Tag: Bishan Singh Bedi

  • ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು – ಕಾರಣವೇನು ಗೊತ್ತಾ?

    ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು – ಕಾರಣವೇನು ಗೊತ್ತಾ?

    ಲಕ್ನೋ: ವಿಶ್ವಕಪ್ 2023ರ (World Cup 2023) ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಆಟಗಾರರು ಕಪ್ಪುಪಟ್ಟಿ ಧರಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಗ್ಗೆ ಕಾರಣವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ.

    ಭಾರತೀಯ ಕ್ರಿಕೆಟ್ ದಂತಕಥೆ ಬಿಷನ್ ಸಿಂಗ್ ಬೇಡಿ (Bishan Singh Bedi) ಅವರ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಕಪ್ಪುಪಟ್ಟಿ ಧರಿಸಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸೋಲಿನ ಹತಾಶೆಯ ನಡುವೆ ಪಾಕ್‍ಗೆ ದಂಡದ ಬರೆ

    ವಯೋಸಹಜ ಅನಾರೋಗ್ಯದಿಂದ ಬೇಡಿ ಅ.23 ರಂದು ದೆಹಲಿಯಲ್ಲಿ ನಿಧನರಾಗಿದ್ದರು. ಅವರು ಭಾರತಕ್ಕಾಗಿ 1967 ಮತ್ತು 1979ರ ನಡುವೆ 67 ಟೆಸ್ಟ್‍ಗಳನ್ನು ಆಡಿದ್ದರು. ಅವುಗಳಲ್ಲಿ 22ರಲ್ಲಿ ನಾಯಕತ್ವ ವಹಿಸಿದ್ದರು. ಅದರಲ್ಲಿ ಒಟ್ಟು 266 ವಿಕೆಟ್‍ಗಳನ್ನು ಗಳಿಸಿದ್ದರು. ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 10 ಏಕದಿನ ಅಂತರರಾಷ್ಟ್ರೀಯ ಪಂದ್ಯವಾಡಿ 7 ವಿಕೆಟ್‍ಗಳನ್ನು ಪಡೆದಿದ್ದಾರೆ.

    ಅಮೃತಸರದಲ್ಲಿ 1946ರ ಸೆಪ್ಟೆಂಬರ್ 25 ರಂದು ಜನಿಸಿದ ಬೇಡಿ ಭಾರತದ ಮೊದಲ ಏಕದಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 370 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,560 ವಿಕೆಟ್ ಪಡೆದಿದ್ದಾರೆ. ದೇಶೀಯ ಲೀಗ್‍ನಲ್ಲಿ ದೆಹಲಿ ಪರ ಸಿಂಗ್ ಆಡಿದ್ದರು.

    ಗಾಯಗೊಂಡಿದ್ದ ಅಜಿತ್ ವಾಡೇಕರ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದಾಗ ಇಂಗ್ಲೆಂಡ್ ವಿರುದ್ಧದ 1971 ರ ಭಾರತ ಐತಿಹಾಸಿಕ ಸರಣಿಯಲ್ಲಿ ಜಯ ದಾಖಲಿಸಿತ್ತು.

    ಆಸ್ಟ್ರೇಲಿಯಾ ಆಟಗಾರ ಫವಾದ್ ಅಹ್ಮದ್ ಇತ್ತೀಚೆಗೆ ತಮ್ಮ ನಾಲ್ಕು ತಿಂಗಳ ಮಗುವನ್ನು ಕಳೆದುಕೊಂಡಿದ್ದಾಗ ಆಸ್ಟ್ರೇಲಿಯನ್ ಆಟಗಾರರು ಕಪ್ಪುಪಟ್ಟಿ ಧರಿಸಿ ಫವಾದ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದರು. ಇದನ್ನೂ ಓದಿ: ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾದ ಮಾಜಿ ನಾಯಕ ಬಿಶನ್‌ ಸಿಂಗ್‌ ಬೇಡಿ ನಿಧನ

    ಟೀಂ ಇಂಡಿಯಾದ ಮಾಜಿ ನಾಯಕ ಬಿಶನ್‌ ಸಿಂಗ್‌ ಬೇಡಿ ನಿಧನ

    ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ (Bishan Singh Bedi) ನಿಧನರಾಗಿದ್ದಾರೆ.

    ಪ್ರಸಿದ್ಧ ಸ್ಪಿನ್ನರ್ ಆಗಿದ್ದ ಬಿಶನ್ ಸಿಂಗ್ ಬೇಡಿ (77) 1967 ಮತ್ತು 1979ರ ನಡುವೆ ಭಾರತಕ್ಕಾಗಿ (Team India) 67 ಟೆಸ್ಟ್ ಪಂದ್ಯವಾಡಿ 266 ವಿಕೆಟ್‌ ಪಡೆದಿದ್ದಾರೆ. ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 10 ಏಕದಿನ ಅಂತರರಾಷ್ಟ್ರೀಯ ಪಂದ್ಯವಾಡಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ.  ಇದನ್ನೂ ಓದಿ: ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಬರೆದ ಸಿಕ್ಸರ್ ಶರ್ಮಾ

    ಅಮೃತಸರದಲ್ಲಿ 1946ರ ಸೆಪ್ಟೆಂಬರ್‌ 25 ರಂದು ಜನಿಸಿದ ಬೇಡಿ ಭಾರತದ ಮೊದಲ ಏಕದಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು 370 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,560 ವಿಕೆಟ್‌ ಪಡೆದಿದ್ದಾರೆ. ದೇಶೀಯ ಲೀಗ್‌ನಲ್ಲಿ ದೆಹಲಿ ಪರ ಸಿಂಗ್‌ ಆಡಿದ್ದರು.

    ಗಾಯಗೊಂಡಿದ್ದ ಅಜಿತ್ ವಾಡೇಕರ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದಾಗ ಇಂಗ್ಲೆಂಡ್ (England) ವಿರುದ್ಧದ 1971 ರ ಭಾರತ ಐತಿಹಾಸಿಕ ಸರಣಿ ಜಯ ದಾಖಲಿಸಿತ್ತು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

    WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

    ಲಂಡನ್‌: ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (WTC Final) ಪಂದ್ಯದ 4ನೇ ದಿನದಾಟ ಆರಂಭಗೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ ಗಳಿಸಿದ್ದ ಆಸ್ಟ್ರೇಲಿಯಾ (Australia) 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳ ದಾಳಿಗೆ ತುತ್ತಾದರೂ, 370ಕ್ಕೂ ಅಧಿಕ ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಪಡೆದ ಟೀಂ ಇಂಡಿಯಾ (Team India) ಸ್ಪಿನ್ನರ್‌ ರವೀಂದ್ರ ಜಡೇಜಾ (Ravindra Jadeja) ಹೊಸ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.

    65 ಟೆಸ್ಟ್‌ ಪಂದ್ಯವನ್ನಾಡಿರುವ ಜಡೇಜಾ 24.25 ಸರಾಸರಿ ಹಾಗೂ 2.44ರ ಎಕಾನಮಿ ರೇಟ್‌ನಲ್ಲಿ 268 ವಿಕೆಟ್‌ ಪಡೆಯುವ ಮೂಲಕ ಬಿಶನ್ ಸಿಂಗ್ ಬೇಡಿ (Bishan Singh Bedi) ಅವರ ದಾಖಲೆಯನ್ನ ಮುರಿದಿದ್ದಾರೆ. ಬಿಶನ್‌ ಸಿಂಗ್‌ 67 ಪಂದ್ಯಗಳಲ್ಲಿ 266 ವಿಕೆಟ್‌ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ಆದ್ರೆ ಜಡೇಜಾ 65 ಪಂದ್ಯಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ. ಜೊತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 4ನೇ ಯಶಸ್ವಿ ಎಡಗೈ ಸ್ಪಿನ್ನರ್‌ ಎನಿಸಿಕೊಂಡಿದ್ದಾರೆ.

    ಶ್ರೀಲಂಕಾದ ರಂಗನಾ ಹೆರಾತ್ 93 ಪಂದ್ಯಗಳಲ್ಲಿ 433 ವಿಕೆಟ್‌, ಡೇನಿಯಲ್ ವೆಟ್ಟೋರಿ 113 ಪಂದ್ಯಗಳಲ್ಲಿ 362 ವಿಕೆಟ್‌ ಮತ್ತು ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್ 86 ಪಂದ್ಯಗಳಲ್ಲಿ 297 ವಿಕೆಟ್ ಪಡೆದಿದ್ದರೆ ಜಡೇಜಾ 65 ಪಂದ್ಯಗಳಲ್ಲಿ 268 ವಿಕೆಟ್‌ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    ಆಸ್ಟ್ರೇಲಿಯಾ ವಿರುದ್ಧದ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಏಕದಿನ ಕ್ರಿಕೆಟ್‌ ಶೈಲಿಯಲ್ಲಿ ಬ್ಯಾಟಿಂಗ್‌ ಮಾಡಿ 48 ರನ್‌ (51 ಎಸೆತ, 7 ಬೌಂಡರಿ, 1 ಸಿಕ್ಸ್‌) ಗಳಿಸಿದ್ದಾರೆ. ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್‌ ಪಡೆದಿದ್ದ ಜಡೇಜಾ 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಟಾಪ್‌ ಬ್ಯಾಟರ್ಸ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಸ್ಟೀವ್‌ ಸ್ಮಿತ್‌ (34 ರನ್‌), ಟ್ರಾವಿಸ್‌ ಹೆಡ್‌ (18 ರನ್‌) ಹಾಗೂ ಕ್ಯಾಮರೂನ್‌ ಗ್ರೀನ್‌ (25 ರನ್‌) ವಿಕೆಟ್‌ ಕಬಳಿಸುವ ಮೂಲಕ ಜಡೇಜಾ ಹೊಸ ದಾಖಲೆ ಮಾಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ