಮಾಡಲಾಗಿದೆ.

    ಪೊಲೀಸರು ಸ್ಥಳಕ್ಕೆ ಬಂದಾಗ ಉದ್ಯಮಿ ಗಂಭೀರ ಸ್ಥಿತಿಯಲ್ಲಿದ್ದರು. ದರ್ಶನ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಒಟ್ಟಾವಾ: ಹಾಸ್ಯ ನಟ ಕಪಿಲ್ ಶರ್ಮಾ (Kapil Sharma) ಅವರ ಕೆನಡಾದ (Canada) ಕೆಫೆ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ. ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಹ್ಯಾರಿ ಬಾಕ್ಸರ್ ಎಂಬಾತನ ಆಡಿಯೋ ಇದಾಗಿದ್ದು, ನಟ ಸಲ್ಮಾನ್ ಖಾನ್‌ನ್ನು (Salman Khan) ಕೆಫೆ ಉದ್ಘಾಟನೆಗೆ ಆಹ್ವಾನಿಸಿದಕ್ಕಾಗಿ ಶೂಟೌಟ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ವೈರಲ್ ಆದ ಆಡಿಯೋದಲ್ಲಿ, ಕಪಿಲ್ ಶರ್ಮಾ ತಮ್ಮ ಕೆಫೆ ಉದ್ಘಾಟನೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಗುಂಡಿನ ದಾಳಿ ನಡೆಸಲಾಗಿದೆ. ಅದಲ್ಲದೇ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವ ಯಾವುದೇ ನಿರ್ದೇಶಕ, ನಿರ್ಮಾಪಕ ಅಥವಾ ಕಲಾವಿದರ ಎದೆಗೆ ಗುಂಡು ಹಾರಿಸುತ್ತೇವೆ. ನಾವು ಯಾರನ್ನೂ ಬಿಡುವುದಿಲ್ಲ. ಸಲ್ಮಾನ್ ಖಾನ್ ಜೊತೆ ಇರುವವರನ್ನು ಕೊಲ್ಲಲು ನಾವು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇವೆ. ನೆನಪಿರಲಿ, ನಿಮ್ಮ ಸಾವಿಗೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌: ಸಿದ್ದರಾಮಯ್ಯ

    ಆ.7ರಂದು ಬೆಳಗಿನ ಜಾವ 4:30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 9 ರಿಂದ 10 ಗುಂಡುಗಳು ಕೆಫೆಯ ಗೋಡೆಗೆ ಹಾಗೂ ಕಿಟಿಕಿಗಳಿಗೆ ತಾಗಿವೆ. ಗುಂಡಿನ ಸದ್ದು ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಕಪಿಲ್ ಶರ್ಮಾ ಕೆಫೆಯ ನಡೆದ ಎರಡನೇ ದಾಳಿ ಇದಾಗಿದೆ. ಸದ್ಯ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.

    ಜೂ.21ರಂದು ನೆಟ್‌ಫ್ಲಿಕ್ಸ್‌ನಲ್ಲಿ  ಪ್ರದರ್ಶನಗೊಂಡಿದ್ದ `ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಸೀಸನ್-3ರ ಮೊದಲ ಎಪಿಸೋಡ್‌ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದರು. ಕೆಫೆ ಉದ್ಘಾಟನೆಗಾಗಿ ಸಲ್ಮಾನ್ ಖಾನ್ ಅವರನ್ನು ಕಪಿಲ್ ಆಹ್ವಾನಿಸಿದ್ದರು. ಇದರ ಬೆನ್ನಲ್ಲೇ ಜು.10ರಂದು ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಸಮಯದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ.ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

  • ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್ ಎನ್‌ಕೌಂಟರ್

    ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್ ಎನ್‌ಕೌಂಟರ್

    ಲಕ್ನೋ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ನನ್ನು ಉತ್ತರಪ್ರದೇಶ (Uttar Pradesh) ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

    ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಪ್ರಮುಖ ಸದಸ್ಯ, ಗಾಜಿಯಾಬಾದ್‌ನ ಲೋನಿ ನಿವಾಸಿ ನವೀನ್ ಕುಮಾರ್‌ನನ್ನು ಬುಧವಾರ ತಡರಾತ್ರಿ ಹಾಪುರ್‌ನ ಥಾನಾ ಕೊಟ್ವಾಲಿ ಪ್ರದೇಶದಲ್ಲಿ ಉತ್ತರಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    ಕೊತ್ವಾಲಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಇರುವ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಿಷ್ಣೋಯ್ ಗ್ಯಾಂಗ್ ಪೊಲೀಸರ ಮೇಲೆ ಪ್ರತಿದಾಳಿ ಮಾಡಿದ್ದರು. ಇದರಲ್ಲಿ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ಗೆ ಗಂಭೀರ ಗಾಯಗಳಾಗಿದದವು. ಆತನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಟ್ರಂಪ್‌ ನೀತಿಯನ್ನು ಟೀಕಿಸಿದ ಬೆನ್ನಲ್ಲೇ DOGE ಮುಖ್ಯಸ್ಥ ಪಟ್ಟದಿಂದ ಇಳಿದ ಮಸ್ಕ್‌

    ನವೀನ್ ಮೇಲೆ ದೆಹಲಿಯ ಥಾನಾ ಫರ್ಶ್ ಬಜಾರ್‌ನಲ್ಲಿ ಕೊಲೆ ಸೇರಿ 20ಕ್ಕೂ ಪ್ರಕರಣ ದಾಖಲಾಗಿದ್ದವು. ಈ ಹಿಂದೆ ದೆಹಲಿಯಲ್ಲಿ ಪ್ರಕರಣದಲ್ಲಿ ನವೀನ್ ಜೈಲು ಶಿಕ್ಷೆ ಅನುಭವಿಸಿದ್ದ. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ, ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ವಿಶೇಷ ಘಟಕದ ಜಂಟಿ ತಂಡಗಳು ಸೇರಿ ಕಾರ್ಯಾಚರಣೆ ಮಾಡಿದೆ.

  • ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ – 2 ಕೋಟಿಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಮುಂಬೈನಲ್ಲಿ ಅರೆಸ್ಟ್‌

    ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ – 2 ಕೋಟಿಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಮುಂಬೈನಲ್ಲಿ ಅರೆಸ್ಟ್‌

    ಮುಂಬೈ: ಒಂದು ದಿನದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ ಅಪರಿಚಿತ ವ್ಯಕ್ತಿಯನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದಾರೆ. ಬಂಧಿನನ್ನು ಬಾಂದ್ರಾ ಪೂರ್ವದ ನಿವಾಸಿ ಅಜಂ ಮೊಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ.

    ಏನಿದು ಕೇಸ್‌?
    2 ಕೋಟಿ ರೂ. ಕೊಡದಿದ್ದರೇ ನಟ ಸಲ್ಮಾನ್‌ ಖಾನ್‌ ಅವರನ್ನ ಕೊಲ್ಲುವುದಾಗಿ ಅಪರಿಚಿತ ವ್ಯಕ್ತಿಯಿಂದ ಬುಧವಾರ (ಅ.30) ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶವೊಂದು ಬಂದಿತ್ತು. ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: IPL Retention | ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌ – ಕ್ಯಾಪ್ಟನ್‌ಗಳನ್ನೇ ಹೊರದಬ್ಬುವ ಸಾಧ್ಯತೆ!

    ಎನ್‌ಸಿಪಿ ಶಾಸಕ ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಹಾಗೂ ನಟ ಸಲ್ಮಾನ್ ಖಾನ್ ಇಬ್ಬರಿಗೂ ಜೀವ ಬೆದರಿಕೆ ಬಂದಿತ್ತು. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಮಂಗಳವಾರ ನೋಯ್ಡಾದಲ್ಲಿ 20 ವರ್ಷದ ಗುರ್ಫಾನ್ ಖಾನ್ ಎಂಬುವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ತಯ್ಯಬ್ ಎಂದು ಗುರುತಿಸಲಾದ ಆರೋಪಿಯನ್ನು ನೋಯ್ಡಾದ ಸೆಕ್ಟರ್ 39ರಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಮಾಜಿ ಸಚಿವೆ, ಸಂಸದರ ಜಮೀನಿನ ಮೇಲೂ ವಕ್ಫ್ ಕರಿನೆರಳು!

    ಅ.12 ರಂದು, ಬಾಬಾ ಸಿದ್ದಿಕಿ ಅವರು ದಸರಾ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಗುಂಡಿನ ದಾಳಿಯಿಂದಾಗಿ ಕೊಲ್ಲಲ್ಪಟ್ಟರು. ಘಟನೆಯ ಒಂದು ದಿನದ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದುವರೆಗೆ ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.

    ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ 2022 ರಲ್ಲಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯ ಪತ್ರವು ಅವರ ನಿವಾಸದ ಬಳಿಯ ಬೆಂಚ್‌ನಲ್ಲಿ ಕಂಡುಬಂದಿತ್ತು. ಮಾರ್ಚ್ 2023ರಲ್ಲಿ ಗೋಲ್ಡಿ ಬ್ರಾರ್ ಅವರು ಕಳುಹಿಸಿದ್ದಾರೆಂದು ಆರೋಪಿಸಲಾದ ಇಮೇಲ್ ಕೂಡ ಖಾನ್‌ಗೆ ಸಿಕ್ಕಿತ್ತು. 2024 ರಲ್ಲಿ, ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತುಗಳನ್ನು ಬಳಸಿಕೊಂಡು ಪನ್ವೆಲ್‌ನಲ್ಲಿರುವ ಖಾನ್ ಅವರ ಫಾರ್ಮ್ಹೌಸ್‌ಗೆ ಅತಿಕ್ರಮಣ ಮಾಡಲು ಪ್ರಯತ್ನಿಸಿದ್ದರು. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದಲ್ಲಿ ನರಕಚತುರ್ದಶಿ ಸಂಭ್ರಮ: ಶ್ರೀಗಳಿಂದ ವಿಶೇಷ ಪೂಜೆ

  • ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

    ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

    – ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದ ಬೆನ್ನಲ್ಲೇ ಭಾರತದ ವಿರುದ್ಧ ಹೇಳಿಕೆ

    ಒಟ್ಟೋವಾ: ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತೀಯ ಸರ್ಕಾರಿ ಏಜೆಂಟ್‌ ಜೊತೆ ಸಂಪರ್ಕ ಹೊಂದಿದೆ ಎಂದು ಕೆನಡಾದ ರಾಯಲ್‌ ಕೆನಡಾದ ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು ಗಂಭೀಕ ಆರೋಪ ಮಾಡಿದ್ದಾರೆ.

    ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆನೆ ಮತ್ತು ಅವರ ಡೆಪ್ಯೂಟಿ ಬ್ರಿಗಿಟ್ಟೆ ಗೌವಿನ್ ಈ ಆರೋಪ ಮಾಡಿದ್ದಾರೆ. ಕೆನಡಾದ ಪ್ರಜೆ ಮತ್ತು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜಾರ್ ಹತ್ಯೆಯಲ್ಲಿ ದೆಹಲಿಯ ಏಜೆಂಟ್‌ಗಳು ಭಾಗಿಯಾಗಿದ್ದಾರೆ ಎಂದು ಕಳೆದ ವರ್ಷವೂ ಆರೋಪ ಮಾಡಲಾಗಿತ್ತು.

    ಇದು (ಭಾರತ ಸರ್ಕಾರ) ದಕ್ಷಿಣ ಏಷ್ಯಾದ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಆದರೆ ಅವರು ನಿರ್ದಿಷ್ಟವಾಗಿ ಕೆನಡಾದಲ್ಲಿ ಖಲಿಸ್ತಾನಿ ಪರ ಅಂಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ. RCMP ದೃಷ್ಟಿಕೋನದಿಂದ ನಾವು ನೋಡಿದ್ದು, ಅವರು ಸಂಘಟಿತ ಅಪರಾಧ ಅಂಶಗಳನ್ನು ಬಳಸುತ್ತಾರೆ ಎಂದು ಸಹಾಯಕ ಕಮಿಷನರ್ ಗೌವಿನ್ ಆರೋಪ ಮಾಡಿದ್ದಾರೆ.

    ಭಾರತ ಸರ್ಕಾರದ ಏಜೆಂಟರ ಮೇಲೆ ನರಹತ್ಯೆ, ಸುಲಿಗೆ, ಬೆದರಿಕೆ ಆರೋಪವಿದೆಯೇ ಎಂದು ಪ್ರಶ್ನೆ ಕೇಳಿದಾಗ, ಡುಹೆಮ್ “ಹೌದು” ಎಂದು ಉತ್ತರಿಸಿದ್ದಾರೆ.

  • ತಿಂಗಳಿಗೂ ಮೊದಲೇ ಸ್ಕೆಚ್‌, ಶೂಟರ್‌ಗಳಿಗೆ ತಲಾ 50,000 ಕಾಂಟ್ರ್ಯಾಕ್ಟ್‌ – ಸಿದ್ದಿಕಿ ಹಂತಕರ ಪ್ಲ್ಯಾನ್‌ ರೋಚಕ

    ತಿಂಗಳಿಗೂ ಮೊದಲೇ ಸ್ಕೆಚ್‌, ಶೂಟರ್‌ಗಳಿಗೆ ತಲಾ 50,000 ಕಾಂಟ್ರ್ಯಾಕ್ಟ್‌ – ಸಿದ್ದಿಕಿ ಹಂತಕರ ಪ್ಲ್ಯಾನ್‌ ರೋಚಕ

    – ಸಿದ್ದಿಕಿ ಹತ್ಯೆ ಹೊಣೆ ಹೊತ್ತುಕೊಂಡ ಬಿಷ್ಣೋಯ್‌ ಗ್ಯಾಂಗ್‌
    – ಬಿಷ್ಣೋಯ್‌ ಗ್ಯಾಂಗ್‌ನಲ್ಲಿದ್ದಾರೆ 700 ಶೂಟರ್ಸ್‌: ಪೊಲೀಸ್‌

    ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಭಾನುವಾರ (ಇಂದು) ಹೊತ್ತುಕೊಂಡಿದೆ. 66 ವರ್ಷದ ಹಿರಿಯ ರಾಜಕಾರಣಿಯನ್ನು ಶನಿವಾರ ರಾತ್ರಿ ದಸರಾ ಆಚರಣೆಯ ಸಂದರ್ಭದಲ್ಲಿ ಮುಂಬೈನ (Mumbai) ಬಾಂದ್ರಾದಲ್ಲಿರುವ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆಮಾಡಲಾಗಿತ್ತು.

    2 ತಿಂಗಳ ಹಿಂದೆಯೇ ಸ್ಕೆಚ್‌:
    ಸಿದ್ದಿಕಿ ಹತ್ಯೆಗೆ 2 ತಿಂಗಳ ಹಿಂದೆಯೇ ಸ್ಕೆಚ್‌ ಹಾಕಲಾಗಿತ್ತು. ಸತತವಾಗಿ ಅವರ ಚಲವಲಗಳ ಮೇಲೆ ಗ್ಯಾಂಗ್‌ನವರು ನಿಗಾ ಇರಿಸಿದ್ದರು ಎಂದು ಪೊಲೀಸ್‌ (Mumbai Police) ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಹರಿಯಾಣ ಹಾಗೂ ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ವಿಶೇಷ ತಂಡಗಳ ಮೂಲಕ ಶೋಧ ನಡೆಸಲಾಗುತ್ತಿದೆ. ಇದನ್ನೂ ಓದಿ: ಭಾಗಮತಿ ಎಕ್ಸ್‌ಪ್ರೆಸ್ ರೈಲು ದುರಂತ – 18 ಗಂಟೆಗಳ ಬಳಿಕ ತೆರವು ಕಾರ್ಯಾಚರಣೆ ಯಶಸ್ವಿ

     50,000ಕ್ಕೆ ಕಿಲ್ಲಿಂಗ್ ಕಾಂಟ್ರ್ಯಾಕ್ಟ್‌
    ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಸ್ಫೋಟಕ ವಿಚಾರಗಳನ್ನ ಬಯಲಿಗೆಳೆದಿದ್ದಾರೆ. ತನಿಖೆ ವೇಳೆ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಹಂತಕರಿಗೆ ಹಣ ನೀಡುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಮುಂಬೈ ಪೊಲೀಸ್‌ ಮೂಲಗಳ ಪ್ರಕಾರ, ಮೂವರು ಕೊಲೆ ಆರೋಪಿಗಳು ಪಂಜಾಬ್‌ ಜೈಲಿಯಲ್ಲಿ ಭೇಟಿಯಾಗಿದ್ದರು. ಕಳೆದ ಸೆಪ್ಟೆಂಬರ್ 2 ರಿಂದ ಕುರ್ಲಾದಲ್ಲಿ ತಿಂಗಳಿಗೆ 14,000 ರೂ.ನೀಡುವ ಮನೆ ಬಾಡಿಗೆ ಪಡೆದು ವಾಸವಿದ್ದರು. ಸಿದ್ದಿಕ್ಕಿ ಹತ್ಯೆಗೆ ಅಲ್ಲಿಯೇ ಸಂಚು ರೂಪಿಸಿದ್ದರು. ಮೂವರು ಆರೋಪಿಗಳು ತಲಾ 50 ಸಾವಿರ ರೂ.ಗೆ ಗುತ್ತಿಗೆ ಪಡೆದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಫಲಿತಾಂಶದ ದಿನ ವಾಟ್ಸಪ್ ಗ್ರೂಪ್‌ನಲ್ಲಿ ಹರಿಯಾಣ ಸಿಎಂಗೆ ಕೊಲೆ ಬೆದರಿಕೆ – ಆರೋಪಿ ಅರೆಸ್ಟ್‌

    ಬಿಷ್ಣೋಯ್‌ ಗ್ಯಾಂಗ್‌ನಲ್ಲಿದ್ದಾರೆ 700 ಶೂಟರ್ಸ್‌:
    ಡಜನ್ ಗಟ್ಟಲೇ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್ ಜೈಲಿನಲ್ಲಿದ್ದಾನೆ. ಆದ್ರೆ ಅವನ ಗ್ಯಾಂಗ್‌ನಿಂದ ಉದ್ಯಮಿಗಳು, ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಸದ್ಯ ಬಿಷ್ಣೋಯ್ ಗ್ಯಾಂಗ್‌ನಲ್ಲಿ 700ಕ್ಕೂ ಹೆಚ್ಚು ಶೂಟರ್‌ಗಳಿದ್ದಾರೆ. ದೇಶಾದ್ಯಂತ ಅನೇಕ ಸಣ್ಣ ಮತ್ತು ದೊಡ್ಡ ಕ್ರಿಮಿನಲ್‌ಗಳು ಅವನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಸೂಚಿಸುತ್ತವೆ.

    ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ.

    ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು. ಇದನ್ನೂ ಓದಿ: ಮಾಜಿ ಸಚಿವ ಸಿದ್ದಿಕಿ ಹತ್ಯೆ – ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಶಿಲ್ಪಾಶೆಟ್ಟಿ, ಆಸ್ಪತ್ರೆಗೆ ಬಾಲಿವುಡ್‌ ತಾರಾ ದಂಡೇ ದೌಡು

    ಏನಾಗಿತ್ತು?
    ಮುಂಬೈನ ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ. ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು.

  • ಮಾಜಿ ಸಚಿವ ಸಿದ್ದಿಕಿ ಹತ್ಯೆ ಹಿಂದೆ ಬಿಷ್ಣೋಯ್‌ ಗ್ಯಾಂಗ್‌ ಕೈವಾಡ – ಬೆಚ್ಚಿಬೀಳಿಸುವ ರಹಸ್ಯ ಬಯಲು

    ಮಾಜಿ ಸಚಿವ ಸಿದ್ದಿಕಿ ಹತ್ಯೆ ಹಿಂದೆ ಬಿಷ್ಣೋಯ್‌ ಗ್ಯಾಂಗ್‌ ಕೈವಾಡ – ಬೆಚ್ಚಿಬೀಳಿಸುವ ರಹಸ್ಯ ಬಯಲು

    – ಬಿಷ್ಣೋಯ್‌ ಗ್ಯಾಂಗ್‌ನಲ್ಲಿದ್ದಾರೆ 700 ಶೂಟರ್ಸ್‌: ಪೊಲೀಸರಿಂದ ಮಾಹಿತಿ

    ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ (66) (Baba Siddique) ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇವರ ಹತ್ಯೆ ಹಿಂದೆ ಬಿಷ್ಣೋಯ್‌ ಗ್ಯಾಂಗ್‌ (Lawrence Bishnoi Gang) ಕೈವಾಡ ಇದೆ ಎಂದು ತಿಳಿದುಬಂದಿದೆ.

    ಹೌದು. ತೀವ್ರ ಗಾಯಗೊಂಡಿದ್ದ ಅವರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸತಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಹರಿಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅವರಿಬ್ಬರೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆಂದು ಪೊಲೀಸ್ (Mumbai Police) ಮೂಲಗಳು ತಿಳಿಸಿವೆ. ಕಳೆದ ಒಂದು ತಿಂಗಳಿನಿಂದ ಸಿದ್ದಿಕ್‌ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ಉತ್ತರ ಪ್ರದೇಶ| ಮಗಳನ್ನು ಹಗ್ಗದಲ್ಲಿ ತಲೆಕೆಳಗಾಗಿ ನೇತುಹಾಕಿ ಮನಬಂದಂತೆ ಥಳಿಸಿದ ತಂದೆ

    ಪ್ರಕರಣದ ತನಿಖೆ ಕೈಗೊಂಡಿರುವ ಮುಂಬೈ ಪೊಲೀಸರು 4 ವಿಶೇಷ ತಂಡಗಳನ್ನ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಹರಿಯಾಣ ಹಾಗೂ ಉತ್ತರ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 3ನೇ ಆರೋಪಿಗಾಗಿ ಶೂಧ ನಡೆಸಲಾಗುತ್ತಿದೆ. ಆದಾಗ್ಯೂ ಸಿದ್ದಿಕ್‌ ಅವರ ಬಗ್ಗೆ ಬೇರೊಬ್ಬರು ಮಾಹಿತಿ ನೀಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ವಿಚಾರಣೆಯಲ್ಲಿ, ಬಂಧಿತರಿಬ್ಬರು ಕಳೆದ ಒಂದು ತಿಂಗಳಿನಿಂದ ಸಿದ್ದಿಕ್‌ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ. ಶನಿವಾರ ರಾತ್ರಿ ಮೂವರು ಘಟನಾ ಸ್ಥಳಕ್ಕೆ ಆಟೋದಲ್ಲಿ ಬಂದು ಸಿದ್ದಿಕ್‌ಗಾಗಿ ಕಾಯುತ್ತಿದ್ದರು ಅನ್ನೋದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.

    ಸದ್ಯ ಪೋಲೀಸರು ಪ್ರಕರಣವನ್ನು 2 ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಒಂದು ಬಿಷ್ಣೋಯ್‌ ಗ್ಯಾಂಗ್‌, ಮತ್ತೊಂದು ಸ್ಲಂ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಟ ಸಲ್ಮಾನ್‌ ಖಾನ್‌ ಅವರಿಗೆ ಕೊಲೆ ಬೆದರಿಕೆ ಬಂದಿದ್ದರಿಂದ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಆದ್ರೆ ಸಿದ್ದಿಕ್‌ ಅವರಿಗೆ ಯಾವುದೇ ಬೆರಿಕೆಗಳೂ ಬಂದಿರಲಿಲ್ಲ ಎನ್ನಲಾಗಿದೆ. ಪ್ರಕರಣದ ತನಿಖೆ ಕುರಿತು ಕೇಂದ್ರ ಏಜೆನ್ಸಿಗಳು ಮುಂಬೈ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಗುಜರಾತ್ ಮತ್ತು ದೆಹಲಿಯ ಪೊಲೀಸರು ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

    ಸ್ಫೋಟಕ ಮಾಹಿತಿ:
    ಡಜನ್‌ ಗಟ್ಟಲೇ ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿರುವ ಲಾರೆನ್ಸ್‌ ಬಿಷ್ಣೋಯ್‌ ಪ್ರಸ್ತುತ ಗುಜರಾತ್‌ ಜೈಲಿನಲ್ಲಿದ್ದಾನೆ. ಆದ್ರೆ ಅವನ ಗ್ಯಾಂಗ್‌ನಿಂದ ಉದ್ಯಮಿಗಳು, ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಸದ್ಯ ಬಿಷ್ಣೋಯ್ ಗ್ಯಾಂಗ್‌ನಲ್ಲಿ 700ಕ್ಕೂ ಹೆಚ್ಚು ಶೂಟರ್‌ಗಳಿದ್ದಾರೆ. ದೇಶಾದ್ಯಂತ ಅನೇಕ ಸಣ್ಣ ಮತ್ತು ದೊಡ್ಡ ಕ್ರಿಮಿನಲ್‌ಗಳು ಅವನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಸೂಚಿಸುತ್ತವೆ. ಇದನ್ನೂ ಓದಿ: ಬಾಲಸೋರ್ ಅಪಘಾತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ

    salman

    ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ.

    ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವುದು ಭಾರತದ ಹಿಂದೂಗಳಿಗೂ ಒಂದು ಪಾಠ: ಮೋಹನ್‌ ಭಾಗವತ್‌